ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 14-11-2021
at 00:00 hrs to 24:00 hrs
ಕಾರವಾರ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 50/2021, ಕಲಂ: 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾದ ಯಾರೋ ಕಳ್ಳರು ದಿನಾಂಕ: 12-11-2021 ರಂದು 19-00 ಗಂಟೆಯಿಂದ ದಿನಾಂಕ: 13-11-2021 ರಂದು ಬೆಳಗಿನ ಜಾವ 04-00 ಗಂಟೆಯ ನಡುವಿನ ರಾತ್ರಿಯ ಅವಧಿಯಲ್ಲಿ ಪಿರ್ಯಾದಿಯವರ ಮಾಲಿಕತ್ವದ ಕಾರವಾರ ಚೆಂಡಿಯಾದಲ್ಲಿರುವ ಮನೆಯ ಮುಂದಿನ ಬಾಗಿಲಿನ ಬೀಗವನ್ನು ಮುರಿದು ಮನೆಯೊಳಗೆ ಪ್ರವೇಶಿಸಿ, ಮನೆಯಲ್ಲಿದ್ದ ಸುಮಾರು 10,000/- ರೂಪಾಯಿ ಕಿಮ್ಮತ್ತಿನ 200 ಗ್ರಾಂ ತೂಕದ ಬೆಳ್ಳಿಯ ಚಮಚ ಸಮೇತ ಇದ್ದ ಸಣ್ಣ ಬಟ್ಟಲುಗಳು-2 ಹಾಗೂ ಕೆಲವು ನಕಲಿ ಬಂಗಾರದ ಒಡವೆಗಳನ್ನು ಕಳುವು ಮಾಡಿಕೊಂಡು ಒಯ್ದ ಬಗ್ಗೆ ಪಿರ್ಯಾದಿ ಶ್ರೀ ಕೆ. ಜ್ಯೋತಿಶ್ ಕುಮಾರ ತಂದೆ ಕೆ. ಕೃಷ್ಣನ್ ನಾಯರ್, ಪ್ರಾಯ-59 ವರ್ಷ, ವೃತ್ತಿ-ನಿವೃತ್ತ ಎಡ್ಮಿರಲ್, ಸಾ|| ಮನೆ ನಂ: 341/1, ಹಿಲ್ ವ್ಯೂವ್, ಚೆಂಡಿಯಾ, ಕಾರವಾರ ರವರು ದಿನಾಂಕ: 14-11-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮಂಕಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 135/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪರಮೇಶ್ವರ ತಂದೆ ಮಾದೇವ ನಾಯ್ಕ, ಸಾ|| ಇಡಗುಂಜಿ, ಬಸವನಹಿತ್ಲಬೇಲೆ, ತಾ: ಹೊನ್ನಾವರ (ಮೋಟಾರ್ ಸೈಕಲ್ ನಂ: ಕೆ.ಎ-47/ಎಸ್-8012 ನೇದರ ಸವಾರ). ಈತನು ದಿನಾಂಕ: 13-11-2021 ರಂದು 20-30 ಗಂಟೆಯ ಸುಮಾರಿಗೆ ನಾಜಗಾರ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮೇಲೆ ತಾನು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಎಸ್-8012 ನೇದನ್ನು ಹೊನ್ನಾವರ ಕಡೆಯಿಂದ ಮಂಕಿ ಗ್ರಾಮದ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ, ರಸ್ತೆಯ ಬದಿಯಿಂದ ನಡೆದುಕೊಂಡು ನಾಜಗಾರ ಕ್ರಾಸ್ ಕಡೆಗೆ ಹೋಗುತ್ತಿದ್ದ ಪಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಗೆ ಎಡಗೈ ಭುಜಕ್ಕೆ, ಸೊಂಟಕ್ಕೆ, ಎರಡು ಕಾಲಿನ ಮೊಣಗಂಟಿಗೆ ಒಳನೋವು, ಬಲಗೈ ಗಂಟಿಗೆ ತೆರಚಿದ ಗಾಯ ಹಾಗೂ ತಲೆಯ ಹಿಂಭಾಗದಲ್ಲಿ ಗಾಯ ಪಡಿಸಿದ್ದಲ್ಲದೇ, ಮೋಟಾರ್ ಸೈಕಲ್ ಹಿಂದೆ ಕುಳಿತ ನರಸಿಂಹ ನಾಯ್ಕ, ಈತನಿಗೆ ಬಲಗೈ ಹಸ್ತಕ್ಕೆ, ಬಲಗಾಲ ಮೊಣಗಂಟಿಗೆ ಗಾಯನೋವು ಪಡಿಸಿ, ಆರೋಪಿ ಮೋಟಾರ್ ಸೈಕಲ್ ಸವಾರನು ತಾನೂ ಕೂಡಾ ಎಡಗೈ ಅಂಗೈಗೆ, ಬಲಗೈ ಹಸ್ತಕ್ಕೆ ಮತ್ತು ಬಲಗಾಲಿಗೆ ತೆರಚಿದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ತಿಮ್ಮಪ್ಪ ತಂದೆ ಗಣಪತಿ ನಾಯ್ಕ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಾಜಗಾರ ಕ್ರಾಸ್ ಹತ್ತಿರ, ಕೆಳಗಿನೂರು, ತಾ: ಹೊನ್ನಾವರ ರವರು ದಿನಾಂಕ: 14-11-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುರ್ಡೇಶ್ವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 98/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ರಾಮ ತಂದೆ ಸುಕ್ರಾ ನಾಯ್ಕ, ಪ್ರಾಯ-41 ವರ್ಷ, ವೃತ್ತಿ-ಬೀಡಾ ಅಂಗಡಿ ವ್ಯಾಪಾರ, ಸಾ|| ಕೆರೆಮನೆ, ಕಾಯ್ಕಿಣಿ, ಪೋ: ತೆರ್ನಮಕ್ಕಿ, ತಾ: ಭಟ್ಕಳ, 2]. ನಾಗರಾಜ ತಂದೆ ಜಟ್ಟಪ್ಪ ನಾಯ್ಕ, ಪ್ರಾಯ-47 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ಕೆರೆಮನೆ, ಹೆರಾಡಿ, ಪೋ: ತೆರ್ನಮಕ್ಕಿ, ತಾ: ಭಟ್ಕಳ, 3]. ಮಹಮ್ಮದ್ ಖಾಜಾ ಮೊಹಿದ್ದೀನ್ ತಂದೆ ಮಹಮ್ಮದ್ ಇಸ್ಮಾಯಿಲ್ ಹಿಜೀಬ್, ಪ್ರಾಯ-52 ವರ್ಷ, ವೃತ್ತಿ-ವ್ಯಾಪಾರÀ, ಸಾ|| ಡಾಕ್ಟರ್ ಸ್ಟ್ರೀಟ್, ಮಾವಳ್ಳಿ-01, ಮುರ್ಡೇಶ್ವರ, ತಾ: ಭಟ್ಕಳ, 4]. ಸತೀಶ ತಂದೆ ಅಚ್ಯುತ ಶಾನಭಾಗ, ಪ್ರಾಯ-54 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ದಿವಗೇರಿ ಗ್ರಾಮ, ಕಾಯ್ಕಿಣಿ, ಮಠದಹಿತ್ಲ, ಭಟ್ಕಳ. ಈ ನಮೂದಿತ ಆರೋಪಿತರು ದಿನಾಂಕ: 14-11-2021 ರಂದು ತೆರ್ನಮಕ್ಕಿ ಕಟಗೇರಿಯ ಅರಣ್ಯ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಎಂಬ ಜುಗಾರಾಟ ಆಡುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸೇರಿ 17-00 ಗಂಟೆಗೆ ದಾಳಿ ಮಾಡಿ, ದಾಳಿಯ ಕಾಲಕ್ಕೆ 1). ನಗದು ಹಣ 24,350/- ರೂಪಾಯಿ, 2). ಇಸ್ಪೀಟ್ ಎಲೆಗಳು-52 ಹಾಗೂ 3). ನೀಲಿ ಬಣ್ಣದ ತಾಡಪಾಲ್-1. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವೀಂದ್ರ ಬಿರಾದಾರ, ಪಿ.ಎಸ್.ಐ (ಕಾ&ಸು), ಮುರ್ಡೇಶ್ವರ ಪೊಲೀಸ್ ಠಾಣೆ ರವರು ದಿನಾಂಕ: 14-11-2021 ರಂದು 18-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹಳಿಯಾಳ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 175/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 02-11-2021 ರಂದು ಸಂಜೆ 07-00 ಗಂಟೆಯಿಂದ 07-30 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮೋಟಾರ್ ಸೈಕಲಿಗೆ ಚಾವಿ ಇಲ್ಲದಕ್ಕೆ ಡೈರೆಕ್ಟ್ ಮಾಡಿಕೊಂಡು ಮನೆಯಿಂದ ಚಲಾಯಿಸಿಕೊಂಡು ಬಂದು ಗಾಡಿಯನ್ನು ಲಾಕ್ ಮಾಡದೇ ಹಳಿಯಾಳದ ಬಸ್ ನಿಲ್ದಾಣದ ಹತ್ತಿರದ ಆನಂದ ಸಾಗರ ಹೋಟೆಲ್ ಎದುರುಗಡೆ ನಿಲ್ಲಿಸಿದ್ದ ಪಿರ್ಯಾದಿಯವರ ಸುಮಾರು 8,000/- ರೂಪಾಯಿ ಮೌಲ್ಯದ ನೀಲಿ ಬಣ್ಣದ ಹೀರೋ ಹೋಂಡಾ ಸ್ಲೆಂಡರ್ ಮೋಟಾರ್ ಸೈಕಲ್ ನಂ: ಕೆಎ-31/ಎಲ್-9490 ನೇದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಲಕ್ಷ್ಮಣ ತಂದೆ ಕೇದಾರಿ ಕಿತ್ತೂರಕರ, ಪ್ರಾಯ-45 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬಿದ್ರೊಳ್ಳಿ, ತಾ: ಹಳಿಯಾಳ ರವರು ದಿನಾಂಕ: 14-11-2021 ರಂದು 10-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 143/2021, ಕಲಂ: 341, 506, 392 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಜೋಸೆಫ್ ಡಿಕೊಸ್ಟಾ, ಸಾ|| ರವೀಂದ್ರನಗರ, ತಾ: ಸಿದ್ದಾಪುರ, 2]. ಅನಿಲ ವಡ್ಡರ, ಸಾ|| ರವೀಂದ್ರನಗರ, ತಾ: ಸಿದ್ದಾಪುರ. ದಿನಾಂಕ: 13-11-2021 ರಂದು ರಾತ್ರಿ ಪಿರ್ಯಾದಿಯು ತನ್ನ ಗೆಳೆಯರಾದ ದೇವೇಂದ್ರ ಅಣ್ಣಪ್ಪ ನಾಯ್ಕ ಹಾಗೂ ಪ್ರಶಾಂತ ಸದಾನಂದ ನಾಯ್ಕ ಇವರ ಜೊತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ ರಾತ್ರಿ 19-30 ಗಂಟೆಯ ಸುಮಾರಿಗೆ ಸಿದ್ದಾಪುರ ಶಹರದ ವಿಜಯಾ ಬ್ಯಾಂಕಿನ (ಬ್ಯಾಂಕ್ ಆಪ್ ಬರೋಡಾ) ಹತ್ತಿರ ನಮೂದಿತ ಆರೋಪಿತರು ಪಿರ್ಯಾದಿಯವರ ಕಾರನ್ನು ಅಡ್ಡಗಟ್ಟಿ, ಪಿರ್ಯಾದಿಯವರ ಕೊರಳಲ್ಲಿದ್ದ ಸುಮಾರು 1½ ತೊಲೆಯ ಬಂಗಾರದ ಚೈನ್ (ಅಂದಾಜು ಕಿಮ್ಮತ್ತು 38,000/- ರೂಪಾಯಿ) ಅನ್ನು ಕಿತ್ತುಕೊಂಡು, ಕೊಲೆ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಹರೀಶ ತಂದೆ ಶಿವಾನಂದ ಗೌಡರ, ಪ್ರಾಯ-28 ವರ್ಷ, ವೃತ್ತಿ-ಗುತ್ತಿಗೆದಾರರು, ಸಾ|| ಹರಳಿಕೊಪ್ಪ, ಅಕ್ಕುಂಜಿ, ತಾ: ಸಿದ್ದಾಪುರ ರವರು ದಿನಾಂಕ: 14-11-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಅಂಬಿಕಾನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 11/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಹನುಮಂತ ಕುರುಬರ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜಮಗಾ, ಅಂಬಿಕಾನಗರ, ತಾ: ದಾಂಡೇಲಿ. ಈತನು ದಿನಾಂಕ: 14-11-2021 ರಂದು 18-00 ಗಂಟೆಗೆ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಸುಮಾರು 1,510/- ರೂಪಾಯಿ ಬೆಲೆಬಾಳುವ 90 ML ನ HAYWARDS WHISKY ಎಂಬ ಹೆಸರಿನ 43 ಪೌಚ್ ಗಳನ್ನು ಒಂದು ಕೈ ಚೀಲದಲ್ಲಿ ಹಾಕಿಕೊಂಡು ಜಮಗಾ ಗ್ಯಾರೇಜ್ ಕ್ರಾಸ್ ಹತ್ತಿರ ಮಾರಾಟದ ಕುರಿತು ಸಾಗಾಟ ಮಾಡುತ್ತಿರುವಾಗ ಸದರಿ ಸ್ವತ್ತುಗಳೊಂದಿಗೆ ವಶಕ್ಕೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಸಂಗೀತಾ, ಡಬ್ಲ್ಯೂ.ಪಿ.ಎಸ್.ಐ, ಅಂಬಿಕಾನಗರ ಪೊಲೀಸ್ ಠಾಣೆ ರವರು ದಿನಾಂಕ: 14-11-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 14-11-2021
