ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 15-02-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 33/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 14-02-2021 ರಂದು ಬೆಳಿಗ್ಗೆ 08-00 ಗಂಟೆಯಿಂದ ದಿನಾಂಕ: 15-02-2021 ರ ಸಂಜೆ 17-00 ಗಂಟೆಯ ನಡುವಿನ ಅವಧಿಯಲ್ಲಿ ಅಂಕೋಲಾ ತಾಲೂಕಿನ ಆಂದ್ಲೆಯಲ್ಲಿರುವ ಪಿರ್ಯಾದಿಯವರ ಮನೆಯ ಮುಂದಿನ ಬಾಗಿಲಿಗೆ ಹಾಕಿದ ಬೀಗವನ್ನು ಯಾವುದೋ ಗಟ್ಟಿ ವಸ್ತುವಿನಿಂದ ಮುರಿದು ಬಾಗಿಲು ತೆರೆದು ಮನೆಯ ಒಳಹೊಕ್ಕಿ ಮನೆಯಲ್ಲಿದ್ದ ಕಪಾಟುಗಳ ಬಾಗಿಲು ಮುರಿದು ಕಪಾಟಿನಲ್ಲಿದ್ದ ಬಟ್ಟೆ ಬರೆಗಳನ್ನು ಹಾಗೂ ಇತರೆ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸಿ ನೆಲದ ಮೇಲೆ ಬಿಸಾಕಿದಲ್ಲದೇ, ದೇವರ ಕೋಣೆಯಲ್ಲಿರುವ ಕಬ್ಬಿಣದ ಕಪಾಟಿನಲ್ಲಿದ್ದ 10,000/- ರೂಪಾಯಿ ನಗದು ಹಣವನ್ನು ಹಾಗೂ ಮನೆಯಲ್ಲಿ ಅಳವಡಿಸಿದ ಸಿ.ಸಿ ಟಿವಿ ಹಾರ್ಡ್ ಡಿಸ್ಕ್-1, ಅ||ಕಿ|| 2,000/- ರೂಪಾಯಿ ಬೆಲೆಯದನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ವಿಠೋಬ ತಂದೆ ಸಾತು ನಾಯಕ, ಪ್ರಾಯ-67 ವರ್ಷ, ವೃತ್ತಿ-ನಿವೃತ್ತ ನೌಕರ, ಸಾ|| ಆಂದ್ಲೆ, ತಾ: ಅಂಕೋಲಾ ರವರು ದಿನಾಂಕ: 15-02-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 16/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಇಸ್ಮಾಯಿಲ್ ಯುಸೂಫ್ ಮೂಸಾ, ಪ್ರಾಯ-44 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕಾಸರಕೋಡ, ಟೊಂಕಾ, 2 ನೇ ಗಲ್ಲಿ, ತಾ: ಹೊನ್ನಾವರ (ಹೋಂಡಾ ಎಕ್ಟಿವಾ ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-9372 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 15-02-2021 ರಂದು 17-00 ಗಂಟೆಯ ಸುಮಾರಿಗೆ ತಾನು ಚಲಾಯಿಸುತ್ತಿದ್ದ ಹೋಂಡಾ ಎಕ್ಟಿವಾ ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-9372 ನೇದನ್ನು ಮುರ್ಡೇಶ್ವರ ಕಡೆಯಿಂದ ಶಿರೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ತಾನು ಹೋಗುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಬಿಟ್ಟು ವಿರುದ್ಧ ದಿಕ್ಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಅಡ್ಡಾದಿಡ್ಡಿ ಸವಾರಿ ಮಾಡಿಕೊಂಡು ತೆರ್ನಮಕ್ಕಿ ಚರ್ಚ್ ಕ್ರಾಸ್ ಎದುರಿಗೆ ತಲುಪಿದಾಗ ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಹೋಗುತ್ತಿದ್ದ ಮಾರುತಿ ಸ್ವಿಫ್ಟ್ ಕಾರ್ ನಂ: ಕೆ.ಎ-20/ಝೆಡ್-2183 ನೇದಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ ಕಾರನ್ನು ಜಖಂಗೊಳಿಸಿ, ಕಾರಿನ ಹಿಂದುಗಡೆ ಬರುತ್ತಿದ್ದ ಪಿರ್ಯಾದಿ ಇವರು ಸವಾರಿ ಮಾಡಿಕೊಂಡು ಬರುತ್ತಿದ್ದ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-20/ಇ.ಎಸ್-1490 ನೇದಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಢಿಕ್ಕಿಯ ರಭಸಕ್ಕೆ ಇಬ್ಬರೂ ಮೋಟಾರ್ ಸೈಕಲ್ ಸವಾರರು ರಸ್ತೆಯ ಮೇಲೆ ಬಿದ್ದು ಆರೋಪಿತನು ತನಗೆ ಎಡಗಾಲಿನ ಪಾದಕ್ಕೆ ಮತ್ತು ಎಡಗಾಲಿನ ಮೊಣಗಂಟಿನ ಹತ್ತಿರ ಮತ್ತು ಎಡಗೈ ಮೊಣಗಂಟಿನ ಕೆಳಗೆ ಮೂಳೆ ಮುರಿದು ಭಾರೀ ಸ್ವರೂಪದ ಗಾಯನೋವು ಪಡಿಸಿಕೊಂಡಿದ್ದಲ್ಲದೇ, ಪಿರ್ಯಾದಿಗೂ ಸಹ ಬಲಭುಜಕ್ಕೆ  ಮತ್ತು ಬಲಗಾಲಿನ ಮೊಣಗಂಟಿಗೆ ತೆರಚಿದ ನಮೂನೆಯ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಸುರೇಶ ತಂದೆ ಪುಟ್ಟಯ್ಯ ಮರಾಠಿ, ಪ್ರಾಯ-23 ವರ್ಷ, ವೃತ್ತಿ-ವೆಲ್ಡಿಂಗ್ ಕೆಲಸ, ಸಾ|| ಗಂಗನಾಡು, ಮಯ್ಯಾಡಿ ಪೋಸ್ಟ್, ಬೈಂದೂರು, ತಾ: ಕುಂದಾಪುರ, ಜಿ: ಉಡುಪಿ ರವರು ದಿನಾಂಕ: 15-02-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 19/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಾದೇವ ತಂದೆ ಲಕ್ಷ್ಮಣ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ವ್ಯಾಪಾರ, ಸಾ|| ಹನುಮಾನ ನಗರ, ಪಿಲ್ಲು ಮನೆ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಎಊ-4467 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 14-02-2021 ರಂದು ಸಂಜೆ 18-45 ಗಂಟೆಗೆ ತಾನು ಚಲಾಯಿಸಿಕೊಂಡು ಬಂದ ಮೋಟಾರ್ ಸೈಕಲ್  ನಂ: ಕೆ.