ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 14-06-2021

at 00:00 hrs to 24:00 hrs

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 98/2021, ಕಲಂ: ಮನುಷ್ಯ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮನುಷ್ಯ ಶ್ರೀ ರಾಜೇಶ ತಂದೆ ನಾರಾಯಣ ನಾಯ್ಕ, ಪ್ರಾಯ–31 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅತ್ತಗಾರ್ ಬಳಗಾರ್, ತಾ: ಯಲ್ಲಾಪುರ, ಹಾಲಿ ಸಾ|| ಚಿಕ್ಕ ಮಾವಳ್ಳಿ ಗ್ರಾಮ, ತಾ: ಯಲ್ಲಾಪುರ. ಪಿರ್ಯಾದುದಾರರ ಗಂಡನಾದ ಇವರು ಕೂಲಿ ಕೆಲಸ ಮಾಡಿಕೊಂಡು ಇದ್ದವರು, ದಿನಾಂಕ 10-06-2021 ರಂದು ಬೆಳಿಗ್ಗೆ ಯಲ್ಲಾಪುರಕ್ಕೆ ಬಂದು ಮರಳಿ ಸಂಜೆ 07-00 ಗಂಟೆಗೆ ಚಿಕ್ಕಮಾವಳ್ಳಿಯ ತನ್ನ ಮಾವನ ಮನೆಗೆ ಹೋಗಿ ಊಟ ಮಾಡಿ ‘ಇಲ್ಲೇ ಹೋಗಿ ಬರುತ್ತೇನೆ’ ಅಂತಾ ಮನೆಯಲ್ಲಿ ಪಿರ್ಯಾದಿಗೆ ಹೇಳಿ ಹೋದವರು, ಮರಳಿ ಮನೆಗೆ ಬರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಗಂಡನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಶ್ವೇತಾ ಕೋಂ. ರಾಜೇಶ ನಾಯ್ಕ. ಪ್ರಾಯ–28 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಅತ್ತಗಾರ್ ಬಳಗಾರ್, ತಾ: ಯಲ್ಲಾಪುರ, ಹಾಲಿ ಸಾ|| ಚಿಕ್ಕ ಮಾವಳ್ಳಿ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 14-06-2021 ರಂದು 06-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 113/2021, ಕಲಂ: 279, 337, 304(ಎ) ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಲಾರಿ ನಂ: ಕೆ.ಎ-31/5996 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 14-06-2021 ರಂದು ಗೂಡ್ಸ್ ವಾಹನ ನಂ: ಕೆ.ಎ-25/ಸಿ-8987 ನೇದರ ಚಾಲಕನಾದ ಮೃತ: ಶ್ರೀ ವೀರೇಶ ತಂದೆ ಗಂಗಪ್ಪ ಕಬ್ಬೂರ, ಪ್ರಾಯ–45 ವರ್ಷ, ವೃತ್ತಿ-ಚಾಲಕ, ಸಾ|| ಬೆಳವಟಿಗಿ, ತಾ: ಹಳಿಯಾಳ ಈತನು ತನ್ನ ಗೂಡ್ಸ್ ವಾಹನದಲ್ಲಿ ಗಾಯಾಳುಗಳಾದ 1). ಗಣಪತಿ ತಂದೆ ಅಪ್ಪಯ್ಯ ಖಂಡೇಕರ, ಪ್ರಾಯ-40 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬೆಳವಟಿಗಿ, ತಾ: ಹಳಿಯಾಳ, 2). ಲಕ್ಷ್ಮಣ ತಂದೆ ಅಪ್ಪಯ್ಯ ಖಂಡೇಕರ, ಪ್ರಾಯ-30 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬೆಳವಟಿಗಿ, ತಾ: ಹಳಿಯಾಳ, 3). ಮಲ್ಲೇಶ ತಂದೆ ಮಹಾದೇವ ಕಮ್ಮಾರ, ಪ್ರಾಯ-47 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬೆಳವಟಿಗಿ ತಾ: ಹಳಿಯಾಳ ಹಾಗೂ 4). ಸವಿತಾ ಕೋಂ. ಹನ್ಮಂತಪ್ಪ ಚಿಕ್ಕುಂಬಿ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗೋಲೆಹಳ್ಳಿ, ತಾ: ಹಳಿಯಾಳ ರವರಿಗೆ ಮತ್ತು ಮೃತೆ: ಶ್ರೀಮತಿ ಹನ್ಮವ್ವ ಕೋಂ. ಮಾರುತಿ ಭಜಂತ್ರಿ, ಪ್ರಾಯ–60 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹುಲಿಕೇರಿ, ಧಾರವಾಡ ಇವರುಗಳಿಗೆ ಕೂಡ್ರಿಸಿಕೊಂಡು ತಮ್ಮ ಹೊಲಗಳಿಗೆ ಬೀಜ ಮತ್ತು ಗೊಬ್ಬರವನ್ನು ತೆಗೆದುಕೊಂಡು ಹೋಗಲು ಹಳಿಯಾಳಕ್ಕೆ ಬರುತ್ತಿದ್ದಾಗ, ಹಳಿಯಾಳ ಬದಿಯಿಂದ ಕಲಘಟಗಿ ಬದಿಗೆ ಹೋಗುತ್ತಿದ್ದ ಲಾರಿ ನಂ: ಕೆ.ಎ-31/5996 ನೇದರ ಆರೋಪಿ ಚಾಲಕನು ತನ್ನ ಲಾರಿಯನ್ನು ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಹಳಿಯಾಳ ತಾಲೂಕಿನ ನಾಗಶೆಟ್ಟಿಕೊಪ್ಪ ಗ್ರಾಮದ ಹತ್ತಿರ ಬೆಳಗ್ಗೆ 09-10 ಗಂಟೆಗೆ ಡಾಂಬರ್ ರಸ್ತೆಯ ತಿರುವಿನಲ್ಲಿ ಗೂಡ್ಸ್ ವಾಹನ ನಂ: ಕೆ.ಎ-25/ಸಿ-8987 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಚಾಲಕನಿಗೆ ಸ್ಥಳದಲ್ಲಿ ಹಾಗೂ ಶ್ರೀಮತಿ ಹನ್ಮವ್ವ ಭಜಂತ್ರಿ ಇವಳಿಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿ ಮರಣವನ್ನುಂಟು ಪಡಿಸಿದ್ದಲ್ಲದೇ, ಇನ್ನುಳಿದವರಿಗೆ ಸಾಧಾರಣ ಸ್ವರೂಪದ ಗಾಯನೋವು ಪಡಿಸಿ ವಾಹನವನ್ನು ಜಖಂಗೊಳಿಸಿರುತ್ತಾನೆ ಮತ್ತು ಅಪಘಾತ ಪಡಿಸಿದ ನಂತರ ಆರೋಪಿ ಲಾರಿ ಚಾಲಕನು ಸ್ಥಳದಲ್ಲಿ ನಿಲ್ಲದೇ ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಬಸವರಾಜ ತಂದೆ ಬಸಲಿಂಗಪ್ಪ ಕುರಬಗಟ್ಟಿ, ಪ್ರಾಯ–52 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬೆಳವಟಿಗಿ, ತಾ: ಹಳಿಯಾಳ ರವರು ದಿನಾಂಕ: 14-06-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 114/2021, ಕಲಂ: 269, 271 ಐಪಿಸಿ ಹಾಗೂ ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ವಾಸು