ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 14-09-2021

at 00:00 hrs to 24:00 hrs

 

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 16/2021, ಕಲಂ: 420 ಐಪಿಸಿ ಹಾಗೂ ಕಲಂ: 66(ಸಿ)(ಡಿ) ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ನೇದ್ದರ ವಿವರ...... ನಮೂದಿತ ಯಾರೋ ಆರೋಪಿತರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ದಿನಾಂಕ: 14-07-2021 ರಿಂದ ದಿನಾಂಕ: 15-07-2021 ರ ಮಧ್ಯಾವದಿಯಲ್ಲಿ ತಮ್ಮ ಮೊಬೈಲ್ ಸಂಖ್ಯೆ: 6294086598 ನೇದರಿಂದ ಪಿರ್ಯಾದಿಯವರ ಮೊಬೈಲಿಗೆ ಕರೆ ಮಾಡಿ ತಾನು ಎಸ್.ಬಿ.ಐ ಬ್ಯಾಂಕ್ ಅಧಿಕಾರಿ ಇರುವುದಾಗಿ ಹೇಳಿ, ಪಿರ್ಯಾದಿಯವರ ಬ್ಯಾಂಕ್ ಖಾತೆಯ ಕೆವೈಸಿ ಹಾಗೂ ಎ.ಟಿ.ಎಮ್ ಕಾರ್ಡ್ ಅಪಡೇಟ್ ಮಾಡಿಸುವುದು ಅವಶ್ಯಕತೆಯಿದ್ದು, ಮಾಡಿಸದಿದ್ದಲ್ಲಿ ಬ್ಯಾಂಕ್ ಖಾತೆಯು ಸ್ಥಗಿತಗೊಳಿಸುವುದಾಗಿ ಹೇಳಿ ಪಿರ್ಯಾದಿಯವರಿಗೆ ಆತನ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹಾಗೂ ಇತರೆ ಮಾಹಿತಿಯನ್ನು ಪಡೆದುಕೊಂಡು ಪಿರ್ಯಾದಿಯವರ ಮೊಬೈಲಿಗೆ ಬಂದಿರುವ ಓ.ಟಿ.ಪಿ ಸಂಖ್ಯೆಯನ್ನು ತಿಳಿಸುವಂತೆ ಹೇಳಿದ್ದು, ಅದರಂತೆ ಪಿರ್ಯಾದಿಯವರು ಅವರ ಮೊಬೈಲಿಗೆ ಬಂದಂತಹ ಓ.ಟಿ.ಪಿ ಸಂಖ್ಯೆಯನ್ನು 5 ಬಾರಿ ಆರೋಪಿತನಿಗೆ ತಿಳಿಸಿದ್ದು, ಕೂಡಲೇ ಆರೋಪಿತನು ಕರೆ ಕಟ್ ಮಾಡಿದ್ದು, ಆ ವೇಳೆಗೆ ಪಿರ್ಯಾದಿಯವರ ಎಸ್.ಬಿ.ಐ ಖಾತೆಯಿಂದ ಹಂತ ಹಂತವಾಗಿ ಒಟ್ಟೂ ಹಣ 2,20,000/- ರೂಪಾಯಿ ಕಡಿತವಾದ ಬಗ್ಗೆ ಪಿರ್ಯಾದಿಯವರ ಗಮನಕ್ಕೆ ಬಂದಿದ್ದು ಇರುತ್ತದೆ. ಆರೋಪಿತನು ಪಿರ್ಯಾದಿಯವರಿಗೆ ತಾನು ಬ್ಯಾಂಕ್ ಅಧಿಕಾರಿ ಅಂತಾ ನಂಬಿಸಿ, ಪಿರ್ಯಾದಿಯವರ ಅಕೌಂಟಿನಿಂದ ಹಣವನ್ನು ತನ್ನ ಖಾತೆಗೆ ಮೋಸತನದಿಂದ ಹಣ ವರ್ಗಾವಣೆ ಮಾಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಶಂಭಾ ತಂದೆ ಬಿಕಾರೋ ನಾಯ್ಕ, ಪ್ರಾಯ-77 ವರ್ಷ, ವೃತ್ತಿ-ಖಾಸಗಿ ನಿವೃತ್ತ ನೌಕರ, ಸಾ|| ಕಿನ್ನರ, ಕಾರವಾರ ರವರು ದಿನಾಂಕ: 14-09-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 136/2021, ಕಲಂ: 447, 427, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ರಮಾಕಾಂತ ಘನಶ್ಯಾಮ ನಾಯ್ಕ, ಸಾ|| ಕಾನಭಾಗ, ಅವರ್ಸಾ, ತಾ: ಅಂಕೋಲಾ, 2]. ರಾಘು ಜೋಗಳೇಕರ, ಸಾ|| ಅವರ್ಸಾ, ತಾ: ಅಂಕೋಲಾ. ಪಿರ್ಯಾದಿಯವರು ತನ್ನ ಲಾರಿ ನಂ: ಕೆ.