ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 14-04-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 71/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದತ್ತಾತ್ರೇಯ ತಂದೆ ಸಣ್ಣಪ್ಪ ನಾಯಕ, ಪ್ರಾಯ-63 ವರ್ಷ, ಸಾ| ಸುಂಕಸಾಳ, ತಾ: ಅಂಕೋಲಾ (ಸ್ಕೂಟಿ ನಂ: ಕೆ.ಎ-47/ಜೆ-1228 ನೇದರ ಸವಾರ). ಈತನು ದಿನಾಂಕ: 14-04-2021 ರಂದು ಮಧ್ಯಾಹ್ನ 12-30 ಗಂಟೆಗೆ ತನ್ನ ಸ್ಕೂಟಿ ನಂ: ಕೆ.ಎ-47/ಜೆ-1228 ನೇದನ್ನು ಹೊಸಕಂಬಿಯ ಕಡೆಯಿಂದ ಹೆಬ್ಬುಳದ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದವನು, ಹೊಸಕಂಬಿ ಬ್ರಿಡ್ಜಿನ ಹತ್ತಿರ ತನ್ನ ಸ್ಕೂಟಿಯನ್ನು ಯಾವುದೇ ಸೂಚನೆಗಳನ್ನು ನೀಡದೆ ಇಂಡಿಕೇಟರ್ ಅನ್ನು ಹಾಕದೇ ಒಮ್ಮೇಲೆ ಬಲ ಬದಿಗೆ ತೆಗೆದುಕೊಂಡು ತನ್ನ ಹಿಂದಿನಿಂದ ಅಂದರೆ ಹೊಸಕಂಬಿ ಕಡೆಯಿಂದ ಹೆಬ್ಬುಳದ ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-30/ಎಸ್-0404 ನೇದಕ್ಕೆ ಡಿಕ್ಕಿಯಾಗುವಂತೆ ಮಾಡಿ ಅಪಘಾತ ಪಡಿಸಿದ್ದು, ಮೋಟಾರ್ ಸೈಕಲ್ ನಂ: ಕೆಎ-30 ಎಸ್-0404 ನೇದರ ಸವಾರರಾದ ಪ್ರಶಾಂತ ತಂದೆ ರಮೇಶ ಗೌಡ ಮತ್ತು ರಾಮಚಂದ್ರ ತಂದೆ ಕುಪ್ಪಾ ಗೌಡ ಇವರಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಜನಾರ್ಧನ ತಂದೆ ಕುಪ್ಪಾ ಗೌಡ, ಪ್ರಾಯ-42 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹೆಬ್ಬುಳ, ತಾ: ಅಂಕೋಲಾ ರವರು ದಿನಾಂಕ: 14-04-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 72/2021, ಕಲಂ: 279, 337, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ರುದ್ರಪ್ಪ ಕೌಜಗೇರಿ, ಸಾ|| ಪ್ರಿಯದರ್ಶಿನಿ ಕಾಲೋನಿ, ಹುಬ್ಬಳ್ಳಿ (ಕಾರ್ ನಂ: ಕೆ.ಎ-63/ಎಮ್-5617 ನೇದರ ಚಾಲಕ). ಈತನು ದಿನಾಂಕ: 14-04-2021 ರಂದು ಮಧ್ಯಾಹ್ನ 15-45 ಗಂಟೆಯ ಸುಮಾರಿಗೆ ತನ್ನ ಕಾರ್ ನಂ: ಕೆ.ಎ-63/ಎಮ್-5617 ನೇದನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯಲ್ಲಿ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದವನು, ಮುಂದಿನಿಂದ ಹೋಗುತ್ತಿದ್ದ ಯಾವುದೋ ವಾಹನಕ್ಕೆ ಓವರಟೇಕ್ ಮಾಡಲು ಹೋಗಿ ರಸ್ತೆಯ ಬಲಕ್ಕೆ ಚಲಾಯಿಸಿ, ಮುಂದಿನಿಂದ ಅಂದರೆ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಲಾರಿ ನಂ: ಎಮ್.ಎಚ್-10/ಎ.ಎಡ್ಲ್ಯೂ-7882 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಗಣಪತಿ ತಂದೆ ವಿಠೋಬಾ ಗಾಂವಕರ ಈತನ ತಲೆಗೆ ಹಾಗೂ ಬಲಭುಜಕ್ಕೆ ಗಂಭೀರ ಸ್ವರೂಪದ ಗಾಯನೋವು ಪಡಿಸಿ, ಸ್ಥಳದಲ್ಲಿಯೇ ಮರಣವನ್ನುಂಟು ಮಾಡಿದ್ದಲ್ಲದೇ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರೀತಿ ಇವಳ ಮುಖಕ್ಕೆ ಹಾಗೂ ತಲೆಗೆ ಗಂಭೀರ ಸ್ವರೂಪದ ಹಾಗೂ ತನಗೂ ಕೂಡಾ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅರ್ಜುನ ತಂದೆ ಮಿಲಿಂದ ಪಾಟೀಲ್, ಪ್ರಾಯ-26 ವರ್ಷ, ವೃತ್ತಿ-ಕ್ಲೀನರ್, ಸಾ|| ವಾರುಂಜಿ, ಕರಾಡ, ಮಹಾರಾಷ್ಟ್ರ ರಾಜ್ಯ ರವರು ದಿನಾಂಕ: 14-04-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 85/2021, ಕಲಂ: 78(3) ಕರ್ನಾಟಕ ಪೊಲಿಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ನವೀನ ತಂದೆ ದತ್ತಾ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಹಂದಿಗೋಣ, ಪೋಸ್ಟ್ ಆಫೀಸ್ ಹತ್ತಿರ, ತಾ: ಕುಮಟಾ. ಈತನು ದಿನಾಂಕ: 13-04-2021 ರಂದು 11-00 ಗಂಟೆಗೆ ಹಂದಿಗೋಣ ಕನ್ನಡ ಶಾಲೆಯ ಎದುರಿಗೆ ಸಾರ್ವಜನಿಕ ಸ್ಥಳದಲಲ್ಲಿ ನಿಂತುಕೊಂಡು ತನ್ನ ಲಾಭಕ್ಕಾಗಿ ಬರ-ಹೋಗುವ ಜನರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಅದನ್ನು ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ನಗದು ಹಣ 2,150/- ರೂಪಾಯಿ ಹಾಗೂ ಓ.ಸಿ ಜುಗಾರಾಟದ ಸಲಕರಣೆಗಳೊಂದಿಗೆ ದಾಳಿಯ ವೇಳೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ (ಕಾ&ಸು-1), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 14-04-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 63/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಜೋನ್ ತಂದೆ ಲಾದ್ರು ಫರ್ನಾಂಡಿಸ್, ಪ್ರಾಯ-56 ವರ್ಷ, ಸಾ|| ಗಣಪತಿ ನಾರಾಯಣ ದೇವಸ್ಥಾನದ ಹತ್ತಿರ, ಕಾಸರಕೊಡ, ತಾ: ಹೊನ್ನಾವರ. ಈತನು ದಿನಾಂಕ: 14-04-2021 ರಂದು 19-35 ಗಂಟೆಗೆ ಮಂಕಿಯ ಕೆಳಗಿನೂರು ಚರ್ಚ್ ಎದುರು ಸಾರ್ವಜನಿಕ ಸ್ಥಳದಲ್ಲಿ ಸರಾಯಿ ಕುಡಿಯಲು ಲೈಸನ್ಸ್ ಇಲ್ಲದೇ 90 ML ಅಳತೆಯ HAYWARDS CHEERS WHISKEY ಅಂತಾ ಬರೆದಿರುವ ಸರಾಯಿ ಪ್ಯಾಕೆಟ್ ಗಳಲ್ಲಿದ್ದ ಸರಾಯಿಯನ್ನು ಇನ್ನಿತರರೊಂದಿಗೆ ಸೇರಿ ಕುಡಿಯುತ್ತಿದ್ದಾಗ ದಾಳಿ ಮಾಡಿದ ಸಮಯ 3 ಜನ ವ್ಯಕ್ತಿಗಳು ಕತ್ತಲೆಯಲ್ಲಿ ಓಡಿ ಹೋಗಿದ್ದು ಹಾಗೂ ನಮೂದಿತ ಆರೋಪಿತನು ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪರಮಾನಂದ ಬಿ. ಕೊಣ್ಣೂರ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 14-04-2021 ರಂದು 22-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 64/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಹನುಮಂತ ತಂದೆ ಮಂಜು ಗೌಡ, ಪ್ರಾಯ-55 ವರ್ಷ, ಸಾ|| ಕಳಸಿನಮೊಟೆ ಶಾಲೆಯ ಹತ್ತಿರ, ತಾ: ಹೊನ್ನಾವರ. ಈತನು ದಿನಾಂಕ: 14-04-2021 ರಂದು 21-55 ಗಂಟೆಗೆ ಕೆಳಗಿನೂರಿನಲ್ಲಿರುವ ತನ್ನ ಚಿಲ್ಲರೆ ವ್ಯಾಪಾರದ ಅಂಗಡಿಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಸರಾಯಿ ಕುಡಿಯಲು ಲೈಸನ್ಸ್ ಇಲ್ಲದೇ 180 ML ಅಳತೆಯ OLD TAVERN WHISKY ಮತ್ತು 90 ML ಅಳತೆಯ HAYWARDS CHEERS WHISKEY ಅಂತಾ ಬರೆದಿರುವ ಸರಾಯಿ ಪ್ಯಾಕೆಟ್ ಗಳಲ್ಲಿದ್ದ ಸರಾಯಿಯನ್ನು ಇನ್ನಿತರರೊಂದಿಗೆ ಸೇರಿ ಕುಡಿಯುತ್ತಿದ್ದಾಗ ದಾಳಿಯ ಸಮಯ 4 ಜನ ವ್ಯಕ್ತಿಗಳು ಕತ್ತಲೆಯಲ್ಲಿ ಓಡಿ ಹೋಗಿದ್ದು ಹಾಗೂ ನಮೂದಿತ ಆರೋಪಿತನು ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪರಮಾನಂದ ಬಿ. ಕೊಣ್ಣೂರ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 14-04-2021 ರಂದು 23-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 110/2021, ಕಲಂ: 279, 337 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಕಾರ್ ನಂ: ಕೆ.ಎ-15/ಎನ್-2681 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 14-04-2021 ರಂದು 20-00 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ಹೊನ್ನಾವರ ತಾಲೂಕಿನ ಹಡಿನಬಾಳದ ಹೆದ್ದಾರಿಕುಮರಿ ಪ್ರಸಾದ್ ಗ್ಯಾರೇಜ್ ಹತ್ತಿರ ತನ್ನ ಬಾಬ್ತು ಕಾರ್ ನಂ: ಕೆ.ಎ-15/ಎನ್-2681 ನೇದನ್ನು ಹೊನ್ನಾವರ ಕಡೆಯಿಂದ ಗೇರುಸೊಪ್ಪ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ, ಕಾರನ್ನು ಒಮ್ಮೇಲೆ ರಸ್ತೆಯ ಬಲಕ್ಕೆ ಚಲಾಯಿಸಿ, ತನ್ನ ಎದುರಿನಿಂದ ಅಂದರೆ ಹಡಿನಬಾಳ ಕಡೆಯಿಂದ ಹೊನ್ನಾವರ ಕಡೆಗೆ ಪ್ರಕರಣದ ಗಾಯಾಳುವಾದ ಗುರುರಾಜ ತಂದೆ ಶ್ರೀನಿವಾಸ ಕಾಮತ್. ಪ್ರಾಯ-47 ವರ್ಷ, ವೃತ್ತಿ-ಆಟೋರಿಕ್ಷಾ ಚಾಲಕ, ಸಾ|| ದುರ್ಗಾಕೇರಿ. ತಾ: ಹೊನ್ನಾವರ ಈತನು ಚಲಾಯಿಸಿಕೊಂಡು ಬರುತ್ತಿದ್ದ ಆಟೋರಿಕ್ಷಾ ನಂ: ಕೆ.ಎ-47/7515 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಆಟೋರಿಕ್ಷಾ ಚಾಲಕನಾದ ಗುರುರಾಜ ತಂದೆ ಶ್ರೀನಿವಾಸ ಕಾಮತ್ ಈತನ ತಲೆಗೆ, ಹಣೆಗೆ ಹಾಗೂ ಎಡಗಾಲಿನ ಮೊಣಗಂಟಿನ ಹತ್ತಿರ ಗಾಯ ಪಡಿಸಿ, ಅಪಘಾತ ಪಡಿಸಿದ ನಂತರ ಆರೋಪಿ ಕಾರ್ ಚಾಲಕನು ತನ್ನ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಗಜಾನನ ತಂದೆ ಮಾರುತಿ ಭಟ್, ಪ್ರಾಯ-52 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಲಕ್ಷ್ಮೀನಾರಾಯಣ ನಗರ, ತಾ: ಹೊನ್ನಾವರ ರವರು ದಿನಾಂಕ: 14-04-2021 ರಂದು 21-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 50/2021, ಕಲಂ: 143, 147, 341, 353, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ವಿಜಯ ಕುಮಾರ ಡುಣಗೆ, 2]. ಮಹೇಶ ನಾಯ್ಕ, 3]. ಆನಂದ ನಾಯ್ಕ, 4]. ಸತೀಶ ನಾಯ್ಕ, 5]. ವಸಂತ ನಾಯ್ಕ ಹಾಗೂ ಇತರರು, ಸಾ|| ಕೆ.ಎಸ್.ಆರ್.ಟಿ.ಸಿ ಬಸ್ ಘಟಕ, ಭಟ್ಕಳ. ದಿನಾಂಕ: 13-04-2021 ರಂದು ಮಧ್ಯಾಹ್ನ 14-30 ಗಂಟೆಯ ಸುಮಾರಿಗೆ ಕುಮಟಾ ಬಸ್ ಘಟಕದ ಬಸ್ ನಂ: ಕೆ.