ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 13-03-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 50/2021, ಕಲಂ: 380, 454, 457 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 12-03-2021 ರಂದು ಸಂಜೆ 06-00 ಗಂಟೆಯಿಂದ ದಿನಾಂಕ: 13-023-2021 ರಂದು ಬೆಳಿಗ್ಗೆ 07-00 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ ಅಂಕೋಲಾ ತಾಲೂಕಿನ ಶೆಟಗೇರಿಯಲ್ಲಿರುವ ಪಿರ್ಯಾದಿಯವರ ಮನೆಯ ಮುಂದಿನ ಬಾಗಿಲಿನ ಇಂಟರಲಾಕ್ ಮೀಟಿ ಮುರಿದು ಮನೆಯೊಳಗೆ ಹೊಕ್ಕಿ, ಮನೆಯ ಬೆಡ್ ರೂಮಿನೊಳಗೆ ಇದ್ದ ಅಲ್ಮೇರಾವನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಮೀಟಿ ತೆಗೆದು ಅಲ್ಮೇರಾ ಕಪಾಟಿನ ಬಟ್ಟೆಯಲ್ಲಿ ಸುತ್ತಿಕೊಂಡು ಪ್ರತ್ಯೇಕ ಡಬ್ಬಿ ಮತ್ತು ಕವರ್ ನಲ್ಲಿ ಇಟ್ಟಿದ್ದ ಬಂಗಾರದ ಒಡವೆಗಳಾದ 1). ಸುಮಾರು 15 ಗ್ರಾಂ ತೂಕದ ಉಂಗುರ-2, ಅ||ಕಿ|| 40,000/- ರೂಪಾಯಿ, 2). ಸುಮಾರು 7 ಗ್ರಾಂ ತೂಕದ ಉಂಗುರ-1, ಅ||ಕಿ|| 15,000/- ರೂಪಾಯಿ, 3). ಸುಮಾರು 15 ಗ್ರಾಂ ತೂಕದ ಚೈನ್-1, ಅ||ಕಿ|| 40,000/- ರೂಪಾಯಿ, 4). ಸುಮಾರು 10 ಗ್ರಾಂ ತೂಕದ ಚೈನ್-1, ಅ||ಕಿ|| 25,000/- ರೂಪಾಯಿ, 5). ಸುಮಾರು 49 ಗ್ರಾಂ ತೂಕದ ಕಿವಿ ಓಲೆ-7, ಅ||ಕಿ|| 1,10,000/- ರೂಪಾಯಿ ಹಾಗೂ ನಗದು ಹಣ 10,000/- ರೂಪಾಯಿ. ಹೀಗೆ ಒಟ್ಟೂ 2,40,000/- ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ಹಾಗೂ ಕೆಲವು ದಾಖಲಾತಿಗಳನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಗಣರಾಜ ತಂದೆ ಹಮ್ಮಣ್ಣ ನಾಯ್ಜ, ಪ್ರಾಯ-55 ವರ್ಷ, ವೃತ್ತಿ-ಸರ್ಕಾರಿ ಉದ್ಯೋಗಿ, ಸಾ|| ಶೆಟಗೇರಿ, ಕಣಗಿಲ್, ತಾ: ಅಂಕೋಲಾ ರವರು ದಿನಾಂಕ: 13-03-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 49/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ರಾಜೇಶ ತಂದೆ ಕನ್ನಾ ಉಪ್ಪಾರ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೊನ್ಮಾಂವ್, ತಾ: ಕುಮಟಾ. ನಮೂದಿತ ಆರೋಪಿತನು ದಿನಾಂಕ: 13-03-2021 ರಂದು 13-15 ಗಂಟೆಗೆ ಹೊನ್ಮಾಂವ್ ಕ್ರಾಸ್ ಹತ್ತಿರ ರಸ್ತೆಯ ಮೇಲೆ ನಿಂತುಕೊಂಡು ತನ್ನ ಅನ್ಯಾಯದ ಲಾಭಕ್ಕೋಸ್ಕರ ರಸ್ತೆಯಲ್ಲಿ ಓಡಾಡುವ ಜನರನ್ನು ಬರ ಮಾಡಿಕೊಂಡು 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಅವರನ್ನು ನಂಬಿಸಿ, ಜನರಿಂದ ಹಣ ಪಡೆದುಕೊಂಡು ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿದ್ದಾಗ 1). ನಗದು ಹಣ 3,060/- ರೂಪಾಯಿ, 2). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ, 3). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ, ಅ||ಕಿ|| 00.00/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ, ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 13-03-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 40/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಫಾಹೀಮ್ ತಂದೆ ರಹೀಮ್ ಖಾನ್, ಪ್ರಾಯ-34 ವರ್ಷ, ಸಾ|| ಕೊಸಗಿ, ತೆಲಂಗಾಣ (ಅಶೋಕ ಲೇಲ್ಯಾಂಡ್ ಲಾರಿ ನಂ: ಎ.ಪಿ-21/ಟಿ.ಝಡ್-7389 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 13-03-2021 ರಂದು ಬೆಳಗಿನ ಜಾವ 03-30 ಗಂಟೆಯ ಸುಮಾರಿಗೆ ತನ್ನ ಅಶೋಕ ಲೇಲ್ಯಾಂಡ್ ಲಾರಿ ನಂ: ಎ.ಪಿ-21/ಟಿ.ಝಡ್-7389 ನೇದನ್ನು ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಅತೀವೇಗವಾಗಿ ಹಾಗೂ ನಿಷ್ಕಾಳಿಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದವನು, ತನ್ನ ಲಾರಿಯ ಮೇಲಿನ ನಿಯಂತ್ರಣ ತಪ್ಪಿದಾಗ ಸದರ ಲಾರಿಯಲ್ಲಿ ಪ್ರಯಾಣ ಮಾಡುತ್ತಿದ್ದ ನರೇಶ ತಂದೆ ಕಿಷ್ಟಯ್ಯಾ ಗೌಡ ಇವರಿಗೆ ಲಾರಿಯಿಂದ ರಸ್ತೆಯ ಮೇಲೆ ಬೀಳಿಸಿ ಅವರಿಗೆ ದುಃಖಾಪತ್ ಪಡಿಸಿ ಮರಣವನ್ನುಂಟು ಪಡಿಸಿದ್ದಲ್ಲದೇ, ಸದರ ಲಾರಿಯನ್ನು ಮುಂದೆ ಚಲಾಯಿಸಿಕೊಂಡು ಬಂದು ಪಿರ್ಯಾದಿಯವರ ಬಾಬ್ತು ಅಶೋಕ ಲೇಲ್ಯಾಂಡ್ ಲಾರಿ ನಂ: ಟಿ.ಎನ್-88/ಬಿ-0163 ನೇದಕ್ಕೆ ಹಿಂದಿನಿಂದ ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದರಿಂದಲೇ ಈ ಅಪಘಾತವಾಗಿ ಎರಡು ಲಾರಿಗಳು ಜಖಂ ಆಗಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕೆ. ಮಣಿಕಂದನ್ ತಂದೆ ಕಂದಸ್ವಾಮಿ, ಪ್ರಾಯ-33 ವರ್ಷ, ವೃತ್ತಿ-ಲಾರಿ ಚಾಲಕ ಹಾಗೂ ಮಾಲಿಕ, ಸಾ|| ಮನೆ ನಂ: 5/58, ತೋಡುಕ್ಕನ್ ಕಾಡು, ಪೊನ್ನೇರಿಪಟ್ಟಿ, ಕಲಿಪಾಳ್ಯಮ್ ಗ್ರಾಮ, ಪರಮಾಠಿ, ವೇಲೂರ, ನಮಕ್ಕಲ್, ತಮಿಳುನಾಡು ರವರು ದಿನಾಂಕ: 13-03-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಜೋಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 13/2021, ಕಲಂ: 3 ಸಹಿತ 25 ಭಾರತೀಯ ಆಯುಧ ಕಾಯ್ದೆ-1959 ನೇದ್ದರ ವಿವರ...... ನಮೂದಿತ ಆರೋಪಿತ ನಾರಾಯಣ ತಂದೆ ತಿಮ್ಮಣ್ಣ ಮಹಾಲೆ, ಅಂದಾಜು ಪ್ರಾಯ-45 ವರ್ಷ, ಸಾ|| ಮಹಾಲೆಮನೆ ಕೇರಿ, ಶಿವಪುರ, ತಾ: ಜೊಯಿಡಾ. ನಮೂದಿತ ಆರೋಪಿತನು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಒಂಟಿ ನಳಿಕೆಯ ನಾಡ ಬಂದೂಕು ಹಾಗೂ ಸೀಸದ ಸಣ್ಣ ಗುಂಡುಗಳು-36 ಮತ್ತು ತೆಂಗಿನ ಕತ್ತಾ ಸ್ವಲ್ಪ ಇವುಗಳನ್ನು ಇಟ್ಟುಕೊಂಡಿರುವಾಗ ದಿನಾಂಕ: 13-03-2021 ರಂದು 18-15 ಗಂಟೆಗೆ ದಾಳಿಯ ಕಾಲಕ್ಕೆ ಸೆರೆ ಸಿಗದೇ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಮಂಜುಳಾ ರಾವೋಜಿ, ಡಬ್ಲ್ಯೂ.ಪಿ.ಎಸ್.ಐ, ಜೋಯಿಡಾ ಪೊಲೀಸ್ ಠಾಣೆ ರವರು ದಿನಾಂಕ: 13-03-2021 ರಂದು 20-55 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 25/2021, ಕಲಂ: 279, 337, 338 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ರಾಯಲ್ ಎನಫೀಲ್ಡ್ ಮೋಟಾರ್ ಸೈಕಲ್ ನೇದರ ಸವಾರನಾಗಿದ್ದು, ಮೋಟಾರ್ ಸೈಕಲ್ ನಂಬರ್ ಹಾಗೂ ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯವರು ದಿನಾಂಕ: 13-03-2021 ರಂದು ತನ್ನ ಮಗನ ಮೋಟಾರ್ ಸೈಕಲ್ ನಂ: ಕೆ.ಎ-31/ಆರ್-4192 ನೇದನ್ನು ಪಡೆದುಕೊಂಡು, ಸದರಿ ಮೋಟಾರ್ ಸೈಕಲಿಗೆ ಶ್ರೀ ದಿವಾಕರ ತಂದೆ ಸುಬ್ರಾಯ ಹೆಗಡೆ ರವರು ಚಾಲಕರಾಗಿ ಮೋಟಾರ್ ಸೈಕಲ್ ಹಿಂಬದಿ ಸವಾರರಾಗಿ ಪಿರ್ಯಾದಿಯವರು ಬಿಸಿಲಕೊಪ್ಪದಿಂದ 11-15 ಗಂಟೆಗೆ ಹೊರಟು ಗಿಡಮಾವಿನಕಟ್ಟೆಗೆ ಹೋಗಲು ಶಿರಸಿ-ಹುಬ್ಬಳ್ಳಿ ರಸ್ತೆಯ ಮೇಲೆ ಬರುತ್ತಾ 11-45 ಗಂಟೆಯ ಸುಮಾರಿಗೆ ಮಹೀಂದ್ರಾ ಶೋ-ರೂಮ್ ಎದುರು ತಲುಪಿದಾಗ ಎದುರಿನಿಂದ ಶಿರಸಿ ಶಹರದ ಕಡೆಯಿಂದ ಮುಂಡಗೊಡ ಮಾರ್ಗವಾಗಿ ಮೋಟಾರ್ ಸೈಕಲ್ ನಂ: ಕೆ.ಎ-31/ಎಚ್-9502 ನೇದರ ಮೇಲೆ ಗಾಯಾಳು ರಸೂಲ್ ಸಾಬ್ ಅಲ್ಲಾಭಕ್ಷ್ ನೇಯವರು ತನ್ನ ಹಿಂಬದಿಯಲ್ಲಿ ಶ್ರೀಮತಿ ಶಕೀರಾಬಾನು ಕೋಂ. ಅಲ್ಲಾಭಕ್ಷ್ ಸಾಬ್ ಇವರನ್ನು ಕೂಡ್ರಿಸಿಕೊಂಡು ಬರುತ್ತಿದ್ದವರಿಗೆ, ಅವರ ಮೋಟಾರ್ ಸೈಕಲ್ ಹಿಂಬದಿಯಿಂದ ಒಂದು ರಾಯಲ್ ಎನಫೀಲ್ಡ್ ಮೋಟಾರ್ ಸೈಕಲ್ ಸವಾರನಾದ ನಮೂದಿತ ಆರೋಪಿತನು ತನ್ನ ಬಾಬ್ತು ಮೋಟಾರ್ ಸೈಕಲನ್ನು ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸೂಲ್ ಸಾಬ್ ಅಲ್ಲಾಭಕ್ಷ್ ರವರು ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಎಚ್-9502 ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ನಂ: ಕೆ.ಎ-31/ಎಚ್-9502 ನೇದರ ಚಾಲಕನಿಗೆ ತನ್ನ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ತಪ್ಪುವಂತೆ ಮಾಡಿ, ತನ್ನ ಮೋಟಾರ್ ಸೈಕಲನ್ನು ರಸ್ತೆಯ ಮಧ್ಯದ ಗೆರೆ ದಾಟಿಕೊಂಡು ಬಂದು ಪಿರ್ಯಾದಿಯವರು ಸವಾರರಾಗಿ ಹೋಗುತ್ತಿದ ಮೋಟಾರ್ ಸೈಕಲ್ ನಂ: ಕೆ.ಎ-31/ಆರ್-4192 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಆಗುವಂತೆ ಮಾಡಿ, ಪಿರ್ಯಾದಿ, ಶ್ರೀ ದಿವಾಕರ ತಂದೆ ಸುಬ್ರಾಯ ಹೆಗಡೆ ಮತ್ತು ಶ್ರೀಮತಿ ಶಕೀರಾಬಾನು ಕೋಂ. ಅಲ್ಲಾಭಕ್ಷ್ ಸಾಬ್ ಇವರಿಗೆ ಸಾದಾ ಸ್ವರೂಪದ ಗಾಯನೋವು ಆಗುವಂತೆ ಮಾಡಿದ್ದಲ್ಲದೇ, ರಸೂಲ್ ಸಾಬ್ ಅಲ್ಲಾಭಕ್ಷ್ ಈತನಿಗೆ ತಲೆ ಮತ್ತು ಮುಖದ ಭಾಗದಲ್ಲಿ ಭಾರೀ ಸ್ವರೂಪದ ಗಾಯನೋವು ಆಗುವಂತೆ ಮಾಡಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲನ್ನು ನಿಲ್ಲಿಸದೇ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಇಂದ್ರಪ್ಪ ತಂದೆ ಕೆರಿಯಪ್ಪ ನಾಯ್ಕ, ಪ್ರಾಯ-67 ವರ್ಷ, ವೃತ್ತಿ-ನಿವೃತ್ತ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ, ಸಾ|| ಕೆ.ಎಚ್.ಬಿ ಕಾಲೋನಿ, ತಾ: ಶಿರಸಿ ರವರು ದಿನಾಂಕ: 13-03-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 11/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಭಿಜೀತ ತಂದೆ ಅನೀಲ ಚವ್ಹಾನ, ಪ್ರಾಯ-22 ವರ್ಷ, ಸಾ|| ಗಣಪತಿ ಗಲ್ಲಿ, ಹಳಿಯಾಳ ಶಹರ (ಮೋಟಾರ್ ಸೈಕಲ್ ನಂ: ಕೆ.ಎ-65/ಎಚ್-9261 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 08-03-2021 ರಂದು ಮಧ್ಯಾಹ್ನ 02-30 ಗಂಟೆಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-65/ಎಚ್-9261 ನೇದರ ಹಿಂಬದಿಯಲ್ಲಿ ಗಾಯಾಳುವಾದ ಎಸ್. ಸೌರಭ ಸುದರ್ಶನ ರವರಿಗೆ ಕೂಡ್ರಿಸಿಕೊಂಡು ಹಳಿಯಾಳ ಬದಿಯಿಂದ ಧಾರವಾಡ ಬದಿಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುತ್ತಾ ಮಾವಿನಕೊಪ್ಪದ ಫಾರೆಸ್ಟ್ ಚೆಕ್ ನಾಕಾದಿಂದ ಹಳಿಯಾಳ ಬದಿಗೆ 400 ಮೀಟರ್ ಅಂತರದಲ್ಲಿ ಡಾಂಬರ್ ರಸ್ತೆಯ ತಿರುವಿನಲ್ಲಿ, ಎದುರಿನಿಂದ ಅಂದರೆ ಧಾರವಾಡ ಬದಿಯಿಂದ ಹಳಿಯಾಳ ಬದಿಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-65/ಜೆ-5466 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಿಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೆ ಹಾಗೂ ತನ್ನ ಹಿಂಬದಿಯ ಮೋಟಾರ್ ಸೈಕಲ್ ಸವಾರನಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿ, ವಾಹನಗಳನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಶಿವಾಜಿ ತಂದೆ ಯಲ್ಲಪ್ಪ ಡಾಂಗೆ, ಪ್ರಾಯ-47 ವರ್ಷ, ವೃತ್ತಿ-ರೈತಾಬಿ ವ ಗುತ್ತಿಗೆದಾರರು, ಸಾ|| ತತ್ವಣಗಿ, ತಾ: ಹಳಿಯಾಳ ರವರು ದಿನಾಂಕ: 13-03-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಅಂಬಿಕಾನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 