Feedback / Suggestions

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 15-12-2021

at 00:00 hrs to 24:00 hrs

 

 

1) ಯಲ್ಲಾಪುರ ಪೊಲೀಸ ಠಾಣೆ ಅಪರಾಧ ಸಂಖ್ಯೆ: 224/2021  ಕಲಂ: 25, 1 (ಬಿ)ಭಾರತ ಆಯುಧ ಅಧಿನಿಯಮ 1959 ನೇದ್ದರ ವಿವರ:          ಆಪಾದಿತ ವೆಂಕಟರಮಣ ತಂದೆ ಸಾಣು ಸಿದ್ದಿ, ಪ್ರಾಯ: 54 ವರ್ಷ ಉದ್ಯೋಗ ಕೂಲಿ ಕೆಲಸ ಸಾ: ಕಬ್ಬಿನಕುಂಬ್ರಿ ಪೋಸ್ಟ ವಜ್ರಹಳ್ಳಿ ತಾ|| ಯಲ್ಲಾಪುರ. ಇತನು ಯಲ್ಲಾಪುರ ತಾಲೂಕಿನ ಅಮಗಾಂವ ಗ್ರಾಮ, ಕಂಚಿಮನೆ ಊರಿನ ಕಡೆಗೆ ಹೋಗುವ ಅರಣ್ಯ ಪ್ರದೇಶದಲ್ಲಿ ಒಂಟಿ ನಳಿಕೆಯ ನಾಡ ಬಂದೂಕನ್ನು ಯಾವುದೇ ಅಧೀಕೃತ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಇಟ್ಟುಕೊಂಡಿರುವಾಗ ದಿನಾಂಕ 15-12-2021 ರಂದು 8-30 ಗಂಟೆಗೆ ಪ್ರಿಯಾಂಕ ನ್ಯಾಮಗೌಡ, ಮ.ಪಿ.ಎಸ್.ಐ ಯಲ್ಲಾಪುರ ಪೊಲೀಸ್ ಮತ್ತು ಸಿಬ್ಬಂದಿಯವರಿಗೆ ಸಿಕ್ಕಿದ್ದರಿಂದ ಆತನ ವಿರುದ್ಧ ಸರ್ಕಾರದ ಪರವಾಗಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 

 2) ಯಲ್ಲಾಪುರ ಪೊಲೀಸ ಠಾಣೆ ಅಪರಾಧ ಸಂಖ್ಯೆ:  225/2021  ಕಲಂ: 25,(1) (ಬಿ) ಭಾರತ ಆಯುಧ ಕಾಯ್ದೆ 1959 ನೇದ್ದರ ವಿವರ: ಆಪಾದಿತ  ರಾಮಾ ತಂದೆ ಶಿವಾ ಸಿದ್ದಿ  ಪ್ರಾಯ 50 ವರ್ಷ ಉದ್ಯೋಗ ಕೂಲಿ ಕೆಲಸ ಸಾ|| ಕಬ್ಬಿನಕುಂಬ್ರಿ, ಅಮಗಾಂವ ಗ್ರಾಮ ಯಲ್ಲಾಪುರ ತಾಲೂಕ ಈತನು ಯಾವುದೇ ಅಧೀಕೃತ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಒಂಟಿ ನಳಿಕೆಯ ತುಂಬುವ ನಾಡ ಬಂದೂಕನ್ನು ತನ್ನ ತಾಬಾದಲ್ಲಿ ಇಟ್ಟುಕೊಂಡವನಿಗೆ  ದಿನಾಂಕ 15-12-2021 ರಂದು 10-40 ಗಂಟೆಗೆ ಯಲ್ಲಾಪುರ ತಾಲೂಕಿನ ಅಮಗಾಂವ ಗ್ರಾಮ ಕಬ್ಬಿನಕುಂಬ್ರಿ ಕ್ರಾಸ್ ಹತ್ತಿರದ ಅರಣ್ಯ ಪ್ರದೇಶದಲ್ಲಿ  ಪ್ರಿಯಾಂಕಾ ನ್ಯಾಮಗೌಡ ಪಿ.ಎಸ್.ಐ-ತನಿಖೆ ಯಲ್ಲಾಪುರ ಪೊಲೀಸ ಠಾಣೆ  ಹಾಗೂ ಸಿಬ್ಬಂದಿಯವರಿಗೆ ಸಿಕ್ಕಿದ್ದರಿಂದ, ಆತನ ವಿರುದ್ಧ ಸರ್ಕಾರದ ಪರವಾಗಿ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 

