ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 14-02-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 30/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸುಧೀರ ತಂದೆ ಶಿವಾ ತೆಂಡೂಲ್ಕರ, ಪ್ರಾಯ-50 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಐ.ಎನ್.ಪಿ ರೋಡ್, ಬೈತಖೋಲ್, ಕಾರವಾರ. ನಮೂದಿತ ಆರೋಪಿತನು ದಿನಾಂಕ: 13-02-2021 ರಂದು 12-50 ಗಂಟೆಗೆ ಕಾರವಾರದ ಬೈತಖೋಲ್ ಐ.ಎನ್.ಪಿ ರಸ್ತೆಯ ಬದಿ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭದ ಸಲುವಾಗಿ ಸಾರ್ವಜನಿಕರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವ ಷರತ್ತಿನ ಮೇಲೆ ಅದೃಷ್ಠದ ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಜನರಿಂದ ಹಣ ಪಡೆದು ಓ.ಸಿ ಮಟಕಾ ಜೂಜಾಟ ನಡೆಸುತ್ತಿರುವಾಗ ಪಿರ್ಯಾದಿಯವರು ದಾಳಿ ಮಾಡಿ ಆರೋಪಿತನನ್ನು ಹಾಗೂ ಜೂಜಾಟಕ್ಕೆ ಬಳಸಿದ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷ ಕುಮಾರ ಎಮ್, ಪಿ.ಎಸ್.ಐ, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 14-02-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.  

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 31/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಶಿವಾನಂದ ತಂದೆ ಮಾದು ದುರ್ಗೆಕರ, ಪ್ರಾಯ-40 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕೋಡಿಬೀರ ದೇವಸ್ಥಾನ ರಸ್ತೆ, ಕೋಣೆವಾಡ, ಕಾರವಾರ. ನಮೂದಿತ ಆರೋಪಿತನು ದಿನಾಂಕ: 13-02-2021 ರಂದು 14-40 ಗಂಟೆಗೆ ಕಾರವಾರದ ಬಿಲ್ಟ್ ಸರ್ಕಲ್ ಹತ್ತಿರದ ಸಾರ್ವಜನಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭದ ಸಲುವಾಗಿ ಸಾರ್ವಜನಿಕರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವ ಷರತ್ತಿನ ಮೇಲೆ ಅದೃಷ್ಠದ ಅಂಕೆ ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಜನರಿಂದ ಹಣ ಪಡೆದು ಓ.ಸಿ ಮಟಕಾ ಜೂಜಾಟ ನಡೆಸುತ್ತಿರುವಾಗ ಪಿರ್ಯಾದಿಯವರು ದಾಳಿ ಮಾಡಿ ಆರೋಪಿತನನ್ನು ಹಾಗೂ ಜೂಜಾಟಕ್ಕೆ ಬಳಸಿದ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷ ಕುಮಾರ ಎಮ್, ಪಿ.ಎಸ್.