ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 14-03-2021

at 00:00 hrs to 24:00 hrs

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 24/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಭಾಸ್ಕರ ತಂದೆ ಗಣಪತಿ ನಾಯ್ಕ, ಪ್ರಾಯ-31 ವರ್ಷ, ವೃತ್ತಿ-ಚಾಲಕ, ಸಾ|| ತಲಹೊಂಡ, ಉತ್ತರಕೊಪ್ಪ, ತಾ: ಭಟ್ಕಳ (ಮಹೀಂದ್ರಾ ಸುಪ್ರೋ ಮ್ಯಾಕ್ಸಿ ಟ್ರಕ್ ನಂ: ಕೆ.ಎ-47/ಎ-1728 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 14-03-2021 ರಂದು 11-30 ಗಂಟೆಯ ಸುಮಾರಿಗೆ ತಾನು ಚಲಾಯಿಸುತ್ತಿದ್ದ ಮಹೀಂದ್ರಾ ಸುಪ್ರೋ ಮ್ಯಾಕ್ಸಿ ಟ್ರಕ್ ನಂ: ಕೆ.ಎ-47/ಎ-1728 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ನೇದರ ಮೇಲೆ ಶಿರಾಲಿ ಕಡೆಯಿಂದ ಮುರ್ಡೇಶ್ವರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೇಂಗ್ರೆಯ ಮಾಲೆಕೋಡ್ಲು ಕ್ರಾಸ್ ಹತ್ತಿರ ತನ್ನ ವಾಹನವನ್ನು ಓವರಟೇಕ್ ಮಾಡಿಕೊಂಡು ಹೋಗುತ್ತಿರುವಾಗ ತನ್ನ ಮುಂದುಗಡೆಯಿಂದ ಪಿರ್ಯಾದಿಯ ಭಾವ ದೇವಿದಾಸ ತಂದೆ ನಾಗಪ್ಪ ನಾಯ್ಕ, ಈತನು ತನ್ನ ಬಜಾಜ್ ಬಾಕ್ಸರ್ ಕವಾಸಕಿ ಮೋಟಾರ್ ಸೈಕಲ್ ನಂ: ಕೆ.ಎ-30/ಜೆ-8490 ನೇದರ ಮೇಲೆ ತನ್ನ ಹೆಂಡತಿ ಶ್ರೀಮತಿ ಲೀಲಾವತಿ ಕೋಂ. ದೇವಿದಾಸ ನಾಯ್ಕ ಹಾಗೂ ತನ್ನ ಮಗ ಚರಣ ತಂದೆ ದೇವಿದಾಸ ನಾಯ್ಕ ಇವರನ್ನು ಮೋಟಾರ್ ಸೈಕಲ್ ಮೇಲೆ ಕೂಡ್ರಿಸಿಕೊಂಡು ಮುರ್ಡೇಶ್ವರದ ದೇವಿಕಾನ್ ಮಹಾಸತಿ ದೇವರ ಪೂಜೆಯ ಕುರಿತು ಶಿರಾಲಿ ಕಡೆಯಿಂದ ಮುರ್ಡೇಶ್ವರ ಕಡೆಗೆ ಹೋಗುತ್ತಿರುವಾಗ ಆರೋಪಿತನು ಹಿಂದುಗಡೆಯಿಂದ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿ, ಮೋಟಾರ್ ಸೈಕಲ್ ಸವಾರರೆಲ್ಲರೂ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬೀಳುವಂತೆ ಮಾಡಿ, ಪಿರ್ಯಾದಿಯ ಭಾವ ದೇವಿದಾಸ ತಂದೆ ನಾಗಪ್ಪ ನಾಯ್ಕ ಈತನಿಗೆ ಬಲಗಣ್ಣಿನ ಹತ್ತಿರ, ಬಲಗೆನ್ನೆಯ ಮೇಲೆ, ಎಡಗೈ ಮುಂಗೈಗೆ, ಬಲಭುಜದ ಮೇಲೆ ಹಾಗೂ ಎಡಗಾಲ ಮತ್ತು ಬಲಗಾಲ ಮೊಣಗಂಟಿನ ಮೇಲೆ ತೆರಚಿದ ನಮೂನೆಯ ಗಾಯನೋವಾಗಿದ್ದಲ್ಲದೇ, ಪಿರ್ಯಾದಿಯ ತಂಗಿ ಶ್ರೀಮತಿ ಲೀಲಾವತಿ ಕೋಂ. ದೇವಿದಾಸ ನಾಯ್ಕ ಇವಳ ಹಣೆಗೆ, ಬಲಗೆನ್ನೆಗೆ, ಬಲಗೈ ಮೊಣಗಂಟಿನ ಕೆಳಗೆ ತೆರಚಿದ ನಮೂನೆಯ ಗಾಯನೋವು ಪಡಿಸಿದ್ದು ಹಾಗೂ ಪಿರ್ಯಾದಿಯ ತಂಗಿಯ ಮಗ ಚರಣ ಈತನಿಗೂ ಸಹ ಹಣೆಗೆ ಮತ್ತು ಮುಖಕ್ಕೆ ತೆರಚಿದ ನಮೂನೆಯ ಗಾಯನೋವಾಗಿದ್ದು ಇರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗೋಪಾಲ ತಂದೆ ವೆಂಕಟ್ರಮಣ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತುಳಸಿಮನೆ, ಮುಂಡಳ್ಳಿ, ತಾ: ಭಟ್ಕಳ ರವರು ದಿನಾಂಕ: 14-03-2021 ರಂದು 20-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 75/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ 1]. ಇಸ್ಮಾಯಿಲ್ ತಂದೆ ಫಕೀರಸಾಬ್ ಮುಲ್ಲಾ, ಪ್ರಾಯ-68 ವರ್ಷ, ವೃತ್ತಿ-ಚಾಲಕ, ಸಾ|| ಜನತಾ ಕಾಲೋನಿ, ಚಂದಾವರ, ತಾ: ಹೊನ್ನಾವರ, 2]. ಮೈದೂದ್ ತಂದೆ ಖಾದರ್ ಸಂಶಿ, ಪ್ರಾಯ-53 ವರ್ಷ, ವೃತ್ತಿ-ಕೂಲಿ ಕೆಲಸ, ಸಾ||  ಜನತಾ ಕಾಲೋನಿ, ಚಂದಾವರ, ತಾ: ಹೊನ್ನಾವರ, 3]. ಜಹೀರ್ ಅಬ್ಬಾಸ್ ತಂದೆ ಅನ್ವರ್ ಮುಲ್ಲಾ, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜನತಾ ಕಾಲೋನಿ, ಚಂದಾವರ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 13-3-2021 ರಂದು 17-10 ಗಂಟೆಗೆ ಹೊನ್ನಾವರ ತಾಲೂಕಿನ ಚಂದಾವರದ ಈದ್ಗಾ ಮೈದಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿ ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ ಅಂದರ್-ಬಾಹರ್ ಜುಗಾರಾಟ ಆಡುತ್ತಿದ್ದಾಗ ದಾಳಿಯ ವೇಳೆ 1). ನಗದು ಹಣ 2,150/- ರೂಪಾಯಿ, 2). ಇಸ್ಪೀಟ್ ಎಲೆಗಳು ಒಟ್ಟು-52, ಅ||ಕಿ|| 00.00/- ರೂಪಾಯಿ, 3). ಪ್ಲಾಸ್ಟಿಕ್ ಚೀಲದ ಮಂಡ-01, ಅ||ಕಿ|| 00.00/- ರೂಪಾಯಿ ನೇದವುಗಳೊಂದಿಗೆ ಮೂರು ಜನ ಆರೋಪಿತರು ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕಕುಮಾರ ಸಿ. ಆರ್, ಪಿ.ಎಸ್.ಐ (ಕಾ&ಸು-1), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 14-03-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 41/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹಾಸಿಮ್ ತಂದೆ ನಸ್ಸರ್, ಪ್ರಾಯ-25 ವರ್ಷ, ಸಾ|| ಗಾದನೇರ್ ಪಾಡಿ, ಭರತಪುರ್, ರಾಜಸ್ಥಾನ (ಕಂಟೇನರ್ ಲಾರಿ ನಂ: ಎನ್.ಎಲ್-01/ಎ.ಸಿ-9602 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 14-03-2021 ರಂದು ಬೆಳಿಗ್ಗೆ 07-30 ಗಂಟೆಯ ಸುಮಾರಿಗೆ ಕಾರವಾರ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಕಂಟೇನರ್ ಲಾರಿ ನಂ: ಎನ್.ಎಲ್-01./ಎ.