ಎ-47/ಎಊ-4467 ನೇದನ್ನು ಹೆಬಳೆ ಭಟ್ಕಳ ಮುಖ್ಯ ರಸ್ತೆಯಿಂದ ಜಟಗೇಶ್ವರಿ ದೇವಸ್ಥಾನ ರಸ್ತೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು, ಶ್ರೀ ಟಿ. ಡಿ. ನಾಯ್ಕ ರವರ ಮನೆಯ ಹತ್ತಿರ ವಾಯುವಿಹಾರ ಮಾಡುತ್ತಿದ್ದ ಪಾದಚಾರಿ ರಾಘವೇಂದ್ರ ಜಟ್ಟಾ ನಾಯ್ಕ, ಪ್ರಾಯ-60 ವರ್ಷ, ವೃತ್ತಿ-ವ್ಯಾಪಾರ, ಸಾ|| ತೆಂಗಿನಗುಂಡಿ, ಬಲೀಂದ್ರನ ಮನೆ, ತಾ: ಭಟ್ಕಳ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅವರ ಬಲಗಾಲಿಗೆ ರಕ್ತಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ನಾರಾಯಣ ತಂದೆ ನಾಗಪ್ಪ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತೆಂಗಿನಗುಂಡಿ, ಬಲೀಂದ್ರನ ಮನೆ, ತಾ: ಭಟ್ಕಳ ರವರು ದಿನಾಂಕ: 15-02-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 30/2021, ಕಲಂ: 279, 304(ಎ) ಐಪಿಸಿ ಮತ್ತು ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಲಾರಿ ನಂ: ಕೆ.ಎ-31/2409 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ನಮೂದಿತ ಆರೋಪಿತನು ದಿನಾಂಕ: 14-02-2021 ರಂದು 21-15 ಗಂಟೆಗೆ ತಾನು ಚಲಾಯಿಸಿಕೊಂಡು ಬಂದ ಲಾರಿ ನಂ: ಕೆ.ಎ-31/2409 ನೇದನ್ನು ಮುಂಡಗೋಡ-ಕಲಘಟಗಿ ರಸ್ತೆಯ ಶಾಂತಿ ನಗರದ ಕ್ರಾಸ್ ಹತ್ತಿರ ಕಲಘಟಗಿ ಕಡೆಗೆ ಮುಖ ಮಾಡಿ ರಸ್ತೆಯಲ್ಲಿ ನಿಲ್ಲಿಸಿ ಬರ-ಹೋಗುವ ವಾಹನಗಳಿಗೆ ವಾಹನ ನಿಂತ ಬಗ್ಗೆ ಯಾವುದೇ ಇಂಡಿಕೇಟರ್ ಹಾಗೂ ಬ್ರೇಕ್ ಲೈಟ್ ಹಾಕಿ ಸೂಚನೆ ಮಾಡಿ ನಿಲ್ಲಿಸದೇ ಇದ್ದ ಪರಿಣಾಮ ಮುಂಡಗೋಡ ಕಡೆಯಿಂದ ಕಲಘಟಗಿ ಕಡೆಗೆ ಮೋಟಾರ್ ಸೈಕಲ್ ನಂ: ಕೆ.ಎ-25/ವಿ-8286 ನೇದನ್ನು ಸವಾರಿ ಮಾಡಿಕೊಂಡು ಹೋಗುತ್ತಿದ್ದ ವಿಜಯಕುಮಾರ ತಂದೆ ಪದ್ಮನಾಬ ಶೆಟ್ಟಪ್ಪನವರ ಇವರಿಗೆ ಮುಂದೆ ದಾರಿ ಕಾಣದೇ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಮಾಡಿಕೊಂಡು ಸ್ಧಳದಲ್ಲಿಯೇ ಮರಣಪಟ್ಟಿದ್ದು ಇರುತ್ತದೆ. ಈ ಬಗ್ಗೆ ರಸ್ತೆಯಲ್ಲಿ ಅಪಾಯವಾಗುವಂತೆ ನಿಲ್ಲಿಸಿ ಆರೋಪಿ ಲಾರಿ ಚಾಲಕನು ಸ್ಧಳದಲ್ಲಿ ನಿಲ್ಲದೇ ಓಡಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಗಣೇಶ ತಂದೆ  ರತ್ನಪ್ಪ ಲಮಾಣಿ, ಪ್ರಾಯ-28 ವರ್ಷ, ವೃತ್ತಿ-ರೈತಾಪಿ ಕೆಲಸ, ಸಾ|| ಅಗಡಿ, ತಾ: ಮುಂಡಗೋಡ ರವರು ದಿನಾಂಕ: 15-02-2021 ರಂದು 22-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 44/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ವಿಶ್ವನಾಥ ತಂದೆ ಅಜೀತ ದೊಡ್ಡಜೈನ್, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹವಗಿ, ತಾ: ಹಳಿಯಾಳ. ನಮೂದಿತ ಆರೋಪಿತನು ದಿನಾಂಕ: 15-02-2021 ರಂದು 16-55 ಗಂಟೆಗೆ ಹಳಿಯಾಳ ತಾಲೂಕಿನ ಹವಗಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ಬರ-ಹೋಗುವ ಜನರಿಗೆ ಕರೆದು ಅದೃಷ್ಟ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿರಿ, ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಜನರ ಮನವೊಲಿಸಿ ಅವರಿಂದ ಹಣ ಪಡೆದು, ಓ.ಸಿ ಮಟಕಾ ಜೂಗಾರಾಟದ ಮೇಲೆ ಹಣದ ಪಂಥ ಕಟ್ಟಿಸಿಕೊಳ್ಳುತ್ತಿದ್ದಾಗ, ದಾಳಿಯ ಕಾಲಕ್ಕೆ 1). ನಗದು ಹಣ 380/- ರೂಪಾಯಿ, 2). ಓ.ಸಿ ಅಂಕಿ ಬರೆದ ಚೀಟಿ-1, ಅ||ಕಿ|| 00.00/- ರೂಪಾಯಿ, 3) ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ, 4). ರಟ್-01 ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಪಿರ್ಯಾದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮೋತಿಲಾಲ್ ಪವಾರ, ಪೊಲೀಸ್ ವೃತ್ತ ನಿರೀಕ್ಷಕರು, ಹಳಿಯಾಳ ವೃತ್ತ, ಹಳಿಯಾಳ ರವರು ದಿನಾಂಕ: 15-02-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 15-02-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 01/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಅಶೋಕ ಸ್ವಾಮಿ ತಂದೆ ಗುರುಪದ ಸ್ವಾಮಿ, ಪ್ರಾಯ-59 ವರ್ಷ, ವೃತ್ತಿ ನಿವೃತ್ತ ನೌಕರ, ಸಾ|| ಆರ್-1-555/2, ಹಳೇ ಔಸಾ ರಸ್ತೆ, ಇರಿಗೇಷನ್ ಆಫೀಸ್ ಹತ್ತಿರ, ಕೃಷಿ ಕಾಲೋನಿ, ಲಾಥೋರ್, ಮಹಾರಾಷ್ಟ್ರ, ಹಾಲಿ ಸಾ|| ಪಿ-56/1, ಲಿಟ್ಲ್ ಬಿಣಗಾ, ನೇವಲ್ ಬೇಸ್, ಅರ್ಗಾ, ಕಾರವಾರ. ಮೃತನು ಬಿ.ಪಿ ಖಾಯಿಲೆಯಿಂದ ಬಳಲುತ್ತಿದ್ದು, ದಿನಾಂಕ: 15-02-2021 ರಂದು ಬೆಳಿಗ್ಗೆ 11-30 ಗಂಟೆಯ ಸಮಯಕ್ಕೆ ತನ್ನ ಮಗನಾದ ಸುದ್ದಿದಾರರೊಂದಿಗೆ ತನ್ನ ಹೆಂಡತಿಗೆ ಹಲ್ಲಿನ ಚಿಕಿತ್ಸೆಯ ಕುರಿತು ಸುದ್ದಿದಾರರ ಕಾರಿನ ಮೇಲಾಗಿ ಅರ್ಗಾ ನೇವಲ್ ಬೇಸ್ ಐ.ಎನ್.ಎಚ್.ಎಸ್ ಪತಂಜಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಆಕಸ್ಮಾತ್ ತನಗೆ ತಲೆ ಸುತ್ತು ಬಂದು ಕಾರಿನಲ್ಲಿ ಬಿದ್ದಿದ್ದು, ಸುದ್ದಿದಾರರು ಅವರಿಗೆ ಕೂಡಲೇ ಅರ್ಗಾದ ನೇವಲ್ ಬೇಸ್ ಐ.