02/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 11-03-2021 ರಂದು ಸಂಜೆ 17-30 ಗಂಟೆಯಿಂದ ದಿನಾಂಕ: 13-3-2021 ರಂದು 11-10 ಗಂಟೆಯ ನಡುವಿನ ಅವಧಿಯಲ್ಲಿ  ಕೇಗದಾಳದ ವಿಂಚಳ್ಳಿ ವಾಚ್ ಟಾವರ್ ಹತ್ತಿರ ವನ್ಯ ಜೀವಿಗಳ ಸರ್ವೇ ಕಾರ್ಯ ಹಾಗೂ ರಕ್ಷಣೆಯ ಕುರಿತು  ಅರಣ್ಯದಲ್ಲಿ ರಸ್ತೆಗೆ ಅಳವಡಿಸಿದ ಕುಡ್ಡೆ ಬ್ಯಾಕ್ ಕಂಪನಿಯ ಡಿಜಿಟಲ್ ಕ್ಯಾಮರಾಗಳು-2, ಅ||ಕಿ|| 40,000/-  ರೂಪಾಯಿ ನೇದನ್ನು  ಒಡೆದು,  ಕ್ಯಾಮೆರಾಗಳನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಮಾಬುಸಾಬ್ ತಂದೆ ಹುಸೇನಸಾಬ್ ಬುಕೀಟಗಾರ, ಪ್ರಾಯ-43 ವರ್ಷ, ವೃತ್ತಿ-ಉಪ ವಲಯ ಅರಣ್ಯಾಧಿಕಾರಿ, ಕುಳಗಿ ವಲಯ, ಕೇಗದಾಳ ಶಾಖೆ, ಸಾ|| ಅರಣ್ಯ ವಸತಿ ಗೃಹ, ಕುಳಗಿ, ದಾಂಡೇಲಿ ರವರು ದಿನಾಂಕ: 13-03-2021 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 13-03-2021

at 00:00 hrs to 24:00 hrs

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 06/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ರಾಜು ತಂದೆ ಮಾಸ್ತಿ ಮೊಗೇರ, ಪ್ರಾಯ-34 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಸಣ್ಣಬಾವಿ, ಬೆಂಗ್ರೆ-1, ಪೋ: ಅಳ್ವೆಕೋಡಿ, ತಾ: ಭಟ್ಕಳ. ಪಿರ್ಯಾದುದಾರರ ಅಣ್ಣನಾದ ಈತನು ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದವನು, ದಿನಾಂಕ: 12-03-2021 ರಂದು ರಾತ್ರಿ ಸುಮಾರು 10-45 ಗಂಟೆಯಿಂದ ದಿನಾಂಕ: 13-03-2021 ರಂದು ಬೆಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ಸರಾಯಿ ಕುಡಿದು ಬಸ್ತಿಯ ರೈಲ್ವೇ ಬ್ರಿಡ್ಜ್ ಹತ್ತಿರ ರೈಲ್ವೇ ಹಳಿಯನ್ನು ದಾಟುತ್ತಿರುವಾಗ ಆಕಸ್ಮಿಕವಾಗಿ ಯಾವೊದೋ ಒಂದು ಬರ-ಹೋಗುವ ರೈಲು ಪಿರ್ಯಾದುದಾರರ ಅಣ್ಣನಿಗೆ ಬಡಿದು ಭಾರೀ ಸ್ವರೂಪದ ಗಾಯದಿಂದ ಮೃತಪಟ್ಟಿದ್ದು ಇರುತ್ತದೆ. ಮೃತನ ಮೃತದೇಹವು ಘಟನಾ ಸ್ಥಳದಲ್ಲಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶೇಖರ ತಂದೆ ಮಾಸ್ತಿ ಮೊಗೇರ, ಪ್ರಾಯ-31 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಸಣ್ಣಬಾವಿ, ಬೆಂಗ್ರೆ-1, ಪೋ: ಅಳ್ವೆಕೋಡಿ, ತಾ: ಭಟ್ಕಳ ರವರು ದಿನಾಂಕ: 13-03-2021 ರಂದು 08-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 16-03-2021 09:48 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080