ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 15-04-2022

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 146/2022, ಕಲಂ: 78(ಎ)(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಹರೀಶ ತಂದೆ ಪರಮೇಶ್ವರ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ವ್ಯಾಪಾರ, ಸಾ|| ತಾರಿಬಾಗಿಲ, ಹಳದಿಪುರ, ತಾ: ಹೊನ್ನಾವರ, 2]. ಚಂದ್ರಹಾಸ ತಂದೆ ರಾಮಚಂದ್ರ ನಾಯ್ಕ, ಪ್ರಾಯ-40 ವರ್ಷ, ಸಾ|| ಕರ್ಕಿ ನಾಕಾ, ತಾ: ಹೊನ್ನಾವರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 15-04-2022 ರಂದು 10-30 ಗಂಟೆಗೆ ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ರಾಮೇಶ್ವರ ಕಂಬಿಯ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ನಿಂತು ಸಾರ್ವಜನಿಕರಿಂದ ಹಣವನ್ನು ಪಡೆದು ಓ.ಸಿ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಜುಗಾರಾಟ ಆಡಿಸುತ್ತಿದ್ದಾಗ ದಾಳಿಯ ವೇಳೆ ಸಿಕ್ಕ ಆರೋಪಿತನ ತಾಬಾದಲ್ಲಿ 1). ಒಟ್ಟು ನಗದು ಹಣ 750/- ರೂಪಾಯಿ, 2). ಬಾಲ್ ಪೆನ್-01, 3). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01 ನೇದವುಗಳೊಂದಿಗೆ ಸಿಕ್ಕಿದ್ದು, ಸದರಿ ಆರೋಪಿ 1 ನೇಯವನು ಒಟ್ಟಾದ ಹಣವನ್ನು ಹಾಗೂ ಓ.ಸಿ ಚೀಟಿಯನ್ನು ಓ,.ಸಿ ಬುಕ್ಕಿಯಾದ ಆರೋಪಿ 2 ನೇ ಆರೋಪಿ 2 ನೇಯವನಿಗೆ ನೀಡುತ್ತಿದ್ದ ಕುರಿತು ತಿಳಿಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ (ತನಿಖೆ-02), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 15-04-2022 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 147/2022, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಪ್ರಶಾಂತ ತಂದೆ ಗಜಾನನ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ವ್ಯಾಪಾರ, ಸಾ|| ಚಂದಾವರ ನಾಕಾ ಹತ್ತಿರ, ಅಮ್ಮಾ ಟೀ-ಸ್ಟಾಲ್, ಚಂದಾವರ, ತಾ: ಹೊನ್ನಾವರ. ಈತನು ಹೊನ್ನಾವರ ತಾಲೂಕಿನ ಚಂದಾವರ ನಾಕಾ ಹತ್ತಿರದಲ್ಲಿರುವ ತನ್ನ ಅಮ್ಮಾ ಟೀ-ಸ್ಟಾಲ್ ಎಂಬ ಹೆಸರಿನ ಅಂಗಡಿಯ ಮುಂದೆ ರಸ್ತೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಂದು ಬಿಳಿ ಬಣ್ಣದ ಬಾಕ್ಸಿನಲ್ಲಿ 1). OLD TAVERN  WHISKY ಅಂತಾ ಬರೆದ 180 ML ಅಳತೆಯ ಟೆಟ್ರಾ ಪ್ಯಾಕೆಟ್ ಗಳು-21, ಒಂದರ ಬೆಲೆ 86.75/- ರೂಪಾಯಿ. ಒಟ್ಟು ಅಂದಾಜು ಮೌಲ್ಯ 1,821/- ರೂಪಾಯಿ, 2). HAYWARDS CHEERS WHISKY ಅಂತಾ ಬರೆದ 90 ML ಅಳತೆಯ ಟೆಟ್ರಾ ಪ್ಯಾಕೆಟ್ ಗಳು-28, ಒಂದರ ಬೆಲೆ 35.13/- ರೂಪಾಯಿ. ಒಟ್ಟು ಅಂದಾಜು ಮೌಲ್ಯ 983/- ರೂಪಾಯಿ, 3). KINGFISHER STRONG PREMIUM BEER ಅಂತಾ ಬರೆದ 500 ML ಅಳತೆಯ ಟಿನ್-05, ಒಂದರ ಬೆಲೆ 125/- ರೂಪಾಯಿ. ಒಟ್ಟು ಅಂದಾಜು ಮೌಲ್ಯ 625/- ರೂಪಾಯಿ. ಹೀಗೆ ಒಟ್ಟೂ 3,429/- ರೂಪಾಯಿ ಮೌಲ್ಯದ ಒಟ್ಟು 8.800 ಲೀಟರ್ ಸಾರಾಯಿಯನ್ನು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ತನ್ನ ತಾಬಾದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ನಗದು ಹಣ 720/- ರೂಪಾಯಿಯೊಂದಿಗೆ ದಿನಾಂಕ: 15-04-2022  ರಂದು 14-10 ಗಂಟೆಗೆ ಪಿರ್ಯಾದುದಾರರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ. ಸಿ. ಆರ್, ಪಿ.ಎಸ್.ಐ (ತನಿಖೆ-2), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 15-04-2022 ರಂದು 15-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 148/2022, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತರು 1]. ಸೋನು ತಂದೆ ಸಾಂತಾ ಫರ್ನಾಂಡೀಸ್, ಪ್ರಾಯ-26 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಣ್ಣಾರಾಮಕೇರಿ, ಕೆರೆಕೋಣ, ತಾ: ಹೊನ್ನಾವರ, 2]. ನಾಗರಾಜ ತಂದೆ ವೆಂಕಟೇಶ ದೇವಲಾಪುರ, ಪ್ರಾಯ-41 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಅರೆಅಂಗಡಿ, ಸಾಲ್ಕೋಡ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ಕೂಡಿಕೊಂಡು 12.870 ಲೀಟರ್ ಪ್ರಮಾಣದ ವಿವಿಧ ಬಗೆಯ ಸುಮಾರು 4,957/- ರೂಪಾಯಿ ಮೌಲ್ಯದ ವಿವಿಧ ಮಾದರಿಯ ಸರಾಯಿಯ ಟೆಟ್ರಾ ಪ್ಯಾಕೆಟ್ ಗಳನ್ನು ಅಕ್ರಮವಾಗಿ ಸರಾಯಿ ಮಾರಾಟ ಮಾಡಿ ಲಾಭಗಳಿಸುವ ಉದ್ದೇಶದಿಂದ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಅರೆಅಂಗಡಿ ಶೆಟ್ಟಿ ಲಂಚ್ ಹೋಮ್ ಪಕ್ಕದ ಚಂದಾವರ ರಸ್ತೆಯ ಬದಿಯಲ್ಲಿ ತಮ್ಮ ತಾಬಾದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ದಿನಾಂಕ: 15-4-2022 ರಂದು 14-20 ಗಂಟೆಗೆ ಪಿರ್ಯಾದುದಾರರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ ಆರೋಪಿ 1 ನೇಯವನು ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತೇಶ ಉದಯ ನಾಯಕ, ಪಿ.