 3) ಯಲ್ಲಾಪುರ  ಪೊಲೀಸ ಠಾಣೆ ಅಪರಾಧ ಸಂಖ್ಯೆ: 223/2021 ಕಲಂ:-279. 337, ಐ.ಪಿ.ಸಿ. ನೇದ್ದರ ವಿವರ: ಆಪಾದಿತ ವಿಜಯಕುಮಾರ ತಂದೆ ಶ್ರೀನಿವಾಸ ಬಂಗೇರಾ, ಪ್ರಾಯ: 74 ವರ್ಷ, ಉದ್ಯೋಗ: ನೀವೃತ್ತ ನೌಕರ, ಸಾ|| ಅಟ್ಲಾಂಟಿಕ್ ಬಿಲ್ಡಿಂಗ್, ಪ್ಲಾಟ್ ನಂ: 301 ನೇ ಮಹಡಿ ರಯೇಜಾ ವಾಟರ್ ಫ್ರಂಟ್ ಚಿತ್ರಾಪುರ, ಕುಳಾಯಿ, ಮಂಗಳೂರು ತಾಲೂಕ ದಕ್ಷಿಣ ಕನ್ನಡ ಜಿಲ್ಲೆ. ದಿನಾಂಕ 13-12-2021 ರಂದು ಮಧ್ಯಾಹ್ನ 13-30 ಗಂಟೆ ಸುಮಾರಿಗೆ ತನ್ನ ಬಾಬ್ತು ಕಾರ್ ವಾಹನ ನಂ: ಕೆಎ-25-ಎಮ್ಎ-1579 ನೇದನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಲ್ಲಾಪುರ ತಾಲೂಕಿನ ಇಡಗುಂದಿ ಹತ್ತಿರ ಹಾಯ್ದು ಹೋದ ಕಾರವಾರ ಬಳ್ಳಾರಿ ರಾಷ್ಟ್ರೀಯ  ಹೆದ್ದಾರಿ ನಂ: 63 ರಲ್ಲಿ  ತನ್ನ ವಾಹನದ ವೇಗ ನಿಯಂತ್ರಿಸದೇ ಎದುರುಗಡೆಯಿಂದ ಅಂದರೆ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲ್ ನೇದಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ ಮೋಟಾರ್ ಸೈಕಲ್ ಸವಾರನಾದ 1] ಮಂಜುನಾಥ ತಂದೆ ಚೆನ್ನಪ್ಪ ಉಣಕಲ್ ಸಾ|| ಕರಡಿಗುಡ್ಡಿ, ಗಂಜಿಗಟ್ಟಿ ಧಾರವಾಡ ತಾಲೂಕ ರವರಿಗೆ ಮೋಣಕಾಲಿಗೆ ಹಾಗೂ ತಲೆಗೆ ಹಾಗೂ ಮೋಟಾರ್ ಸೈಕಲ್ ಹಿಂಬದಿ ಸವಾರನಾದ 2] ಕಲ್ಲಪ್ಪ ತಂದೆ ಶಿವಪ್ಪ ಜ್ಯಾಲಿಹಾಳ ಪ್ರಾಯ: 35 ವರ್ಷ, ಉದ್ಯೋಗ: ರೈತಾಪಿ ಕೆಲಸ ಸಾ|| ಕರಡಿಗುಡ್ಡಿ, ಗಂಜಿಗಟ್ಟಿ ಧಾರವಾಡ ತಾಲೂಕ ರವರ ಬಲಕೈ ಮೋಣಗಂಟಿಗೆ, ತಲೆಗೆ ಸಾದಾ ಸ್ವರೂಪದ ಗಾಯ-ನೋವುಪಡಿಪಡಿಸಿದ ಬಗ್ಗೆ ಶ್ರೀ ಪ್ರಶಾಂತ್ ತಂದೆ ವಿಜಯಕುಮಾರ ಬಂಗೇರಾ, ಪ್ರಾಯ: 42 ವರ್ಷ, ಉದ್ಯೋಗ: ಸಾಫ್ಟವೇರ್ ಇಂಜಿನಿಯರ್, ಸಾ|| ಅಟ್ಲಾಂಟಿಕ್ ಬಿಲ್ಡಿಂಗ್, ಪ್ಲಾಟ್ ನಂ: 301 ನೇ ಮಹಡಿ ರಯೇಜಾ ವಾಟರ್ ಫ್ರಂಟ್ ಚಿತ್ರಾಪುರ, ಕುಳಾಯಿ, ಮಂಗಳೂರು ತಾಲೂಕ ದಕ್ಷಿಣ ಕನ್ನಡ ಜಿಲ್ಲೆ, ಹಾಲೀ, ಚೊಕ್ಕನಳ್ಳಿ, ಥಣಿಸಂದ್ರ  ಹೆಬ್ಬಾಳ ಎನ್. ಆರ್. ವಿಂಟಗೇಟ್ಸ್ ಪ್ಲಾಟ್ ನಂ: 204/ಬಿ. ಬ್ಲಾಕ್ ಬೆಂಗಳೂರು.ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಳಾಗಿದೆ.

