ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 14-01-2022

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 19/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ರಾಮಪ್ಪ ಬಿ. ಸಿ. ತಂದೆ ಬಂಡಿ ಚೌಡಪ್ಪ, ಪ್ರಾಯ-48 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ, ಸಾ|| ಬರದವಳ್ಳಿ, ಪೋ: ಶಿರವಂತೆ, ತಾ: ಸಾಗರ, ಜಿ: ಶಿವಮೊಗ್ಗ (ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-17/ಎಫ್-1520 ನೇದರ ಚಾಲಕ), 2]. ಅಬ್ದುಲ್ ಶುಕುರ್ ತಂದೆ ಜಂಗ್ಲೀಸಾಬ್, ಪ್ರಾಯ-59 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕ, ಸಾ|| ಅಶೋಕನಗರ, 4 ನೇ ಕ್ರಾಸ್, ಶಿವಮೊಗ್ಗ [ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-17/ಎಫ್-1520 ನೇದರ ನಿರ್ವಾಹಕ]. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 14-01-2022 ರಂದು ಸಾಯಾಂಕಾಲ 17-30 ಗಂಟೆಗೆ ಹೊನ್ನಾವರ ಕಡೆಯಿಂದ ಗೇರುಸೊಪ್ಪಾ ಕಡೆಗೆ ತಾನು ಚಲಾಯಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-17/ಎಫ್-1520 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ಬಾಳೆಗದ್ದೆ ಕ್ರಾಸ್ ಹತ್ತಿರ ರಸ್ತೆಯು ತಿರುವಿನಿಂದ ಕೂಡಿದ್ದರೂ ಸಹ ತಾನು ಚಲಾಯಿಸುತ್ತಿದ್ದ ಬಸ್ಸನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ನಿರ್ಲಕ್ಷ್ಯತನದಿಂದ ಚಲಾಯಿಸಿ ಹಾಗೂ ಸದರಿ ಬಸ್ ನಿರ್ವಾಹಕನಾದ ಆರೋಪಿ 2 ನೇಯವನು ಬಸ್ಸಿನ ಬಾಗಿಲನ್ನು ಸರಿಯಾಗಿ ಹಾಕದೇ ನಿರ್ಲಕ್ಷ್ಯತನ ತೋರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕುಮಾರಿ: ದೀಪಿಕಾ ತಂದೆ ದತ್ತಾತ್ರೇಯ ಭಟ್, ಪ್ರಾಯ-19 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| ಮುರ್ತಿಕೊಡ್ಲು, ಹಡಿನಬಾಳ, ತಾ: ಹೊನ್ನಾವರ ಇವಳು ಬಸ್ಸಿನ ಬಾಗಿಲಿನಿಂದ ರಸ್ತೆಯ ಮೇಲೆ ಬೀಳುವಂತೆ ಮಾಡಿ, ಕುಮಾರಿ: ದೀಪಿಕಾ ಭಟ್ ಇವಳಿಗೆ ತಲೆಗೆ ರಕ್ತಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಕೆ. ಶಿವಪ್ರಸಾದ ತಂದೆ ನಾರಾಯಣ ಭಟ್, ಪ್ರಾಯ-46 ವರ್ಷ, ವೃತ್ತಿ-ಮೆಕ್ಯಾನಿಕ್, ಸಾ|| ಹೆದ್ದಾರಿಕುಂಬ್ರಿ, ಹಡಿನಬಾಳ, ತಾ: ಹೊನ್ನಾವರ ರವರು ದಿನಾಂಕ: 14-01-2022 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 20/2022, ಕಲಂ: 78(3)(ಎ) ಕರ್ನಾಟಕ ಪೊಲೀಸ್ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಹೇಶ ತಂದೆ ಅಣ್ಣಪ್ಪ ನಾಯ್ಕ, ಪ್ರಾಯ-60 ವರ್ಷ, ವೃತ್ತಿ-ಗೂಡಂಗಡಿ ವ್ಯಾಪಾರ, ಸಾ|| ಕುದಬೈಲ್, ಹಳದಿಪುರ, ತಾ: ಹೊನ್ನಾವರ, 2]. ವಿನಾಯಕ ರಾಮಾ ಗೌಡ, ಸಾ|| ಕೊಳಗದ್ದೆ, ಖರ್ವಾ, ತಾ: ಹೊನ್ನಾವರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 14-01-2022 ರಂದು 19-40 ಗಂಟೆಗೆ ಹೊನ್ನಾವರ ತಾಲೂಕಿನ ಹಳದಿಪುರ ಗ್ರಾಮದ ಕುದಬೈಲ್ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಬದಿಯ ಸಾರ್ವಜನಿಕ ಸ್ಥಳದಲ್ಲಿ ನಿಂತು, ಸಾರ್ವಜನಿಕರಿಂದ ಹಣವನ್ನು ಪಡೆದು ಓ.ಸಿ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಜುಗಾರಾಟ ಆಡಿಸುತ್ತಿದ್ದಾಗ ದಾಳಿಯ ವೇಳೆ ಆರೋಪಿತನ ತಾಬಾದಲ್ಲಿ 1). ಒಟ್ಟು ನಗದು ಹಣ 1,110/- ರೂಪಾಯಿ, 2) ಬಾಲ್ ಪೆನ್-01, 3] ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01 ನೇದವುಗಳೊಂದಿಗೆ ಸಿಕ್ಕಿದ್ದು, ಸದರಿ ಆರೋಪಿ 1 ನೇಯವನು ಒಟ್ಟಾದ ಹಣವನ್ನು ಹಾಗೂ ಓ.ಸಿ ಚೀಟಿಯನ್ನು ಓ.,ಸಿ ಬುಕ್ಕಿಯಾದ ಆರೋಪಿ 2 ನೇಯವನಿಗೆ ನೀಡುತ್ತಿದ್ದು, ಈ ಬಗ್ಗೆ ಪಿರ್ಯಾದಿ ಶ್ರೀ ಮಹಾಂತೇಶ ಉದಯ ನಾಯಕ, ಪಿ.ಎಸ್.ಐ (ಕಾ.ಸು & ಸಂಚಾರ), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 14-01-2022 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 07/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸದಾನಂದ ತಂದೆ ಅಣ್ಣಪ್ಪ ಮೊಗೇರ, ಸಾ|| ಕೊಪ್ಪದಮಕ್ಕಿ, ಬೈಲೂರು, ತಾ: ಹೊನ್ನಾವರ (ಪ್ಯಾಸೆಂಜರ್ ಟೆಂಪೋ ನಂ: ಕೆ.ಎ-47/0057 ನೇದರ ಚಾಲಕ). ಈತನು ದಿನಾಂಕ: 13-01-2022 ರಂದು 13-50 ಗಂಟೆಯ ಸುಮಾರಿಗೆ ಮಂಕಿಯ ಮಯೂರ ದಾಬಾದ ಮುಂದೆ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮೇಲೆ ತಾನು ಚಲಾಯಿಸುತ್ತಿದ್ದ ಪ್ಯಾಸೆಂಜರ್ ಟೆಂಪೋ ನಂ: ಕೆ.ಎ-47/0057 ನೇದನ್ನು ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದವನು, ಒಮ್ಮೆಲೇ ಚಾಲನೆಯ ಮೇಲಿನ ನಿಯಂತ್ರಣ ತಪ್ಪಿ ರಸ್ತೆಯ ಮಧ್ಯದಲ್ಲಿರುವ ಡಿವೈಡರ್ ಮೇಲೆ ವಾಹನದ ಟಾಯರ್ ಗಳನ್ನು ಹಾಯಿಸಿ, ವಾಹನವನ್ನು ರಸ್ತೆಯಲ್ಲಿ ಪಲ್ಟಿ ಪಡಿಸಿ, ವಾಹನದಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮತಿ ಬೇಬಿ ಪರಶುರಾಮ ನಾಯ್ಕ, ಇವಳಿಗೆ ಬಲಗೈಗೆ ಗಾಯ, ತಲೆಗೆ ಒಳನೋವು ಹಾಗೂ ಶ್ರೀಮತಿ ಮಾದೇವಿ ಹಾದಿಯಪ್ಪ ನಾಯ್ಕ, ಇವಳಿಗೆ ತಲೆಗೆ ಗಾಯನೋವು ಪಡಿಸಿದ್ದಲ್ಲದೇ, ತಾನು ಕೂಡಾ ಬಲಗೈ ಹಸ್ತಕ್ಕೆ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ರಾಘವೇಂದ್ರ ಬಿ. ದೇವಾಡಿಗ, ಪ್ರಾಯ-40 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ಗುಣವಂತೆ, ತಾ: ಹೊನ್ನಾವರ ರವರು ದಿನಾಂಕ: 14-01-2022 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 