ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 15-04-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 22/2021, ಕಲಂ: 78(3) ಕರ್ನಾಟಕ ಪೊಲಿಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಬಾಳಾ ತಂದೆ ನಾರಾಯಣ ಗೌಡಾ, ಪ್ರಾಯ-47 ವರ್ಷ, ವೃತ್ತಿ-ವ್ಯಾಪಾರ, ಸಾ|| ಹಳೇಕೋಟ, ಕಡವಾಡ, ಕಾರವಾರ. ಈತನು ದಿನಾಂಕ: 15-04-2021 ರಂದು 17-00 ಗಂಟೆಯ ಸುಮಾರಿಗೆ ಕಾರವಾರ ತಾಲೂಕಿನ ಕಡವಾಡ ಹಳಕೋಟದ ಸಾರ್ವಜನಿಕ ರಸ್ತೆಯ ಸ್ಥಳದಲ್ಲಿ ನಿಂತುಕೊಂಡು 01/- ರೂಪಾಯಿಗೆ 80/- ರೂಪಾಯಿ ಹಣ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಮಟಕಾ ಜೂಗರಾಟ ನಡೆಸುತ್ತಿರುವಾಗ ನಗದು ಹಣ 1,330/- ರೂಪಾಯಿ ಹಾಗೂ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ 1). ಅಂಕೆ-ಸಂಖ್ಯೆ ಬರೆದ ಚೀಟಿ-1, 2). ಖಾಲಿ ಹಾಳೆಗಳು-04, 3). ಬಾಲ್ ಪೆನ್-1 ಇವುಗಳೊಂದಿಗೆ ಪಿರ್ಯಾದಿಯವರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರೇವಣಸಿದ್ದಪ್ಪ ಜೀರಂಕಲಗಿ, ಪಿ.ಎಸ್.ಐ, ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 15-04-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 34/2021, ಕಲಂ: 8(c), 20(b)(ii)(A) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ ಗಣಪತಿ ತಂದೆ ಮಹಾಬಳೇಶ್ವರ ಗೌಡ, ಪ್ರಾಯ-53 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಿಜ್ಜೂರು, ಗೋಕರ್ಣ, ತಾ: ಕುಮಟಾ. ಈತನು ದಿನಾಂಕ: 15-04-2021 ರಂದು 10-00 ಗಂಟೆಯ ಸುಮಾರಿಗೆ ಗೋಕರ್ಣದ ಬಿಜ್ಜೂರು ಗ್ರಾಮದ ಶ್ರೀ ಕೇತಕಿ ವಿನಾಯಕ ದೇವಸ್ಥಾನದ ಹತ್ತಿರದ ಸಾರ್ವಜನಿಕ ರಸ್ತೆಯಲ್ಲಿ ಸುಮಾರು 10,000/- ರೂಪಾಯಿ ಮೌಲ್ಯದ 510 ಗ್ರಾಂ ತೂಕದ ಗಾಂಜಾ ಮಾದಕ ವಸ್ತುವನ್ನು ತನ್ನ ತಾಬಾದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ, ಗಾಂಜಾ ಹಾಗೂ ಇನ್ನಿತರ ಸಲಕರಣೆಯೊಂದಿಗೆ ಪಿರ್ಯಾದಿಯವರು ದಾಳಿ ಮಾಡಿದ ಕಾಲಕ್ಕೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನವೀನ್ ಎಸ್. ನಾಯ್ಕ, ಪಿ.ಎಸ್.ಐ, ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 15-04-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 86/2021, ಕಲಂ: 78(3) ಕರ್ನಾಟಕ ಪೊಲಿಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ರಮೇಶ ತಂದೆ ವೆಂಕಪ್ಪಾ ನಾಯ್ಕ, ಪ್ರಾಯ-43 ವರ್ಷ, ವೃತ್ತಿ-ಪಾನ್ ಬೀಡಾ ವ್ಯಾಪಾರ, ಸಾ|| ಮಂಗೊಡ್ಲ, ಹೊಲನಗದ್ದೆ, ತಾ: ಕುಮಟಾ. ಈತನು ದಿನಾಂಕ: 14-04-2021 ರಂದು 12-25 ಗಂಟೆಗೆ ಕುಮಟಾ ಕಡ್ಲೆಯ ಭಾಗವತಕಟ್ಟೆಯಲ್ಲಿ ಇರುವ ತನ್ನ ಪಾನ್ ಬೀಡಾ ಅಂಗಡಿಯ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ಆಕ್ರಮ ಲಾಭದ ಸಲುವಾಗಿ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ 1). ನಗದು ಹಣ 3,620/- ರೂಪಾಯಿ, 2). ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ, 3). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ ನೇದದವುಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಿವಪ್ರಕಾಶ ಆರ್. ನಾಯ್ಕ, ಪೊಲೀಸ್ ವೃತ್ತ ನಿರೀಕ್ಷಕರು, ಕುಮಟಾ ವೃತ್ತ, ಕುಮಟಾ ರವರು ದಿನಾಂಕ: 15-04-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 87/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಶೋಕ ತಂದೆ ಭೀಮಶಂಕರ ಬೋವಿ, ಸಾ|| ಯಲ್ಲಮ್ಮಾ ದೇವಸ್ಥಾನದ ಹತ್ತಿರ, ಮಣ್ಣೂರು, ತಾ: ಅಪ್ಜಲಪುರ, ಜಿ: ಗುಲ್ಬರ್ಗಾ (ಮಹೀಂದ್ರಾ ಬೊಲೆರೋ ಪಿಕ್‍ಅಪ್ ವಾಹನ ನಂ: ಕೆ.ಎ-32/ಡಿ-8045 ನೇದರ ಚಾಲಕ). ಪಿರ್ಯಾದಿಯವರು ಕಳೆದ 20 ದಿನಗಳ ಹಿಂದೆ ಬಸ್ ನಂ: ಕೆ.ಎ-19/ಎ.ಎ-8893 ನೇದನ್ನು ಮಂಗಳೂರಿನ ರಿಚರ್ಡ್ ಡಿಸಿಲ್ವಾ ತಂದೆ ಜಿ. ಡಿ. ಡಿಸಿಲ್ವಾ, ಸಾ|| ಉರ್ವಾ, ಮಂಗಳೂರು ರವರಿಂದ ಖರೀದಿಸಿರುತ್ತೇನೆ. ವಾಹನ ಇನ್ನೂ ನನ್ನ ಹೆಸರಿಗೆ ಆಗಿರುವುದಿಲ್ಲ. ನನ್ನ ಹೆಸರಿಗೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ಬಂದಿರುತ್ತದೆ. ಸದ್ಯ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಮುಷ್ಕರ ಇದ್ದ ಕಾರಣ ಸದರಿ ಬಸ್ಸನ್ನು ಉಡುಪಿಯಿಂದ ಬಾಗಲಕೋಟೆಗೆ ಓಡಿಸುತ್ತೇನೆ. ನಮ್ಮ ಬಸ್ಸಿಗೆ ಅವಿರಾಜ್ ಎ. ತಂದೆ ಆನಂದ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಬಸ್ ಚಾಲಕ, ಸಾ|| ಡೋರ್ ನಂ: 3/86, ತೆಂಕುಬೆಟ್ಟು, ಉಡುಪಿ ಇವರು ಸಹ ಚಾಲಕರಾಗಿರುತ್ತಾರೆ. ದಿನಾಂಕ: 12-04-2021 ರಂದು ರಾತ್ರಿ ನಮ್ಮ ಬಸ್ಸಿನಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಉಡುಪಿಯಿಂದ ಬಾಗಲಕೋಟೆಗೆ ಹೋಗಿ ದಿನಾಂಕ: 13-04-2021 ರಂದು ಬೆಳಿಗ್ಗೆ ತಲುಪಿ ಅಲ್ಲಿಯೇ ಉಳಿದಿದ್ದೆವು. ದಿನಾಂಕ: 14-04-2021 ರಂದು ರಾತ್ರಿ ಪ್ರಯಾಣಿಕರನ್ನು ಕರೆದುಕೊಂಡು ಮರಳಿ ಉಡುಪಿಗೆ ಬರಲು ಹೊರಟಿದ್ದೆವು. ಬಸ್ ಅನ್ನು ಅವಿರಾಜ್ ಎ. ಇವರು ಚಲಾಯಿಸುತ್ತಿದ್ದರು. ದಿನಾಂಕ: 15-04-2021 ರಂದು ಬೆಳಗಿನ ಜಾವ 02-30 ಗಂಟೆಯ ಸುಮಾರಿಗೆ ನಾವು ಕುಮಟಾ ತಾಲೂಕಿನ ಮಿರ್ಜಾನ ಊರಿನಲ್ಲಿರುವ ಬಿ.ಜಿ.