ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 13-02-2021

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 14/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಶ್ರೀಮತಿ ರೋಶಿನಿ @ ನಂದಿನಿ ಕೋಂ. ನಿಲೇಶ ಕೊಳಂಬಕರ, ಪ್ರಾಯ-26 ವರ್ಷ, ವೃತ್ತಿ-ಟೇಲರಿಂಗ್ ಕೆಲಸ, ಸಾ|| ಬಿಡ್ತುಲಬಾಗ, ಚಿತ್ತಾಕುಲಾ, ಸದಾಶಿವಗಡ, ಕಾರವಾರ. ಪಿರ್ಯಾದಿಯವರ ಹೆಂಡತಿಯಾದ ಇವರು ದಿನಾಂಕ: 11-02-2021 ರಂದು 10-30 ಘಂಟೆಗೆ ಟೇಲರಿಂಗ್ ಶಾಪ್ ಕಾರವಾರಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋದವರು, ಇದುವರೆಗೆ ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಹೆಂಡತಿಯನ್ನು ಹುಡುಕಿ ಕೊಡಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ನಿಲೇಶ ಮೋಹನ ಕೊಳಂಬಕರ, ಪ್ರಾಯ-38 ವರ್ಷ, ವೃತ್ತಿ-ಗೌಂಡಿ ಕೆಲಸ/ಕೂಲಿ ಕೆಲಸ, ಸಾ||  ಬಿಡ್ತುಲಬಾಗ, ಚಿತ್ತಾಕುಲಾ, ಸದಾಶಿವಗಡ, ಕಾರವಾರ ರವರು ದಿನಾಂಕ: 13-02-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.  

