ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 14-05-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 146/2021, ಕಲಂ: 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ನಮೂದಿತ ಆರೋಪಿತರು ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಾವರದ ಗಾಂಧಿನಗರದಲ್ಲಿಯ ಪಿರ್ಯಾದಿಯ ಸಂಬಂಧಿಕರಾದ ಸುಹಾನ್ ಇವರ ಮನೆಯಲ್ಲಿ ದಿನಾಂಕ: 04-04-2021 ರಂದು 18-30 ಗಂಟೆಯಿಂದ 18-40 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಹೆಂಡತಿಯ ಅತ್ತೆಯ ಮಗಳ, ಮಗಳ ಮಗಳಾದ ಮುಷಾಹಿನ್ ಇವಳಿಗೆ ಪಿರ್ಯಾದಿಯವರು ಅವರಿಗೆ ಸಂಬಂಧಿಸಿದ ಸುಮಾರು 58 ಗ್ರಾಂ ತೂಕದ ಬಂಗಾರದ ಕುತ್ತಿಗೆಯ ಸರ-1, ಅ||ಕಿ|| 1,95,000/- ರೂಪಾಯಿ ಬೆಲೆಯದನ್ನು ಮದುವೆ ದಿವಸ ಹಾಕಿದನ್ನು ಮುಷಾಹಿನ್ ಇವಳು ಗಂಡನ ಮನೆಯಾದ ಗಾಂಧಿನಗರದಲ್ಲಿ ದಿನಾಂಕ: 04-04-2021 ರಂದು 18-30 ಗಂಟೆಗೆ ಬಾತರೂಮಿಗೆ ಹೋಗುವಾಗ ತೆಗೆದು ಬೆಡರೂಮಿನಲ್ಲಿ ಬೆಡ್ ಮೇಲೆ ಇಟ್ಟಿದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಅಬ್ದುಲ್ ಸತ್ತಾರ್ ತಂದೆ ಮೂನುದ್ದೀನ್ ಶೇಖ್, ಪ್ರಾಯ-55 ವರ್ಷ, ವೃತ್ತಿ-ಅಡುಗೆ ಕೆಲಸ, ಸಾ|| ಕರ್ಕಿಕೋಡಿ, ತಾ: ಹೊನ್ನಾವರ ರವರು ದಿನಾಂಕ: 14-05-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 27/2021, ಕಲಂ: 324, 354, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದುರ್ಗೇಶ ತಂದೆ ಯಲ್ಲಪ್ಪ ಕಂಪೊಂಡ, ಸಾ|| ಅಂಬಾಗಿರಿ, 4 ನೇ ಕ್ರಾಸ್, ತಾ: ಶಿರಸಿ. ಈತನು ದಿನಾಂಕ-13-05-2021 ರಂದು 12-30 ಗಂಟೆಯ ಸುಮಾರಿಗೆ ಶಿರಸಿ ಶಹರದ ಅಂಬಾಗರಿಯ 4 ನೇ ಕ್ರಾಸಿನಲ್ಲಿರುವ ಪಿರ್ಯಾದಿಯ ಮನೆಯ ಮುಂದಿನ ರಸ್ತೆಯಲ್ಲಿ ಕಸಕ್ಕೆ ಬೆಂಕಿ ಹಾಕಿದ್ದು, ಪಿರ್ಯಾದಿಯ ಅತ್ತೆ ಶಕುಂತಲಾ ಆಚಾರಿ ಇವಳು ಆರೋಪಿತನಿಗೆ ‘ಕಸವನ್ನು ಇಲ್ಲಿ ಯಾಕೆ ಹಾಕುತ್ತಿದ್ದೀಯಾ?’ ಅಂತಾ ಕೇಳಿದ್ದಕ್ಕೆ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡನ್ನು ತೆಗೆದುಕೊಂಡು ಬಂದು ‘ಬೋಸಡಿ ರಂಡೆ, ಅದನ್ನು ಯಾಕೆ ಕೇಳುತ್ತೀಯಾ?’ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ, ಅದೇ ಸಮಯಕ್ಕೆ ಅಲ್ಲಿಗೆ ಬಂದ ಪಿರ್ಯಾದಿಯ ಗಂಡ ರಾಘವೇಂದ್ರ ಈತನು ‘ನನ್ನ ತಾಯಿಯನ್ನು ಯಾಕೆ ಬೈಯುತ್ತಿದ್ದೀಯಾ?’ ಅಂದಿದ್ದಕ್ಕೆ ಆರೋಪಿತನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ರಾಘವೇಂದ್ರ ಈತನಿಗೆ ಮೈಕೈ ಮೇಲೆ ಹೊಡೆದು ಗಾಯನೋವು ಪಡಿಸಿದ್ದಲ್ಲದೇ, ಪಿರ್ಯಾದಿಗೆ ಹಾಗೂ ಪಿರ್ಯಾದಿಯ ಅತ್ತೆಗೆ ಅವಾಚ್ಯವಾಗಿ ಬೈಯ್ದು ಮಾನಕ್ಕೆ ಕುಂದುಂಟು ಮಾಡಿದವನು, ಜನರು ಬರುವುದನ್ನು ನೋಡಿ ‘ಪಿರ್ಯಾದಿ ಹಾಗೂ ಪಿರ್ಯಾದಿಯ ಅತ್ತೆ ಮತ್ತು ಪಿರ್ಯಾದಿಯ ಗಂಡನಿಗೆ ‘ಈ ದಿನ ತಪ್ಪಿಸಿಕೊಂಡಿದ್ದಿರಿ. ಇನ್ನೊಂದು ದಿನ ಸಿಕ್ಕರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ಪ್ರೀತಿ ಕೋಂ. ರಾಘವೇಂದ್ರ ಆಚಾರಿ, ಪ್ರಾಯ-23 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಅಂಬಾಗಿರಿ, 4 ನೇ ಕ್ರಾಸ್, ತಾ: ಶಿರಸಿ ರವರು ದಿನಾಂಕ: 14-05-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 46/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಮನೋಹರ ಶೇಲರ, ಸಾ|| 2 ನೇ ಬಸ್ ಸ್ಟಾಪ್ ಹತ್ತಿರ, ರಾಮನಗರ, ತಾ: ಜೋಯಿಡಾ ಈತನು ತನ್ನ ಲಾಭಕ್ಕಾಗಿ 750 ML ನ Old Bill Extra Special whisky ಎಂಬ ಹೆಸರಿನ ತಲಾ 36 ರಂತೆ 1,800 ಬಾಟಲಿಗಳಿಂದ ಕೂಡಿದ ಒಟ್ಟು 50 ಪ್ಲಾಸ್ಟಿಕ್ ಚೀಲಗಳು, 500 ML ನ KINGFISHER STRONG Premium Beer ಎಂಬ ಹೆಸರಿನ ತಲಾ 24 ರಂತೆ 1,248 ಟಿನ್ ಗಳಿಂದ ಕೂಡಿದ ಒಟ್ಟು 52 ಬಾಕ್ಸ್ ಗಳು ಹಾಗೂ 750 ML ನ ROYAL STAG Reserve whisky ಎಂಬ ಹೆಸರಿನ ತಲಾ 12 ರಂತೆ 24 ಬಾಟಲಿಗಳಿಂದ ಕೂಡಿದ 02 ಬಾಕ್ಸ್ ಗಳು ಹೀಗೆ ವಿವಿಧ ಮಾದರಿಯ 2,95,056/- ರೂಪಾಯಿ ಮೌಲ್ಯದ ಗೋವಾ ರಾಜ್ಯದ ಸರಾಯಿಯನ್ನು ಅಕ್ರಮವಾಗಿ ಯಾವುದೋ ರೀತಿಯಲ್ಲಿ ಗೋವಾದಿಂದ ತಂದು ರಾಮನಗರದ ನಾಗನಾಥ ಗಲ್ಲಿಯ ಮೌಂಟ್ ಕಾರ್ಮೆಲ್ ಹೋಗುವ ರಸ್ತೆಯಿಂದ ಒಳಗಿರುವ ಆತನ ಮನೆಯ ಎದುರುಗಡೆ ದಾಸ್ತಾನು