ಎ-31/5709 ನೇದನ್ನು ಕಳೆದ 3 ತಿಂಗಳಿನಿಂದ ವ್ಯವಹಾರದಲ್ಲಿ ಲುಕ್ಸಾನ್ ಆಗಿ ಅವರ್ಸಾ ಕಾನಭಾಗದ ಬಲಿಬೀರ ದೇವಸ್ಥಾನದ ಹತ್ತಿರ ನಿಲ್ಲಿಸಿಟ್ಟಿದ್ದು, ಆರೋಪಿ 1 ನೇಯವನು ‘ಈ ಲಾರಿಯನ್ನು ನನಗೆ ನಡೆಸಲಿಕ್ಕೆ ಕೊಡು’ ಅಂತಾ ಹೇಳಿದಾಗ ಪಿರ್ಯಾದಿಯವರು ‘ಹಾಗೆ ಲಾರಿ ನಡೆಸಲು ಕೊಡಲು ಆಗುವುದಿಲ್ಲ. ನಿನಗೆ ಲಾರಿ ಬೇಕಾದರೆ ಹಣ ಕೊಟ್ಟು ನಿನ್ನ ಹೆಸರಿಗೆ ಮಾಡಿ ಕೊಡುತ್ತೇನೆ’ ಅಂತಾ ಹೇಳಿದಾಗ, ‘ನನಗೆ ಲೋನ್ ಆಗುವುದಿಲ್ಲ. ನಿನ್ನ ಹೆಸರಿನಲ್ಲಿಯೇ ನಡೆಸುತ್ತೇನೆ’ ಅಂತಾ ಹೇಳಿದಾಗ ಅದಕ್ಕೆ ಪಿರ್ಯಾದಿಯವರು ಒಪ್ಪದೇ ಇದ್ದಾಗ ಸಿಟ್ಟಿನಿಂದ ಇದ್ದವನು, ದಿನಾಂಕ: 09-09-2021 ರಂದು ಬೆಳಿಗ್ಗೆ 07-30 ಗಂಟೆಯ ಸುಮಾರಿಗೆ ತನ್ನ ಮೊಬೈಲ್ ನಂಬರಿನಿಂದ ಪಿರ್ಯಾದಿಗೆ ಫೋನ್ ಮಾಡಿ ‘ನಿನ್ನ ಲಾರಿಯ ಗ್ಲಾಸ್ ಒಡೆದು ಹಾಕುತ್ತೇನೆ’ ಅಂತಾ ಹೇಳಿ ಲಾರಿಯ ಮುಂದಿನ ಗ್ಲಾಸ್ ಒಡೆದು ಹಾಕಿದ್ದಲ್ಲದೇ, ಅದೇ ದಿನ ರಾತ್ರಿ 09-30 ಗಂಟೆಯ ಸುಮಾರಿಗೆ ಆರೋಪಿ 2 ನೇಯವನೊಂದಿಗೆ ಮೋಟಾರ್ ಸೈಕಲ್ ಮೇಲಾಗಿ ಪಿರ್ಯಾದಿಯ ಮನೆಯ ಹತ್ತಿರ ಬಂದು ‘ನೀನು ನನ್ನ ಮೇಲೆ ಕಂಪ್ಲೇಂಟ್ ಕೊಡುತ್ತೀಯಾ?’ ಅಂತಾ ಹೇಳಿ ‘ಬೋಳಿ ಮಗನೇ, ಸೂಳಾ ಮಗನೇ’ ಅಂತಾ ಅವಾಚ್ಯವಾಗಿ ಬೈಯ್ದು, ಮನೆಯ ಮೇಲೆ ಕಲ್ಲು ಎಸೆದಿದ್ದಲ್ಲದೇ, ದಿನಾಂಕ: 13-09-2021 ರಂದು ಪುನಃ ರಾತ್ರಿ 22-15 ಗಂಟೆಯ ಸುಮಾರಿಗೆ ಆರೋಪಿತರಿಬ್ಬರೂ ಮೋಟಾರ್ ಸೈಕಲ್ ಮೇಲಾಗಿ ಪಿರ್ಯಾದಿಯ ಮನೆಯ ಅಂಗಳದಲ್ಲಿ ಬಂದು ಪಿರ್ಯಾದಿಯನ್ನು ಉದ್ದೇಶಿಸಿ ‘ಬೋಳಿ ಮಗನೇ, ಮನೆಯಿಂದ ಹೊರಗೆ ಬಾ’ ಅಂತಾ ಹೇಳಿ ಅವಾಚ್ಯವಾಗಿ ಬೈಯ್ದು, ತಾವು ಬರುವಾಗ ತಂದಿದ್ದ ಬಿಯರ್ ಬಾಟಲಿಯನ್ನು ಮನೆಯ ಮೇಲೆ ಎಸೆದು ‘ಬೋಳಿ ಮಗನೆ, ಈ ದಿನ ಬಚಾವಾದೆ. ಇನ್ನೊಮ್ಮೆ ಸಿಕ್ಕರೆ ನಿನ್ನನ್ನು ಮುಗಿಸಿ ಬಿಡುತ್ತೇವೆ’ ಎನ್ನುವುದಾಗಿ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ದರ್ಶನ ತಂದೆ ದಯಾನಂದ ರಾಯ್ಕರ್, ಪ್ರಾಯ-24 ವರ್ಷ, ಸಾ|| ದೇವನಬಾಗ, ಅವರ್ಸಾ, ತಾ: ಅಂಕೋಲಾ, ಹಾಲಿ ಸಾ|| ಹಾರವಾಡ ತಾ: ಅಂಕೋಲಾ ರವರು ದಿನಾಂಕ: 14-09-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 159/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶ್ರೀಧರ ಜಾಧವ್ ತಂದೆ ದೊಂಡಿಬಾ ಜಾಧವ್ ಪ್ರಾಯ-42 ವರ್ಷ, ಸಾ|| ಮಕನಿ, ಪೋ: ಚಾಪುಲಿ, ತಾ: ಅಹಮ್ಮದಪುರ, ಜಿ: ಲಾತೂರ್ ಮಹಾರಾಷ್ಟ್ರ (ಕಂಟೇನರ್ ಲಾರಿ ನಂ: ಎಮ್.ಎಚ್-43/ಬಿ.ಪಿ-0016 ನೇದರ ಚಾಲಕ). ದಿನಾಂಕ: 13-09-2021 ರಂದು ಸಾಯಂಕಾಲ ಪಿರ್ಯಾದಿಯು ಸ್ವಂತ ಕೆಲಸದ ಸಂಬಂಧ ತನ್ನ ಮೋಟಾರ್ ಸೈಕಲ್ ಮೇಲೆ ಗೋಕರ್ಣಕ್ಕೆ ಹೊರಟಿದ್ದು, ಪಿರ್ಯಾದಿಯು ಕುಮಟಾ ತಾಲೂಕಿನ ದುಂಡಕುಳಿ ಬೊಂಬೆ ಲಿಂಗೇಶ್ವರ ದೇವಸ್ಥಾನದ ಹತ್ತಿರ ತಲುಪಿದಾಗ ಪಿರ್ಯಾದಿಯ ಮುಂದಿನಿಂದ ಅಂದರೆ ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಲಾರಿಯನ್ನು ಅದರ ಚಾಲಕನು ತನ್ನ ಸೈಡಿನಿಂದ ಚಲಾಯಿಸಿಕೊಂಡು ಹೋಗುತ್ತಿದ್ದನು. ಸದರಿ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66  ರ ರಸ್ತೆಯು ಸಿಂಗಲ್ ರಸ್ತೆ ಹಾಗೂ ತಿರುವಿನಿಂದ ಕೂಡಿದ್ದರೂ ಸಹ ಪಿರ್ಯಾದಿಯ ಮುಂದಿನಿಂದ ಅಂದರೆ ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಬರುತ್ತಿದ್ದ ಕಂಟೇನರ್ ಲಾರಿ ನಂ: ಎಮ್.ಎಚ್-43/ಬಿ.ಪಿ-0016 ನೇದರ ಚಾಲಕನಾದ ನಮೂದಿತ ಆರೋಪಿತನು ಅತೀವೇಗವಾಗಿ ಚಲಾಯಿಸಿಕೊಂಡು ಬಂದು ಸ್ಥಳದಲ್ಲಿ ರಸ್ತೆಯು ತಿರುವಿನಿಂದ ಕೂಡಿದ್ದರೂ ಸಹ ವೇಗವನ್ನು ನಿಯಂತ್ರಿಸದೇ ಒಮ್ಮೇಲೆ ರಸ್ತೆಯ ಬಲಕ್ಕೆ ಚಲಾಯಿಸಿಕೊಂಡು ಬರುವುದನ್ನು ನೋಡಿ, ಅಂಕೋಲಾ ಕಡೆಗೆ ಹೋಗುತ್ತಿದ್ದ ಲಾರಿಯನ್ನು ಚಾಲಕನು ತನ್ನ ವಾಹನವನ್ನು ರಸ್ತೆಯ ಎಡಕ್ಕೆ ತೆಗೆದುಕೊಂಡರೂ ಸಹ ಕಂಟೇನರ್ ಲಾರಿಯನ್ನು ಆರೋಪಿ ಚಾಲಕನು ನಿಯಂತ್ರಣಕ್ಕೆ ತರದೇ ಲಾರಿಯ ಬಲಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಈ ಅಪಘಾತದ ಪರಿಣಾಮವಾಗಿ ಅಂಕೋಲಾ ಕಡೆಗೆ ಹೋಗುತ್ತಿದ್ದ ಲಾರಿಯು ಮುಂದೆ ಹೋಗಿ ರಸ್ತೆಯ ಪಕ್ಕದಲ್ಲಿಟ್ಟ ಚೀರೆ ಕಲ್ಲುಗಳ ಮೇಲೆ ಹೋಗಿ ನಿಂತಿರುತ್ತದೆ. ಈ ಅಪಘಾತದಿಂದ ಎರಡೂ ವಾಹನಗಳು ಡ್ಯಾಮೇಜ್ ಆಗಿದ್ದು, ಎರಡೂ ವಾಹನದ ಚಾಲಕರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಅಪಘಾತಕ್ಕೆ ಒಳಗಾದ ಟಾಟಾ ಲಾರಿ ನಂ: ಕೆ.ಎ-47/2611 ನೇದು ಇದ್ದು, ಅದರ ಚಾಲಕ ಹೆಸರು ಗೋಪಾಲ ತಂದೆ ತಿಮ್ಮಪ್ಪಾ ಹರಿಕಂತ್ರ, ಸಾ|| ಕುರಿಗದ್ದೆ, ಬರ್ಗಿ, ತಾ: ಕುಮಟಾ ಇರುತ್ತದೆ. ಈ ಅಪಘಾತವು ಸಾಯಂಕಾಲ 06-00 ಗಂಟೆಗೆ ಸಂಭವಿಸಿದ ಬಗ್ಗೆ ಪಿರ್ಯಾದಿ ಶ್ರೀ ರಾಘು ತಂದೆ ಮಂಜುನಾಥ ಶೆಟ್ಟಿ, ಪ್ರಾಯ-39 ವರ್ಷ, ವೃತ್ತಿ-ವ್ಯಾಪಾರ, ಸಾ|| ಹೆಗಡೆ, ಪಡುಕೇರಿ, ತಾ: ಕುಮಟಾ ರವರು ದಿನಾಂಕ: 14-09-2021 ರಂದು 10-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 160/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರವೀಣ ತಂದೆ ಮಾರುತಿ ನಾಯ್ಕ, ಸಾ|| ಮಿರ್ಜಾನ, ತಾ: ಕುಮಟಾ (ಲಾರಿ ನಂ: ಕೆ.ಎ-47/ಎ-1097 ನೇದರ ಚಾಲಕ). ಪಿರ್ಯಾದಿಯವರ ಮಗನಾದ ಶ್ರೀ ಅಬ್ದುಲ್ ಹಮೀದ್ ಮುಲ್ಲಾ, ಪ್ರಾಯ-28 ವರ್ಷ, ಇವರು ನಮೂದಿತ ಆರೋಪಿ ಚಾಲಕನ ಲಾರಿ ನಂ:  ಕೆ.ಎ-47/ಎ-1097 ನೇದರಲ್ಲಿ ಕ್ಲೀನರ್ ಅಂತಾ ಕೆಲಸ ಮಾಡುತ್ತಿದ್ದು, ದಿನಾಂಕ: 28-08-2021 ರಂದು ಬೆಳಗಿನ ಜಾವ 02-00 ಗಂಟೆಯ ಸುಮಾರಿಗೆ ಮಿರ್ಜಾನ ಊರಿನ ಕೋಡ್ಕಣಿ ಕ್ರಾಸಿನ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಆರೋಪಿ ಚಾಲಕನು ಚಲಾಯಿಸುತ್ತಿದ್ದ ಲಾರಿ ನಂ: ಕೆ.ಎ-47/ಎ-1097 ನೇದರಿಂದ ಅಬ್ದುಲ್ ಹಮೀದ್ ಮುಲ್ಲಾ ಇವರು ಕೆಳಗೆ ಇಳಿದು ಮೂತ್ರ ವಿಸರ್ಜನೆ ಮಾಡಿ ಮರಳಿ ಲಾರಿಯನ್ನು ಹತ್ತುತ್ತಿದ್ದಾಗ, ಆರೋಪಿ ಲಾರಿ ಚಾಲಕನು ಒಮ್ಮೇಲೆ ನಿಷ್ಕಾಳಜಿಯಿಂದ ಲಾರಿಯನ್ನು ಚಲಾಯಿಸಿದ್ದರಿಂದ ಅಬ್ದುಲ್ ಹಮೀದ್ ಮುಲ್ಲಾ ಇವರು ಲಾರಿಯಿಂದ ಕೆಳಗೆ ಬಿದ್ದು, ಅಪಘಾತವಾಗಿದ್ದು, ಈ ಅಪಘಾತದ ಪರಿಣಾಮವಾಗಿ ಅವರ ಎರಡೂ ಕಾಲಿನ ಮೇಲೆ ಲಾರಿಯ ಹಿಂದಿನ ಚಕ್ರ ಸ್ವಲ್ಪ ಹತ್ತಿದ್ದರಿಂದ ಬಲಗಾಲಿನ ಮಂಡಿಯ ಮೂಳೆ ಮುರಿದು ಗಂಭೀರ ಗಾಯವಾಗಿದ್ದು, ಎಡಗಾಲಿನ ಮಂಡಿಗೆ ಸಹ ಗಾಯವಾಗಿದ್ದು, ಅವರಿಗೆ ಗಾಯವಾಗಲು ಆರೋಪಿ ಲಾರಿ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಅಬ್ದುಲ್ ಹಮೀದ್ ತಂದೆ ಕಾಸೀಮ್ ಮುಲ್ಲಾ, ಪ್ರಾಯ-66 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹುಬ್ಬಣಗೇರಿ, ಕಾಗಾಲ್, ತಾ: ಕುಮಟಾ ರವರು ದಿನಾಂಕ: 14-09-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 161/2021, ಕಲಂ: 420, 465, 466, 468, 471 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ರಮಾಕಾಂತ @ ಸಂತೋಷ ತಂದೆ ನಾಗೇಶ ನಾಯ್ಕ, ಸಾ|| ಕಡೇಬಾಗ, ತಾ: ಕುಮಟಾ, ಹಾಲಿ ಸಾ|| ನಾಗರಬಾವಿ ಬೆಂಗಳೂರು, 2]. ರಾಜಣ್ಣ ಎನ್. ತಂದೆ ಆರ್. ನಾರಾಯಣನ್, ಸಾ|| ಅವಲಳ್ಳಿ, ಬೆಂಗಳೂರು. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 18-05-2019 ರಿಂದ ಡಿಸೆಂಬರ್-2020 ರ ನಡುವಿನ ಅವಧಿಯಲ್ಲಿ ಆರೋಗ್ಯ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅಟೆಂಡರ್, ಎಸ್.ಡಿ.ಎ, ಎಫ್.ಡಿ.ಎ, ಕಮ್ ಡೆವಲಪ್‍ಮೆಂಟ್ ಆಫೀಸರ್ ಹುದ್ದೆಗಳ ನೌಕರಿ ಕೊಡಿಸುವುದಾಗಿ ಹೇಳಿ, ದಾಖಲೆಗಳನ್ನು ನಕಲಿ ಸೃಷ್ಟಿ ಮಾಡಿ, ಪಿರ್ಯಾದುದಾರರು ಹಾಗೂ ಇತರರಿಂದ ಸುಮಾರು 31,46,390/- ರೂಪಾಯಿಗಳಿಗಿಂತಲೂ ಹೆಚ್ಚಿನ ಹಣವನ್ನು ಪಡೆದು, ನೌಕರಿ ಕೊಡಿಸದೇ ಮತ್ತು ಆ ಹಣವನ್ನು ಕೂಡಾ ವಾಪಸ್ ಮಾಡದೇ ಪಿರ್ಯಾದುದಾರರಿಗೆ ವಂಚಿಸಿದ್ದಲ್ಲದೇ, ಆರೋಪಿ 2 ನೇಯವನು ಈ ಮೇಲ್ಕಂಡ ಹಣವನ್ನು ಆರೋಪಿ 1 ನೇಯವನಿಂದ ವಾಪಸ್ ಕೊಡಿಸುವುದಾಗಿ ಪಿರ್ಯಾದುದಾರಳಿಂದ ರೂಪಾಯಿ 8,00,000/- ಹಣವನ್ನು ಪಡೆದು, ಯಾವುದೇ ಹಣವನ್ನು ಮರಳಿ ಕೊಡಿಸದೇ ಮೋಸ ವಂಚನೆ ಮಾಡಿರುವ ಬಗ್ಗೆ ಪಿರ್ಯಾದಿ ಶ್ರೀಮತಿ ನರ್ಮದಾ ಮಹೇಶ ಅಡಿ, ಪ್ರಾಯ-32 ವರ್ಷ, ವೃತ್ತಿ-ಕಂಪ್ಯೂಟರ್ ಎಜ್ಯುಕೇಶನ್ ಸೆಂಟರ್, ಸಾ|| ರಥಬೀದಿ, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 14-09-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 241/2021, ಕಲಂ: 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಉಲ್ಲಾಸ ಕೊನೇರಿ, ಸಾ|| ದುರ್ಗಾಕೇರಿ, ಹೊನ್ನಾವರ ಹಾಗೂ ಇನ್ನೂ ಇಬ್ಬರು ಅಪರಿಚಿತರು, ಹೆಸರು ವಿಳಾಸ ತಿಳಿದು ಬಂದಿರುವದಿಲ್ಲ. ನಮೂದಿತ ಆರೋಪಿತ ಉಲ್ಲಾಸ ಕೊನೇರಿಯೊಂದಿಗೆ ಪಿರ್ಯಾದಿಯವರು ಹಣದ ವ್ಯವಹಾರ ಮಾಡಿಕೊಂಡು ಬಂದಿದ್ದು, ದಿನಾಂಕ: 14-09-2021 ಸಾಯಂಕಾಲ 17-00 ಗಂಟೆಗೆ ಆರೋಪಿತನು ತನ್ನ ಜೊತೆಗೆ ಇನ್ನಿಬ್ಬರನ್ನು ಕರೆದುಕೊಂಡು ಪಿರ್ಯಾದಿಯ ಅಂಗಡಿಯ ಹತ್ತಿರ ಆಟೋದ ಮೇಲೆ ಬಂದವನು ಪಿರ್ಯಾದಿಗೆ ‘ಬೋಳಿ ಮಗನೇ ಸೂಳೆ ಮಗನೇ, ಹಣ ಕೊಡಲಿಕ್ಕೆ ಆಗಲ್ಲಾ’ ಅಂತಾ ಹೇಳಿ ಪಿರ್ಯಾದಿಯ ಎದೆಯ ಮೇಲಿನ ಅಂಗಿಯನ್ನು ಹಿಡಿದು ಎಳೆದು ದೂಡಿ ಹಾಕಿ ಬಿಯರ್ ಬಾಟಲಿಯಿಂದ ಪಿರ್ಯಾದಿಯ ಎಡಗೈಯ ಬೆರಳುಗಳಿಗೆ ಹೊಡೆದು ಗಾಯನೋವು ಪಡಿಸಿದ್ದು, ಆರೋಪಿ ಜೊತೆಗೆ ಬಂದವರು ಪಿರ್ಯಾದಿಗೆ ಕಲ್ಲು ಮತ್ತು ಬಾಟಲಿಯನ್ನು ಎಸೆದು, ಅಂಗಡಿಯಲ್ಲಿದ್ದ ಪಿರ್ಯಾದಿಯ ತಮ್ಮ ಸಂತೋಷ ತಂದೆ ಮಂಜುನಾಥ ನಾಯ್ಕ ಈತನಿಗೆ ದೂಡಿ ಹಾಕಿದ್ದು, ಆಗ ಪಿರ್ಯಾದಿಯ ಅಂಗಡಿಯ ಕೆಲಸಗಾರನಾದ ಗಜಾನನ ನಾಗೇಶ ನಾಯ್ಕ ಮತ್ತು ಅಕ್ಕಪಕ್ಕದವರು ಗಲಾಟೆಯ ಶಬ್ದ ಕೇಳಿ ಬಂದಾಗ ಆರೋಪಿತನು ಪಿರ್ಯಾದಿಗೆ ‘ಈ ದಿನ ತಪ್ಪಿಸಿಕೊಂಡೆ. ಮತ್ತೊಂದು ದಿನ ಸಿಕ್ಕಾಗ ನಿನ್ನ ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಅಶೋಕ ತಂದೆ ಮಂಜುನಾಥ ನಾಯ್ಕ, ಪ್ರಾಯ-37 ವರ್ಷ, ವೃತ್ತಿ-ಹಾರ್ಡವೇರ್ ಶಾಪ್ ವರ್ಕರ್, ಸಾ|| ಹೊಸಪಟ್ಟಣ, ಕಾಸರಕೋಡ, ತಾ: ಹೊನ್ನಾವರ ರವರು ದಿನಾಂಕ: 14-09-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 86/2021, ಕಲಂ: 323, 341, 353, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಚಿನ್ ನಾಯ್ಕ, ಸಾ|| ಕುಮಟಾ, ಹಾಲಿ ಸಾ|| ದಿವಗೇರಿ, ಮುರ್ಡೇಶ್ವರ, ತಾ: ಭಟ್ಕಳ. ದಿನಾಂಕ: 14-09-2021 ರಂದು ಮುರ್ಡೇಶ್ವರ ಮೀನು ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರು ಸೇರಿದ್ದು, ಕೋವಿಡ್-19 ನಿಯಮ ಪಾಲಿಸುತ್ತಿಲ್ಲ ಅಂತ ಮಾಹಿತಿ ಬಂದಿದ್ದರಿಂದ ಪಿರ್ಯಾದಿಯು ತನ್ನ ಬಾಪ್ತು ಮೋಟಾರ್ ಸೈಕಲ್ ನಂ: ಕೆ.ಎ-47/ವಿ 2740 ನೇದರ ಮೇಲೆ ಶ್ರೀನಿವಾಸ ಆರ್ ಮಾಸ್ತಿ, ಕಂದಾಯ ನಿರೀಕ್ಷಕರು, ಮುರ್ಡೇಶ್ವರ ರವರನ್ನು ಕರೆದುಕೊಂಡು ದೇವಸ್ಥಾನದ ಪ್ರವೇಶ ದ್ವಾರದ ಎಡಬದಿಯಲ್ಲಿ ಸಾಯಂಕಾಲ ಸುಮಾರು 18-45 ಗಂಟೆಗೆ ಪಿರ್ಯಾದಿಯು ಮೋಟಾರ್ ಸೈಕಲನ್ನು ನಿಲ್ಲಿಸಿದಾಗ, ಆರೋಪಿತನು ಪಿರ್ಯಾದಿಯನ್ನು ಉದ್ದೇಶಸಿ ‘ಮೋಟಾರ್ ಸೈಕಲನ್ನು ಅಲ್ಲಿ ಪಾರ್ಕ್ ಮಾಡಬೇಡ, ರಸ್ತೆ ಜಾಮ್ ಆಗುತ್ತದೆ. ಬೇರೆ ಕಡೆಗೆ ಪಾರ್ಕ್ ಮಾಡಿ’ ಅಂತ ಏರು ಧ್ವನಿಯಲ್ಲಿ ಗದರಿಸಿ, ಪಿರ್ಯಾದಿ ಹಾಗೂ ಪಿರ್ಯಾದಿಯ ಜೊತೆಗೆ ಇದ್ದ ಆರ್.ಐ, ಶ್ರೀನಿವಾಸ ಆರ್. ಮಾಸ್ತಿ ಇವರೊಂದಿಗೆ ವಾಗ್ವಾದಕ್ಕೆ ಇಳಿದಾಗ ಆರೋಪಿತನ ಸಂಗಡ ಇದ್ದವರು, ಅವರು ಆರ್.ಐ ಮತ್ತು ಶಾನಭೋಗರು ಇರುತ್ತಾರೆ ಅಂತ ತಿಳಿಸಿದರೂ ಕೂಡಾ ಆರೋಪಿತನು ‘ಯಾರಿದ್ದರೇನು ತನಗೆ ಕ್ಯಾರಿಲ್ಲ, ತನಗೆ ಯಾವ ಅಧಿಕಾರಿಯ ಭಯವೂ ಇಲ್ಲ’ ಅಂತ ಹೇಳಿದನು. ನಂತರ ಪಿರ್ಯಾದಿ ಹಾಗೂ ಆರ್.ಐ ರವರು ಮೀನು ಮಾರುಕಟ್ಟೆಗೆ ಹೋಗಿ ಅಲ್ಲಿ ಸೇರಿದ ಜನರಿಗೆ ಕೋವಿಡ್-19 ನಿಯಮ ತಿಳಿಸಿ ‘ಅಂತರ ಕಾಯ್ದುಕೊಳ್ಳಿ’ ಅಂತಾ ಹೇಳಿ ಪಿರ್ಯಾದಿಯು ತನ್ನ ಮೋಟಾರ್ ಸೈಕಲ್ ಮೇಲೆ ಆರ್.