ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 14-12-2021
at 00:00 hrs to 24:00 hrs
1) ಯಲ್ಲಾಪುರ ಪೊಲೀಸ ಠಾಣೆ ಪ್ರಕರಣ ಸಂಖ್ಯೆ: 222/2021 ಕಲಂ:-279. 324, ಐ.ಪಿ.ಸಿ.ನೇದ್ದರ ವಿವರ: ಆಪಾದಿತ ಜಗ್ಗಾ @ ಜಗ್ಗು ತಂದೆ ರಾಮಪ್ಪಾ ಅಧಾನಿ ಸಾ|| ರೋಣ ಗದಗ ಜಿಲ್ಲೆ. ಟ್ಯಾಂಕರ್ ಲಾರಿ ನಂ.ಕೆ.ಎ.-16/ಡಿ-2840. ನೇದರ ಚಾಲಕನು ಟ್ಯಾಂಕರ್ ತನ್ನ ಟ್ಯಾಂಕರನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಅತಿವೇಗವಾಗಿ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಅರಬೈಲ್ ಘಟ್ಟದಲ್ಲಿಯ ಎಸ್ ತಿರುವಿನ ಹತ್ತಿರ ಇಳಿಜ್ಯಾರಾದ ರಸ್ತೆಯ ಮೇಲೆ ವೇಗ ನಿಯಂತ್ರಸಿದೇ ಗಟಾರಿನಲ್ಲಿ ಕೆಡವಿ ಅಪಘಾತ ಪಡಿಸಿದಲ್ಲದೇ, ಅಪಘಾತದ ವಿಷಯ ತಿಳಿದು ದಿನಾಂಕ 13-12-2021 ರಂದು ಬೆಳಿಗ್ಗೆ 10-30 ಗಂಟೆಗೆ ಸ್ಥಳಕ್ಕೆ ಬಂದ ಆಪಾದಿತ ಶ್ರೀ ನಟರಾಜ್ ಸಾ|| ಬೆಂಗಳೂರ್ (ಲಾರಿ ಮಾಲಕ)ಟ್ಯಾಂಕರ ಲಾರಿ ಚಾಲಕನಿಗೆ ಕಟ್ಟಿಗೆ ಬಡಿಗೆಯಿಂದ ಕೈಗಳ ಮೇಲೆ ಹಲ್ಲೆ ಮಾಡಿ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಶ್ರೀ. ವಿಲಿಯಂ ತಂದೆ ಕೈತಾನ್ ಲೊಪೀಸ್ ವಯಸ್ಸು 41 ವರ್ಷ, ಕ್ರೇನ್ ಆಪರೇಟರ್ ಸಾ|| ಬಾಳಗಿಮನೆ ಯಲ್ಲಾಪುರ ನೇಯವರು ನೀಡಿದ ದೂರನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
2) ಹೊನ್ನಾವರ ಪೊಲೀಸ ಠಾಣಾ ಪ್ರಕರಣ ಸಂಖ್ಯೆ: 340/2021 ಕಲಂ: 454, 457, 511 ಐ.ಪಿ.ಸಿ. ನೇದ್ದರ ವಿವರ: ಯಾರೋ ಕಳ್ಳರು ದಿನಾಂಕ :10.12.2021 ರಂದು 17.30 ಗಂಟೆಯಿಂದ ದಿನಾಂಕ :13.12.2021 ರಂದು ಬೆಳಗ್ಗೆ :10:00 ಗಂಟೆಯ ನಡುವಿನ ಅವಧಿಯಲ್ಲಿ ಹೊನ್ನಾವರ ಶಹರದ ಬ್ಯಾಂಕ ರಸ್ತೆಯಲ್ಲಿರುವ ಭಾರತಿ ವಿವಿದ್ದೋದೇಶ ಸಹಕಾರಿ ಸಂಘದ ಕಛೇರಿಗೆ ಹಾಕಿದ್ದ ಬೀಗವನ್ನು ಮುರಿದು ಒಳಗೆ ಹೊಕ್ಕಿ ಕಳುವು ಮಾಡಲು ಪ್ರಯತ್ನಿಸಿದ ಶ್ರೀ ಮತಿ ವೀಣಾ ಕೋಂ ಸುರೇಶ ಅಣ್ವೇಕರ 52-ವರ್ಷ, ಉದ್ಯೋಗ-ಕಾರ್ಯದರ್ಶಿಗಳು ಸಾ||ಮಠದ ಹತ್ತಿರ ಕರ್ಕಿ ಹೊನ್ನಾವರ ಇವರು ನೀಡಿರುವ ದೂರನ್ನು ದಾಖಲಿಸಿ ಪತ್ತೆ ಕಾರ್ಯ ಕೈಗೊಳ್ಳಲಾಗಿದೆ.
3) ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ 101/2021 ಕಲಂ: 341, 323, 504, 506 ಐ.ಪಿ.ಸಿ. ನೇದ್ದರ ವಿವರ: ದೂರುದಾರರಉ ದಿನಾಂಕ: 14/12/2021 ರಂದು ಬೆಳಿಗ್ಗೆ 09:00 ಗಂಟೆಗೆ ಅವರ ಸ್ಕೂಟಿ ನಂ ಕೆಎ -31 ಇಸಿ- 6461 ನೇದನ್ನು ಚಲಾಯಿಸಿಕೊಂಡು ಶಿರಸಿ-ಹುಬ್ಬಳ್ಳಿ ರಸ್ತೆಯಲ್ಲಿರುವ ಸರ್ಕಾರಿ ಆಯುರ್ವೇಧಿಕ ಆಸ್ಪತ್ರೆಗೆ ಚಿಕಿತ್ಸೆಗೆ ಹೋದವರು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ರಜೆಯ ಮೇಲೆ ಇರುವುದಾಗಿ ತಿಳಿಸಿದಾಗ ಫಿರ್ಯಾದಿಯವರು ಮರಳಿ ಅವರ ಮನೆಗೆ ಅವರ ಸ್ಕೂಟಿಯನ್ನು ಚಲಾಯಿಸಿಕೊಂಡು ಎ.ಪಿ.ಎಮ್.ಸಿ ಮಾರ್ಗವಾಗಿ ಯಲ್ಲಾಪುರ ರಸ್ತೆಗೆ ಬಂದು 09:45 ಗಂಟೆಗೆ ಅಶ್ವಿನಿ ಸರ್ಕಲ್ ಹತ್ತಿರ ತಲುಪಿದಾಗ ಆಪಾದಿತ ನಾದ ಇಜಾಜ್ ಅಹಮ್ಮದ ಹೊನ್ನಾವರ ಸಾ: ಟಿಪ್ಪುನಗರ, ಶಿರಸಿ ಇತನು ಫಿರ್ಯಾದಿಯವರ ಹಿಂದಿನಿಂದ ಮೋಟಾರ ಸೈಕಲ್ ಚಲಾಯಿಸಿಕೊಂಡು ಬಂದವನು ಯಾವುದೇ ಸೂಚನೆಗಳನ್ನು ನೀಡದೇ ಫಿರ್ಯಾದಿಯವರ ಮುಂದುಗಡೆಯಿಂದ ತನ್ನ ಮೋಟಾರ ಸೈಕಲ್ ನ್ನು ಹೊಸಪೇಟೆ ರಸ್ತೆ ಕಡೆಗೆ ತಿರುಗಿಸಿದ್ದು, ಆಗ ಫಿರ್ಯಾದಿಯವರು ರಸ್ತೆಯಲ್ಲಿ ಮೋಟಾರ ಸೈಕಲ್ ನ್ನು ಹಿಂದೆ ಮುಂದೇ ನೋಡಿಕೊಂಡು ಚಲಾಯಿಸುವಂತೆ ಹೇಳಿದಾಗ ಆರೋಪಿತನು ತನ್ನ ಮೋಟಾರ ಸೈಕಲನ್ನು ಹಿಂತಿರುಗಿಸಿಕೊAಡು ಬಂದು ಫಿರ್ಯಾದಿಯವರ ಸ್ಕೂಟಿಯ ಮುಂದೆ ಅಡ್ಡಗಟ್ಟಿ ನಿಲ್ಲಿಸಿ ನೀನು ಯಾರು? ಚೀನಾಲ್ಕೆ ನನಗೆ ಹೇಳಲು ಎಂದು ಅವಾಚ್ಯವಾಗಿ ಬೈದು ಒಮ್ಮೇಲೆ ಮೈ ಮೇಲೆ ಏರಿ ಬಂದು ಕೈಯಿಂದ ಫಿರ್ಯಾದಿಯವರ ಎಡಕನ್ನೆಗೆ ಹೊಡೆದು ದು:ಖಾಪತ ಪಡಿಸಿ ತನಗೆ ಬುದ್ದಿ ಹೇಳಲು ಬಂದರೆ ಸಾಯಿಸಿಬೀಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ ಬಗ್ಗೆ ಶ್ರೀ ಗಣೇಶ ತಂದೆ ಬಂಗಾರಿ ಜೋಗಳೆಕರ ಪ್ರಾಯ: 61 ವರ್ಷ ವೃತ್ತಿ: ನಿವೃತ್ತ ನೌಕರ ಸಾ: ಗುರುನಗರ, 4 ನೇ ಅಡ್ಡರಸ್ತೆ, ಶಿರಸಿ ಇವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
4) ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ 102/2021 ಕಲಂ: 323, 324, 504 ಐ.ಪಿ.ಸಿ. ನೇದ್ದರ ವಿವರ:ದೂರುದಾರರು ದಿನಾಂಕ: 14/12/2021 ರಂದು ಬೆಳಿಗ್ಗೆ 10:30 ಗಂಟೆಗೆ ಅವರ ಬೈಕ್ ಚಲಾಯಿಸಿಕೊಂಡು ಯಲ್ಲಾಪುರ ರಸ್ತೆ ಅಂಬೇಡ್ಕರ ಭವನ ಎದುರಿನ ಅವರ ವರ್ಕ್ಸಶಾಪ್ ನಿಂದ ಹಳೇ ಬಸ್ ಸ್ಟಾö್ಯಂಡಗೆ ಹೋಗುತ್ತಾ ಅಶ್ವಿನಿ ಸರ್ಕಲ್ ಹತ್ತಿರ ತಲುಪಿದಾಗ ಹೊಸಪೇಟೆ ರಸ್ತೆಗೆ ಹೋಗಲು ಅವರ ಬೈಕ್ನ್ನು ಇಂಡಿಕೇಟರ ಹಾಕಿ ತಿರುಗಿಸಿದಾಗ ಫಿರ್ಯಾದಿಯವರ ಹಿಂದುಗಡೆಯಿಂದ ಬೈಕ ಚಲಾಯಿಸಿಕೊಂಡು ಬಂದ ವ್ಯಕ್ತಿ ಬೋಳಿಮಗನೇ ಬೈಕ ನಿಲ್ಲಿಸು ಅಂತಾ ಹೇಳಿದ್ದು, ಆಗ ದೂರುದಾರರು ಬೈಕ್ ನಿಲ್ಲಿಸಿದಾಗ ಆರೋಪಿತನು ಸೂಳೇ ಮಗನೇ ಎಂದು ದೂರುದಾರರಿಗೆ ಬೈದು ಕೈಯಿಂದ ಕೆನ್ನೆಗೆ ಹೊಡೆದು, ಕುತ್ತಿಗೆ ಅಡಚಿ, ತಲೆಗೆ ಹೊಟ್ಟೆಗೆ ಕೈಯಿಂದ ಹೊಡೆದು ಬೈಕ್ ಚಾವಿಯನ್ನು ತೆಗೆದುಕೊಂಡು ದೂರುದಾರರ ಮುಖಕ್ಕೆ ಹೊಡೆದು ಗಾಯ ನೋವುಂಟು ಪಡಿಸಿದ ಬಗ್ಗೆ ಶ್ರೀ ಇಜಾಜ್ ಅಹಮ್ಮದ ತಂದೆ ಅಬ್ದುಲ್ ಶೂಕೂರ ಹೊನ್ನಾವರ ಪ್ರಾಯ: 29 ವರ್ಷ ವೃತ್ತಿ: ಕುಷನ್ ವರ್ಕ್ಸ ಸಾ: ಬನವಾಸಿ ರಸ್ತೆ, ಟಿಪ್ಪುನಗರ, ಶಿರಸಿ ಇವರು ನೀಡಿದ ದೂರನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
5) ಅಂಕೋಲಾ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ: 185/2021 ಕಲಂ: 171(ಎಚ್) ಐಪಿಸಿ ನೇದ್ದರ ವಿವರ: ದಿನಾಂಕ :10-12-2021 ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ಮತದಾನ ದಿನದಂದು ಪಟ್ಟಣದ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ಪುರಸಭೆ ಸದಸ್ಯರಿಂದ ಮತ ಚಲಾಯಿಸುವ ಬಗ್ಗೆ ಕಾಯಿ ಮುಟ್ಟಿ ಪ್ರಮಾಣ ಮಾಡಿದ ಬಗ್ಗೆ ದಿನಾಂಕ :11-12-2021 ರಂದು ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿದ್ದು ಪುರಸಭೆ ಸದಸ್ಯರು ಕರ್ನಾಟಕ ವಿಧಾನ ಪರಿಷತಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಜರುಗಿದ ಚುನಾವಣೆ 2021 ರ ಮತಕ್ಕಾಗಿ ದಿನಾಂಕ :10-12-2021 ರಂದು ಪುರಸಭೆ ಸದಸ್ಯರು ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ಕಾಯಿ ಮುಟ್ಟಿ ಆಣೆ ಪ್ರಮಾಣ ಮಾಡಿ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ದೂರುದಾರರಾದ ಶ್ರೀ ಉದಯ ವಿ. ಕುಂಬಾರ, ತಹಸೀಲ್ದಾರರು, ಅಂಕೋಲಾ ತಾಲೂಕ, ರವರು ನೀಡಿದ ದೂರನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
