ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 13-01-2022

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 05/2022, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಣಪತಿ ತಂದೆ ಶಿವು ಗೌಡ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮೂಡುಕೋಣ, ಉಳುವರೆ, ತಾ: ಅಂಕೋಲಾ (ಮೋಟಾರ್ ಸೈಕಲ್ ನಂ: ಕೆ.ಎ-30/ಎಸ್-6147 ನೇದರ ಸವಾರ). ಈತನು ದಿನಾಂಕ: 05-01-2022 ರಂದು ಸಾಯಂಕಾಲ 19-00 ಗಂಟೆಯ ಸುಮಾರಿಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-30/ಎಸ್-6147 ನೇದನ್ನು ಉಳುವರೆ ಕಡೆಯಿಂದ ತನ್ನ ಮನೆಗೆ ಹೋಗಲು ಅಂತಾ ಮೂಡುಕೋಣ ಕಡೆಗೆ ರಸ್ತೆಯ ಮೇಲಾಗಿ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದವನು, ಉಳುವರೆ ಕನ್ನಡ ಶಾಲೆಯ ಹತ್ತಿರ ಇಳಿಜಾರಿನಲ್ಲಿ ತನ್ನ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ಬಿದ್ದು ಅಪಘಾತ ಪಡಿಸಿ, ತನ್ನ ತಲೆಗೆ, ಎಡಗೆನ್ನೆಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿಕೊಂಡವನಿಗೆ ಉಪಚಾರಕ್ಕಾಗಿ ಆರ್.ಎನ್.ನಾಯಕ ಆಸ್ಪತ್ರೆ, ಅಂಕೋಲಾದಿಂದ ಹೆಚ್ಚಿನ ಉಪಚಾರಕ್ಕೆ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಯ ವೈದ್ಯರು ಬೇರೆ ಆಸ್ಪತ್ರೆಗೆ ಒಯ್ಯಲು ಸೂಚಿಸಿದಂತೆ ದಿನಾಂಕ: 12-01-2020 ರಂದು ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದವನು, ಚಿಕಿತ್ಸೆ ಫಲಕಾರಿಯಾದೇ ಸದ್ರಿ ಗಾಯಾಳು ದಿನಾಂಕ: 12-01-2020 ರಂದು 21-15 ಗಂಟೆಗೆ ಮೃತಪಟ್ಟಿರತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿಜಯ ತಂದೆ ರುಕ್ಕು ಗೌಡ, ಪ್ರಾಯ-29 ವರ್ಷ, ವೃತ್ತಿ-ರಿಕ್ಷಾ ಚಾಲಕ ಸಾ|| ಮೂಡುಕೋಣ, ಉಳುವರೆ, ತಾ: ಅಂಕೋಲಾ ರವರು ದಿನಾಂಕ: 13-01-2022 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 09/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಶೋಕ ತಂದೆ ನಾರಾಯಣ ದೇಶಭಂಡಾರಿ, ಪ್ರಾಯ-62 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ.ಸಿ ನಿವೃತ್ತ ನೌಕರ, ಸಾ|| ದಿವಗಿ, ತಾ: ಕುಮಟಾ (ಸ್ಕೂಟಿ ನಂ: ಕೆ.ಎ-47/ಎಸ್-2882 ನೇದರ ಸವಾರ). ಈತನು ದಿನಾಂಕ: 12-01-2022 ರಂದು 19-30 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಕುಮಟಾ ಕಡೆಯಿಂದ ದಿವಗಿ ಕಡೆಗೆ ಹೋಗಲು ತನ್ನ ಬಾಬ್ತು ಸ್ಕೂಟಿ ನಂ: ಕೆ.