ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 15-08-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 214/2021, ಕಲಂ: ಗಂಡಸು ಕಾಣೆ  ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಗೋಪಾಲ ತಂದೆ ಮಾದೇವ ಗೌಡ, ಪ್ರಾಯ-32 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕಂದವಳ್ಳಿ, ಕಲ್ಲಬ್ಬೆ, ತಾ: ಕುಮಟಾ. ಪಿರ್ಯಾದಿಯ ಹೆಂಡತಿಯ ತಮ್ಮನಾದ ಈತನು ಮೀನುಗಾರಿಕೆಗೆ ಮಂಜುನಾಥ ತಂದೆ ವಣಕ ಹರಿಕಾಂತ ಇವರ ಬೋಟ್ ಮೇಲೆ ಹೋದವನು, ದಿನಾಂಕ: 14-08-2021 ರಂದು ರಾತ್ರಿ 07-30 ಗಂಟೆಯ ಸುಮಾರಿಗೆ ಹಳದೀಪುರದ ಬಸವರಾಜನದುರ್ಗ ಗುಡ್ಡದ ಹತ್ತಿರ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ, ಸಮುದ್ರದ ಅಲೆಯ ರಭಸಕ್ಕೆ ಸಿಲುಕಿ ಆಕಸ್ಮಿಕವಾಗಿ ಬೋಟಿನಿಂದ ಕಾಲು ಜಾರಿ ಸಮುದ್ರದ ನೀರಿನಲ್ಲಿ ಬಿದ್ದು, ಸಮುದ್ರದ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದು, ಕಾಣೆಯಾದ ನನ್ನ ಹೆಂಡತಿಯ ತಮ್ಮನನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಚಂದ್ರಶೇಖರ ತಂದೆ ರಾಮಾ ಗೌಡ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಾರೋಡಿ, ವಾಲಗಳ್ಳಿ, ತಾ: ಕುಮಟಾ ರವರು ದಿನಾಂಕ: 15-08-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 215/2021, ಕಲಂ: 279, 337 ಐಪಿಸಿ  ನೇದ್ದರ ವಿವರ...... ನಮೂದಿತ ಆರೋಪಿತ ಅರುಣ ತಂದೆ ಅರವಿಂದ ನಾಯ್ಕ, ಪ್ರಾಯ-20 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಹೊಸೂರ, ತಾ: ಸಿದ್ದಾಪುರ (ಮೋಟಾರ್ ಸೈಕಲ್ ನಂ: ಕೆ.ಎ-15/ಎಸ್-8176 ನೇದರ ಸವಾರ). ಈತನು ದಿನಾಂಕ: 15-08-2021 ರಂದು 17-00 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ಹೊನ್ನಾವರದ ಸರಳಗಿ ಕ್ರಾಸ್ ಹತ್ತಿರ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-15/ಎಸ್-8176 ನೇದರಲ್ಲಿ ಗಾಯಾಳುವಾದ ದೀಪಕ ತಂದೆ ಚಂದ್ರಹಾಸ ನಾಯ್ಕ, ಪ್ರಾಯ-20 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೊಲಶಿರ್ಸಿ, ತಾ: ಸಿದ್ದಾಪುರ, ಹಾಲಿ ಸಾ|| ಹೊಸೂರ, ತಾ: ಸಿದ್ದಾಪುರ, ಈತನಿಗೆ ಹಿಂದುಗಡೆ ಕೂಡ್ರಿಸಿಕೊಂಡು ತನ್ನ ಮೋಟಾರ್ ಸೈಕಲನ್ನು ಹೊನ್ನಾವರ ಕಡೆಯಿಂದ ಗೇರುಸೊಪ್ಪ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಮೋಟಾರ್ ಸೈಕಲನ್ನು ಒಮ್ಮೇಲೆ ರಸ್ತೆಯ ಬಲಕ್ಕೆ ಚಲಾಯಿಸಿ, ಗೇರುಸೊಪ್ಪ ಕಡೆಯಿಂದ ಹೊನ್ನಾವರ ಕಡೆಗೆ ಪಿರ್ಯಾದಿಯು ಚಲಾಯಿಸಿಕೊಂಡು ಬರುತ್ತಿದ್ದ ಪಿರ್ಯಾದಿಯ ಬಾಬ್ತು ಕಾರ್ ನಂ: ಕೆ.