ಎಸ್ ಶಾಲೆಯ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಬರುತ್ತಿದ್ದಾಗ ನಮ್ಮ ಮುಂದಿನಿಂದ ರಸ್ತೆಗೆ ಒಂದು ನಾಯಿ ಅಡ್ಡ ಬಂದಿದ್ದು, ಆಗ ನಮ್ಮ ಬಸ್ಸಿನ ಚಾಲಕನು ವೇಗವನ್ನು ನಿಯಂತ್ರಿಸಿದಾಗ ನಮ್ಮ ಹಿಂದಿನಿಂದ ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಬರುತ್ತಿದ್ದ ಒಂದು ಮಹೀಂದ್ರಾ ಬೊಲೆರೋ ವಾಹನ ನಂ: ಕೆ.ಎ-32/ಡಿ-8045 ನೇದನ್ನು ಅದರ ಚಾಲಕನಾದ ಆರೋಪಿತನು ಅತೀವೇಗವಾಗಿ ಚಲಾಯಿಸಿಕೊಂಡು ಬಂದು ನಮ್ಮ ಬಸ್ಸಿನ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದನು. ನಂತರ ನಾವು ನಮ್ಮ ವಾಹನವನ್ನು ನಿಲ್ಲಿಸಿ ಕೆಳಗೆ ಇಳಿದು ಬಂದು ನೋಡಿದಾಗ, ಈ ಅಪಘಾತದಿಂದ ನಮ್ಮ ವಾಹನದ ಹಿಂದಿನ ಭಾಗ ಜಖಂ ಆಗಿರುತ್ತದೆ. ಅಪಘಾತ ಪಡಿಸಿದ ಬೊಲೆರೋ ವಾಹನವು ಸಹ ಜಖಂ ಆಗಿರುತ್ತದೆ. ಅಪಘಾತ ಪಡಿಸಿದ ಮಹೀಂದ್ರಾ ಬೊಲೆರೋ ಪಿಕ್‍ಅಪ್ ವಾಹನ ಇದ್ದು, ಅದರ ನಂ: ಕೆ.ಎ-32/ಡಿ-8045 ಇರುತ್ತದೆ. ವಾಹನ ಜಖಂ ಆಗಿರುತ್ತದೆ. ಈ ಅಪಘಾತವು ಮಹೀಂದ್ರಾ ಬೊಲೆರೋ ಪಿಕ್‍ಅಪ್ ವಾಹನ ನಂ: ಕೆ.ಎ-32/ಡಿ-8045 ನೇದರ ಆರೋಪಿ ಚಾಲಕನ ಅತೀವೇಗ ಹಾಗೂ ನಿಷ್ಕಾಳಜಿಯಿಂದ ಚಲಾಸಿಕೊಂಡು ಬಂದು ನಮ್ಮ ಬಸ್ಸಿನ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದಲೇ ಸಂಭವಿಸಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಿತೀಶ ಶೆಟ್ಟಿ ತಂದೆ ಪ್ರಭಾಕರ ಶೆಟ್ಟಿ, ಪ್ರಾಯ-39 ವರ್ಷ, ವೃತ್ತಿ-ಬಸ್ ಚಾಲಕ, ಸಾ|| ವಿಘ್ನೇಶ್ವರ ನಿಲಯ, ಅಂಜಾರು, ಪೋ: ಹಿರಿಯಡ್ಕ, ತಾ: ಉಡುಪಿ ರವರು ದಿನಾಂಕ: 15-04-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 88/2021, ಕಲಂ: 78(3) ಕರ್ನಾಟಕ ಪೊಲಿಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ತಂದೆ ರಾಮ ದೇಶಭಂಡಾರಿ, ಪ್ರಾಯ-41 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜನತಾ ಕಾಲೋನಿ, ಕೋಡ್ಕಣಿ, ತಾ: ಕುಮಟಾ. ಈತನು ದಿನಾಂಕ: 15-04-2021 ರಂದು 11-10 ಗಂಟೆಗೆ ಕುಮಟಾದ ಕೋಡ್ಕಣಿಯ ಜನತಾ ಕಾಲೋನಿಯ ಗೋಳಿ ಬೀರಪ್ಪ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ರಸ್ತೆಯಲ್ಲಿ ಬರ-ಹೋಗುವ ಜನರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ, ಓ.ಸಿ ಚೀಟಿ ಬರೆದು ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ದಾಳಿಯ ಕಾಲ 1). ನಗದು ಹಣ 1,370/- ರೂಪಾಯಿ, 2). ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ, 3). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ ನೇದವುಗಳ ಸಮೇತ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವಿ ಗುಡ್ಡಿ, ಪಿ.ಎಸ್.