ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 13-12-2021

at 00:00 hrs to 24:00 hrs

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 148/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದಿನೇಶ ತಂದೆ ವೆಂಕಟೇಶ ಪೈ, ಪ್ರಾಯ-46 ವರ್ಷ, ಸಾ|| ಬಳಕೂರು, ತಾ: ಹೊನ್ನಾವರ (ಮೋಟಾರ್ ಸೈಕಲ್ ನಂ: ಕೆ.ಎ-47/ಇ-6333 ನೇದರ ಸವಾರ). ಈತನು ದಿನಾಂಕ: 11-12-2021 ರಂದು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47-ಇ/6333 ನೇದರ ಹಿಂದಿನ ಸೀಟಿನಲ್ಲಿ ತನ್ನ ಅಣ್ಣ ವಿವೇಕ ಪೈ ರವರನ್ನು ಕೂರಿಸಿಕೊಂಡು ಬಳ್ಕೂರದಿಂದ ಮಂಕಿಯ ಕೊಕ್ಕೇಶ್ವರ ಸಭಾಭವನಕ್ಕೆ ಕೇಟರಿಂಗ್ ಕೆಲಸಕ್ಕೆ ಹೋಗಲು ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಮಂಕಿ ಅರೆ ದಾಟಿ ಹೋಗಿ ಪೆಟ್ರೋಲ್ ಬಂಕ್ ಹತ್ತಿರ 18-45 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮೇಲೆ ರಸ್ತೆ ದಾಟುತ್ತಿದ್ದ ದನ ಒಂದಕ್ಕೆ ಡಿಕ್ಕಿ ಹೊಡೆದು, ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು, ವಿವೇಕ ಈತನಿಗೆ ತಲೆಗೆ ಭಾರೀ ರಕ್ತಗಾಯ, ಒಳನೋವು ಮತ್ತು ಮೈಕೈಗೆ ತೆರಚಿದ ಗಾಯಗಳನ್ನು ಪಡಿಸಿದ್ದಲ್ಲದೇ, ತನಗೆ ಬಲಗೈಗೆ ಹಾಗೂ ಬಲಕಾಲಿಗೆ ತೆರಚಿದ ಗಾಯನೋವುಗಳನ್ನು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ವಿಷ್ಣು ಶಾನಭಾಗ, ಪ್ರಾಯ-45 ವರ್ಷ, ವೃತ್ತಿ-ಕೇಟರಿಂಗ್, ಸಾ|| ಬಳಕೂರು, ತಾ: ಹೊನ್ನಾವರ ರವರು ದಿನಾಂಕ: 13-12-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 108/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಮೋಟಾರ್ ಸೈಕಲ್ ನಂ: ಕೆ.ಎ-20/ಇ.ಕ್ಯೂ-0052 ನೇದರ ಸವಾರನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 13-12-2021 ರಂದು ಬೆಳಿಗ್ಗೆ 09-15 ಗಂಟೆಗೆ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-20/ಇ.