ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 15-06-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 59/2021, ಕಲಂ: 32, 34, 38(ಎ) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತರು 1]. ಶ್ರೀಪಾದ ತಂದೆ ಕಾಶಿನಾಥ ಕೋಳಂಬಕರ, ಸಾ|| ಚಂದ್ರಾದೇವಿವಾಡ, ಹಿರೇಶಿಟ್ಟಾ, ಬಾಡ, ಕಾರವಾರ, 2]. ಆಟೋ ನಂ: ಕೆ.ಎ-30/7271 ನೇದರ ಚಾಲಕ, ಸಾ|| ಕಾರವಾರ. ಈ ನಮೂದಿತ ಆರೋಪಿತರು ಕೂಡಿ ದಿನಾಂಕ: 15-06-2021 ರಂದು 11-45 ಗಂಟೆಗೆ ಗೋವಾ ರಾಜ್ಯದಲ್ಲಿ ತಯಾರಾದ 1). LIGHT HORSE WHISKEY, 750 ML ಅಂತಾ ಲೇಬಲ್ ಇರುವ ಸರಾಯಿ ಬಾಟಲಿ-250 (250 ಅ||ಕಿ|| 120×250 = 30,000/- ರೂಪಾಯಿ), 2). GOA,s SPECAIL PALM FENNY, 750 ML ಅಂತಾ ಲೇಬಲ್ ಇರುವ ಪ್ಲಾಸ್ಟಿಕ್ ಸರಾಯಿ ಬಾಟಲಿಗಳು-98 (ಅ||ಕಿ|| 120×98 = 11,760/- ರೂಪಾಯಿ), 3). REALS WHISKY, 750 ML ಅಂತಾ ಲೇಬಲ್ ಇರುವ ಒಟ್ಟೂ ಪ್ಲಾಸ್ಟಿಕ್ ಸರಾಯಿ ಬಾಟಲಿಗಳು-36 (ಅ||ಕಿ|| 120×36 = 4,320/- ರೂಪಾಯಿ). ಇವುಗಳನ್ನು ಗೋವಾ ರಾಜ್ಯದಿಂದ ಕರ್ನಾಟಕ ರಾಜ್ಯಕ್ಕೆ ಅನಧೀಕೃತವಾಗಿ ಯಾವುದೇ ಅಧಿಕೃತ ಪಾಸ್ ಯಾ ಪರ್ಮಿಟ್ ಇಲ್ಲದೆಯೇ ತಂದು ತಮ್ಮ ತಾಬಾದಲ್ಲಿ ಇಟ್ಟುಕೊಂಡು ಆಟೋ ನಂ: ಕೆ.ಎ-30/7271 ನೇದರ ಮೇಲೆ ತುಂಬಿಕೊಂಡು ಸಾಗಾಟ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾಗ ದಾಳಿಯ ಕಾಲ ಆರೋಪಿತರು ಪರಾರಿಯಾಗಿ ಅಬಕಾರಿ ಸ್ವತ್ತುಗಳು ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷ ಕುಮಾರ ಎಮ್, ಪಿ.ಎಸ್.ಐ (ಕಾ&ಸು), ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 15-06-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 166/2021, ಕಲಂ: 448, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಜೇಶ ತಂದೆ ಮೋಹನ ನಾಯ್ಕ, ಪ್ರಾಯ–31 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಾಡ, ತಾ: ಕುಮಟಾ. ಈತನು ದಿನಾಂಕ: 14-06-2021 ರಂದು ರಾತ್ರಿ 09-15 ಗಂಟೆಗೆ ಪಿರ್ಯಾದಿಯ ಹೆಂಡತಿ ಶ್ರೀಮತಿ ವಿನಯಾ ಕೋಂ. ಅಭಿಷೇಕ ನಾಯ್ಕ ಇವರು ಹಳದೀಪುರದಲ್ಲಿರುವ ತಮ್ಮ ಮನೆಯಲ್ಲಿ ತಮ್ಮ ಮಗಳೊಂದಿಗೆ ಇದ್ದಾಗ ಪಿರ್ಯಾದಿಯ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ, ಮನೆಯಲ್ಲಿದ್ದ ಪಿರ್ಯಾದಿಯ ಹೆಂಡತಿ ಶ್ರೀಮತಿ ವಿನಯಾ ಕೋಂ. ಅಭಿಷೇಕ ನಾಯ್ಕ ಇವರಿಗೆ ಉದ್ದೇಶಿಸಿ ‘ಬೋಸಡಿ ರಂಡೆ, ಬೇವರ್ಸಿ, ನೀನು ನನ್ನ ಬಿಟ್ಟು ಬೇರೆ ಊರಿನವನಿಗೆ ಮದುವೆಯಾಗಿದ್ದೀಯಾ?’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ‘ನೀನು ನಿನ್ನ ಗಂಡನನ್ನು ಬಿಟ್ಟು ನನ್ನ ಜೊತೆಗೆ ಬಾ. ಇಲ್ಲದಿದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ. ಕೊಂದು ಹಾಕುತ್ತೇನೆ’ ಅಂತಾ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಎಚ್. ವಿ. ಅಭಿಷೇಕ ತಂದೆ ವಿಠ್ಠಲ ನಾಯ್ಕ, ಪ್ರಾಯ–26 ವರ್ಷ, ವೃತ್ತಿ-ಬಿಸಿನೆಸ್, ಸಾ|| ಗ್ರಾಮ ಪಂಚಾಯತ ಹತ್ತಿರ, ಹಳದೀಪುರ, ತಾ: ಹೊನ್ನಾವರ ರವರು ದಿನಾಂಕ: 15-06-2021 ರಂದು 01-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 90/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಜನಾರ್ಧನ ತಂದೆ ಗೋಪಾಲ ನಾಯ್ಕ, ಸಾ|| ಮಂಕಿ, ಕೊಕ್ಕೇಶ್ವರ ದೇವಸ್ಥಾನದ ಹತ್ತಿರ, ತಾ: ಹೊನ್ನಾವರ (ಕಾರ್ ನಂ: ಕೆ.ಎ-47/ಎಮ್-5889 ನೇದರ ಚಾಲಕ). ಈತನು ದಿನಾಂಕ: 14-06-2021 ರಂದು 20-00 ಗಂಟೆಗೆ ಇಡಗುಂಜಿಗೆ ಹೋಗುವ ರಸ್ತೆಯ ವಿನಾಯಕ ನಗರ ಕ್ರಾಸ್ ಹತ್ತಿರ ತಾನು ಚಲಾಯಿಸುತ್ತಿದ್ದ ಕಾರ್ ನಂ: ಕೆ.ಎ-47/ಎಮ್-5889 ನೇದನ್ನು ಇಡಗುಂಜಿ ಕಡೆಯಿಂದ ಇಡಗುಂಜಿ ಕ್ರಾಸ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದವನು, ರಸ್ತೆಯಲ್ಲಿರುವ ದನಗಳನ್ನು ತಪ್ಪಿಸಲು ವಾಹನವನ್ನು ರಸ್ತೆಯ ಬಲಬದಿಗೆ ತೆಗೆದುಕೊಳ್ಳಲು ಹೋಗಿ ರಸ್ತೆಯ ಬದಿಯಲ್ಲಿರುವ ಕಲ್ಲಿಗೆ ಡಿಕ್ಕಿ ಹೊಡೆದು ಕಾಲುವೆಯಲ್ಲಿ ವಾಹನವನ್ನು ಪಲ್ಟಿ ಪಡಿಸಿ, ವಾಹನದ ಬಂಪರ್, ಬೊನೆಟ್ ಹಾಗೂ ಬಾಡಿ ಭಾಗ ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಮಾಬ್ಲಾ ತಂದೆ ಗಣಪಯ್ಯ ಗೌಡ, ಪ್ರಾಯ-47 ವರ್ಷ, ವೃತ್ತಿ-ವ್ಯವಸಾಯ, ಸಾ|| ಹಕ್ಕಲಕೇರಿ, ಗುಣವಂತೆ, ತಾ: ಹೊನ್ನಾವರ ರವರು ದಿನಾಂಕ: 15-06-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 91/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗೋವಿಂದ ತಂದೆ ಅಮರಸಿಂಗ್, ಪ್ರಾಯ-26 ವರ್ಷ, ಸಾ|| ನಿಂದ್ರಾಖೆಡಿ, ಮಧ್ಯಪ್ರದೇಶ (ಟ್ಯಾಂಕರ್ ವಾಹನ ನಂ: ಎಮ್.ಪಿ-09/ಎಚ್.ಎಚ್-5647 ನೇದರ ಚಾಲಕ). ಈತನು ತನ್ನ ಟ್ಯಾಂಕರ್ ವಾಹನ ನಂ: ಎಮ್.ಪಿ-09/ಎಚ್.ಎಚ್-5647 ನೇದರಲ್ಲಿ ಮಂಗಳೂರಿನ ಅಡಾನಿ ವಿಲ್ಮಾರ್ ಕಂಪನಿಯಲ್ಲಿ ಆರ್.ಬಿ.ಡಿ ಫಾಲ್ಮ್ ಸ್ಟೇರಿನ್ ಆಯಿಲ್ ತುಂಬಿಕೊಂಡು ಮಧ್ಯಪ್ರದೇಶದ ಮಾಲನಪುರಗೆ ಹೋಗಲು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯಲ್ಲಿ ಬರುತ್ತಿದ್ದವನು, ದಿನಾಂಕ: 05-06-2021 ರಂದು 17-30 ಗಂಟೆಗೆ ತಾನು ಚಲಾಯಿಸುತ್ತಿದ್ದ ಟ್ಯಾಂಕರ್ ವಾಹನವನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು ಜಡ್ಡಿ ಕ್ರಾಸ್ ಸಮೀಪ ರಸ್ತೆಯ ತಿರುವಿನಲ್ಲಿ ವಾಹನದ ಮೇಲಿನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯಲ್ಲಿರುವ ಮಳೆ ನೀರು ಹರಿದು ಹೋಗುತ್ತಿರುವ ಕಾಲುವೆಯ ಮೇಲೆ ಪಲ್ಟಿ ಪಡಿಸಿ, ಟ್ಯಾಂಕರ್ ವಾಹನ ಜಖಂ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಲೋಕಪಾಲಸಿಂಗ್ ತಂದೆ ಮೋಹನಸಿಂಗ್, ಪ್ರಾಯ-42 ವರ್ಷ, ವೃತ್ತಿ-ಟ್ರಾನ್ಸಪೋರ್ಟಿನಲ್ಲಿ ಕೆಲಸ, ಸಾ|| ಪಾನಾ, ಧಾರ, ಖಿಲೆದಿ, ಮಧ್ಯಪ್ರದೇಶ ರವರು ದಿನಾಂಕ: 15-06-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 83/2021, ಕಲಂ: 4, 5, 7, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಹಾಗೂ ಕಲಂ: 192 ಎಮ್.ವಿ ಎಕ್ಟ್ ಮತ್ತು ಕಲಂ: 429 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮೌಲಾಲಿ ತಂದೆ ಭಾಷಾಸಾಬ್ ತೋಟದ್, ಪ್ರಾಯ-30 ವರ್ಷ, ವೃತ್ತಿ-ಚಾಲಕ, ಸಾ|| ಕಲ್ಗುದ್ರ, ತಾ: ಹಾನಗಲ್, ಜಿ: ಹಾವೇರಿ, 2]. ಜಿಲಾನಿ ತಂದೆ ಗೌಸ್ ಮೊಹಿದ್ದಿನ್ ಅತ್ತಾರ್, ಪ್ರಾಯ-32 ವರ್ಷ, ವೃತ್ತಿ-ಚಾಲಕ, ಸಾ|| ಬೆಳಗಾಲ್ ಪೇಟೆ, ತಾ: ಹಾನಗಲ್, ಜಿ: ಹಾವೇರಿ, 3]. ಮುಜಾಪರ್, ಸಾ|| ಭಟ್ಕಳ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ಹಾಗೂ 2 ನೇಯವರುಗಳು ಭಟ್ಕಳದ ಆರೋಪಿ 3 ನೇಯವನ ಸಹಯೋಗದೊಂದಿಗೆ ಎಲ್ಲಯೂ ಜಾನುವಾರುಗಳನ್ನು ವಧೆ ಮಾಡಿ ಸುಮಾರು 1,00,000/- ರೂಪಾಯಿ ಮೌಲ್ಯದ ಸುಮಾರು 500 ಕೆ.ಜಿ ಆಗುವಷ್ಟು ಮೌಂಸವನ್ನು ಟಾಟಾ XENON ವಾಹನ ನಂ: ಕೆ.ಎ-25/ಎ.ಎ-9658 ನೇದರಲ್ಲಿ ತುಂಬಿ ಮಾರಾಟ ಮಾಡುವ ಉದ್ದೇಶದಿಂದ ವಾಹನದಲ್ಲಿ ಸಕ್ಷಮ ಪ್ರಾಧಿಕಾರದಿಂದ ಸಾಗಾಟ ಮಾಡಲು ಪರವಾನಿಗೆ ಪಡೆಯದೇ ವಾಹನದಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದಾಗ ದಿನಾಂಕ: 15-06-2021 ರಂದು ಬೆಳಿಗ್ಗೆ 06-30 ಗಂಟೆಯ ಸಮಯಕ್ಕೆ ವಾಹನ ಹಾಗೂ ದನದ ಮೌಂಸದ ಸಮೇತ ಶಿರಾಲಿ ಚೆಕಪೋಸ್ಟಿನಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ (ಕಾ&ಸು), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 15-06-2021 ರಂದು 09-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 61/2021, ಕಲಂ: 332, 353, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮುದಕಪ್ಪ ತಂದೆ ಕರೆಪ್ಪ ಡೊಳ್ಳಿನ್, ಪ್ರಾಯ-34 ವರ್ಷ, ಸಾ|| ಹಳೇ ದಾಂಡೇಲಿ, ದಾಂಡೇಲಿ. ಈತನು ದಾಂಡೇಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೇಶಪಾಂಡೆ ನಗರದ ಕೆ.ಎಸ್.ಆರ್.ಟಿ.ಸಿ ಘಟಕದ ಹತ್ತಿರ ದಿನಾಂಕ: 14-06-2021 ರಂದು 20-15 ಗಂಟೆಯ ಸುಮಾರಿಗೆ ಪಿರ್ಯಾದಿಯು ಕೆ.ಎಸ್.ಆರ್.ಟಿ.ಸಿ ಭದ್ರತಾ ಘಟಕದಲ್ಲಿ ತನ್ನ ಸರ್ಕಾರಿ ಕರ್ತವ್ಯವನ್ನು ನಿರ್ವಹಿಸುತ್ತಾ ಇರುವಾಗ ಆರೋಪಿತನು ಸರಾಯಿ ಕುಡಿದುಕೊಂಡು ಬಂದು ‘ನಾನು ಸಾಹೇಬರಿಗೆ ಭೇಟಿ ಆಗಬೇಕು’ ಅಂತಾ ಜೋರಾಗಿ ಕೂಗಾಡುತ್ತಾ ಇರುವಾಗ ಪಿರ್ಯಾದಿಯು ‘ಸರಾಯಿ ಕುಡಿದವರಿಗೆ ಒಳಗೆ ಬಿಡುವುದಿಲ್ಲ. ನೀನು ಮನೆಗೆ ಹೋಗು. ನಾಳೆ ಬಂದು ಸಾಹೇಬರನ್ನು ಭೇಟಿ ಆಗು’ ಅಂತಾ ಹೇಳಿದಕ್ಕೆ ಆರೋಪಿತನು ಏಕಾಏಕಿ ಪಿರ್ಯಾದಿಯ ಹತ್ತಿರ ಬಂದು ‘ಹಡಸಿ ಮಗನಾ, ಯಾವ ಆಫೀಸ್ ರ ಏನೂ ಮಾಡುತ್ತಾರೆ. ನಾನು ನೋಡುತ್ತೇನೆ. ನೀನು ನನಗೆ ಒಳಗೆ ಬಿಡು’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಪಿರ್ಯಾದಿಯ ಎದೆಯ ಮೇಲಿನ ಶರ್ಟ್ ಅನ್ನು ಹಿಡಿದು ಕೈಯಿಂದ ಪಿರ್ಯಾದಿಯ ಮುಖಕ್ಕೆ ಹೊಡೆದಾಗ, ಅದಕ್ಕೆ ಪಿರ್ಯಾದಿಯು ‘ನೀನು ಸರಾಯಿ ಕುಡಿದುಕೊಂಡು ಬಂದಿದ್ದೀಯಾ. ನಿನಗೆ ಒಳಗೆ ಬಿಡುವುದಿಲ್ಲ’ ಅಂತಾ ಹೇಳಿದ್ದಕ್ಕೆ ಆರೋಪಿತನು ತನ್ನ ಸೊಂಟದಲ್ಲಿರುವ ತನ್ನ ಬೆಲ್ಟ್ ಅನ್ನು ತೆಗೆದು ಪಿರ್ಯಾದಿಯ ಬೆನ್ನಿಗೆ, ಎಡಗೈಗೆ ಹೊಡೆದು ರಕ್ತಗಾಯ ಪಡಿಸಿದ್ದಲ್ಲದೇ, ‘ಬೋಸಡಿಕೆ, ನೀನು ಇವತ್ತು ಉಳಿದುಕೊಂಡೆ. ನಿನ್ನನ್ನು ಕೊಂದೆ ಬಿಡುತ್ತೇನೆ’ ಅಂತಾ ಜೀವದ ಬೆದರಿಕೆ ಹಾಕಿ ಪಿರ್ಯಾದಿಯು ತನ್ನ ಸರ್ಕಾರಿ ಕರ್ತವ್ಯ ನಿರ್ವಹಿಸದಂತೆ ಅಡ್ಡಿ ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶಿವಾನಂದ ತಂದೆ ಪ್ರಹ್ಲಾದ ಪತ್ತಾರ, ಪ್ರಾಯ-45 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ.ಸಿ ಯಲ್ಲಿ ಸೆಕ್ಯೂರಿಟಿ ಕೆಲಸ, ಸಾ|| ಗುಲಗಂಜಿಕೊಪ್ಪ, ಧಾರವಾಡ ರವರು ದಿನಾಂಕ: 15-06-2021 ರಂದು 11-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 79/2021, ಕಲಂ: 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪರಶುರಾಮ ತಂದೆ ಕೇದಾರಪ್ಪಾ ಪುರದವರ, ಸಾ|| ಉಗ್ಗಿನಕೇರಿ, ತಾ: ಮುಂಡಗೋಡ. ಈತನು ತನ್ನ ಕಬ್ಬಿನ ಹೊಲದ ಬೇಲಿಗೆ ವಿದ್ಯುತ್ ಹರಿಸಿದ್ದಲ್ಲಿ ಪ್ರಾಣಿಗಳು ಹಾಗೂ ಮನುಷ್ಯರು ಬೇಲಿಯನ್ನು ಮುಟ್ಟಿದರೆ ಪ್ರಾಣಾಪಾಯ ಆಗುತ್ತದೆ ಎನ್ನುವ ಬಗ್ಗೆ ತಿಳಿದಿದ್ದರೂ ಸಹ ನಿರ್ಲಕ್ಷತನದಿಂದ ತಮ್ಮ ಕಬ್ಬಿನ ಹೊಲಕ್ಕೆ ಅಳವಡಿಸಿದ ತಂತಿಗೆ ಬೋರಿನ ಮೀಟರ್ ಬೋರ್ಡಿನಿಂದ ವಿದ್ಯುತ್ ತಂತಿ ಜೋಡಿಸಿದ್ದು, ದಿನಾಂಕ: 15-06-2021 ರಂದು ಬೆಳಗ್ಗಿನ ಜಾವ 02-30 ಗಂಟೆಗೆ ಆ ತಂತಿ ತಾಗಿದ್ದರಿಂದಲೇ ಪಿರ್ಯಾದಿಯ ಗಂಡನಾದ ಪ್ರದೀಪ ಸಿದ್ದಿ ಇವರ ಮರಣವಾಗಿದ್ದು ಇರುತ್ತದೆ. ಪಿರ್ಯಾದಿಯ ಗಂಡ ಪ್ರದೀಪ ಸಿದ್ದಿ ಇವರ ಮೃತದೇಹವು ನಂದಿಕಟ್ಟಾ ಗ್ರಾಮದ ಪರಶುರಾಮ ಪುರದವರ ಇವರ ಕಬ್ಬಿನ ಹೊಲದಲ್ಲಿಯೇ ಇರುತ್ತದೆ. ಈ ಕುರಿತು ಮುಂದಿನ ಕಾನೂನಿನ ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ದೀಪಾ ಕೋಂ. ಪ್ರದೀಪ ಸಿದ್ದಿ, ಪ್ರಾಯ-32 