ಐ (ಕಾ&ಸು-02), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 15-04-2021 ರಂದು 18-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 89/2021, ಕಲಂ: 78(3) ಕರ್ನಾಟಕ ಪೊಲಿಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಯೋಗೇಶ ತಂದೆ ಜೈವಂತ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಮೆಕ್ಯಾನಿಕ್, ಸಾ|| ವಿದ್ಯಾನಗರ, ಹಳಕಾರ, ತಾ: ಕುಮಟಾ. ಈತನು ದಿನಾಂಕ: 15-04-2021 ರಂದು 12-40 ಗಂಟೆಗೆ ಕುಮಟಾ ತಾಲೂಕಿನ ನೆಹರು ನಗರದ ಕನ್ನಡ ಶಾಲೆಯ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ನಿಂತು ರಸ್ತೆಯಲ್ಲಿ ಬರ-ಹೋಗುವ ಜನರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ, ಓ.ಸಿ ಚೀಟಿ ಬರೆದು ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ದಾಳಿಯ ಕಾಲ 1). ನಗದು ಹಣ 1,630/- ರೂಪಾಯಿ, 2). ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ, 3). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ ನೇದವುಗಳ ಸಮೇತ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ, ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 15-04-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 22/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಸುರೇಶ ತಂದೆ ಈರಣ್ಣಾ ಪೇಂಟರ್, ಪ್ರಾಯ-54 ವರ್ಷ, ವೃತ್ತಿ-ವ್ಯಾಪಾರ, ಸಾ|| 02 ನೇ ಕ್ರಾಸ್, ಗಣೇಶನಗರ, ದಾಂಡೇಲಿ. ಈತನು ದಿನಾಂಕ: 15-04-2021 ರಂದು 18-00 ಗಂಟೆಗೆ ತನ್ನ ತಾಬಾ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಅಬಕಾರಿ ಸ್ವತ್ತುಗಳಾದ 1). ORIGNAL CHOICE DELUXE WHISKY ಅಂತಾ ಬರೆದಿರುವ 90 ML ಸರಾಯಿ ಇದ್ದ ಪೌಚ್ ಗಳು-30, ಒಂದಕ್ಕೆ 35.13/- ರೂಪಾಯಿಯಂತೆ ಒಟ್ಟೂ ಅ||ಕಿ|| 1,053/- ರೂಪಾಯಿ, 2). HAYWARDS CHEERS WHISKY ಅಂತಾ ಬರೆದಿರುವ 90 ML ಸರಾಯಿ ಇದ್ದ ಪೌಚ್ ಗಳು-21, ಒಂದಕ್ಕೆ 35.13/- ರೂಪಾಯಿಯಂತೆ ಒಟ್ಟೂ ಅ||ಕಿ|| 737/- ರೂಪಾಯಿ ಹಾಗೂ 3). ನಗದು ಹಣ 220/- ರೂಪಾಯಿ ನೇದವುಗಳನ್ನು ಭರ್ಚಿ ರಸ್ತೆಯ ವಿಟ್ನಾಳ ಗ್ರಾಮದ ಬಸ್ ನಿಲ್ದಾಣದ ಎದುರು ಇಟ್ಟುಕೊಂಡು ಜನರಿಗೆ ಮಾರಾಟ ಮಾಡುತ್ತಿದ್ದಾಗ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಐ. ಆರ್. ಗಡ್ಡೇಕರ, ಪಿ.ಎಸ್.