ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 13-10-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 20/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರವಿ ತಂದೆ ವೆಂಕಟೇಶ ಮಡಿವಾಳ, ಸಾ|| ಕಲವೆ, ಪೋ: ಸಂತೆಗುಳಿ, ತಾ: ಕುಮಟಾ (ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-2810 ನೇದರ ಚಾಲಕ). ಈತನು ದಿನಾಂಕ 03-10-2021 ರಂದು 18-30 ಗಂಟೆಯ ವೇಳೆಗೆ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-2810 ನೇದರ ಹಿಂಬದಿಯಲ್ಲಿ ಪಿರ್ಯಾದಿಯವರ ಅಣ್ಣನ ಮಗ ಗಾಯಾಳು ದಿವಾಕರ ತಂದೆ ಚೀಪ ಗೌಡಾ, ಪ್ರಾಯ-32 ವರ್ಷ, ವೃತ್ತಿ-ಚಾಲಕ, ಸಾ|| ಕಲವೆ, ಗೌಡರಕೇರಿ, ಪೋ: ಸಂತೆಗುಳಿ, ತಾ: ಕುಮಟಾ ಈತನಿಗೆ ಕೂಡ್ರಿಸಿಕೊಂಡು ಮೋಟಾರ್ ಸೈಕಲನ್ನು ಸಂತೆಗುಳಿ ಕಡೆಯಿಂದ ಕಲವೆ ಕಡೆಗೆ ಹೋಗಲು ಅತೀವೇಗವಾಗಿ ಸವಾರಿ ಮಾಡಿಕೊಂಡು ಬಂದು, ಸಂತೆಗುಳಿ ಊರಿನ ದೋಣಿಹಳ್ಳ ಕ್ರಾಸ್ ದಾಟಿ ಸ್ವಲ್ಪ ಮುಂದೆ ಸಾಗಿದಾಗ ರಸ್ತೆಗೆ ಅಡ್ಡವಾಗಿ ಆಕಳು ಬಂದಿದ್ದು, ಮೋಟಾರ್ ಸೈಕಲ್ ಸವಾರನು ಆಕಳನ್ನು ತಪ್ಪಿಸಲು ನಿಷ್ಕಾಳಜಿಯಿಂದ ಒಮ್ಮೇಲೆ ಬ್ರೇಕ್ ಹಾಕಿದಾಗ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಮೋಟಾರ್ ಸೈಕಲ್ ಹಿಂಬದಿ ಕುಳಿತ ದಿವಾಕರ ತಂದೆ ಚೀಪ ಗೌಡಾ ಈತನಿಗೆ ಬೆನ್ನಿಗೆ, ಕುತ್ತಿಗೆಗೆ, ಕೈಕಾಲುಗಳಿಗೆ ಗಾಯನೋವು ಆಗಲು ಆರೋಪಿ ಮೋಟಾರ್ ಸೈಕಲ್ ಸವಾರನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಹುಲಿಯಪ್ಪಾ ತಂದೆ ಕೃಷ್ಣಾ ಗೌಡಾ, ಪ್ರಾಯ-39 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕಲವೆ, ಗೌಡರಕೇರಿ, ಪೋ: ಸಂತೆಗುಳಿ, ತಾ: ಕುಮಟಾ ರವರು ದಿನಾಂಕ: 13-10-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 265/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕುಮಾರೆಸನ್ ತಂದೆ ಷಣ್ಮುಗಂ, ಪ್ರಾಯ-45 ವರ್ಷ, ವೃತ್ತಿ-ಚಾಲಕ, ಸಾ|| ಪನ್ನೇರಸೇಲ್ವಂ ಸ್ಟ್ರೀಟ್, ಕಾವೇರಿಪಟ್ಟಣಂ, ಕೃಷ್ಣಗಿರಿ, ತಮಿಳನಾಡು-635112 (ಕಂಟೇನರ್ ವಾಹನ ನಂ: ಟಿ.ಎನ್-58/ಎ.ಕೆ-5625 ನೇದರ ಚಾಲಕ). ಈತನು ದಿನಾಂಕ 12-10-2021 ರಂದು ಮಧ್ಯಾಹ್ನ 01-30 ಗಂಟೆಗೆ ತನ್ನ ಕಂಟೇನರ್ ವಾಹನ ನಂ: ಟಿ.ಎನ್-58/ಎ.ಕೆ-5625 ನೇದರಲ್ಲಿ ಗೋವಾದಿಂದ ತಮಿಳುನಾಡಿಗೆ ಹೋಗಲು ತನ್ನ ಕಂಟೇನರ ವಾಹನದಲ್ಲಿ ವಾಷಿಂಗ್ ಮಷೀನ್‍ ಗಳನ್ನು ಲೋಡ್ ಮಾಡಿಕೊಂಡು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರ ಮೇಲೆ ಹೊನ್ನಾವರ ಕಡೆಯಿಂದ ಸಾಗರ ಕಡೆಗೆ ಹೋಗುತ್ತಿರುವಾಗ ತಾನು ಚಲಾಯಿಸುತ್ತಿದ್ದ ವಾಹನವನ್ನು ಅತೀವೇಗವಾಗಿ ಚಲಾಯಿಸಿಕೊಂಡು ಹೊರಟವನು, ಹೊನ್ನಾವರದ ಗೇರುಸೋಪ್ಪಾ ವಾಟೇಹಳ್ಳ ಹತ್ತಿರ ತಲುಪಿದಾಗ ರಸ್ತೆಯು ತಿರುವಿನಿಂದ ಕೂಡಿದ್ದರೂ ಸಹಿತ ಕಂಟೇನರ್ ವಾಹನದ ವೇಗವನ್ನು ನಿಯಂತ್ರಿಸದೇ ನಿರ್ಲಕ್ಷ್ಯತನದಿಂದ ತಾನು ಚಲಾಯಿಸುತ್ತಿದ್ದ ವಾಹವನ್ನು ರಸ್ತೆಯ ಬಲಕ್ಕೆ ಚಲಾಯಿಸಿ ಎದುರಿನಿಂದ ಅಂದರೆ ಸಾಗರ ಕಡೆಯಿಂದ ಹೊನ್ನಾವರ ಕಡೆಗೆ ಪಿರ್ಯಾದಿಯವರು ಬರುತ್ತಿದ್ದ ಟಿಪ್ಪರ್ ವಾಹನ ನಂ: ಕೆ.ಎ-20/ಸಿ-3615 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಟಿಪ್ಪರ್ ವಾಹನದಲ್ಲಿದ್ದ ಪಿರ್ಯಾದಿಗೆ ಹಾಗೂ ಟಿಪ್ಪರ್ ವಾಹನ ಚಲಾಯಿಸುತಿದ್ದ ಬಾಲಕೃಷ್ಣ ತಂದೆ ವಿಷ್ಣು ಗೌಡ, ಸಾ|| ಮರಿಗದ್ದೆ, ಜಲವಳ್ಳಿ, ತಾ: ಹೊನ್ನಾವರ ಈತನಿಗೆ ಯಾವದೇ ಗಾಯನೋವು ಆಗಿದ್ದು ಇರುವುದಿಲ್ಲ ಹಾಗೂ ಆರೋಪಿ ಚಾಲಕನಿಗೂ ಯಾವುದೇ ಗಾಯನೋವು ಆಗಿದ್ದು ಇರುವುದಿಲ್ಲ. ಈ ಅಪಘಾತದಿಂದ ಎರಡು ವಾಹನಗಳು ಜಖಂಗೊಂಡು, ಕಟೇನರ್ ವಾಹನದಲ್ಲಿದ್ದ ವಾಷಿಂಗ್ ಮಷೀನ್ ಗಳು ಡ್ಯಾಮೇಜ್ ಆಗಿದ್ದು ಇರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶೇಖರ ತಂದೆ ಮಂಜುನಾಥ ಗೌಡ, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬರನಕೇರಿ, ಖರ್ವಾ, ತಾ: ಹೊನ್ನಾವರ ರವರು ದಿನಾಂಕ: 13-10-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 179/2021, ಕಲಂ: 279, 337, 284, 285, 286 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ರಾವುಸಾಹೇಬ್ ತಂದೆ ದಿನಕರ ಕವಳೆ, ಪ್ರಾಯ-35 ವರ್ಷ, ವೃತ್ತಿ-ಚಾಲಕ, ಸಾ|| ದೇವಿನಿಮಾಗೋನ್, ತಾ: ಅಶ್ತೀ, ಜಿ: ಬೀಡ್, ಮಹಾರಾಷ್ಟ್ರ ರಾಜ್ಯ (ಟ್ಯಾಂಕರ್ ವಾಹನ ನಂ: ಎಮ್.ಎಚ್-46/ಬಿ.ಎಮ್-6684 ನೇದರ ಚಾಲಕ), 2]. ಸೇಪ್ಟಿ ಮ್ಯಾನೇಜರ್, 3]. ಸೇಪ್ಟಿ ಕಂಟ್ರೋಲರ್, 4]. ವಾಹನ ಮಾಲೀಕರು. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 13-10-2021 ರಂದು ಬೆಳಗಿನ ಜಾವ ಸಮಯ ಸುಮಾರು 05-30 ಗಂಟೆಗೆ ತನ್ನ ಬಾಬ್ತು ಟ್ಯಾಂಕರ್ ವಾಹನ ನಂ: ಎಮ್.ಎಚ್-46/ಬಿ.ಎಮ್-6684 ನೇದನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ತನ್ನ ವಾಹನವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗದೇ, ಯಲ್ಲಾಪುರ ತಾಲೂಕಿನ ಬಳಗಾರ ಕ್ರಾಸ್ ಹತ್ತಿರ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯ ಪಕ್ಕದಲ್ಲಿ ತನ್ನ ಟ್ಯಾಂಕರ್ ವಾಹನವನ್ನು ಪಲ್ಟಿ ಪಡಿಸಿದ್ದು, ಈ ಘಟನೆಯಿಂದ ಸದರ ಟ್ಯಾಂಕರಿನಿಂದ ‘Benzine Chemical’ ವಿಷಕಾರಿ ಹಾಗೂ ದಹನಕಾರಿ ದ್ರವವಾಗಿದ್ದು, ಸಣ್ಣ ಹಳ್ಳದ ನೀರಿನಲ್ಲಿ ಸೋರಿಕೆಯಾಗಿದ್ದರಿಂದ ಬೆಂಕಿ ಹತ್ತಿದ್ದು, ಆರತಿಬೈಲ್ ಊರಿನ ರೈತರಾದ 1). ಗಣಪತಿ ಪುಟ್ಟಾ ಸಿದ್ದಿ, 2). ಶ್ರೀಮತಿ ಮಹಾದೇವಿ ಕೋಂ. ನಾರಯಣ ಭಟ್, 3). ಶ್ರೀ ಸುಬ್ರಾಯ ತಂದೆ ಶಂಕರ ಭಟ್, 4). ಶ್ರೀಮತಿ ಹೊನ್ನಮ್ಮ ಕೋಂ. ಮುರ್ಕುಂಡಿ ಗೌಡ, 5). ಶ್ರೀ ವಿಶ್ವನಾಥ ನಾರಯಣ ಭಟ್, 6). ಶ್ರೀ ವಿಠ್ಠೋಬಾ ತಂದೆ ರಾಮ ಆಚಾರಿ ಹಾಗೂ ಪಕ್ಕದ ಘರವಾಸೆ ಗ್ರಾಮದ ರೈತರಾದ 7). ಶ್ರೀ ವಿಶ್ವನಾಥ ನರಸಿಂಹ ಹೆಗಡೆ, 8). ಶ್ರೀಮತಿ ಲಕ್ಷ್ಮೀ ನಾರಾಯಣ ಹೆಗಡೆ ಇವರ ಅಡಿಕೆ ತೋಟ, ಜಮೀನು ಪ್ರದೇಶಗಳು ಮತ್ತು ಆಸ್ತಿ ಪಾಸ್ತಿಗೆ ಹಾನಿಯಾಗಿದ್ದಲ್ಲದೇ, ಸಾರ್ವಜನಿಕ ಅರಣ್ಯ ಪ್ರದೇಶವೂ ಸಹ ಹಾನಿಯಾಗಿ, ಸದರ್ ಅಪಘಾತದಿಂದ ಟ್ಯಾಂಕರ್ ವಾಹನ ಚಾಲಕನಿಗೆ ಮೈ ಕೈಗೆ ಗಾಯವಾಗಿರುತ್ತದೆ. ಕಾರಣ ಈ ಘಟನೆಯು ನಮೂದಿತ ಆರೋಪಿತರೆಲ್ಲರೂ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದರಿಂದ ಈ ಘಟನೆ ಆಗಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿಶ್ವೇಶ್ವರ ತಂದೆ ನಾರಾಯಣ ಭಟ್, ಪ್ರಾಯ-57 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಆರತಿಬೈಲ್, ತಾ: ಯಲ್ಲಾಪುರ ರವರು ದಿನಾಂಕ: 13-10-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 180/2021, ಕಲಂ: ಯುವಕ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಯುವಕ ಕುಮಾರ: ಮಲ್ಲಿಕಾರ್ಜುನ್ ತಂದೆ ಶಂಕರಗೌಡಾ ಪಾಟೀಲ್, ಪ್ರಾಯ-27 ವರ್ಷ, ವೃತ್ತಿ-ಫರ್ನೀಚರ್ ವ್ಯಾಪಾರ, ಸಾ|| ತುಮರಿಕೊಪ್ಪಾ, ತಾ: ಕಲಘಟಗಿ, ಜಿ: ಧಾರವಾಡ, ಹಾಲಿ ಸಾ|| ಅಳ್ನಾವರ, ಗಾಂಧಿನಗರ, ತಾ: ಯಲ್ಲಾಪುರ. ಪಿರ್ಯಾದುದಾರರ ದೊಡ್ಡಪ್ಪನ ಮಗನಾದ ಈತನು ದಿನಾಂಕ 13-10-2021 ರಂದು ಬೆಳಿಗ್ಗೆ ಕಲಘಟಗಿಯಿಂದ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-25/ಎಚ್.ಇ-9935 ನೇದರ ಮೇಲೆ ಯಲ್ಲಾಪುರ ತಾಲೂಕಿನ ದೇಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಶಿವಪುರ ತೂಗು ಸೇತುವೆಯ ಮೇಲೆ ಬಂದು ತನ್ನ ಮೋಟಾರ್ ಸೈಕಲನ್ನು ಶಿವಪುರ ತೂಗು ಸೇತುವೆಯ ಮೇಲೆ ನಿಲ್ಲಿಸಿ, ತನ್ನ ಮೊಬೈಲ್ ಮತ್ತು ಪರ್ಸನ್ನು ಮೋಟಾರ್ ಸೈಕಲಿನ ಟ್ಯಾಂಕ್ ಕವರಿನಲ್ಲಿ ಇಟ್ಟು ಸೇತುವೆಯಿಂದ ಕಾಳಿ ನದಿ ಹಿನ್ನೀರಿನಲ್ಲಿ ಹಾರಿ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದವನನ್ನು ಹುಡುಕಿ ಕೊಡುವ ಕುರಿತು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಶ್ರೀಕಾಂತಯ್ಯಾ ತಂದೆ ಶಿವಯ್ಯಾ ಹಿರೇಮಠ, ಪ್ರಾಯ-25 ವರ್ಷ, ವೃತ್ತಿ-ಖಾಸಗಿ ಕಂಪನಿಯಲ್ಲಿ ಕೆಲಸ, ಸಾ|| ಡಿ.ಟಿ ರಸ್ತೆ, ತಾ: ಯಲ್ಲಾಪುರ ರವರು ದಿನಾಂಕ: 13-10-2021 ರಂದು 08-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 130/2021, ಕಲಂ: 8, 9, 11 Karnataka Prevention of cow slaughter & Cattle prevention Act-1964 ಹಾಗೂ ಕಲಂ: 11(1)(A)(D)(E) Prevention Of Cruelty to Animals Act-1960 ಮತ್ತು ಕಲಂ: 192(A) ಐ.ಎಮ್.ವಿ ಎಕ್ಟ್-1988 ನೇದ್ದರ ವಿವರ...... ನಮೂದಿತ ಆರೋಪಿತರು 1]. ಶಿವಾನಂದ ತಂದೆ ಗಂಗಾಧರ ಗೌಡ, ಪ್ರಾಯ-41 ವರ್ಷ, ವೃತ್ತಿ-ಚಾಲಕ, ಸಾ|| ಬಿಳಗಿ, ತಾ: ಸಿದ್ದಾಪುರ, 2]. ಗೋವಿಂದ ತಂದೆ ಮಾಬ್ಲಾ ಗೌಡ, ಪ್ರಾಯ-62 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಿಲವಳ್ಳಿ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರು ದಿನಾಂಕ; 13-10-2021 ರಂದು ಟಾಟಾ ಜೀಪ್ ವಾಹನ ನಂ: ಕೆ.