ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 14-08-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 35/2021, ಕಲಂ: 283, 337 ಐಪಿಸಿ  ನೇದ್ದರ ವಿವರ...... ನಮೂದಿತ ಆರೋಪಿತ ಪುಂಡಪ್ಪ ತಂದೆ ಸಣ್ಣಸಿದ್ದಪ್ಪ ಜುಂಜಾ ಗೌಡರ, ಪ್ರಾಯ-34 ವರ್ಷ, ಸಾ|| ನೀರಲಕೇರಿ, ತಾ: ಬಾದಾಮಿ, ಜಿ: ಬಾಗಲಕೋಟ (ಲಾರಿ ನಂ: ಕೆ.ಎ-28/ಡಿ-0213 ನೇದರ ಚಾಲಕ). ಈತನು ದಿನಾಂಕ: 14-08-2021 ರಂದು ಬೆಳಗಿನ 04-15 ಗಂಟೆಯ ಸಮಯಕ್ಕೆ ತನ್ನ ಲಾರಿ ನಂ: ಕೆ.ಎ-28/ಡಿ-0213 ನೇದನ್ನು ನಿರ್ಲಕ್ಷ್ಯತನದಿಂದ 6 ಮೈಲ್, ಚೆಂಡಿಯಾ ಹತ್ತಿರ ಅರ್ಧ ಹೆದ್ದಾರಿಯ ಮೇಲೆ ಯಾವುದೇ ಸಿಗ್ನಲ್ ಹಾಕದೇ, ವಾಹನ ಸಂಚಾರಕ್ಕೆ ಅಡ್ಡಿ ಆತಂಕವಾಗುವಂತೆ ನಿಲ್ಲಿಸಿಟ್ಟಿದ್ದು, ಪಿರ್ಯಾದಿಯವರು ಹಾಗೂ ಚಾಲಕ ಶ್ರೀ ನವನಾಥ ಮಧುಕರ ಪಠಾಡೆ ರವರು ಕಂಟೇನರ್ ಟ್ರೇಲರ್ ನಂ: ಎಮ್.ಎಚ್-46/ಎಚ್-6979 ನೇದನ್ನು ಕಾರವಾರ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅವರ ವಾಹನಕ್ಕೆ ಇನ್ನೊಂದು ಕಾರ್ ಓವರಟೇಕ್ ಮಾಡಿಕೊಂಡು ಹೋಗಿದ್ದು, ಕಂಟೇನರ್ ಟ್ರೇಲರ್ ಚಾಲಕನು ಮುಂದೆ ಹೋಗಲು ಜಾಗ ಸಾಕಾಗದೇ ಬ್ರೇಕ್ ಹಾಕಿದರೂ ವಾಹನದ ಕ್ಯಾಬಿನ್ ಎಡಭಾಗ ಮುಂದುಗಡೆ ನಿಲ್ಲಿಸಿಟ್ಟ ಆರೋಪಿತನ ಲಾರಿ ನಂ: ಕೆ.ಎ-28/ಡಿ-0213 ನೇದರ ಹಿಂದಿನ ಭಾಗಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿ, ಪಿರ್ಯಾದಿಯವರಿಗೆ ಹಾಗೂ ಚಾಲಕ ಶ್ರೀ ನವನಾಥ ಮಧುಕರ ಪಠಾಡೆ ರವರಿಗೆ ತಲೆಗೆ, ಮೈಗೆ, ಕೈಗೆ ಹಾಗೂ ಕಾಲಿಗೆ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಸಾಜಿದ್ ತಂದೆ ಮಹ್ಮದ್ ಅಕ್ರಮ್, ಪ್ರಾಯ-28 ವರ್ಷ, ವೃತ್ತಿ-ಕ್ಲೀನರ್ ಕೆಲಸ, ಸಾ|| ಭಾಗನಗರ, ಖಲಿಲಾಬಾದ್, ಧೂದಾರಾ, ಬಾಠ ಪರಾಗ್, ಸಂತ ಖಬೀರ್ ನಗರ, ಉತ್ತರ ಪ್ರದೇಶ ರವರು ದಿನಾಂಕ: 14-08-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 125/2021, ಕಲಂ: 323, 324, 504, 506 ಐಪಿಸಿ  ನೇದ್ದರ ವಿವರ...... ನಮೂದಿತ ಆರೋಪಿತರು 1]. ಯೋಗೇಶ @ ರಾಣಾ ನಾಯ್ಕ, ಪ್ರಾಯ-25 ವರ್ಷ, ವೃತ್ತಿ-ಚಾಲಕ, ಸಾ|| ಬೊಬ್ರುವಾಡ, ತಾ: ಅಂಕೋಲಾ, 2]. ಆದಿತ್ಯ ತಂದೆ ಕುಮಾರ ನಾಯ್ಕ, ಪ್ರಾಯ-22 ವರ್ಷ, ವೃತ್ತಿ-ಲಾರಿ ಕ್ಲೀನರ, ಸಾ|| ಲಕ್ಮೇಶ್ವರ, ತಾ: ಅಂಕೋಲಾ. ಪಿರ್ಯಾದಿಯವರು ದಿನಾಂಕ: 14-08-2021 ರಂದು 16-00 ಗಂಟೆಗೆ ತಾನು ಕೆಲಸ ಮಾಡುವ ಶಶಿಕಾಂತ ರವರ ಅಂಗಡಿಗೆ ಹೋಗಲು ಸುಚಿತ್ರಾ ಮೆಡಿಕಲ್ ಎದುರು ನಡೆದುಕೊಂಡು ಬರುತ್ತಿದ್ದಾಗ ಆಟೋ ಸ್ಟ್ಯಾಂಡ್ ಕಡೆ ತಿರುಗಿ ನೋಡಿದಾಗ ನಮೂದಿತ ಆರೋಪಿತರು ಯಾಕೆ ತಿರುಗಿ ನೋಡಿದೆ ‘ಬೋಳಿ ಮಗನೆ, ಸೂಳಾ ಮಗನೆ’ ಅಂತಾ ಅವಾಚ್ಯ ಶಬ್ದದಿಂದ ಬೈಯ್ದು, ಆರೋಪಿತರಿಬ್ಬರೂ ಪಿರ್ಯಾದಿಯವರಿಗೆ ಕೈಯಿಂದ ಎಡಗೆನ್ನೆಗೆ ಮತ್ತು ತಲೆಗೆ ಹೊಡೆದು ಪಿರ್ಯಾದಿಯ ತಲೆಗೆ ಗಾಯ ಪಡಿಸಿರುತ್ತಾರೆ. ನಂತರ ಇಬ್ಬರೂ ‘ಈ ದಿವಸ ನಿನಗೆ ಇಷ್ಟಕ್ಕೆ ಬಿಟ್ಟಿದ್ದೇವೆ. ಮುಂದೊಂದು ದಿನ ನಿನ್ನನ್ನು ಸಾಯಿಸದೇ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ವಿವೇಕ ತಂದೆ ಮುರಾರಿ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತೆಂಕಣಕೇರಿ, ತಾ: ಅಂಕೋಲಾ ರವರು ದಿನಾಂಕ: 14-08-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 213/2021, ಕಲಂ: ಹೆಂಗಸು ಕಾಣೆ  ನೇದ್ದರ ವಿವರ...... ನಮೂದಿತ ಕಾಣೆಯಾದ ಶ್ರೀಮತಿ ಗಂಗಾ ಕೋಂ. ಗಣೇಶ ಭಟ್, ಪ್ರಾಯ-31 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಬೀರಲಮಕ್ಕಿ, ತಾ: ಸಿದ್ದಾಪುರ, ಹಾಲಿ ಸಾ|| ಕೊಂಡಾಕುಳಿ, ಪೋ: ಸಾಲ್ಕೋಡ, ತಾ: ಹೊನ್ನಾವರ. ಪಿರ್ಯಾದಿಯ ಮಗಳಾದ ಇವಳು ತನ್ನ ಗಂಡನ ಮನೆಯಿರುವ ಸಿದ್ದಾಪುರದ ಬೀರಲಮಕ್ಕಿಯಿಂದ ದಿನಾಂಕ: 07-08-2021 ರಂದು ಬೆಳಿಗ್ಗೆ 11-00 ಗಂಟೆಗೆ ಹೊನ್ನಾವರದ ಸಾಲ್ಕೋಡ ಕೊಂಡಾಕುಳಿಯಲ್ಲಿರುವ ತನ್ನ ತವರು ಮನೆಗೆ ಬಂದಿದ್ದು, ಮಧ್ಯಾಹ್ನ 16-00 ಗಂಟೆಗೆ ತಾನು ಹೊನ್ನಾವರಕ್ಕೆ ಹೋಗಿ ಬರುತ್ತೆನೆಂದು ಮನೆಯಲ್ಲಿ ಹೇಳಿ ಹೋದವಳು, ಈವರೆಗೂ ಮನೆಗೆ ವಾಪಸ್ ಬಾರದೇ ಗಂಡನ ಮನೆಗೂ ಹೋಗದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಮಗಳಿಗೆ ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗೇಶ ತಂದೆ ಸುಬ್ರಾಯ ನಾಯ್ಕ, ಪ್ರಾಯ-57 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೊಂಡಾಕುಳಿ, ಸಾಲ್ಕೋಡ, ತಾ: ಹೊನ್ನಾವರ ರವರು ದಿನಾಂಕ: 14-08-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 112/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಾರುತಿ ತಂದೆ ವೆಂಕ್ಟ ನಾಯ್ಕ, ಸಾ|| ಮಾಡಗೇರಿ, ತಾ: ಹೊನ್ನಾವರ (ಇಕೋ ಕಾರ್ ನಂ: ಕೆ.ಎ-47/ಎಮ್-7815 ನೇದರ ಚಾಲಕ). ಈತನು ದಿನಾಂಕ: 14-08-2021 ರಂದು ಮಧ್ಯಾಹ್ನ 14-50 ಗಂಟೆಯ ಸುಮಾರಿಗೆ ಅನಂತವಾಡಿ ಗ್ರಾಮದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯಲ್ಲಿ ತಾನು ಚಲಾಯಿಸುತ್ತಿದ್ದ ಇಕೋ ಕಾರ್ ನಂ: ಕೆ.