ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 13-05-2021

at 00:00 hrs to 24:00 hrs

 

ಮಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 15/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಕಿರಣ ತಂದೆ ಈರಪ್ಪ ಹೊನ್ನಳ್ಳಿ, ಪ್ರಾಯ-27 ವರ್ಷ, ವೃತ್ತಿ-ಕೇಬಲ್ ಆಪರೇಟರ್, ಸಾ|| ಲಕ್ಷ್ಮೀನಗರ, ಮಲ್ಲಾಪುರ, ಕಾರವಾರ. ಈತನು ದಿನಾಂಕ: 13-05-2021 ರಂದು ಬೆಳಿಗ್ಗೆ 08-00 ಗಂಟೆಗೆ ತನ್ನ ತಾಬಾ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಮಲ್ಲಾಪುರ-ಕಾರವಾರ ರಸ್ತೆಯಲ್ಲಿರುವ ಮಲ್ಲಾಪುರದ ಫಾರೆಸ್ಟ್ ಆಫೀಸ್ ಹತ್ತಿರದ ಸಾರ್ವಜನಿಕ ರಸ್ತೆಯಲ್ಲಿ ತನ್ನ ಬಾಬ್ತು ಸ್ಕೂಟಿ ನಂ: ಕೆ.ಎ-30/ವಿ-3606 ನೇದರ ಮೇಲೆ ಒಂದು ಕೈ ಚೀಲದಲ್ಲಿರುವ ರಟ್ಟಿನ ಬಾಕ್ಸಿನಲ್ಲಿ ಕರ್ನಾಟಕ ರಾಜ್ಯದ ಸರಾಯಿ ತುಂಬಿದ 180 ML ನ OLD TAVERN TM Whisky ಅಂತಾ ಇಂಗ್ಲೀಷ್ ಲೇಬಲ್ ಇದ್ದ ಒಟ್ಟೂ 48 ಪ್ಯಾಕೆಟ್ ಗಳಿದ್ದು, ಒಟ್ಟೂ 48 ಬಾಟಲಿಗಳ ಅ||ಕಿ|| 4,164/- ರೂಪಾಯಿ ಬೆಲೆಯ ಸರಾಯಿಯನ್ನು ಅಕ್ರಮವಾಗಿ ತಂದು ಅವುಗಳನ್ನು ತನ್ನ ಲಾಭಕ್ಕೋಸ್ಕರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುವಾಗ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಶೇಖರ ಬಿ. ಸಾಗನೂರ, ಪಿ.ಎಸ್.ಐ, ಮಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 13-05-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 144/2021, ಕಲಂ: 269, 270 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಜ್ಗರಲಿ ತಂದೆ ಸಯ್ಯದ್ ಗಫಾರ್, ಪ್ರಾಯ-32 ವರ್ಷ, ವೃತ್ತಿ-ಸೈಕಲ್ ರಿಪೇರಿ, ಸಾ|| ಬಜಾರ್ ಮಸೀದಿ ಹತ್ತಿರ, ಬಜಾರ್ ರೋಡ್, ತಾ: ಹೊನ್ನಾವರ. ಕರ್ನಾಟಕ ರಾಜ್ಯ ಸರ್ಕಾರ ಮತ್ತು ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಾಂಕ್ರಾಮಿಕ ರೋಗವಾದ ಕೋವಿಡ್-19 (ಕೊರೋನಾ ವೈರಾಣು) ಖಾಯಿಲೆ ಹರಡದಂತೆ ತಡೆಗಟ್ಟುವ ಸಲುವಾಗಿ ಲಾಕಡೌನ್ ಆದೇಶ ಹೊರಡಿಸಿದ್ದರೂ ಸಹ ನಮೂದಿತ ಆರೋಪಿತನು ದಿನಾಂಕ: 13-05-2021 ರಂದು ಮುಖಕ್ಕೆ ಮಾಸ್ಕ್ ಹಾಕದೇ, ಯಾವುದೇ ಸುರಕ್ಷತಾ ಕ್ರಮ ಅನುಸರಿಸದೇ, ತನ್ನ ಮೋಟಾರ್ ಸೈಕಲ್ ನಂ: ಕೆಎ-47/ಡಬ್ಲ್ಯೂ-6260 ನೇದನ್ನು ಹೊನ್ನಾವರದ ಬಜಾರ್ ರಸ್ತೆಯಲ್ಲಿ ಬಜಾರ್ ಮಸೀದಿ ಹತ್ತಿರ ಚಲಾಯಿಸಿಕೊಂಡು ಬಂದು ಕೊರೋನಾ ಸಾಂಕ್ರಾಮಿಕ ರೋಗದ ಸರ್ಕಾರದ ಲಾಕಡೌನ್ ಆದೇಶದ ಉಲ್ಲಂಘನೆ ಮಾಡಿ, ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸಾಂಕ್ರಾಮಿಕ ರೋಗದ ಸೋಂಕು ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳದೇ ಅನಗತ್ಯವಾಗಿ ತನ್ನ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಬಂದು ನಿರ್ಲಕ್ಷ್ಯದ ಕೃತ್ಯ ಎಸಗಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ (ಕಾ&ಸು-1), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 13-05-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 145/2021, ಕಲಂ: 269, 270 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಇಬ್ರಾಹಿಂ ತಂದೆ ಅಬ್ದುಲ್ ರಜಾಕ್, ಪ್ರಾಯ-32 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಅಸೂರಖಾನ್ ಗಲ್ಲಿ. ತಾ: ಹೊನ್ನಾವರ. ಕರ್ನಾಟಕ ರಾಜ್ಯ ಸರ್ಕಾರ ಮತ್ತು ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಾಂಕ್ರಾಮಿಕ ರೋಗವಾದ ಕೋವಿಡ್-19 (ಕೊರೋನಾ ವೈರಾಣು) ಖಾಯಿಲೆ ಹರಡದಂತೆ ತಡೆಗಟ್ಟುವ ಸಲುವಾಗಿ ಲಾಕಡೌನ್ ಆದೇಶ ಹೊರಡಿಸಿದ್ದರೂ ಸಹ ನಮೂದಿತ ಆರೋಪಿತನು ದಿನಾಂಕ: 13-05-2021 ರಂದು ಮುಖಕ್ಕೆ ಮಾಸ್ಕ್ ಹಾಕದೇ ಯಾವುದೇ ಸುರಕ್ಷತಾ ಕ್ರಮ ಅನುಸರಿಸದೇ, ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಎಲ್-2834 ನೇದನ್ನು ಹೊನ್ನಾವರ ಕಾಸರಕೋಡದ ಟೊಂಕ ಕ್ರಾಸಿನ ಐಯ್ಯಂಗಾರ್ ಬೇಕರಿ  ಹತ್ತಿರ ಚಲಾಯಿಸಿಕೊಂಡು ಬಂದು ಕೊರೋನಾ ಸಾಂಕ್ರಾಮಿಕ ರೋಗದ ಸರ್ಕಾರದ ಲಾಕಡೌನ್ ಆದೇಶದ ಉಲ್ಲಂಘನೆ ಮಾಡಿ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸಾಂಕ್ರಾಮಿಕ ರೋಗದ ಸೋಂಕು ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳದೇ ಅನಗತ್ಯವಾಗಿ ತನ್ನ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಬಂದು ನಿರ್ಲಕ್ಷ್ಯದ ಕೃತ್ಯ ಎಸಗಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತೇಶ ಉದಯ ನಾಯಕ, ಪಿ.ಎಸ್.ಐ (ಕಾ&ಸು-2), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 13-05-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 71/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಗಪ್ಪಾ ತಂದೆ ಕುಪ್ಪಯ್ಯಾ ದೇವಾಡಿಗ, ಸಾ|| ಬೈಂದೂರ, ಜಿ: ಉಡುಪಿ (ಟಾಟಾ ಟಿಪ್ಪರ್ ವಾಹನ ನಂ: ಕೆ.