ಐ, ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 15-04-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 41/2021, ಕಲಂ: 78(3) ಕರ್ನಾಟಕ ಪೊಲಿಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಖಾಲಿದ್ ಹೈಮದ್ ತಂದೆ ಇಬ್ರಾಹಿಂ ಮಲಬಾರಿ, ಪ್ರಾಯ-32 ವರ್ಷ, ವೃತ್ತಿ-ಫೆಬ್ರಿಕೇಷನ್ ಕೆಲಸ, ಸಾ|| 227, ಕುಳಗಿ ರೋಡ್, ಕೋಗಿಲಬನ, ದಾಂಡೇಲಿ. ಈತನು ದಿನಾಂಕ: 15-04-2021 ರಂದು 16-40 ಗಂಟೆಗೆ ದಾಂಡೇಲಿ ನಗರ ಠಾಣಾ ವ್ಯಾಪ್ತಿಯ ಸಂಡೆ ಮಾರ್ಕೆಟ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭಕ್ಕಾಗಿ ಅದೃಷ್ಟದ ಅಂಕೆ ಬಂದಲ್ಲಿ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥಕ್ಕೆ ಕಟ್ಟಿಸಿಕೊಂಡು ಓ.ಸಿ ಮಟಕಾ ಜುಗಾರಾಟ ಆಡಿಸುತ್ತಿರುವಾಗ ದಾಳಿಯ ಕಾಲಕ್ಕೆ ಒಂದು ಬಾಲ್ ಪೆನ್, ಓ.ಸಿ ಅಂಕೆ-ಸಂಖ್ಯೆ ಬರೆದಿರುವ ಚೀಟಿ ಹಾಗೂ ನಗದು ಹಣ 930/- ರೂಪಾಯಿಗಳ ಸಮೇತ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಯಲ್ಲಪ್ಪ ಎಸ್, ಪಿ.ಎಸ್.ಐ, ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 15-04-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 40/2021, ಕಲಂ: 78(3) ಕರ್ನಾಟಕ ಪೊಲಿಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಅಶೋಕ ತಂದೆ ಆನಂದ ಪೂಜಾರಿ, ಪ್ರಾಯ-36 ವರ್ಷ, ವೃತ್ತಿ-ಅಂಗಡಿ ವ್ಯವಹಾರ, ಸಾ|| ಶಿವ ಮಂದಿರದ ಹತ್ತಿರ, ಮರಾಠಿಕೊಪ್ಪ, ತಾ: ಶಿರಸಿ. ಈತನು ದಿನಾಂಕ: 14-04-2021 ರಂದು 21-40 ಗಂಟೆಯ ಸಮಯಕ್ಕೆ ಶಿರಸಿ ನಗರದ ಮರಾಠಿಕೊಪ್ಪದ ರಾಜಧಾನಿ ಫೈನಾನ್ಸ್ ಹತ್ತಿರದ ಪಾನ್ ಶಾಫ್ ಎದುರು ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನರೈಸರ್ಸ್ ಹೈದ್ರಾಬಾದ್ ತಂಡಗಳ ನಡುವೆ ನಡೆಯುತ್ತಿರುವ ಐಪಿಎಲ್ ಟಿ-20 ಪಂದ್ಯಾವಳಿಗಳ ಸೋಲು ಗೆಲುವಿನ ಅದೃಷ್ಠದ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಅದೃಷ್ಟದ ಜೂಜಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ನಡೆಸಿದಾಗ 1). ನಗದು ಹಣ 3,280/- ರೂಪಾಯಿ, 2). Vivo ಕಂಪನಿಯ ಮೊಬೈಲ್ ಪೋನ್-01, ಅ||ಕಿ|| 1,000/- ರೂಪಾಯಿ. ಸದರಿ ಸ್ವತ್ತುಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಾಗಪ್ಪ, ಪಿ.ಎಸ್.ಐ, ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 15-04-2021 ರಂದು 00-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 83/2021, ಕಲಂ: 78(3) ಕರ್ನಾಟಕ ಪೊಲಿಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಗುರುಪಾದಪ್ಪ ಮುಮ್ಮಿಗಟ್ಟಿ, ಪ್ರಾಯ-35 ವರ್ಷ, ವೃತ್ತಿ-ವ್ಯಾಪಾರಿ, ಸಾ|| ಗುತ್ತಿಗೇರಿ ಗಲ್ಲಿ, ಹಳಿಯಾಳ ಶಹರ. ಈತನು ದಿನಾಂಕ: 15-04-2021 ರಂದು 19-40 ಗಂಟೆಗೆ ಹಳಿಯಾಳ ಶಹರದ ಗುತ್ತಿಗೇರಿ ಗಲ್ಲಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ತನ್ನ ಅಕ್ರಮ ಲಾಭಕ್ಕೋಸ್ಕರ ಬರ-ಹೋಗುವ ಜನರನ್ನು ಕರೆದು ಅದೃಷ್ಟದ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿರಿ, ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಆಸೆ ಆಮಿಷ ತೋರಿಸಿ ಕೂಗಿ ಕರೆದು, ಬಂದಂತಹ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳನ್ನು ಚೀಟಿಯಲ್ಲಿ ಬರೆದುಕೊಡುತ್ತಾ, ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ ದಾಳಿಯ ಕಾಲಕ್ಕೆ ನಗದು ಹಣ 600/- ರೂಪಾಯಿ ಮತ್ತು ಓ.ಸಿ ಮಟಕಾ ಜೂಗಾರಾಟದ ಸಾಮಗ್ರಿಗಳಾದ 1). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-1, 2). ಬಾಲ್ ಪೆನ್-01 ನೇದವುಗಳೊಂದಿಗೆ ಸೆರೆ ಸಿಕ್ಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಯಲ್ಲಾಲಿಂಗ್ ಕುನ್ನೂರ, ಪಿ.ಎಸ್.ಐ (ಕಾ&ಸು), ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 15-04-2021 ರಂದು 21-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 84/2021, ಕಲಂ: 78(3) ಕರ್ನಾಟಕ ಪೊಲಿಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಪರಶುರಾಮ ತಂದೆ ಫಕೀರಪ್ಪಾ ಚಲವಾದಿ, ಪ್ರಾಯ-42 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಕೆರವಾಡ ಗ್ರಾಮ, ತಾ: ಹಳಿಯಾಳ. ಈತನು ದಿನಾಂಕ: 15-04-2021 ರಂದು 20-00 ಗಂಟೆಗೆ ಹಳಿಯಾಳ ತಾಲೂಕಿನ ಕೆರವಾಡದ ಗ್ರಾಮದದೇವಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ತನ್ನ ಅಕ್ರಮ ಲಾಭಕ್ಕೋಸ್ಕರ ಬರ-ಹೋಗುವ ಜನರನ್ನು ಕರೆದು ಅದೃಷ್ಟದ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿರಿ, ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಆಸೆ ಆಮಿಷ ತೋರಿಸಿ ಕೂಗಿ ಕರೆದು, ಬಂದಂತಹ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳನ್ನು ಚೀಟಿಯಲ್ಲಿ ಬರೆದುಕೊಡುತ್ತಾ, ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ ದಾಳಿಯ ಕಾಲಕ್ಕೆ 1). ನಗದು ಹಣ 700/- ರೂಪಾಯಿ ಮತ್ತು ಓ.ಸಿ ಮಟಕಾ ಜೂಗಾರಾಟದ ಸಾಮಗ್ರಿಗಳಾದ 2). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-1, 3). ಬಾಲ್ ಪೆನ್-01 ನೇದವುಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಕುಮಾರ ಯು, ಪಿ.ಎಸ್.