ಎ-47/ಎಮ್-7815 ನೇದನ್ನು ಭಟ್ಕಳ ಕಡೆಯಿಂದ ಮಂಕಿ, ಹೊನ್ನಾವರ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ರಸ್ತೆಯ ಅಪ್ಪಿನಲ್ಲಿ ನಿಧಾನವಾಗಿ ಪಿರ್ಯಾದಿಯು ಚಲಾಯಿಸಿಕೊಂಡು ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-31/ಎಫ್-1375 ನೇದರ ಹಿಂಭಾಗದ ಬಲಬದಿಯ ಮೂಲೆಯಲ್ಲಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರಿನಲ್ಲಿದ್ದ ರಾಜೇಶ್ವರಿ ಪ್ರಕಾಶ ನಾಯ್ಕ ಇವರಿಗೆ ಮೈಕೈಗೆ ಗಾಯನೋವು ಹಾಗೂ ನಾಗವೇಣಿ ವೆಂಕ್ಟ ನಾಯ್ಕ ಇವರಿಗೆ ತಲೆಗೆ ರಕ್ತಗಾಯ ಹಾಗೂ ಮೈಕೈಗೆ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಕಾರ್ ಚಾಲಕನು ತನಗೂ ಸಹ ತನ್ನ ತಲೆಗೆ ಮತ್ತು ಎಡಗಾಲಿಗೆ ರಕ್ತದ ಗಾಯನೋವು ಪಡಿಸಿಕೊಂಡು ವಾಹನಗಳನ್ನು ಜಖಂ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಯಮನಪ್ಪ ಉಪ್ಪೇರಿ, ಪ್ರಾಯ-48 ವರ್ಷ, ವೃತ್ತಿ-ಕೆಎಸ್.ಆರ್.ಟಿ.ಸಿ ಬಸ್ ಚಾಲಕ, ಸಾ|| ಕಮಲಾಪುರ, ಹೊಸ ಎ.ಪಿ.ಎಮ್.ಸಿ, ಧಾರವಾಡ, ಹಾಲಿ ಸಾ|| ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ, ಭಟ್ಕಳ ರವರು ದಿನಾಂಕ: 14-08-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 108/2021, ಕಲಂ: 8(b), 20(a)(b) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ 1]. ನಿಂಗಪ್ಪ ತಂದೆ ದೇವೇಂದ್ರಪ್ಪ ಕಬ್ಬೇರ, ಪ್ರಾಯ-35 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹುಲಿಹೊಂಡ, ತಾ: ಮುಂಡಗೋಡ, 2]. ಪರಶುರಾಮ ತಂದೆ ದೇವೇಂದ್ರಪ್ಪ ಕಬ್ಬೇರ, ಪ್ರಾಯ-38 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹುಲಿಹೊಂಡ, ತಾ: ಮುಂಡಗೋಡ. ಈ ನಮೂದಿತ ಆರೋಪಿತರು ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಿಹೊಂಡ ಗ್ರಾಮದ ಅರಣ್ಯ ಅತಿಕ್ರಮಣ ಸರ್ವೇ ನಂ: 57 ರಲ್ಲಿರುವ ತಮ್ಮ ಬಾಬ್ತು ಕಬ್ಬಿನ ಹೊಲದಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೇ ಸುಮಾರು 2,000/- ರೂಪಾಯಿ ಬೆಲೆಬಾಳುವ 166 ಗ್ರಾಂ ತೂಕದಷ್ಟು ಇರುವ 11 ಗಾಂಜಾ ಗಿಡಗಳನ್ನು ಬೆಳೆಸಿದವರು, ದಿನಾಂಕ: 14-08-2021 ರಂದು ಪಿರ್ಯಾದಿಯವರು ತಮ್ಮ ಸಿಬ್ಬಂದಿ ಹಾಗೂ ಪತ್ರಾಂತಿಕ ಅಧಿಕಾರಿ ಮತ್ತು ಪಂಚರೊಂದಿಗೆ ಸೇರಿ ದಾಳಿ ಮಾಡಿದಾಗ 11 ಗಾಂಜಾ ಗಿಡಗಳೊಂದಿಗೆ ಆರೋಪಿ 1 ನೇಯವನು ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಬಸವರಾಜ ಮಬನೂರ, ಪಿ.