ಎ-45/4819 ನೇದರಲ್ಲಿ ಒಂದು ಆಕಳು ಹಾಗೂ ಒಂದು ಆಕಳಿನ ಗಂಡು ಕರುವನ್ನು ಅಧಿಕೃತ ಪಾಸ್ ಯಾ ಪರ್ಮಿಟ್ ಇಲ್ಲದೇ, ಸರಿಯಾದ ಕಂಪಾರ್ಟಮೆಂಟಿನ ವ್ಯವಸ್ಥೆ ಹಾಗೂ ಜಾನುವಾರುಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡದೇ ಹಿಂಸಾತ್ಮಕವಾಗಿ ತುಂಬಿಕೊಂಡು ವಧೆ ಮಾಡುವ ಉದ್ದೇಶಕ್ಕೆ ಕಿಲವಳ್ಳಿ ಕಡೆಯಿಂದ ಚಂದ್ರಗುತ್ತಿ ಕಡೆಗೆ ಸಾಗಾಟ ಮಾಡುತ್ತಿದ್ದಾಗ ಸಮಯ 16-00 ಗಂಟೆಗೆ ಬಿಳಗಿಯಿಂದ ಕಿಲವಳ್ಳಿ ಕಡೆಗೆ ಹೋಗುವ ಕ್ರಾಸ್ ಹತ್ತಿರ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀ ಆದರ್ಶ ತಂದೆ ನಾಗೇಶ ಪೈ, ಪ್ರಾಯ-45 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬಿಳಗಿ, ತಾ: ಸಿದ್ದಾಪುರ ರವರು ದಿನಾಂಕ: 13-10-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 13-10-2021

at 00:00 hrs to 24:00 hrs

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 27/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಗಣೇಶ ತಂದೆ ಸುಬ್ರಾಯ ನಾಯ್ಕ, ಪ್ರಾಯ-24 ವರ್ಷ, ವೃತ್ತಿ-ಮುತ್ತೂಟ್ ಫೈನಾನ್ಸ್ ನಲ್ಲಿ ಕೆಲಸ, ಸಾ|| ಕಂಠದಹಿತ್ಲ, ದೇವಿಖಾನ, ಪೋ: ಕಾಯ್ಕಿಣಿ, ತಾ: ಭಟ್ಕಳ. ಪಿರ್ಯಾದಿಯ ಅಕ್ಕನ ಮಗನಾದ ಈತನು ಮುರ್ಡೇಶ್ವರದ ಮುತ್ತೂಟ್ ಫೈನಾನ್ಸನಲ್ಲಿ ಕೆಲಸ ಮಾಡಿಕೊಂಡಿದ್ದವನು, ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ದಿನಾಂಕ: 13-10-2021 ರಂದು 20-00 ಗಂಟೆಯಿಂದ 20-40 ಗಂಟೆಯ ನಡುವಿನ ಅವಧಿಯಲ್ಲಿ ಬಸ್ತಿ ರೈಲ್ವೆ ಬ್ರಿಡ್ಜ್ ಹತ್ತಿರ ರೈಲ್ವೆ ಹಳಿಗೆ ತಲೆ ಕೊಟ್ಟು ಕುತ್ತಿಗೆಯ ಮೇಲೆ ಯಾವುದೋ ಒಂದು ರೈಲ್ವೆ ಹಾಯ್ದು ದೇಹದಿಂದ ಕುತ್ತಿಗೆಯ ಭಾಗ ಬೇರ್ಪಟ್ಟು ಮೃತಪಟ್ಟಿದ್ದು, ಈ ಕುರಿತು ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕೃಷ್ಣ ತಂದೆ ಚೌಡ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಚೌಡನಮನೆ, ಎಣ್ಣೆಬೊಳೆ, ದೇವಿಖಾನ, ಪೋ: ಕಾಯ್ಕಿಣಿ, ತಾ: ಭಟ್ಕಳ ರವರು ದಿನಾಂಕ: 13-10-2021 ರಂದು 22-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 14-10-2021 05:25 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080