ಎಸ್.ಐ (ಕಾ&ಸು, ಸಂಚಾರ), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 15-04-2022 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 44/2022, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 12-03-2022 ರಂದು ಬೆಳಿಗ್ಗೆ 08-30 ಗಂಟೆಯಿಂದ ದಿನಾಂಕ: 12-03-2022 ರಂದು ಮಧ್ಯಾಹ್ನ 13-30 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯವರು ಭಟ್ಕಳ ಶಹರದ ಕೋಕ್ತಿ ನಗರದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಪಳ್ಳಿಯ ಪಕ್ಕದಲ್ಲಿ ನಿಲ್ಲಿಸಿಟ್ಟ ಅ||ಕಿ|| 30,000/- ರೂಪಾಯಿ ಮೌಲ್ಯದ ಕಪ್ಪು ಬಣ್ಣದ ಹೀರೋ ಕಂಪನಿಯ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ: ಕೆ.ಎ-47/ಯು-1520 (ಇಂಜಿನ್ ನಂ: HA10AGHHC94059 ಹಾಗೂ ಚಾಸಿಸ್ ನಂ: MBLHAR085HHC81819) ನೇದನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಮೊಹಮ್ಮದ್ ಜಾಫರ್ ತಂದೆ ಮೊಹಿದ್ದೀನ್ ಸಾಬ್, ಪ್ರಾಯ-30 ವರ್ಷ, ವೃತ್ತಿ-ಪ್ಲಾಸ್ಟರ್ ಕೆಲಸ, ಸಾ|| ಮನೆ ನಂ: #792, ಹನುಮಾನ್ ನಗರ, ತಾ: ಭಟ್ಕಳ ರವರು ದಿನಾಂಕ: 15-04-2022 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 52/2022, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಕಮಲಾಕರ ತಂದೆ ತಿಮ್ಮಾ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬಾಲಿಕೊಪ್ಪಾ, ತಾ: ಸಿದ್ದಾಪುರ. ಈತನು ದಿನಾಂಕ: 15-04-2022 ರಂದು 20-00 ಗಂಟೆಗೆ ಸಿದ್ದಾಪುರ ತಾಲೂಕಿನ ಬಾಲಿಕೊಪ್ಪದಲ್ಲಿರುವ ತನ್ನ ಮನೆಯಿಂದ ಕಳ್ಳಭಟ್ಟಿ ಸರಾಯಿಯನ್ನು ಮಾರಾಟ ಮಾಡುವ ಉದ್ದೇಶದಿಂದ ಪ್ಲಾಸ್ಟಿಕ್ ಬಾಟಲಿಯಲ್ಲಿ ಹಾಕಿಕೊಂಡು ಸಾಗಾಟ ಮಾಡುತ್ತಿರುವಾಗ ದಾಳಿಯ ಕಾಲಕ್ಕೆ ಕಳ್ಳಭಟ್ಟಿ ತುಂಬಿದ ಪ್ಲಾಸ್ಟಿಕ್ ಬಾಟಲಿ-1 (ಅಂದಾಜು 2 ಲೀಟರ್, ಅ||ಕಿ|| 500/- ರೂಪಾಯಿ) ಇದರೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀ ಮಹಾಂತಪ್ಪ ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 15-04-2022 ರಂದು 21-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 47/2022, ಕಲಂ: 78(3) ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ-2021 ನೇದ್ದರ ವಿವರ...... ನಮೂದಿತ ಆರೋಪಿತರು 1]. ಕಿರಣ ತಂದೆ ಜನಾರ್ಧನ ಶೇಟ್, ಪ್ರಾಯ-38 ವರ್ಷ, ವೃತ್ತಿ-ಕಿರಾಣಿ ಅಂಗಡಿ ವ್ಯಾಪಾರ, ಸಾ|| ಜನತಾ ಕಾಲೋನಿ, ಬನವಾಸಿ, ತಾ: ಶಿರಸಿ, 2]. ಗುರು ಶೇಟ್, ಸಾ|| ಬನವಾಸಿ, ತಾ: ಶಿರಸಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಓ.ಸಿ. ಬುಕ್ಕಿಯಾದ ಆರೋಪಿ 2 ನೇಯವನ ಸಹಾಯದಿಂದ ದಿನಾಂಕ: 15-04-2022 ರಂದು 11-30 ಗಂಟೆಗೆ ಬನವಾಸಿ-ಸೊರಬಾ ರಸ್ತೆಯಲ್ಲಿರುವ ಅಜ್ಜರಣಿ ಕ್ರಾಸ್ ಹತ್ತಿರ ಬಸ್ ತಂಗುದಾಣದ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ ದಾಳಿ ಮಾಡಿದಾಗ 1). ಅಂಕೆ-ಸಂಖ್ಯೆ ಬರೆದ ಓ.ಸಿ ಚೀಟಿ-01, ಅ||ಕಿ|| 00.00/- ರೂಪಾಯಿ, 2). ಓ.ಸಿ ಅಂಕೆ-ಸಂಖ್ಯೆ ಬರೆಯಲು ಉಪಯೋಗಿಸುವ ಖಾಲಿ ಬಿಳಿ ಹಾಳೆಗಳು-06, ಅ||ಕಿ|| 00.00/- ರೂಪಾಯಿ, 3). ನಗದು ಹಣ 1,050/- ರೂಪಾಯಿ, 4). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಆರೋಪಿ 1 ನೇಯವನು ಸ್ಥಳದಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಹಣಮಂತ ಬಿರಾದಾರ್, ಪಿ.ಎಸ್.ಐ, ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 15-04-2022 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 19/2022, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂಜಯ ತಂದೆ ದತ್ತಾ ಕದಂ, ಪ್ರಾಯ-28 ವರ್ಷ, ವೃತ್ತಿ-ಚಾಲಕ/ಕೃಷಿ ಕೆಲಸ, ಸಾ|| ಕುಂಬ್ರಾಲ, ಜಗಲಬೇಟ, ತಾ: ಜೋಯಿಡಾ (ಟ್ರ್ಯಾಕ್ಟರ್ ನಂ: ಕೆ.ಎ-30/ಟಿ-136 ಹಾಗೂ ಟ್ರಾಲಿ ನಂ: ಕೆ.ಎ-30/ಟಿ-137 ನೇದರ ಚಾಲಕ). ಈತನು ಹಾಗೂ ಪಿರ್ಯಾದಿಯವರು ಸೇರಿಕೊಂಡು ದಿನಾಂಕ: 15-04-2022 ರಂದು ಬೆಳಿಗ್ಗೆ ಟ್ರ್ಯಾಕ್ಟರ್ ನಲ್ಲಿ ಸಿಮೆಂಟ್ ಬ್ಲಾಕ್ ಗಳನ್ನು ತುಂಬಿಕೊಂಡು ಅವುಗಳನ್ನು ಜಗಲಬೇಟ ಗ್ರಾಮದ ಹೊರಭಾಗದಲ್ಲಿ ಅರಣ್ಯದ ಅಂಚಿನಲ್ಲಿರುವ ವೈಭವ ಕಾಮತ್ ಎಂಬುವರಿಗೆ ಸೇರಿದ ಜಂಗಲ್ ಕೌಂಟಿ ಹೋಂ ಸ್ಟೇ ಗೆ ಸದರ ಸಿಮೆಂಟ್ ಬ್ಲಾಕ್ ಗಳನ್ನು ಹಾಕಲು ಹೋಗುತ್ತಿರುವ ಜಗಲಬೇಟದಿಂದ ಜಂಗಲ್ ಕೌಂಟಿ ಹೊಂ ಸ್ಟೇ ಗೆ ಹೋಗುವ ಅರಣ್ಯ ಮಧ್ಯದ ಕಚ್ಚಾ ಮಣ್ಣಿನ ರಸ್ತೆಯಲ್ಲಿ  ಎತ್ತರದಿಂದ (ಏರು) ಕೂಡಿದ ರಸ್ತೆಯಲ್ಲಿ ಹೋಗುತ್ತಿರುವಾಗ ನಮೂದಿತ ಆರೋಪಿತನು ತನ್ನ ಟ್ರ್ಯಾಕ್ಟರ್ ನಂ: ಕೆ.ಎ-30/ಟಿ-136 ಹಾಗೂ ಟ್ರಾಲಿ ನಂ: ಕೆ.ಎ-30/ಟಿ-137 ನೇದನ್ನು ಚಲಾಯಿಸುತ್ತಿರುವಾಗ ಬೆಳಿಗ್ಗೆ 10-30 ಗಂಟೆಯ ಸಮಯಕ್ಕೆ ಎತ್ತರದಿಂದ (ಏರು) ಕೂಡಿದ ರಸ್ತೆಯಲ್ಲಿ ಹೋಗುತ್ತಿರುವಾಗ ಸದರ ಟ್ರ್ಯಾಕ್ಟರ್ ನಲ್ಲಿ ಭಾರವಾದ ಸಿಮೆಂಟ್ ಬ್ಲಾಕ್ ಗಳನ್ನು ಟ್ರ್ಯಾಕ್ಟರ್ ಟ್ರಾಲಿಯಲ್ಲಿ ತುಂಬಿದ್ದು, ಟ್ರ್ಯಾಕ್ಟರ್ ಎತ್ತರಕ್ಕೆ ಏರುತ್ತಿರುವಾಗ ವೇಗವಾಗಿ ಹೋಗುತ್ತಿರುವಾಗ ಹಿಂದಿನ ಭಾರಕ್ಕೆ ಇಂಜಿನ್ ಮೇಲೆ ಟ್ರಾಲಿ ಭಾರ ಒತ್ತಿದಾಗ ಟ್ರ್ಯಾಕ್ಟರ್ ನ ಇಂಜಿನ್ ಒಮ್ಮೇಲೆ ಮೇಲಕ್ಕೆ ಎದ್ದಿದ್ದು, ಇದನ್ನು ಗಮನಿಸಿದ ಪಿರ್ಯಾದಿಯವರು ಆರೋಪಿತನಿಗೆ ಟ್ರ್ಯಾಕ್ಟರ್ ನಿಂದ ಹಾರುವಂತೆ ಹೇಳುತ್ತಾ ಪಿರ್ಯಾದಿಯವರು ಟ್ರ್ಯಾಕ್ಟರ್ ಮೇಲಿಂದ ಹಾರಿದ್ದು, ನಮೂದಿತ ಆರೋಪಿತನ ಮೇಲೆ ಇಂಜಿನ್ ಮೇಲಿಂದ ಬಂದು ಬಿದ್ದುಕೊಂಡಿದ್ದು, ಆರೋಪಿತನ ದೇಹದ ಭಾಗ ಸ್ಟೇರಿಂಗ್ ಗೆ ಒತ್ತಿಕೊಂಡು ಹಿಂದಕ್ಕೆ ಹೋದಾಗ ಆರೋಪಿತನ ತಲೆಯು ಟ್ರ್ಯಾಕ್ಟರ್ ನ ಟ್ರಾಲಿಯ ಕಬ್ಬಿಣದ ಭಾಗಕ್ಕೆ ಬಡಿದು ತಲೆಯ ಹಿಂಭಾಗದಲ್ಲಿ ಭಾರೀ ಸ್ವರೂಪದ ರಕ್ತಗಾಯವಾಗಿದ್ದು, ಆರೋಪಿತನನ್ನು ಎಳೆದು ಹೊರ ತೆಗೆಯುವ ಸ್ಥಿತಿಯಲ್ಲಿ ಇರದೇ ಇದ್ದುದರಿಂದ ಜೆ.ಸಿ.ಬಿ ಯ ಸಹಾಯದಿಂದ ಇಂಜಿನ್ ಕೆಳಗಡೆ ಇಳಿಸಿ, ನಮೂದಿತ ಆರೋಪಿತನನ್ನು ಹೊರ ತೆಗೆದುಕೊಂಡು, ರಾಮನಗರ ಆಸ್ಪತ್ರೆಗೆ ತೆಗೆದುಕೊಂಡು ಬಂದು, ಅಲ್ಲಿಂದ ಆಂಬ್ಯುಲೆನ್ಸ್ ನಲ್ಲಿ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು, ಪರೀಕ್ಷಿಸಿದ ಅಲ್ಲಿಯ ವೈದ್ಯರು ದಿನಾಂಕ: 15-04-2022 ರಂದು ಮಧ್ಯಾಹ್ನ 01-10 ಗಂಟೆಗೆ ಮೃತಪಟ್ಟಿರುವ ಬಗ್ಗೆ ತಿಳಿಸಿರುತ್ತಾರೆ. ನಮೂದಿತ ಮೃತ ಆರೋಪಿತನು ಟ್ರ್ಯಾಕ್ಟರ್ ಅನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಈ ಅಪಘಾತ ಆಗಿರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮಕ್ಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪ್ರೇಮಾನಂದ ತಂದೆ ಭಗವಂತ ಸಾವಂತ, ಪ್ರಾಯ-34 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವೈಜಗಾಂವ, ತಾ: ಜೋಯಿಡಾ ರವರು ದಿನಾಂಕ: 15-04-2022 ರಂದು 16-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 20/2022, ಕಲಂ: 78(3) ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ-2021 ನೇದ್ದರ ವಿವರ...... ನಮೂದಿತ ಆರೋಪಿತರು ನೂರ್ ಅಹ್ಮದ್ ತಂದೆ ಮಹ್ಮದ್ ಗೌಸ ತಿಗರೊಳ್ಳಿ, ಪ್ರಾಯ-45 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ಜನತಾ ಪ್ಲಾಟ್, ಜಗಲಬೇಟ, ತಾ|| ಜೋಯಿಡಾ. ಈತನು ಜಗಲಬೇಟ ಗ್ರಾಮದ ಶ್ರೀ ಮಾರುತಿ ದೇವಸ್ಥಾನದ ಎದುರುಗಡೆ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ತನ್ನ  ಲಾಭಕ್ಕಾಗಿ ಓ.