ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 13-06-2021

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 45/2021, ಕಲಂ: 4, 5, 6, 7, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಮತ್ತು ಕಲಂ: 11(1)(A)(D)(E)  Prevention Of Cruelty to Animals Act-1960 ಹಾಗೂ ಕಲಂ: 429 ಐಪಿಸಿ ಸಹಿತ 192(A) Indian Motor Vehicles Act-1988 ನೇದ್ದರ ವಿವರ...... ನಮೂದಿತ ಆರೋಪಿತರು 1]. ದಸ್ತಗಿರ್ ಅಹಮ್ಮದ್ ತಂದೆ ಅಜೀಜಸಾಬ್, ಪ್ರಾಯ-42 ವರ್ಷ, ವೃತ್ತಿ-ಚಾಲಕ, ಸಾ|| ಹಿರೇಬಿದನೂರು, ಗೌರಿಬಿದನೂರು, ಚಿಕ್ಕಬಳ್ಳಾಪುರ (ಕಂಟೇನರ್ ಲಾರಿ ಚಾಲಕ), 2]. ರವಿಕುಮಾರ ಎಸ್. ಸಿ. ತಂದೆ ಚೌಡ ಶೆಟ್ಟಿ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಂಚನಹಳ್ಳಿ, ಕೆ.ಆರ್ ಪೇಟೆ, ಮಂಡ್ಯ, 3]. ಅನಿಲಕುಮಾರ ನಾಗನಗೌಡ ಪಾಟೀಲ್, ಪ್ರಾಯ-22 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಂಚಗಾರ ಓಣಿ, ರಾಣೆಬೆನ್ನೂರು, ಹಾವೇರಿ, 4]. ಇಸ್ಮಾಯಿಲ್, ಸಾ|| ಭಟ್ಕಳ, 5]. ರಯಾನ್, ಸಾ|| ಭಟ್ಕಳ. ಈ ನಮೂದಿತ ಆರೋಪಿತರ ಪೈಕಿ ಆರೋಪಿ 1 ರಿಂದ 3 ನೇಯವರು ಕಂಟೇನರ್ ಲಾರಿ ನಂ: ಎಮ್.ಎಚ್-04/ಜಿ.ಸಿ-6297 ನೇದರಲ್ಲಿ ಆರೋಪಿ 4 ಮತ್ತು 5 ಇವರಿಗೆ ಸಂಬಂಧಿಸಿದ ಸುಮಾರು 2,96,000/- ರೂಪಾಯಿ ಮೌಲ್ಯದ ಕಪ್ಪು ಮತ್ತು ಕಂದು ಬಣ್ಣದ ಕೋಣಗಳು-13 ಜಾನುವಾರುಗಳನ್ನು ತುಂಬಿಕೊಂಡು (ಸದರ ಕೋಣಗಳಲ್ಲಿ ಒಂದು ಕೋಣವು ಮೃತಪಟ್ಟಿದ್ದು ಇರುತ್ತದೆ) ಜಾನುವಾರುಗಳಿಗೆ ನಿಂತುಕೊಳ್ಳಲು ಮಲಗಲು ಕಂಪಾರ್ಟಮೆಂಟಿನ ವ್ಯವಸ್ಥೆ ಮಾಡದೇ ಹಾಗೂ ಮೇವು ಮತ್ತು ನೀರಿನ ವ್ಯವಸ್ಥೆ ಇಲ್ಲದೇ ಹಿಂಸಾತ್ಮಕವಾಗಿ ಕಟ್ಟಿ ವಧೇ ಮಾಡುವ ಉದ್ದೇಶದಿಂದ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಸರಕು ಸಾಗಣೆಯ ವಾಹನದಲ್ಲಿ ಜಾನುವಾರುಗಳನ್ನು ತುಂಬಿ ಸಾಗಾಟ ಮಾಡುತ್ತಿದ್ದಾಗ ದಿನಾಂಕ: 13-06-2021 ರಂದು ರಾತ್ರಿ 00-15 ಗಂಟೆಗೆ ಹೀರೇಗುತ್ತಿ ಚೆಕಪೋಸ್ಟ್ ದಲ್ಲಿ ಪಿರ್ಯಾದಿಯವರು ಪರಿಶೀಲನೆ ಮಾಡಿದಾಗ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನವೀನ್ ಎಸ್. ನಾಯ್ಕ, ಪಿ.