ತಂದೆ ಪಕ್ಕೀರ ಹಡಪದ, ಪ್ರಾಯ–23 ವರ್ಷ, ವೃತ್ತಿ-ಕ್ಷೌರಿಕ, ಸಾ|| ಚೌವ್ಹಾಣ ಪ್ಲಾಟ್, ತಾ: ಹಳಿಯಾಳ, 2]. ರಮೇಶ ತಂದೆ ರಾಜು ಶೆಟ್ಟಿ, ಪ್ರಾಯ–47 ವರ್ಷ, ವೃತ್ತಿ-ಹೊಟೇಲ್ ವ್ಯಾಪಾರ, ಸಾ|| ಐಬಿ ಹತ್ತಿರ, ಬೆಳಂಬತ್ತಿ, ತಾ: ಸಾಗರ, ಜಿ: ಶಿವಮೊಗ್ಗ, 3]. ಪರಶುರಾಮ್ ತಂದೆ ಹನುಮಂತ ವಡ್ಡರ, ಪ್ರಾಯ–46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಿದ್ದರಾಮೇಶ್ವರ ಗಲ್ಲಿ, ತಾ: ಹಳಿಯಾಳ, 4]. ಶೆಟ್ಟಪ್ಪ ತಂದೆ ಹನುಮಂತ ವಡ್ಡರ, ಪ್ರಾಯ–20 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಿದ್ದರಾಮೇಶ್ವರ ಗಲ್ಲಿ, ತಾ: ಹಳಿಯಾಳ, 5]. ರವಿ ತಂದೆ ಹನುಮಂತಪ್ಪ ಯಾವಗಲ್, ಪ್ರಾಯ–35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಭಜಂತ್ರಿ ಗಲ್ಲಿ, ತಾ: ಹಳಿಯಾಳ, 6]. ಪ್ರಾನ್ಸಿಸ್ ತಂದೆ ನಿಕೋಲಸ್ ದಾಲ್ಮಿತ್, ಪ್ರಾಯ–33 ವರ್ಷ, ವೃತ್ತಿ-ವ್ಯವಹಾರ, ಸಾ|| ಸದಾಶಿವನಗರ, ತಾ: ಹಳಿಯಾಳ, 7]. ರಮೇಶ ತಂದೆ ಜೈಭೀಮ ಚುಬ್ಬಣಕರ, ಪ್ರಾಯ–31 ವರ್ಷ, ವೃತ್ತಿ-ಅಡಿಗೆ ಕೆಲಸ, ಸಾ|| ಹಳೆ ಕೋರ್ಟ ಹಿಂದೆ, ಇಂದಿರಾನಗರ, ಗುಲ್ಬರ್ಗಾ. ಸರ್ಕಾರವು ಮಾನವ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ರೋಗದ ಸೋಂಕು ಹರಡದಂತೆ ತಡೆಗಟ್ಟುವ ಸಲುವಾಗಿ ಲಾಕಡೌನ್ ಆದೇಶ ಹೊರಡಿಸಿದ್ದರೂ ಸಹ ನಮೂದಿತ ಆರೋಪಿತರು ಲಾಕಡೌನ್ ಆದೇಶ ಉಲ್ಲಂಘಿಸಿ. ಸೋಂಕು ಹರಡುವ ಸಂಭವವಿದ್ದರೂ ಮಾಸ್ಕ್ ಧರಿಸಿದೇ, ಸಾಮಾಜಿಕ ಅಂತವರನ್ನು ಕಾಪಾಡಿಕೊಳ್ಳದೇ ನಿಷ್ಕಾಳಜಿತನದಿಂದ ದಿನಾಂಕ: 14-06-2021 ರಂದು ಹಳಿಯಾಳ ಶಹರದ ಸಿದ್ದರಾಮೇಶ್ವರ ಗಲ್ಲಿಯ ಕ್ರಿಶ್ಚಿಯನ್ ಸ್ಮಶಾನದ ಹಿಂಭಾಗದ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಗುಂಪಾಗಿ ಕುಳಿತುಕೊಂಡು ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣದ ಪಂಥ ಕಟ್ಟಿ ಅಂದರ್-ಬಾಹರ್ ಜೂಜಾಟ ಆಟ ಆಡುತ್ತಿದ್ದಾಗ, 16-20 ಗಂಟೆಗೆ ದಾಳಿಯ ಕಾಲಕ್ಕೆ ನಗದು ಹಣ 3,560/- ರೂಪಾಯಿ ಮತ್ತು ಜೂಜಾಟದ ಸಲಕರಣೆಗಳ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಿವಾನಂದ ನಾವದಗಿ, ಪಿ.ಎಸ್.