ಐ, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 14-02-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 16/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗೌರೀಶ ತಂದೆ ಗೋಪಾಲಕೃಷ್ಣ ಬಾಂದೇಕರ, ಪ್ರಾಯ-33 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಅಸ್ನೇಟಿ ಭಗತವಾಡಾ, ಚಿತ್ತಾಕುಲಾ, ಕಾರವಾರ (ಮೋಟಾರ್ ಸೈಕಲ್ ನಂ: ಕೆ.ಎ-30/ಯು-4911 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 14-02-2021 ರಂದು ಸಾಯಂಕಾಲ 17-30 ಘಂಟೆಗೆ ತನ್ನ ಮೋಟಾರ್ ಸೈಕಲ್ ನಂ: ಕೆಎ-30/ಯು-4911 ನೇದನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಕಾರವಾರ ಕಡೆಯಿಂದ ಕದ್ರಾ ಕಡೆಗೆ ಚಲಾಯಿಸಿಕೊಂಡು ಬಂದವನು,  ಮೋಟಾರ್ ಸೈಕಲನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದೆ ಕದ್ರಾ ಕಪಡೆಯಿಂದ ಕಾರವಾರ ಕಡೆಗೆ ಬರುತಿದ್ದ ಪಿರ್ಯಾದಿಯ ಮೋಟಾರ್ ಸೈಕಲ್ ನಂ: ಕೆ.ಎ-30/ವಿ-9317 ನೇದಕ್ಕೆ ಡಿಕ್ಕಿ ಹೆಡೆದು ಅಪಘಾತ ಪಡಿಸಿ ರಸ್ತೆಯ ಮೇಲೆ ಬೀಳಿಸಿ, ಪಿರ್ಯಾದಿಯ ಎಡಗೈಗೆ ತೆರಚಿದ ಗಾಯ, ಎಡಗಾಲ ಹೆಬ್ಬೆರಳಿಗೆ ತೆರಚಿದ ಗಾಯ ಹಾಗೂ ಬಲಗಾಲಿನ ಮೊಣಕಾಲಿನ ಕೆಳಗೆ ಒಳನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಎಡಗೈನ ಮೊಣಕೈಗೆ ತೆರಚಿದ ಗಾಯ, ಬಲ ಮುಂಗೈಗೆ ಗಾಯ, ಕುತ್ತಿಗೆಯ ಭಾಗಕ್ಕೆ ಗಾಯ ಹಾಗೂ ತಲೆಯ ಹಿಂಭಾಗಕ್ಕೆ ರಕ್ತ ಗಾಯಗಳನ್ನು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಸೂರಜ ತಂದೆ ಶಿವಾನಂದ ನಾಯ್ಕ, ಪ್ರಾಯ-23 ವರ್ಷ, ವೃತ್ತಿ-ಖಾಸಗಿ ಕಂಪನಿಯಲ್ಲಿ ಕೆಲಸ, ಸಾ|| ಮೇಲಿನಕೇರಿ, ಮುದಗಾ, ಕಾರವಾರ ರವರು ದಿನಾಂಕ: 14-02-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 32/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹರಿಹರ ತಂದೆ ರವಿ ಸಿದ್ದಿ, ಪ್ರಾಯ-26 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಅಂಗಡಿಬೈಲ್, ಅಚವೆ, ತಾ: ಅಂಕೋಲಾ (ಮೋಟಾರ್ ಸೈಕಲ್ ನಂ: ಕೆ.ಎ-30/ಡಬ್ಲ್ಯೂ-2530 ನೇದರ ಸವಾರ). ನಮೂದಿತ ಆರೋಪಿತನು ತನ್ನ ಮೋಟಾರ ಸೈಕಲ್ ನಂ: ಕೆ.