ಎಸ್.ಐ, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 14-08-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 93/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಯಂಕಾ ತಂದೆ ಶಿರಿಯಾ ಗೌಡ, ಪ್ರಾಯ-43 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕುಳ್ಳೆ, ತಾ: ಸಿದ್ದಾಪುರ, 2]. ಗೋಪಾಲ ತಂದೆ ನಾಗು ಗೌಡ, ಪ್ರಾಯ-36 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕುಳ್ಳೆ, ತಾ: ಸಿದ್ದಾಪುರ, 3]. ಲಕ್ಷ್ಮಣ ಗಿರಿಯಾ ಗೌಡ, ಪ್ರಾಯ-36 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹುಕ್ಕಳಿ, ತಾ: ಸಿದ್ದಾಪುರ, 4]. ರವೀಶ ಶಂಕರ ಗೌಡ, ಪ್ರಾಯ-26 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕುಳ್ಳೆ, ತಾ: ಸಿದ್ದಾಪುರ, 5]. ವಿನೋದ ತಂದೆ ಮಾದೇವ ಗೌಡ, ಪ್ರಾಯ-52 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹುಕ್ಕಳಿ, ತಾ: ಸಿದ್ದಾಪುರ, 6]. ಸಂತೋಷ ತಂದೆ ಶಿವು ಗೌಡ, ಪ್ರಾಯ-25 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕುಳ್ಳೆ, ತಾ: ಸಿದ್ದಾಪುರ, 7]. ವಿನಯ ತಂದೆ ಮಂಜುನಾಥ ಕೊಡಿಯಾ, ಪ್ರಾಯ-28 ವರ್ಷ, ಸಾ|| ದುಗ್ಗನಗೋಳಿ, ಹೆಗ್ಗರಣೆ, ತಾ: ಸಿದ್ದಾಪುರ, 8]. ಮಂಜುನಾಥ ತಂದೆ ಮಾಬ್ಲಾ ಗೌಡ, ಪ್ರಾಯ-26 ವರ್ಷ, ಸಾ|| ಕುಳ್ಳೆ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರು ದಿನಾಂಕ: 13-08-2021 ರಂದು 21-00 ಗಂಟೆಗೆ ಸಿದ್ದಾಪುರ ತಾಲೂಕಿನ ಕುಳ್ಳೆಯ ಕಲ್ಲೇಶ್ವರ ದೇವಸ್ಥಾನದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜುಗಾರಾಟ ಆಡುತ್ತಿದ್ದಾಗ ಪಿರ್ಯಾದಿಯವರು ಅಧಿಕಾರಿ, ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸೇರಿ ದಾಳಿ ಮಾಡಿದಾಗ ಆರೋಪಿತರ ಪೈಕಿ ಆರೋಪಿ 1 ರಿಂದ 6 ನೇಯವರು 1). ನಗದು ಹಣ 8,205/- ರೂಪಾಯಿ, 2). 52 ಇಸ್ಪೀಟ್ ಎಲೆಗಳು, 3). ಮಂಡಕ್ಕೆ ಹಾಸಿದ್ದ ಒಂದು ಕಂಬಳಿ, 4). 