ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 15-01-2022

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 04/2022, ಕಲಂ: 341, 186, 427, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಈಶ್ವರ ಬಾನಾವಳಿ, ಸಾ|| ಸರ್ವೋದಯ ನಗರ, ಕಾರವಾರ. ದಿನಾಂಕ: 14-01-2022 ರಂದು ಮಧ್ಯಾಹ್ನ 03-30 ಘಂಟೆಗೆ ಕಾರವಾರ ಸರ್ವೋದಯ ನಗರದಲ್ಲಿ ಸಾರ್ವಜನಿಕ ಸುಲಭ ಶೌಚಾಲಯದ ಬಳಿ ಪಿರ್ಯಾದಿಯು ತಾನು ಹಾಗೂ ತಮ್ಮ ವಾಹನದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರೊಂದಿಗೆ ಕಸ ತೆಗೆಯುತ್ತಿರುವಾಗ ನಮೂದಿತ ಆರೋಪಿತನು ತಮ್ಮ ವಾಹನದ ಮುಂದಿನ ಟಾಯರಿಗೆ ಕಲ್ಲು ಹಾಕಿ, ವಾಹನ ಮುಂದೆ ಹೋಗದಂತೆ ಅಡ್ಡಗಟ್ಟಿ, ‘ವಾರ್ಡ್ ಮೆಂಬರ್ ಬರುವವರೆಗೆ ವಾಹನ ಮುಂದೆ ಹೋಗಲು ಬಿಡುವುದಿಲ್ಲ’ ಅಂತಾ ನಗರಸಭೆ ಅಧಿಕಾರಿಯವರ ಮುಂದೆ ಕೂಗಾಡಿ, ಕೆಲಸಗಾರ ಮೌನೇಶ ರವರ ಸ್ಕೂಟರ್ ನಂ: ಕೆ.ಎ-30/ಎಸ್-4180 ನೇದರ ಮೇಲೆ ಕಲ್ಲು ಹಾಕಿ, ಸ್ಕೂಟರ್ ಇಂಡಿಕೇಟರ್ ಒಡೆದು ಲುಕ್ಸಾನ್ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಸುನೀಲ ತಂದೆ ಘನಶ್ಯಾಮ ಗುನಗಿ, ಪ್ರಾಯ-31 ವರ್ಷ, ವೃತ್ತಿ-ನಗರಸಭೆ ವಾಹನ ಚಾಲಕ (ವಾಹನ ನಂ: ಕೆ.ಎ-30/2245), ಸಾ|| ಗುನಗಿವಾಡಾ, ಹಳಗಾ, ಕಾರವಾರ ರವರು ದಿನಾಂಕ: 15-01-2022 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 11/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಜಗನ್ನಾಥ ತಂದೆ ಜಟ್ಟಯ್ಯ ಗುನಗಾ, ಸಾ|| ಹಳಕಾರ, ತಾ: ಕುಮಟಾ (ಲಾರಿ ನಂ: ಕೆ.ಎ-30/4261 ನೇದರ ಚಾಲಕ). ಈತನು ದಿನಾಂಕ: 14-01-2022 ರಂದು 12-00 ಗಂಟೆಗೆ ತಾನು ಚಲಾಯಿಸುತ್ತಿದ್ದ ಲಾರಿ ನಂ: ಕೆ.ಎ-30/4261 ನೇದನ್ನು ರಾಜ್ಯ ಹೆದ್ದಾರಿ ಸಂಖ್ಯೆ-48 ರಲ್ಲಿ ಚಂದಾವರ ಕಡೆಯಿಂದ ಕುಮಟಾ ಕಡೆಗೆ ಹೋಗಲು ಅತೀವೇಗವಾಗಿ ಚಲಾಯಿಸಿಕೊಂಡು ಬಂದು, ಕುಮಟಾ ಪಟ್ಟಣದ ನಿರ್ಮಲಾ ಶಾಲೆಯ ಹತ್ತಿರ ತನ್ನ ಎದುರಿನಿಂದ ಅಂದರೆ ಕುಮಟಾ ಕಡೆಯಿಂದ ಚಂದಾವರ ಕಡೆಗೆ ಟಿ.ವಿ.ಎಸ್ ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-9976 ನೇದರಲ್ಲಿ ಹೊರಟ ಪಿರ್ಯಾದಿಯ ಚಿಕ್ಕಪ್ಪ ಶ್ರೀ ಮಂಜುನಾಥ ತಂದೆ ಜಟ್ಟು ಗೌಡಾ, ಸಾ|| ತೋರಗೋಡ, ತಾ: ಹೊನ್ನಾವರ ಇವರಿಗೆ ನಿಷ್ಕಾಳಜಿಯಿಂದ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಮಂಜುನಾಥ ಇವರಿಗೆ ತಲೆಗೆ, ಗಲ್ಲಕ್ಕೆ, ಬಲಗಾಲಿನ ಮೊಣಗಂಟಿಗೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ಶಿವು ಗೌಡಾ, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತೋರಗೋಡ, ತಾ: ಹೊನ್ನಾವರ ರವರು ದಿನಾಂಕ: 15-01-2022 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 12/2022, ಕಲಂ: 279, 337, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಮೇಶ ತಂದೆ ಮಾದೇವ ಬಾಂದಿ, ಸಾ|| ಕಲ್ಲಬ್ಬೆ, ಕೋಟಖಂಡ, ತಾ: ಭಟ್ಕಳ (ಸ್ಕೂಟಿ ನಂ: ಕೆ.ಎ-47/ಎಸ್-6226 ನೇದರ ಸವಾರ). ಈತನು ದಿನಾಂಕ: 14-01-2022 ರಂದು ಸಾಯಂಕಾಲ 19-00 ಗಂಟೆಯ ಸಮಯಕ್ಕೆ ತಾನು ಚಲಾಯಿಸಿಕೊಂಡು ಬಂದ ಸ್ಕೂಟಿ ನಂ: ಕೆ.ಎ-47/ಎಸ್-6226 ನೇದರ ಹಿಂಬದಿಯಲ್ಲಿ ಸರೋಜಾ ಕೃಷ್ಣಾ ಬಾಂದಿ, ಸಾ|| ಕಲ್ಲಬ್ಬೆ, ಕೋಟಖಂಡ, ತಾ: ಭಟ್ಕಳ ಇವರನ್ನು ಕೂಡ್ರಿಸಿಕೊಂಡು ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು, ತನ್ನ ಸ್ಕೂಟಿ ವಾಹನದ ವೇಗವನ್ನು ನಿಯಂತ್ರಿಸದೇ, ಕಿತ್ರೆ ಕ್ರಾಸ್ ಹತ್ತಿರ ಭಟ್ಕಳ ಕಡೆಯಿಂದ ಮಾರುಕೇರಿ ಕಡೆಗೆ ಮೋಟಾರ್ ಸೈಕಲ್ ನಂ: ಕೆ.ಎ-47/ಎಚ್-7435 ನೇದನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಪಿರ್ಯಾದಿಯ ತಮ್ಮ ಪ್ರದೀಪ ತಂದೆ ರಾಮಯ್ಯ ಗೊಂಡ, ಪ್ರಾಯ-22 ವರ್ಷ, ವೃತ್ತಿ-ಹೈನುಗಾರಿಕೆ, ಸಾ|| ಹೆಜ್ಜಿಲು, ಮಾರುಕೇರಿ, ತಾ: ಭಟ್ಕಳ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಈ ಅಪಘಾತದಲ್ಲಿ ಎರಡು ವಾಹನದಲ್ಲಿ ಇದ್ದ ಸವಾರರು ರಸ್ತೆಯ ಮೇಲೆ ಬಿದ್ದು, ಪ್ರದೀಪ ತಂದೆ ರಾಮಯ್ಯಾ ಗೊಂಡ, ಪ್ರಾಯ-22 ವರ್ಷ, ಇವರಿಗೆ ಬಲಗಾಲು, ಬಲಗೈ ಮತ್ತು ತಲೆಗೆ ಗಾಯ ಪಡಿಸಿದ್ದು, ಅವರನ್ನು ಹೆಚ್ಚಿನ ಉಪಚಾರಕ್ಕೆ ಭಟ್ಕಳದ ಸರ್ಕಾರಿ ಆಸ್ಪತ್ರೆಯಿಂದ ಮಣಿಪಾಲದ ಆಸ್ಪತ್ರೆಗೆ ದಾಖಲಿಸುವ ಪೂರ್ವದಲ್ಲಿ ಅವರು ಮೃತಪಟ್ಟಿದ್ದು, ಈ ಅಪಘಾತದಲ್ಲಿ ಸರೋಜಾ ಕೃಷ್ಣಾ ಬಾಂದಿ, ಸಾ|| ಕಲ್ಲಬ್ಬೆ, ಕೋಟಖಂಡ, ತಾ: ಭಟ್ಕಳ ಇವರಿಗೂ ಸಹ ಗಾಯ ಪಡಿಸಿ, ಆರೋಪಿ ಸವಾರನು ತನಗೂ ಸಹ ಈ ಅಪಘಾತದಲ್ಲಿ ಗಾಯ ಪಡಿಸಿಕೊಂಡಿದ್ದಲ್ಲದೇ, ಪ್ರದೀಪ ತಂದೆ ರಾಮಯ್ಯಾ ಗೊಂಡ, ಪ್ರಾಯ-22 ವರ್ಷ, ವೃತ್ತಿ-ಹೈನುಗಾರಿಕೆ ಸಾ|| ಹೆಜ್ಜಿಲು, ಮಾರುಕೇರಿ, ತಾ: ಭಟ್ಕಳ ಇವರ ಮರಣಕ್ಕೆ ಆರೋಪಿ ಸ್ಕೂಟಿ ಸವಾರನೇ ಕಾರಣವಾದ ಬಗ್ಗೆ ಪಿರ್ಯಾದಿ ಶ್ರೀ ಮುಕುಂದ ತಂದೆ ರಾಮಯ್ಯಾ ಗೊಂಡ, ಪ್ರಾಯ-27 ವರ್ಷ, ವೃತ್ತಿ-ಎ.ಸಿ ಮೆಕ್ಯಾನಿಕ್, ಸಾ|| ಹೆಜ್ಜಿಲ್, ಮಾರುಕೇರಿ, ತಾ: ಭಟ್ಕಳ ರವರು ದಿನಾಂಕ: 15-01-2022 ರಂದು 09-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 10/2022, ಕಲಂ: 283, 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ 1]. ಶಿವಾನಂದ ತಂದೆ ಭಿಮಪ್ಪಾ ಸಿದ್ದಣ್ಣವರ, ಪ್ರಾಯ-21 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ಮಾನ್ವಿ ಮಾಡಮಗೇರಿ, ತಾ: ಯರಗಟ್ಟಿ, ಜಿ: ಬೆಳಗಾವಿ, (ಲಾರಿ ನಂ: ಕೆ.ಎ-22/ಡಿ-0343 ನೇದರ ಚಾಲಕ), 2]. ಮಾಳಪ್ಪಾ ತಂದೆ ಬೀರಪ್ಪ ಕಮಟೆ, ಪ್ರಾಯ-33 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ಸೋಲಾಪುರ, ತಾ: ಹುಕ್ಕೇರಿ, ಜಿ: ಬೆಳಗಾವಿ (ಲಾರಿ ನಂ: ಎಮ್.ಎಚ್-10/ಡಬ್ಲ್ಯೂ-7252 ನೇದರ ಚಾಲಕ). ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ತನ್ನ ಲಾರಿ ನಂ: ಕೆ.ಎ-22/ಡಿ-0343 ನೇದನ್ನು ಯಲ್ಲಾಪುರ ಪಟ್ಟಣದ ಕುಬೇರಾ ಹೋಟೆಲ್ ಮುಂದೆ ಯಾವುದೇ ಮುಂಜಾಗೃತಾ ಕ್ರಮ ವಹಿಸದೇ ಸಿಗ್ನಲ್ ಲೈಟ್ ಸಹ ಹಾಕದೇ ರಸ್ತೆಯ ಮೇಲೆ ಓಡಾಡುವ ಇತರೇ ವಾಹನಗಳಿಗೆ ಅಡೆತಡೆ ಉಂಟಾಗುವಂತೆ ದಿನಾಂಕ: 15-01-2022 ರಂದು ಬೆಳಗಿನ ಜಾವ 00-30 ಗಂಟೆಯಿಂದ 01-15 ಗಂಟೆಯ ವರೆಗೆ ಅಂಕೋಲಾ ಕಡೆಗೆ ಮುಖ ಮಾಡಿ ನಿಲ್ಲಿಸಿದಲ್ಲದೇ, ಸಮಯ 01-15 ಗಂಟೆಗೆ ಆರೋಪಿ 2 ನೇಯವನು ತನ್ನ ಲಾರಿ ನಂ: ಎಮ್.