6) ಮುರ್ಡೇಶ್ವರ ಪೊಲೀಸ್ ಠಾಣೆ ಪ್ರಕರಣ ಸಂ: 109/2021 ಕಲಂ 341, 323, 504, 506 ಸಹಿತ 34 ಐ.ಪಿ.ಸಿ. ನೇದ್ದರ ವಿವರ: ದಿನಾಂಕ: 13-12-2021 ರಂದು ರಾತ್ರಿ 21:30 ಗಂಟೆಗೆ ಶಿರಾಣಿ ದೇವಸ್ಥಾನದ ಹತ್ತಿರ ರಸ್ತೆಯ ಬದಿಯಲ್ಲಿ ಫಿರ್ಯಾದಿತನ್ನ ಮೋಟಾರ್ ಸೈಕಲ್ ನಿಲ್ಲಿಸಿಕೊಂಡು ಸ್ನೇಹಿತನಾದ ಗೋಮ ಸೋಮಾ ಮರಾಠಿ ಈತನೊಂದಿಗೆ ಮಾತನಾಡುತ್ತಾ ನಿಂತುಕೊಂಡಿರುವಾಗ ಆಪಾದಿತ 1) ಗೋವಿಂದ ತಂದೆ ಈರಯ್ಯ ಗೊಂಡ ಈತನು ತನ್ನ ಬೈಕನ್ನು ಗೋಮ ಸೋಮಾ ಮರಾಠಿ ಈತನಿಗೆ ಹಾಯಿಸಲು ಬಂದು, ಪಿರ್ಯಾದಿಯನ್ನು ಉದ್ದೇಶಿಸಿ ಬೋಳಿಮಗೆನೆ ರಸ್ತೆಯ ಮೇಲೆ ಬೈಕ್ ನಿಲ್ಲಿಸಿ ತೊಂದರೆ ಕೊಟ್ಟಿದ್ದಿಯಾ ಅಂತಾ ಹೇಳಿ ಜಗಳ ತೆಗೆದು, ಮರಾಠಿ ಸುಳೆಮಕ್ಕಳಾ, ನೀವು ಏನ ಮಾಡುತ್ತಿರಿ ನೋಡಿಕೊಳ್ಳುತ್ತೇನೆ ಅಂತಾ ಹೇಳಿದ, ಅದೇ ವೇಳೆಗೆ ಆತನ ಗೆಳೆಯ ಆಪಾದಿತ 2) ಹರಿಶ ಗಣಪತಿ ನಾಯ್ಕ ಈತನು ಬಂದು ಆತನಿಗೆ ಸಾತನೀಡಿ ಇಬ್ಬರು ಸೇರಿಕೊಂಡು, ಪಿರ್ಯಾದಿಯ ಶರ್ಟ ಹಿಡಿದು, ದೂಡಾಡಿ ಆಪಾದಿತ 1) ಗೋವಿಂದ ಈರಯ್ಯಾ ಗೊಂಡ ಈತನು ಸ್ಥಳದಲ್ಲಿ ಬಿದ್ದ ಕಲ್ಲು ಹಿಡಿದು ಹೊಡೆಯಲು ಮುಂದಾದಾಗ, ಅಲ್ಲೆ ಹತ್ತಿರದಲ್ಲಿದ್ದ ಪಿರ್ಯಾದಿಯ ತಮ್ಮ ಮತ್ತು ಸ್ನೇಹಿತ ಸತೀಶ ಮರಾಠಿ ಇವರು ಬಂದು ಬಿಡಿಸಿದ್ದು, ಆಗ ಆಪಾದಿತ ಗೋವಿಂದ ಈತನು ಪಿರ್ಯಾದಿ ಎಡ ಕೈ ಹಿಡಿದು ತಳ್ಳಿ, ಪಿರ್ಯಾದಿಯು ನೆಲಕ್ಕೆ ಬಿಳುವಂತೆ ಮಾಡಿ, ಎಡ ಕೈ ನೋವು ಪಡಿಸಿದಾಗ, ಪಿರ್ಯಾದಿಯು ಪೊಲೀಸ್ರನ್ನು ಕರೆಸುತ್ತೇನೆ ಅಂತಾ ಹೇಳಿದಾಗ ಆಪಾದಿತ ಗೋವಿಂದ ಈತನು ತನ್ನ ಶರ್ಟನ್ನು ಹರಿದುಕೊಂಡು ಪಿರ್ಯಾದಿಗೆ ತೋರಿಸಿ ಈಗ ಪೊಲೀಸ್ ಕಂಪ್ಲೇಂಟ್ ಕೋಡು ನೋಡಿಕೊಳ್ಳುತ್ತೇನೆ ಅಂತಾ ಹೆದರಿಸಿದಲ್ಲದೇ ಆರೋಪಿತರಿಬ್ಬರು ಸೇರಿ ತಮ್ಮ ಬೈಕನ್ನು ಪಿರ್ಯಾದಿಗೆ ಅಡ್ಡವಾಗಿ ನಿಲ್ಲಿಸಿ ಅಕ್ರಮಪ್ರತಿಬಂಧ ಮಾಡಿ, ನಾಳೆ ಈ ರಸ್ತೆಯಲ್ಲಿ ಹೇಗೆ ತರಕಾರಿ ವ್ಯಾಪಾರ ಮಾಡಲು ಹೋಗುತ್ತಿ ನೋಡೊಣ ಅಂತಾ ಹೇಳಿ ಜೀವ ತೆಗೆಯುವ ಬೇದರಿಕೆ ಹಾಕಿದ ಬಗ್ಗೆ ಶ್ರೀ ಲೊಕೇಶ ತಂದೆ ದೇವು ಮರಾಠಿ, ಪ್ರಾಯ: 29 ವರ್ಷ, ವೃತ್ತಿ: ತರಕಾರಿ ವ್ಯಾಪಾರ, ಸಾ|| ಬೆಳೂರ, ಉತ್ತರಕೊಪ್ಪ, ಭಟ್ಕಳ ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಳಾಗಿದೆ.