ಎಸ್.ಐ (ಕಾ&ಸು), ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 13-06-2021 ರಂದು 02-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 165/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಬೊಗಸಮುದ್ರಂ ಈಶ್ವರ ರೆಡ್ಡಿ ತಂದೆ ಬೊಗಸಮುದ್ರಂ ನಾರಾಯಣ ರೆಡ್ಡಿ, ಪ್ರಾಯ-48 ವರ್ಷ, ವೃತ್ತಿ-ಚಾಲಕ, ಸಾ|| ತುಟ್ರಾಪಳ್ಳಿ ವಿಲೇಜ್, ಯಾಡಿ, ಅನಂತಪುರ, ಆಂಧ್ರ ಪ್ರದೇಶ (ಲಾರಿ ನಂ: ಎ.ಪಿ-02/ಟಿ.ಎಚ್-4158 ನೇದರ ಚಾಲಕ). ಈತನು ದಿನಾಂಕ: 13-06-2021 ರಂದು ಬೆಳಗಿನ ಜಾವಾ 01-30 ಗಂಟೆಗೆ ತನ್ನ ಲಾರಿ ನಂ: ಎ.ಪಿ-02/ಟಿ.ಎಚ್-4158 ನೇದರಲ್ಲಿ ಹೊನ್ನಾವರ ತಾಲೂಕಿನ ಕಾಸರಕೋಡ ಗ್ರಾಮದ ಸಣ್ಣೂರ ಸೆರಾಮಿಕ್ಸ್ ನಲ್ಲಿ ಸಿಮೆಂಟ್ ತಯಾರಿಕಾ ಕೆಂಪು ಮಣ್ಣನ್ನು ಲೋಡ್ ಮಾಡಿಕೊಂಡು, ಹೊನ್ನಾವರದಿಂದ ರಾಷ್ಟ್ರಿಯ ಹೆದ್ದಾರಿ ಸಂಖ್ಯೆ-69 ನೇದರಲ್ಲಿ ಸಾಗರ ಮಾರ್ಗವಾಗಿ ಹೋಗುತ್ತಿರುವಾಗ ಹೊನ್ನಾವರ ತಾಲೂಕಿನ ಗೇರುಸೋಪ್ಪಾ ಊರಿನ ಸೂಳೆಮುರ್ಕಿ ಕ್ರಾಸ್ ಹತ್ತಿರ ತಲುಪಿದಾಗ ರಸ್ತೆಯು ಏರಿನಿಂದ ಮತ್ತು ತಿರುವಿನಿಂದ ಕೂಡಿದ್ದರೂ ಸಹ ತನ್ನ ಲಾರಿಯನ್ನು ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಲಾರಿಯನ್ನು ರಸ್ತೆಯ ಬದಿಯಲ್ಲಿ ಪಲ್ಟಿ ಮಾಡಿ ಅಪಘಾತ ಪಡಿಸಿ, ಲಾರಿಯನ್ನು ಜಖಂಗೊಳಿಸಿದ್ದು, ಲಾರಿಯಲ್ಲಿದ್ದ ಪಿರ್ಯಾದಿ ಮತ್ತು ಆರೋಪಿತನಿಗೆ ಯಾವುದೇ ಗಾಯನೋವು ಆಗಿದ್ದು ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುದ್ದುಲಾ ಅಶೋಕ ತಂದೆ ಶ್ರೀನಿವಾಸಲು, ಪ್ರಾಯ-35 ವರ್ಷ, ವೃತ್ತಿ-ಕ್ಲೀನರ್, ಸಾ|| ಅಮಿನಾಬಾದ್ ವಿಲೇಜ್, ತುಗ್ಗಲಿ, ಕರ್ನೂಲ್, ಆಂಧ್ರ ಪ್ರದೇಶ ರವರು ದಿನಾಂಕ: 13-06-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 38/2021, ಕಲಂ: 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತೆ ಶ್ರೀಮತಿ ಶಮಾ ಕೋಂ. ಸಿರಾಜ್ ಖತೀಬ್, ಪ್ರಾಯ-36 