ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 13-08-2021

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 58/2021, ಕಲಂ: 454, 457, 380 ಐಪಿಸಿ  ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 10-08-2021 ರಂದು ಮಧ್ಯಾಹ್ನ 14-00 ಗಂಟೆಯಿಂದ ದಿನಾಂಕ: 11-08-202 ರಂದು ಮಧ್ಯಾಹ್ನ 12-30 ಗಂಟೆಯ ನಡುವಿನ ಅವಧಿಯಲ್ಲಿ ಗೋಕರ್ಣದ ಬಂಡಿಕೇರಿ ಗ್ರಾಮದ ವೈತರಣಿಯಲ್ಲಿರುವ ಶ್ರೀ ವನದುರ್ಗಾ ಪರಮೇಶ್ವರಿ ದೇವಸ್ಥಾನದ ಗರ್ಭಗುಡಿಯ ಮೇಲಿನ ಕಿಂಡಿಯಿಂದ ಒಳ ಪ್ರವೇಶಿಸಿ ಶ್ರೀ ದೇವಸ್ಥಾನದ ಮೂರ್ತಿಯ ಮೇಲಿದ್ದ ಹಾಗೂ ಗರ್ಭಗುಡಿಯಲ್ಲಿದ್ದ 1). ಶ್ರೀ ದೇವರ ಮೂರ್ತಿಯ ಮೇಲೆ ಇದ್ದ ಬೆಳ್ಳಿಯ ಕರಿಮಣಿ ಸರ-01, ಇದರ ತೂಕ-30 ಗ್ರಾಂ, ಅ||ಕಿ|| 2,500/- ರೂಪಾಯಿ, 2). ಶ್ರೀ ದೇವರ ಮೂರ್ತಿಯ ಮೇಲಿದ್ದ ಲಕ್ಷ್ಮೀಯ ಲಾಕೆಟ್ ಇರುವ ಬೆಳ್ಳಿಯ ಚೈನ್-01, ಇದರ ತೂಕ 10 ಗ್ರಾಂ, ಅ||ಕಿ|| 700/- ರೂಪಾಯಿ, 3). ಸಣ್ಣ ಬೆಳ್ಳಿಯ ಗಣಪತಿ ಮೂರ್ತಿ-01, ಇದರ ತೂಕ 30 ಗ್ರಾಂ, ಅ||ಕಿ|| 1,500/- ರೂಪಾಯಿ, 4). ಬೆಳ್ಳಿಯ ನಾಗರ-01, ಇದರ ತೂಕ 05 ಗ್ರಾಂ, ಅ||ಕಿ|| 200/- ರೂಪಾಯಿ, 5). ಹಿತ್ತಾಳೆಯ ನಾಗರ-01, ಇದರ ತೂಕ 05 ಗ್ರಾಂ, ಅ||ಕಿ|| 150/- ರೂಪಾಯಿ, 6). ತಾಮದ್ರ ಕೊಡ-01, ಇದರ ತೂಕ 2 ಕೆ.ಜಿ, ಅ||ಕಿ|| 3,000/- ರೂಪಾಯಿ, 7). ಹಿತ್ತಾಳೆಯ ತೇರ ಆರತಿ-01, ಅ||ಕಿ|| 500/- ರೂಪಾಯಿ, 8). ಹಿತ್ತಾಳೆಯ ಕೂಮ ಆರತಿ-02, ಅ||ಕಿ|| 1,000/- ರೂಪಾಯಿ, 9). ಹಿತ್ತಾಳೆಯ ನಾಗರ ಆರತಿ-01, ಅ||ಕಿ|| 300/- ರೂಪಾಯಿ, 10). ಹಿತ್ತಾಳೆಯ ದೀಪದ ಗುಡ್ನ-02, ಅ||ಕಿ|| 1,500/- ರೂಪಾಯಿ, 11). ಹಿತ್ತಾಳೆಯ ನಿರಾಂಜನ-01, ಅ||ಕಿ|| 150/- ರೂಪಾಯಿ, 12). ಹಿತ್ತಾಳೆಯ ಏಕ ಆರತಿ-01, ಅ||ಕಿ|| 300/- ರೂಪಾಯಿ, 13). ಕಾಣಿಕೆ ಡಬ್ಬಿಯಲ್ಲಿದ್ದ ಹಣ ಸುಮಾರು 2,000/- ರೂಪಾಯಿ ಇವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಲಂಬೋದರ ತಂದೆ ಉಮೇಶ ಭಟ್ ಶಂಕರಲಿಂಗ, ಪ್ರಾಯ-45 ವರ್ಷ, ವೃತ್ತಿ-ಪೌರೋಹಿತ್ಯ, ಸಾ|| ವೈತರಣಿ, ಬಂಡಿಕೇರಿ, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 