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 15/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಅಜಯ ತಂದೆ ಉಮೇಶ ಗುರವ, ಪ್ರಾಯ-32 ವರ್ಷ, ವೃತ್ತಿ-ನಿರುದ್ಯೋಗಿ, ಸಾ|| ಗುರವವಾಡ, ಮಾಜಾಳಿ, ಕಾರವಾರ. ನಮೂದಿತ ಆರೋಪಿತನು ದಿನಾಂಕ: 13-02-2021 ರಂದು ಮಧ್ಯಾಹ್ನ 12-25 ಗಂಟೆಗೆ ಮಾಜಾಳಿಯಿಂದ ಮಾಜಾಳಿ ಇಂಜಿನಿಯರಿಂಗ್ ಕಾಲೇಜ್ ಹೋಗುವ ರಸ್ತೆಯ ಪಕ್ಕ ಇರುವ ಆಲದ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಪಡೆದು ಆ ಹಣವನ್ನು ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಚೀಟಿಯನ್ನು ಬರೆದುಕೊಡುತ್ತಿದ್ದವನಿಗೆ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ನಡೆಸಿ ಹಿಡಿದು, ಅವನಿಂದ ನಗದು ಹಣ 870/- ರೂಪಾಯಿ ಹಾಗೂ ಅಂಕೆ-ಸಂಖ್ಯೆ ಬರೆದ ಚೀಟಿ ಮತ್ತು ಬಾಲ್ ಪೆನ್ ಅನ್ನು ವಶಪಡಿಸಿಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರವೀಣಕುಮಾರ ಆರ್, ಪಿ.ಎಸ್.ಐ, ಚಿತ್ತಾಕುಲಾ ಪೊಲೀಸ್ ಠಾಣೆ ರವರು ದಿನಾಂಕ: 13-02-2021 ರಂದು 13-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 31/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹೇಂದ್ರ ತಂದೆ ಹೂವಣ್ಣ ಗೌಡ, ಪ್ರಾಯ-18 ವರ್ಷ, ಸಾ|| ಉಳಗದ್ದೆ, ಅಗಸೂರು, ತಾ: ಅಂಕೋಲಾ (ಮೋಟಾರ್ ಸೈಕಲ್ ನಂ: ಕೆ.ಎ-30/ವಿ-5277 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 13-02-2021 ರಂದು 17-40 ಗಂಟೆಗೆ ಅಂಕೋಲಾ ತಾಲೂಕಿನ ಹೊನ್ನಾಳ್ಳಿಯಲ್ಲಿ ವಾಟರ್ ಸಪ್ಲಾಯ್ ಕ್ರಾಸ್ ಹತ್ತಿರ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯ ಮೇಲೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-30/ವಿ-5277 ನೇದನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯ ಬದಿಯಲ್ಲಿ ನಿಲ್ಲಿಸಿದ ಟಾಟಾ ಏಸ್ ವಾಹನ ನಂ: ಕೆ.ಎ-15/ಎ-0174 ನೇದಕ್ಕೆ ಹಿಂಬದಿಯಲ್ಲಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲಿನ ಹಿಂಬದಿಯಲ್ಲಿ ಕುಳಿತ ಚೇತನ ತಂದೆ ಚಂದ್ರು ಗೌಡ, ಸಾ|| ಹೊನ್ನಳ್ಳಿ, ಅಗಸೂರು, ತಾ: ಅಂಕೋಲಾ ಈತನಿಗೆ ಎಡಗಾಲಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ ಸವಾರನು ತನಗೂ ಕೂಡ ಮುಖಕ್ಕೆ ಮತ್ತು ಎಡಗಾಲಿಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಯಶವಂತ ತಂದೆ ತಿಮ್ಮಾ ಗೌಡ, ಪ್ರಾಯ-38 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹೊನ್ನಳ್ಳಿ, ತಾ: ಅಂಕೋಲಾ ರವರು ದಿನಾಂಕ: 13-02-2021 ರಂದು 20-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 25/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಶ್ರೀಮತಿ ಶಾರದಾ ಕೋಂ. ನರಸಿಂಹ ಸಿದ್ದಿ, ಪ್ರಾಯ-32 