7) ಮುಂಡಗೋಡ ಪೊಲೀಸ್ ಠಾಣೆ ಅಪರಾದ ಸಂಖ್ಯೆ 167/2021 ಕಲಂ : 457, 380 ಐ.ಪಿ.ಸಿ. ನೇದರ ವಿವರ: ಯಾರೋ ಕಳ್ಳರು ದಿನಾಂಕ : 18-11-2021 ರಂದು ರಾತ್ರಿ 09-00 ಗಂಟೆಯಿಂದ ದಿನಾಂಕ : 19-11-2021 ರಂದು ಬೆಳಿಗ್ಗೆ 06-30 ಗಂಟೆಯ ನಡುವಿನ ಅವಧಿಯಲ್ಲಿ ಮುಂಡಗೋಡ ಕಲಘಟಗಿ ರಸ್ತೆಯಲ್ಲಿರುವ ಶಾಂತಾದುರ್ಗ ರೈಸ್ ಮಿಲ್ ಎದುರುಗಡೆ ಫಿರ್ಯಾದಿಯವರ ದುರ್ಗಾ ಹೊಟೇಲ್ ಹಿಂಬಾಗಿಲನ್ನು ಮುರಿದು ಒಳ ಹೊಕ್ಕು ಸುಮಾರು 15,000/- ರೂ ಬೆಲೆ ಬಾಳುವ ದಿನಸಿ ಸಾಮಾನು ಹಾಗೂ ಹೊಟೇಲ್ ಕ್ಯಾಶ್ ಡಬ್ಬದಲ್ಲಿ ಇಟ್ಟಿದ್ದ 5,000=00 ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಶ್ರೀ ಜಮನಪ್ಪ ತಂದೆ ಶಿವಪ್ಪ ಲಮಾಣಿ. ಜಾತಿ : ಹಿಂದೂ ಲಮಾಣಿ, ಪ್ರಾಯ : 40 ವರ್ಷ. ವೃತ್ತಿ : ಹೋಟೇಲ್ ವ್ಯಾಪಾರ. ಸಾ||ನೆಲ್ಲಿಹರವಿ ತಾ|| ಕಲಘಟಗಿ ಜಿ|| ಧಾರವಾಡ ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿ ಪತ್ತೆ ಕಾರ್ಯ ಕೈಗೊಳ್ಳಲಾಗಿದೆ.
8) ಹೊನ್ನಾವರ ಪೊಲೀಸ್ಠಾಣೆ ಪ್ರಕರಣ ಸಂಖ್ಯೆ: 342/2021 ಕಲಂ: 78 (ಂ) (iii) ಕೆ. ಪಿ. ಆ್ಯಕ್ಟ್ ನೇದ್ದರ ವಿವರ: ಆಪಾದಿತೆ1) ನಾಗವೇಣಿ ಕೊಂ ಮಂಜುನಾಥ ಗೌಡ, ಪ್ರಾಯ :49 ವರ್ಷ. ಉದ್ಯೋಗ : ಮನೆ ಕೆಲಸ. ಸಾ|| ಕರಿಮೂಲೆ, ಹಳದೀಪುರ, ತಾ||ಹೊನ್ನಾವರ. ಇವಳು ದಿವಸ ದಿನಾಂಕ 14-12-2021 ರಂದು 13-00 ಗಂಟೆಗೆ ಹೊನ್ನಾವರ ತಾಲ್ಲೂಕಾ ಕರಿಮೂಲೆ ಈರಪ್ಪನ ಹಿತ್ಲ ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದು ಓ.ಸಿ ಅಂಕೆ-ಸಂಕ್ಯೆಗಳ ಮೇಲೆ ಪಂಥವನ್ನಾಗಿ ಕಟ್ಟಿಸಿಕೊಂಡು ಓ.ಸಿ ಮಟ್ಕಾ ಜುಗಾರಾಟ ಆಡುತ್ತಿದ್ದಾಗ ದಾಳಿ ವೇಳೆ ತಾಬಾದಲ್ಲಿ 1) ಒಟ್ಟು ನಗದು ಹಣ 1300/- ರೂಪಾಯಿ 2) ಬಾಲ್ ಪೆನ್ನು -01, 3] ಓ.ಸಿ.ಅಂಕಿ ಸಂಖ್ಯೆ ಬರೆದ ಚೀಟಿ-01 ನೇಯವುಗಳೊಂದಿಗೆ ಸಿಕ್ಕಿದ್ದು. ಹೀಗೆ ಒಟ್ಟಾದ ಹಣವನ್ನು ಹಾಗು ಓಸಿ ಚೀಟಿಯನ್ನು ಓ,ಸಿ ಬುಕ್ಕಿಯಾದ 2 ನೇ ಆಪಾದಿತ ಸುಬ್ರಹ್ಮಣ್ಯ ತಂದೆ ಈರಾ ಗೌಡ, ಪ್ರಾಯ : 32 ವರ್ಷ. ಸಾ||ಕೆರವಳ್ಳಿ. ಜಲವಳ್ಳಿ ತಾ|| ಹೊನ್ನಾವರ ಈತನಿಗೆ ನೀಡುತ್ತಿರುವ ಬಗ್ಗೆ ತಿಳಿಸಿದ್ದರಿಂದ ಶ್ರೀ ಮಹಾಂತೇಶ ಉದಯ ನಾಯಕ. ಪಿ.ಎಸ್.ಐ [ತನಿಖೆ-1] ಹೊನ್ನಾವರ ಠಾಣೆ ರವರು ಇಬ್ಬರೂ ಆಪಾದಿತರ ಮೇಲೆ ಸರಕಾರದ ಪರವಾಗಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
9) ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ: 55/2021 ಕಲಂ; 283 ಐ.ಪಿ.ಸಿ ನೇದರ ವಿವರ: ಆಪಾದಿತ ಟ್ರೇಲರ ಲಾರಿ ವಾಹನ ನಂ ಎಮ್.ಹೆಚ್. 15/ಇಎಪ್ 2016 ನೇದರ ಚಾಲಕ ದಿನಾಂಕ 14-12-2021 ರಂದು 10-00 ಗಂಟೆಯ ಸಮಯಕ್ಕೆ ತನ್ನ ಟ್ರೇಲರ್ ಅನ್ನು ಅರ್ಗಾ ಬ್ಯಾಂಕ ಗೇಟ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66 ರ ಮೇಲೆ ಅಡ್ಡವಾಗಿ ನಿಲ್ಲಿಸಿ ಸಾರ್ವಜನಿಕ ಮಾರ್ಗದ ರಾಷ್ಟ್ರೀಯ ಹೆದ್ದಾರಿಯ ಮೇಲೆ ವಾಹನಗಳ ಸಂಚಾರ ಬಂದ್ ಆಗಿ ಸಾರ್ವಜನಿಕ ಹೆದ್ದಾರಿಯಲ್ಲಿ ಬರ ಹೋಗುವ ವಾಹನಗಳು ಎರಡೂ ದಿಕ್ಕಿನಲ್ಲಿ ಸಾಲಾಗಿ ನಿಂತು ಸುಮಾರು ಮೂರು ಘಂಟೆಗಳ ಕಾಲ ಸಂಚಾರಕ್ಕೆ ಅಡ್ಡಿಯನ್ನುಂಟು ಪಡಿಸಿದ ಶ್ರೀ ವಿಜಯ ಲಕ್ಷ್ಮೀ ಕಟಕದೊಂಡ, ಪಿ.ಎಸ್.ಐ., ಕಾರವಾರ ಗ್ರಾಮೀಣ ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
10)ಹೊನ್ನಾವರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 343/2021 ಕಲಂ: 323.354.354(ಬಿ). 504.506 ಐ.ಪಿ.ಸಿ. ನೇದ್ದರ ವಿವರ: ಈ ಪ್ರಕರಣ ದ ಆಪಾದಿತನು ಪಿರ್ಯಾದಿಯ ಮೈದುನ ಇದ್ದು ಪಿರ್ಯಾದಿ ಹಾಗೂ ಅಪಾದಿತ ಮನೆಗಳು ಹೊನ್ನಾವರ ತಾಲ್ಲೂಕಾ ಕರ್ಕಿ ಇಳಿಕಾರಿನಲ್ಲಿ ಅಕ್ಕಪಕ್ಕದಲ್ಲಿ ಇದ್ದು ಅಪಾದಿತ ನು ಪಿರ್ಯಾದಿಯ ಗಂಡನೊಂದಿಗೆ ಆಸ್ತಿಯಲ್ಲಿ ಪಾಲು ಮಾಡಿಕೊಡುವಂತೆ ಜಗಳ ಮಾಡುತ್ತಾ ಬಂದಿದ್ದು ಪಿರ್ಯಾದಿಯ ಗಂಡನಾದ ರಾಮಚಂದ್ರ ಗಣಪತಿ ದೇಶಭಂಡಾರಿ ಇವರು ಅಪಾದಿತನಿಗೆ ಅಸ್ತಿಯನ್ನು ಪಾಲು ಮಾಡುಕೊಡುವುದಾಗಿ ಹೇಳಿದ್ದು ಈ ವಿಷಯವಾಗಿ ಅಪಾದಿತನು ಪಿರ್ಯಾದಿ ಹಾಗೂ ಪಿರ್ಯಾದಿ ಗಂಡನೊಂದಿಗೆ ದ್ವೇಷವನ್ನು ಸಾಧಿಸುತ್ತಾ ಬಂದಿದ್ದು. ದಿನಾಂಕ 14-12-2021 ರಂದು 16-00 ಗಂಟೆಯ ಸುಮಾರಿಗೆ ಪಿರ್ಯಾದಿ ಹಾಗೂ ಪಿರ್ಯಾದಿ ಗಂಡ ಕರ್ಕಿ ಇಳಿಕಾರನಲ್ಲಿರುವ ತಮ್ಮ ಮನೆಯಲ್ಲಿ ಇದ್ದಾಗ ಅಪಾದಿತನು ಪಿರ್ಯಾದಿಯ ಮನೆಯ ಹತ್ತಿರ ಬಂದು ಪಿರ್ಯಾದಿಯ ಗಂಡನನ್ನು ಉದ್ದೇಶಿಸಿ ಅವಾಚ್ಯವಾಗಿ ಬೈಯ್ದು ಮನೆಯಿಂದ ಹೊರಗೆ ಬಾ. ತನಗೆ ಆಸ್ತಿಯನ್ನು