ಎಚ್-10/ಡಬ್ಲ್ಯೂ-7252 ನೇದರಲ್ಲಿ ಸಾಕ್ಷಿದಾರ ಶ್ರೀ ಶಿವಾನಂದ ಲಬ್ಬಿ ರವರಿಗೆ ಕೂಡ್ರಿಸಿಕೊಂಡು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹೆದ್ದಾರಿಯ ಮೇಲೆ ನಿಲ್ಲಿಸಿದ ಆರೋಪಿ 1 ನೇಯವನ ಲಾರಿ ನಂ: ಕೆ.ಎ-22/ಡಿ-0343 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ತನಗೆ ಎಡಗಾಲಿಗೆ ಹಾಗೂ ಕ್ಲೀನರನ ಎಡಗಣ್ಣಿನ ಹತ್ತಿರ ಸಾದಾ ಗಾಯನೋವು ಪಡಿಸಿ, ಎರಡು ವಾಹನಗಳಿಗೆ ಜಕ್ಕಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಗಜಾನನ ತಂದೆ  ಉಮಕಾಂತ ನಾರ್ವೇಕರ, ಪ್ರಾಯ-58 ವರ್ಷ, ವೃತ್ತಿ-ಸಹಾಯಕ ಪೊಲೀಸ್ ಉಪ ನಿರೀಕ್ಷಕರು, ಸಾ|| ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 15-01-2022 ರಂದು 06-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 07/2022, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ಹಾಗೂ ಕಲಂ: 269 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಂತೋನಿ ತಂದೆ ರಾಮಪ್ಪ ದೊಡ್ಮನಿ, ಸಾ|| ಬರ್ಚಿ ರಸ್ತೆ, ತಾ: ದಾಂಡೇಲಿ. ಜಗತ್ತಿನಾದ್ಯಂತ ಕೋವಿಡ್-19 ರೂಪಾಂತರಿ ಓಮಿಕ್ರಾನ್ ವೈರಾಣು ವ್ಯಾಪಕವಾಗಿ ಹರಡುತ್ತಿದ್ದು, ಅದರಂತೆ ಕರ್ನಾಟಕ ರಾಜ್ಯ ಸರಕಾರವು ದಿನಾಂಕ 04-01-2022 ರಿಂದ ದಿನಾಂಕ 19-01-2022 ರವರೆಗೆ ವಾರಾಂತ್ಯದ ಕಪ್ರ್ಯೂ ಘೊಷಣೆ ಮಾಡಿ ಆದೇಶಿಸಿದ್ದು ಇರುತ್ತದೆ. ದಾಂಡೇಲಿ ನಗರದಲ್ಲಿ ಕೋವಿಡ್-19 ರೂಪಾಂತರಿ ಓಮಿಕ್ರಾನ್ ವೈರಾಣು ಗಣನೀಯವಾಗಿ ಹೆಚ್ಚಾಗುತ್ತಾ ಇರುವುದರಿಂದ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಒಬ್ಬರಿಂದೊಬ್ಬರಿಗೆ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲು ವಾರಾಂತ್ಯದ ಕರ್ಫ್ಯೂ ಘೋಷಣೆ ಮಾಡಿ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿ ಆದೇಶಿಸಿದ್ದರೂ ಸಹ ನಮೂದಿತ ಆರೋಪಿತನು ದಿನಾಂಕ: 15-01-2022 ರಂದು 10-50 ಗಂಟೆಯ ಸುಮಾರಿಗೆ ದಾಂಡೇಲಿಯ ಸಂಡೇ ಮಾರ್ಕೆಟ್ ಹತ್ತಿರದ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಲಾಭಗಳಿಸುವ ಉದ್ದೇಶದಿಂಧ ಒಂದು ಖಾಕಿ ಬಣ್ಣದ ಕೈ ಚೀಲದಲ್ಲಿ ಒಟ್ಟು 2,170/- ರೂಪಾಯಿ ಮೌಲ್ಯದ Original Choice Deluxe whisky 90 ML ನ ಒಟ್ಟು 25 ಪ್ಯಾಕೆಟ್ ಗಳು ಮತ್ತು Haywards Cheers Whisky 90 ML ನ ಒಟ್ಟು 37 ಪ್ಯಾಕೆಟ್ ಗಳನ್ನು ತಮ್ಮ ತಾಬಾದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವಾಗ ದಾಳಿಯ ಕಾಲಕ್ಕೆ ಆರೋಪಿತನು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕಿರಣ ಎಸ್. ಪಾಟೀಲ್, ಪಿ.ಎಸ್.ಐ (ಕಾ&ಸು), ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 15-01-2022 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 15-01-2022

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 03/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಬಸವರಾಜ ತಂದೆ ಶರಣಪ್ಪ ರಾಜೂರ, ಪ್ರಾಯ-32 ವರ್ಷ, ವೃತ್ತಿ-ಕೂಲಿ/ಗೌಂಡಿ ಕೆಲಸ, ಸಾ|| ಪಟ್ಟಲಚಿಂತಿ, ತಾ: ಕುಷ್ಠಗಿ, ಜಿ: ಕೊಪ್ಪಳ, ಹಾಲಿ ಸಾ|| ವೆಂಕಟೇಶ ದೇವಸ್ಥಾನದ ಹತ್ತಿರ, ಸೋನಾರವಾಡಾ, ಕಾರವಾರ. ಪಿರ್ಯಾದಿಯ ಸಹೋದರ ಸಂಬಂಧಿಯಾದ ಈತನು ಗೌಂಡಿ ಕೆಲಸಕ್ಕಾಗಿ ಕಳೆದ 15 ದಿನಗಳ ಹಿಂದೆ ಕಾರವಾರಕ್ಕೆ ಬಂದವನು ಗೌಂಡಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 14-01-2022 ರಂದು ಗೌಂಡಿ ಕೆಲಸ ಮುಗಿದ ಬಳಿಕ ಸ್ನಾನಕ್ಕಾಗಿ ಕಾರವಾರದ ರವೀಂದ್ರನಾಥ ಠಾಗೋರ್ ಕಡಲ ತೀರಕ್ಕೆ ಹೋಗಿ ಸಮುದ್ರದಲ್ಲಿ ಸ್ನಾನ ಮಾಡುತ್ತಿರುವಾಗ ಆಕಸ್ಮಾತ್ ಆಗಿ ಸಮುದ್ರದ ನೀರಿನ ಅಲೆಗೆ ಸಿಲುಕಿ ನೀರಿನಲ್ಲಿ ಮುಳುಗಿ ಕಾಣೆಯಾಗಿ, ಒಂದು ಗಂಟೆಯ ನಂತರ ಮೃತಪಟ್ಟ ಸ್ಥಿತಿಯಲ್ಲಿ ಸಿಕ್ಕಿದ್ದು, ಬಸವರಾಜ ತಂದೆ ಶರಣಪ್ಪ ರಾಜೂರ ಈತನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಘವೇಂದ್ರ ತಂದೆ ಮಲ್ಲಿಕಾರ್ಜುನ ರಾಜೂರ, ಪ್ರಾಯ-33 ವರ್ಷ, ವೃತ್ತಿ-ಗ್ರಾಮ ಪಂಚಾಯತ ಅಧ್ಯಕ್ಷ, ಸಾ|| ಪಟ್ಟಲಚಿಂತಿ, ತಾ: ಕುಷ್ಟಗಿ, ಜಿ: ಕೊಪ್ಪಳ ರವರು ದಿನಾಂಕ: 15-01-2022 ರಂದು 09-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಚಿತ್ತಾಕುಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 