13-08-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 212/2021, ಕಲಂ: 279 ಐಪಿಸಿ  ನೇದ್ದರ ವಿವರ...... ನಮೂದಿತ ಆರೋಪಿತ ಉಸ್ಮಾನ್ ಖಾನ್ ತಂದೆ ರೆಹಮಾನ್ ಖಾನ್, ಪ್ರಾಯ-41 ವರ್ಷ, ವೃತ್ತಿ-ಚಾಲಕ, ಸಾ|| ತೋವಿಕೇರಿ, ಹಲಸಿನಮರದ ಪಾಳ್ಯ, ಚನ್ನರಾಯನ ದುರ್ಗಾ, ತಾ: ತೊರಟಗೇರಿ, ಜಿ: ತುಮಕೂರು (ಲಾರಿ ನಂ: ಕೆ.ಎ-06/ಎ.ಎ-9898 ನೇದರ ಚಾಲಕ). ದಿನಾಂಕ: 12-08-2021 ರಂದು 10-00 ಗಂಟೆಗೆ ಪಿರ್ಯಾದಿ ಮತ್ತು ಆರೋಪಿ ಚಾಲಕ ಇಬ್ಬರು ಸೇರಿ ಲಾರಿ ನಂ: ಕೆ.ಎ-06/ಎ.ಎ-9898 ನೇದರಲ್ಲಿ ಸಿಮೆಂಟಿನ ಇಟ್ಟಿಗೆಯನ್ನು (Nexrise flyash Blocks) ತುಮಕುರಿನಲ್ಲಿ ಲೋಡ್ ಮಾಡಿಕೊಂಡು ಹೊನ್ನಾವರ ಮತ್ತು ಭಟ್ಕಳಕ್ಕೆ ತೆಗೆದುಕೊಂಡು ಸಾಗರ-ಶಿವಮೊಗ್ಗ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ಹೋಗುತ್ತಿರುವಾಗ ಹೊನ್ನಾವರ ತಾಲೂಕಿನ ಸೂಳೆಮುರ್ಕಿ ಕ್ರಾಸ್ ಹತ್ತಿರ ತಲುಪಿದಾಗ ಲಾರಿಯನ್ನು ಚಲಾಯಿಸುತ್ತಿದ್ದ ಆರೋಪಿ ಚಾಲಕನು ರಸ್ತೆಯು ತಿರುವಿನಿಂದ ಕೂಡಿದ್ದರೂ ಸಹಿತ ವೇಗವನ್ನು ನಿಯಂತ್ರಿಸದೆ ಲಾರಿಯನ್ನು ಕ್ಷ್ಯಗೂ ನಿರ್ಲಕ್ಷತನದಿಂದ ಚಲಾಯಿಸಿ, ಲಾರಿಯನ್ನು ರಸ್ತೆಯ ಬದಿಯ ಗುಡ್ಡಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಲಾರಿಯನ್ನು ಜಖಂ ಪಡಿಸಿ, ಲಾರಿಯಲ್ಲಿದ್ದ ಸಿಮೆಂಟಿನ ಇಟ್ಟಿಗೆಯನ್ನು (Nexrise flyash Blocks) ಒಡೆದು ಹಾಳಾಗುವಂತೆ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಅನ್ವರಬಾಷಾ ತಂದೆ ಅಬ್ದುಲ್ ರಹೀಮ್ ಸಾಬ್, ಪ್ರಾಯ-45 ವರ್ಷ, ವೃತ್ತಿ-ಕ್ಲೀನರ್, ಸಾ|| ಪಿ.ಎಚ್ ಕಾಲೋನಿ, 14 ನೇ ತಿರುವು, ವಾರ್ಡ್ ನಂ: 10, ತುಮಕೂರು ರವರು ದಿನಾಂಕ: 13-08-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 111/2021, ಕಲಂ: ಹೆಂಗಸು ಮತ್ತು ಮಗು ಕಾಣೆ  ನೇದ್ದರ ವಿವರ...... ನಮೂದಿತ ಕಾಣೆಯಾದವರು 1]. ಶ್ರೀಮತಿ ಶ್ರೀದೇವಿ @ ಭಾಗ್ಯಶ್ರೀ ವಿಶ್ವಾನಾಥ ನಾಯ್ಕ, ಪ್ರಾಯ-31 ವರ್ಷ, 2]. ಕುಮಾರ: ಸುಬ್ರಹ್ಮಣ್ಯ ತಂದೆ ವಿಶ್ವಾನಾಥ ನಾಯ್ಕ, ಪ್ರಾಯ-3.5 ವರ್ಷ, ಸಾ|| (ಇಬ್ಬರೂ) ಬೆರಂಕಿ, ಮಾಹಾಸತಿ ದೇವಸ್ಥಾನದ ಹತ್ತಿರ, ತಾ: ಹೊನ್ನಾವರ. ಈ ನಮೂದಿತ ಕಾಣೆಯಾದವರಲ್ಲಿ ಪಿರ್ಯಾದಿಯ ಹೆಂಡತಿಯಾದ ಶ್ರೀಮತಿ ಶ್ರೀದೇವಿ @ ಭಾಗ್ಯಶ್ರೀ ಇವಳು ದಿನಾಂಕ: 11-08-2021 ರಂದು ಬೆಳಿಗ್ಗೆ 09-00 ಗಂಟೆಯಿಂದ 10-30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ತನ್ನ 3.5 ವರ್ಷದ ಮಗ ಕು: ಸುಬ್ರಹ್ಮಣ್ಯ ನಾಯ್ಕ ಈತನೊಂದಿಗೆ ಮನೆಯಿಂದ ಎಲ್ಲಿಗೋ ಹೋದವಳು, ಈವರೆಗೂ ಮನೆಗೆ ಬರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದವಳನ್ನು ಪತ್ತೆ ಮಾಡಿಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ವಿಶ್ವನಾಥ ತಂದೆ ಶಿವರಾಮ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೆರಂಕಿ, ಮಾಹಾಸತಿ ದೇವಸ್ಥಾನದ ಹತ್ತಿರ, ತಾ: ಹೊನ್ನಾವರ ರವರು ದಿನಾಂಕ: 13-08-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 130/2021, ಕಲಂ: 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರದೀಪಕುಮಾರ ತಂದೆ ಬೊಮ್ಮಯ್ಯ ನಾಯಕ, ಪ್ರಾಯ-52 ವರ್ಷ, ವೃತ್ತಿ-ಗುತ್ತಿಗೆದಾರ, ಸಾ|| ತೆಂಕಣಕೇರಿ, ತಾ: ಅಂಕೋಲಾ, 2]. ಜೈಲಾನಿ ತಂದೆ ಲತೀಫ್ ಸಾಬ್ ನಾಸಿಪೂಡಿ. ಪ್ರಾಯ-36 ವರ್ಷ, ವೃತ್ತಿ-ಗುತ್ತಿಗೆದಾರ, ಸಾ|| ಕುಂಬಾರ ಈಣಿ ಪ್ಲಾಟ್, ಕುಂದಗೋಳ, ತಾ: ಕುಂದಗೋಳ, ಜಿ: ಧಾರವಾಡ, ಹಾಲಿ ಸಾ|| ಗುಡಿಗಾರ ಗಲ್ಲಿ, ತಾ: ಅಂಕೋಲಾ 3]. ಘಾಟು ತಂದೆ ವಾಗು ಕೋಕರೆ, ಪ್ರಾಯ-42 ವರ್ಷ, ವೃತ್ತಿ-ಮೇಸ್ತ್ರಿ ಕೆಲಸ, ಸಾ|| ದೇಶಪಾಂಡೆ ನಗರ, ಕೋಳಿಕೇರಿ, ತಾ: ಯಲ್ಲಾಪುರ. ಈ ನಮೂದಿತ ಆರೋಪಿತರ ಪೈಕಿ ಆರೋಪಿ 1 ಮತ್ತು 2 ನೇಯವರು ಗುತ್ತಿಗೆದಾರರಾಗಿದ್ದು, ಆರೋಪಿ 3 ನೇಯವನು ಮೇಸ್ತ್ರಿಯಾಗಿದ್ದು, ಸದ್ರಿಯವರು ಯಲ್ಲಾಪುರ ಪಟ್ಟಣದ ಮಚ್ಚಿಗಲ್ಲಿಯಲ್ಲಿ ಪೌರ ಕಾರ್ಮಿಕರ ವಸತಿಗೃಹ ಕಟ್ಟಡ ಕಟ್ಟುವ ಗುತ್ತಿಗೆಯನ್ನು ಪಡೆದುಕೊಂಡಿದ್ದು, ಸದ್ರಿ ಕಟ್ಟಡದ ಕಾಮಗಾರಿ ನಡೆಯವ ಸ್ಧಳದಲ್ಲಿ ದಿನಾಂಕ: 07-08-2021 ರಂದು 18-00 ಗಂಟೆಗೆ ಸಾಕ್ಷಿದಾರರಾದ ಶ್ರೀ ಮಾಂಬು ತಂದೆ ದೊಂಡು ಕೋಕರೆ, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತೆಂಗಿನಗೇರಿ, ಪೋ: ಕಿರುವತ್ತಿ, ತಾ: ಯಲ್ಲಾಪುರ ರವರಿಗೆ ಪ್ರಾಣಕ್ಕೆ ಹಾನಿಯಾಗುವ ಸಂಭವ ಇದೆ ಅಂತಾ ಗೊತ್ತಿದ್ದರೂ ಸಹ ಯಾವುದೇ ಮುಂಜಾಗೃತಾ ಕ್ರಮ ವಹಿಸದೇ ನಿರ್ಲಕ್ಷ್ಯತನದಿಂದ ಕೆಲಸದ ಸಮಯದಲ್ಲಿ ಕಾಂಕ್ರೀಟ್ ಮಿಕ್ಸರ್ ಮಷೀನ್ ಆಪರೇಟ್ ಮಾಡಲು ಹೇಳಿ ಅವರ ಎಡಗೈ ಕಾಂಕ್ರೀಟ್ ಮಿಕ್ಸರ್ ಮಷೀನಿಗೆ ಸಿಕ್ಕು ಎಡಭುಜದ ಕೆಳಗಿನ ಕೈಗೆ ಭಾರೀ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಶಾಮು ತಂದೆ ಬಾಬು ಪಟಕಾರೆ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತೆಂಗಿನಗೇರಿ, ಪೋ: ಕಿರುವತ್ತಿ, ತಾ: ಯಲ್ಲಾಪುರ ರವರು ದಿನಾಂಕ: 13-08-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 134/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ರಮೇಶ ಮುಕುಂದ ಹಿರೇಕರ, ಪ್ರಾಯ-36 ವರ್ಷ, ಸಾ|| ಗುಂಡೋಳ್ಳಿ, ತಾ: ಹಳಿಯಾಳ (ಮೋಟಾರ್ ಸೈಕಲ್ ನಂ: ಕೆ.ಎ-65/ಎಚ್-6856 ನೇದರ ಸವಾರ), 2]. ನಾಗರಾಜ ತಂದೆ ಯಲ್ಲಪ್ಪ ರಾಚೋಡಕರ, ಪ್ರಾಯ-26 ವರ್ಷ, ವೃತ್ತಿ-ಟೇಲರಿಂಗ್ ಕೆಲಸ, ಸಾ|| ಸಂಗಮೇಶ್ವರ, ತಾ: ಕಲಘಟಗಿ, ಜಿ: ಧಾರವಾಡ (ಮೋಟಾರ್ ಸೈಕಲ್ ನಂ: ಕೆ.ಎ-25/ಇ.ಆರ್-0818 ನೇದರ ಸವಾರ). ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 12-08-2021 ರಂದು ಬೆಳಿಗ್ಗೆ 11-00 ಗಂಟೆಗೆ ಹಳಿಯಾಳ ಶಹರದ ಹಳಿಯಾಳ-ಕಲಘಟಗಿ ಡಾಂಬರ ರಸ್ತೆಯ ಎಲ್.ಪಿ ಕ್ರಾಸ್ ಹತ್ತಿರ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-65/ಎಚ್-6856 ನೇದನ್ನು ಹಳಿಯಾಳ ಕಡೆಯಿಂದ ಮುರ್ಕವಾಡ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಾ ತನ್ನ ಚಾಲನೆಯ ಮೇಲೆ ನಿಯಂತ್ರಣ ಕಳೆದುಕೊಂಡು ರಸ್ತೆಯ ತೀರಾ ಬಲಕ್ಕೆ ಬಂದು ಮುರ್ಕವಾಡ ಕಡೆಯಿಂದ ಹಳಿಯಾಳ ಕಡೆಗೆ ಆರೋಪಿ ನೇಯವನು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-25/ಇ.ಆರ್-0818 ನೇದರ ಹಿಂಬದಿಗೆ ಗಾಯಾಳು ಪರಶುರಾಮ್ ರಾಮಣ್ಣ ಬೆಳಗಾಂವಕರ ಇವರ ಬಾಬ್ತು ಟಿ.ವಿ.ಎಸ್ ಎಕ್ಸೆಲ್ ಮೋಟಾರ್ ಸೈಕಲ್ ನಂ: ಕೆ.ಎ-65/ಇ-0518 ನೇದನ್ನು ಹಗ್ಗದಿಂದ ಕಟ್ಟಿಕೊಂಡು ಪರಶುರಾಮ್ ಇವರಿಗೆ ಟಿ.ವಿ.ಎಸ್ ಎಕ್ಸೆಲ್ ಮೋಟಾರ್ ಸೈಕಲ್ ಮೇಲೆ ಕೂಡ್ರಿಸಿ ಚಲಾಯಿಸಿಕೊಂಡು ಬರುತ್ತಿದ್ದ ಟಿ.ವಿ.