ಎ-17/ಎಮ್.ಎ-1783 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ಕಾರನ್ನು ಜಖಂ ಪಡಿಸಿದ್ದಲ್ಲದೇ, ತನ್ನ ಮೋಟಾರ್ ಸೈಕಲ್ ಹಿಂದುಗಡೆ ಕೂಡ್ರಿಸಿಕೊಂಡು ಬಂದಿದ್ದ ದೀಪಕ ತಂದೆ ಚಂದ್ರಹಾಸ ನಾಯ್ಕ, ಈತನಿಗೆ ಎಡಗಾಲ ಮೊಣಗಂಟಿಗೆ, ಎಡಗೈ ಅಂಗೈಗೆ ಗಾಯ ಪಡಿಸಿದ್ದಲ್ಲದೇ, ಎಡಭುಜಕ್ಕೆ ಪೆಟ್ಟನ್ನುಂಟು ಪಡಿಸಿ, ಆರೋಪಿ ಮೋಟಾರ್ ಸೈಕಲ್ ಸವಾರನು ತಾನೂ ಸಹ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು ತನ್ನ ಎಡಗೈ ಮೊಣಗಂಟಿಗೆ ಹಾಗೂ ಎಡಗಾಲಿನ ಪಾದಕ್ಕೆ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಪರಮಶಿವಯ್ಯ ತಂದೆ ಓಬಣ್ಣ, ಪ್ರಾಯ-63 ವರ್ಷ, ವೃತ್ತಿ-ನಿವೃತ್ತ ಬ್ಯಾಂಕ್ ನೌಕರ, ಸಾ|| ಮನೆ ನಂ: 2009/177, ರಂಗನಾಥ ಲೇಔಟ್, ಹಡದಿ ರೋಡ್, ತರಳಬಾಳು, 3 ನೇ ಸ್ಟೇಜ್, ದಾವಣಗೆರೆ ರವರು ದಿನಾಂಕ: 15-08-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 132/2021, ಕಲಂ: 279, 304(ಎ) ಐಪಿಸಿ  ನೇದ್ದರ ವಿವರ...... ನಮೂದಿತ ಆರೋಪಿತ ರಾಮನಗೌಡಾ ತಂದೆ ಉಳ್ಳೇನಗೌಡಾ ರಾಮನಗೌಡ್ರ, ಪ್ರಾಯ-26 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ಚಿಕ್ಕ ಉಳಗೇರಿ, ತಾ: ಸೌದತ್ತಿ, ಜಿ: ಬೆಳಗಾವಿ, ಹಾಲಿ ಸಾ|| ಕೊಗನಳ್ಳಿ, ತಾ: ಚಿಕ್ಕೋಡಿ, ಜಿ: ಬೆಳಗಾವಿ (ಲಾರಿ ನಂ: ಎಮ್.ಎಚ್-09/ಇ.ಎಮ್-8499 ನೇದರ ಚಾಲಕ). ಈತನು ದಿನಾಂಕ: 15-08-2021 ರಂದು ಸಾಯಂಕಾಲ 06-15 ಗಂಟೆಯ ಸುಮಾರಿಗೆ ತನ್ನ ಲಾರಿ ನಂ: ಎಮ್.ಎಚ್-09/ಇ.ಎಮ್-8499 ನೇದನ್ನು ಯಲ್ಲಾಪುರ ಕಡೆಯಿಂದ ಕಲಘಟಗಿ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗಿ ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಮದಿಂದ 1/2 ಕಿ.ಮೀ ಹಿಂದೆ ಯಲ್ಲಾಪುರ ಕಡೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ–63 ರಲ್ಲಿ ಇರುವ ಸಣ್ಣ ತಿರುವಿನಲ್ಲಿ ತನ್ನ ಮುಂದೆ ರಸ್ತೆಯ ಎಡಬದಿಯ ಕಚ್ಚಾ ರಸ್ತೆಯಲ್ಲಿ ಎತ್ತು ಹೊಡೆದುಕೊಂಡು ಹೊರಟ ಪಿರ್ಯಾದಿಯ ಸೋದರಮಾವ ಮೃತ: ಶ್ರೀ ಸಿದ್ದಲಿಂಗಪ್ಪಾ ತಂದೆ ಬಸವಣ್ಣೆಪ್ಪಾ ವರಧಾನಿ, ಪ್ರಾಯ-43 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಜಯಂತಿ ನಗರ, ಕಿರವತ್ತಿ, ತಾ: ಯಲ್ಲಾಪುರ ರವರಿಗೆ ಮತ್ತು ಮೃತನು