11/2022, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್ (ತಿದ್ದುಪಡಿ ಕಾಯ್ದೆ)-2021 ನೇದ್ದರ ವಿವರ...... ನಮೂದಿತ ಆರೋಪಿತ ಅಶೋಕ ತಂದೆ ಮಂಜುನಾಥ ನಾಯ್ಕ, ಪ್ರಾಯ-22 ವರ್ಷ, ವೃತ್ತಿ-ವ್ಯಾಪಾರ, ಸಾ|| ಮುಂಡಳ್ಳಿ, ಸತ್ಯನಾರಾಯಣ ನಗರ, ತಾ: ಭಟ್ಕಳ. ಈತನು ದಿನಾಂಕ: 14-01-2022 ರಂದು ಬೆಳಿಗ್ಗೆ 10-00 ಗಂಟೆಯ ಸಮಯಕ್ಕೆ ಭಟ್ಕಳದ ಮುಂಡಳ್ಳಿಯ ಸತ್ಯನಾರಾಯಣ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ 01/- ರೂಪಾಯಿಗೆ 80/- ರೂಪಾಯಿ ಕೊಡುವ ಶರತ್ತಿನ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ ಓ.ಸಿ ಜುಗಾರಾಟ ನಡೆಸುತ್ತಿದ್ದಾಗ ಓ.ಸಿ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 2,490/- ರೂಪಾಯಿಯೊಂದಿಗೆ ಆರೋಪಿತನು ಸ್ಥಳದಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಬಲೇಶ್ವರ ಎಸ್. ಎನ್, ಪೊಲೀಸ್ ವೃತ್ತ ನಿರೀಕ್ಷಕರು, ಭಟ್ಕಳ ಗ್ರಾಮಾಂತರ ವೃತ್ತ, ಭಟ್ಕಳ ರವರು ದಿನಾಂಕ: 14-01-2022 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 09/2022, ಕಲಂ: ಮನುಷ್ಯ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಶ್ರೀ ಮಿಂಗಲ್ ತಂದೆ ಬಸ್ತ್ಯಾಂವ್ ಸಿದ್ದಿ, ಪ್ರಾಯ-49 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹುಲೇಪಾಲ್, ಲಾಲಗುಳಿ ಗ್ರಾಮ, ತಾ: ಯಲ್ಲಾಪುರ. ಪಿರ್ಯಾದುದಾರರ ತಂದೆಯವರಾದ ಇವರು ದಿನಾಂಕ: 14-01-2022 ರಂದು 00-15 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಹಳಿಯಾಳ ಕ್ರಾಸ್ ದಲ್ಲಿ ಮೂತ್ರ ವಿಸರ್ಜನೆಗೆ ಎಂದು ರಸ್ತೆ ಬದಿಯಲ್ಲಿರುವ ಜಂಗಲ್ ದಲ್ಲಿ ಹೋದವರು ವಾಪಸ್ ಬರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ಮಿಂಗಲ್ ಸಿದ್ದಿ, ಪ್ರಾಯ-24 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹುಲೇಪಾಲ್, ಲಾಲಗುಳಿ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 14-01-2022 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 04/2022, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕೃಷ್ಣಾ ತಂದೆ ವೆಂಕಟ ಮರಾಠಿ, ಪ್ರಾಯ-20 ವರ್ಷ, ವೃತ್ತಿ-ವಿದ್ಯಾರ್ಥಿ ಸಾ|| ಜಡ್ಡಿ, ಮಂಜಗುಣಿ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಡಿ-0834 ನೇದರ ಸವಾರ). ಈತನು ದಿನಾಂಕ: 14-01-20222 ರಂದು 11-15 ಗಂಟೆಯ ಸುಮಾರಿಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಡಿ-0834 ನೇದನ್ನು ಹುಲೇಕಲ್ ಕಡೆಯಿಂದ ಸೋಂದಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗಿ, ಕರ್ಕೋಳ್ಳಿ ಹತ್ತಿರ ರಸ್ತೆಯ ಮೇಲೆ ಹುಲೇಕಲ್ ಕಡೆಯಿಂದ ತೆಂಕಿನಬೈಲ್ ಸೋಂದಾ ಕಡೆಗೆ ತನ್ನ ಮನೆಗೆ ನಡೆದುಕೊಂಡು ಹೊರಟಿದ್ದ ಪಾದಾಚಾರಿ ಶ್ರೀ ವೆಂಕಟೇಶ ತಂದೆ ಕಾನು ಮರಾಠಿ, ಇವರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಾದಾಚಾರಿಯ ಎಡಗಾಲ ಪಾದದ ಗಂಟಿನ ಮೇಲೆ, ಬಲಗಾಲ ಮಂಡಿಗೆ ಭಾರೀ ಸ್ವರೂಪದ ಗಾಯ ಹಾಗೂ ತಲೆಗೆ ಮಾರಣಾಂತಿಕ ಗಾಯ, ಮೋಟಾರ್ ಸೈಕಲ್ ಹಿಂಬದಿಗೆ ಕುಳಿತಿದ್ದವನ ಎಡಬದಿಯ ಕೆನ್ನೆಗೆ, ಕಣ್ಣಿನ ಹತ್ತಿರ ಮತ್ತು ಹಣೆಗೆ ಸಾದಾ ಸ್ವರೂಪದ ಗಾಯನೋವು ಪಡಿಸಿ, ಆರೋಪಿ ಸವಾರನು ತನಗೂ ಸಹ ಎರಡೂ ಮೊಣಕೈಗೆ, ಮುಖಕ್ಕೆ, ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡಿದ್ದಲ್ಲದೇ, ಅಪಘಾತದಲ್ಲಿ ಮಾರಣಾಂತಿಕ ಗಾಯನೋವು ಹೊಂದಿದ್ದ ಪಾದಾಚಾರಿ ಶ್ರೀ ವೆಂಕಟೇಶ ಮರಾಠಿ, ಇವನಿಗೆ ಹೆಚ್ಚಿನ ಉಪಚಾರದ ಕುರಿತು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಚಿಕಿತ್ಸೆಯಲ್ಲಿರುವಾಗ ಮಧ್ಯಾಹ್ನ 15-40 ಗಂಟೆಯ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ದಾಮು ತಂದೆ ಸುಬ್ರಾಯ ಮರಾಠಿ, ಪ್ರಾಯ-46 ವರ್ಷ, ವೃತ್ತಿ-ಚಾಲಕ, ಸಾ|| ತೆಂಕಿನಬೈಲ್, ಸೋಂದಾ, ಪೋ: ಹುಲೇಕಲ್, ತಾ: ಶಿರಸಿ ರವರು ದಿನಾಂಕ: 14-01-2022 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 07/2022, ಕಲಂ: 379 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ 3 ಜನ ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ಸುಲಿಗೆ ಮಾಡುವ ಉದ್ದೇಶದಿಂದ ಒಂದು ನೀಲಿ ನಮೂನೆ ಬಣ್ಣದ ಓಮಿನಿ ವಾಹನದಲ್ಲಿ ದಿನಾಂಕ: 13-01-2022 ರಂದು 15-00 ಗಂಟೆಯ ಸುಮಾರಿಗೆ ಶಿರಸಿ ಶಹರದ ದೇವಕೆರೆಯಲ್ಲಿ ನಿಂತುಕೊಂಡವರು ಪಿರ್ಯಾದಿಯ ಗಂಡನವರಾದ ತಾರಕೇಶ್ವರ ಇವರು ಹಣ್ಣನ್ನು ತೆಗೆದುಕೊಳ್ಳುವಾಗ ತಾರಕೇಶ್ವರ ಇವರ ಹತ್ತಿರ ಇದ್ದ ಹಣವನ್ನು ನೋಡಿ, ತಾರಕೇಶ್ವರ ಇವರು ದೇವಿಕೆರೆಯ ರೋಡಿನಲ್ಲಿ ಶಿವಸ್ವಾಮಿ ಅಸ್ಪತ್ರೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ, ತಾರಕೇಶ್ವರ ಇವರಿಗೆ ಎಳೆದು ಓಮಿನಿ ವಾಹನದಲ್ಲಿ ಹತ್ತಿಸಿಕೊಂಡು ಶಿರಸಿ ಶಹರದ ಝೂ ಸರ್ಕಲ್ ಹತ್ತಿರ ನಿರ್ಜನ ಪ್ರದೇಶಕ್ಕೆ 15-30 ಗಂಟೆಯ ಸುಮಾರಿಗೆ ಕರೆದುಕೊಂಡು ಹೋಗಿ ತಾರಕೇಶ್ವರ ಇವರ ಹತ್ತಿರ ಇದ್ದ ಹಣವನ್ನು ಕೇಳಿದಾಗ ಅವರು ನೀಡದೇ ಇದ್ದಾಗ ಇಬ್ಬರು ಆರೋಪಿತರು ತಾರಕೇಶ್ವರ ಇವರಿಗೆ ಹಿಡಿದುಕೊಂಡು, ಮತ್ತೊಬ್ಬ ಆರೋಪಿತನು ಕುತ್ತಿಗೆಗೆ ಚಾಕುವಿನಿಂದ ಕೊಯ್ದು ಗಂಟಲು ತುಂಡಾಗುವಂತೆ ಗಂಭೀರ ಸ್ವರೂಪದ ಗಾಯನೋವು ಪಡಿಸಿ, ಅವರ ಹತ್ತಿರ ಇದ್ದ 10,000/- ರೂಪಾಯಿ ಹಣವನ್ನು ಬಲವಂತವಾಗಿ ಕಿತ್ತುಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಲೀಲಾಬಾಯಿ ಕೋಂ. ತಾರಕೇಶ್ವರ ತಿಳುವಳ್ಳಿ, ಪ್ರಾಯ-52 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಇಂದಿರಾನಗರ, ತಾ: ಹಾನಗಲ್, ಜಿ: ಹಾವೇರಿ ರವರು ದಿನಾಂಕ: 14-01-2022 ರಂದು 22-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 08/2022, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 13-01-2022 ರಂದು 21-00 ಗಂಟೆಯಿಂದ ದಿನಾಂಕ: 14-01-2022 ರಂದು ಬೆಳಿಗ್ಗೆ 10-00 ಗಂಟೆಯ ನಡುವಿನ ಅವಧಿಯಲ್ಲಿ ಶಿರಸಿ ಶಹರದ ಸಿ.ಎಮ್.ಸಿ ಕಾಂಪ್ಲೆಕ್ಸ್ಸಿನಲ್ಲಿರುವ ಮಂಜು ಡಿಜಿಟಲ್ ಪೋಟೋ ಸ್ಟುಡಿಯೋದ ಮುಂದುಗಡೆ ಇರುವ ಸಣ್ಣ ಶೆಟರ್ಸಿಗೆ ಹಾಕಿದ ಬೀಗವನ್ನು ಯಾವುದೋ ಒಂದು ಗಟ್ಟಿ ಆಯುಧದಿಂದ ಮೀಟಿ ಮುರಿದು ಅದರ ಒಳಗಡೆ ಅಲ್ಯೂಮಿನಿಯಂ ಫ್ರೇಮ್ ಇರುವ ಗ್ಲಾಸ್ ಡೋರಿನ ಗ್ಲಾಸ್ ಒಡೆದು ಕಿಂಡಿ ಮಾಡಿ, ಅಂಗಡಿಯ ಒಳಗಡೆ ಪ್ರವೇಶಿಸಿ, ಅಂಗಡಿಯ ಒಳಗಡೆ ಇಟ್ಟ ಫ್ಯೂಜೀ ಕಂಪನಿಯ ಸಿಲ್ವರ್ ಕೋಟಿಂಗ್ ನ ಎಕ್ಸ್.ಟಿ-1 ಮಿರರ್ ಲೆಸ್ ಕ್ಯಾಮೆರಾ-1, ಅ||ಕಿ|| 70,000/- ರೂಪಾಯಿಯ ಕ್ಯಾಮೆರಾವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಚನ್ನವೀರ ತಂದೆ ಶೇಖಪ್ಪ ಗಾಣಿಗೇರ, ಪ್ರಾಯ-47 ವರ್ಷ, ವೃತ್ತಿ-ಪೋಟೋ ಸ್ಟುಡಿಯೋದಲ್ಲಿ ಕೆಲಸ, ಸಾ|| ಕೆ.ಎಚ್.ಬಿ ಕಾಲೋನಿ, ತಾ: ಶಿರಸಿ ರವರು ದಿನಾಂಕ: 14-01-2022 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 04/2022, ಕಲಂ: ಹೆಂಗಸು ಮತ್ತು ಮಗು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದವರು 1]. ಶ್ರೀಮತಿ ರಾಧಾ ಕೋಂ. ಯಲ್ಲಪ್ಪ ಕಮ್ಮಾರ, ಪ್ರಾಯ-23 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉಗ್ಗಿನಕೇರಿ, ತಾ: ಮುಂಡಗೋಡ, 2]. ಕು|| ತನ್ಮಯ ತಂದೆ ಯಲ್ಲಪ್ಪ ಕಮ್ಮಾರ, ಪ್ರಾಯ-07 ತಿಂಗಳು, ಸಾ|| ಉಗ್ಗಿನಕೇರಿ, ತಾ: ಮುಂಡಗೋಡ. ಪಿರ್ಯಾದಿಯ ಹೆಂಡತಿಯಾದ ಶ್ರೀಮತಿ ರಾಧಾ ಕೋಂ. ಯಲ್ಲಪ್ಪ ಕಮ್ಮಾರ, ಇವಳು ತನ್ನ ಮಗ ಕು: ತನ್ಮಯ ಯಲ್ಲಪ್ಪ ಕಮ್ಮಾರ, ಈತನನ್ನು ಕರೆದುಕೊಂಡು ಮುಂಡಗೋಡಗೆ ಆಸ್ಪತ್ರೆಗೆ ಹೋಗಿ ಬರುವುದಾಗಿ ಪಕ್ಕದ ಮನೆಯಲ್ಲಿ ಹೇಳಿ ದಿನಾಂಕ: 10-01-2022 ರಂದು ಮಧ್ಯಾಹ್ನ 03-30 ಗಂಟೆಗೆ ಉಗ್ಗಿನಕೇರಿಯಿಂದ ಹೋದವರು ಇದುವರೆಗೂ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದವರನ್ನು ಇದುವರೆಗೂ ಹುಡುಕಾಡಿದರೂ ಪತ್ತೆಯಾಗದೇ ಇದ್ದುದರಿಂದ ಸದ್ರಿಯವರಿಗೆ ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಯಲ್ಲಪ್ಪ ತಂದೆ ಕಾಳಪ್ಪ ಕಮ್ಮಾರ, ಪ್ರಾಯ-29 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉಗ್ಗಿನಕೇರಿ, ತಾ: ಮುಂಡಗೋಡ ರವರು ದಿನಾಂಕ: 14-01-2022 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 05/2022, ಕಲಂ: 279, 338 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಲಾರಿ ನಂ: ಎಮ್.