  

4) ಸಿದ್ದಾಪುರ ಪೊಲೀಸ್‌ಠಾಣೆ ಅಪರಾಧ ಸಂಖ್ಯೆ: 154/2021 ಕಲಂ 279, 338 ಐ.ಪಿ.ಸಿ ಮತ್ತು 187 ಮೋಟಾರು ವಾಹನ ಕಾಯ್ದೆ ನೇದ್ದರ ವಿವರ: ಆಪಾದಿತ ಬಿಳಿ ಬಣ್ಣದ ಟಾಟಾ ಸುಮೋ ಎಮ್.ಹೆಚ್.01 ನೇದರ  ಚಾಲಕನು ದಿ; 14/12/2021 ರಂದು ಸಾಯಂಕಾಲ ತನ್ನ ವಾಹನವನ್ನು ಸಿದ್ದಾಪುರ ಕಡೆಯಿಂದ ಶಿರಸಿ ಕಡೆಗೆ ಅತೀವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದವನು 18:05 ಗಂಟೆ ಸುಮಾರಿಗೆ ತ್ಯಾಗಲಿ ಸಮೀಪದ ಜೀಕನಮನೆ ಹತ್ತಿರ ಅವನ ಮುಂದೆ ಶ್ರೀ ಶಾಂತಾರಾಮ ಗಂಗಾಧರ ಭಟ್ಟ, ಪ್ರಾಯ; 68 ವರ್ಷ, ಉದ್ಯೋಗ; ಕೃಷಿ, ಸಾ|| ಯಲುಗಾರ, ಪೊ; ಕೊಡ್ಸರ, ತಾ; ಸಿದ್ದಾಪುರ ಇವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ ಸೈಕಲ್ ನಂ: ಕೆಎ 31/ಇ.ಸಿ 9078 ನೇದನ್ನು ನಿಷ್ಕಾಳಜೀತನದಿಂದ ಓವರಟೇಕ್ ಮಾಡುತ್ತಿದ್ದಾಗ ಎದುರಿನಿಂದ ಕಾರು ಬಂದಿದ್ದನ್ನು ನೋಡಿ ಏಕಾಏಕಿ ಎಡಕ್ಕೆ ಕಟ್ ಹೊಡೆದು ಮೋಟಾರ ಸೈಕಲ್ಲಿಗೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ ಮೋಟಾರ ಸೈಕಲ್ ಸವಾರನ ಬಲ ಕಾಲಿಕಾಲಿಗೆ ಗಂಭೀರ ಸ್ವರೂಪದ ಗಾಯ ನೋವು ಪಡಿಸಿ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಹೊಡೆದುಕೊಂಡು ಫರಾರಿ ಆದ ಬಗ್ಗೆ ಶ್ರೀ ಮಂಜುನಾಥ ತಂದೆ ಅಣ್ಣಪ್ಪ ಬಿರಾದಾರ, ಪ್ರಾಯ: 46 ವರ್ಷ, ಉದ್ಯೋಗ: ಕೆ.ಎಸ್.ಆರ್.ಟಿ.ಸಿ ಯಲ್ಲಿ ಚಾಲಕ (ಬ.ನಂ; 748), ಸಾ||  ಗಣಪತಿ ಚೌಕ, ಬಿಜಾಪುರ, ಹಾಲಿ ರವೀಂದ್ರನಗರ, ಯಲ್ಲಾಪುರ (ಉ.ಕ)  ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 

 

5) ಮುರ್ಡೇಶ್ವರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:  110/2021 ಕಲಂ: 15(ಎ) 32(3) ಕರ್ನಾಟಕ ಅಬಕಾರಿ ಕಾಯ್ದೆ-1965ನೇದ್ದರ ವಿವರ: ಆಪಾದಿತ ಮಂಜುನಾಥ ತಂದೆ ಅಪ್ಪು ನಾಯ್ಕ ಪ್ರಾಯ: 60 ವರ್ಷ, ವೃತ್ತಿ: ವ್ಯಾಪಾರಸ್ಥ ಸಾ|| ಕಳಿನಮನೆ, ಬೆಂಗ್ರೆ-2, ಭಟ್ಕಳ ತಾಲೂಕು ಈತನು ದಿನಾಂಕ : 15-12-2021 ರಂದು 19:25 ಗಂಟೆಗೆ ಮಾವಿನಕಟ್ಟಾ ಆದರ್ಶ ಹೊಟೇಲ ಎದುರಿಗೆ, ಯಾರೋ 3 ಜನರೊಂದಿಗೆ ಸೇರಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಸರಾಯಿ ಕುಡಿಯುತ್ತಾ ಕುಳಿತ್ತಿದ್ದು, ದಾಳಿಯ ಸಮಯ  2 ಜನರು ಓಡಿ ಹೋಗಿದ್ದು,  ನಮೂದಿತ ಆರೋಪಿತನು ಕಾಲಂ ನಂ 11 ರಲ್ಲಿ ಕಾಣಿಸಿದ ವಸ್ತುಗಳೊಂದಿಗೆ ಸಿಕ್ಕಿದ್ದರಿಂದ ಆತನ ವಿರುದ್ಧ  ಶ್ರೀ ಪರಮಾನಂದ ಕೊಣ್ಣುರು, ಪಿ.ಎಸ್.ಐ. ಮುರ್ಡೇಶ್ವರ ಠಾಣೆ ರವರು ಪ್ರಕರಣ ದಾಖಲಿಸಿ ಕಾನೂನಿನ ಕ್ರಮ ಜರುಗಿಸಿರುತ್ತಾರೆ.