ಎಸ್ ಎಕ್ಸೆಲ್ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪರಶುರಾಮ್ ಇವರಿಗೆ ಮತ್ತು ತನ್ನ ಮೋಟಾರ್ ಸೈಕಲ್ ಹಿಂಬದಿ ಕುಳಿತಿದ್ದ ಗಣೇಶ ಕರಾಳಿ ಇವರಿಗೆ ಸಾಧಾರಣ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ತನಗೂ ಸಹ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡಿದ್ದು ಇರುತ್ತದೆ. ಈ ಅಪಘಾತವು ಮೋಟಾರ್ ಸೈಕಲ್ ನಂ: ಕೆ.ಎ-65/ಎಚ್-6856 ನೇದರ ಸವಾರನಾದ ಆರೋಪಿ 1 ಹಾಗೂ ಮೋಟಾರ್ ಸೈಕಲ್ ನಂ: ಕೆ.ಎ-25/ಇ.ಆರ್-0818 ನೇದರ ಸವಾರನಾದ ಆರೋಪಿ 2 ಇವರಿಬ್ಬರ ಅತೀವೇಗದ ಮತ್ತು ನಿರ್ಲಕ್ಷ್ಯತನದ ಸವಾರಿಯಿಂದ ನಡೆದ ಬಗ್ಗೆ ಪಿರ್ಯಾದಿ ಶ್ರೀ ದೀಪಕ ತಂದೆ ಮಾರುತಿ ಗೌಡ, ಪ್ರಾಯ-28 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ನಾಗಶೆಟ್ಟಿಕೊಪ್ಪ, ತಾ: ಹಳಿಯಾಳ ರವರು ದಿನಾಂಕ: 13-08-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 135/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿಠ್ಠಲ ತಂದೆ ನಾರಾಯಣ ಶಿಂಧೆ, ಪ್ರಾಯ-32 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬಂಟರಗಾಳಿ, ತಾ: ಹಳಿಯಾಳ (ಟ್ರ್ಯಾಕ್ಟರ್ ಇಂಜಿನ್ ನಂ: ಕೆ.ಎ-22/ಟಿ-8710 ನೇದರ ಚಾಲಕ). ಈತನು ದಿನಾಂಕ: 13-08-2021 ರಂದು 16-30 ಗಂಟೆಗೆ ತನ್ನ ಬಾಬ್ತು ಟ್ರ್ಯಾಕ್ಟರ್ ಇಂಜಿನ್ ನಂ: ಕೆ.ಎ-22/ಟಿ-8710 ನೇದನ್ನು ಹಳಿಯಾಳ ಕಡೆಯಿಂದ ಮುರ್ಕವಾಡ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಾಯಿಸುತ್ತಾ ಒಮ್ಮೇಲೆ ರಸ್ತೆಯ ತೀರಾ ಬಲಕ್ಕೆ ಚಲಾಯಿಸಿ, ತನ್ನ ಹಿಂದಿನಿಂದ ಬಂದು ಓವರಟೇಕ್ ಮಾಡುತ್ತಿದ್ದ ಪಿರ್ಯಾದಿಯವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಯು-3755 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಚಲಾಯಿಸುತ್ತಿದ್ದ ಪಿರ್ಯಾದಿಗೆ ಸಾಧಾರಣ ಸ್ವರೂಪದ ಮತ್ತು ಮೋಟಾರ್ ಸೈಕಲ್ ಹಿಂದೆ ಕುಳಿತಿದ್ದ ಸಾಗರ ಹುಂದ್ರಿ ಇವರಿಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಶಿವಾನಂದ ತಂದೆ ಮಹಾಬಲೇಶ್ವರ ಜೀಯೋಜಿ, ಪ್ರಾಯ-20 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಬಸವಳ್ಳಿ, ತಾ: ಹಳಿಯಾಳ ರವರು ದಿನಾಂಕ: 