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಲಿಂಬೆಸರ, ಹುತ್ಕಂಡ ಗ್ರಾಮ, ತಾ: ಯಲ್ಲಾಪುರ. ಪಿರ್ಯಾದುದಾರರ ಹೆಂಡತಿಯಾದ ಇವರು ದಿನಾಂಕ: 12-02-2021 ರಂದು 10-30 ಗಂಟೆಗೆ ಯಲ್ಲಾಪುರ  ತಾಲೂಕಿನ  ಜಂಬೆಸಾಲ ಹತ್ತಿರದ ಬಸ್ ನಿಲ್ದಾಣದಲ್ಲಿ ಇದ್ದವರು, ತಾನು ಯಲ್ಲಾಪುರ ಆಸ್ಪತ್ರೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವರು, ಈವರೆಗೂ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನರಸಿಂಹ ತಂದೆ ದುರ್ಗಾ ಸಿದ್ದಿ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಲಿಂಬೆಸರ, ಹುತ್ಕಂಡ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 13-02-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 19/2021, ಕಲಂ: 323, 341, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತೆ ಸನಾ ತಂದೆ ಅನ್ವರ್ ಮಕಾಂದಾರ್, ಪ್ರಾಯ-19 ವರ್ಷ, ಸಾ|| ಬಾಂಬೆಚಾಳ, ದಾಂಡೇಲಿ. ನಮೂದಿತ ಆರೋಪಿತಳು ದಿನಾಂಕ 16-08-2015ರಂದು 18-30 ಗಂಟೆಯ ಸುಮಾರಿಗೆ ದಾಂಡೇಲಿಯ ಬಸ್ ನಿಲ್ದಾಣದ ಹಿಂದಿನ ದಂಡಕಾರಣ್ಯದ ಮುಂದಿನ ರಸ್ತೆಯ ಮೇಲೆ ಪಿರ್ಯಾದಿಯು ನಡೆದುಕೊಂಡು ಹೋಗುತ್ತಿರುವಾಗ ಆರೋಪಿತಳು ಪಿರ್ಯಾದಿಯನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ, ಪಿರ್ಯಾದಿಯನ್ನು ಉದ್ದೇಶಿಸಿ ‘ಬೋಸಡಿಕೆ, ರಾಂಡಕೆ, ಚಿನಾಲಿಕೆ, ತು ಹಮನಾ ನೊಟೀಸ್ ಬೇಜತಾ, ತುಜೆ ಯಹಿ ಪೆ ಕಲಾಸ ಕರ್ತಿ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಜೀವದ ಬೆದರಿಕೆ ಹಾಲಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಧನರಾಜ ತಂದೆ ಶಿವಾಜಿ ಕಲಾಲ್, ಪ್ರಾಯ-37 ವರ್ಷ, ವೃತ್ತಿ-ವ್ಯಾಪಾರ, ಸಾ|| ಹಳೇ ದಾಂಡೇಲಿ, ದಾಂಡೇಲಿ ರವರು ದಿನಾಂಕ: 13-02-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 28/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ನಿಂಗನಗೌಡ ತಂದೆ ರುದ್ರಗೌಡ ಕಂಕನವಾಡ, ಪ್ರಾಯ-41 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹಳೆ ಪ್ಯಾಟಿ, ತಾ: ಶಿಗ್ಗಾಂವಿ, ಜಿ: ಹಾವೇರಿ, 2]. ಶಂಕರ ತಂದೆ ರಾಮು ಲಮಾಣಿ, ಪ್ರಾಯ-35 ವರ್ಷ, ವೃತ್ತಿ-ಸ್ವೆಟರ್ ವ್ಯಾಪಾರ, ಸಾ|| ಅಗಡಿ, ತಾ: ಮುಂಡಗೋಡ, 3]. ಪ್ರಶಾಂತ ವೃತ್ತಿ-ಕೂಲಿ ಕೆಲಸ, ಸಾ|| ಕರ್ಜಗಿ, ತಾ: ಹಾವೇರಿ, ಜಿ: ಹಾವೇರಿ, 4]. ರಾಜೇಸಾಬ ತಂದೆ ಹಿಮಾಮಸಾಬ ಧಾರವಾಡ, ಪ್ರಾಯ-39 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಬಮ್ಮಿಗಟ್ಟಿ, ತಾ: ಕಲಘಟಗಿ, ಜಿ: ಧಾರವಾಡ, 5]. ಸೋಮನಾಥ ತಂದೆ ಈರಪ್ಪ ಲಮಾಣಿ, ಸಾ|| ಅಗಡಿ, ತಾ: ಮುಂಡಗೋಡ, 6]. ಮಂಗಲಪ್ಪ ರೂಪ್ಲಪ್ಪ ಲಮಾಣಿ, ಸಾ|| ಅಗಡಿ, ತಾ: ಮುಂಡಗೋಡ, 7]. ಬಸವರಾಜ ವಾಲೀಕಾರ, ಸಾ|| ಹುನಗುಂದ, ತಾ: ಮುಂಡಗೋಡ, 