ಎ-47/ಎಸ್-2882 ನೇದನ್ನು ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು, ಕುಮಟಾದ ಮಾನೀರ ಮಣಕಿ ಚರ್ಚ್ ಹತ್ತಿರ ವಾಹನವನ್ನು ನಿಯಂತ್ರಿಸಲಾಗದೇ ರಸ್ತೆಯ ಬದಿಗೆ ಸ್ಕಿಡ್ ಆಗಿ ಬಿದ್ದು ಅಪಘಾತ ಪಡಿಸಿಕೊಂಡು, ತನ್ನ ತಲೆಯ ಹಿಂಭಾಗಕ್ಕೆ ಹಾಗೂ ಮೈಕೈಗೆ ತೆರಚಿದ ಗಾಯನೋವು ಆಗಲು ತಾನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಗಣೇಶ ತಂದೆ ರಘುವೀರ ದೇಶಭಂಡಾರಿ, ಪ್ರಾಯ-25 ವರ್ಷ, ವೃತ್ತಿ-ವ್ಯಾಪಾರ, ಸಾ|| ದಿವಗಿ, ತಾ: ಕುಮಟಾ ರವರು ದಿನಾಂಕ: 13-01-2022 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 10/2022, ಕಲಂ: 429 ಐಪಿಸಿ ಹಾಗೂ ಕಲಂ: 11(1)(ಡಿ) ಪ್ರಾಣಿ ಹಿಂಸೆ ನಿಷೇಧ ಕಾಯ್ದೆ-1960 ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರಪುಲ್ಲ ಕಾಕಡೆ, ಐ.ಆರ್.ಬಿ ಶಿರೂರು, ಉಡುಪಿ ಅಧಿಕಾರಿ ಹಾಗೂ ಐ.ಆರ್.ಬಿ ಸಿಬ್ಬಂದಿಗಳು. ಪಿರ್ಯಾದುದಾರರು ದಿನಾಂಕ: 05-12-2021 ರಂದು ಮಧ್ಯಾಹ್ನ 12-00 ಗಂಟೆಗೆ ಭಟ್ಕಳದಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯಲ್ಲಿ ಬರುವಾಗ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಸಮೀಪ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯಲ್ಲಿ ನಮೂದಿತ ಆರೋಪಿತರು ಗಾಯಗೊಂಡ 2 ಗೋವುಗಳ ಕಾಲುಗಳನ್ನು ಹಗ್ಗದಿಂದ ಅಮಾನುಷವಾಗಿ ಕಟ್ಟಿ ಹಗ್ಗವನ್ನ ಐ.ಆರ್.ಬಿ ಕಂಪನಿಗೆ ಸೇರಿದ ಬೊಲೆರೋ ಪಿಕಪ್ ವಾಹನ ನಂ: ಕೆ.ಎ-47/ಎ-1370 ನೇದಕ್ಕೆ ಕಟ್ಟಿಕೊಂಡು ಹಿಂಸಾತ್ಮಕವಾಗಿ ಹಾಗೂ ಅಮಾನಷವಾಗಿ ರಸ್ತೆಯಲ್ಲಿ ಎಳೆದುಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಪ್ರಶಾಂತ ತಂದೆ ನರಸಿಂಹ ಮೊಯ್ಲಿ, ಪ್ರಾಯ-28 ವರ್ಷ, ಸಾ|| ದುಗಿಘ ಮನೆ, ಬಂಕೇಶ್ವರ, ಬೈಂದೂರು ಗ್ರಾಮ, ತಾ: ಭಟ್ಕಳ ರವರು ದಿನಾಂಕ: 13-01-2022 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 06/2022, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಇಸಾಕ್ ತಂದೆ ಜೀವಯ್ಯಾ ಇಲ್ಲೂರಿ, ಪ್ರಾಯ-25 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| 14 ನೇ ಬ್ಲಾಕ್, ತಾ: ದಾಂಡೇಲಿ. ಈತನು ದಿನಾಂಕ: 13-01-2020 ರಂದು 15-15 ಗಂಟೆಗೆ ದಾಂಡೇಲಿ ನಗರ ಠಾಣಾ ವ್ಯಾಪ್ತಿಯ 14 ನೇ ಬ್ಲಾಕಿನ ಭಾಗ್ಯಮಂದಿರದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭಕ್ಕಾಗಿ ಅದೃಷ್ಟದ ಅಂಕೆ ಬಂದಲ್ಲಿ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥಕ್ಕೆ ಕಟ್ಟಿಸಿಕೊಂಡು ಓ.