at 00:00 hrs to 24:00 hrs
ಶಿರಸಿ ಗ್ರಾಮೀಣ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 33/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಹನುಮಂತ ತಂದೆ ಸೋಮಪ್ಪ ಲಮಾಣಿ, ಪ್ರಾಯ-27 ವರ್ಷ ವೃತ್ತಿ-ಕೂಲಿ ಕೆಲಸ, ಸಾ|| ಕಸದಗುಡ್ಡೆ, ಲಾಲಗೌಡನಗರ, ಬಚಗಾಂವ ಗ್ರಾಮ, ತಾ: ಶಿರಸಿ. ಪಿರ್ಯಾದಿಯ ಅಕ್ಕನ ಮಗನಾದ ಈತನು ತಾನು ಮಾಡಿದ ಕೈಗಡ ಸಾಲ ಹಾಗೂ ಆತನ ಸಂಬಂಧಿ ರವಿ ಈತನಿಗೆ ಬ್ಯಾಂಕಿನಲ್ಲಿ ಜಾಮೀನು ಕೊಟ್ಟಿದ್ದರಿಂದ ರವಿ ಲಮಾಣಿ ಈತನು ಬ್ಯಾಂಕಿಗೆ ಸರಿಯಾಗಿ ಸಾಲವನ್ನು ಕಟ್ಟದೇ ಇದ್ದುದ್ದನ್ನು ತಿಳಿದು ಎಲ್ಲಿ ಬ್ಯಾಂಕಿನವರು ನನಗೆ ಸಾಲ ಕಟ್ಟು ಅನ್ನುತ್ತಾರೆ ಅಂತಾ ಹೆದರಿಯೋ ಅಥವಾ ತಾನು ಮಾಡಿದ ಕೈಗಡ ಸಾಲವನ್ಮ್ನ ತೀರಿಸಲು ಆಗುತ್ತಿಲ್ಲವೋ ಎಂಬ ವಿಷಯವನ್ನು ಇಲ್ಲವೇ ಇನ್ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 12-11-2021 ರಂದು 15-30 ಗಂಟೆಯ ಸಮಯಕ್ಕೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯಲ್ಲಿ ಇಟ್ಟಿದ್ದ ಕಳೆನಾಶಕ ಔಷಧಿ ಸೇವಿಸಿದವನಿಗೆ ಶಿರಸಿಯ ಸಿ.ಟಿ ಸ್ಕ್ಯಾನ್ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಉಪಚಾರಕ್ಕೆ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲಿಸಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವಾಗ ದಿನಾಂಕ: 14-11-2021 ರಂದು ಬೆಳಗಿನ ಜಾವ 03-20 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ. ಇದರ ಹೊರತು ಅವನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮಕ್ಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನವೀನ ಬಸವರಾಜ್ ಹಂಪಣ್ಣನವರ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೋರ್ಟ್ ರೋಡ್, ರೋಟರಿ ಆಸ್ಪತ್ರೆ ಹಿಂಭಾಗ, ತಾ: ಶಿರಸಿ ರವರು ದಿನಾಂಕ: 14-11-2021 ರಂದು 09-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುಂಡಗೋಡ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 37/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಬಾಬು ತಂದೆ ರಾಜಪ್ಪ ನವಲೇನವರ, ಪ್ರಾಯ-52 