ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 14-04-2022

at 00:00 hrs to 24:00 hrs

 

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ, ಕಾರವಾರ

ಅಪರಾಧ ಸಂಖ್ಯೆಃ 09/2022, ಕಲಂ: 420 ಐಪಿಸಿ ಹಾಗೂ ಕಲಂ: 66(ಸಿ)(ಡಿ) ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ನೇದ್ದರ ವಿವರ...... ನಮೂದಿತ ಆರೋಪಿತನು ಮೊಬೈಲ್ ನಂ: 8276957469 ನೇದರ ಬಳಕೆದಾರನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 19-03-2022 ರಂದು ಪಿರ್ಯಾದಿಯವರು ಮನೆಯಲ್ಲಿದ್ದಾಗ ಅವರಿಗೆ ಅಂಚೆ ಮೂಲಕ ಒಂದು ಪೊಸ್ಟಲ್ ಕವರ್ ಬಂದಿದ್ದು ಅದನ್ನು ಓಪನ್ ಮಾಡಿ ನೋಡಲಾಗಿ ಅದರೊಳಗೆ Meesho Online Shoping ಕಂಪನಿ ವತಿಯಿಂದ ಸ್ಕ್ರ್ಯಾಚ್ ಕಾರ್ಡ್ ಅನ್ನು ಕಳುಹಿಸಿಕೊಟ್ಟಿದ್ದು, ಸದರಿ ಸ್ಕ್ರ್ಯಾಚ್ ಕಾರ್ಡ್ ಅನ್ನು ಸ್ಕ್ರ್ಯಾಚ್ ಮಾಡಿ ನೋಡಲಾಗಿ ಅದರಲ್ಲಿ ಬಹುಮಾನ 8,40,000/- ರೂಪಾಯಿ ಹಣವನ್ನು ಗೆದ್ದಿರುವ ಬಗ್ಗೆ ನಮೂದಿಸಿದ್ದು ಇರುತ್ತದೆ. ನಂತರ ಪಿರ್ಯಾದಿಯವರು ಸದರ ಪತ್ರದಲ್ಲಿ ನಮೂದಿಸಿದ ಮೊಬೈಲ್ ನಂಬರಿಗೆ ಕರೆ ಮಾಡಿ ಸಂಪರ್ಕಿಸಿದಾಗ ಕರೆ ಸ್ವೀಕರಿಸಿದ ವ್ಯಕ್ತಿಯು ಪಿರ್ಯಾದಿಗೆ Meesho Online ಮೆಗಾ ಕಾಂಟೆಸ್ಟ್ ನಲ್ಲಿ 8,40,000/- ರೂಪಾಯಿ ಗೆದ್ದಿರುವ ಬಗ್ಗೆ ಖಾತ್ರಿ ಪಡಿಸಿರುತ್ತಾರೆ. ಹಾಗೂ ಸದರಿ ಹಣವನ್ನು ಪಡೆದುಕೊಳ್ಳಲು ಅವರಿಗೆ ಟ್ರಾನ್ಸಾಕ್ಷನ್ ಶುಲ್ಕ 16,800/- ರೂಪಾಯಿ ಹಣವನ್ನು ಭರಣ ಮಾಡುವಂತೆ ಸೂಚಿಸಿದ್ದು, ಅದರಂತೆ ಪಿರ್ಯಾದಿಯವರು ಕಾರವಾರ ಎಸ್.ಬಿ.ಐ ಶಾಖೆಯಿಂದ ದಿನಾಂಕ: 19-03-2022 ರಂದು 16,800/- ರೂಪಾಯಿ ಹಣವನ್ನು ಭರಣ ಮಾಡಿರುತ್ತಾರೆ. ನಂತರ ಆರೋಪಿತನು ತನ್ನ ಮೊಬೈಲ್ ನಂ: 8276957469 ನೇದರಿಂದ ಪಿರ್ಯಾದಿಯವರ ಮೊಬೈಲಿಗೆ ವಾಟ್ಸಪ್ ಮೆಸೇಜ್ ಕಳುಹಿಸಿದ್ದು, ಅದರಲ್ಲಿ 100/- ರೂಪಾಯಿ ಮುಖಬೆಲೆಯ ಬಾಂಡ್ ಅನ್ನು ಕಳುಹಿಸಿದ್ದು, ಸದರಿ ಬಾಂಡ್ ನಲ್ಲಿ ಆರ್.