  

6) ಕದ್ರಾ ಪೊಲೀಸ ಠಾಣೆ  ಅಪರಾಧ ಸಂಖ್ಯೆ 15/2021 ಕಲಂ: 279, 337 ಐ.ಪಿ.ಸಿ. ನೇದ್ದರ ವಿವರ: ಆಪಾದಿತ ಸಾಬಣ್ಣಾ ದ್ಯಾವಪ್ಪಾ ಬೂದಿಹಾಳ ವಯಸ್ಸು : 41 ವರ್ಷ ಉದ್ಯೋಗ : ಚಾಲಕ ಸಾ|| # 28, ಆನದಿನ್ನಿ, ಯಡಹಳ್ಳಿ ಸಾ|| ಬಾಗಲಕೋಟ ಇತನು  ದಿನಾಂಕ: 15-12-2021 ರಂದು 11-20 ಗಂಟೆಗೆ ತನ್ನ ಮಾರುತಿ ಸುಜುಕಿ ಕಂಪನಿಯ ಇಕೋ ಮಾದರಿಯ ಸಿಲ್ವರ್ ಬಣ್ಣದ ಕಾರ್ ನೋಂದಣಿ ಸಂಖ್ಯೆ: ಕೆಎ-29/ಎನ್-7512 ನೇದನ್ನು ಕಾರವಾರ ಕಡೆಯಿಂದ ಜೋಯಿಡಾ ಕಡೆಗೆ ಕಾರನ್ನು ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದವನು ರಾಜ್ಯ ಹೆದ್ದಾರಿ-34 ರ ಮೇಲೆ ಅಣಶಿ ಘಟ್ಟದಲ್ಲಿನ ಯು ಆಕಾರದ ತಿರುವು ರಸ್ತೆಯಲ್ಲಿ ಜೋಯಿಡಾ ಕಡೆಯಿಂದ ಕಾರವಾರ ಕಡೆಗೆ ಪರ‍್ಯಾದಿಯು ತನ್ನ ಮಾಲೀಕತ್ವದಲ್ಲಿರುವ ಮಾರುತಿ ಕಂಪನಿಯ ಸೆಲೆರಿಯೋ ಮಾದರಿಯ ಕಾರ್ ನಂ : KA-01/MN-1971 ನೇ ಕಾರಿನಲ್ಲಿ ತನ್ನ ತಂದೆಯಾದ ಅಬ್ದುಲ್‌ಸಾಹೇಬ್ ದಾವಲ್‌ಸಾಹೇಬ್ ಮುಲ್ಲಾ ವಯಸ್ಸು : 71 ವರ್ಷ ಇವರನ್ನು ಕರೆದುಕೊಂಡು ಕುಳ್ಳಿರಿಸಿಕೊಂಡು ಎಡಬದಿಯಿಂದ ಬರುತ್ತಿದ್ದಾಗ ಮುಂದಿನಿಂದ ಢಿಕ್ಕಿಹೊಡೆದು  ಅಪಘಾತಪಡಿಸಿ ಪಿರ್ಯಾದಿಯ ತಂದೆಗೆ ಎರಡು ಭುಜಗಳಿಗೆ ಒಳನೋವು ಹಾಗೂ ತಲೆಗೆ ತೆರಚಿದ ಗಾಯ ನೋವು ಪಡಿಸಿದ್ದಲ್ಲದೆ, ಎರಡೂ ವಾಹನಗಳನ್ನು ಜಖಂಗೊಳಿಸಿದ ಬಗ್ಗೆ ಶ್ರೀ ಅಬ್ರಾರ್ ಅಹಮ್ಮದ ತಂದೆ ಅಬ್ದುಲ್‌ಸಾಹೇಬ್ ಮುಲ್ಲಾ ಪ್ರಾಯ : 41 ವರ್ಷ, ಜಾತಿ: ಮುಸ್ಲಿಂ ಉದ್ಯೋಗ : ಇಂಜಿನಿಯರ್ ಸಾ|| ಊIಉ-8-004, ಅಕ್ಷಯ್ ಪಾರ್ಕ, ಗೋಕುಲ್ ರೋಡ್, ಹುಬ್ಬಳ್ಳಿ ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 

======||||||||====== 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 15-12-2021

at 00:00 hrs to 24:00 hrs.

 

ಪ್ರಕರಣ ದಾಖಲಾಗಿರುವುದಿಲ್ಲ. 

 

 

 

======||||||||======

Last Updated: 04-01-2022 11:59 AM Updated By: SP KARWAR


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Uttara Kannada District Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080