ಎ-25/ಎಫ್-3239 ನೇದರ ಚಾಲಕ: ಮೋಹನ ನಾಯ್ಕ ಮತ್ತು ನಿರ್ವಾಹಕ: ಎ. ಎಫ್. ನರೋನ್ಹಾ ಇವರಿಗೆ ಚಾಲಕ ಮತ್ತು ನಿರ್ವಾಹಕರನ್ನಾಗಿ ನೇಮಿಸಿ ಕುಮಟಾದಿಂದ ಭಟ್ಕಳಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಅದೇಶ ಮಾಡಿ ಕಳುಹಿಸಿ ಕೊಟ್ಟಂತೆ ಅವರು ಕುಮಟಾ ಬಸ್ ನಿಲ್ದಾಣದಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಭಟ್ಕಳ ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಇಳಿಸಿ, ಪುನಃ ಕುಮಟಾಕ್ಕೆ ಹೋಗಲು ಬಸ್ ನಿಲ್ದಾಣದಲ್ಲಿ ಬಸ್ ಅನ್ನು ನಿಲ್ಲಿಸಿ ಬಸ್ ನಿಲ್ದಾಣದ ಎದುರಿಗೆ ಇರುವ ಕರಾವಳಿ ಹೊಟೇಲಿನಲ್ಲಿ ಊಟ ಮಾಡಿ ಬಿಲ್ ಕೌಂಟರ್ ಹತ್ತಿರ ಬಂದು ಹಣ ಕೊಡುತ್ತಿರುವಾಗ ಮಧ್ಯಾಹ್ನ 02-30 ಗಂಟೆಯ ಸುಮಾರಿಗೆ ಚಾಲಕ: ಮೋಹನ ನಾಯ್ಕ ಮತ್ತು ನಿರ್ವಾಹಕ: ಎ. ಎಫ್. ನರೋನ್ಹಾ ಇವರಿಗೆ ಭಟ್ಕಳ ಬಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುವ ಆರೋಪಿತರಾದ 1, 2, 3, 4, 5 ಹಾಗೂ ಇತರರು ಸೇರಿ ಗುಂಪು ಕೂಡಿಕೊಂಡು ಬಂದು ತಡೆದು ಅಡ್ಡಗಟ್ಟಿ ‘ನಾವೆಲ್ಲರೂ ಸೇರಿ ವೇತನ ಹೆಚ್ಚು ಮಾಡುವ ಸಲುವಾಗಿ ಮುಷ್ಕರ ಮಾಡುತ್ತಿದ್ದು, ನೀವು ಕರ್ತವ್ಯಕ್ಕೆ ಬಂದು ತಮ್ಮ ಹೆಂಡತಿ ಮಕ್ಕಳ ಹೊಟ್ಟೆಗೆ ಕಾಲು ಕೊಡುತ್ತಿದ್ದೀರಾ, ಬೋಳಿ ಮಕ್ಕಳಾ?’ ಅಂತಾ ಹೇಳಿ ತಾವು ತಂದಿದ್ದ ಹೂವಿನ ಹಾರವನ್ನು ಅವರಿಗೆ ಹಾಕಿ ಅವಮಾನ ಪಡಿಸಿ, ‘ಮುಷ್ಕರ ಮುಗಿಯುವವರೆಗೆ ಮತ್ತೆ ಬಸ್ ಚಲಾಯಿಸಿಕೊಂಡು ಭಟ್ಕಳ ಬಸ್ ನಿಲ್ದಾಣಕ್ಕೆ ಬಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ’ ಅಂತಾ ಧಮಕಿ ಹಾಕಿ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಜನಾರ್ಧನ ತಂದೆ ಶಂಕರ ದಿವಾಕರ್, ಪ್ರಾಯ-45 ವರ್ಷ, ವೃತ್ತಿ-ಘಟಕ ವ್ಯವಸ್ಥಾಪಕರು, ಕೆ.ಎಸ್.ಆರ್.ಟಿ.ಸಿ ಬಸ್ ಘಟಕ, ತಾ: ಭಟ್ಕಳ, ಸಾ|| ಸೋನಾರಕೇರಿ, ಪೋ: ಹೆಗಡೆ, ತಾ: ಕುಮಟಾ ರವರು ದಿನಾಂಕ: 14-04-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 64/2021, ಕಲಂ: 143, 147, 341, 353, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶ್ರೀ ಜಯಪ್ಪಾ, ನಿರ್ವಾಹಕ (ಬಿಲ್ಲೆ ಸಂಖ್ಯೆ: 1712), 2]. ಶ್ರೀ. ಲಕ್ಷ್ಮಣ ಮೇಳಿಗೇರಿ, ಚಾಲಕ ಕಂ. ನಿರ್ವಾಹಕ (ಬಿಲ್ಲೆ ಸಂಖ್ಯೆ: 1554), 3]. ಶ್ರೀ. ಬಿ. ಎ. ಮಲ್ಲಾ, ಚಾಲಕ ಕಂ. ನಿರ್ವಾಹಕ (ಬಿಲ್ಲೆ ಸಂಖ್ಯೆ: 1233), 4]. ಶ್ರೀ. ಮುತ್ತಪ್ಪಾ ಕೆಲ್ಲೂರ್, ಚಾಲಕ ಕಂ. ನಿರ್ವಾಹಕ (ಬಿಲ್ಲೆ ಸಂಖ್ಯೆ: 1254), 5]. ಶ್ರೀ ಹನುಮಂತ್ ರಬ್ಲೇರಾ, ಚಾಲಕ ಕಂ. ನಿರ್ವಾಹಕ (ಬಿಲ್ಲೆ ಸಂಖ್ಯೆ: 1297), 6]. ಶ್ರೀ. ಅನಂದ್ ಆರ್. ಹಿರೇಮಠ್, ಚಾಲಕ ಕಂ. ನಿರ್ವಾಹಕ (ಬಿಲ್ಲೆ ಸಂಖ್ಯೆ: 543), 7]. ಶ್ರೀ. ಜಿ.