ಬಿ.ಐ ನ ಮುದ್ರೆಯಿದ್ದು ಹಾಗೂ ಸಿ.ಜಿ.ಎಸ್.ಟಿ ಹಾಗೂ ಎಸ್.ಜಿ.ಎಸ್.ಟಿ ಹಣವನ್ನು ಭರಣ ಮಾಡದೇ ಇರುವುದರಿಂದ ಅವರಿಗೆ ಬಂದಿರುವ ಬಹುಮಾನದ ಚೆಕ್ ಅನ್ನು ಕಳುಹಿಸಿಕೊಡಲು ಅನಾನುಕೂಲವಾಗಿರುವುದಾಗಿ ನಮೂದಿಸಿದ್ದು ಇರುತ್ತದೆ. ಪಿರ್ಯಾದಿಯವರು ಸದರಿ ಬಾಂಡ್ ನಲ್ಲಿರುವ ವಿಷಯ ನಿಜ ಅಂತಾ ನಂಬಿ, ಸದರಿ ವ್ಯಕ್ತಿಗೆ ಕರೆ ಮಾಡಿ ಕೇಳಿದಾಗ ಆತನು ಬಾಂಡ್ ನಲ್ಲಿ ನಮೂದಿಸಿರುವ ವಿಷಯ ನಿಜವಿದ್ದು, ಸಿ.ಜಿ.ಎಸ್.ಟಿ ಹಾಗೂ ಎಸ್.ಜಿ.ಎಸ್.ಟಿ ಹಣವನ್ನು ಭರಣ ಮಾಡುವಂತೆ ಹೇಳಿ, ತನ್ನ ಎಸ್.ಬಿ.ಐ ಖಾತೆ ಸಂಖ್ಯೆ: 20258013212 ನೇದನ್ನು ನೀಡಿದ್ದು, ಅದಕ್ಕೆ ಪಿರ್ಯಾದಿಯವರು ದಿನಾಂಕ: 22-03-2022 ರಂದು ಕಾರವಾರ ಎಸ್.ಬಿ.ಐ ಶಾಖೆಯಿಂದ 25,600/- ರೂಪಾಯಿ ಹಣವನ್ನು ಹಾಗೂ 50,000/- ಹಣವನ್ನು ಪೋನ್ ಪೇ ಮುಖಾಂತರ ಮೇಲ್ಕಾಣಿಸಿದ ಬ್ಯಾಂಕ್ ಖಾತೆಗೆ ಜಮಾ ಮಾಡಿ, ಹೀಗೆ ಒಟ್ಟೂ 92,400/- ರೂಪಾಯಿ ಹಣವನ್ನು ಆರೋಪಿತನ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು, ಆದರೆ ಈವರೆಗೂ ಬಹುಮಾನದ ಮೊತ್ತವನ್ನು ನೀಡದೇ ಮೋಸ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ವಿಘ್ನೇಶ ತಂದೆ ಚಂದ್ರಕಾಂತ ಸೈಲ್, ಪ್ರಾಯ-34 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಅರ್ಜುನಕೋಟ್, ಚಿತ್ತಾಕುಲಾ, ಕಾರವಾರ ರವರು ದಿನಾಂಕ: 14-04-2022 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 81/2022, ಕಲಂ: 143, 147, 148, 307, 323, 341, 324, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರತಾಪ ಉಪ್ಪಾರ, 2]. ವಿವೇಕ ಉಪ್ಪಾರ, 3]. ರಿತೇಶ ಉಪ್ಪಾರ, 4]. ಸುನೀಲ ಉಪ್ಪಾರ, 5]. ಸತೀಶ ಉಪ್ಪಾರ, 6]. ಸುಪ್ರೀತ ಉಪ್ಪಾರ, 7]. ಓಂಕಾರ ಉಪ್ಪಾರ, 8]. ನಾಗಪ್ಪ ಉಪ್ಪಾರ, 9]. ಅಕ್ಷಯ ಉಪ್ಪಾರ, 10]. ನಾಗಪ್ಪ ಶಾಂತು ಉಪ್ಪಾರ, 11]. ಗಣಪತಿ ಬಾಬು ಉಪ್ಪಾರ, 12]. ಅಕಿಲೇಶ, ಸಾ|| (ಎಲ್ಲರೂ) ಉಪ್ಪಾರಕೇರಿ, ತಾ: ಕುಮಟಾ. ಪಿರ್ಯಾದಿಯು ಹಾಗೂ ಆತನ ಸ್ನೇಹಿತರಾದ ಜಟ್ಟಪ್ಪ ಗೌಡ, ಪ್ರಣಿತ ಹೆಗಡೆ, ಗಣಪತಿ ಗೌಡ, ಭರತ ಗೌಡ, ಪ್ರಶಾಂತ ಗೌಡ. ಇವರೆಲ್ಲರೂ ಸೇರಿ ಕುಮಟಾದ ಮಣಕಿ ಮೈದಾನದಲ್ಲಿ ನಡೆಯುತ್ತಿದ್ದ ಕುಮಟಾ ಹಬ್ಬದ ಕಾರ್ಯಕ್ರಮ ನೋಡಲು ಹೋಗುತ್ತಿರುವಾಗ ಕುಮಟಾ ಶಹರದ ಕಾಮತ್ ಹೊಟೇಲ್ ಎದುರಿನ ಡಿಗ್ರಿ ಕಾಲೇಜ್ ಕ್ರಾಸ್ ಹತ್ತಿರ ದಿನಾಂಕ: 13-04-2022 ರಂದು 11-30 ಗಂಟೆಯ ಸುಮಾರಿಗೆ  ನಮೂದಿತ ಆರೋಪಿತರೆಲ್ಲರೂ ಸೇರಿ ಪಿರ್ಯಾದಿಯನ್ನು ಉದ್ದೇಶಿಸಿ ‘ನಮಗೆ ಬುದ್ಧಿ ಮಾತನ್ನು ಹೇಳಲು ನೀನು ಯಾರು? ನಿನ್ನ ಬಳಿ ಎಷ್ಟು ಜನ ಇರುತ್ತಾರೆ, ಅವರನ್ನು ನಾವು ನೋಡಿಕೊಳ್ಳುತ್ತೇವೆ’ ಅಂತಾ ಹೇಳಿ ಪಿರ್ಯಾದಿ ಹಾಗೂ ಆತನ ಸ್ನೇಹಿತರಿಗೆ ‘ಬೋಸಡಿ ಮಕ್ಕಳಾ, ಸೂಳೆ ಮಕ್ಕಳಾ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಅಡ್ಡಗಟ್ಟಿ ತಡೆದು ಪಿರ್ಯಾದಿಗೆ ಕೊಲೆ ಮಾಡುವ ಉದ್ದೇಶದಿಂದ ಆರೋಪಿತರೆಲ್ಲರೂ ಸೇರಿ ಸ್ಥಳದಲ್ಲಿ ಬಿದ್ದಿದ್ದ ಕಲ್ಲಿನಿಂದ ಪಿರ್ಯಾದಿಗೆ ಹಾಗೂ ಆತನ ಜೊತೆಗಿದ್ದ ಸ್ನೇಹಿತರಿಗೆ ಬೀಸಿ ಹೊಡೆದಿದ್ದು, ಇದರಿಂದ ಪಿರ್ಯಾದಿಗೆ ಹಾಗೂ ಜಟ್ಟಪ್ಪ ಗೌಡ ಇವರ ತಲೆಗೆ ಗಾಯನೋವು ಪಡಿಸಿದ್ದಲ್ಲದೇ, ಪಿರ್ಯಾದಿಯ ಉಳಿದ ಸ್ನೇಹಿತರಿಗೂ ಸಹ ಗಾಯನೋವು ಪಡಿಸಿ, ‘ಜೀವ ಸಹಿತ ಕೊಂದು ಬಿಸಾಡುತ್ತೇವೆ’ ಎನ್ನುವುದಾಗಿ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಬೊಮ್ಮಯ್ಯ ತಂದೆ ಬೀರಾ ಗೌಡ, ಪ್ರಾಯ-30 ವರ್ಷ, ವೃತ್ತಿ-ಕೇಬಲ್ ಕೆಲಸ, ಸಾ|| ಉಪ್ಪಿನ ಗಣಪತಿ ದೇವಸ್ಥಾನದ ಹತ್ತಿರ, ತಾ: ಕುಮಟಾ ರವರು ದಿನಾಂಕ: 14-04-2022 ರಂದು 