ಐ (ಕಾ&ಸು), ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 14-06-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 115/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಿಂಗಪ್ಪ ತಂದೆ ಬಸಪ್ಪ ಉಡ್ರಾವಿ, ಪ್ರಾಯ–36 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ, ದಾಂಡೇಲಿ ಡಿಪೋ, ಸಾ|| ಉರಗೋಳ ಗ್ರಾಮ, ತಾ: ಸವದತ್ತಿ, ಜಿ: ಬೆಳಗಾವಿ (ಮೋಟಾರ್ ಸೈಕಲ್ ನಂ: ಕೆ.ಎ-24/ಜೆ-9714 ನೇದರ ಚಾಲಕ). ಈತನು ದಿನಾಂಕ: 14-06-2021 ರಂದು ಸಂಜೆ 17-45 ಗಂಟೆಗೆ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-24/ಜೆ-9714 ನೇದನ್ನು ಹಳಿಯಾಳ ಕಡೆಯಿಂದ ಧಾರವಾಡ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಾಲನೆ ಮಾಡಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಹಳಿಯಾಳÀದ ವಿವೇಕ ಪ್ರಗತಿ ಹತ್ತಿರ, ತನ್ನ ಎದುರಿನಿಂದ ಅಂದರೆ ಧಾರವಾಡ ಕಡೆಯಿಂದ ಹಳಿಯಾಳ ಕಡೆಗೆ ರಸ್ತೆಯ ಎಡ ಸೈಡಿನಿಂದ ಸಾವಕಾಶವಾಗಿ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ.25/ಎಚ್.ಎ-6248 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರನಾದ ಪ್ರಕಾಶ ತಂದೆ ಯಲ್ಲಪ್ಪ ಬಾರ್ಕೆರಾ ಇವರಿಗೆ ಎಡ ಮೊಣಕಾಲಿಗೆ ಭಾರೀ ರಕ್ತಗಾಯ ಹಾಗೂ ಬಲ ಗದ್ದಕ್ಕೆ ತೆರಚಿದ ಗಾಯ ಹಾಗೂ ಸದರ ಮೋಟಾರ್ ಸೈಕಲ್ ಹಿಂಬದಿ ಸವಾರಳಾದ ಸುನಿತಾ ತಂದೆ ಚಂದ್ರಕಾಂತ ಬೇಡರನಾಯಕ ಇವರಿಗೆ ಎಡ ಮೊಣಕಾಲಿಗೆ, ಬಲ ಮೊಣಕೈ ಹಿಂಬಡಿಗೆ ಸಾದಾ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಗಾಯನೋವು ಪಡಿಸಿಕೊಂಡು ಎರಡೂ ಮೋಟಾರ್ ಸೈಕಲ್ ಜಖಂಗೊಳ್ಳುವಂತೆ ಮಾಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಲ್ಲೇಶಿ ತಂದೆ ಬಾಳಪ್ಪ ಬೇಡರನಾಯಕ, ಪ್ರಾಯ–29 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕೆರವಾಡ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 14-06-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 55/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿಷ್ಣು ತಂದೆ ಅನೀಲ ನಾಯರ್, ಸಾ|| ತಿಸ ಉಜಗಾಂವ, ತಾ: ಪೋಂಡಾ, ಜಿ: ದಕ್ಷಿಣ ಗೋವಾ, ಗೋವಾ (ಟಿಪ್ಪರ್ ನಂ: ಜಿ.