ಎನ್. ಅಂಬಿಗಾ, ಚಾಕಲ (ಬಿಲ್ಲೆ ಸಂಖ್ಯೆ: 1271), 8]. ಶ್ರೀ. ಎಚ್. ಆರ್. ಆಡಿನ್, ಚಾಲಕ ಕಂ. ನಿರ್ವಾಹಕ (ಬಿಲ್ಲೆ ಸಂಖ್ಯೆ: 1192), 9]. ಶ್ರೀ. ಬಸಯ್ಯಾ ಎಸ್. ಹಿರೇಮಠ್. ತಾಂತ್ರಿಕ ಸಹಾಯಕ (ಬಿಲ್ಲೆ ಸಂಖ್ಯೆ: 943), 10]. ಶ್ರೀ. ಲಕ್ಷ್ಮಣ ಸಿ, ಕುಶಲಕರ್ಮಿ (ಬಿಲ್ಲೆ ಸಂಖ್ಯೆ: 954), 11]. ಶ್ರೀ. ಆನಂದ್ ಕೆ. ಸಿ, ತಾಂತ್ರಿಕ ಸಹಾಯಕ (ಬಿಲ್ಲೆ ಸಂಖ್ಯೆ: 986), 12]. ಶ್ರೀ. ಸಿ. ಪಿ. ವಾಗ್ಮೋರೆ, ನಿರ್ವಾಹಕ (ಬಿಲ್ಲೆ ಸಂಖ್ಯೆ: 1848), 13]. ಶ್ರೀ ರಾಜೇಶ ಎನ್. ಪಾಟಣಕರ್, ಸಹಾಯಕ ಕುಶಲಕರ್ಮಿ, 14]. ಶ್ರೀ ಗದಿಗೆಪ್ಪಾ ಬೆವಿನಗಿಡದ್, ಚಾಲಕ ಕಂ. ನಿರ್ವಾಹಕ (ಬಿಲ್ಲೆ ಸಂಖ್ಯೆ: 1602), 15]. ಶ್ರೀ ಬಿ. ಬಿ. ರಜಪೂತ್, ಚಾಲಕ ಕಂ. ನಿರ್ವಾಹಕ (ಬಿಲ್ಲೆ ಸಂಖ್ಯೆ: 1439) ಹಾಗೂ ಸದರಿವರ ಸಂಬಂಧಿ ಮಹಿಳೆಯರು, ಸಾ|| ಯಲ್ಲಾಪುರ. ಈ ನಮೂದಿತ ಆರೋಪಿತರು ಕೆ.ಎಸ್.ಆರ್.ಟಿ.ಸಿ ಮುಷ್ಕರ ನಿರತ ಸಿಬ್ಬಂದಿ ಮತ್ತು ಅವರ ಕುಟುಂಬ ಸಂಬಂಧಿ ಮಹಿಳೆಯರು ಸೇರಿ ಸಮಾನ ಉದ್ದೇಶದಿಂದ ಅಕ್ರಮಕೂಟ ರಚಿಸಿಕೊಂಡು ದಿನಾಂಕ: 13-04-2021. ರಂದು ಮಧ್ಯಾಹ್ನ 12-00 ಗಂಟೆಗೆ ಯಲ್ಲಾಪುರ ತಾಲೂಕಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರತ ಶಿರಸಿ ಘಟಕದ ಬಸ್ ನಂ: ಕೆ.ಎ-31/ಎಫ್-1426 ನೇದರ ಚಾಲಕ: ಶ್ರೀ ಜಿ. ಕೆ. ನಾಯ್ಕ (ಬಿಲ್ಲೆ ಸಂಖ್ಯೆ: 1207), ಹಾಗೂ ಸದರಿ ಬಸ್ಸಿನ ನಿರ್ವಾಹಕ: ಶ್ರೀ ಜಿ. ವಿ. ನಾಯ್ಕ (ಬಿಲ್ಲೆ ಸಂಖ್ಯೆ-151) ರವರನ್ನು ಮುತ್ತಿಗೆ ಹಾಕಿ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ, ಚಾಲಕನಿಗೆ ಹೂವಿನ ಹಾರ ಹಾಕಿದ್ದಲ್ಲದೇ, ನಿರ್ವಾಹಕನಿಗೂ ಕೂಡ ಹೂವಿನ ಹಾರ ಹಾಕಲು ಪ್ರಯತ್ನಿಸಿ, ಸದರಿ ಸಿಬ್ಬಂದಿಗೆ ಸಂಸ್ಥೆ ವಹಿಸಿದ ಕರ್ತವ್ಯವನ್ನು ಮಾಡದಂತೆ ಬೆದರಿಕೆ ಹಾಕಿ, ಮಾನಸಿಕವಾಗಿ ಘಾಸಿಯಾಗುವಂತೆ ಮಾಡಿ ದೌರ್ಜನ್ಯವೆಸಗಿ, ಸಾರ್ವಜನಿಕರಿಗೆ ಅಗತ್ಯಸೇವೆ ಒದಗಿಸುವ ಕರ್ತವ್ಯಕ್ಕೆ ಅಡ್ಡಿ ಆತಂಕಪಡಿಸಿರುವವರ ಮೇಲೆ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ರವಿ ಅಂಚಗಾಂವಿ, ಘಟಕ ವ್ಯವಸ್ಥಾಪಕರು, ಕೆ.ಎಸ್.ಆರ್.ಟಿ.ಸಿ ಬಸ್ ಘಟಕ, ತಾ: ಯಲ್ಲಾಪುರ ರವರು ದಿನಾಂಕ: 14-04-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 59/2021, ಕಲಂ: 78(3) ಕರ್ನಾಟಕ ಪೊಲಿಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ 1]. ಬಸವರಾಜ ತಂದೆ ಸೋಮಣ್ಣ ಅಕ್ಕಿ, ಪ್ರಾಯ-34 ವರ್ಷ, ವೃತ್ತಿ-ಕಿರಾಣಿ ಅಂಗಡಿ ವ್ಯಾಪಾರ, ಸಾ|| ಓಣಿಕೇರಿ, ತಾ: ಮುಂಡಗೋಡ, 2]. ರಾಘವೇಂದ್ರ ತಂದೆ ಸುಭಾಷ ಕೋಣನಕೇರಿ, ಪ್ರಾಯ-41 ವರ್ಷ, ಸಾ|| ಓಣಿಕೇರಿ, ತಾ: ಮುಂಡಗೋಡ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 14-04-2021 ರಂದು 16-50 ಗಂಟೆಗೆ ಮುಂಡಗೋಡ ತಾಲೂಕಿನ ಓಣಿಕೇರಿ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಶಿಬಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ರಸ್ತೆಯ ಮೇಲೆ ಓಡಾಡುವ ಜನರನ್ನು ಕರೆದು 01/- ರೂಪಾಯಿಗೆ 80/- ರೂಪಾಯಿ ಕೊಡುವ ಕರಾರಿನ ಮೇಲೆ ಒಬ್ಬರಿಗೆ ಅನ್ಯಾಯದ ಲಾಭ ಇನ್ನೊಬ್ಬರಿಗೆ ಅನ್ಯಾಯದ ನಷ್ಟ ಆಗುವಂತೆ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಜೂಗಾರಾಟ ನಡೆಸಿ, ನಗದು ಹಣ 1,800/- ರೂಪಾಯಿ ಹಾಗೂ ಓ.