ಎನ್.ಎಚ್.ಎಸ್ ಪತಂಜಲಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿ ಮಧ್ಯಾಹ್ನ 12-45 ಗಂಟೆಯ ಸಮಯಕ್ಕೆ ಅವರು ಮೃತಪಟ್ಟ ಕುರಿತು ಅಲ್ಲಿನ ವೈದ್ಯರು ತಿಳಿಸಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪಿರ್ಯಾದಿ ಶ್ರೀ ಸ್ವಾಮಿ ದಾನೇಶ ತಂದೆ ಅಶೋಕ ಸ್ವಾಮಿ, ಪ್ರಾಯ-29 ವರ್ಷ, ವೃತ್ತಿ ಎ.ಇ.ಇ (ಸಿವಿಲ್) ಎಮ್.ಇ.ಎಸ್, ನೇವಲ್ ಬೇಸ್, ಕಾರವಾರ, ಸಾ|| ಆರ್-1-555/2, ಹಳೇ ಔಸಾ ರಸ್ತೆ, ಇರಿಗೇಷನ್ ಆಫೀಸ್ ಹತ್ತಿರ, ಕೃಷಿ ಕಾಲೋನಿ, ಲಾಥೋರ್, ಮಹಾರಾಷ್ಟ್ರ, ಹಾಲಿ ಸಾ|| ಪಿ-56/1, ಲಿಟ್ಲ್ ಬಿಣಗಾ, ನೇವಲ್ ಬೇಸ್, ಅರ್ಗಾ, ಕಾರವಾರ ರವರು ದಿನಾಂಕ: 15-02-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 04/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಮಾರುತಿ ಯಾನೆ ರಾಜು ತಂದೆ ದಾಸ ಮಹಾಲೆ, ಪ್ರಾಯ-45 ವರ್ಷ, ವೃತ್ತಿ-ಕ್ಷೌರಿಕ, ಸಾ|| ಪ್ಲಾಟಕೇರಿ, ಹಡಿನಬಾಳ, ತಾ: ಹೊನ್ನಾವರ. ಪಿರ್ಯಾದಿಯ ಗಂಡನಾದ ಈತನು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 15-02-2021 ರಂದು 11-30 ಗಂಟೆಯ ಸುಮಾರಿಗೆ ಹೊನ್ನಾವರ ತಾಲೂಕಿನ ಹಡಿನಬಾಳ ಬ್ರಿಡ್ಜ್ ಮೇಲಿಂದ ಹೊಳೆಗೆ ಹಾರಿದವನು ನೀರಿನಲ್ಲಿ ಮುಳುಗಿದ್ದು, ಆತನ ಶವವು ದಿನಾಂಕ: 15-02-2021 ರಂದು ಸಂಜೆ 15-00 ಗಂಟೆಗೆ ಹಡಿನಬಾಳ ಬ್ರಿಡ್ಜ್ ಕೆಳಗೆ ಹಡಿನಬಾಳ ಹೊಳೆಯ ದಡದಲ್ಲಿ ಮೃತ ಸ್ಥಿತಿಯಲ್ಲಿ ಸಿಕ್ಕಿರುತ್ತದೆ. ಈತನು ಯಾವುದೋ ವಿಷಯ ಮನಸ್ಸಿಗೆ ಹಚ್ಚಿಕೊಂಡು ಹೊಳೆಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರ ಹೊರತು ಈತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಕೊಳ್ಳುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ರೇವತಿ ಕೋಂ. ಮಾರುತಿ ಮಹಾಲೆ, ಪ್ರಾಯ-37  ವರ್ಷ, ವೃತ್ತಿ-ಮನೆ ಕೆಲಸ, ಸಾ|| ಪ್ಲಾಟಕೇರಿ, ಹಡಿನಬಾಳ, ತಾ: ಹೊನ್ನಾವರ ರವರು ದಿನಾಂಕ: 15-02-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 16-02-2021 12:28 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080