ಸಿ ಮಟಕಾ ಎಂಬ ಜೂಗಾರಾಟದ ಬಗ್ಗೆ ಜನರಿಗೆ ಆಸೆ ತೋರಿಸಿ, ಅವರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಎಂಬ ಜೂಗಾರಾಟ ಆಡಿಸುತ್ತಿದ್ದವನ್ನು ಪಿರ್ಯಾದಿಯವರು ಪಂಚರು ಹಾಗೂ ಸಿಬ್ಬಂದಿಯವರನ್ನು ಇಟ್ಟುಕೊಂಡು ದಿನಾಂಕ: 15-04-2022 ರಂದು 19-05 ಗಂಟೆಗೆ ದಾಳಿ ಮಾಡಿದಾಗ ಆರೋಪಿತನ ತಾಬಾದಲ್ಲಿ ನಗದು ಹಣ 1,230/- ರೂಪಾಯಿ, ಓ.ಸಿ ಮಟಕಾ ಚೀಟಿ-1, ಬಾಲ್ ಪೆನ್-1 ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ವಿನೋದ ಎಸ್. ಕೆ, ಪಿ.ಎಸ್.ಐ (ಕಾ&ಸು), ರಾಮನಗರ ಪೊಲೀಸ್ ಠಾಣೆ ರವರು ದಿನಾಂಕ: 15-04-2022 ರಂದು 20-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 15-04-2022

at 00:00 hrs to 24:00 hrs

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 21/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಕಮಲಾಕರ ತಂದೆ ಗುತ್ಯಾ ಚಲವಾದಿ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನರೇಬೈಲ್, ಪೋ: ದೊಡ್ನಳ್ಳಿ, ತಾ: ಶಿರಸಿ. ಪಿರ್ಯಾದಿಯ ತಂದೆಯವರಾದ ಇವರು 2020 ನೇ ಸಾಲಿನಲ್ಲಿ ತಮ್ಮ ಮನೆಯ ದನದ ಕೊಟ್ಟಿಗೆಯಲ್ಲಿ ಕಾಲು ಜಾರಿ ಬಿದ್ದು ಬಲಗಾಲಿನ ತೊಡೆಯ ಎಲುಬು ಮುರಿದಂತೆ ಅವರಿಗೆ ತಡಸ ಸಮೀಪದ ಕುಂಕನೂರು ಎಂಬಲ್ಲಿ ಗಾವಟಿ ಔಷಧ ಉಪಚಾರ ಮಾಡಿದರು ಈವರೆಗೂ ಅವರ ಕಾಲಿನ ನೋವು ಕಡಿಮೆಯಾಗದಿದ್ದುದ್ದನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿದ್ದವರು, ದಿನಾಂಕ: 12-04-2022 ರಂದು ಬೆಳಿಗ್ಗೆ 11-30 ಗಂಟೆಯಿಂದ ಮಧ್ಯಾಹ್ನ 01-30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯೊಳಗೆ ಯಾರೂ ಇಲ್ಲದೇ ಇರುವಾಗ ಶಿರಸಿ ಪೇಟೆಯಿಂದ ಕೀಟನಾಶಕ ಹೆಸರಿನ ವಿಷಕಾರಿ ಪದಾರ್ಥದ ಬಾಟಲಿಯನ್ನು ತೆಗೆದುಕೊಂಡು ಹೋಗಿ ಕುಡಿದು ಕಾಟ್ ಮೇಲೆ ಮಲಗಿಕೊಂಡವರಿಗೆ ಚಿಕಿತ್ಸೆಗಾಗಿ ಶಿರಸಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಹೆಚ್ಚಿನೋಪಚಾರದ ಕುರಿತು ಉನ್ನತ ಆಸ್ಪತ್ರೆಗೆ ಹೋಗಲು