ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 13-09-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 78/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಶ್ರಾವಣ ರುಮೋ ಗಿರಫ್, ಪ್ರಾಯ-49 ವರ್ಷ, 2]. ಚಂದ್ರಕಾಂತ ಮೋಹನ ತಾರಿ, ಪ್ರಾಯ-39 ವರ್ಷ. 3]. ಕಿಶನ್ ಸೈರು ಮೋರ್ಜೆ, 4]. ರಾಜು ಸೂರ್ಯಕಾಂತ ಸಾದಿಯೇ, 5]. ಕಿರಣ ಗಂಗಾರಾಮ ಜೋಶಿ, 6]. ಗೌಸ ಮೊಹಮ್ಮದ  ಗೌಸ್, 7]. ಶಿವರಾಮ ಕೇಳಸ್ಕರ್ ಹಾಗೂ ಇತರರು, ಸಾ|| (ಎಲ್ಲರೂ) ನಂದನಗದ್ದಾ, ಕಾರವಾರ. ಈ ನಮೂದಿತ ಆರೋಪಿತರೆಲ್ಲರೂ ದಿನಾಂಕ: 12-09-2021 ರಂದು ರಾತ್ರಿ 18-05 ಗಂಟೆಗೆ ಕಾರವಾರ ನಂದನಗದ್ದಾದ ಸಣ್ಣ ಮಸೀದಿ ಹಿಂದೆ ತಾರಿವಾಡಾ ಬ್ರಹ್ಮಕಟ್ಟಾ ಬಳಿ ಬ್ರಹ್ಮಕಟ್ಟಾ ಹಾಲ್ ಎದುರಿಗೆ ಸಾರ್ವಜನಿಕ ಸ್ಥಳದಲ್ಲ್ಲಿ ಗುಂಪಾಗಿ ಕುಳಿತು ಅಂದರ್-ಬಾಹರ್ ಎಂಬ ಇಸ್ಪೀಟ್ ಜುಗಾರಾಟ ಆಡುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ನಡೆಸಿದಾಗ ಸ್ಪೀಟ್ ಜೂಗಾರಾಟದ ಸಲಕರಣೆಗಳು ಹಾಗೂ ನಗದು ಹಣ 2,225/- ರೂಪಾಯಿಗಳೊಂದಿಗೆ ಆರೋಪಿ 1 ಹಾಗೂ 2 ನೇಯವರು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 3 ರಿಂದ 7 ನೇಯವರು ಹಾಗೂ ಇತರರು ಓಡಿ ಹೋಗಿ ಪರಾರಿಯಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷಕುಮಾರ ಎಮ್, ಪಿ.ಎಸ್.ಐ (ಕಾ&ಸು), ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 13-09-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 145/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷಕುಮಾರ ತಂದೆ ಶಂಕರ ಕಲ್ಯಾಣಶೆಟ್ಟಿ, ಪ್ರಾಯ-51 ವರ್ಷ, ವೃತ್ತಿ-ವ್ಯವಹಾರ, ಸಾ|| ಶಿವರಂಜನಿ ಬಿಲ್ಡಿಂಗ್, ಎಸ್.ಪಿ ಆಫೀಸ್ ಎದುರು, ಬೆಳಗಾವಿ ರೋಡ್, ಧಾರವಾಡ-1, ಹಾಲಿ ಸಾ|| ಮಲಾಡಿ, ಮುಂಬೈ (ಕಾರ್ ನಂ: ಎಮ್.ಎಚ್-43/ಎ.ಎಲ್-0443 ನೇದರ ಚಾಲಕ). ಈತನು ದಿನಾಂಕ: 04-09-2021 ರಂದು 14-45 ಗಂಟೆಗೆ ಯಲ್ಲಾಪುರ ತಾಲೂಕಿನ ಹಳಿಯಾಳ ಕ್ರಾಸಿನಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಕಾರ್ ನಂ: ಎಮ್.ಎಚ್-43/ಎ.ಎಲ್-0443 ನೇದನ್ನು ಧಾರವಾಡ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು ರಸ್ತೆಯ ಮೇಲೆ ಒಂದು ದನ ಅಡ್ಡ ಬಂದಿದ್ದರಿಂದ, ದನ ತಪ್ಪಿಸಲು ರಸ್ತೆಯ ಬದಿಗೆ ತೆಗೆದುಕೊಂಡಾಗ ಕಾರಿನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ದಿಬ್ಬಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಕಾರನ್ನು