01-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 29/2022, ಕಲಂ: 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪವನ ತಂದೆ ಶ್ರೀನಿವಾಸ ಮೊಗೇರ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ: ಗೋಳಿಪೈಯರ್, ಮರಾಠಿಕೊಪ್ಪ, ತಾ: ಶಿರಸಿ. ಪಿರ್ಯಾದಿಯವರು ಆರೋಪಿತನ ಮಲ ತಂದೆಯಿದ್ದು, ಆರೋಪಿತನು ಪಿರ್ಯಾದಿಯವರು ಮನೆಗೆ ಬರುವುದನ್ನು ವಿರೋಧಿಸುತ್ತಿದ್ದವನು, ಮನೆಯಲ್ಲಿ ತಾಯಿಯ ಜೊತೆಗೆ ಸಣ್ಣಪುಟ್ಟ ವಿಷಯಕ್ಕೂ ಜಗಳ ಮಾಡುತ್ತಾ ಇದ್ದುದ್ದರಿಂದ ಪಿರ್ಯಾದಿಯವರು ದಿನಾಂಕ: 14-04-2022 ರಂದು ಬೆಳಿಗ್ಗೆ ಮನೆಗೆ ಬಂದು ‘ಯಾಕೆ ಮನೆಯಲ್ಲಿ ಜಗಳ ಮಾಡುತ್ತೀಯಾ?’ ಎಂದು ಬುದ್ಧಿಮಾತು ಹೇಳಿದ್ದಕ್ಕೆ ಸಿಟ್ಟಿನಿಂದ ಇದ್ದವನು, ಪಿರ್ಯಾದಿಯವರು ದಿನಾಂಕ: 14-04-2022 ರಂದು  15-15 ಗಂಟೆಗೆ ಅವರ ಹೆಂಡತಿಯ ಮೊಬೈಲಿಗೆ ಕರೆನ್ಸಿ ಹಾಕಿಸಲು ಅಂಗಡಿಗೆ ಹೋಗಲು ಮನೆಯ ಅಂಗಳಕ್ಕೆ ಬಂದಾಗ ಆರೋಪಿತನು ಪಿರ್ಯಾದಿಯವರನ್ನು ಉದ್ದೇಶಿಸಿ ‘ಸೂಳೆ ಮಗನೇ, ಬೋಳಿ ಮಗನೇ, ಎಲ್ಲಿಗೆ ಹೋಗುತ್ತಿಯಾ?’ ಎಂದು ಬೈಯುತ್ತಾ ‘ನೀನು ಮನೆಯಲ್ಲಿ ಇರಬೇಡಾ, ನೀನು ತನಗೆ ತಂದೆಯಲ್ಲಾ’ ಎಂದು ಹೇಳಿದಾಗ  ಪಿರ್ಯಾದಿಯವರು ‘ಯಾಕೆ ಹೀಗೆ ಮಾತನಾಡುತ್ತೀಯಾ?’ ಎಂದು ಹೇಳಿದಕ್ಕೆ ಅಲ್ಲಿಯೇ ಇದ್ದ ಕಟ್ಟಿಗೆಯ ದೊಣ್ಣೆಯಿಂದ ಪಿರ್ಯಾದಿಯವರ ತಲೆಗೆ ಹೊಡೆದು ಗಾಯನೋವುಂಟು ಪಡಿಸಿದ್ದಲ್ಲದೇ, ಆಗ ಅಲ್ಲಿಯೇ ಇದ್ದ ಪಿರ್ಯಾದಿಯವರ ಹೆಂಡತಿ ಪುಷ್ಪಾ ಮೊಗೇರ ಇವರು ತಪ್ಪಿಸಲು ಬಂದಾಗ, ಆರೋಪಿತನು ಕಲ್ಲನ್ನು ತೆಗೆದುಕೊಂಡು ಬಂದು ಪಿರ್ಯಾದಿಯವರ ಬಲಗೈ ಬೆರಳುಗಳಿಗೆ ಹೊಡೆದು ಗಾಯನೋವುಂಟು ಮಾಡಿದ್ದು, ಆಗ ಪಿರ್ಯಾದಿಯವರ ಹೆಂಡತಿ ಜೋರಾಗಿ ಕೂಗಿಕೊಂಡಾಗ ಅಕ್ಕಪಕ್ಕದ ಮನೆಯವರು ಬರುವುದನ್ನು ನೋಡಿ ಆರೋಪಿತನು ‘ಮುಂದೆ ನಿನಗೆ ಸಾಯಿಸದೇ ಬಿಡುವುದಿಲ್ಲ’ ಎಂದು ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ರಾಮಕೃಷ್ಣ ತಂದೆ ಗಣಪತಿ ಹೆಗಡೆ, ಪ್ರಾಯ-60 ವರ್ಷ, ವೃತ್ತಿ-ಹೊಟೇಲ್ ನಲ್ಲಿ ಕುಕ್ ಕೆಲಸ, ಸಾ|| ಗೋಳಿಪೈಯರ್, ಮರಾಠಿಕೊಪ್ಪ, ತಾ: ಶಿರಸಿ ರವರು ದಿನಾಂಕ: 14-04-2022 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 30/2022, ಕಲಂ: 8(c), 20(b)(ii)(A) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತರು 1]. ತೌಸೀಫ್ ಅಹಮ್ಮದ್ ತಂದೆ ಅಬ್ದುಲ್ ಖಾದರ್ ಸಿಡೇನ್ನೂರ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ಸುಭಾಷ ನಗರ, ಹಾವೇರಿ, 2]. ಅಸ್ಲಂ ತಂದೆ ಅಬ್ದುಲ್ ಮುನಾಫ್ ಸಾಬ್ ದೇವಿಹೊಸೂರ, ಪ್ರಾಯ-28 ವರ್ಷ, ವೃತ್ತಿ-ಮೊಬೈಲ್ ವ್ಯಾಪಾರ, ಸಾ|| ಸುಭಾಷ ನಗರ, ಹಾವೇರಿ. ಈ ನಮೂದಿತ ಆರೋಪಿತರು ಕೂಡಿಕೊಂಡು ದಿನಾಂಕ: 14-04-2022 ರಂದು 16-00 ಗಂಟೆಗೆ ಹಳಿಯಾಳ ಕಡೆಯಿಂದ ದಾಂಡೇಲಿ ಕಡೆಗೆ ತನ್ನ ಬಾಬ್ತು ಕಾರ್ ನಂ: ಕೆ.ಎ-27/ಬಿ-6668 ನೇದರಲ್ಲಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ಒಟ್ಟೂ ಸುಮಾರು 60,000/- ರೂಪಾಯಿ ಬೆಲೆಬಾಳುವ 2.044 ಕೆ.ಜಿ (ಸುತ್ತಿದ ಖಾಕಿ ಬಣ್ಣದ ಗಮ್ ಟೇಪ್ ಸಮೇತ) ತೂಕದ ಒಣಗಿದ ಗಾಂಜಾ ತೆಗೆದುಕೊಂಡು ಬರುತ್ತಿರುವಾಗ ದಾಳಿಯ ಕಾಲಕ್ಕೆ ದಾಂಡೇಲಿಯ ಡಬ್ಲ್ಯೂ.ಸಿ.ಪಿ.ಎಮ್ 1 ನಂಬರ್ ಗೇಟ್ ಹತ್ತಿರ ಗೆಜೆಟೆಡ್ ಅಧಿಕಾರಿಗಳು ಹಾಗೂ ಪಂಚರು ಹಾಗೂ ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ನಡೆಸಿದ ಕಾಲಕ್ಕೆ ಪಿರ್ಯಾದಿಯವರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕಿರಣ ಬಿ. ಪಾಟೀಲ್, ಪಿ.ಎಸ್.