ಸಿ ಜೂಗಾರಾಟದ ಸಲಕರಣೆಗಳಾದ ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01 ಹಾಗೂ ಬಾಲ್ ಪೆನ್-01 ನೇದವುಗಳೊಂದಿಗೆ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ ಸೆರೆ ಸಿಕ್ಕಿದ್ದಲ್ಲದೇ, ಓ,ಸಿ ಜೂಗಾರಾಟದಿಂದ ಸಂಗ್ರಹವಾದ ಹಣವನ್ನು ಓ.ಸಿ ಬುಕ್ಕಿಯಾದ ಆರೋಪಿ 2 ನೇಯವನಿಗೆ ನೀಡುತ್ತಿದ್ದುದಾಗಿ ತಿಳಿಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಬಸವರಾಜ ಮಬನೂರ, ಪಿ.ಎಸ್.ಐ, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 14-04-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 60/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹಾಬಲೇಶ್ವರ ತಂದೆ ಶಂಭಯ್ಯ ಹೆಬ್ಬಾರ, ಸಾ|| ಮಲವಳ್ಳಿ, ತಾ: ಯಲ್ಲಾಪುರ (ಕಾರ್ ನಂ: ಕೆ.ಎ-31/ಎನ್-7031 ನೇದರ ಚಾಲಕ). ಈತನು ದಿನಾಂಕ: 14-04-2021 ರಂದು ಮಧ್ಯಾಹ್ನ 15-30 ಗಂಟೆಗೆ ತನ್ನ ಕಾರ್ ನಂ: ಕೆ.ಎ-31/ಎನ್-7031 ನೇದನ್ನು ಮುಂಡಗೋಡ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಬಡ್ಡಿಗೇರಿ ಕ್ರಾಸಿನ ಡಾಂಬರ್ ರಸ್ತೆಯ ಮೇಲೆ ಉಗ್ಗಿನಕೇರಿ ಕಡೆಯಿಂದ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ವಾಯ್-7014 ನೇದಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಮೇಲಿದ್ದ ದರ್ಶನ ಪಟಕಾರೆ, ಪ್ರಾಯ-07 ವರ್ಷ, ಈತನ ತಲೆಗೆ ಹಾಗೂ ತುಟಿಗೆ ಭಾರೀ ಗಾಯನೋವು ಪಡಿಸಿದ್ದಲ್ಲದೇ, ಮೋಟಾರ್ ಸೈಕಲ್ ಸವಾರನಿಗೆ ಹಾಗೂ ಬಾಬು ಪಟಕಾರೆ, ಪ್ರಾಯ-12 ವರ್ಷ, ಇವರಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಧೂಳು ತಂದೆ ವಿಠ್ಠು ಕೊಕರೆ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಡ್ಡಿಗೇರಿ, ತಾ: ಮುಂಡಗೋಡ ರವರು ದಿನಾಂಕ: 14-04-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 48/2021, ಕಲಂ: 78(3) ಕರ್ನಾಟಕ ಪೊಲಿಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ 1]. ಹರಿಯಪ್ಪ ತಂದೆ ರಾಮಾ ನಾಯ್ಕ, ಪ್ರಾಯ-67 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕೋಲಸಿರ್ಸಿ, ತಾ: ಸಿದ್ದಾಪುರ, 2]. ಗಣಪತಿ ತಂದೆ ಪುಂಡಲೀಕ ಕಟಾವಕರ, ಪ್ರಾಯ-62 ವರ್ಷ, ವೃತ್ತಿ-ಟೇಲರ್, ಸಾ|| ಬಸವನ ಗಲ್ಲಿ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 14-04-2021 ರಂದು ಮಧ್ಯಾಹ್ನ 12-00 ಗಂಟೆಗೆ ಸಿದ್ದಾಪುರ ಶಹರದ ರಾಜಮಾರ್ಗದ ತರಕಾರಿ ಮಾರುಕಟ್ಟೆಯ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಓ.ಸಿ ಮಟಕಾ ಜುಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಜನರಿಂದ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಅವರಿಗೆ ಓ.