2 ಅರ್ಧ ಉರಿದ ಕ್ಯಾಂಡಲ್ ಗಳು ಇವುಗಳೊಂದಿಗೆ ಸಿಕ್ಕಿದ್ದು ಹಾಗೂ ಆರೋಪಿ 7 ಮತ್ತು 8 ನೇಯವರು ದಾಳಿಯ ಕಾಲಕ್ಕೆ ಓಡಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕುಮಾರ ಕೆ, ಪೊಲೀಸ್ ನಿರೀಕ್ಷಕರು, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 14-08-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 93/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು ಭದ್ರಾ ತಂದೆ ಬೆಳ್ಳಾ ಗೌಡ, ಪ್ರಾಯ-43 ವರ್ಷ, ವೃತ್ತಿ-ವ್ಯಾಪಾರ, ಸಾ|| ಕಾರಗುಳಿ, ಪೋ: ಹೆಗ್ನೂರ, ತಾ: ಸಿದ್ದಾಪುರ. ಈತನು ದಿನಾಂಕ: 14-08-2021 ರಂದು 13-15 ಗಂಟೆಯ ಸುಮಾರಿಗೆ ತನ್ನ ಅನ್ಯಾಯದ ಲಾಭಕ್ಕೋಸ್ಕರ ಸಿದ್ದಾಪುರ ತಾಲೂಕಿನ ಗೋಳಿಮಕ್ಕಿ ಊರಿನ ಕನ್ನಡ ಶಾಲೆಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ ಆರೋಪಿತನು 1). ನಗದು ಹಣ 1,050/- ರೂಪಾಯಿ, 2). ಬಾಲ್ ಪೆನ್-1, 3). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-1 ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 14-08-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 14-08-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 30/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಸುಬ್ರಾಯ ತಂದೆ ಜಟ್ಟಿ ಮುಕ್ರಿ, ಪ್ರಾಯ-53 ವರ್ಷ, ವೃತ್ತಿ-ಕಾಯಿ ಕೊಯ್ಯುವ ಕೆಲಸ, ಸಾ|| ಕೆ.ವಿ ಹಿತ್ಲ, ಹಳದೀಪುರ ತಾ: ಹೊನ್ನಾವರ. ಪಿರ್ಯಾದುದಾರರ ಗಂಡನಾದ ಈತನು ದಿನಾಂಕ: 14-08-2021 ರಂದು ಮಧ್ಯಾಹ್ನ 12-45 ಗಂಟೆಯ ಸುಮಾರಿಗೆ ಹಳದೀಪುರದ ತಮ್ಮ ಮನೆಯ ಮುಂದಿನ ತೆಂಗಿನ ಮರ ಏರಿ ತೆಂಗಿನಕಾಯಿ ಕೊಯ್ಯುತ್ತಿದ್ದಾಗ ಆಕಸ್ಮಾತ್ ಆಗಿ ಕಾಲು ಜಾರಿ ತೆಂಗಿನ ಮರದಿಂದ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿದ್ದು, ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆ ಹೊನ್ನಾವರದಲ್ಲಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ 14-00 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇದರ ಹೊರತು ತನ್ನ ಗಂಡನ ಸಾವಿನಲ್ಲಿ ಬೇರೆ ಯಾವುದೆ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ದೇವಿ ಕೋಂ. ಸುಬ್ರಾಯ ಮುಕ್ರಿ, ಪ್ರಾಯ-46 ವರ್ಷ, ವೃತ್ತಿ-ಗೃಹಿಣಿ, ಸಾ|| ಕೆ.ವಿ ಹಿತ್ಲ, ಹಳದೀಪುರ, ತಾ: ಹೊನ್ನಾವರ ರವರು ದಿನಾಂಕ: 14-08-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 16-08-2021 01:22 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080