ಎ-20/ಡಿ-5524 ನೇದರ ಚಾಲಕ). ಈತನು ದಿನಾಂಕ: 11-05-2021 ರಂದು ಮಧ್ಯಾಹ್ನ 12-30 ಗಂಟೆಯ ಸಮಯಕ್ಕೆ ತಾನು ಚಲಾಯಿಸಿಕೊಂಡು ಬಂದ ಟಾಟಾ ಟಿಪ್ಪರ್ ವಾಹನ ನಂ: ಕೆ.ಎ 20/ಡಿ-5524 ನೇದನ್ನು ಅಳ್ವೆಕೋಡಿ ಸಮುದ್ರ ದಂಡೆಯಿಂದ ಅಳ್ವೆಕೋಡಿಯ ಸರ್ಕಲ್ ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಬಂದವನು, ಅಳ್ವೆಕೋಡಿಯ ಸರ್ಕಲ್ ಹತ್ತಿರ ಸಣ್ಣಭಾವಿ ಕಡೆಯಿಂದ ಅಳ್ವೆಕೋಡಿ ದೇವಸ್ಥಾನದ ಕಡೆಗೆ ಹೀರೋ ಫ್ಯಾಷನ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-4145 ನೇದನ್ನು ಚಲಾಯಿಸಿಕೊಂಡು ಬರುತ್ತಿದ್ದ ಪಿರ್ಯಾದಿಯ ಮೋಟಾರ್ ಸೈಕಲಿಗೆ ತನ್ನ ಟಿಪ್ಪರ ವಾಹನದ ಎಡಬದಿಯ ಭಾಗವನ್ನು ನಿಷ್ಕಾಳಜಿತನದಿಂದ ತಾಗಿಸಿ ಅಪಘಾತ ಪಡಿಸಿ, ಈ ಅಪಘಾತದಲ್ಲಿ ಮೋಟಾರ್ ಸೈಕಲ್ ಸವಾರನಾದ ಪಿರ್ಯಾದಿಯು ಅಲ್ಲಿಯೇ ರಸ್ತೆಯ ಪಕ್ಕದ ಉಸುಕಿನ ಮೇಲೆ ಹಾರಿ ಬಿದ್ದು, ಅವರ ಕಾಲಿಗೆ ದುಃಖಾಪತ್ ಪಡಿಸಿದ್ದಲ್ಲದೇ, ಮೋಟಾರ್ ಸೈಕಲ್ ಹಿಂಬದಿಯ ಸವಾರನು ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು ಅವರ ಬಲಗೈ ಮತ್ತು ಸೊಂಟದ ಭಾಗಕ್ಕೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಸುರೇಶ ತಂದೆ ದೇವಪ್ಪಾ ಮೊಗೇರ, ಪ್ರಾಯ-39 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಅಳ್ವೆಕೋಡಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹತ್ತಿರ, ತಾ: ಭಟ್ಕಳ ರವರು ದಿನಾಂಕ: 13-05-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 25/2021, ಕಲಂ: 269, 270 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸಂತೋಷ ನಾಗೇಶ ಜೋಜೋಡೆ, ಪ್ರಾಯ-35 ವರ್ಷ, ವೃತ್ತಿ-ವ್ಯಾಪಾರ, ಸಾ|| ನೆಹರು ನಗರ, ತಾ: ಶಿರಸಿ, 2]. ಅಭಿಷೇಕ ಮಹಾದೇವ ನವಳಿ, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸುಭಾಷ ನಗರ, ತಾ: ಶಿರಸಿ. ಮಾನ್ಯ ಕರ್ನಾಟಕ ಸರ್ಕಾರ ಮತ್ತು ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ಅಧೀಕೃತ ಆದೇಶ ಹಾಗೂ ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ಆದೇಶದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಾಂಕ್ರಾಮಿಕ ರೋಗವಾದ ಕೋವಿಡ್-19 (ಕೊರೋನಾ ವೈರಾಣು) ಖಾಯಿಲೆ ಹರಡದಂತೆ ತಡೆಗಟ್ಟುವ ಸಲುವಾಗಿ ಕೊರೋನಾ ಕರ್ಫ್ಯೂ ಜಾರಿ ಮಾಡಿದ್ದರೂ ಸಹ ಈ ನಮೂದಿತ ಆರೋಪಿತರು ದಿನಾಂಕ: 13-05-2021 