ಜಖಂಗೊಳಿಸಿ, ಕಾರಿನಲ್ಲಿದ್ದ 1). ಉಮಾ ಸಂತೋಷಕುಮಾರ ಕಲ್ಯಾಣಶೆಟ್ಟಿ, ಇವರಿಗೆ ಬಲತೊಡೆಗೆ, ಸೊಂಟಕ್ಕೆ, 2). ಗುರುರಾಜ ಶಂಕರ ಕಲ್ಯಾಣಶೆಟ್ಟಿ, ಇವರಿಗೆ ತಲೆಗೆ, ಎದೆಗೆ, 3). ವಿನುತಾ ಗುರುರಾಜ ಕಲ್ಯಾಣಶೆಟ್ಟಿ, ಸಾ|| (ಎಲ್ಲರೂ) ಧಾರವಾಡ ಇವರಿಗೆ ತಲೆಗೆ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿರಾಜ ತಂದೆ ಗುರುರಾಜ ಕಲ್ಯಾಣಶೆಟ್ಟಿ, ಪ್ರಾಯ-24 ವರ್ಷ, ವೃತ್ತಿ-ಡಿಸೈನ್ ಇಂಜಿನಿಯರ್, ಸಾ|| ಶಿವರಂಜನಿ ಬಿಲ್ಡಿಂಗ್, ಎಸ್.ಪಿ ಆಫೀಸ್ ಎದುರು, ಬೆಳಗಾವಿ ರೋಡ್, ಧಾರವಾಡ-1 ರವರು ದಿನಾಂಕ: 13-09-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 148/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಕುಮಾರಿ: ಜಯಲಕ್ಷ್ಮೀ ತಂದೆ ಪಾರಿಶ ಚಿಂತೂನವರ, ಪ್ರಾಯ-27 ವರ್ಷ, ವೃತ್ತಿ-ಅತಿಥಿ ಶಿಕ್ಷಕಿ, ಸಾ|| ಹವಗಿ, ತಾ: ಹಳಿಯಾಳ. ಪಿರ್ಯಾದಿಯವರ ಮಗಳಾದ ಇವಳು ಹಳಿಯಾಳ ತಾಲೂಕಿನ ಸಾಂಬ್ರಾಣಿ ಗ್ರಾಮದ ಹೈಸ್ಕೂಲಿನಲ್ಲಿ ಅತಿಥಿ ಶಿಕ್ಷಕಿಯಾಗಿದ್ದು, ದಿನಾಲು ಹವಗಿ ಗ್ರಾಮದ ತಮ್ಮ ಮನೆಯಿಂದ ಸಾಂಬ್ರಾಣಿ ಹೈಸ್ಕೂಲಿಗೆ ಹೋಗಿ ಬಂದು ಮಾಡುತ್ತಿದ್ದವಳು, ದಿನಾಂಕ: 07-09-2021 ರಂದು ಬೆಳಿಗ್ಗೆ 09-00 ಗಂಟೆಗೆ ಹಳಿಯಾಳ ತಾಲೂಕಿನ ಹವಗಿ ಗ್ರಾಮದ ತಮ್ಮ ಮನೆಯಿಂದ ‘ಸಾಂಬ್ರಾಣಿ ಹೈಸ್ಕೂಲಿಗೆ ಹೋಗಿ ಬರುತ್ತೇನೆ’ ಅಂತಾ ಹೇಳಿ ಹೋದವಳು, ವಾಪಸ್ ಮನೆಗೆ ಬರದೇ, ಸಂಬಂಧಿಕರ ಮನೆಗೂ ಹೋಗದೇ ಎಲ್ಲಿಯೋ ಕಾಣೆಯಾಗಿರುತ್ತಾಳೆ. ಸದ್ರಿ ಕಾಣೆಯಾದ ತನ್ನ ಮಗಳನ್ನು ಹುಡುಕಿಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪಾರೀಶ ತಂದೆ ದೇವೇಂದ್ರ ಚಿಂತೂನವರ, ಪ್ರಾಯ-68 ವರ್ಷ, ವೃತ್ತಿ-ನಿವೃತ್ತ ನೌಕರ, ಸಾ|| ಹವಗಿ, ತಾ: ಹಳಿಯಾಳ ರವರು ದಿನಾಂಕ: 13-09-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 149/2021, ಕಲಂ: 79, 80 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಚಿದಾನಂದ ತಾನಪ್ಪ ಹರಿಜನ, ಸಾ|| ಮುರ್ಕವಾಡ, ತಾ: ಹಳಿಯಾಳ, 2]. ಶಿವರಾಯ ತಂದೆ ಮಾರುತಿ ಮಾಣೆ, ಪ್ರಾಯ-27 ವರ್ಷ, ವೃತ್ತಿ-ಹೇರ್ ಕಟಿಂಗ್ ಕೆಲಸ, ಸಾ|| ಮಾರುತಿ ಗಲ್ಲಿ, ಮುರ್ಕವಾಡ, ತಾ: ಹಳಿಯಾಳ, 3]. ವಿನಾಯಕ ತಂದೆ ವಾಸುದೇವ ದುಂಡಸಿ, ಪ್ರಾಯ-23 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಮುರ್ಕವಾಡ, ತಾ: ಹಳಿಯಾಳ, 4]. ವೆಂಕಟೇಶ ತಂದೆ ಅನೀಲ್ ಕಾಂಬ್ಳೆ, ಪ್ರಾಯ-21 ವರ್ಷ, ವೃತ್ತಿ-ಗೌಂಡಿ ಕೆಲಸ ಸಾ|| ಮುರ್ಕವಾಡ, ತಾ: ಹಳಿಯಾಳ, 5]. ಮಾದೇವ ತಂದೆ ಚನ್ನಬಸಪ್ಪಾ ಇಂಗಳಗಿ, ಪ್ರಾಯ-31 