8]. ದೇವಪ್ಪ ತಂದೆ ಪೀರಪ್ಪ ಲಮಾಣಿ ಸಾ|| ಅಗಡಿ, ತಾ: ಮುಂಡಗೋಡ, 9]. ಮಂಜುನಾಥ ತಂದೆ ಕರಿಯಪ್ಪ ಹರಿಜನ ಸಾ|| ಹುನಗುಂದ, ತಾ: ಮುಂಡಗೋಡ, 10]. ಮಂಜುನಾಥ ವಡ್ಡರ ಸಾ|| ಹುನಗುಂದ, ತಾ: ಮುಂಡಗೋಡ, 11]. ಚನ್ನಪ್ಪ ನಡುವಿನಮನಿ, ಸಾ|| ಹುನಗುಂದ, ತಾ: ಮುಂಡಗೋಡ, 12]. ಯಲ್ಲಪ್ಪ ಶಿವಳ್ಳಿ, ಸಾ|| ಹುನಗುಂದ, ತಾ: ಮುಂಡಗೋಡ. ಈ ನಮೂದಿತ ಆರೋಪಿತರು ದಿನಾಂಕ: 13-02-2020 ರಂದು ರಾತ್ರಿ 02-15 ಗಂಟೆಗೆ ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದ ಹುನಗುಂದ-ಅರಶಿಣಗೇರಿ ರಸ್ತೆಯಲ್ಲಿರುವ ರಾಮಣ್ಣ ಹುಲಿಹೊಂಡ ಎಂಬುವವರ ಹೊಲದಲ್ಲಿರುವ ಕೋಳಿ ಫಾರ್ಮಿನ ವಿದ್ಯುತ್ ದೀಪದ ಬೆಳಕಿನಲ್ಲಿ ತಮ್ಮ ತಮ್ಮ ಲಾಭದ ಸಲುವಾಗಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಇಸ್ಪೀಟ್ ಜುಗಾರಾಟ ಆಡುತ್ತಾ ನಗದು ಹಣ 27,000/- ರೂಪಾಯಿ ಹಾಗೂ ಜುಗಾರಾಟದ ಸಲಕರಣೆಗಳಾದ ನ್ಯೂಸ್ ಪೇಪರ್, ಇಸ್ಪೀಟ್ ಎಲೆಗಳು-52. ಇವುಗಳೊಂದಿಗೆ ಆರೋಪಿ 1 ರಿಂದ 4 ನೇಯವರು ದಾಳಿಯ ಕಾಲಕ್ಕೆ ಸೆರೆ ಸಿಕ್ಕಿದ್ದು ಹಾಗೂ ಆರೋಪಿ 5 ರಿಂದ 12 ನೇಯವರು ದಾಳಿಯ ಕಾಲಕ್ಕೆ ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರಭುಗೌಡ ಡಿ. ಕೆ, ಪೊಲೀಸ್ ನಿರೀಕ್ಷಕರು, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 13-02-2021 ರಂದು 04-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 13-02-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 09/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಸಂತೊಷ ತಂದೆ ಚಂದ್ರು ಪಟಗಾರ, ಪ್ರಾಯ-33 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಣಿಕಾರ, ತಾ: ಅಂಕೋಲಾ. ಈತನು ಮತ್ತು ಪಿರ್ಯಾದಿಯವರು ಇಬ್ಬರೂ ಸೇರಿ ದಿನಾಂಕ: 12-02-2021 ರಂದು ಮಧ್ಯಾಹ್ನ ಸುಮಾರು 15-00 ಗಂಟೆಗೆ ಹಳಕೇರಿ ಮೇಲ್ಗಡೆಯ ಬೆಟ್ಟದಲ್ಲಿರುವ ರಾಮಪತ್ರಿಯನ್ನು ಕೀಳಲು ಹೋಗಿದ್ದು, ಸುಮಾರು 17-00 ಗಂಟೆಗೆ ರಾಮಪತ್ರಿಯ ಒಂದು ಗಿಡದಿಂದ ರಾಮಪತ್ರಿಯನ್ನು ತೆಗೆದು, ಮತ್ತೊಂದು ಗಿಡಕ್ಕೆ ರಾಮಪತ್ರಿಯನ್ನು ಕೀಳಲು ಹೋದವನು, ಮರವನ್ನು ಹತ್ತುವಾಗ ಆಕಸ್ಮಿಕವಾಗಿ ಕಾಲು ಜಾರಿ ಅಥವಾ ಇನ್ನಾವುದೋ ಕಾರಣದಿಂದ ಮರದಿಂದ ಕೆಳಗೆ ಬಿದ್ದು ದಿನಾಂಕ: 13-02-2021 ರಂದು 12-00 ಗಂಟೆಗೆ ಮೃತಪಟ್ಟ ಸ್ಥಿತಿಯಲ್ಲಿ ಸಿಕ್ಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ದೀಪಾ ಗಂಡ ಸಂತೋಷ ಪಟಗಾರ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಣಿಕಾರ, ತಾ: ಅಂಕೋಲಾ ರವರು ದಿನಾಂಕ: 13-02-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 ======||||||||======

 

 

 

 

ಇತ್ತೀಚಿನ ನವೀಕರಣ​ : 16-02-2021 11:08 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080