ಸಿ-9602 ನೇದನ್ನು ಯಲ್ಲಾಪುರ ಕಡೆಯಿಂದ ಕಲಘಟಗಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಯಲ್ಲಾಪುರ ತಾಲೂಕಿನ ಚಿಕ್ಕ ಮಾವಳ್ಳಿ ಬಸ್ ನಿಲ್ದಾಣದ ಸಮೀಪ ಇರುವ ಸಣ್ಣ ತಿರುವಿನಲ್ಲಿ ಪಲ್ಟಿ ಕೆಡವಿ ರಸ್ತೆಯ ಮೇಲೆ ತಿಕ್ಕಿಕೊಂಡು ತನ್ನ ಎದುರಿನಿಂದ ನಿಧಾನವಾಗಿ ರಸ್ತೆಯ ಎಡಬದಿಯಿಂದ ಪಿರ್ಯಾದಿಯು ಚಲಾಯಿಸಿಕೊಂಡು ಬರುತ್ತಿರುವ ಮಹೀಂದ್ರಾ ಬೊಲೆರೋ ವಾಹನ ನಂ: ಎಮ್.ಎಚ್-12/ಆರ್.ಎನ್-4985 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಪಿರ್ಯಾದಿಗೆ ಮೈಮೇಲೆ ಅಲ್ಲಲ್ಲಿ, ಪಿರ್ಯಾದಿಯ ವಾಹನದಲ್ಲಿ ಇದ್ದ ಪಿರ್ಯಾದಿಯ ತಂದೆ ಸಾಕ್ಷಿದಾರ ಶ್ರೀ ಅರುಣ ಭಾಲೇಕರ್, ಪ್ರಾಯ-58 ವರ್ಷ, ವೃತ್ತಿ-ಚಾಲಕ, ಸಾ|| ಮಹಾರಾಷ್ಟ್ರ (ಮಹೀಂದ್ರಾ ಬೊಲೆರೋ ವಾಹನ ಮಾಲಕ) ರವರ ತಲೆಗೆ ಹಾಗೂ ತನ್ನ ಕಂಟೇನರ್ ಲಾರಿ ಕ್ಲೀನರ್ ಜಾಹಿದ್ ತಂದೆ ಬಶೀರ್, ಪ್ರಾಯ-20 ವರ್ಷ, ಕ್ಲೀನರ್, ಸಾ|| ಗಾದನೇರ್ ಪಾಡಿ, ಭರತಪುರ್, ರಾಜಸ್ಥಾನ ರವರಿಗೂ ಕೈ ಕಾಲುಗಳಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪೊಇ ಚಾಲಕನು ತನಗೂ ಸಹ ಮೈಮೇಲೆ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡು, ಎರಡು ವಾಹನಗಳನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಜ್ಞಾನೇಶ್ವರ ತಂದೆ ಅರುಣ ಭಾಲೇಕರ್, ಪ್ರಾಯ-29 ವರ್ಷ, ವೃತ್ತಿ-ಚಾಲಕ, ಸಾ|| ರಾಲೇಗನಸಿದ್ದಿ, ಝಡ್.ಪಿ. ಸ್ಕೂಲ್ ಹತ್ತಿರ, ತಾ: ಪಾರನೇರ್, ಜಿ: ಅಹಮ್ಮದ್ ನಗರ, ಮಹಾರಾಷ್ಟ್ರ ರವರು ದಿನಾಂಕ: 14-03-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 42/2021, ಕಲಂ: 326, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಮಾಣಿ ಕುಣಬಿ ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗೊಣಗಲಮಕ್ಕಿ, ಇಳೆಹಳ್ಳಿ ಗ್ರಾಮ, ತಾ: ಯಲ್ಲಾಪುರ. ನಮೂದಿತ ಆರೋಪಿತನು ಪಿರ್ಯಾದಿಯವರ ಮಗನಾಗಿದ್ದು, ದಿನಾಂಕ: 13-03-2021 ರಂದು 17-30 ಗಂಟೆಗೆ ಯಲ್ಲಾಪುರ ತಾಲೂಕಿನ ಇಳೆಹಳ್ಳಿ ಗ್ರಾಮದ ಗೊಣಗಲಮಕ್ಕಿ ಊರಿನ ತನ್ನ ಮನೆಯ ಮುಂದೆ ಅಂಗಳದಲ್ಲಿ ತನ್ನ ತಂದೆಯಾದ ಶ್ರೀ ಮಾಣಿ ತಂದೆ ಮಾಳು ಕುಣಬಿ, ಪ್ರಾಯ-66 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗೊಣಗಲಮಕ್ಕಿ, ಇಳೆಹಳ್ಳಿ ಗ್ರಾಮ, ತಾ: ಯಲ್ಲಾಪುರ ಇವರಿಗೆ ‘ಜಮೀನು ಪಾಲು ಮಾಡುವ ವಿಷಯದಲ್ಲಿ ಸಹಿ ಮಾಡು’ ಅಂತಾ ಹೇಳಿದಾಗ, ಅವರು ‘ಸಹಿ ಮಾಡುವುದಿಲ್ಲ’ ಅಂತಾ ಹೇಳಿದ್ದಕ್ಕೆ ಸಿಟ್ಟುಗೊಂಡು ಅವಾಚ್ಯ ಶಬ್ದಗಳಿಂದ ಬೈಯ್ದು ಕಾಲಿನಿಂದ ಒದ್ದು, ಕಟ್ಟಿಗೆಯ ದೊಣ್ಣೆಯಿಂದ ಕುತ್ತಿಗೆಯ ಮೇಲೆ, ಕಿವಿ ಹಾಗೂ ಎರಡು ಕಣ್ಣಿನ ಮೇಲೆ ಹೊಡೆದು ತೀವ್ರ ಗಾಯಗೊಳಿಸಿ ‘ಕೊಲೆ ಮಾಡುತ್ತೇನೆ’ ಎನ್ನುವುದಾಗಿ ಜೀವದ ಬೆದರಿಕೆ ಹಾಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ನಾಗವೇಣಿ ಕೋಂ. ಮಾಣಿ ಕುಣಬಿ, ಪ್ರಾಯ-51 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗೊಣಗಲಮಕ್ಕಿ, ಇಳೆಹಳ್ಳಿ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 14-03-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 23/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಚಿನ್ನಪ್ಪ ತಂದೆ ಭೀಮಪ್ಪ ಕುಂಬಾರ, ಪ್ರಾಯ-35 ವರ್ಷ, ವೃತ್ತಿ-ಹೊಟೇಲ್ ವ್ಯಾಪಾರ, ಸಾ|| ಬಂದಿಗೆ, ಪೋ: ಮುಟುಗುಪ್ಪೆ, ತಾ: ಸೊರಬಾ, ಜಿ: ಶಿವಮೊಗ್ಗ, ಹಾಲಿ ಸಾ|| ಬಾಳೇಕೊಪ್ಪ, ಹೆಬ್ರೆ ಗ್ರಾಮ, ಪೋ: ರಾಗಿಹೊಸಳ್ಳಿ, ತಾ: ಶಿರಸಿ. ನಮೂದಿತ ಆರೋಪಿತನು ದಿನಾಂಕ: 14-03-2021 ರಂದು 11-15 ಗಂಟೆಯ ಸುಮಾರಿಗೆ ಶಿರಸಿ ತಾಲೂಕಿನ ಬಾಳೇಕೊಪ್ಪ ಕ್ರಾಸ್ ಹತ್ತಿರ ತನಗೆ ಸೇರಿದ ತನ್ನ ಫಾಸ್ಟ್ ಪುಡ್ ಹೊಟೇಲ್ ಎದುರಿನಲ್ಲಿ ಮದ್ಯಪಾನ ಕುಡಿಯಲು ಅವಕಾಶ ಮಾಡಿಕೊಟ್ಟ ಕಾಲಕ್ಕೆ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ, ದಾಳಿಯ ಕಾಲಕ್ಕೆ 1). Haywards Cheers Whisky ಎಂಬ ಹೆಸರಿನ 90 ML ಅಳತೆಯ ಪ್ಯಾಕೆಟ್ ಗಳು-08, ತಲಾ ಒಂದಕ್ಕೆ 35.13/- ರೂಪಾಯಿಗಳಂತೆ ಒಟ್ಟೂ ಅ||ಕಿ|| 281.04/- ರೂಪಾಯಿ, 2). Haywards Cheers Whisky ಹೆಸರಿನ 90 ML ಅಳತೆಯ ಖಾಲಿ ಪ್ಯಾಕೆಟ್ ಗಳು-04, ಅ||ಕಿ|| 00.00/- ರೂಪಾಯಿ, 3). ಮದ್ಯಪಾನ ಕುಡಿಯಲು ಉಪಯೋಗಿಸಿದ Use & Through Plastic Glass-3, ಅ||ಕಿ|| 00.00/- ರೂಪಾಯಿ ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಂಜಾನಾಯ್ಕ್ ಎನ್, ಪಿ.ಎಸ್.ಐ (ಕಾ&ಸು), ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 14-03-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 26/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ವಿನಾಯಕ ತಂದೆ ಚಂದ್ರಶೇಖರ ಮಾನೆ ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ಲಿಡ್ಕರ್ ಕಾಂಪ್ಲೆಕ್ಸ್, ತಾ: ಶಿರಸಿ. ನಮೂದಿತ ಆರೋಪಿತನು ದಿನಾಂಕ: 14-03-2021 ರಂದು 18-15 ಗಂಟೆಯ ಸುಮಾರಿಗೆ ಶಿರಸಿ ನಗರದ ಲಿಡ್ಕರ್ ಕಾಂಪ್ಲೆಕ್ಸಿನ ಶ್ರೀ ಗಣಪತಿ ದೇವಸ್ಥಾನದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಜನರಿಗೆ ಮುಕ್ತವಾಗಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿ ಕೊಟ್ಟ ಕಾಲಕ್ಕೆ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ 1). Haywards Cheers Whisky ಹೆಸರಿನ 90 ML ಅಳತೆಯ ಪ್ಯಾಕೆಟ್ ಗಳು-13, ತಲಾ ಒಂದಕ್ಕೆ 35.13/- ರೂಪಾಯಿಯಂತೆ ಒಟ್ಟೂ 456.69/- ರೂಪಾಯಿ, 2). ಮದ್ಯವನ್ನು ಕುಡಿಯಲು ಉಪಯೋಗಿಸಿದ Use & Through Plastic Glass-4, ಅ||ಕಿ|| 00.00/- ರೂಪಾಯಿ, 3). 01 ಲೀಟರಿನ ನೀರಿನ ಖಾಲಿ ಬಾಟಲಿಗಳು-02, ಅ||ಕಿ|| 00.00/- ರೂಪಾಯಿ ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀ ನಾಗಪ್ಪ, ಪಿ.ಎಸ್.ಐ, ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 14-03-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 29/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹ್ಮದಗೌಸ್ ತಂದೆ ಸತ್ತಾರಸಾಬ್, ಪ್ರಾಯ-38 ವರ್ಷ, ವೃತ್ತಿ-ವ್ಯಾಪಾರ, ಸಾ|| ಬೇಡ್ಕಣಿ, ತಾ: ಸಿದ್ದಾಪುರ (ಮಾರುತಿ ಓಮಿನಿ ವಾಹನ ನಂ: ಕೆ.ಎ-41/ಎಂ-1016 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 14-03-2021 ರಂದು ಸಂಜೆ 19-15 ಗಂಟೆಗೆ ತನ್ನ ಮಾರುತಿ ಓಮಿನಿ ವಾಹನ ನಂ: ಕೆ.ಎ-41/ಎಂ-1016 ನೇದನ್ನು ಸಿದ್ದಾಪುರ ಕಡೆಯಿಂದ ಬೇಡ್ಕಣಿ–ಕುಮಟಾ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಾ ಸಿದ್ದಾಪುರ ತಾಲೂಕಿನ ತ್ಯಾರ್ಸಿಯಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿಗೆ ಹಿಂದಿನಿಂದ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ಬಲಗಾಲಿಗೆ ಹಾಗೂ ಹಣೆಗೆ ಗಾಯನೋವನ್ನುಂಟು ಪಡಿಸಿದ್ದಲ್ಲದೇ, ಎಡಗಾಲಿನ ಮುರಿತ ಉಂಟಾಗುವಂತೆ ತೀವೃ ಸ್ವರೂಪದ ಗಾಯನೋವನ್ನುಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಜಗದೀಶ ತಂದೆ ನಾರಾಯಣ ನಾಯ್ಕ, ಪ್ರಾಯ-55 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ತ್ಯಾರ್ಸಿ, ತಾ: ಸಿದ್ದಾಪುರ ರವರು ದಿನಾಂಕ: 14-03-2021 ರಂದು 21-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 14-03-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

 

ಇತ್ತೀಚಿನ ನವೀಕರಣ​ : 16-03-2021 09:48 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080