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾಳಗಿನಕೊಪ್ಪ, ತಾ: ಹಳಿಯಾಳ, 6]. ಶ್ರೀಕಾಂತ ತಂದೆ ಮಾರುತಿ ವಡ್ಡರ, ಪ್ರಾಯ-31 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮುರ್ಕವಾಡ, ತಾ: ಹಳಿಯಾಳ, 7]. ಅಶೋಕ ತಂದೆ ಹನುಮಂತ ಗಡಾದವರ, ಪ್ರಾಯ-35 ವರ್ಷ, ವೃತ್ತಿ-ಚಿಕನ್ ಸೆಂಟರ್, ಸಾ|| ಮುರ್ಕವಾಡ, ತಾ: ಹಳಿಯಾಳ, 8]. ಬಸವರಾಜ್ ತಂದೆ ಬಾಬು ವಡ್ಡರ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮುರ್ಕವಾಡ, ತಾ: ಹಳಿಯಾಳ, 9]. ಗಾಂಧಿ ತಂದೆ ರಾಮಚಂದ್ರ ವಡ್ಡರ, ಪ್ರಾಯ-46 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಜನಗಾ, ತಾ: ಹಳಿಯಾಳ, 10]. ನಾರಾಯಣ ತಂದೆ ಫಕೀರಪ್ಪಾ ಜಾಲಗಾರ, ಪ್ರಾಯ-27 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಮುಗದಕೊಪ್ಪ, ತಾ: ಹಳಿಯಾಳ, 11]. ಪೀಶಪ್ಪ ತಂದೆ ವೀರಭದ್ರ ಮಾಚಕ, ಪ್ರಾಯ-28 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಮುರ್ಕವಾಡ, ತಾ: ಹಳಿಯಾಳ, 12]. ಅಲ್ತಾಪ್ ತಂದೆ ದಾದಾಸಾಬ ದೊಡ್ಡಮನಿ, ಪ್ರಾಯ-40 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ಜೋಗನಕೊಪ್ಪ, ತಾ: ಹಳಿಯಾಳ, 13]. ಸಾಗರ ತಂದೆ ಕೃಷ್ಣಾ ಜಿತೂರಿ, ಪ್ರಾಯ-39 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಕೆನರಾ ಬ್ಯಾಂಕ್ ಹತ್ತಿರ, ತಾ: ಹಳಿಯಾಳ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದ ಇಕೋ ಕ್ಲಬ್ಬಿನ ಮಾಲೀಕನಿದ್ದು, ಸದರ ಆರೋಪಿ 1 ನೇಯವನ ಅಣತಿಯಂತೆ ಸದರ ಕ್ಲಬ್ಬಿನಲ್ಲಿ ಉಳಿದ ಆರೋಪಿ 2 ರಿಂದ 13 ನೇಯವರು ತಮ್ಮ ತಮ್ಮ ಅಕ್ರಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣ ಪಂಥ ಕಟ್ಟಿ ಅಂದರ್-ಬಾಹರ್ ಜೂಗಾರಾಟ ಆಡುತ್ತಿದ್ದಾಗ ದಿನಾಂಕ: 13-09-2021 ರಂದು 00-15 ಗಂಟೆಗೆ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ ನಗದು ಹಣ 28,640/- ರೂಪಾಯಿ ಮತ್ತು 52 ಇಸ್ಪೀಟ್ ಎಲೆಗಳು, ಮಂಡದ ಚಾಪೆ ಇವುಗಳೊಂದಿಗೆ ಸಿಕ್ಕಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಿವಾನಂದ ನಾವದಗಿ, ಪಿ.ಎಸ್.ಐ (ಕಾ&ಸು), ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 13-09-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 150/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಶ್ರೀಮತಿ ದೇವಕ್ಕ ಕೋಂ. ಸೋಮನಿಂಗ ಲೊಂಡಿ, ಪ್ರಾಯ-37 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಬಿ.ಕೆ ಹಳ್ಳಿ, ತಾ: ಹಳಿಯಾಳ. ಪಿರ್ಯಾದಿಯವರ ಹೆಂಡತಿಯಾದ ಇವಳು ದಿನಾಂಕ: 11-09-2021 ರಂದು ಪಿರ್ಯಾದಿ ಮತ್ತು ಅವರ ಮನೆಯವರು ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದಾಗ ಅವಳೂ ಸಹ ಮನೆಯಲ್ಲಿಯೇ ಮಲಗಿದ್ದವಳು, ದಿನಾಂಕ: 12-09-2021 ರಂದು ಬೆಳಿಗ್ಗೆ 05-00 ಗಂಟೆಗೆ ಪಿರ್ಯಾದಿಯವರು ಬಾತ್ ರೂಮಿಗೆ ಹೋಗಿ ಬಂದು ನೋಡಿದಾಗ ಮಲಗಿದ್ದವಳು, ಬೆಳಿಗ್ಗೆ 06-00 ಗಂಟೆಯ ಸುಮಾರಿಗೆ ಹೊಲಕ್ಕೆ ಹೋಗಲು ಎದ್ದು ನೋಡಿದಾಗ ಮೆನಯಲ್ಲಿ ಕಾಣಿಸಲಿಲ್ಲ. ದೇವಕ್ಕ ಇವಳು ಪಕ್ಕದ ಮನೆಗೂ ಹೋಗದೇ, ಸಂಬಂಧಿಕರ ಮನೆಗೂ ಹೋಗದೇ ಎಲ್ಲಿಯೋ ಕಾಣೆಯಾಗಿರುತ್ತಾಳೆ. ಸದ್ರಿ ಕಾಣೆಯಾದ ತನ್ನ ಹೆಂಡತಿಯನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸೋಮನಿಂಗ ತಂದೆ ದೇಮಣ್ಣ ಲೊಂಡಿ, ಪ್ರಾಯ-42 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬಿ.ಕೆ ಹಳ್ಳಿ, ತಾ: ಹಳಿಯಾಳ ರವರು ದಿನಾಂಕ: 13-09-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 115/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಗಣಪತಿ ತಂದೆ ಬೂತ ಮಡಿವಾಳ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಪುಟ್ಟೇನಹಕ್ಲು, ಬೇಡ್ಕಣಿ, ತಾ: ಸಿದ್ದಾಪುರ, 2]. ನಾಗರಾಜ ತಂದೆ ಕನ್ನಾ ನಾಯ್ಕ, ಪ್ರಾಯ-41 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹೊಸಳ್ಳಿ, ಪೊ; ಗುಂಜಗೋಡ, ತಾ: ಸಿದ್ದಾಪುರ, 3]. ನಿತಿನಕುಮಾರ ತಂದೆ ಗಣಪತಿ ಮಡಿವಾಳ, ಪ್ರಾಯ-27 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಪುಟ್ಟೇನಹಕ್ಲು, ಬೇಡ್ಕಣಿ, ತಾ: ಸಿದ್ದಾಪುರ, 4]. ನಾಗರಾಜ ತಂದೆ ಬೂತ ಮಡಿವಾಳ, ಪ್ರಾಯ-42 ವರ್ಷ, ವೃತ್ತಿ-ಹಮಾಲಿ ಕೆಲಸ, ಸಾ|| ಪುಟ್ಟೇನಹಕ್ಲು, ಬೇಡ್ಕಣಿ, ತಾ: ಸಿದ್ದಾಪುರ, 5]. ರಮೇಶ ತಂದೆ ತಿಮ್ಮಾ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಪುಟ್ಟೇನಹಕ್ಲು, ಬೇಡ್ಕಣಿ, ತಾ: ಸಿದ್ದಾಪುರ, 6]. ಪಾಂಡುರಂಗ ತಂದೆ ಮಂಜುನಾಥ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹಕ್ಕಲಗೇರಿ, ಬೇಡ್ಕಣಿ, ತಾ: ಸಿದ್ದಾಪುರ, 7]. ಶ್ರೀಪತಿ ತಂದೆ ಶಿವರಾಮ ನಾಯ್ಕ, ಪ್ರಾಯ-29 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಪುಟ್ಟೇನಹಕ್ಲು, ಬೇಡ್ಕಣಿ, ತಾ: ಸಿದ್ದಾಪುರ, 8]. ಶಂಕರ ತಂದೆ ಗೋವಿಂದ ನಾಯ್ಕ, ಪ್ರಾಯ-44 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಪುಟ್ಟೇನಹಕ್ಲು, ಬೇಡ್ಕಣಿ, ತಾ: ಸಿದ್ದಾಪುರ, 9]. ಅಣ್ಣಪ್ಪ ತಂದೆ ಬಂಗಾಯ್ರ್ಯ ನಾಯ್ಕ, ಪ್ರಾಯ-25 ವರ್ಷ, ವೃತ್ತಿ-ಹೊಟೇಲ್ ಸಪ್ಲಾಯರ್, ಸಾ|| ಪುಟ್ಟೇನಹಕ್ಲು, ಬೇಡ್ಕಣಿ, ತಾ: ಸಿದ್ದಾಪುರ, 10]. ಸಂತೋಷ ತಂದೆ ವಾಸುದೇವ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಪುಟ್ಟೇನಹಕ್ಲು, ಬೇಡ್ಕಣಿ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರು ದಿನಾಂಕ: 12-09-2021 ರಂದು ಸಿದ್ದಾಪುರ ತಾಲೂಕಿನ ಬೇಡ್ಕಣಿಯ ಪುಟ್ಟೇನಹಕ್ಲುವಿನಲ್ಲಿರುವ ಆರೋಪಿ 1 ನೇಯವನ ಮನೆಯ ಪಕ್ಕದ ಖಲ್ಲಾ ಜಾಗದಲ್ಲಿ ಸೇರಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಗಾರಾಟ ಆಡುತ್ತಿದ್ದಾಗ ಪಿರ್ಯಾದಿಯವರು 18-30 ಗಂಟೆಗೆ ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ ಆರೋಪಿತರೆಲ್ಲರೂ 1). ನಗದು ಹಣ 12,090/- ರೂಪಾಯಿ, 2). 52 ಇಸ್ಪೀಟ್ ಎಲೆಗಳು, 3). ಮಂಡಕ್ಕೆ ಹಾಸಿದ್ದ ಒಂದು ಕಂಬಳಿಯೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 13-09-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 116/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಕೃಷ್ಣ ತಂದೆ ಕರಿಯಾ ನಾಯ್ಕ, ಪ್ರಾಯ-43 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಗುಡ್ಡೇಕೆರಿ, ಮನ್ಮನೆ, ತಾ: ಸಿದ್ದಾಪುರ, 2]. ಕೃಷ್ಣ ತಂದೆ ಶಿವಾ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕೊಪ್ಪದಕೇರಿ, ಮನ್ಮನೆ, ತಾ: ಸಿದ್ದಾಪುರ, 3]. ಕಮಲಾಕರ ತಂದೆ ಶಿವರಾಮ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಸಾಲಗೇರಿ, ಮನ್ಮನೆ, ತಾ: ಸಿದ್ದಾಪುರ, 4]. ಉಮೇಶ ತಂದೆ ರಾಜು ನಾಯ್ಕ, ಪ್ರಾಯ-31 ವರ್ಷ, ವೃತ್ತಿ-ಚಾಲಕ, ಸಾ|| ದೊಡ್ಡೂರು, ಮನ್ಮನೆ, ತಾ: ಸಿದ್ದಾಪುರ, 5]. ದೇವೇಂದ್ರ ತಂದೆ ವೀರಭದ್ರ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಗಾರೆ ಕೆಲಸ, ಸಾ|| ಮನ್ಮನೆ, ತಾ: ಸಿದ್ದಾಪುರ, 6]. ಈಶ್ವರ ತಂದೆ ಸಿದ್ದಾ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಸ್ವಂತೆ, ತಾ: ಸಿದ್ದಾಪುರ, 7]. ರಾಜಕುಮಾರ ತಂದೆ ಈಶ್ವರ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಗಾರೆ ಕೆಲಸ, ಸಾ|| ಸಾಲಗೇರಿ, ಮನ್ಮನೆ, ತಾ: ಸಿದ್ದಾಪುರ, 8]. ಮಾಸ್ತ್ಯಾ ಚೌಡಾ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮನ್ಮನೆ, ಕಾನಕೇರಿ, ತಾ: ಸಿದ್ದಾಪುರ, 9]. ಧನಂಜಯ ತಂದೆ ಮಂಜುನಾಥ ನಾಯ್ಕ, ಪ್ರಾಯ-33 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಸಾಲಗೇರಿ, ಮನ್ಮನೆ, ತಾ: ಸಿದ್ದಾಪುರ, 10]. ರಮೇಶ ತಂದೆ ಗಣಪತಿ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಸಾಲಗೇರಿ, ಮನ್ಮನೆ, ತಾ: ಸಿದ್ದಾಪುರ, 11]. ದೇವರಾಜ ತಂದೆ ನಾಗರಾಜ ನಾಯ್ಕ, ಪ್ರಾಯ-43 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹೊನ್ನುಕಾರ, ಮಳವಳ್ಳಿ, ತಾ: ಸಿದ್ದಾಪುರ, 12]. ಮೋಹನ ತಂದೆ ಗಣಪತಿ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಸಾಲಗೇರಿ, ಮನ್ಮನೆ, ತಾ: ಸಿದ್ದಾಪುರ, 13]. ವಾಸುದೇವ ತಂದೆ ಕನ್ನಾ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ದೊಡ್ಡೂರು, ಮನ್ಮನೆ, ತಾ: ಸಿದ್ದಾಪುರ, 14]. ಚಂದ್ರಶೇಖರ ತಂದೆ ಮಂಜಪ್ಪ ನಾಯ್ಕ, ಪ್ರಾಯ-28 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ತಲವಾಟ, ತಾ: ಸಿದ್ದಾಪುರ, 15]. ರಮೇಶ ತಂದೆ ದುರ್ಗಪ್ಪ ನಾಯ್ಕ, ಪ್ರಾಯ-37 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮನ್ಮನೆ, ತಾ: ಸಿದ್ದಾಪುರ, 16]. ಅಣ್ಣಪ್ಪ ತಂದೆ ರಾಮಾ ನಾಯ್ಕ, ಪ್ರಾಯ-40 ವರ್ಷ, ಸಾ|| ಮನ್ಮನೆ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರು ದಿನಾಂಕ: 13-09-2021 ರಂದು 01-00 ಗಂಟೆಗೆ ಸಿದ್ದಾಪುರ ತಾಲೂಕಿನ ಮನ್ಮನೆಯ ಶ್ರೀ ಶನೇಶ್ವರ ದೇವಸ್ಥಾನದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜುಗಾರಾಟ ಆಡುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಸೇರಿ ದಾಳಿ ಮಾಡಿದಾಗ ಆರೋಪಿತರು 1). ನಗದು ಹಣ 37,200/- ರೂಪಾಯಿ, 2). 52 ಇಸ್ಪೀಟ್ ಎಲೆಗಳು, 3). ಮಂಡಕ್ಕೆ ಹಾಸಿದ್ದ ಒಂದು ಪ್ಲಾಸ್ಟಿಕ್ ಚೀಲ, 4). ಅರ್ಧ ಉರಿದ ಕ್ಯಾಂಡಲ್‍ಗಳು-08, ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕುಮಾರ ಕೆ, ಪೊಲೀಸ್ ನಿರೀಕ್ಷಕರು, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 13-09-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 117/2021, ಕಲಂ: 307, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸುಮನ ತಂದೆ ಶಂಕರ ಗೌಡ, ಸಾ|| ಹರಳಿಕೊಪ್ಪ, ಪೋ: ಅಕ್ಕುಂಜಿ, ತಾ: ಸಿದ್ದಾಪುರ, 2]. ಅರುಣಕುಮಾರ ತಂದೆ ಕೇರಿಯಾ ನಾಯ್ಕ, ಸಾ|| ಅವರಗುಪ್ಪ, ತಾ: ಸಿದ್ದಾಪುರ, 3]. ರಾಮಕುಮಾರ ನಾಯ್ಕ, ಸಾ|| ಕಾನಗೋಡ, ತಾ: ಸಿದ್ದಾಪುರ, 4]. ಮಲ್ಲಿಕಾರ್ಜುನ ಪಾಟೀಲ್, ಸಾ|| ಬೆನ್ನೂರ, ತಾ: ಸೊರಬಾ, ಜಿ: ಶಿವಮೊಗ್ಗ. ಈ ನಮೂದಿತ ಆರೋಪಿತರ ಪೈಕಿ ಆರೋಪಿ 1 ನೇಯವನು ಗಾಯಾಳು ಪವನ ರಾಜು ನಾಯ್ಕ ಈತನ ಸ್ನೇಹಿತನಿದ್ದು, ಪವನ ನಾಯ್ಕ ಈತನ ತಂಗಿಯನ್ನು ಈ ಹಿಂದೆ ನೋಡಿದ್ದವನು, ಅವಳ ಮೇಲೆ ಮನಸ್ಸಾಗಿ ಅವಳ ಮೊಬೈಲ್ ನಂಬರ್ ಕೊಡುವಂತೆ ಆಗಾಗ ಪವನ್ನ ಈತನನ್ನು ಪೀಡಿಸುತ್ತಿದ್ದವನು. ಪವನ ಅವನ ತಂಗಿಯ ನಂಬರ್ ಕೊಡದೇ ಇದ್ದುದಕ್ಕೆ ಸಿಟ್ಟಿನಿಂದ ಇದ್ದವನು, ದಿನಾಂಕ: 13-09-2021 ರಂದು ಮಧ್ಯಾಹ್ನ ಪವನ್ ಈತನಿಗೆ ಪೋನ್ ಮಾಡಿ ‘ಅವರಗುಪ್ಪಾ ಕಾಲೇಜಿನ ಹಿಂಬದಿ ಬಾ’ ಎಂದು ಕರೆದಿದ್ದು ಆಗ ಪವನ್ ಈತನು ಪಿರ್ಯಾದಿಯೊಂದಿಗೆ ಅವರಗುಪ್ಪ ಕಾಲೇಜಿನ ಹಿಂಭಾಗಕ್ಕೆ ಹೋದಾಗ ಮಧ್ಯಾಹ್ನ 02-30 ಗಂಟೆಯ ಸುಮಾರಿಗೆ ಅಲ್ಲಿ ಇನ್ನೂಳಿದ 3 ಜನ ಆರೋಪಿತರೊಂದಿಗೆ ಇದ್ದವನು ’ಸೂಳೆ ಮಗನೇ ನಿನ್ನ ತಂಗಿ ಪೋನ್ ನಂಬರ್ ಕೊಡು ಅಂದರೆ ಬಾಳ ಮಾತನಾಡ್ತಿಯಲ್ಲ. ಸೂಳೆ ಮಗನೇ, ನಿನಗೆ ಒಂದು ಗತಿ ಕಾಣಿಸುತ್ತೇನೆ’ ಅಂತಾ ಹೇಳಿದವನೇ ಪವನ್ ಈತನಿಗೆ ಕುತ್ತಿಗೆ ಬಗ್ಗಿಸಿ, ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಚಾಕುವಿನಿಂದ ಪವನ್ ಈತನ ಹೊಟ್ಟೆಗೆ ಬಲವಾಗಿ ಎರಡು ಬಾರಿ ಇರಿದು, ಹೊಟ್ಟೆಗೆ ಎರಡು ಕಡೆಗೆ ಮಾರಣಾಂತಿಕ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಶಶಿಕುಮಾರ ತಂದೆ ರಾಜು ನಾಯ್ಕ, ಪ್ರಾಯ-23 ವರ್ಷ, ವೃತ್ತಿ-ಸ್ವೀಟ್ ಕಾರ್ನರ್ ಅಂಗಡಿ ವ್ಯಾಪಾರ, ಸಾ|| ಕೇಸಿನಗುಡ್ಡೆ, ಶಿರಳಗಿ, ತಾ: ಸಿದ್ಧಾಪುರ ರವರು ದಿನಾಂಕ: 13-09-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 13-09-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 53/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಪ್ರಕಾಶ ತಂದೆ ವೆಂಕಪ್ಪ ಗೌಡ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೆಳಸೆ, ತೆಂಕನಾಡ, ತಾ: ಅಂಕೋಲಾ. ಪಿರ್ಯಾದಿಯ ತಮ್ಮನಾದ ಈತನು ದಿನಾಂಕ: 11-09-2021 ರಂದು ಸಂಜೆ 07-00 ಗಂಟೆಗೆ ಮನೆ-ಮನೆಯ ಗಣಪತಿ ಮೂರ್ತಿ ವಿಸರ್ಜನೆ ಮಾಡಲು ಬೆಳಸೆ ಹಳ್ಳಕ್ಕೆ ಹೋದವನು, ಇದುವರೆಗೆ ಮನೆಗೆ ಬಾರದೇ ಮೃತನು ಕಾಣೆಯಾಗಿದ್ದು, ದಿನಾಂಕ: 13-09-2021 ರಂದು 08-00 ಗಂಟೆಗೆ ಕಲ್ಮಠದ ಹತ್ತಿರ ಈತನ ಮೃತದೇಹ ಸಿಕ್ಕಿರುತ್ತದೆ. ನನ್ನ ತಮ್ಮ ಪ್ರಕಾಶ ಈತನು ನೀರಿನಲ್ಲಿ ಮುಳುಗಿ ಮೃತಪಟ್ಟಿರುವಂತೆ ಕಂಡು ಬಂದಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಿಂಗು ತಂದೆ ವೆಂಕಪ್ಪ ಗೌಡ, ಪ್ರಾಯ-57 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೆಳಸೆ, ತೆಂಕನಾಡ, ತಾ: ಅಂಕೋಲಾ ರವರು ದಿನಾಂಕ: 13-09-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಗೋಕರ್ಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 