ಎಚ್-42/ಬಿ-8861 ನೇದರ ಚಾಲಕನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 14-01-2022 ರಂದು 08-30 ಗಂಟೆಗೆ ಹಳಿಯಾಳ ಬದಿಯಿಂದ ಮುರ್ಕವಾಡ ಬದಿಗೆ ತನ್ನ ಲಾರಿ ನಂ: ಎಮ್.ಎಚ್-42/ಬಿ-8861 ನೇದನ್ನು ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುತ್ತಾ, ಹಳಿಯಾಳ ಬದಿಯಿಂದ ಮುರ್ಕವಾಡ ಬದಿಗೆ ಎಡಬದಿಯ ಕಚ್ಚಾ ರಸ್ತೆಯಲ್ಲಿ ಹೈಸ್ಕೂಲಿಗೆ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿಯ ತಂಗಿ (ಗಾಯಾಳು) ಕು: ಪ್ರಾಜಕ್ತಾ ತಂದೆ ಪ್ರಕಾಶ ಚೌಧÀರಿ, ಪ್ರಾಯ-16 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| ಕುಂಬರವಾಡಾ, ಖಾನಾಪುರ, ತಾ: ಹಳಿಯಾಳ, ಹಾಲಿ ಸಾ|| ಮುಂಡವಾಡ, ತಾ: ಹಳಿಯಾಳ ಇವಳಿಗೆ ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದ ಹತ್ತಿರದ ಎಚ್.ಪಿ ಪೆಟ್ರೋಲ್ ಪಂಪ್ ಹತ್ತಿರ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಗಂಭೀರ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಸ್ಥಳದಲ್ಲಿ ನಿಲ್ಲದೇ ಓಡಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಫಕೀರ ತಂದೆ ಬಶೆಟ್ಟಿ ಮಿರಾಶಿ, ಪ್ರಾಯ-21 ವರ್ಷ, ವೃತ್ತಿ-ಕಾಲೇಜ್ ವಿದ್ಯಾರ್ಥಿ, ಸಾ|| ಮುಂಡವಾಡ, ತಾ: ಹಳಿಯಾಳ ರವರು ದಿನಾಂಕ: 14-01-2022 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 07/2022, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಕುಮಾರಿ: ಗಾಯಿತ್ರಿ ತಂದೆ ಫಕೀರ ಕದಂ, ಪ್ರಾಯ-19 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಬಾಣಸಗೇರಿ, ತಾ: ಹಳಿಯಾಳ. ಪಿರ್ಯಾದಿಯ ಮಗಳಾದ ಇವಳು ದಿನಾಂಕ: 13-01-2022 ರಂದು ಮಧ್ಯಾಹ್ನ 14-00 ಗಂಟೆಗೆ ತಾನು ಕಲಘಟಗಿ ತಾಲೂಕಿನ ಸಂಗಮೇಶ್ವರದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಿ ಬರುತ್ತೇನೆ ಅಂತಾ ಹಳಿಯಾಳ ತಾಲೂಕಿನ ಬಾಣಸಗೇರಿಯ ತಮ್ಮ ಮನೆಯಲ್ಲಿ ತನ್ನ ಅಕ್ಕ ಮೇಘಾ ತಂದೆ ಫಕೀರ ಕದಂ ಇವಳಿಗೆ ಹೇಳಿ ಹೋದವಳು, ಸಂಗಮೇಶ್ವರಕ್ಕೆ ಹೋಗದೇ, ತಮ್ಮ ಮನೆಗೂ ವಾಪಸ್ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಫಕೀರ ತಂದೆ ನಿಂಗಪ್ಪ ಕದಂ, ಪ್ರಾಯ-55 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬಾಣಸಗೇರಿ, ತಾ: ಹಳಿಯಾಳ ರವರು ದಿನಾಂಕ: 14-01-2022 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 14-01-2022

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 03/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ವಿನೋದ ತಂದೆ ಮೊನ್ನಾ ಆಗೇರ, ಪ್ರಾಯ-39 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಕಲಬೇಣ, ಅವರ್ಸಾ, ತಾ: ಅಂಕೋಲಾ. ಈತನು ಪ್ರತಿನಿತ್ಯ ಸಾರಾಯಿ ಕುಡಿದು ಹೆಂಡತಿಗೆ ತೊಂದರೆ ಕೊಡುತ್ತಿದ್ದವನು, ಇದರಿಂದ ಅವನಿಗೆ ಕಳೆದ 12-13 ವರ್ಷಗಳ ಹಿಂದೆ ಹೆಂಡತಿ ಬಿಟ್ಟು ಹೋಗಿದ್ದು, ತಾನೊಬ್ಬನೇ ಆತನ ಮೂಲಮನೆಯ ಒಂದು ಪಕ್ಕೆಯಲ್ಲಿ ವಾಸ ಮಾಡಿಕೊಂಡಿದ್ದವನು, ದಿನಾಂಕ: 14-01-2022 ರಂದು ಸಾಯಂಕಾಲ 06-00 ಗಂಟೆಯಿಂದ 07-15 ಗಂಟೆಯ ನಡುವಿನ ಅವಧಿಯಲ್ಲಿ ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಅಥವಾ ಇನ್ಯಾವುದೋ ಕಾರಣಕ್ಕೆ ತನ್ನ ಮೂಲ ಮನೆಯ ಪಕಾಸಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಜಗನ್ನಾಥ ತಂದೆ ಮೊನ್ನಾ ಆಗೇರ, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಕಲಬೇಣ, ಅವರ್ಸಾ, ತಾ: ಅಂಕೋಲಾ ರವರು ದಿನಾಂಕ: 14-01-2022 ರಂದು 23-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 03/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮುತ್ತಪ್ಪ ತಂದೆ ನಿಂಗಪ್ಪ ಸುಣಗಾರ, ಪ್ರಾಯ-30 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕುಂಬಾರ ಓಣಿ, ಅಕ್ಕಿ ಆಲೂರ, ತಾ: ಹಾನಗಲ್, ಜಿ: ಹಾವೇರಿ. ಪಿರ್ಯಾದಿಯ ಸ್ನೇಹಿತನಾದ ಈತನು ಹಾಗೂ ಇನ್ನೂ 7 ಮಂದಿ ಸ್ನೇಹಿತರೊಂದಿಗೆ ದಿನಾಂಕ: 14-01-2022 ರಂದು ಮುರ್ಡೇಶ್ವರಕ್ಕೆ ಪ್ರವಾಸಕ್ಕೆಂದು ಮಾರುತಿ ಇಕೋ ವಾಹನದಲ್ಲಿ ದಿನಾಂಕ: 14-01-2022 ರಂದು ಬೆಳಿಗ್ಗೆ 10-00 ಗಂಟೆಗೆ ಹಾವೇರಿಯ ಅಕ್ಕಿಆಲೂರನಿಂದ ಹೊರಟವರು ಮಧ್ಯಾಹ್ನ ಮುರ್ಡೇಶ್ವರಕ್ಕೆ ಬಂದು ಊಟ ಮಾಡಿ, ಮಧ್ಯಾಹ್ನ 03-00 ಗಂಟೆಯ ಸುಮಾರಿಗೆ ಮುರ್ಡೇಶ್ವರದ ಅರಬ್ಬಿ ಸಮುದ್ರದ ದಡದಲ್ಲಿ ವಾಹನ ನಿಲ್ಲಿಸಿ, ಅರಬ್ಬಿ ಸಮುದ್ರದಲ್ಲಿ ಪ್ರವಾಸಿ ಬೋಟ್ ಇರುವ ಸ್ಥಳದ ಹತ್ತಿರ ಪಿರ್ಯಾದಿಯು ತನ್ನ ಸ್ನೇಹಿತರೊಂದಿಗೆ ಸ್ನಾನಕ್ಕೆ ಇಳಿದಾಗ ವಾಹನದ ಹತ್ತಿರ ಕುಳಿತ ಮುತ್ತಪ್ಪ ತಂದೆ ನಿಂಗಪ್ಪ ಸುಣಗಾರ, ಈತನು ಮಧ್ಯಾಹ್ನ 03-00 ಗಂಟೆಯಿಂದ 04-00 ಗಂಟೆಯ ನಡುವಿನ ಅವದಿಯಲ್ಲಿ ಅರಬ್ಬಿ ಸಮುದ್ರದ ನೀರಿನಲ್ಲಿ ಈಜಾಡಲು ಇಳಿದಾಗ ನೀರಿನ ಅಲೆಗಳಿಗೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪ್ರದೀಪ ತಂದೆ ಸುರೇಶಪ್ಪ ಸಂಗೂರ, ಪ್ರಾಯ-25 ವರ್ಷ, ವೃತ್ತಿ-ಹಾವೇರಿಯ ಎಪಿಎಮ್.