ಪಾಲು ಮಾಡಿ ಕೊಡುವುದಿಲ್ಲವಾ ಅಂತಾ ಅವಾಚ್ಚವಾಗಿ ಬೈಯಲು ಪ್ರಾರಂಭಿಸಿದ್ದು. ಆಗ ಅಪಾದಿತನು ಬೈಯುವುದನ್ನು ಕೇಳಿದ ಪಿರ್ಯಾದಿ ಹಾಗೂ ಪಿರ್ಯಾದಿ ಗಂಡ ಮನೆಯಿಂದ ಹೊರಗೆ ಬಂದು ಅಪಾದಿತನಿಗೆ ಆ ರೀತಿ ಯಾಕೆ ಬೈಯುತ್ತಿದ್ದಿಯಾ ಅಂತಾ ಕೇಳಿದ್ದಕ್ಕೆ ಅಪಾದಿತನು ಪಿರ್ಯಾದಿಯ ಗಂಡನಿಗೆ ಬೊಳಿಮಗನೇ ಇನ್ನು ಯಾವಾಗ ಆಸ್ತಿ ಪಾಲುಮಾಡುತ್ತಿಯ ಅಂತಾ ಅವಾಚ್ಚವಾಗಿ ಬೈದು ಕೈಯಿಂದ ಮೈಮೇಲೆ ಹೊಡೆದು. ದೂಡಿ ಹಾಕಿದ್ದು ಆಗ ಅದನ್ನು ನೋಡಿದ ಪಿರ್ಯಾದಿಯು ಅಪಾದಿತನಿಗೆ ಯಾಕೆ ನನ್ನ ಗಂಡನಿಗೆ ಹೊಡೆಯುತ್ತಿದ್ದಿಯಾ ಅಂತಾ ಕೇಳಿದ್ದಕ್ಕೆ ಪಿರ್ಯಾದಿಗೂ ಸಹ ಅವಾಚ್ಚಾವಾಗಿ ಬೈದು.ಪಿರ್ಯಾದಿಯ ಮೈಮೇಲೆ ಕೈಹಾಕಿ ಜಡೆಯನ್ನು ಹಿಡಿದು ಜಗ್ಗಿ ದೂಡಿಹಾಕಿ. ಪಿರ್ಯಾದಿ ಧರಿಸಿದ್ದ ನೈಟಿಯನ್ನು ಹರಿದಿದ್ದಲ್ಲದೇ. ಪಿರ್ಯಾದಿ ಹಾಗೂ ಪಿರ್ಯಾದಿ ಗಂಡನಿಗೆ ಇವತ್ತು ಬಚಾವಾದಿರಿ. ಇನ್ನೊಂದು ದಿನ ನಿನಗೆ ಹಾಗೂ ನಿನ್ನ ಗಂಡನಿಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಶ್ರೀಮತಿ ರಮಾ ಕೋಂ ರಾಮಚಂದ್ರ ದೇಶಭಂಡಾರಿ. ಪ್ರಾಯ: 54 ವರ್ಷ. ಉದ್ಯೋಗ: ಮನೆಕೆಲಸ. ಸಾ||ಕರ್ಕಿ ಇಳಿಕಾರ. ತಾ||ಹೊನ್ನಾವರ. ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
11) ಕುಮಟಾ ಪೊಲೀಸ ಠಾಣೆ ಅಪರಾಧ ಸಂಖ್ಯೆ: 216/2021 ಕಲಂ: 279-337- 304(ಎ), ಐ.ಪಿ.ಸಿ. ನೇದ್ದರ ವಿವರ: ದಿನಾಂಕ : 14-12-2021 ರಂದು 21-30 ಗಂಟೆಗೆ ಪಿರ್ಯಾಧಿ ಮತ್ತು ಅವರ ಸ್ನೇಹಿತರಾದ ವಸಂತ ಬಡಗಿ, ಪ್ರದೀಪ ನಾಯ್ಕ, ರವಿ ಪೂಜಾರಿ, ಕಬೀರ ನೀಲಕುಂದ ಹಾಗೂ ಕಾರ್ ಚಾಲಕ ದಿವಾಕರ ನಾಯ್ಕ ಎಲ್ಲರು ಸೇರಿ ಕಾರ್ ನಂಬರ್ : ಕೆ.ಎ.04 ಎ.ಎ. 6059 ರಲ್ಲಿ ರಾ. ಹೆದ್ದಾರಿ 69 ನೇದರ ಮೇಲಾಗಿ ಕುಮಟಾ-ಕತಗಾಲ ಮಾರ್ಗವಾಗಿ ಶಿರ್ಶಿ ಕಡೆಗೆ ಹೋಗುವಾಗ ಆರೋಪಿ ಕಾರ್ ಚಾಲಕ ಮೃತ : ದಿವಾಕರ ತಂದ ಮಾದೇವ ನಾಯ್ಕ. ಪ್ರಾಯ : 46 ವರ್ಷ. ಉದ್ಯೋಗ : ಚಾಲಕ. ವಾಸ : ಕಾನಗೋಡ ತಾಲೂಕ : ಶಿರ್ಶಿ ಇತನು ಕಾರ್ನ್ನು ಅತೀ ವೇಗ ನಿಷ್ಕಾಳಜಿ ತನದಿಂದ ಚಲಾಯಿಸಿಕೊಂಡು ಹೋಗಿ ಸ್ಥಳದಲ್ಲಿ ರಸ್ತೆ ತಿರುವು ಇದ್ದರೂ ಸಹ ವಾಹನ ನಿಯಂತ್ರಣ ಮಾಡದೇ ಒಮ್ಮೆಲೆ ಕಾರನ್ನು ಎಡಕ್ಕೆ ಚಲಾಯಿಸಿ, ರಸ್ತೆಯ ಬದಿಯಲ್ಲಿ ಇದ್ದ ತಗ್ಗಿನಲ್ಲಿ ಕಾರ್ ಹಾಯಿಸಿ ಪಲ್ಟಿ ಕೆಡವಿ, ಸುಮಾರು 20 ಅಡಿ ದೂರ ಕಾರ್ ಪಲ್ಟಿಯಾಗಿ ಹೋಗಿ ರಸ್ತೆಯ ಮೇಲೆ ಪಲ್ಟಿಯಾಗಿ ಬಿದ್ದಿದ್ದು, ಕಾರ್ ನಲ್ಲಿ ಇದ್ದ ವಸಂತ ತಂದೆ ಗಣಪತಿ ಬಡಗಿ ಮತ್ತು ರವಿ ತಂದೆ ವೆಂಕಪ್ಪ ಪೂಜಾರಿ. ಇವರಿಗೆ ಸಾದಾ ಗಾಯ ನೋವು ಪಡೆಸಿದ್ದಲ್ಲದೇ, ಚಾಲಕ ತನಗೂ ಸಹ ತಲೆಗೆ ಗಂಭೀರ ಗಾಯ ನೋವು ಪಡೆಸಿಕೊಂಡಿದ್ದು, ಚಾಲಕನಿಗೆ ಚಿಕಿತ್ಸೆ ಕುರಿತು ಸರ್ಕಾರಿ ಆಸ್ಪತ್ರೆ ಕುಮಟಾಕ್ಕೆ 108 ಅಬುಲೇನ್ಸ ಮೂಲಕ ಕರೆದುಕೊಂಡು ಬರುತ್ತಿರುವಾಗ ದಾರಿ ವiಧ್ಯೆ ಕುಮಟಾ ಹತ್ತಿರ 22-00 ಗಂಟೆಗೆ ಮೃತಪಟ್ಟ ಬಗ್ಗೆ ಹರೀಶ್ ತಂದೆ ವಿಠ್ಠಲ ನಾಯ್ಕ. ಪ್ರಾಯ : 29 ವರ್ಷ. ಉದ್ಯೋಗ : ಕೃಷಿ ಕೆಲಸ. ವಾಸ : ಕಬ್ಬೆ. ಪೊಸ್ಟ : ಉಂಚಳ್ಳಿ. ತಾಲೂಕ : ಶಿರ್ಶಿ. ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 14-12-2021
at 00:00 hrs to 24:00 hrs
1) ಶಿರಸಿ ನಗರ ಪೊಲೀಸ್ ಠಾಣೆ ಅಸ್ವಾಬಾವಿಕ ಪ್ರಕರಣ ಸಂಖ್ಯೆ: 09/2021 ಕಲಂ. 174 ಸಿ.ಆರ್.ಪಿ.ಸಿ. ನೇದ್ದರ ವಿವರ: ಮೃತ:- ರಾಘವೇಂದ್ರ ತಂದೆ ಗಣೇಶ ಬೋವಿ ಪ್ರಾಯ 30 ವರ್ಷ ಉದ್ಯೋಗ ಬ್ಯಾಂಕನಲ್ಲಿ ಕೆಲಸ ಸಾ|| ಮಾರಿಕಾಂಬಾನಗರ, ಶಿರಸಿ ಈತನು ತಂದೆ ತಾಯಿಯವರನ್ನು ತುಂಬಾ ಪ್ರೀತಿಸುತ್ತಿದ್ದು, ತಂದೆ ತಾಯಿಯವರು ಮೃತಪಟ್ಟ ನಂತರ ಅದನ್ನೆ ಮನಸ್ಸಿಗೆ ಹಚ್ಚಿಕೊಂಡಿದ್ದವನು ಜೀವನದಲ್ಲಿ ಜಿಗುಪ್ಸೆ ಹೊಂದಿ, ತಾನು ಸಹ ಅವರು ಇದ್ದಲ್ಲಿಗೆ ಹೋಗಬೇಕು ಅಂತಾ ಹೇಳುತ್ತಿದ್ದವನು, ದಿನಾಂಕ-13-12-2021 ರಂದು 21-30 ಗಂಟೆಯಿಂದ ದಿನಾಂಕ-14-12-2021 ರಂದು 17-45 ಗಂಟೆಯ ನಡುವಿನ ಅವಧಿಯಲ್ಲಿ ಶಿರಸಿ ಶಹರದ ಶ್ರೀರಾಮಕಾಲೋನಿಯ ತನ್ನ ಅಕ್ಕ ಲಿಜೀಗೆ ಹಾಕಿಕೊಂಡ ಸಧಾನಂದ ತಂದೆ ಓಬಯ್ಯ ಮೋಯ್ಲಿ ಇವರ ಮನೆಯ ಹಾಲ್ನ ಸೀಲಿಂಗನ ಪ್ಯಾನ ಹಾಕುವ ಹುಕ್ಕಿಗೆ ಸೀರೆಯಿಂದ ಕಟ್ಟಿಕೊಂಡು ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶ್ರೀ ಮಾಲತೇಶ ತಂದೆ ಗಣೇಶ ಭೋವಿ ಪ್ರಾಯ 39 ವರ್ಷ ಉದ್ಯೋಗ ಆಚಾರಿಕೆಲಸ ಸಾ|| ಸಾಯಿಮಂದಿರ ಹತ್ತಿರ, ಮಾರಿಕಾಂಬಾನಗರ, ಶಿರಸಿ ಇವರು ನೀಡಿರುವ ಮಾಹಿತಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
======||||||||======