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ನಂದಿಕಟ್ಟಾ, ತಾ: ಮುಂಡಗೋಡ. ಪಿರ್ಯಾದಿಯವರ ತಂದೆಯಾದ ಇವರು ವೀಪರೀತ ಸರಾಯಿ ಕುಡಿಯುವುದನ್ನು ರೂಢಿಸಿಕೊಂಡಿದ್ದವರು, ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸದೇ ವಿಪರೀತ ಸರಾಯಿ ಕುಡಿಯುತ್ತಿದ್ದುದರಿಂದ ದಿನಾಂಕ: 13-11-2021 ರಂದು ಸಾಯಂಕಾಲ 04-00 ಗಂಟೆಯಿಂದ ದಿನಾಂಕ: 14-11-2021 ರಂದು ಬೆಳಿಗ್ಗೆ 07-00 ಗಂಟೆಯ ಅವಧಿಯಲ್ಲಿ ಸರಾಯಿ ಕುಡಿದ ನಶೆಯಲ್ಲಿ ನಮ್ಮ ತೋಟದ ಬೋರ್ ಮನೆಯ ಹತ್ತಿರ ಆಕಸ್ಮಿಕವಾಗಿ ಜೋಲಿ ತಪ್ಪಿ ಡಬ್ಬಾಗಿ ಬಿದ್ದು, ಮುಖದ ಭಾಗಕ್ಕೆ, ಮೂಗಿನ ಭಾಗಕ್ಕೆ ಹಾಗೂ ಕಾಲಿಗೆ ಗಾಯನೋವು ಪಡಿಸಿಕೊಂಡು ಮೃತಪಟ್ಟಿರುತ್ತಾರೆ. ಇದರ ಹೊರತು ಅವರ ಮರಣದ ಬಗ್ಗೆ ನಮಗೆ ಬೇರೇ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿಠ್ಠಲ ತಂದೆ ಬಾಬು ನವಲೇನವರ, ಪ್ರಾಯ-28 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ನಂದಿಕಟ್ಟಾ, ತಾ: ಮುಂಡಗೋಡ ರವರು ದಿನಾಂಕ: 14-11-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 38/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಕೆರಿಯಾ ತಂದೆ ಬೂಯ್ರ್ಯಾ ಭೋವಿ, ಪ್ರಾಯ-64 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಾಳೇಕೊಪ್ಪ, ಪೋ: ಶಿರಳಗಿ, ತಾ: ಸಿದ್ದಾಪುರ. ಪಿರ್ಯಾದಿಯ ತಂದೆಯಾದ ಇವರು ದಿನಾಂಕ: 28-05-2021 ರಂದು ಪಿರ್ಯಾದಿಯ ತಾಯಿಯು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ನಂತರ ಪಿರ್ಯಾದಿಯ ತಂದೆಯವರಾದ ಕೆರಿಯಾ ತಂದೆ ಬೂಯ್ರ್ಯಾ ಭೋವಿ ರವರು ಮಾನಸಿಕವಾಗಿ ಕುಗ್ಗಿ ಹೋಗಿದ್ದವರು, ತಾಯಿಯ ಸಾವನ್ನು ಮನಸ್ಸಿಗೆ ಹಚ್ಚಿಕೊಂಡು ಸಾರಾಯಿ ಕುಡಿಯುವುದ್ದನ್ನು ಜಾಸ್ತಿ ಮಾಡಿ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದವರು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ದಿನಾಂಕ: 14-11-2021 ರಂದು ಮಧ್ಯಾಹ್ನ 03-00 ಗಂಟೆಯ ಪೂರ್ವದಲ್ಲಿ ಎಲ್ಲಿಯೋ ಯಾವುದೋ ವಿಷ ಸೇವಿಸಿ ಅಸ್ವಸ್ಥರಾದವರಿಗೆ ಚಿಕಿತ್ಸೆಗೆ ದಾಖಲು ಮಾಡಿದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ಸಿದ್ದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಧರ್ಮಾ ತಂದೆ ಕೆರಿಯಾ ಭೋವಿ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಾಳೇಕೊಪ್ಪ, ಪೋ: ಶಿರಳಗಿ, ತಾ: ಸಿದ್ದಾಪುರ ರವರು ದಿನಾಂಕ: 14-11-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======