ಕ್ಯೂ-0052 ನೇದನ್ನು ರಾಷ್ಟ್ರಿಯ ಹೆದ್ದಾರಿ ಸಂಖ್ಯೆ-66 ರಲ್ಲಿ ಭಟ್ಕಳ ಕಡೆಯಿಂದ ಮುರ್ಡೇಶ್ವರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಉತ್ತರಕೊಪ್ಪ ಕ್ರಾಸ್ ಸಮೀಪ ಬಸ್ತಿಯಲ್ಲಿ ತನ್ನ ಮುಂದೆ ಕಾಯ್ಕಿಣಿ ಕಡೆಯಿಂದ ಮುರ್ಡೇಶ್ವರ ಕಡೆಗೆ ಪವನಕುಮಾರ ತಂದೆ ಅಶೋಕ ವೈದ್ಯ, ಪ್ರಾಯ-21 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಅನಿಲಗೋಡ, ತಾ: ಹೊನ್ನಾವರ, ಹಾಲಿ ಸಾ|| ಸಭಾತಿ, ಕಾಯ್ಕಿಣಿ, ತಾ: ಭಟ್ಕಳ ಈತನು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಯು-9147 ನೇದಕ್ಕೆ ಬಲಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ರಸ್ತೆಯಲ್ಲಿ ಬೀಳುವಂತೆ ಮಾಡಿ, ಅದರ ಚಾಲಕ ಪವನಕುಮಾರ ಈತನ ತಲೆಗೆ ಗಂಭೀರ ಸ್ವರೂಪ ಗಾಯ ಹಾಗೂ ಮೈಕೈಗೆ ತೆರಚಿದ ಗಾಯನೋವು ಆಗುವಂತೆ ಮಾಡಿದಲ್ಲದೇ, ತನ್ನ ಮೋಟಾರ್ ಸೈಕಲ್ ಹಿಂದುಗಡೆ ಕುಳಿತ ಸವಾರನೊಂದಿಗೆ ತಾನು ಸಹ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು, ತನ್ನ ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತುಕೊಂಡಿದ್ದವನಿಗೆ ಬೆನ್ನಿನ ಎಡಬದಿಯಲ್ಲಿ ತೆರಚಿದ ಗಾಯನೋವು ಪಡಿಸಿದ್ದಲ್ಲದೇ, ತನಗೂ ಸಹ ತಲೆಯ ಬಲಭಾಗಕ್ಕೆ ಗಂಭೀರ ಸ್ವರೂಪದ ಗಾಯ ಹಾಗೂ ಎಡಗಾಲು ಪಾದ ಹತ್ತಿರ, ಸೊಂಟದ ಬಲಬದಿಯಲ್ಲಿ, ಕೈಗಳಿಗೆ ತೆರಚಿದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಲಿಂಗು ತಂದೆ ಸಣ್ಣು ಮರಾಠಿ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೊಪ್ಪ ಗ್ರಾಮ, ಗೊಳಿಕುಂಬ್ರಿ, ತಾ: ಭಟ್ಕಳ ರವರು ದಿನಾಂಕ: 13-12-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 153/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಮೇಶ ತಂದೆ ನಾರಾಯಣ ದೇವಾಡಿಗ, ಸಾ|| ಬಡ್ಡುಕುಳಿ, ಮೇಲಿನಮನೆ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಎಚ್-3792 ನೇದರ ಸವಾರ). ಈತನು ದಿನಾಂಕ: 05-12-2021 ರಂದು 19-30 ಗಂಟೆಗೆ ಶಿರಾಲಿ ಮಾರುಕಟ್ಟೆಯ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಡಾಂಬರ್ ರಸ್ತೆಯ ಪಕ್ಕದಲ್ಲಿ ನಿಂತ ತನ್ನ ಪರಿಚಯದವರಾದ ಪಿರ್ಯಾದಿಯ ಹೆಂಡತಿಯಾದ ಶ್ರೀಮತಿ ಪದ್ಮಾ ಕೋಂ. ಮಂಜುನಾಥ ಮೊಗೇರ, ಸಾ|| ಹೊಸ್ಕಟ್ಟೆ, ಬಂಡಿಕಾಶಿ, ಪೋ: ಚಿತ್ರಾಪುರ, ತಾ: ಭಟ್ಕಳ ಇವಳನ್ನು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಎಚ್-3792 ನೇದರಲ್ಲಿ ಕೂರಿಸಿಕೊಂಡು ಶಿರಾಲಿ ಮಾರುಕಟ್ಟೆ ಕಡೆಯಿಂದ ಶಿರಾಲಿ ಕಡೆಗೆ ಹೋಗುತ್ತಿರುವಾಗ ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಶಿರಾಲಿ ಹಾದಿ ಮಾಸ್ತಿ ದೇವಸ್ಥಾನದ ಹತ್ತಿರ ರಸ್ತೆಯ ಮೇಲೆ ಒಮ್ಮೆಲೇ ದನ ಅಡ್ಡ ಬಂದಿದ್ದರಿಂದ ಆರೋಪಿತನು ತನ್ನ ಮೋಟಾರ್ ಸೈಕಲಿನ ವೇಗ ನಿಯಂತ್ರಿಸಲಾಗದೇ ಮೋಟಾರ್ ಸೈಕಲ್ ಹಿಂದೆ ಕುಳಿತುಕೊಂಡಿದ್ದ ಪಿರ್ಯಾದಿಯ ಹೆಂಡತಿಯನ್ನು ಕಡವಿ ಅಪಘಾತ ಪಡಿಸಿದ್ದರಿಂದ ಪಿರ್ಯಾದಿಯ ಹೆಂಡತಿಯು ಮೋಟಾರ್ ಸೈಕಲ್ ಮೇಲಿಂದ ರಸ್ತೆಯ ಮೇಲೆ ಬಿದ್ದ ಪರಿಣಾಮ ಮೂಗಿನ ಭಾಗಕ್ಕೆ, ಎಡಗಣ್ಣಿಗೆ, ಬಾಯಿಗೆ, ಹಣೆಗೆ ಹಾಗೂ ಕೈ ಮತ್ತು ಕಾಲಿಗೆ ಗಾಯವಾದ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ದುರ್ಗಪ್ಪ ಮೊಗೇರ. ಪ್ರಾಯ-60 ವರ್ಷ, ವೃತ್ತಿ-ಕೂಲಿ ಕೆಲಸ. ಸಾ|| ಹೊಸ್ಕಟ್ಟೆ, ಬಂಡಿಕಾಶಿ, ಪೋ: ಚಿತ್ರಾಪುರ, ತಾ: ಭಟ್ಕಳ ರವರು ದಿನಾಂಕ: 13-12-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 166/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಹ್ಮದ್ ರಬಾಹ್ ಕಮರಿ ತಂದೆ ಬಿಲಾಲ್ ಅಹ್ಮದ್ ಕಮರಿ, ಪ್ರಾಯ-21 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ದಾರ್-ಇ-ಬಿಲಾಲ್, ನವಾಯತ್ ಕಾಲೋನಿ, ಕಾರಗದ್ದೆ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಕೆ-4125 ನೇದರ ಸವಾರ). ಈತನು ದಿನಾಂಕ: 12-12-2021 ರಂದು ಮಧ್ಯಾಹ್ನ 14-30 ಗಂಟೆಯ ಸುಮಾರಿಗೆ ಭಟ್ಕಳ ಶಹರದ ಅಂಜುಮನ್ ಕಾಲೇಜ್ ರಸ್ತೆಯ ಹಿರಿಯ ಪ್ರಾಥಮಿಕ ಶಾಲೆಯ ಎದುರಿಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಕೆ-4125 ನೇದನ್ನು ಭಟ್ಕಳ ಶಹರದ ಎ.ಸಿ ಆಫೀಸ್ ಕಡೆಯಿಂದ ಅಂಜುಮನ್ ಕಾಲೇಜ್ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ರಸ್ತೆಯ ತೀರಾ ಬಲಕ್ಕೆ ಹೋಗಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಕುಮಾರ: ಮೊಹಮ್ಮದ್ ಸಾಹಿಲ್ ತಂದೆ ಮೊಹಮ್ಮದ್ ಜಾಫರ್, ಪ್ರಾಯ-12 ವರ್ಷ, ಸಾ|| ಜಾಮೀಯಾ ಅಬಾದ್, ತೆಂಗಿನಗುಂಡಿ, ತಾ: ಭಟ್ಕಳ ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಕುಮಾರ: ಮೊಹಮ್ಮದ್ ಸಾಹಿಲ್ ಈತನ ಬಲಗಾಲಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮೊಹಮ್ಮದ್ ಶಫಿ ತಂದೆ ಹಸನ್ ಸಾಬ್, ಪ್ರಾಯ-42 ವರ್ಷ, ವೃತ್ತಿ-ಚಾಲಕ, ಸಾ|| ದೇವಿ ನಗರ, ಜಾಲಿ ರೋಡ್, ತಾ: ಭಟ್ಕಳ ರವರು ದಿನಾಂಕ: 13-12-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 221/2021, ಕಲಂ: 448, 341, 323, 504, 506, 307, 427 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಉದಯ ತಂದೆ ಕಲ್ಲೊಳಪ್ಪಾ ಮಂಡಗೊಡ್ಲಿ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಾಯ್ಕನಕೆರೆ, ತಾ: ಯಲ್ಲಾಪುರ, 2]. ಗಣೇಶ ತಂದೆ ಕಲ್ಲೊಳಪ್ಪಾ ಮಂಡಗೊಡ್ಲಿ, ಪ್ರಾಯ-33 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಾಯ್ಕನಕೆರೆ, ತಾ: ಯಲ್ಲಾಪುರ, 3]. ಭರತ ತಂದೆ ಕಲ್ಲೊಳಪ್ಪಾ ಮಂಡಗೊಡ್ಲಿ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಾಯ್ಕನಕೆರೆ, ತಾ: ಯಲ್ಲಾಪುರ, 4]. ಇನ್ನೊಬ್ಬ (ಹೆಸರು ವಿಳಾಸ ನಮೂದಿರುವುದಿಲ್ಲ). ಈ ನಮೂದಿತ ಆರೋಪಿತರು ಸೇರಿಕೊಂಡು ದಿನಾಂಕ: 13-12-2021 ರಂದು 04-10 ಗಂಟೆಯಿಂದ 04-45 ಗಂಟೆಯವರೆಗೆ ಯಲ್ಲಾಪುರ ಪಟ್ಟಣದ ಗೌಂಧಿ ಚೌಕ ಹತ್ತಿರ ಇರುವ ಪಿರ್ಯಾದಿಯವರಿಗೆ ಸೇರಿದ ಜನತಾ ಕೋಲ್ಡಡ್ರಿಂಕ್ಸ್ಸ್ ಹಾಗೂ ನಕ್ಷತ್ರಾ ಮೊಬೈಲ್ ಎಂಬ ಹೆಸರಿನ ಅಂಗಡಿಯಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ, ಅಂಗಡಿಯಲ್ಲಿದ್ದ ಪಿರ್ಯಾದಿ ಹಾಗೂ ಅಂಗಡಿಯಲ್ಲಿ ಕೆಲಸ ಮಾಡುವ ಗಜಾನನ ತಂದೆ ನಾರಾಯಣ ಪಡ್ತಿ ರವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಪಿರ್ಯಾದಿಯವರಿಗೆ ಆರೋಪಿ 1 ಮತ್ತು 2 ನೇಯವರು ಹಿಡಿದು ತಡೆದು ನಿಲ್ಲಿಸಿ, ಆರೋಪಿ 1 ನೇಯವನು ಪಿರ್ಯಾದಿಯವರಿಗೆ ಹಾಗೂ ಗಜಾನನ ಪಡ್ತಿ ಇವರಿಗೆ ಕುತ್ತಿಗೆ ಹಿಡಿದು ‘ಸಾಯಿಸಿಯೇ ಬಿಡುತ್ತೇನೆ’ ಅಂತಾ ಹೇಳಿ ಕುತ್ತಿಗೆ ಹಿಸುಕಿ ಕೊಲೆ ಯತ್ನಕ್ಕೆ ಪ್ರಯತ್ನಿಸಿದ್ದಲ್ಲದೇ, ಎಲ್ಲಾ ಆರೋಪಿತರು ಕೈಯಿಂದ ಹೊಡೆದು ದುಃಖಾಪತ್ ಪಡಿಸಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ಬೈಯ್ದು, ತಾವು ತಂದ ಲಾರಿಗೆ ಹಗ್ಗ ಕಟ್ಟಿ, ಹಗ್ಗದ ಇನ್ನೊಂದು ತುದಿಯನ್ನು ಪಿರ್ಯಾದಿಯವರ ಅಂಗಡಿಯ ಜಂತಿಗೆ ಹಾಗೂ ಪಕಾಶಿಗೆ ಕಟ್ಟಿ, ಲಾರಿಯಿಂದ ಎಳೆದು ಅಂಗಡಿಯನ್ನು ಬೀಳಿಸಿ, ಅಂಗಡಿಯಲ್ಲಿದ್ದ ಸುಮಾರು 7 ರಿಂದ 8 ಲಕ್ಷ ರೂಪಾಯಿಯ ಸಾಮಾನುಗಳನ್ನು ಜಖಂಗೊಳಿಸಿ, ಲುಕ್ಸಾನ್ ಪಡಿಸಿದ್ದಲ್ಲದೇ, ಪಿರ್ಯಾದಿ ಹಾಗೂ ಪಿರ್ಯಾದಿಯವರ ಕುಟುಂಬದ ಜನರಿಗೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಚಂದ್ರಶೇಖರ ತಂದೆ ಬಾಬು ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ವ್ಯಾಪಾರ, ಸಾ|| ಜಮ್ಮಿನಜಡ್ಡಿ, ಸಹಸ್ರಳ್ಳಿ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 13-12-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 153/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಭಿಷೇಕ ತಂದೆ ಲಕ್ಷ್ಮಣ ನಾಯ್ಕ, ಪ್ರಾಯ-24 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹುಬ್ಬಗೈ, ತಾ: ಸಿದ್ದಾಪುರ (ಮೋಟಾರ್ ಸೈಕಲ್ ನಂ: ಕೆ.ಎ-53/ಇ.ಎಫ್-2658 ನೇದರ ಸವಾರ). ಈತನು ದಿನಾಂಕ: 12-12-2021 ಸಾಯಂಕಾಲ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-53/ಇ.ಎಫ್-2658 ನೇದರ ಹಿಂಬದಿಗೆ ಪಿರ್ಯಾದಿಗೆ ಕೂರಿಸಿಕೊಂಡು ಸಿದ್ದಾಪುರ ಕಡೆಯಿಂದ ಹಾರ್ಸಿಕಟ್ಟಾ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಸವಾರಿ ಮಾಡಿಕೊಂಡು ಹೋಗುತ್ತಿದ್ದವನು 19-30 ಗಂಟೆಯ ಸುಮಾರಿಗೆ ಹಾರ್ಸಿಕಟ್ಟಾ ಹೈಸ್ಕೂಲ್ ಹತ್ತಿರ ತನ್ನ ಮೋಟಾರ್ ಸೈಕಲನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ, ಮೋಟಾರ್ ಸೈಕಲ್ ಹಿಂಬದಿ ಕುಳಿತಿದ್ದ ಪಿರ್ಯಾದಿಯನ್ನು ಕೆಳಗೆ ಬೀಳಿಸಿ, ಪಿರ್ಯಾದಿಯ ಬಲಗಾಲಿಗೆ ತೀವ್ರ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಮೋಟಾರ್ ಸೈಕಲ್ ಮೇಲೆ ನಿಯಂತ್ರಣ ತಪ್ಪಿಸಿಕೊಂಡು ಸ್ಕಿಡ್ ಆಗಿ ಬಿದ್ದು, ಅವನು ಸಹಾ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ರಾಘವೇಂದ್ರ ತಂದೆ ಈಶ್ವರ ಭೈರನ್, ಪ್ರಾಯ-38 ವರ್ಷ, ವೃತ್ತಿ-ಕೃಷಿ/ಕೂಲಿ ಕೆಲಸ, ಸಾ|| ಕಾನಕ್ಕಿ, ಪೋ: ಅರೆಂಗಡಿ, ತಾ: ಹೊನ್ನಾವರ ರವರು ದಿನಾಂಕ: 13-12-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 13-12-2021

at 00:00 hrs to 24:00 hrs

 

ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 23-12-2021 06:22 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080