ಸಿ ಯಲ್ಲಿ ಬಿಲ್ಲಿಂಗ್ ಕೆಲಸ, ಸಾ|| ಬಸವೇಶ್ವರ ನಗರ, ಅಕ್ಕಿಆಲೂರ, ತಾ: ಹಾನಗಲ್, ಜಿ: ಹಾವೇರಿ ರವರು ದಿನಾಂಕ: 14-01-2022 ರಂದು 16-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 05/2022, ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮಣಿ ತಂದೆ ಕೃಷ್ಣಾ ನಾಯರ್, ಪ್ರಾಯ-58 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಉಮ್ಮಚಗಿ, ಪೋ: ಉಮ್ಮಚಗಿ, ತಾ: ಯಲ್ಲಾಪುರ. ಪಿರ್ಯಾದಿಯವರ ಅಣ್ಣನಾದ ಈತನು ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದವನಿಗೆ ದಿನಾಂಕ: 14-01-22 ರಂದು ಬೆಳಗಿನ ಜಾವ ಶಿರಸಿಯ ಆಸ್ಪತ್ರೆಗೆ ಅಂತಾ ಕರೆದುಕೊಂಡು ಹೋಗುತ್ತಿರುವಾಗ ದಾರಿಯ ಮಧ್ಯದಲ್ಲಿ ಸಮಯ ಸುಮಾರು 03-00 ಗಂಟೆಗೆ ಮೃತಪಟ್ಟಿರುತ್ತಾನೆ.  ಸದ್ರಿ ತನ್ನ ಅಣ್ಣನ ಮರಣದಲ್ಲಿ ಸಂಶಯ ಇದ್ದು, ಈ ಕುರಿತು ಮುಂದಿನ ಕಾನೂನು ತನಿಖೆಯಾಗಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಜ್ಜಿಮೋಹನ ತಂದೆ ಕೃಷ್ಣಾ ನಾಯರ್, ಪ್ರಾಯ-48 ವರ್ಷ, ವೃತ್ತಿ-ವ್ಯಾಪಾರ, ಸಾ|| ಉಮ್ಮಚಗಿ, ಪೋ: ಉಮ್ಮಚಗಿ, ತಾ: ಯಲ್ಲಾಪುರ ರವರು ದಿನಾಂಕ: 14-01-2022 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 01/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಆನಂದಸಿಂಗ್ ತಂದೆ ಲಕ್ಷ್ಮಣಸಿಂಗ್ ಠಾಕೂರ್, ಪ್ರಾಯ-32 ವರ್ಷ, ವೃತ್ತಿ-ಹುಬ್ಬಳ್ಳಿಯ 104 ಆರೋಗ್ಯ ಸಹಾಯವಾಣಿಯಲ್ಲಿ ಸೂಪರವೈಸರ್ ಕೆಲಸ, ಸಾ|| ಮನೆ ನಂ: 200, 03 ನೇ ಕ್ರಾಸ್, ಶೀಲಾ ಕಾಲೋನಿ, ಮಂಟೂರ ರಸ್ತೆ, ಹುಬ್ಬಳ್ಳಿ. ಪಿರ್ಯಾದಿಯ ತಮ್ಮನಾದ ಈತನು ದಿನಾಂಕ: 12-01-2022 ರಂದು ಸಂಜೆ 05-00 ಗಂಟೆಗೆ ದಾಂಡೇಲಿಯ ಮೌಳಂಗಿ ಇಕೋ ಪಾರ್ಕ್ ಪಕ್ಕ ಹರಿಯುತ್ತಿರುವ ಕಾಳಿ ನದಿಯಲ್ಲಿ ತನ್ನ ಸಹೋದ್ಯೋಗಿಗಳೊಂದಿಗೆ ಸ್ನಾನ ಮಾಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಕಾಣೆಯಾಗಿದ್ದು, ದಿನಾಂಕ: 14-01-2022 ರಂದು ಬೆಳಿಗ್ಗೆ 07-30 ಗಂಟೆಯ ಸಮಯಕ್ಕೆ ಮೃತನನ್ನು ಸ್ಥಳೀಯ ಹಾರ್ನಬಿಲ್ ಮಾನಸಾ ಅಡ್ವೆಂಚರ್ಸ್ ನ ಬೋಟಿನವರು ಹುಡುಕುತ್ತಿದ್ದಾಗ ಕಾಳಿ ನದಿಯಲ್ಲಿ ಸಿಕ್ಕಿದ್ದು, ಮೃತ ನನ್ನ ತಮ್ಮನು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಇದರ ಹೊರತು ನನ್ನ ತಮ್ಮನ ಸಾವಿನಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪ್ರಶಾಂತಸಿಂಗ್ ತಂದೆ ಲಕ್ಷ್ಮಣಸಿಂಗ್ ಠಾಕೂರ್, ಪ್ರಾಯ-37 ವರ್ಷ, ವೃತ್ತಿ-ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ, ಸಾ|| ಮನೆ ನಂ: 200, 03 ನೇ ಕ್ರಾಸ್, ಶೀಲಾ ಕಾಲೋನಿ, ಮಂಟೂರ ರಸ್ತೆ, ಹುಬ್ಬಳ್ಳಿ ರವರು ದಿನಾಂಕ: 14-01-2022 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 16-02-2022 07:17 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080