ಎ-30/ಡಬ್ಲ್ಯೂ-2530 ನೇದರ ಹಿಂಬದಿಯಲ್ಲಿ ತನ್ನ ತಾಯಿ ಶ್ರೀಮತಿ ಬೇಬಿ ಕೋಂ. ರವಿ ಸಿದ್ದಿ ಇವರನ್ನು ಕೂಡ್ರಿಸಿಕೊಂಡು ದಿನಾಂಕ: 14-02-2021 ರಂದು ಮಧ್ಯರಾತ್ರಿ 03-00 ಗಂಟೆಯ ಸುಮಾರಿಗೆ ಕೊಡ್ಲಗದ್ದೆಯಿಂದ ತನ್ನ ಮನೆಗೆ ಹೋಗಲು ಅಂತಾ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯಲ್ಲಿ ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಸವಾರಿ ಮಾಡಿಕೊಂಡು ಬಂದವನು, ವಜ್ರಳ್ಳಿಯ ದುಗ್ಗನಬೈಲ್ ಹತ್ತಿರ ರಾತ್ರಿ 03-30 ಗಂಟೆಯ ಸುಮಾರಿಗೆ ತನ್ನ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ಕಳೆದುಕೊಂಡು ಮೋಟಾರ್ ಸೈಕಲನ್ನು ರಸ್ತೆಯ ಬಲಕ್ಕೆ ಚಲಾಯಿಸಿ ಕಚ್ಚಾ ರಸ್ತೆಯಲ್ಲಿ ಇರುವ ಕೆ.ಇ.ಬಿ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ತನ್ನ ತಾಯಿ ಶ್ರೀಮತಿ ಬೇಬಿ ಸಿದ್ದಿ ಇವಳ ಎದೆಗೆ ಹಾಗೂ ಮೈಮೇಲೆ ಅಲ್ಲಲ್ಲಿ ಗಾಯ ಹಾಗೂ ಆರೋಪಿ ಮೋಟಾರ್ ಸೈಕಲ್ ಸವಾರನು ತಾನು ಸಹ ಬಲಬದಿಯ ಸೊಂಟಕ್ಕೆ ಗಂಭೀರ ಸ್ವರೂಪದ ಗಾಯನೋವು ಪಡಿಸಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿರತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗೇಂದ್ರ ತಂದೆ ಗಣಪತಿ ಸಿದ್ದಿ, ಪ್ರಾಯ-24 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಾವಿನಮನೆ, ವಜ್ರಳ್ಳಿ, ತಾ: ಅಂಕೋಲಾ, ಹಾಲಿ ಸಾ|| ಕೊಡ್ಲಗದ್ದೆ, ತಾ: ಅಂಕೋಲಾ ರವರು ದಿನಾಂಕ: 14-02-2021 ರಂದು 09-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 13/2021, ಕಲಂ: 323, 324, 325, 504, 506, 447 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸೋಮಶೇಖರ ತಂದೆ ಸಣ್ಣಪ್ಪ ಗಾಂವಕಾರ, ಸಾ|| ನಾಡುಮಾಸ್ಕೇರಿ, ತಾ: ಕುಮಟಾ. ನಮೂದಿತ ಆರೋಪಿತನು ದಿನಾಂಕ: 22-11-2020 ರಂದು ಮಧ್ಯಾಹ್ನ 16-00 ಗಂಟೆಯ ಸುಮಾರಿಗೆ ಪಿರ್ಯಾದಿಯ ಬಾಬ್ತು ನಾಡುಮಾಸ್ಕೇರಿ ಗ್ರಾಮದ ಸರ್ವೇ ನಂ: 285 ಹಿಸ್ಸಾ 3ಅ ರ ಕ್ಷೆತ್ರ 0-4-0 ನೇದರಲ್ಲಿಯ ಸ್ಥಳದಲ್ಲಿ ಅಕ್ರಮ ಪ್ರವೇಶ ಮಾಡಿ ಮಣ್ಣನ್ನು ತಂದು ಹಾಕಿದ್ದು, ಪಿರ್ಯಾದಿಯವರು ಕೇಳಿದಕ್ಕೆ ಅವಾಚ್ಯ ಶಬ್ದಗಳಿಂದ ಬೈಯ್ದು, ಮೆಟ್ಟಿ ಮುಖ ಹಾಗೂ ಎದೆಯ ಮೇಲೆಲ್ಲಾ ಹೊಡೆದಿದ್ದಲ್ಲದೇ, ಕತ್ತಿಯನ್ನು ಬೀಸಿದ್ದು, ಅದನ್ನು ಪಿರ್ಯಾದಿಯವರು ತಪ್ಪಿಸಿಕೊಂಡಿದ್ದು, ಆರೋಪಿತನು ಪಿರ್ಯಾದಿಗೆ ‘ಕೊಲೆ ಮಾಡುತ್ತೇನೆ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಅಬ್ದುಲ್ ಖಾದರ್ ಸಾಬ್, ಸಾ|| ನಾಡುಮಾಸ್ಕೇರಿ, ತಾ: ಕುಮಟಾ ರವರು ದಿನಾಂಕ: 14-02-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 33/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರವೀಣ ತಂದೆ ದೇವದಾಸ ಪೈ, ಪ್ರಾಯ-42 ವರ್ಷ, ವೃತ್ತಿ-ವ್ಯವಾಹಾರ, ಸಾ|| ಕುಂಜಿಬೆಟ್ಟು, ಉಡುಪಿ (ಕಾರ್ ನಂ: ಕೆ.