ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 14-10-2021
at 00:00 hrs to 24:00 hrs
ಸಂಚಾರ ಪೊಲೀಸ್ ಠಾಣೆ ಕಾರವಾರ
ಅಪರಾಧ ಸಂಖ್ಯೆಃ 20/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶ್ರೀನಿವಾಸ ತಂದೆ ಗೌರೀಶ ಖಾರ್ವಿ, ಪ್ರಾಯ-40 ವರ್ಷ, ವೃತ್ತಿ-ಮೀನುಗಾರಿಕೆ ವ್ಯಾಪಾರ, ಸಾ|| ಕೋಡಿಬೀರ ದೇವಸ್ಥಾನದ ಹತ್ತಿರ, ಕಾರವಾರ (ಮೋಟಾರ್ ಸ್ಕೂಟರ್ ನಂ: ಕೆ.ಎ-30/ಯು-1133 ನೇದರ ಸವಾರ), 2]. ಡಾಂಬರ್ ಲಾರಿ ನಂ: ಕೆ.ಎ-30/ಎ-0227 ನೇದರ ಚಾಲಕನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಪಿರ್ಯಾದಿಯ ಗೆಳೆಯನಾಗಿದ್ದು, ದಿನಾಂಕ: 13-10-2021 ರಂದು ರಾತ್ರಿ 21-15 ಗಂಟೆಯಿಂದ 21-20 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮೋಟಾರ್ ಸ್ಕೂಟರ್ ನಂ: ಕೆ.ಎ-30/ಯು-1133 ನೇದರ ಹಿಂಬದಿ ಸೀಟಿನಲ್ಲಿ ತನ್ನ ಗೆಳೆಯನಾದ ಅವಿನಾಶ ತಂದೆ ಅರವಿಂದ ಉಳ್ವೇಕರ, ಈತನನ್ನು ಕೂಡ್ರಿಸಿಕೊಂಡು ಬೈತಕೋಲ್ ಕಡೆಯಿಂದ ಐ.ಎನ್.ಪಿ ರಸ್ತೆಯ ಮುಖಾಂತರ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ತನ್ನ ಸ್ಕೂಟರನ್ನು ಚಲಾಯಿಸಿಕೊಂಡು ಬಂದವನು, ಬೈತಕೋಲದ ಐ.ಎನ್.ಪಿ ರಸ್ತೆಯ ರಮೇಶ ಹೇರ್ ಕಟಿಂಗ್ ಅಂಗಡಿಯ ಹತ್ತಿರದ ರಸ್ತೆಯ ತಿರುವಿನಲ್ಲಿ ತನ್ನ ಸ್ಕೂಟರನ್ನು ನಿಯಂತ್ರಿಸಲಾಗದೇ ರಸ್ತೆಯ ಎಡಬದಿಯಲ್ಲಿ ಯಾವುದೇ ಮುಂಜಾಗೃತಾ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಆರೋಪಿ 2 ನೇಯವನು ಅಪಾಯಕಾರಿಯಾಗಿ ನಿಲ್ಲಿಸಿದ್ದ ಡಾಂಬರ್ ಲಾರಿ ನಂ: ಕೆ.ಎ-30/ಎ-0227 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ತನ್ನ ತಲೆಯ ಹಿಂಬದಿಗೆ ಭಾರೀ ರಕ್ತಗಾಯ ಹಾಗೂ ಎಡಗೈ ತೋರು ಬೆರಳಿಗೆ ಗಾಯ ಮತ್ತು ಎರಡೂ ಕಾಲಿನ ತೊಡೆಗಳಿಗೆ ಒಳಪೆಟ್ಟು ಪಡಿಸಿಕೊಂಡ ಬಗ್ಗೆ ಹಾಗೂ ಆರೋಪಿ 2 ನೇಯವನಾದ ಡಾಂಬರ್ ಲಾರಿ ನಂ: ಕೆ.ಎ-30/ಎ-0227 ನೇದರ ಚಾಲಕನು ತನ್ನ ಲಾರಿಯನ್ನು ಯಾವುದೇ ಮುಂಜಾಗೃತಾ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ರಸ್ತೆಯ ಎಡಬದಿಯಲ್ಲಿ ಅಪಾಯಕಾರಿಯಾಗಿ ನಿಲ್ಲಿಸಿದ್ದರಿಂದಲೇ ಈ ಅಪಘಾತ ಸಂಭವಿಸಿದ ಬಗ್ಗೆ ಪಿರ್ಯಾದಿ ಶ್ರೀ ವಿನಾಯಕ ತಂದೆ ಲಕ್ಷ್ಮಣ ಹರಿಕಂತ್ರ, ಪ್ರಾಯ-40 ವರ್ಷ, ವೃತ್ತಿ-ಮೀನುಗಾರಿಕೆ ಕೆಲಸ, ಸಾ|| ಐ.