ಎ-05/ಟಿ-2044 ನೇದರ ಚಾಲಕ). ಪಿರ್ಯಾದಿಯವರು ತನ್ನ ಹೆಂಡತಿ: ಶ್ರೀಮತಿ ಕುಂದಾ ಹಾಗೂ ಅಳಿಯ: ತುಕಾರಾಮ ಇವರಿಗೆ ಆರಾಮ ಇಲ್ಲದ್ದರಿಂದ ದಿನಾಂಕ: 14-06-2021 ರಂದು ಅಳಿಯ: ತುಕಾರಾಮ ರವರ ಮೋಟಾರ್ ಸೈಕಲ್ ನಂ: ಜಿ.ಎ-03/ಎಚ್-8491 ನೇದರ ಮೇಲೆ ಅನಮೋಡ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ತೋರಿಸಿಕೊಂಡು ಮರಳಿ ಮಧ್ಯಾಹ್ನ 03-00 ಗಂಟೆಯ ಸುಮಾರಿಗೆ ಊರಿಗೆ ಹೋಗಲು ಖಾನಾಪುರ ರಸ್ತೆಯಲ್ಲಿ ಹೋಗುತ್ತಿರುವಾಗ ನಮೂದಿತ ಟಿಪ್ಪರ್ ನಂ: ಜಿ.ಎ-05/ಟಿ-2044 ನೇದರ ಆರೋಪಿ ಚಾಲಕನು ತನ್ನ ಟಿಪ್ಪರ್ ವಾಹನವನ್ನು ಖಾನಾಪುರ ಬದಿಯಿಂದ ಅನಮೋಡ ಬದಿಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಎದುರುಗಡೆ ಹೋಗುತ್ತಿದ್ದ ಸ್ಕೂಟಿಯನ್ನು ತಪ್ಪಿಸಿಕೊಂಡು ಬಂದು ಎದುರುಗಡೆಯಿಂದ ಬರುತ್ತಿದ್ದ ತುಕಾರಾಮ ದಳವಿ ರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ: ಜಿ.ಎ-03/ಎಚ್-8491 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಈ ಅಪಘಾತದ ಪರಿಣಾಮ ಪಿರ್ಯಾದಿಯವರ ಎಡಹುಬ್ಬಿನ ಭಾಗ ಹಾಗೂ ಎಡ ಕೆನ್ನೆಯ ಭಾಗ ಮತ್ತು ಬಲಗಾಲಿನ ಕಿರು ಬೆರಳಿನ ಹತ್ತಿರ ರಕ್ತಗಾಯವಾಗಿ, ಎಡಗೈ ಅಂಗೈ ಗಂಟಿನ ಹತ್ತಿರ ಒಳಪೆಟ್ಟು ಆಗಿದ್ದು, ಮೋಟಾರ್ ಸೈಕಲ್ ಚಲಾಯಿಸುತ್ತಿದ್ದ ತುಕಾರಾಮ ದಳವಿ ರವರಿಗೆ ಬಲಗೈ ತೋಳಿನ ಭಾಗ ಹಾಗೂ ಎಡಗಾಲಿನ ಮೊಣಗಂಟಿನ ಭಾಗದಲ್ಲಿ ಫ್ರ್ಯಾಕ್ಚರ್ ಆಗಿ ಭಾರೀ ಪೆಟ್ಟಾಗಿದ್ದು, ಶ್ರೀಮತಿ ಕುಂದಾ ರವರಿಗೆ ತಲೆಯ ಮೇಲ್ಭಾಗದಲ್ಲಿ ಹಾಗೂ ಬಲಗೈ ಮೊಣಗಂಟಿನ ಭಾಗದಲ್ಲಿ ರಕ್ತಗಾಯವಾಗಿರುವ ಬಗ್ಗೆ ಪಿರ್ಯಾದಿ ಶ್ರೀ ಮುಕುಂದ ತಂದೆ ವಿಷ್ಣು ಗಾಂವಕರ, ಪ್ರಾಯ-43 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಪಲ್ಡಾ, ಅಖೇತಿ, ತಾ: ಜೋಯಿಡಾ ರವರು ದಿನಾಂಕ: 14-06-2021 ರಂದು 19-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 14-06-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

ಇತ್ತೀಚಿನ ನವೀಕರಣ​ : 15-06-2021 01:23 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080