ತಿಳಿಸಿದ ಮೇರೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಅದೇ ದಿನ ಆಂಬ್ಯುಲೆನ್ಸ್ ನಲ್ಲಿ ಕರೆದೊಯ್ದು ದಾಖಲಿಸಿದವರಿಗೆ ಚಿಕಿತ್ಸೆಯಲ್ಲಿರುವಾಗ ದಿನಾಂಕ: 15-04-2022 ರಂದು ಮಧ್ಯಾಹ್ನ 01-40 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಮೃತ ನನ್ನ ತಂದೆಯವರು ತನಗಿದ್ದ ಕಾಲಿನ ನೋವನ್ನು ತಡೆಯಲಾಗದೇ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಇದನ್ನು ಹೊರತು ಪಡಿಸಿದರೆ ತನ್ನ ತಂದೆಯ ಸಾವಿನಲ್ಲಿ ಯಾವುದೇ ಸಂಶಯ ಇರುವುದಿಲ್ಲ. ತಂದೆಯವರ ಶವವು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ದಿನೇಶ ತಂದೆ ಕಮಲಾಕರ ಚಲವಾದಿ, ಪ್ರಾಯ-28 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ನರೇಬೈಲ್, ಪೋ: ದೊಡ್ನಳ್ಳಿ, ತಾ: ಶಿರಸಿ ರವರು ದಿನಾಂಕ: 15-04-2022 ರಂದು 16-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 07/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ರಾಮು ತಂದೆ ಬಾಬು ಜಂಗಲೆ, ಪ್ರಾಯ-64 ವರ್ಷ, ವೃತ್ತಿ-ರೈತಾಬಿ/ಹೈನುಗಾರಿಕೆ ಕೆಲಸ, ಸಾ|| ಕಳಕಿವಾಡ, ಹರೆಗಾಳಿ ಗ್ರಾಮ, ತಾ: ದಾಂಡೇಲಿ. ಈತನು ದಿನಾಂಕ: 15-04-2022 ರಂದು ಮಧ್ಯಾಹ್ನ 03-30 ಗಂಟೆಗೆ ದಾಂಡೇಲಿ ತಾಲೂಕಿನ ಕಳಕಿವಾಡ, ಹರೆಗಾಳಿ ಗ್ರಾಮದ ತನ್ನ ವಾಸದ ಮನೆಯ ಮೇಲೆ ಹತ್ತಿ ತೊಲೆಯ ಹಂಚನ್ನು ಹಾಕುತ್ತಿರುವಾಗ ಆಕಸ್ಮಿಕವಾಗಿ ಆಯ ತಪ್ಪಿ ಮನೆಯ ಮೇಲಿಂದ ಕೆಳಗೆ ನೆಲದ ಮೇಲೆ ಬಿದ್ದು, ತನ್ನ ತಲೆಯ ಬಲಬದಿಯಲ್ಲಿ, ಬೆನ್ನಿನ ಹಿಂದೆ ಸೊಂಟದ ಹತ್ತಿರ ತೀವ್ರ ಸ್ವರೂಪದ ಗಾಯನೋವು ಪಡಿಸಿಕೊಂಡವನಿಗೆ ಮಧ್ಯಾಹ್ನ 04-00 ಗಂಟೆಗೆ ದಾಂಡೇಲಿಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದು, ಮಧ್ಯಾಹ್ನ 04-40 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ದಾಂಡೇಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ದೇವರಾಯ ತಂದೆ ರಾಮು ಜಂಗಲೆ, ಪ್ರಾಯ-31 ವರ್ಷ, ವೃತ್ತಿ-ಆಟೋ ರಿಕ್ಷಾ ಚಾಲಕ, ಸಾ|| ಕಳಕಿವಾಡ, ಹರೆಗಾಳಿ ಗ್ರಾಮ, ತಾ: ದಾಂಡೇಲಿ ರವರು ದಿನಾಂಕ: 15-04-2022 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

ಇತ್ತೀಚಿನ ನವೀಕರಣ​ : 29-04-2022 08:07 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080