ಸಿ ಮಟಕಾ ಜುಗಾರಾಟದ ಅಂಕೆ-ಸಂಖ್ಯೆಗಳ ಚೀಟಿಯನ್ನು ಬರೆದುಕೊಟ್ಟು ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸೇರಿ ದಾಳಿ ಮಾಡಿದಾಗ ಓಸಿ ಜುಗಾರಾಟದ ಸಲಕರಣೆಗಳಾದ 1). ಬಾಲ್ ಪೆನ್-1, 2). ಓ.ಸಿ ಚೀಟಿ-1 ಮತ್ತು 3). ನಗದು ಹಣ 810/- ರೂಪಾಯಿಗಳೊಂದಿಗೆ ಆರೋಪಿ 1 ನೇಯವನು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 2 ನೇಯವನು ಆರೋಪಿ 1 ನೇಯವನು ಸಂಗ್ರಹಿಸುವ ಓ.ಸಿ ಮಟಕಾದ ಹಣ ಹಾಗೂ ಚೀಟಿಯನ್ನು ಸ್ವೀಕರಿಸುವನಾಗಿರುವ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 14-04-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 42/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಪ್ರವೀಣ ತಂದೆ ನಾಗೇಂದ್ರ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮರಗುಂಡಿ, ಪೋ: ಕೊರ್ಲಕಟ್ಟಾ, ತಾ: ಶಿರಸಿ. ಈತನು ದಿನಾಂಕ: 14-04-2021 ರಂದು 16-00 ಗಂಟೆಗೆ ಮರಗುಂಡಿ ಗ್ರಾಮದಲ್ಲಿ ತನ್ನ ಅಂಗಡಿಯ ಪಕ್ಕದ ಸಾರ್ವಜನಿಕ ಸ್ಥಳದ ತಾತ್ಕಾಲಿಕ ಶೆಡ್ಡಿನಲ್ಲಿ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅನುವು ಮಾಡಿಕೊಡುತ್ತಿರುವಾಗ ಅಬಕಾರಿ ಸ್ವತ್ತುಗಳಾದ 1). Haywards Cheers Whisky-90 ML ನ ಟೆಟ್ರಾ ಪ್ಯಾಕೆಟ್ ಗಳು-14, ಅ||ಕಿ|| 491.82/- ರೂಪಾಯಿ, 2). Haywards Cheers Whisky-90 ML ಅಂತಾ ಲೇಬಲ್ ಇರುವ ಮದ್ಯದ ಖಾಲಿ ಟೆಟ್ರಾ ಪ್ಯಾಕ್-02, ಅ||ಕಿ|| 00.00/- ರೂಪಾಯಿಗಳೊಂದಿಗೆ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿ ಹಿಡಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಬಾಲಕೃಷ್ಣ ಬಿ. ಪಾಲೇಕರ, ಪಿ.ಎಸ್.ಐ (ಕ್ರೈಂ), ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 14-04-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 36/2021, ಕಲಂ: 279, 337, 338 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಈಚರ್ ವಾಹನ ನಂ: ಕೆ.ಎ-25/ಎ.ಬಿ-2181 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 13-04-2021 ರಂದು ಪಿರ್ಯಾದಿಯವರು ತಮ್ಮ ಕುಟುಂಬ ಸಮೇತ ಯುಗಾದಿ ಹಬ್ಬದ ನಿಮಿತ್ಯ ಗೋವಾದಿಂದ ತಮ್ಮೂರಾದ ಹಳಿಯಾಳಕ್ಕೆ ಬಂದವರು, ದಿನಾಂಕ: 14-04-2021 ರಂದು ಮರಳಿ ತಾವು ಕೆಲಸ ಮಾಡಿಕೊಂಡಿದ್ದ ಗೋವಾ ರಾಜ್ಯದ ಉಜಗಾಂವ ಟಿಸ್ಸರ್ ಗೆ ಹೋಗಲು ತನ್ನ ಗಂಡ: ರಾಜು ಪಾಟೀಲ್ ಇವರ ಮೋಟಾರ್ ಸೈಕಲ್ ನಂ: ಕೆ.ಎ-31/ಎಸ್-9901 ನೇದರ ಮೇಲೆ ಪಿರ್ಯಾದಿಯವರು ತಾನು, ತನ್ನ ಮಗ: ಅಭಿನಯ ಹಾಗೂ ತಮ್ಮ ಸಂಬಂಧಿಕರ ಹುಡುಗಿ: ಸ್ವಪ್ನಾ ಇವಳನ್ನು ಕರೆದುಕೊಂಡು ಮೋಟಾರ್ ಸೈಕಲ್ ಮೇಲೆ ಹಿಂದೆ ಕುಳಿತುಕೊಂಡು ಹೋಗಿದ್ದು, ದಿನಾಂಕ: 14-04-2021 ರಂದು 14-00 ಗಂಟೆಯ ಸುಮಾರಿಗೆ ಅನಮೋಡದಿಂದ ಗೋವಾ ಬದಿಗೆ ಹೋಗುವ ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ಹೋಗುತ್ತಿರುವಾಗ, ಅನಮೋಡದಿಂದ 02 ಕಿ.