ರಂದು 08-30 ಗಂಟೆಯ ಸುಮಾರಿಗೆ ಶಿರಸಿ ಶಹರದ ನಟರಾಜ ರಸ್ತೆಯಲ್ಲಿರುವ ಆರೋಪಿ 1 ನೇಯವನ ಮಾಲೀಕತ್ವದಲ್ಲಿರುವ ‘ರೇಣುಕಾ ಡ್ರೆಸಸ್’ ಬಟ್ಟೆ ಅಂಗಡಿಯನ್ನು ತೆರೆದು ವ್ಯಾಪಾರ ವಹಿವಾಟು ಮಾಡಿ ಕೊರೋನಾ ಸಾಂಕ್ರಾಮಿಕ ರೋಗದ ಕರ್ಫ್ಯೂ ಜಾರಿಯ ಸರ್ಕಾರದ ಆದೇಶ ಉಲ್ಲಂಘನೆ ಮಾಡಿ, ಕೋವಿಡ್-19 ವೈರಾಣು ಹರಡುವಿಕೆಯಲ್ಲಿ ನಿರ್ಲಕ್ಷ್ಯತೆ ಹಾಗೂ ಸಾರ್ವಜನಿಕರ ದೇಹದ ಸುರಕ್ಷತೆಗೆ ಅಪಾಯವುಂಟು ಮಾಡುವಂತಹ ನಿರ್ಲಕ್ಷ್ಯದ ಕೃತ್ಯ ಮಾಡಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಕುಮಾರ ಯು, ಪಿ.ಎಸ್.ಐ, ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 13-05-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 47/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹಮೀದ್ ಖಾನ್ ತಂದೆ ನಾಸೀರ್ ಖಾನ್, ಪ್ರಾಯ-27 ವರ್ಷ, ವೃತ್ತಿ-ಚಾಲಕ, ಸಾ|| ಮಠದಗದ್ದೆ, 6 ನೇ ಕ್ರಾಸ್, ಶಿರಾಳಕೊಪ್ಪ, ತಾ: ಶಿಕಾರಿಪುರ, ಜಿ: ಶಿವಮೊಗ್ಗ (ಬೊಲೆರೋ ಪಿಕಫ್ ವಾಹನ ನಂ: ಕೆ.ಎ-15/ಎ-3022 ನೇದರ ಚಾಲಕ). ಈತನು ದಿನಾಂಕ: 13-05-2021 ರಂದು 18-00 ಗಂಟೆಗೆ ತನ್ನ ಬೊಲೆರೋ ಪಿಕಫ್ ವಾಹನ ನಂ: ಕೆ.ಎ-15/ಎ-3022 ನೇದನ್ನು ಕುಮಟಾ ಕಡೆಯಿಂದ ಶಿರಸಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಾ, ಬಡಗಿ ಕ್ರಾಸ್ ಹತ್ತಿರ ತನ್ನ ವಾಹನದ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ, ಶಿರ್ಲಗದ್ದೆ ಕಡೆಯಿಂದ ಬಂಡಲ ಕಡೆಗೆ ಹೊರಟಿದ್ದ ಮೋಟಾರ್ ಸೈಕಲ್ ನಂ: ಕೆ.ಎ-05/ಜೆ.ಜೆ-9649 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಎರಡು ವಾಹನಗಳನ್ನು ಜಖಂಗೊಳಿಸಿ, ಮೋಟಾರ್ ಸೈಕಲ್ ಸವಾರನಾದ ಪಿರ್ಯಾದಿಗಡ ಎಡತೊಡೆಗೆ, ಎಡ ಮೊಣಕಾಲಿನ ಗಂಟಿಗೆ, ಪಾದದ ಗಂಟಿಗೆ ತೆರಚಿದ ಗಾಯ ಮತ್ತು ಹೊಟ್ಟೆಗೆ ಒಳನೋವು ಪಡಿಸಿ, ಸಾದಾ ಸ್ವರೂಪ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಚಂದ್ರಕಾಂತ ತಂದೆ ಗಂಗಾಧರ ಮರಾಠಿ, ಪ್ರಾಯ-24 ವರ್ಷ, ವೃತ್ತಿ-ಖಾಸಗಿ ನೌಕರ, ಸಾ|| ಪಡಂಬೈಲ್, ಪೋ: ಬಚಗಾಂವ, ತಾ: ಶಿರಸಿ ರವರು ದಿನಾಂಕ: 13-05-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 13-05-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

ಇತ್ತೀಚಿನ ನವೀಕರಣ​ : 14-05-2021 01:02 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080