ಐ ರವರನ್ನು ಕೂಡ್ರಿಸಿಕೊಂಡು ಹೊರಡಲು ತಯಾರಾದಾಗ ಸದ್ರಿ ಆರೋಪಿತನು ಆರ್.ಐ ರವರ ಜೊತೆಗೆ ವಾಗ್ವಾದಕ್ಕೆ ಇಳಿದಾಗ, ಪಿರ್ಯಾದಿಯು ಆರ್.ಐ ರವರು ‘ನನ್ನ ಮೇಲಾಧಿಕಾರಿ, ಅವರಿಗೆ ಗೌರವದಿಂದ ಮಾತನಾಡು’ ಅಂತಾ ಹೇಳಿದಾಗ, ಆರೋಪಿತನು ಮೋಟಾರ್ ಸೈಕಲನ್ನು ಅಡ್ಡಗಟ್ಟಿ ಪಿರ್ಯಾದಿಯ ಎಡಗೆನ್ನೆಗೆ ಕೈಯಿಂದ ಹೊಡೆದು, ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಆರೋಪಿತನು ‘ತನ್ನ ವಿರೂದ್ದ ಪೊಲೀಸ್ ಕಂಪ್ಲೇಂಟ್ ನೀಡಿದರೆ ನಿಮ್ಮನ್ನು ಜೀವ ಸಮೇತ ಬಿಡುವುದಿಲ್ಲ’ ಅಂತಾ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಚರಣ ತಂದೆ ತಿಮ್ಮಾ ಗೌಡ, ಪ್ರಾಯ-23 ವರ್ಷ, ವೃತ್ತಿ-ಗ್ರಾಮ ಲೆಕ್ಕಾಧಿಕಾರಿ, ಮಾವಳ್ಳಿ-02 ಗ್ರಾಮ ಪಂಚಾಯತ, ಸಾ|| ಹೊಸಪಟ್ಟಣ, ತಾ: ಹೊನ್ನಾವರ ರವರು ದಿನಾಂಕ: 14-09-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 14-09-2021

at 00:00 hrs to 24:00 hrs

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 24/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ರಾಮ ತಂದೆ ನಾಗಪ್ಪ ನಾಯ್ಕ, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಣಸಾಲೆ ಮನೆ, ಪೋ: ಕಾಯ್ಕಿಣಿ, ತೆರ್ನಮಕ್ಕಿ, ತಾ: ಭಟ್ಕಳ. ಪಿರ್ಯಾದಿಯ ತಮ್ಮನಾದ ಈತನು ಪಿರ್ಯಾದಿಯ ಮನೆ ಜನರೊಂದಿಗೆ ವಾಸ ಮಾಡಿಕೊಂಡಿದ್ದವನು, ಸರಾಯಿ ಕುಡಿಯುವ ಚಟದವನಾಗಿದ್ದು, ದಿನಾಂಕ: 14-09-2021 ರಂದು ಬೆಳಿಗ್ಗೆ 09-00 ಗಂಟೆಗೆ ಮನೆಯಿಂದ ಬರ್ಹಿದೆಸೆಗೆ ಹೊರಗಡೆ ಹೋಗಿ ಬರುತ್ತೇನೆಂದು ಹೇಳಿ ಹೋದವನು, 09-00 ಗಂಟೆಯಿಂದ 10-30 ಗಂಟೆಯ ನಡುವಿನ ಅವಧಿಯಲ್ಲಿ ಬಸ್ತಿಯ ರೈಲ್ವೆ ಬ್ರಿಡ್ಜ್ ಹತ್ತಿರ ರೈಲ್ವೆ ಹಳಿಯ ಮೇಲೆ ನಡೆದುಕೊಂದು ಮನೆ ಕಡೆಗೆ ಬರುತ್ತಿರುವಾಗ ಯಾವುದೋ ಒಂದು ಚಲಿಸುವ ರೈಲು ಬಡಿದು ತಲೆ ಒಡೆದು ಭಾರೀ ಸ್ವರೂಪದ ಗಾಯದಿಂದ ಮೃತಪಟ್ಟಿದ್ದು ಇರುತ್ತದೆ. ಮೃತದೇಹವು ಘಟನಾ ಸ್ಥಳದಲ್ಲಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಜು ತಂದೆ ನಾಗಪ್ಪ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಚಿಕನ್ ವ್ಯಾಪಾರ, ಸಾ|| ಬಣಸಾಲೆ ಮನೆ, ಪೋ: ಕಾಯ್ಕಿಣಿ, ತೆರ್ನಮಕ್ಕಿ, ತಾ: ಭಟ್ಕಳ ರವರು ದಿನಾಂಕ: 