ಹೊಡೆದುಕೊಂಡು ಹೊರಟ ಸುಮಾರು 08-10 ವರ್ಷ ವಯಸ್ಸಿನ ಎತ್ತಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೃತನ ಬಲಗೈ ಮತ್ತು ತಲೆಗೆ ಭಾರೀ ಗಾಯನೋವು ಪಡಿಸಿ ಸ್ಥಳದಲ್ಲಿಯೇ ಮರಣವನ್ನುಂಟು ಪಡಿಸಿದ್ದಲ್ಲದೇ, ಎತ್ತಿನ ತಲೆಗೆ ಮತ್ತು ಕಾಲುಗಳಿಗೆ ಗಂಭೀರ ಗಾಯನೋವು ಪಡಿಸಿ, ಎತ್ತಿಗೂ ಸಹ ಸ್ಥಳದಲ್ಲಿಯೇ ಮರಣ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಶಶಿಧರ ತಂದೆ ಶಿವರಾಜ ಕಾಜಗಾರ್, ಪ್ರಾಯ-24 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಜಯಂತಿ ನಗರ, ಕಿರವತ್ತಿ, ತಾ: ಯಲ್ಲಾಪುರ ರವರು ದಿನಾಂಕ: 15-08-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 15-08-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 31/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಕುಮಾರಿ: ಅಪೂರ್ವ ತಂದೆ ಗಜಾನನ ಹರಿಕಾಂತ, ಪ್ರಾಯ-15 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಗೌಡಕುಳಿ, ಹಳದಿಪುರ, ತಾ: ಹೊನ್ನಾವರ. ಪಿರ್ಯಾದುದಾರರ ಮಗಳಾದ ಇವಳು ಮನೆಯಲ್ಲಿ ಮೊಬೈಲ್ ಹೆಚ್ಚಾಗಿ ಬಳಸುತ್ತಿದ್ದರಿಂದ ಅವಳಿಗೆ ಬುದ್ಧಿ ಹೇಳಿ ಕಳೆದ ಒಂದೂವರೆ ತಿಂಗಳಿಂದ ಮೊಬೈಲ್ ನೀಡದೇ ಇದ್ದುದರಿಂದ ಮನೆಯಲ್ಲಿ ತಂಗಿ ಹಾಗೂ ತಮ್ಮನೊಂದಿಗೆ ಜಗಳ ಮಾಡುತ್ತಿದ್ದವಳು, ದಿನಾಂಕ: 15-8-2021 ರಂದು ಬೆಳಿಗ್ಗೆ ಪುನಃ ಮೊಬೈಲ್ ನೀಡುವಂತೆ ಗಲಾಟೆ ಮಾಡಿದ್ದರಿಂದ ಅವಳಿಗೆ ಪಿರ್ಯಾದಿಯು ಬುದ್ಧಿ ಹೇಳಿ 08-00 ಗಂಟೆಗೆ ತನ್ನ ಹೆಂಡತಿಯೊಂದಿಗೆ ಮೀನು ವ್ಯಾಪಾರಕ್ಕೆ ಹೋಗಿ 11-30 ಗಂಟೆಗೆ ವಾಪಸ್ ಬಂದಾಗ ಅಪೂರ್ವ ಇವಳು ಮನೆಯ ಬಚ್ಚಲ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡಿದ್ದವಳಿಗೆ ಕೆಳಗಿಳಿಸಿ, ಉಪಚಾರದ ಕುರಿತು ಹೊನ್ನಾವರದ ಸರಕಾರಿ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಈಗಾಗಲೆ ಮೃತಪಟ್ಟ ಬಗ್ಗೆ ತಿಳಿಸಿದ್ದು. ಈ ಕುರಿತು ತನ್ನ ಮಗಳ ಸಾವಿನ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಗಜಾನನ ತಂದ ಕನ್ನಾ ಹರಿಕಾಂತ, ಪ್ರಾಯ-35 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಗೌಡಕುಳಿ, ಹಳದಿಪುರ, ತಾ: ಹೊನ್ನಾವರ ರವರು ದಿನಾಂಕ: 15-08-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 16-08-2021 01:42 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080