ಐ, ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 15-04-2021 ರಂದು 22-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಅಂಬಿಕಾನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 05/2021, ಕಲಂ: 324, 504 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಾತೇಶ ತಂದೆ ಮರಿಯಾನಿ ಕೂಳಿಕೈತಾನ, ವೃತ್ತಿ-ಕೂಲಿ ಕೆಲಸ, ಸಾ|| ಬಾಳಶೆಟ್ಟಿಕೊಪ್ಪ, ತಾ: ಹಳಿಯಾಳ. ಈತನು ಪಿರ್ಯಾದಿಯ ಗಂಡನಿದ್ದು, ಆಗಾಗ ಮನೆಯಲ್ಲಿ ಸರಾಯಿ ಕುಡಿದು ಬಂದು ಗಲಾಟೆ ಮಾಡುತ್ತಿದ್ದವನು, ದಿನಾಂಕ: 14-4-2021 ರಂದು ರಾತ್ರಿ 20-30 ಗಂಟೆಗೆ ಯಲ್ಲಾಪುರದಿಂದ ಮನೆಗೆ ಬಂದವನು ಮನೆಯಲ್ಲಿ ಕೂಗಾಡುತ್ತಿದ್ದ ಬಗ್ಗೆ ಪಿರ್ಯಾದಿಯು ಸಮಾಧಾನ ಪಡಿಸಿ ‘ಕೂಗಬೇಡಾ’ ಅಂತಾ ಹೇಳಿದಕ್ಕೆ, ಒಮ್ಮೆಲೆ ಸಿಟ್ಟಾಗಿ ಪಿರ್ಯಾದಿಯನ್ನು ಉದ್ದೇಶಿಸಿ ‘ಬೇವರ್ಸಿ ರಂಡೆ. ನನ್ನ ಮನೆಯಲ್ಲಿ ಕೂಗಬೇಡಾ ಅಂತಾ ಹೇಳುವವಳು ನೀನು ಯಾರು?’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಕೋಲಿನಿಂದ ಪಿರ್ಯಾದಿಯ ತಲೆಯ ಹಿಂಬದಿಗೆ ಹೊಡೆದು ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ಸವೀತಾ ಕೋಂ. ಮಾತೇಶ ಸಿದ್ದಿ ಕೂಳಿಕೈತಾನ, ಪ್ರಾಯ-30 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಬಾಳಶೆಟ್ಟಿಕೊಪ್ಪ, ತಾ: ಹಳಿಯಾಳ ರವರು ದಿನಾಂಕ: 15-04-2021 ರಂದು 00-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 15-04-2021

at 00:00 hrs to 24:00 hrs

 

ರಾಮನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 04/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಭಗವಂತ ತಂದೆ ಪುಂಡ್ಲೀಕ ದಳವಿ, ಪ್ರಾಯ-32 ವರ್ಷ, ವೃತ್ತಿ-ಕೃಷಿ ಮತ್ತು ಗೌಂಡಿ ಕೆಲಸ, ಸಾ|| ಕಾಮ್ರಾ, ತಾ: ಜೋಯಿಡಾ. ಈತನು ಮನೆ ಕಟ್ಟುವ ಗೌಂಡಿ ಕೆಲಸಕ್ಕೆ ಹೋದವನು, ದಿನಾಂಕ: 14-04-2021 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಗೋಡೆಯ ಮೇಲೆ ಹತ್ತಿ ಸಿಮೆಂಟ್ ಮಾಲ್ ಹಾಕಿ ಸಮತಟ್ಟು ಮಾಡುತ್ತಿರುವಾಗ ಗೋಡೆಯ ಮೇಲಿಂದ ಆಯ ತಪ್ಪಿ ಕಾಲು ಜಾರಿ ಕೆಳಗೆ ಮೆಟ್ಟಿಲುಗಳ ಮೇಲೆ ಬಿದ್ದು ತಲೆಯ ಹಿಂಭಾಗದಲ್ಲಿ ಭಾರೀ ಗಾಯ ಪೆಟ್ಟು ಆದವನಿಗೆ ರಾಮನಗರದ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ವಿಜಯ ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆಯಲ್ಲಿರುವಾಗ ದಿನಾಂಕ: 15-04-2021 ರಂದು ಬೆಳಿಗ್ಗೆ 07-10 ಗಂಟೆಗೆ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಪುಂಡ್ಲೀಕ ತಂದೆ ವಿಷ್ಣು ದಳವಿ, ಪ್ರಾಯ-68 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕಾಮ್ರಾ, ತಾ: ಜೋಯಿಡಾ ರವರು ದಿನಾಂಕ: 15-04-2021 ರಂದು 12-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 16-04-2021 02:45 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080