ವರ್ಷ, ವೃತ್ತಿ-ಬ್ಯೂಟಿಶನ್, ಸಾ|| ಬಾಂಬೆಚಾಳ, ದಾಂಡೇಲಿ. ನಮೂದಿತ ಆರೋಪಿತಳು 2005 ರಲ್ಲಿ ಪಿರ್ಯಾದಿಯನ್ನು ಮದುವೆಯಾಗಿ ಪಿರ್ಯಾದಿಯೊಂದಿಗೆ ಜೋಯಿಡಾ ತಾಲೂಕಿನ ಬಾಮಣಗಿ ಗ್ರಾಮದಲ್ಲಿ ವಾಸವಾಗಿದ್ದವಳು, 2015 ರಲ್ಲಿ ತನ್ನ ಮೋಜಿನ ಜೀವನ ನಡೆಸುವ ಉದ್ದೇಶದಿಂದ ತನ್ನ ಗಂಡ ಹಾಗೂ ತನ್ನ ಅಪ್ರಾಪ್ತ 3 ಜನ ಹೆಣ್ಣು ಮಕ್ಕಳನ್ನು ಬಿಟ್ಟು, ತನ್ನ ಜವಾಬ್ದಾರಿ ನಿರ್ವಹಿಸದೇ ಪ್ರತ್ಯೇಕವಾಗಿ ವಾಸವಾಗಿದ್ದವಳು. ತನ್ನ ವೃತ್ತಿಪರ ತನಗಿರುವ ಸ್ವಂತ ಬ್ಯೂಟಿ ಪಾರ್ಲರ್ ಇದರಿಂದ ಆದಾಯ ಬರುತ್ತಿದ್ದರೂ ಪಿರ್ಯಾದುದಾರನಿಗೆ ಮಾನಸಿಕವಾಗಿ, ದೈಹಿಕವಾಗಿ ತೊಂದರೆ ನೀಡುತ್ತಾ, ಪಿರ್ಯಾದುದಾರನಿಂದ ಜೀವನಾಂಶವನ್ನು ಪಡೆದುಕೊಳ್ಳುತ್ತಾ ಬಂದವಳು, ಪಿರ್ಯಾದುದಾರನ ವಿರುದ್ಧ ಕ್ರಿಮಿನಲ್ ಮಿಸ್‍ಲೆನಿಯಸ್ 91/2016, ಸಿಸಿ ನಂ: 357/2019 ನೇ ಪ್ರಕರಣಗಳನ್ನು ದಾಖಲಿಸಿ, ಸದ್ರಿ ಪ್ರಕರಣಗಳನ್ನು ರಾಜಿಯಾಗುತ್ತೇನೆ, ಹಿಂಪಡೆಯುತ್ತೇನೆ ಅಂತ ಪಿರ್ಯಾದುದಾರರಿಂದ ಜೀವನ ಪೂರ್ವಕ ಪರಿಯಂತ ಜೀವನಾಂಶ 2,34,000/- ರೂಪಾಯಿ ಬೇಕೆಂದು ಬೇಡಿಕೆ ಇಟ್ಟು ತಾನು ರಾಜಿಯಾಗುತ್ತೇನೆಂದು ಮಾನ್ಯ ತೆರೆದ ನ್ಯಾಯಾಲಯದಲ್ಲಿ 1,00,000/- ರೂಪಾಯಿ ಹಣವನ್ನು ಪಿರ್ಯಾದಿಯಿಂದ ಪಡೆದು ಉಳಿದ ಹಣ ರಾಜಿ ಸಂಧಾನದ ಶರತ್ತಿನಂತೆ ಪಡೆಯದೆ, ಪ್ರಕರಣಗಳನ್ನು ವಾಪಸ್ ಪಡೆಯದೇ, ಮಾನ್ಯ ನ್ಯಾಯಾಲಯವು ಆದೇಶಿಸಿದರೂ ಸಹ 1,00,000/- ರೂಪಾಯಿ ಹಣವನ್ನು ಒಂದು ತಿಂಗಳ ಒಳಗೆ ಪಿರ್ಯಾದಿಗೆ ವಾಪಸ್ ನೀಡದೇ, ದಿನಾಂಕ: 17-11-2020 ರಂದು ಮಾನ್ಯ ನ್ಯಾಯಾಲಯಕ್ಕೆ ತನ್ನ ಆಸ್ತಿ ಘೋಷಣಾ ಪತ್ರದಲ್ಲಿ ತನ್ನಲ್ಲಿರುವ ಹಣ, ಬ್ಯಾಂಕ್ ಖಾತೆಗಳು ಹಾಗೂ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇಟ್ಟಿರುವ ಹಣದ ಬಗ್ಗೆ ಮಾಹಿತಿ ನೀಡದೇ ಸುಳ್ಳು ಆಸ್ತಿಯ ವಿವರದ ಪ್ರತಿಜ್ಞಾ ಪತ್ರ ನೀಡಿ, ದಿನಾಂಕ: 28-01-2021 ರಂದು ತನ್ನ ಖಾತೆಯಲ್ಲಿ ಹಣ ಇರುವ ಬಗ್ಗೆ ಒಪ್ಪಿಕೊಂಡು ಮಾನ್ಯ ನ್ಯಾಯಾಲಯಕ್ಕೆ ತಕರಾರು ಸಲ್ಲಿಸಿ, ಮಾನ್ಯ ನ್ಯಾಯಾಲಯದ ಆದೇಶ ಪಾಲಿಸದೇ, ಮಾನ್ಯ ನ್ಯಾಯಾಲಯಕ್ಕೆ ಸುಳ್ಳು ದಾಖಲೆ ಸಲ್ಲಿಸಿ, ಪಿರ್ಯಾದಿಗೆ ಮೋಸ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಸಿರಾಜ್ ತಂದೆ ಅಹ್ಮದ್ ಖತೀಬ್, ಪ್ರಾಯ-36 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬಾಮಣಗಿ, ತಾ: ಜೋಯಿಡಾ ರವರು ದಿನಾಂಕ: 13-06-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 13-06-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 08/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ರಾಮಚಂದ್ರ ತಂದೆ ನಾರಾಯಣ ಸ್ವಾಮಿ, ಪ್ರಾಯ-62 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ನೇತಾಜಿ ರೋಡ್, ಈರೋಡ್, ತಮಿಳನಾಡು. ಈತನು ಎಮ್.ಕೆ.ಜಿ ಎಂಡ್ ಸನ್ಸ್ ಟ್ಟಾನ್ಸಪೋರ್ಟ್ ಕಂಪನಿಗೆ ಸಂಬಂಧಪಟ್ಟ ಲಾರಿ ನಂ: ಟಿ.ಎನ್-52/ಇ-1872 ನೇದರ ಚಾಲಕನಾಗಿದ್ದು, ಸದ್ರಿ ಲಾರಿಯನ್ನು ಆತನು ಕ್ಲೋರಿನ್ ಟನ್ನರ್ಸ್ ಲೋಡ್ ಮಾಡುವ ಕುರಿತು ಚೆನ್ನೈದಿಂದ ಕಾರವಾರದ ಬಿಣಗಾ ಗ್ರಾಸಿಮ್ ಇಂಡಸ್ಟ್ರೀಸ್ ಗೆ ಚಲಾಯಿಸಿಕೊಂಡು ಬಂದು ದಿನಾಂಕ: 12-06-2021 ರಂದು 14-30 ಗಂಟೆಗೆ ಗ್ರಾಸಿಮ್ ಇಂಡಸ್ಟ್ರೀಸ್ ಗೆ ಸಂಬಂಧಪಟ್ಟ ಲಾರಿ ಪಾರ್ಕಿಂಗ್ ಯಾರ್ಡಿನಲ್ಲಿ ಸದ್ರಿ ಲಾರಿಯನ್ನು ನಿಲ್ಲಿಸಿಕೊಂಡು, ಸದ್ರಿ ಲಾರಿಯ ಲೋಡ್ ಬಗ್ಗೆ 16-00 ಗಂಟೆಯ ಸಮಯಕ್ಕೆ ಸುದ್ದಿದಾರರೊಂದಿಗೆ ಫೋನ್‍ನಲ್ಲಿ ಮಾತನಾಡಿದವನು ದಿನಾಂಕ: 13-06-2021 ರಂದು 13-30 ಗಂಟೆಯ ನಡುವಿನ ಅವಧಿಯಲ್ಲಿ ಸದ್ರಿ ಲಾರಿಯ ಕ್ಯಾಬಿನ್ ನಲ್ಲಿ ಮಲಗಿದ ಸ್ಥಿತಿಯಲ್ಲಿ ಹೃದಯಘಾತದಿಂದ ಮರಣಪಟ್ಟಿರಬಹುದಾಗಿದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುಪ್ರೀತ್ ತಂದೆ ರಮೇಶ ಗುರವ, ಪ್ರಾಯ-28 ವರ್ಷ, ವೃತ್ತಿ-ಸೂಪರವೈಸರ್ ಕೆಲಸ, ಸಾ|| ಥೊರ್ಲೆಭಾಗ, ಹೊಸಾಳಿ, ಕಾರವಾರ ರವರು ದಿನಾಂಕ: 13-06-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 17/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ನಾಗು ತಂದೆ ಜಟ್ಟು ಗೌಡ, ಪ್ರಾಯ-43 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ನೆಲ್ಲಿಕೇರಿ, ಮೂರೂರು, ತಾ: ಕುಮಟಾ. ಪಿರ್ಯಾದುದಾರರ ಗಂಡನಾದ ಇವರು ದಿನಾಂಕ: 12-06-2021 ರಂದು ಬೆಳಿಗ್ಗೆ 05-00 ಗಂಟೆಯ ಸುಮಾರಿಗೆ ಕೃಷಿ ಕೆಲಸಕ್ಕೆ ತೋಟಕ್ಕೆ ಹೋದವರು, ಕೃಷಿ ಕೆಲಸ ಮಾಡುತ್ತಿರುವಾಗ ಆಕಸ್ಮಾತ್ ಆಗಿ ಕಾಲು ಜಾರಿ ತೋಟದಲ್ಲಿರುವ ಬಾವಿಯಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಅವರ ಮೃತದೇಹವು ದಿನಾಂಕ: 13-06-2021 ರಂದು ಬೆಳಿಗ್ಗೆ 10-30 ಗಂಟೆಗೆ ತೋಟದ ಬಾವಿಯಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀಮತಿ ಪ್ರೇಮಾ ನಾಗು ಗೌಡ, ಪ್ರಾಯ-38 ವರ್ಷ, ವೃತ್ತಿ-ಮನೆವಾರ್ತೆ ಸಾ|| ನೆಲ್ಲಿಕೇರಿ, ಮೂರೂರು, ತಾ: ಕುಮಟಾ ರವರು ದಿನಾಂಕ: 13-06-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 04/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನು ಸುಮಾರು 45 ರಿಂದ 50 ವರ್ಷ ಪ್ರಾಯದ ಅಪರಿಚಿತ ಗಂಡಸ್ಸಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ಅಪರಿಚಿತ ವ್ಯಕ್ತಿಯು ಭಿಕ್ಷೆ ಬೇಡಿಕೊಂಡು ಜೀವನ ಮಾಡುತ್ತಿದ್ದವನು ಸಧ್ಯ ಕೋವಿಡ್-19 ಕುರಿತು ಲಾಕಡೌನ್ ಇರುವುದರಿಂದ ಹಾಗೂ ವಿಪರೀತ ಮಳೆ ಇರುವುದರಿಂದ ಆತನಿಗೆ ಹೊಟ್ಟೆಗೆ ಸರಿಯಾಗಿ ಊಟ ಸಿಗದೇ ಅಥವಾ ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದವನು, ದಿನಾಂಕ: 13-06-2021 ರಂದು ಬೆಳಿಗ್ಗೆ 07-00 ಸಮಯಕ್ಕೆ ನೋಡಿದಾಗ ಹೊಸ ಬಸ್ ಸ್ಟ್ಯಾಂಡ್ ಎದುರಿಗೆ ಇರುವ ಫಿಷ್ ಲ್ಯಾಂಡ್ ಹೊಟೇಲ್ ಹತ್ತಿರದಲ್ಲಿರುವ ಒಂದು ಅಂಗಡಿಯ ಎದುರಿಗೆ ಮಲಗಿಕೊಂಡವನು ಅಲ್ಲಿಯೇ ಮರಣಪಟ್ಟಿರಬಹುದು. ಇದರ ಹೊರತು ಅವನ ಮರಣದಲ್ಲಿ ಬೆರೇ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರವಿದಾಸ ತಂದೆ ನಾಗಪ್ಪಾ ನಾಯ್ಕ, ಪ್ರಾಯ-36 ವರ್ಷ, ವೃತ್ತಿ-ಟ್ಯಾಕ್ಸಿ ಚಾಲಕ, ಸಾ|| ಮುಟ್ಟಳ್ಳಿ, ತಾ: ಭಟ್ಕಳ ರವರು ದಿನಾಂಕ: 13-06-2021 ರಂದು 09-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

ಇತ್ತೀಚಿನ ನವೀಕರಣ​ : 15-06-2021 01:23 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080