ಎನ್.ಪಿ ರಸ್ತೆ, ಬೈತಕೋಲ್, ಕಾರವಾರ ರವರು ದಿನಾಂಕ: 14-10-2021 ರಂದು 01-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕುಮಟಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 175/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುಹೇಲ್ ತಂದೆ ಅಲ್ತಾಫ್ ಶೇಖ್, ಪ್ರಾಯ-18 ವರ್ಷ, ಸಾ|| ಹಿಣಿ, ಕಾಗಲ, ತಾ: ಕುಮಟಾ (ಸ್ಕೂಟರ್ ನಂ: ಕೆ.ಎ-47/ಕ್ಯೂ-0964 ನೇದರ ಚಾಲಕ). ಈತನು ದಿನಾಂಕ: 14-10-2021 ರಂದು 19-15 ಗಂಟೆಗೆ ಕುಮಟಾ-ಅಘನಾಶಿನಿ ಡಾಂಬರ್ ರಸ್ತೆಯ ಮೇಲೆ ತಾನು ಚಲಾಯಿಸುತ್ತಿದ್ದ ಸ್ಕೂಟರ್ ನಂ: ಕೆ.ಎ-47/ಕ್ಯೂ-0964 ನೇದನ್ನು ಕಾಗಲ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ತನ್ನ ಸ್ಕೂಟರಿನ ವೇಗವನ್ನು ನಿಯಂತ್ರಿಸಲಾಗದೇ ಹೊಲನಗದ್ದೆಯ ಹಿರೇಓಣಿ ಕ್ರಾಸ್ ಹತ್ತಿರ ರಸ್ತೆಯನ್ನು ಕ್ರಾಸ್ ಮಾಡಿ ಗುಡೇಕೊಪ್ಪದ ತುಂಬಲೆಮಠ ಕಡೆಯಿಂದ ಬಾಡಾ ಕಡೆಗೆ ಹೋಗುತ್ತಿದ್ದ ಪಿರ್ಯಾದಿಯ ತಂದೆ ವೆಂಕಟ್ರಮಣ ಜಟ್ಟಪ್ಪ ನಾಯ್ಕ ಇವರು ಚಲಾಯುಸುತ್ತಿದ್ದ ಸ್ಕೂಟರ್ ನಂ: ಕೆ.ಎ-47/ಕ್ಯೂ-8623 ನೇದಕ್ಕೆ ಮುಂದುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, 2 ಸ್ಕೂಟರ್ ಗಳು ರಸ್ತೆಯಲ್ಲಿ ಬೀಳುವಂತೆ ಮಾಡಿ, ಪಿರ್ಯಾದಿಯ ತಂದೆ ಶ್ರೀ ವೆಂಕಟ್ರಮಣ ತಂದೆ ಜಟ್ಟಪ್ಪ ನಾಯ್ಕ, ಪ್ರಾಯ-67 ವರ್ಷ, ವೃತ್ತಿ-ನಿವೃತ್ತ ಫಾರೆಸ್ಟರ್, ಸಾ|| ಮಾದರಿ ರಸ್ತೆ, ಗುಡೇಅಂಗಡಿ, ತಾ: ಕುಮಟಾ ಇವರಿಗೆ ತಲೆಯ ಹಿಂಭಾಗಕ್ಕೆ ಹಾಗೂ ಆತನ ಸ್ಕೂಟರ್ ಹಿಂಬದಿಯಲ್ಲಿ ಕುಳಿತ ಶ್ರೀ ಕೃಷ್ಣ ತಂದೆ ಗಣೇಶ ಪಟಗಾರ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ತಂದೆ ಗುಡೇಕೊಪ್ಪ, ಹೊಲನಗದ್ದೆ, ತಾ: ಕುಮಟಾ ಈತನ ಹಣೆಗೆ ಹಾಗೂ ಸೊಂಟಕ್ಕೆ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಸ್ಕೂಟರ್ ಸವಾರನು ತನಗೂ ಸಹ ಎಡಕಾಲಿನ ಮೊಣಗಂಟಿಗೆ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಹರ್ಷಾ ತಂದೆ ವೆಂಕಟ್ರಮಣ ನಾಯ್ಕ, ಪ್ರಾಯ-33 ವರ್ಷ, ವೃತ್ತಿ-ಕಿರಾಣಿ ಅಂಗಡಿ, ಸಾ|| ಮಾದರಿ ರಸ್ತೆ, ಗುಡೇಅಂಗಡಿ, ತಾ: ಕುಮಟಾ ರವರು ದಿನಾಂಕ: 14-10-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 123/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಗಂಗಾಧರ ತಂದೆ ಹೊನ್ನಪ್ಪ ಅಂಬಿಗ, ಪ್ರಾಯ-43 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ದಿವಗಿ, ತಾ: ಕುಮಟಾ. ಪಿರ್ಯಾದಿಯ ಭಾವನಾದ ಈತನು ಕಳೆದ 1 ವಾರದಿಂದ ವೆಂಕಟರಮಣ ಕೊರಗಾ ಮೊಗೇರ, ಸಾ|| ಮುಂಡಳ್ಳಿ, ತಾ: ಭಟ್ಕಳ ಇವರಿಗೆ ಸೇರಿದ ‘ಹರಿ ಓಂ’ ಬೋಟ್ ನಂ: ಕೆ.ಎ-04/ಎಂ.ಎಂ-2457 ನೇದರಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿದ್ದವನು, ದಿನಾಂಕ 12-10-2021 ರಂದು ಬೆಳಗಿನ ಜಾವ ಸುಮಾರು 03-30 ಗಂಟೆಯಿಂದ 04-30 ಗಂಟೆಯ ನಡುವಿನ ಅವಧಿಯಲ್ಲಿ ಗೊರಟೆ ನೇರದಲ್ಲಿರುವ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಆಕಸ್ಮಿಕವಾಗಿ ಸಮುದ್ರದಲ್ಲಿ ಬಿದ್ದು ಕಾಣೆಯಾಗಿದ್ದು, ಸದ್ರಿ ಕಾಣೆಯಾದ ನನ್ನ ಭಾವನನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ಶಿವು ಅಂಬಿಗ, ಪ್ರಾಯ-36 ವರ್ಷ, ವೃತ್ತಿ-ಚಾಲಕ, ಸಾ|| ಚಂದಾವರ, ತೊರಗೋಡ, ತಾ: ಹೊನ್ನಾವರ ರವರು ದಿನಾಂಕ: 14-10-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುಂಡಗೋಡ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 130/2021, ಕಲಂ: 279, 338 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ವೆಂಕಟೇಶ ಭೋವಿ, ಪ್ರಾಯ-24 ವರ್ಷ, ವೃತ್ತಿ-ಚಾಲಕ, ಸಾ|| ಹಳ್ಳೂರು ಓಣಿ, ತಾ: ಮುಂಡಗೋಡ (ಆಟೋ ರಿಕ್ಷಾ ನಂ: ಕೆ.ಎ-31/ಎ-0775 ನೇದರ ಸವಾರ). ಈತನು ದಿನಾಂಕ: 11-10-2021 ರಂದು ಸಂಜೆ 04-30 ಗಂಟೆಗೆ ತಾನು ಸವಾರಿ ಮಾಡುತ್ತಿದ್ದ ಆಟೋ ರಿಕ್ಷಾ ನಂ: ಕೆ.