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಉಗ್ಗಿನಕೇರಿ, ತಾ: ಮುಂಡಗೋಡ ರವರು ದಿನಾಂಕ: 15-06-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 116/2021, ಕಲಂ: 143, 147, 427, 447, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗೋಪಾಲ ತಂದೆ ಕೃಷ್ಣ ರಾಠೋಡ್, ಸಾ|| ಭಾಗ್ವತಿ, ತಾ: ಹಳಿಯಾಳ. ಈ ನಮೂದಿತ ಆರೋಪಿತನ ಮನೆಯು ಪಿರ್ಯಾದಿಯ ಮನೆಯ ಪಕ್ಕದಲ್ಲಿಯೇ ಇದ್ದು, ಆರೋಪಿತನು ಜಾಗದ ವಿಷಯದಲ್ಲಿ ಪಿರ್ಯಾದಿಯವರೊಂದಿಗೆ ತಂಟೆ ತಕರಾರು ಮಾಡುತ್ತಾ ಬಂದವರಿರುತ್ತಾರೆ. ನಮೂದಿತ ಆರೋಪಿತನು ದಿನಾಂಕ: 13-06-2021 ರಂದು ಮಧ್ಯಾಹ್ನ 02-30 ಗಂಟೆಯ ಸುಮಾರಿಗೆ ಪಿರ್ಯಾದಿಯ ಹಿತ್ತಲಿನ ಕಂಪೌಂಡ್ ಒಡೆದು ಹಾಕಿ, ಸುಮಾರು 80,000/- ರೂಪಾಯಿಯಷ್ಟು ಲುಕ್ಸಾನ್ ಪಡಿಸಿದ್ದಲ್ಲದೇ, ಹಿತ್ತಲು ಜಾಗದಲ್ಲಿ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿಗೆ ಮತ್ತು ಪಿರ್ಯಾದಿಯ ತಾಯಿಗೆ ಅವಾಚ್ಯವಾಗಿ ಬೈಯ್ದು, ಪಿರ್ಯಾದಿ ಮತ್ತು ಪಿರ್ಯಾದಿಯ ಮನೆಯ ಜನರಿಗೆ ಕೊಲೆ ಮಾಡುತ್ತೇನೆಂದು ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ಯಶೋಧಾ ಕೋಂ. ಚಂದ್ರು ರಾವ್, ಪ್ರಾಯ-45 ವರ್ಷ, ವೃತ್ತಿ-ಗೃಹಿಣಿ, ಸಾ|| ಭಾಗ್ವತಿ, ತಾ: ಹಳಿಯಾಳ ರವರು ದಿನಾಂಕ: 15-06-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 72/2021, ಕಲಂ: 324, 504 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನವೀನ ತಂದೆ ಜಯಶೀಲ ಮಡಿವಾಳ, ಪ್ರಾಯ-27 ವರ್ಷ, ವೃತ್ತಿ-ಕೃಷಿ/ಕೂಲಿ ಕೆಲಸ, ಸಾ|| ವಡಗೇರಿ, ಕಾನಗೋಡ ಗ್ರಾಮ, ತಾ: ಸಿದ್ದಾಪುರ. ಈತನು ಪಿರ್ಯಾದಿಯ ಮಗನಿದ್ದು, ಹುಂಬ ಸ್ವಭಾವದವನಿದ್ದು, ಮನೆಯಲ್ಲಿ ಖರ್ಚಿಗೆ ಹಣವನ್ನು ಕೊಡುತ್ತಿರಲಿಲ್ಲ. ಅಲ್ಲದೇ ಸರಾಯಿ ಕುಡಿಯುವ ಚಟದವನಿರುತ್ತಾನೆ. ಪೋನಿನಲ್ಲಿ ತುಂಬಾ ಹೊತ್ತು ಮಾತನಾಡುತ್ತಿದ್ದನು. ಹೀಗಿರುವಲ್ಲಿ ದಿನಾಂಕ: 15-06-2021 ರಂದು 19-30 ಗಂಟೆಗೆ ಪುನಃ ಪೋನಿನಲ್ಲಿ ತುಂಬಾ ಹೊತ್ತು ಮಾತನಾಡುತ್ತಾ ಇದ್ದುದ್ದರಿಂದ ಪಿರ್ಯಾದಿಯು ‘ಪೋನಿನಲ್ಲಿ ಯಾಕೆ ಈ ರೀತಿ ತುಂಬಾ ಹೊತ್ತು ಮಾತನಾಡುತ್ತೀ? ದುಡಿದ ಹಣವನ್ನು ಯಾಕೆ ಸರಿಯಾಗಿ ಮನೆಗೆ ಕೊಡುವುದಿಲ್ಲ?’ ಅಂತಾ ಕೇಳಿದಾಗ ಪಿರ್ಯಾದಿಯೊಂದಿಗೆ ಮಾತಿಗೆ ಮಾತಾಗಿ, ಪಿರ್ಯಾದಿಯನ್ನು ಉದ್ದೇಶಿಸಿ ‘ಬೋಸಡಿ ಮಗನೇ, ನೀ ಏನು ಶೆಂಟಾ ಕೇಳುತ್ತಿ?’ ಅಂತಾ ಅವಾಚ್ಯವಾಗಿ ಬೈಯ್ದವನೇ, ಮನೆಯ ಹಿತ್ತಲಿನಲ್ಲಿ ಇದ್ದ ಕತ್ತಿಯನ್ನು ತೆಗೆದುಕೊಂಡು ಏಕಾಏಕಿ ಪಿರ್ಯಾದಿಯ ಮುಂಬದಿಯ ತಲೆಗೆ ಹೊಡೆದು, ತದನಂತರ ಪಿರ್ಯಾದಿಯು ಕೆಳಗೆ ಬಿದ್ಧಾಗ ಅವನ ಮೈ ಮೇಲೆ ಏರಿ ಹೋಗಿದ್ದು, ಆಗ ಪಿರ್ಯಾದಿಯ 2 ನೇ ಮಗ ಅರುಣ ಹಾಗೂ ಪಿರ್ಯಾದಿಯ ಹೆಂಡತಿ ಸೇರಿ ಬಿಡಿಸಿಕೊಂಡಿರುತ್ತಾರೆ. ತದನಂತರ ಪರಿಚಯದ ಶ್ರೀಕಾಂತ ಮಡಿವಾಳ ಈತನ ಓಮಿನಿ ವಾಹನದ ಮೇಲೆ ಸಿದ್ದಾಪುರದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ ಬಗ್ಗೆ ಪಿರ್ಯಾದಿ ಶ್ರೀ ಜಯಶೀಲ ತಂದೆ ರಾಮಾ ಮಡಿವಾಳ, ಪ್ರಾಯ-52 ವರ್ಷ, ವೃತ್ತಿ-ಕೃಷಿ/ಕೂಲಿ ಕೆಲಸ, ಸಾ|| ವಡಗೇರಿ, ಕಾನಗೋಡ ಗ್ರಾಮ, ತಾ: ಸಿದ್ದಾಪುರ ರವರು ದಿನಾಂಕ: 15-06-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 15-06-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 31/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಅಶೋಕ ತಂದೆ ಸೋಮಾ ಗೌಡ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಮತ್ತು ರೈತಾಬಿ ಕೆಲಸ, ಸಾ|| ಮುದ್ರಾಣಿ, ಬೆಳಂಬಾರ, ತಾ: ಅಂಕೋಲಾ. ಈತನು ದಿನಾಂಕ: 15-06-2021 ರಂದು ಬೆಳಿಗ್ಗೆ 09-15 ಗಂಟೆಗೆ ಅಂಕೋಲಾ ತಾಲೂಕಿನ ಕುಂಬಾರಕೇರಿಯಲ್ಲಿ ಮಾವಿನ ಮರವನ್ನು ಹತ್ತಿ ಮಾವಿನ ಕಾಯಿಯನ್ನು ಕೊಯ್ಯುತ್ತಿರಬೇಕಾದರೆ ಆಕಸ್ಮಿಕವಾಗಿ ಕಾಲು ಜಾರಿ ಮರದ ಮೇಲಿನಿಂದ ಬಿದ್ದು ಗಂಭೀರ ಗಾಯಗೊಂಡವನಿಗೆ ಉಪಚಾರದ ಕುರಿತು ಅಂಕೋಲಾದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿಂದ ಜಿಲ್ಲಾ ಆಸ್ಪತ್ರೆ ಕಾರವಾರಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಮಂಗಳೂರಿಗೆ ಕರೆದುಕೊಂಡು ಹೋಗುತ್ತಿರಬೇಕಾದರೆ ತಾವು ಅಂಕೋಲಾ ಹತ್ತಿರ ತಲುಪಿದಾಗ ಆತನು ಮೃತಪಟ್ಟಿರುವ ಬಗ್ಗೆ ತಮಗೆ ಅನುಮಾನ ಬಂದಿದ್ದರಿಂದ ತಾವು ಅಂಕೋಲಾದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಆಸ್ಪತ್ರೆಯಲ್ಲಿ ಆತನನನ್ನು ಪರೀಕ್ಷಿಸಿದ ವೈದ್ಯರು ಸಾಯಂಕಾಲ 07-15 ಗಂಟೆಗೆ ಮೃತಪಟ್ಟ ಬಗ್ಗೆ ತಿಳಿಸಿರುತ್ತಾರೆ. ಮೃತದೇಹವು ಅಂಕೋಲಾದ ಸರಕಾರಿ ಆಸ್ಪತ್ರೆಯಲ್ಲಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮವನ್ನು ಕೈಗೊಳಬೇಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಚಾಕು ತಂದೆ ಸೋಮಾ ಗೌಡ, ಪ್ರಾಯ-57 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ಮುದ್ರಾಣಿ, ಬೆಳಂಬಾರ, ತಾ: ಅಂಕೋಲಾ ರವರು ದಿನಾಂಕ: 15-06-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 17/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಮಂಜುನಾಥ ತಂದೆ ಗಣಪ ಗೌಡ, ಪ್ರಾಯ-60 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹುಣಸೆಕೊಪ್ಪ ಪೋಸ್ಟ್, ತಾ: ಶಿರಸಿ. ಪಿರ್ಯಾದಿಯ ತಂದೆಯಾದ ಇವರು ದಿನಾಂಕ: 15-06-2021 ರಂದು ಪ್ರಕೃತಿ ವಿಕೋಪದಿಂದ ಮಳೆ ಹೆಚ್ಚಾಗಿ ತಮ್ಮ ತೋಟದ ಪಕ್ಕದಲ್ಲಿರುವ ಕಾಲುವೆಯ ನೀರು ಹೆಚ್ಚಾಗಿ, ತಮ್ಮ ತೋಟದೊಳಗೆ ನೀರು ಬಂದು ತೋಟದಲ್ಲಿರುವ ಮಣ್ಣು ಕೊಚ್ಚಿ ಅಡಿಕೆ ಮರಗಳು ಬಿದ್ದು ಹಾಳಾಗಬಹುದೆಂದು ಕಾಲುವೆಯಿಂದ ನೀರು ಸರಳವಾಗಿ ಹರಿಯಲು ಕಾಲುವೆಯ ಮಣ್ಣನ್ನು ಪಿಕಾಶಿಯಿಂದ ತೆಗೆಯುತ್ತಿರುವಾಗ, ಏಕಾಏಕಿಯಾಗಿ ಧರೆಯ ಮಣ್ಣು ಮೇಲಿಂದ ಕುಸಿದು ಪಿರ್ಯಾದಿಯವರ ತಂದೆಯವರ ಮೈಮೇಲೆ ಬಿದ್ದು ಮೇಲೆ ಏಳಲಾಗದೇ, ಸಮಯ 13-30 ಗಂಟೆಯಿಂದ 14-45 ಗಂಟೆಯ ನಡುವಿನ ಅವಧಿಯಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ದರ ಹೊರತು ತನ್ನ ತಂದೆಯವರ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಣೇಶಮೂರ್ತಿ ತಂದೆ ಮಂಜುನಾಥ ಗೌಡ, ಪ್ರಾಯ-30 ವರ್ಷ, ವೃತ್ತಿ-ಕೃಷಿ ವ ಖಾಸಗಿ ಕೆಲಸ, ಸಾ|| ಹುಣಸೆಕೊಪ್ಪ ಪೋಸ್ಟ್, ತಾ: ಶಿರಸಿ ರವರು ದಿನಾಂಕ: 15-06-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 16-06-2021 01:18 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080