ಎ-20/ಎಮ್.ಡಿ-3962 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 14-02-2021 ರಂದು 08-45 ಗಂಟೆಗೆ ತಾನು ಚಲಾಯಿಸುತ್ತಿದ್ದ ಕಾರ್ ನಂ: ಕೆ.ಎ-20/ಎಮ್.ಡಿ-3962 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಮಿರ್ಜಾನಿನ ಎತ್ತಿನಬೈಲ್ ಫಾರೆಸ್ಟ್ ನಾಕಾ ಎದುರು ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ರಸ್ತೆಯನ್ನು ನಡೆದುಕೊಂಡು ದಾಟುತ್ತಿದ್ದ ಶ್ರೀಮತಿ ಲಿಂಗಮ್ಮ ಈಶ್ವರ ಪಟಗಾರ, ಪ್ರಾಯ-67 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಎತ್ತಿನಬೈಲ್, ಮಿರ್ಜಾನ, ತಾ: ಕುಮಟಾ ಇವರನ್ನು ನೋಡಿಯು ಸಹ ತಾನು ಚಲಾಯಿಸುತ್ತಿದ್ದ ಕಾರಿನ ವೇಗವನ್ನು ನಿಯಂತ್ರಿಸದೇ ನಿಷ್ಕಾಳಜಿತನದಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಈ ಅಪಘಾತದಲ್ಲಿ ಶ್ರೀಮತಿ ಲಿಂಗಮ್ಮ ಪಟಗಾರ ಇವರು ರಸ್ತೆಯಲ್ಲಿ ಬಿದ್ದು, ಅವರ ಮುಖದ ಕೆನ್ನೆಯ ಎಡಭಾಗಕ್ಕೆ, ಎದೆಯ ಭಾಗಕ್ಕೆ, ಮೂಗಿಗೆ ಹಾಗೂ ದೇಹದ ಭಾಗಗಳಿಗೆ ತೆರಚಿದ ಗಾಯವಾಗಿ ಮತ್ತು ಬಲಗೈ ಮುರಿದು ತೀವೃ ಗಾಯನೋವಾಗಲು ಆರೋಪಿ ಕಾರ್ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ಗಣಪತಿ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ವ್ಯವಸಾಯ, ಸಾ|| ಎತ್ತಿನಬೈಲ್, ತಾ: ಕುಮಟಾ ರವರು ದಿನಾಂಕ: 14-02-2021 ರಂದು 09-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 18/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಶ್ರೀಮತಿ ಜೊಹರಾ ಜಬಿನ್ ರಹಮತುಲ್ಲಾ ತಂಬಾಕ, ಪ್ರಾಯ-31 ವರ್ಷ, ಸಾ|| ಹನೀಫಾಬಾದ್, ನೇರಲಸರ, ಹೆಬಳೆ, ತಾ: ಭಟ್ಕಳ. ಪಿರ್ಯಾದಿಯ ಹೆಂಡತಿಯಾದ ಇವಳು ದಿನಾಂಕ: 13-02-2021 ರಂದು 19-45 ಗಂಟೆಯ ಸಮಯಕ್ಕೆ ತನ್ನ ಮನೆಯಿಂದ ಹೋದವಳು ವಾಪಸ್ ಮನೆಗೆ ಬಾರದೆ, ಸಂಬಂಧಿಕರ ಮನೆಗೂ ಹೋಗದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಹೆಂಡತಿಯನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ರಹಮತುಲ್ಲಾ ಮೈಬುಬಲಿ ತಂಬಾಕ, ಪ್ರಾಯ-40 ವರ್ಷ, ವೃತ್ತಿ-ಹಾಲಿನ ವ್ಯಾಪಾರ, ಸಾ|| ಹನೀಫಾಬಾದ್, ನೇರಲಸರ, ಹೆಬಳೆ, ತಾ: ಭಟ್ಕಳ ರವರು ದಿನಾಂಕ: 14-02-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 26/2021, ಕಲಂ: 279, 337, 338, 238 ಐಪಿಸಿ ಮತ್ತು ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಯಾವುದೋ ಲಾರಿಯ ಚಾಲಕ, ಲಾರಿಯ ನಂಬರ್ ಹಾಗೂ ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ, 2]. ಧೂಳಪ್ಪ ತಂದೆ ಮಳ್ಳಿಯಪ್ಪ ಹಂಡಿ, ಪ್ರಾಯ-45 ವರ್ಷ, ವೃತ್ತಿ-ಚಾಲಕ, ಸಾ|| ಸೀಮೆಕೇರಿ, ತಾ&ಜಿ: ಬಾಗಲಕೋಟೆ (ಮಿನಿ ಲಾರಿ ನಂ: ಕೆ.ಎ-29/ಬಿ-7837 ನೇದರ ಚಾಲಕ). ಈ ನಮೂದಿತ ಆರೋಪಿತರ ಪೈಕಿ ಆರೋಪಿ 1 ನೇಯವನು ತನ್ನ ಲಾರಿಯನ್ನು ದಿನಾಂಕ: 14-02-2021 ರಂದು ಬೆಳಗಿನ ಜಾವ ಸುಮಾರು 03-00 ಗಂಟೆಗೆ ಯಲ್ಲಾಪುರ ತಾಲೂಕಿನ ಶಿರಲೆ ಫಾಲ್ಸ್ ಕ್ರಾಸ್ ಹತ್ತಿರ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯ ಮೇಲೆ ಸದರ ಸ್ಥಳದಲ್ಲಿ ರಸ್ತೆ ಘಟ್ಟ ಇದ್ದು, ತಿರುವು ಇದ್ದರೂ ಸಹ ನಿಧಾನವಾಗಿ ಹೋಗದೇ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಹೋಗಿ ಯಾವುದೇ ಮುಂಜಾಗೃತೆ ಹಾಗೂ ಯಾವುದೇ ಸಿಗ್ನಲ್ ಲೈಟ್ ಹಚ್ಚದೇ ನಿರ್ಲಕ್ಷ್ಯತನದಿಂದ ಒಮ್ಮೆಲೇ ರಸ್ತೆಯ ಮೇಲೆ ತನ್ನ ಬಾಬ್ತು ಲಾರಿಯನ್ನು ನಿಲ್ಲಿಸಿದ್ದರಿಂದಲೇ ಅದರ ಹಿಂದಿನಿಂದ ಬರುತ್ತಿದ್ದ ಆರೋಪಿ 2 ನೇಯವನು ತನ್ನ ಬಾಬ್ತು ಮಿನಿ ಲಾರಿ ನಂ: ಕೆ.ಎ-29/ಬಿ-7837 ನೇದನ್ನು ಅತೀವೇಗವಾಗಿ ಚಲಾಯಿಸಿಕೊಂಡು ಹೋಗಿ ಹಿಂದಿನಿಂದ ಡಿಕ್ಕಿ ಮಾಡಿ ಅಪಘಾತ ಪಡಿಸಿಕೊಂಡು, ತನ್ನ ತಲೆಗೆ ಮತ್ತು ಎಡಬದಿಯ ಕಾಲಿನ ತೊಡೆಯ ಹತ್ತಿರ ಭಾರೀ ಸ್ವರೂಪದ ಗಾಯಪೆಟ್ಟು ಪಡಿಸಿಕೊಂಡು, ಪಿರ್ಯಾದಿಯವರಿಗೂ ಸಹ ಸಾದಾ ಸ್ವರೂಪದ ಗಾಯ ಪೆಟ್ಟು ಪಡಿಸಿದ್ದಲ್ಲದೇ, ಮಿನಿ ಲಾರಿಯನ್ನು ಸಹ ಜಖಂಗೊಳಿಸಿದ ಬಗ್ಗೆ ಹಾಗೂ ಆರೋಪಿ 1 ನೇಯವನು ಅಪಘಾತದ ನಂತರ ತನ್ನ ಲಾರಿಯನ್ನು ಸ್ಥಳದಲ್ಲಿ ನಿಲ್ಲಿಸದೇ, ಪೊಲೀಸ್ ಠಾಣೆಗೂ ವಿಷಯ ತಿಳಿಸಿದೇ ಚಲಾಯಿಸಿಕೊಂಡು ಹೋಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗುರಪ್ಪ ತಂದೆ ಬಸಪ್ಪ ಚೂರಿ, ಪ್ರಾಯ-31 ವರ್ಷ, ವೃತ್ತಿ-ಲಾರಿ ಕ್ಲೀನರ್, ಸಾ|| ಯಡೇಹಳ್ಳಿ, ತಾ&ಜಿ: ಬಾಗಲಕೋಟೆ ರವರು ದಿನಾಂಕ: 14-02-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 15/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ಮಂಜುನಾಥ ಮಡಿವಾಳ, ಪ್ರಾಯ-42 ವರ್ಷ, ಸಾ|| ಚಿಪಗಿ, ತಾ: ಶಿರಸಿ (ಕಾರ್ ನಂ: ಕೆ.