ಐ, ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 14-04-2022 ರಂದು 16-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 65/2022, ಕಲಂ: 15(ಎ) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಪುಟ್ಟಪ್ಪ ತಂದೆ ದೇವಿಂದ್ರಪ್ಪ ವಾಲ್ಮೀಕಿ, ಪ್ರಾಯ-45 ವರ್ಷ, ವೃತ್ತಿ-ಕಿರಾಣಿ ಅಂಗಡಿ ವ್ಯಾಪಾರ, ಸಾ|| ಸಾಲಗಾಂವ, ತಾ: ಮುಂಡಗೋಡ. ಈತನು ದಿನಾಂಕ: 13-04-2022 ರಂದು 18-30 ಗಂಟೆಗೆ ಮುಂಡಗೋಡ ತಾಲೂಕಿನ ಸಾಲಗಾಂವ ಗ್ರಾಮದಲ್ಲಿ ತನ್ನ ಕಿರಾಣಿ ಅಂಗಡಿಯಲ್ಲಿ ಸಾರ್ವಜನಿಕರಿಗೆ ಯಾವುದೇ ಪಾಸ್ ಅಥವಾ ಪರ್ಮೀಟ್ ಇಲ್ಲದೇ ಮದ್ಯ ಸೇವಿಸಲು ಅನುವು ಮಾಡಿಕೊಟ್ಟು 90 ML ಅಳತೆಯ HAYWARDS CHEERS WHISKY 04 ಪೌಚ್ ಗಳು, 90 ML ಅಳತೆಯ HAYWARDS CHEERS WHISKY ಅಂತಾ ಬರೆದ 03 ಖಾಲಿ ಪೌಚ್ ಗಳು, 02 ಪ್ಲಾಸ್ಟಿಕ್ ಗ್ಲಾಸ್, 01 ನೀರಿನ ಬಾಟಲಿ ಹಾಗೂ ನಗದು ಹಣ 145/- ರೂಪಾಯಿಯೊಂದಿಗೆ ದಾಳಿಯ ಕಾಲಕ್ಕೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಿದ್ದಪ್ಪ ಎಸ್. ಸಿಮಾನಿ, ಪೊಲೀಸ್ ನಿರೀಕ್ಷಕರು, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 14-04-2022 ರಂದು 20-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 59/2022, ಕಲಂ: 324, 307, 504 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹೊನ್ನಪ್ಪ ತಂದೆ ಮಾದೇವ ಬೋವಿ, ಪ್ರಾಯ-30 ವರ್ಷ, ಸಾ|| ಮುಲ್ಲಾ ಓಣಿ, ತೇರಗಾಂವ ಗ್ರಾಮ, ತಾ: ಹಳಿಯಾಳ. ಈತನು ಪಿರ್ಯಾದಿಯವರ ಮಗನಾದ ಅಮಾನುಲ್ಲಾ ಜಮನೂರ ಈತನೊಂದಿಗೆ ಹಿಂದಿನಿಂದ ದ್ವೇಷದಿಂದ ಇದ್ದವನು, ಅದೇ ಸಿಟ್ಟಿನಿಂದ ದಿನಾಂಕ: 13-04-2022 ರಂದು 15-15 ಗಂಟೆಗೆ ತೇರಗಾಂವ ಗ್ರಾಮದ ಹುಲಸ್ವಾರ ಓಣಿಯ ವಿಠೋಬಾ ದೇವಸ್ಥಾನದ ಹತ್ತಿರ ಜಾತ್ರೆ ನೋಡಲು ಬಂದು ನಿಂತುಕೊಂಡ ಪಿರ್ಯಾದಿಯ ಮಗ ಅಮಾನುಲ್ಲಾ ಈತನಿಗೆ ಆರೋಪಿತನು ‘ಏ ಸೂಳೆ ಮಗನೇ, ನನ್ನ ತಾಯಿಗೆ ಕೆಟ್ಟ ಕೆಟ್ಟ ಶಬ್ದಗಳಿಂದ ಯಾಕೆ ಬೈಯತ್ತೀ? ನಿನಗೆ ಈ ದಿವಸ ಕೊಲೆ ಮಾಡಿ ಮುಗಿಸಿಯೇ ಬಿಡುತ್ತೇನೆ’ ಅಂತಾ ಹೇಳಿದವನೇ ಬಲ ಕುತ್ತಿಗೆಯ ಹತ್ತಿರ ಚಾಕುವಿನಿಂದ ಹೊಡೆದು ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಇರ್ಫಾನ್ ತಂದೆ ಮಹಮ್ಮದ್ ಹುಸೇನ್ ಜಮನೂರ, ಪ್ರಾಯ-45 ವರ್ಷ, ವೃತ್ತಿ-ವ್ಯಾಪಾರ, ಸಾ|| ಮಸೀದಿ ಓಣಿ, ತೇರಗಾಂವ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 14-04-2022 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 14-04-2022

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 07/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನು ಅಂದಾಜು 30-35 ವರ್ಷ ಪ್ರಾಯದ ಅಪರಿಚಿತ ಗಂಡಸ್ಸಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ಸುಮಾರು 8-10 ದಿನಗಳ ಹಿಂದೆ ಎಲ್ಲೋ ಸಮುದ್ರದಲ್ಲಿ ಮೀನುಗಾರಿಕೆಗೆ ಹೋದಾಗ ಬೋಟಿನಿಂದ ಜೋಲಿ ತಪ್ಪಿ ಬಿದ್ದೋ ಅಥವಾ ಸಮುದ್ರದಲ್ಲಿ ಈಜಾಡಲೋ ಅಥವಾ ನದಿಯಿಂದ ಬಿದ್ದೋ ಮೃತಪಟ್ಟವನ ಶವವು ದೇಹದ ಮಾಂಸಖಂಡ ಕೊಳೆತು ತಲೆ ಬುರಡೆ ಇಲ್ಲದೇ ಎರಡು ಕೈ ಬೆರಳುಗಳು ಮೊಣಗಂಟಿನವರೆಗೆ  ಮತ್ತು ಕಾಲು ಬೆರಳುಗಳು ಕೊಳೆತು ಮಾಂಸಖಂಡದ ಸಮೇತ ಉದುರಿ ಹೋಗಿದ್ದವನ ಶವವು ನೀರಿನಲ್ಲಿ ತೇಲಿ ಬಂದು ಗೋಕರ್ಣದ ಕುಡ್ಲೆ ಬೀಚ್ ನ ಸಮೀಪದ ಜಟಾಯು ತೀರ್ಥದ ಗುಡ್ಡದ ಕೆಳಗಡೆ ಸಮುದ್ರದ ತೀರದಲ್ಲಿ ಕಲ್ಲು ಬಂಡೆಗಳ ಸಂಧಿಯಲ್ಲಿ ದಿನಾಂಕ: 14-04-2022 ರಂದು ಬೆಳಿಗ್ಗೆ 11-30 ಗಂಟೆಗೆ ಸಿಕ್ಕಿರುತ್ತದೆ. ಈ ಕುರಿತು ಮುಮದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗೇಂದ್ರ ತಂದೆ ಗಜಾನನ ಠಾಕೂರ್, ಪ್ರಾಯ-28 ವರ್ಷ, ವೃತ್ತಿ-ಕರಾವಳಿ ನಿಯಂತ್ರಣ ದಳದ ಸದಸ್ಯ ಕುಮಟಾ, ಸಿ.ಎಸ್.