14-09-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 28/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಸಾವಿ ಕೋಂ. ಲಕ್ಕು ತೋರತ್, ಪ್ರಾಯ-27 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಮಾದೇವಕೊಪ್ಪ, ತಾ: ಯಲ್ಲಾಪುರ. ಪಿರ್ಯಾದಿಯವರ ತಂಗಿಯಾದ ಇವಳು ದಿನಾಂಕ: 02-09-2021 ರಂದು ಬೆಳಗಿನ ಜಾವ ಸಮಯ ಸುಮಾರು 08-30 ಗಂಟೆಗೆ ಯಲ್ಲಾಪುರ ತಾಲೂಕಿನ ಮಾದೇವಕೊಪ್ಪ ಗ್ರಾಮದಲ್ಲಿ ತನ್ನ ಮನೆಯ ಸ್ನಾನದ ಗೃಹದ ಒಲೆಗೆ ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚುತ್ತಿರುವಾಗ ಬೆಂಕಿಯ ಕೆನ್ನಾಲಿಗೆಯೂ ಆಕಸ್ಮಿಕವಾಗಿ ಅವಳು ಹಾಕಿಕೊಂಡ ಸೀರೆಗೆ ತಾಗಿ ಮೈ ಸುಡುತ್ತಿರುವಾಗ ಬೆಂಕಿಯನ್ನು ನಂದಿಸಲು ಬಂದ ಸಾಕ್ಷಿದಾರ ಶ್ರೀ ಲಕ್ಕು ತಂದೆ ಜಾನು ತೋರತ್ ಇವರಿಗೂ ಸಹ ಮೈ ಕೈ ಸುಟ್ಟು ಚಿಕಿತ್ಸೆಗೆ ಅಂತಾ ಯಲ್ಲಾಪುರದ ಸರಕಾರಿ ಆಸ್ಪತ್ರೆಗೆ ತಂದು ಅಲ್ಲಿ ಚಿಕಿತ್ಸೆ ಪಡೆದುಕೊಂಡು ಯಲ್ಲಾಪುರದ ಸರಕಾರಿ ಆಸ್ಪತ್ರೆಯಿಂದ ಚಿಕಿತ್ಸೆಗೆ ಇಬ್ಬರು ಅದೇ ದಿನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವಾಗ ಅದರಲ್ಲಿ ಶ್ರೀಮತಿ ಸಾವಿ ಕೋಂ ಲಕ್ಕು ತೋರತ್ ಇವರಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಿಂದ ದಿನಾಂಕ: 12-09-2021 ರಂದು ಹೆಚ್ಚಿನ ವೈದ್ಯಕೀಯ ಉಪಚಾರಕ್ಕೆ ಕೆ.ಎಲ್.ಇ ಆಸ್ಪತ್ರೆ, ಬೆಳಗಾವಿಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದು, ಶ್ರೀಮತಿ ಸಾವಿ ತೋರತ್ ಇವರು ಚಿಕಿತೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 14-09-2021 ರಂದು ಬೆಳಗಿನ ಜಾವ ಸಮಯ ಸುಮಾರು 02-50 ಗಂಟೆಗೆ ಅವಳಿಗಾದ ಸುಟ್ಟ ಗಾಯನೋವಿನಿಂದಲೇ ಮೃತಪಟ್ಟಿರುತ್ತಾಳೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪುಂಡಲಿಕ ತಂದೆ ಬಮ್ಮು ಪಾಂಡ್ರಮೀಸೆ, ಪ್ರಾಯ-33 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಾದೇವಕೊಪ್ಪ, ತಾ: ಯಲ್ಲಾಪುರ ರವರು ದಿನಾಂಕ: 14-09-2021 ರಂದು 08-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 18-09-2021 12:43 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080