20/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಅಭಯ ತಂದೆ ಫಕೀರಪ್ಪಾ ದೊಡ್ಡವಾಡ, ಪ್ರಾಯ-29 ವರ್ಷ, ವೃತ್ತಿ-ವೈದ್ಯರು, ಸಾ|| ಮೃತ್ಯುಂಜಯ ನಗರ, ತಾ: ಬೈಲಹೊಂಗಲ್, ಜಿ: ಬೆಳಗಾವಿ. ಈತನು ದಿನಾಂಕ: 13-09-2021 ರಂದು ರಾತ್ರಿ 02-30 ಗಂಟೆಯ ಸುಮಾರಿಗೆ ಗೋಕರ್ಣದ ಕುಡ್ಲೇ ಬೀಚಿನ ಉಮಾ ಮಹೇಶ್ವರ ಕಾಟೇಜ್ ನಲ್ಲಿ ಉಳಿದುಕೊಂಡಿದ್ದಾಗ ಎದೆನೋವು ಅಂತಾ ಹೇಳಿದಾಗ ಸದರಿಯವನಿಗೆ ಆತನ ಸಂಗಡ ಇದ್ದ ಸ್ನೇಹಿತರು ಉಪಚಾರಕ್ಕೆ ಆಸ್ಪತ್ರೆಗೆ ತಂದಾಗ ವೈದ್ಯರು ಮೃತಪಟ್ಟ ಬಗ್ಗೆ ದೃಢಪಡಿಸಿದ್ದು, ಅಭಯ ದೊಡ್ಡವಾಡ ಈತನು ಅನಾರೋಗ್ಯದಿಂದ ಅಥವಾ ಹೃದಯಾಘಾತದಿಂದ ಮೃತಪಟ್ಟಿರುತ್ತಾನೆಯೇ ಹೊರತು ಆತನ ಮರಣದಲ್ಲಿ ಬೇರೇ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹೇಶ ತಂದೆ ಮಾರುತಿ ಸೋನಾರ, ಪ್ರಾಯ-29 ವರ್ಷ, ವೃತ್ತಿ-ವೈದ್ಯರು, ಸಾ|| ಮನೆ ನಂ: 103, ಸಪ್ತಗಿರಿ ರೆಸಿಡೆನ್ಸಿ-7, ಕತ್ರಿಗುಪ್ಪೆ ಮೇನ್ ರೋಡ್, ಬನಶಂಕರಿ, 3 ನೇ ಸ್ಟೇಜ್, ಬೆಂಗಳೂರು-85 ರವರು ದಿನಾಂಕ: 13-09-2021 ರಂದು 09-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 16/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಪಾಂಡು ತಂದೆ ಈರಪ್ಪ ನಾಯ್ಕ, ಪ್ರಾಯ-61 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ತಲಾಂದ, ತಾ: ಭಟ್ಕಳ. ಇವರು ದಿನಾಂಕ: 06-09-2021 ರಂದು ಸಾಯಂಕಾಲ 04-30 ಗಂಟೆಯ ಸಮಯಕ್ಕೆ ತಲಾಂದದಲ್ಲಿರುವ ತಮ್ಮ ಮನೆಯ ತೋಟದಲ್ಲಿರುವ ತೆಂಗಿನಮರ ಹತ್ತಿ ತೆಂಗಿನಮರದ ಕಾಯಿಗಳನ್ನು ಕೊಯ್ಯುತ್ತಿರುವಾಗ ಆಕಸ್ಮಾತ್ ಕಾಲು ಜಾರಿ ನೆಲಕ್ಕೆ ಬಿದ್ದು, ಕುತ್ತಿಗೆ ಮತ್ತು ಸೊಂಟದ ಭಾಗಕ್ಕೆ ತೀವ್ರ ಪೆಟ್ಟಾಗಿ ಭಟ್ಕಳದ ಸರ್ಕಾರಿ ಆಸ್ಪತ್ರೆಗೆಗೆ ದಾಖಲಾಗಿ, ಹೆಚ್ಚಿನ ಉಚಚಾರಕ್ಕೆ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಾದವರು, ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಾಕಾರಿಯಾಗದೇ ಅವರಿಗೆ ಆದ ತೀವ್ರ ಪೆಟ್ಟಿನಿಂದ ದಿನಾಂಕ: 13-09-2021 ರಂದು ಮಧ್ಯಾಹ್ನ 01-40 ಗಂಟೆಯ ಸಮಯಕ್ಕೆ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ಪಾಂಡು ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ತಲಾಂದ, ತಾ: ಭಟ್ಕಳ ರವರು ದಿನಾಂಕ: 13-09-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 17-09-2021 10:40 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080