ಪಿ ಠಾಣೆ, ಹಾಲಿ ಸಾ|| ತದಡಿ, ಬೇಲೆಗದ್ದೆ, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 14-04-2022 ರಂದು 14-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 14/2022, ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ರಾಮಚಂದ್ರ ತಂದೆ ಗಣೇಶ ಹೆಗಡೆ, ಪ್ರಾಯ-53 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹುಟೊರ್ತಿ, ಹಿತ್ಲಳ್ಳಿ ಗ್ರಾಮ, ತಾ: ಯಲ್ಲಾಪುರ. ಈತನು ಕಳೆದ ಹಲವು ವರ್ಷಗಳಿಂದ ವಿಪರೀತ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡು ಕರಳು ಬೇನೆಯಿಂದ ಬಳಲುತ್ತಾ ಕೆ.ಎಸ್ ಹೆಗಡೆ, ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವನು, ಕಳೆದ ದಿನಾಂಕ: 11-04-2022 ರಂದು ಸಾಯಂಕಾಲ ತಾನು ‘ಕೆ.ಎಸ್ ಹೆಗಡೆ ಆಸ್ಪತ್ರೆಗೆ ಹೋಗಿ ಬರುತ್ತೇನೆ’ ಅಂತಾ ಮನೆಯಲ್ಲಿ ಹೇಳಿ ಮನೆಯಿಂದ ಉಮ್ಮಚಗಿ ಗ್ರಾಮದ ತನ್ನ ಗೆಳೆಯ ಸಾಕ್ಷಿದಾರ ಸಜ್ಜಿ ಮೋಹನ ರವರ ಮನೆಯಲ್ಲಿ ಬಂದು ಉಳಿದುಕೊಂಡವನು, ದಿನಾಂಕ: 13-04-2022 ರಂದು ರಾತ್ರಿ 08-00 ಗಂಟೆಯಿಂದ ದಿನಾಂಕ: 14-04-2022 ರಂದು ಬೆಳಿಗ್ಗೆ 08-15 ಗಂಟೆಯ ನಡುವಿನ ಅವಧಿಯಲ್ಲಿ ಸಜ್ಜಿ ಮೋಹನ ರವರ ಮನೆಯ ಹಾಲಿನಲ್ಲಿರುವ ಮಂಚದ ಮೇಲೆ ಮಲಗಿದವನು, ಯಾವುದೋ ಕಾಯಿಲೆಯಿಂದಲೋ ಅಥವಾ ಇನ್ನಾವುದೋ ರೀತಿಯಿಂದ ಮೃತಪಟ್ಟಿದ್ದು, ಮೃತನ ಮರಣದಲ್ಲಿ ಸಂಶಯ ಇರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಶ್ಯಾಮಲಾ ಕೋಂ. ರಾಮಚಂದ್ರ ಹೆಗಡೆ, ಪ್ರಾಯ-43 ವರ್ಷ, ವೃತ್ತಿ-ಗೃಹಿಣಿ, ಸಾ|| ಹುಟೊರ್ತಿ, ಹಿತ್ಲಳ್ಳಿ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 14-04-2022 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 28-04-2022 06:15 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080