ಎ-31/ಎ-0775 ನೇದನ್ನು ಕಲಘಟಗಿ ಕಡೆಯಿಂದ ಮುಂಡಗೋಡ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಸವಾರಿ ಮಾಡಿಕೊಂಡು ಹೋಗುತ್ತಾ ಇಂದೂರಿನ ಹೈಸ್ಕೂಲ್ ಹತ್ತಿರ ಡಾಂಬರ್ ರಸ್ತೆಯ ಮೇಲೆ ಇಂದೂರಿನಿಂದ ಹೊಲದ ಮನೆಗೆ ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಬಿ-3940 ನೇದಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರಿನಿಗೆ ಮುಖದ ಮೇಲೆ ಹಾಗೂ ಎಡಗಣ್ಣಿನ ಹತ್ತಿರ ಭಾರೀ ಗಾಯವಾಗಿದ್ದು, ಎಡಭುಜದ ಹತ್ತಿರ, ಎಡಗಾಲಿನ ತೊಡೆಯ ಹತ್ತಿರ ಹಾಗೂ ಎಡಪಾದದ ಹತ್ತಿರ ತೆರಚಿದ ಹಾಗೂ ಒಳ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ಅಪಘಾತದ ಸ್ಥಳದಲ್ಲಿ ತನ್ನ ಆಟೋ ರಿಕ್ಷಾವನ್ನು ನಿಲ್ಲಿಸದೇ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಯಲ್ಲಪ್ಪ ತಂದೆ ಕಲ್ಲಪ್ಪ ಸುತಗಟ್ಟಿ, ಪ್ರಾಯ-32 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಇಂದೂರು, ತಾ: ಮುಂಡಗೋಡ ರವರು ದಿನಾಂಕ: 14-10-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 14-10-2021
at 00:00 hrs to 24:00 hrs
ಹಳಿಯಾಳ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 27/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಸುಭಾಷ ತಂದೆ ನಾರಾಯಣ ನಿಕ್ಯಾಮಿ, ಪ್ರಾಯ-48 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಗುತ್ತಿಗೇರಿ ಗಲ್ಲಿ, ಹಳಿಯಾಳ ಶಹರ. ಪಿರ್ಯಾದಿಯವರ ಅಣ್ಣನಾದ ಈತನು ದಿನಾಂಕ: 14-10-2021 ರಂದು 14-30 ಗಂಟೆಯಿಂದ 15-30 ಗಂಟೆಯ ನಡುವಿನ ಅವಧಿಯಲ್ಲಿ ಹಳಿಯಾಳ ತಾಲೂಕಿನ ತೆಗ್ನಳ್ಳಿ ಗ್ರಾಮದ ಸರ್ವೇ ನಂ: 48/3 ನೇದರಲ್ಲಿ ಪಿರ್ಯಾದಿಯವರ ಬಾಬ್ತು ಹೊಲದಲ್ಲಿ ದನಗಳಿಗೆ ನೀರು ಕುಡಿಸಲು ತಮ್ಮ ಹೊಲದಲ್ಲಿನ ಬೋರವೆಲ್ ಅನ್ನು ಚಾಲು ಮಾಡಲು ಹೋದಾಗ ಆಕಸ್ಮಾತ್ ಆಗಿ ಬೋರ್ಡಿನಿಂದ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿರುತ್ತಾನೆ. ಇದರ ಹೊರತು ಅವನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪರಶುರಾಮ ತಂದೆ ನಾರಾಯಣ ನಿಕ್ಯಾಮಿ, ಪ್ರಾಯ-33 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಗುತ್ತಿಗೇರಿ ಗಲ್ಲಿ, ಹಳಿಯಾಳ ಶಹರ ರವರು ದಿನಾಂಕ: 14-10-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======