ಎ-31/ಎಮ್-4829 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 13-02-2021 ರಂದು 11-45 ಗಂಟೆಯ ಸುಮಾರಿಗೆ ತನ್ನ ಕಾರ್ ನಂ: ಕೆ.ಎ-31/ಎಮ್-4829 ನೇದನ್ನು ಶಿರಸಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ, ಶಿರಸಿ-ಹುಬ್ಬಳ್ಳಿ ರಸ್ತೆಯ ಚಿಪಗಿಯ ನಾರಾಯಣಗುರು ನಗರ ಕ್ರಾಸ್ ಕಡೆಗೆ ನಿರ್ಲಕ್ಷ್ಯತನದಿಂದ ಒಮ್ಮೇಲೆ ಬಲಕ್ಕೆ ತಿರುಗಿಸಿ, ಸೋಮನಳ್ಳಿ ಕಡೆಯಿಂದ ಶಿರಸಿ ಕಡೆಗೆ ಪಿರ್ಯಾದಿಯು ಚಲಾಯಿಸಿಕೊಂಡು ಬರುತ್ತಿದ್ದ ಹೋಂಡಾ ಎಕ್ಟಿವಾ ಸ್ಕೂಟಿ ನಂ: ಕೆ.ಎ-31/ವಾಯ್-7419 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ವಾಹನವನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ದಿವಾಕರ ತಂದೆ ಪರಮೇಶ್ವರ ಹೆಗಡೆ, ಪ್ರಾಯ-54 ವರ್ಷ, ವೃತ್ತಿ-ಖಾಸಗಿ ನೌಕರಿ, ಸಾ|| ಸೋಮನಳ್ಳಿ, ಪೋ: ಚಿಪಗಿ. ತಾ: ಶಿರಸಿ ರವರು ದಿನಾಂಕ: 14-02-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 14-02-2021

at 00:00 hrs to 24:00 hrs

 

ಜೊಯಿಡಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 02/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ದಯಾನಂದ ತಂದೆ ಗೋವಿಂದ ಬಾಂಡೋಳಕರ, ಪ್ರಾಯ-40 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ನಿಮ್ನಿಮಳೆ, ಕರಂಬಾಳಿ, ತಾ: ಜೊಯಿಡಾ. ಪಿರ್ಯಾದುದಾರರ ಗಂಡನಾದ ಈತನು ದಿನಾಂಕ: 24-01-2021 ರಂದು 10-30 ಗಂಟೆಯ ಸುಮಾರಿಗೆ ಮನೆ ಬಿಟ್ಟು ಹೋದವನು, ದಿನಾಂಕ: 14-02-2021 ರಂದು ಬೆಳಿಗ್ಗೆ 07-30 ಗಂಟೆಯ ನಡುವಿನ ಅವಧಿಯಲ್ಲಿ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ವಾಡ್ಯಾರ ಅರಣ್ಯ ಪ್ರದೇಶದಲ್ಲಿ ಒಂದು ಕಾಡು ಜಾತಿಯ ಮರಕ್ಕೆ ಕಾಡು ಜಾತಿಯ ಬಳ್ಳಿಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆಯೇ ಹೊರತು ಅವನ ಮರಣದಲ್ಲಿ ಬೇರೇ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ದರ್ಶನಾ ಕೋಂ. ದಯಾನಂದ ಬಾಂಡೋಳಕರ, ಪ್ರಾಯ-27 ವರ್ಷ, ವೃತ್ತಿ-ಕೃಷಿ/ಕೂಲಿ ಕೆಲಸ, ಸಾ|| ನಿಮ್ನಿಮಳೆ, ಕರಂಬಾಳಿ, ತಾ: ಜೊಯಿಡಾ ರವರು ದಿನಾಂಕ: 14-02-2021 ರಂದು 07-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 16-02-2021 11:08 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080