ಸಿ ಮಟಕಾ ಜುಗಾರಾಟ ಆಡಿಸುತ್ತಾ ದಾಳಿಯ ಕಾಲಕ್ಕೆ ಒಂದು ಬಾಲ್ ಪೆನ್, ಓ.ಸಿ ನಂಬರ್ ಬರೆದಿರುವ ಚೀಟಿ ಹಾಗೂ ನಗದು ಹಣ 875/- ರೂಪಾಯಿ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಯಲ್ಲಪ್ಪ ಎಸ್, ಪಿ.ಎಸ್.ಐ (ತನಿಖೆ), ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 13-01-2022 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 03/2022, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಮೇಶ ತಂದೆ ವಿಠೋಬಾ ಕಾನಕೋನಕರ, ಪ್ರಾಯ-38 ವರ್ಷ, ವೃತ್ತಿ-ಚಾಲಕ, ಸಾ|| ಸಾಯಿಗಲ್ಲಿ, ರಾಮನಗರ, ತಾ: ಜೋಯಿಡಾ (ಲಾರಿ ನಂ: ಕೆ.ಎ-22/ಬಿ-0324 ನೇದರ ಚಾಲಕ). ದಿನಾಂಕ: 12-01-2021 ರಂದು ಸಂದೀಪ ತಂದೆ ಸುರೇಶ ತೆಲಂಗ, ಸಾ|| ಯಲ್ಲಾಪುರ ನಾಕಾ ಹತ್ತಿರ, ತಾ: ಹಳಿಯಾಳ ರವರು ಗೋವಾದಲ್ಲಿ ಇಲೆಕ್ಟ್ರೀಶಿಯನ್ ಕೆಲಸ ಮಾಡಿಕೊಂಡು ಇದ್ದವರು, ತಮ್ಮ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-65/ಎಚ್-0569 ನೇದರ ತಮ್ಮೂರಾದ ಹಳಿಯಾಳಕ್ಕೆ ಹೋಗಲು ಗೋವಾದಿಂದ ಹೊರಟು ಜಗಲಬೇಟದಿಂದ ಸಿಂಗರಗಾಂವ ಮಾರ್ಗವಾಗಿ ದಾಂಡೇಲಿಗೆ ಹೋಗುವ ರಸ್ತೆಯಲ್ಲಿ ಹೋಗುತ್ತಿರುವಾಗ ದಿನಾಂಕ: 12-01-2021 ರಂದು 15-00 ಗಂಟೆಯ ಸುಮಾರಿಗೆ ಎದುರುಗಡೆಯಿಂದ ಅಂದರೇ ದಾಂಡೇಲಿ ಬದಿಯಿಂದ ಲಾರಿ ನಂ: ಕೆ.ಎ-22/ಬಿ-0324 ನೇದರ ಚಾಲಕನಾದ ನಮೂದಿತ ಆರೋಪಿತನು ತನ್ನ ಲಾರಿಯನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ತಿರುವಿನಲ್ಲಿ ಮೋಟಾರ್ ಸೈಕಲಿಗೆ ತಾಗಿಸಿ ಅಪಘಾತ ಪಡಿಸಿದ್ದು, ಅಪಘಾತದ ಪರಿಣಾಮ ಸಂದೀಪ ತಂದೆ ಸುರೇಶ ತೆಲಂಗ ರವರಿಗೆ ಬಲಗಾಲಿನ ಮೊಣಗಂಟಿನ ಹತ್ತಿರ ತೀವ್ರ ಸ್ವರೂಪದ ಗಾಯ, ಎಡಭುಜದ ಹತ್ತಿರ ಒಳಪೆಟ್ಟು ಹಾಗೂ ಹಣೆಯ ಹತ್ತಿರ ತಲೆಯ ಹಿಂಬದಿಯಲ್ಲಿ ಗಾಯವಾಗಿದ್ದು, ಮೋಟಾರ್ ಸೈಕಲ್ ಸಹ ಡ್ಯಾಮೇಜ್ ಆಗಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿಲಾಸ ತಂದೆ ದತ್ತಾತ್ರೇಯ ತೆಲಂಗ, ಪ್ರಾಯ-74 ವರ್ಷ, ವೃತ್ತಿ-ನಿವೃತ್ತ ಕೆ.ಎಸ್.ಆರ್.ಟಿ.ಸಿ ನೌಕರ, ಸಾ|| ಯಲ್ಲಾಪುರ ನಾಕಾ ಹತ್ತಿರ, ತಾ: ಹಳಿಯಾಳ ರವರು ದಿನಾಂಕ: 13-01-2022 ರಂದು 16-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 04/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ರತ್ನಾಕರ ತಂದೆ ಸುಕ್ಟೋ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ತಂಪು ಪಾನೀಯಗಳ ವ್ಯಾಪಾರ, ಸಾ|| ವಾಟ್ಲಾ, ಅನಮೋಡ, ತಾ: ಜೋಯಿಡಾ. ಈತನು ದಿನಾಂಕ: 13-01-2022 ರಂದು 17-20 ಗಂಟೆಗೆ ಅನಮೋಡದಲ್ಲಿರುವ ತನ್ನ ತಂಪು ಪಾನೀಯ ಮಾರಾಟ ಮಾಡುವ ಹೋಟೆಲ್ ಮಾದರಿಯ ಅಂಗಡಿಯಲ್ಲಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿಗೆ ಅವನಲ್ಲಿದ್ದ Old Tavern Whisky ಯ ಸರಾಯಿಯನ್ನು ಕುಡಿಯಲು ಅನುವು ಮಾಡಿಕೊಟ್ಟು, ತನ್ನಲ್ಲಿಯ ಪ್ಲಾಸ್ಟಿಕ್ ಗ್ಲಾಸು, ನೀರಿನ ಬಾಟಲಿ ಹಾಗೂ ತಿನಿಸುಗಳನ್ನು ಕೊಟ್ಟು ತನ್ನ ಹೋಟೆಲ್ ಮಾದರಿಯ ಅಂಗಡಿಯಲ್ಲಿ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ 1). ಅರ್ಧದಷ್ಟು ಸರಾಯಿ ಹೊಂದಿರುವ 180 ML ನ Old Tavern Whisky ಯ ಮದ್ಯ ಹೊಂದಿರುವ ಟೆಟ್ರಾ ಪ್ಯಾಕೆಟ್‍-01, 2). ಅರ್ಧದಷ್ಟು ನೀರು ಮಿಶ್ರಿತ ಸರಾಯಿ ಹೊಂದಿರುವ ಪ್ಲಾಸ್ಟಿಕ್ ಗ್ಲಾಸು-01, 3). ನೀರಿನ ಬಾಟಲಿ-01 ಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ವಿನೋದ ಎಸ್. ಕೆ, ಪಿ.ಎಸ್.ಐ (ಕಾ&ಸು), ರಾಮನಗರ ಪೊಲೀಸ್ ಠಾಣೆ ರವರು ದಿನಾಂಕ: 13-01-2022 ರಂದು 19-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 13-01-2022

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 02/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ವಸಂತ ತಂದೆ ವೆಂಕಟ್ರಮಣ ಗೌಡ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಂ: 3 ಕನ್ನಡ ಶಾಲೆಯ ಹತ್ತಿರ, ಅಂಬಾರಕೊಡ್ಲ, ತಾ: ಅಂಕೋಲಾ. ಈತನು ಅನಾರೋಗ್ಯದಿಂದ ಬಳಲುತ್ತಿದ್ದವನು ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ವಿಪರೀತ ಸರಾಯಿ ಕುಡಿಯುತ್ತಿದ್ದವನು, ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ದಿನಾಂಕ: 12-01-2022 ರಂದು ರಾತ್ರಿ 09-30 ಗಂಟೆಯಿಂದ ದಿನಾಂಕ: 13-01-2022 ರಂದು ಬೆಳಿಗ್ಗೆ 07-00 ಗಂಟೆಯ ನಡುವಿನ ಅವಧಿಯಲ್ಲಿ ಅಂಕೋಲಾದ ಹುಲಿದೇವರವಾಡದ ಹತ್ತಿರ ಹಾಯ್ದಿರುವ ರೈಲ್ವೆ ಹಳಿಯ ಮೇಲೆ ಕುಳಿತುಕೊಂಡಿದ್ದವನು ಅಥವಾ ನಿಂತುಕೊಂಡಿದ್ದವನಿಗೆ ಯಾವುದೋ ರೈಲ್ವೆ ಹಾಯ್ದು ಗಂಭೀರ ಗಾಯವಾಗಿ ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ರವಿ ತಂದೆ ವೆಂಕಟ್ರಮಣ ಗೌಡ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಂ: 3 ಕನ್ನಡ ಶಾಲೆಯ ಹತ್ತಿರ, ಅಂಬಾರಕೊಡ್ಲ, ತಾ: ಅಂಕೋಲಾ ರವರು ದಿನಾಂಕ: 13-01-2022 ರಂದು 08-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮಂಕಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 03/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ವಿನಾಯಕ ತಂದೆ ವೆಂಕಟೇಶ ನಾಯ್ಕ, ಪ್ರಾಯ-33 ವರ್ಷ, ವೃತ್ತಿ-ಹೋಟೆಲ್ ಕೆಲಸ, ಸಾ|| ಮಂಕಿ, ಸಣ್ಣಗುಂದ, ತಾ: ಹೊನ್ನಾವರ. ಈತನು ಅತಿಶಯ ಸರಾಯಿ ಕುಡಿಯುವ ಹವ್ಯಾಸ ಹೊಂದಿ ಮನೆಯಲ್ಲಿದ್ದವರಿಗೆ ಕೈಗೆ ಸಿಕ್ಕ ವಸ್ತುವಿನಿಂದ ಹೊಡೆಯಲು ಹೋಗುವುದು, ಮನೆಯಲ್ಲಿದ್ದ ಸಾಮಾನುಗಳನ್ನು ಒಡೆದು ಹಾಕುವುದು ಮಾಡುತ್ತಿದ್ದವನು, ದಿನಾಂಕ: 13-01-2022 ರಂದು ಮಧ್ಯಾಹ್ನ 14-00 ಗಂಟೆಯ ಸುಮಾರಿಗೆ ಮನೆಯಲ್ಲಿ ಅಂಗಳದಲ್ಲಿದ್ದ ತುಳಸಿಕಟ್ಟೆ, ಮನೆಯ ಸಿಮೆಂಟ್ ಶೀಟುಗಳನ್ನು ಒಡೆದು ಹಾಕಿ, ಮನೆಯಲ್ಲಿ ಯಾರು ಇಲ್ಲಾಗಿದ್ದನ್ನು ನೋಡಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಮಧ್ಯಾಹ್ನ 15-50 ಗಂಟೆಯ ನಡುವಿನ ಅವಧಿಯಲ್ಲಿ ತನ್ನಾರೆ ತಾನು ಮನೆಯ ಜಗಲಿಯಲ್ಲಿ ಪ್ಲಾಸ್ಟಿಕ ಕುರ್ಚಿಯನ್ನು ಆದಾರ ವಾಗಿಟ್ಟುಕೊಂಡು ಮೇಲ್ಛಾವಣಿಯ ಕಟ್ಟಿಗೆ ಜಂತಿಗೆ ನೈಲಾನ್ ಹಗ್ಗದಿಂದ ಕುತ್ತಿಗೆ ನೇಣು ಹಾಕಿಕೊಂಡು ಮೃತಪಟ್ಟಿರುವ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ವೆಂಕಟೇಶ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಬೊಲೆರೋ ಚಾಲಕ, ಸಾ|| ಮಂಕಿ, ಗುಳದಕೇರಿ, ತಾ: ಹೊನ್ನಾವರ ರವರು ದಿನಾಂಕ: 13-01-2022 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 04/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಸೋಮಯ್ಯ ತಂದೆ ನಾರಾಯಣ ನಾಯ್ಕ, ಪ್ರಾಯ-62 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಗುಡ್ಡಿ ಮನೆ, ಬಿಟ್ಟಿಬಿಳೂರು ಗೋಳಿ ಬಿಳೂರು, ತಾ: ಭಟ್ಕಳ. ಇವರು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡವರು, ದಿನಾಂಕ: 13-01-2022 ರಂದು ಮಧ್ಯಾಹ್ನ 12-30 ಗಂಟೆಯಿಂದ 13-15 ಗಂಟೆಯ ನಡುವಿನ ಬಿಟ್ಟಿಬಿಳೂರು ಗ್ರಾಮದ ಹಾಡಿ ಜಾಗದಲ್ಲಿರುವ ಗೋವೆ (ಗೇರು) ಮರದ ಟೊಂಗೆಗೆ ಬಿಳಿ ಬಣ್ಣದ ಲುಂಗಿ ಕಟ್ಟಿ ಅದೇ ಲುಂಗಿಯ ಇನ್ನೊಂದು ತುದಿ ಉರುಳು ಮಾಡಿ ಕುತ್ತಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಅವನ ಮರಣದಲ್ಲಿ ಬೇರೆ ಏನು ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹೇಶ ತಂದೆ ಸೋಮಯ್ಯ ನಾಯ್ಕ, ಪ್ರಾಯ-24 ವರ್ಷ, ವೃತ್ತಿ-ಹೋಟೆಲ್ ಕೆಲಸ, ಸಾ|| ಗುಡ್ಡಿ ಮನೆ, ಬಿಟ್ಟಿಬಿಳೂರು, ಗೋಳಿ ಬಿಳೂರು, ತಾ: ಭಟ್ಕಳ ರವರು ದಿನಾಂಕ: 13-01-2022 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 21-01-2022 07:45 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080