13-08-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 107/2021, ಕಲಂ: 457, 380 ಐಪಿಸಿ  ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 12-08-2021 ರಂದು ರಾತ್ರಿ 09-15 ಗಂಟೆಯಿಂದ ದಿನಾಂಕ: 13-08-2021 ರಂದು ಬೆಳಿಗ್ಗೆ 06-30 ಗಂಟೆಯ ನಡುವಿನ ಅವಧಿಯಲ್ಲಿ ಮುಂಡಗೋಡ ತಾಲೂಕಿನ ಮಳಗಿ ಗ್ರಾಮದಲ್ಲಿರುವ ಪಿರ್ಯಾದಿಯ ವೈನ್‍ ಶಾಪಿನ ಮುಂದಿನ ಶೆಟರ್ಸ್ ಅನ್ನು ಯಾವುದೋ ಗಟ್ಟಿಯಾದ ವಸ್ತುವಿನಂದ ಮೀಟಿ ತೆಗೆದು ಅಂಗಡಿಯ ಒಳಗೆ ಹೊಕ್ಕು 4,060/- ರೂಪಾಯಿ ಬೆಲೆಯ ಮದ್ಯವನ್ನು, 3,200/- ನಗದು ಹಣವನ್ನು ಹಾಗೂ 7,000/- ರೂಪಾಯಿ ಬೆಲೆಬಾಳುವ ಡಿ.ವಿ.ಆರ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಎಗ ಪಿರ್ಯಾದಿ ಶ್ರೀ ಪ್ರದೀಪ ತಂದೆ ನಾಗಪ್ಪ ಗಾಂವಕಾರ, ಪ್ರಾಯ-49 ವರ್ಷ, ವೃತ್ತಿ-ವ್ಯಾಪಾರ, ಸಾ|| ಫಾರೆಸ್ಟ್ ಕಾಲೋನಿ, ಚಿಪಗಿ, ತಾ: ಶಿರಸಿ ರವರು ದಿನಾಂಕ: 13-08-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 92/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 10-08-2021 ರಂದು ಮಧ್ಯರಾತ್ರಿ 01-00 ಗಂಟೆಯಿಂದ ಬೆಳಗಿನ ಜಾವ 06-30 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯವರು ಸಿದ್ದಾಪುರ ತಾಲೂಕಿನ ಬಿಳಗಿಯಲ್ಲಿ ತಮ್ಮ ಏಕದಂತ ಅಲ್ಯೂಮಿನಿಯಂ ಹಾಗೂ  ವೆಲ್ಡಿಂಗ ಶಾಪ್ ಎದುರಿನಲ್ಲಿ ನಿಲ್ಲಿಸಿಟ್ಟ ಅ||ಕಿ|| 50,000/- ರೂಪಾಯಿ ಮೌಲ್ಯದ ಕಪ್ಪು ಬಣ್ಣದ ಹೋಂಡಾ ಶೈನ್ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-9368 ನೇದನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ರವಿ ತಂದೆ ಗಣೇಶ ನಿಲೇಕಣಿ, ಪ್ರಾಯ-40 ವರ್ಷ, ವೃತ್ತಿ-ವೆಲ್ಡಿಂಗ ಶಾಪ್, ಸಾ|| ನಿಲೇಕಣಿ, ತಾ: ಶಿರಸಿ, ಹಾಲಿ ಸಾ|| ಬಿಳಗಿ, ತಾ: ಸಿದ್ದಾಪುರ ರವರು ದಿನಾಂಕ: 13-08-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 13-08-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

ಇತ್ತೀಚಿನ ನವೀಕರಣ​ : 14-08-2021 01:08 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080