ಮೀ ಅಂತರದಲ್ಲಿ ಬರುವ ತಿರುವಿನಲ್ಲಿ ಎದುರುಗಡೆಯಿಂದ ಅಂದರೆ ಗೋವಾ ಕಡೆಯಿಂದ ಬಂದ ಈಚರ್ ವಾಹನ ನಂ: ಕೆ.ಎ-25/ಎ.ಬಿ-2181 ನೇದರ ಆರೋಪಿ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯವರು ಹೋಗುತ್ತಿದ್ದ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಮೋಟಾರ್ ಸೈಕಲ್ ಮೇಲಿದ್ದ ನಾಲ್ಕು ಜನರು ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದ ಪರಿಣಾಮ ರಾಜು ಪಾಟೀಲ್ ರವರ ಬಲಗಾಲಿನ ಮಂಡಿಯ ಕೆಳಭಾಗದಲ್ಲಿ ಭಾರೀ ಪ್ರಮಾಣದ ರಕ್ತಗಾಯ ಹಾಗೂ ಹಣೆಯ ಭಾಗದಲ್ಲಿ ಗಾಯವಾಗಿದ್ದು, ಅಭಿನಯ ಇವನಿಗೆ ಬಲಗಾಲಿನ ಪಾದದ ಭಾಗದಲ್ಲಿ ಹಾಗೂ ಎಡಗಣ್ಣಿನ ಭಾಗದಲ್ಲಿ ರಕ್ತಗಾಯ ಹಾಗೂ ಸ್ವಪ್ನಾ ಇವಳಿಗೆ ಬಲಗಾಲಿನ ಮಂಡಿಯ ಕೆಳಭಾಗದಲ್ಲಿ ಗಾಯವಾಗಿದ್ದು, ಇದನ್ನು ಕಂಡ ಅಪಘಾತ ಪಡಿಸಿದ ಈಚರ್ ವಾಹನದ ಆರೋಪಿ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಶ್ರೀಮತಿ ಪ್ರಮೀಲಾ ಕೋಂ. ರಾಜು ಪಾಟೀಲ್, ಪ್ರಾಯ-26 ವರ್ಷ, ವೃತ್ತಿ-ಗೃಹಿಣಿ, ಸಾ|| ಕಿಲ್ಲಾ, ತಾ: ಹಳಿಯಾಳ ರವರು ದಿನಾಂಕ: 14-04-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 14-04-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 10/2021, ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಶಂಕರ ತಂದೆ ಕೃಷ್ಣ ಮುಕ್ರಿ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಾಳಿಮರ, ಮೂರೂರು, ತಾ: ಕುಮಟಾ. ಪಿರ್ಯಾದಿಯ ತಂದೆಯಾದ ಇವರು ಪಿರ್ಯಾದಿಯ ತಾಯಿ ಮೃತಳಾದ ಮೇಲೆ ನೇತ್ರಾವತಿ ಮುಕ್ರಿ ಇವರೊಂದಿಗೆ ಎರಡನೇ ಮದುವೆಯಾಗಿದ್ದು, ಮದುವೆಯಾದಾಗಿನಿಂದ ಪಿರ್ಯಾದಿಯ ತಂದೆ ದಿನಾಲು ಕುಡಿದು ಬಂದು ಗಂಡ ಹೆಂಡತಿಯ ಮಧ್ಯ ಜಗಳವಾಗುತ್ತಿದ್ದು, ಪಿರ್ಯಾದಿಯ ತಂದೆ ಮೃತ ಶಂಕರ ತಂದೆ ಕೃಷ್ಣ ಮುಕ್ರಿ. ದಿನಾಂಕ: 14-04-2021 ರಂದು ಬೆಳಿಗ್ಗೆ 09-00 ಗಂಟೆಗೆ ಕೂಲಿ ಕೆಲಸಕ್ಕೆ ಹೋಗಿ 14-00 ಗಂಟೆಗೆ ತನ್ನ ಮನೆಗೆ ಬಂದು ಊಟ ಮಾಡಿ ಮಲಗಿಕೊಂಡಿದ್ದವನು, ಸಮಯ 14-00 ಗಂಟೆಯಿಂದ 19-30 ಗಂಟೆಯ ನಡುವಿನ ಅವಧಿಯಲ್ಲಿ ಮಲಗಿಕೊಂಡಿದ್ದಲ್ಲಿಯೇ ಮೃತನಾಗಿದ್ದು, ಮೃತನ ಸಾವಿನಲ್ಲಿ ಸಂಶಯ ಇದ್ದು, ಈ ಕುರಿತು ಮುಂದಿನ ಕಾನೂನು ಕ್ರಮವನ್ನು ಕೈಗೊಳ್ಳುವ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಶಂಕರ ಮುಕ್ರಿ, ಪ್ರಾಯ-26 ವರ್ಷ, ವೃತ್ತಿ-ಕುಮಟಾ ಪುರಸಭೆಯ ಕಸ ಹೊಡೆಯುವ ವಾಹನ ಚಾಲಕ, ಸಾ|| ಗಾಳಿಮರ, ಮೂರೂರು, ತಾ: ಕುಮಟಾ ರವರು ದಿನಾಂಕ: 14-04-2021 ರಂದು 22-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 15-04-2021 05:10 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080