02/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ದೀಪಕ ತಂದೆ ಉತ್ತಮ ಕೊಠಾರಕರ್, ಪ್ರಾಯ-40 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಮಡ್ಡಾಮಕ್ಕಿ, ಅಸ್ನೋಟಿ, ಕಾರವಾರ. ಪಿರ್ಯಾದಿಯ ಗಂಡನಾದ ಈತನು ದಿನಾಂಕ: 14-01-2022 ರಂದು ಸಾಯಂಕಾಲ 16-00 ಗಂಟೆಗೆ ಮಡ್ಡಾಮಕ್ಕಿಯಲ್ಲಿನ ಕಾಳಿ ನದಿಯಲ್ಲಿ ಮೀನು ಹಿಡಿಯಲು ಮನೆಯಿಂದ ಬಲೆಯನ್ನು ತೆಗೆದುಕೊಂಡು ಹೋಗಿ ಕಾಳಿ ನದಿಯ ನೀರಿನಲ್ಲಿ ಬಲೆಯನ್ನು ಬೀಸಿ ಮೀನುಗಾರಿಕೆ ಮಾಡುತ್ತಿರುವಾಗ ಆಯ ತಪ್ಪಿ ನೀರಿನಲ್ಲಿ ಬಿದ್ದೋ ಅಥವಾ ಕಾಲಿಗೆ ಬಲೆ ಸಿಲುಕಿ ನೀರಿನಲ್ಲಿ ಮುಳುಗಿ ದಿನಾಂಕ: 14-01-2022 ರಂದು ಸಾಯಂಕಾಲ 16-00 ಗಂಟೆಯಿಂದ ದಿನಾಂಕ: 15-01-2022 ರಂದು ಬೆಳಿಗ್ಗೆ 09-30 ಗಂಟೆಯ ನಡುವಿನ ಅವಧಿಯಲ್ಲಿ ಮೃತಪಟ್ಟಿದ್ದು, ಸದರಿಯವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನುನ ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ದೀಪಾ ಕೋಂ. ದೀಪಕ ಕೊಠಾರಕರ್, ಪ್ರಾಯ-35 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಮಡ್ಡಾಮಕ್ಕಿ, ಅಸ್ನೋಟಿ, ಕಾರವಾರ ರವರು ದಿನಾಂಕ: 15-01-2022 ರಂದು 10-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮಂಕಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 04/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತರಾದವರು 1]. ಕು: ದರ್ಶನ ತಂದೆ ಉದಯ ನಾಯ್ಕ, ಪ್ರಾಯ-16 ವರ್ಷ, ವೃತ್ತಿ-ಎಸ್.ಎಸ್.ಎಲ್.ಸಿ ವಿದ್ಯಾರ್ಥಿ, ಸಾ|| ತಾಳಮಕ್ಕಿ, ಮಂಕಿ, ತಾ: ಹೊನ್ನಾವರ, 2]. ಕು: ಮನೋಜ ಬಾಬು ನಾಯ್ಕ, ಪ್ರಾಯ-15 ವರ್ಷ, ವೃತ್ತಿ-ಎಸ್.ಎಸ್.ಎಲ್.ಸಿ ವಿದ್ಯಾರ್ಥಿ, ಸಾ|| ದೊಡ್ಡಗುಂದ, ಮಂಕಿ, ತಾ: ಹೊನ್ನಾವರ. ನಮೂದಿತ ಮೃತರು ಕೂಡಿ ತಾಳಮಕ್ಕಿಯ ಬೆಂತನ ಅಂಗಡಿಯ ಹತ್ತಿರ ಅರಬ್ಬಿ ಸಮುದ್ರದಲ್ಲಿ ಈಜಾಡಲು ಅಂತಾ ಹೋದವರು, ದಿನಾಂಕ: 15-01-2022 ರಂದು ಮಧ್ಯಾಹ್ನ 12-00 ಗಂಟೆಯಿಂದ 12-30 ಗಂಟೆಯ ನಡುವಿನ ಅವಧಿಯಲ್ಲಿ ಸಮುದ್ರದ ನೀರಿನಲ್ಲಿ ಈಜುತ್ತಿದ್ದಾಗ ಆಕಸ್ಮಾತ್ ಆಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಉಲ್ಲಾಸ ತಂದೆ ಅಂಗದ ನಾಯ್ಕ, ಪ್ರಾಯ-41 ವರ್ಷ, ವೃತ್ತಿ-ವ್ಯಾಪಾರ, ಸಾ|| ತಾಳಮಕ್ಕಿ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 15-01-2022 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 04/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ರೇಖಾ ಕೋಂ. ಲಕ್ಷ್ಮಣ ಆಚಾರಿ, ಪ್ರಾಯ-32 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಆಚಾರಿಕೇರಿ, ಮುರ್ಡೇಶ್ವರ, ತಾ: ಭಟ್ಕಳ. ಪಿರ್ಯಾದಿಯ ತಂಗಿಯಾದ ಇವಳಿಗೆ ಕಳೆದ 41/2 ವರ್ಷಗಳ ಹಿಂದೆ ಆಚಾರಿಕೇರಿಯ ಲಕ್ಷ್ಮಣ ತಂದೆ ವಿಷ್ಣು ಆಚಾರಿ ಇವರಿಗೆ ಮದುವೆ ಮಾಡಿಕೊಟ್ಟಿದ್ದು, ಗಂಡ ಹೆಂಡತಿ ಅನ್ಯೋನ್ಯವಾಗಿದ್ದವರು, ರೇಖಾ ಇವಳು 7 ತಿಂಗಳ ಗರ್ಭಿಣಿ ಆಗಿದ್ದು, ದಿನಾಂಕ: 14-01-2022 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ರೇಖಾ ಇವಳಿಗೆ ವಾಂತಿಯಾಗಿ, ಉಸಿರಾಟದ ಸಮಸ್ಯೆಯಾಗಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಉಪಚಾರಕ್ಕಾಗಿ ಮುರ್ಡೇಶ್ವರದ ಆರ್.ಎನ್.ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ತಮ್ಮಲ್ಲಿ ತಜ್ಞ ವೈದ್ಯರಿಲ್ಲ ಬೇರೆ ಕಡೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ದಿನಾಂಕ: 15-01-2022 ರಂದು ಬೆಳಗಿನ ಜಾವ 02-00 ಗಂಟೆಯ ಸುಮಾರಿಗೆ ಶಿರಾಲಿಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಪರೀಕ್ಷಿಸಿ ಆಸ್ಪತ್ರೆಗೆ ತರುವ ಮುಂಚೆಯೇ ಮೃತಪಟ್ಟ ಬಗ್ಗೆ ತಿಳಿಸಿರುತ್ತಾರೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ಶಿವರಾಮ ಆಚಾರಿ, ಪ್ರಾಯ-35 ವರ್ಷ, ವೃತ್ತಿ-ಆಚಾರಿ ಕೆಲಸ, ಸಾ|| ಕೆಳಗಿನ ಮೇಲ್ಪಂಕ್ತಿ, ಪೋ: ಶಿರೂರು ಗ್ರಾಮ, ತಾ: ಬೈಂದೂರು, ಜಿ: ಉಡುಪಿ ರವರು ದಿನಾಂಕ: 15-01-2022 ರಂದು 11-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 16-02-2022 07:17 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080