ಮಾಡಿ ಮುಚ್ಚಿಡುತ್ತಿರುವಾಗ ದಿನಾಂಕ: 14-05-2021 ರಂದು ಬೆಳಿಗ್ಗೆ 06-05 ಗಂಟೆಗೆ ದಾಳಿಗೆ ಹೋದಾಗ ಪೊಲೀಸರನ್ನು ಕಂಡು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದು, ಸದರಿ ನಮೂದಿರುವ ಸರಾಯಿಯನ್ನು ಜಪ್ತ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕಿರಣ ಬಿ. ಪಾಟೀಲ, ಪಿ.ಎಸ್.ಐ (ಕಾ&ಸು), ರಾಮನಗರ ಪೊಲೀಸ್ ಠಾಣೆ ರವರು ದಿನಾಂಕ: 14-05-2021 ರಂದು 09-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 14-05-2021

at 00:00 hrs to 24:00 hrs

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 12/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ರಫೀಕ್ ತಂದೆ ಇಸಾಕ್ ಖಾನ್, ಪ್ರಾಯ-31 ವರ್ಷ, ವೃತ್ತಿ-ತರಕಾರಿ ವ್ಯಾಪಾರ, ಸಾ|| ಮುಂಡಗೋಡ ರೋಡ್, ರವೀಂದ್ರ ನಗರ, ತಾ: ಯಲ್ಲಾಪುರ. ಪಿರ್ಯಾದಿಯವರ ಅಣ್ಣನಾದ ಈತನು ಕಳೆದ 15 ದಿವಸಗಳ ಹಿಂದಿನಿಂದ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಯಾರಿಗೂ ಏನನ್ನು ಹೇಳದೆ ಬೇಜಾರಿನಲ್ಲಿ ಇದ್ದವನು, ದಿನಾಂಕ: 14-05-2021 ರಂದು 10-00 ಗಂಟೆಯ ಸುಮಾರಿಗೆ ಯಲ್ಲಾಪುರ ಪಟ್ಟಣ ರವೀಂದ್ರ ನಗರದಲ್ಲಿರುವ ತನ್ನ ಮನೆಯ ಮಲಗುವ ಕೋಣೆಯ ಪಕಾಸಿಗೆ ವೇಲ್ ನಿಂದ ಕಟ್ಟಿ ಇನ್ನೊಂದು ತುದಿಯಿಂದ ತನ್ನ ಕುತ್ತಿಗೆಗೆ ನೇಣು ಬಿಗಿದುಕೊಂಡವನಿಗೆ ನೋಡಿದ ಸಂಬಂಧಿಕರು ನೇಣು ಬೀಗಿದ ವೇಲ್ ಕಟ್ ಮಾಡಿ, ಉಪಚಾರಕ್ಕೆ ಯಲ್ಲಾಪುರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವಾಗ ಸಮಯ 10-20 ಗಂಟೆಯ ಸುಮಾರಿಗೆ ಮಾರ್ಗಮಧ್ಯ ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಷ್ಫಾಕ್ ತಂದೆ ಇಸಾಕ್ ಖಾನ್, ಪ್ರಾಯ-27 ವರ್ಷ, ವೃತ್ತಿ-ತರಕಾರಿ ವ್ಯಾಪಾರ, ಸಾ|| ಮುಂಡಗೋಡ ರೋಡ್, ರವೀಂದ್ರ ನಗರ, ತಾ: ಯಲ್ಲಾಪುರ ರವರು ದಿನಾಂಕ: 14-05-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 17-05-2021 12:56 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080