ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 15-03-2021

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 06/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿನಯಕುಮಾರ ತಂದೆ ಶಂಕರೇಗೌಡ ಸಿ. ಎಸ್, ಪ್ರಾಯ-26 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕಲ್ಯಾಣನಗರ, ತಾ: ಚಿಕ್ಕಕುರುಬರಹಳ್ಳಿ, ಜಿ: ಚಿಕ್ಕಮಗಳೂರು (ಓಮಿನಿ ಕಾರ ನಂ: ಕೆ.ಎ-18/ಎನ್-5444 ನೇದರ ಚಾಲಕ). ದಿನಾಂಕ: 15-03-2021 ರಂದು ಬೆಳಿಗ್ಗೆ 07-00 ಗಂಟೆಯಲ್ಲಿ ಪಿರ್ಯಾದಿಯು ತನ್ನ ಟಿಪ್ಪರ್ ಲಾರಿಯನ್ನು ಪಣಜಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮುಖಾಂತರ ಅಂಕೋಲಾ ಕಡೆಯಿಂದ ಕಾರವಾರ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ಕಾರವಾರ ಬಿಣಗಾದ ‘ಲಕ್ಷ್ಮೀ ಫುಡ್ ಕಾರ್ನರ್’ ಹೊಟೇಲ್ ಹತ್ತಿರ ಪಿರ್ಯಾದಿಯ ಟಿಪ್ಪರ್ ಲಾರಿಯ ಮುಂದಿನಿಂದ ಕಾರವಾರ ಕಡೆಗೆ ಹೋಗುತ್ತಿದ್ದ ಓಮಿನಿ ಕಾರ್ ನಂ: ಕೆ.ಎ-18/ಎನ್-5444 ನೇದರ ಆರೋಪಿ ಚಾಲಕನು ತನ್ನ ಓಮಿನಿ ಕಾರನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ತನ್ನ ಓಮಿನಿ ಕಾರಿನ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ಪಕ್ಕದಲ್ಲಿ ನಿಂತುಕೊಂಡಿದ್ದ ಬೀಡಾಡಿ ಆಕಳಿಗೆ ತನ್ನ ಕಾರಿನ ಮುಂದಿನ ಎಡಭಾಗದಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹೇಶ್ವರಪ್ಪ ತಂದೆ ವೀರಪ್ಪ ಇವರಿಗೆ ಎಡಗಾಲಿನ ಮೊಣಕಾಲಿನ ಕೆಳಗೆ ಮೂಳೆ ಮುರಿತವಾಗಿ ಭಾರೀ ಗಾಯ ಹಾಗೂ ಬಲಗಾಲಿನ ಹೆಬ್ಬೆರಳಿಗೆ ತೆರಚಿದ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ರಮೇಶ ತಂದೆ ಥಾಕು ನಾಯ್ಕ, ಪ್ರಾಯ-62 ವರ್ಷ, ವೃತ್ತಿ-ಚಾಲಕ, ಸಾ|| ಅವರ್ಸಾ, ತಾ: ಅಂಕೋಲಾ ರವರು ದಿನಾಂಕ: 15-03-2021 ರಂದು 10-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 23/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ರವೀಂದ್ರ ತಂದೆ ಜಯವಂತ ಗಾಂವಕರ, ಪ್ರಾಯ-42 ವರ್ಷ, ಸಾ|| ಹೌಸ್ ನಂ: 1398, ತಾನ್ಸೆಂ, ಲೊಲೆಂ, ಕಾಣಕೋಣ, ಗೋವಾ. ಪಿರ್ಯಾದಿಯ ತಮ್ಮನಾದ ಈತನು ದಿನಾಂಕ: 14-03-2021 ರಂದು ಮಧ್ಯಾಹ್ನ 14-00 ಘಂಟೆಯಿಂದ ದಿನಾಂಕ: 15-03-2021 ರಂದು 18-00 ಘಂಟೆಯ ನಡುವಿನ ಅವಧಿಯಲ್ಲಿ ತನ್ನ ಸ್ನೇಹಿತರಾದ ದೀಲಿಪ, ಸಜ್ಜನ, ನಿಲೇಶ, ಶೈಲೇಶ, ಸದಾನಂದ, ಧನಂಜಯರವರೊಂದಿಗೆ ಮಾಜಾಳಿಯ ನಚಕಿನಭಾಗದ ಹತ್ತಿರ ಇರುವ ನಡುಗುಡ್ಡೆ (ದ್ವೀಪದಲ್ಲಿ) ಗಾಳ ಹಾಕಿ ಮೀನು ಹಿಡಿಯಲು ಹೋದವನು, ಎಲ್ಲಿಯೋ ಹೋಗಿ ಅಥವಾ ಸಮುದ್ರದ ನೀರಿನಲ್ಲಿ ಬಿದ್ದು ಕಾಣೆಯಾದ ಬಗ್ಗೆ ದಿಲೀಪ ಈತನು ತಿಳಿಸಿದ ನಂತರ ಎಲ್ಲಾ ಕಡೆ ಹುಡುಕಾಡಿದ್ದು ಹಾಗೂ ಸಂಬಂಧಿಕರ ಮನೆ ಮತ್ತು ಸ್ನೇಹಿರ ಹತ್ತಿರ ವಿಚಾರಿಸಿದರೂ ಪತ್ತೆಯಾದೇ ಇರುವ ಬಗ್ಗೆ ಪಿರ್ಯಾದಿ ಶ್ರೀ ಯಾದವ @ ಸುರೇಶ ತಂದೆ ಜಯವಂತ ಗಾಂವಕರ, ಪ್ರಾಯ-47 ವರ್ಷ, ವೃತ್ತಿ-ಗೋವಾದಲ್ಲಿ ಇಲೆಕ್ಟ್ರಿಕಲ್ ಡಿಪಾರ್ಟಮೆಂಟನಲ್ಲಿ ಲೈನ್ ಹೆಲ್ಪರ್, ಸಾ|| ಹೌಸ್ ನಂ: 1398, ತಾನ್ಸೆಂ, ಲೊಲೆಂ, ಕಾಣಕೋಣ, ಗೋವಾ ರವರು ದಿನಾಂಕ: 15-03-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 50/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಹೊನ್ನಪ್ಪಾ ತಂದೆ ಠಕ್ಕು ಹರಿಕಂತ್ರ, ಪ್ರಾಯ-60 ವರ್ಷ, ಸಾ|| ಮಕ್ಕಿಗದ್ದೆ, ಕಿಮಾನಿ, ತಾ: ಕುಮಟಾ, 2]. ಮೋಹನ ತಂದೆ ಕಾಮು ಹರಿಕಂತ್ರ, ಪ್ರಾಯ-36 ವರ್ಷ, ಸಾ|| ಕಿಮಾನಿ, ತಾ: ಕುಮಟಾ, 3]. ನಿತ್ಯಾನಂದ ತಂದೆ ಮಾರಿ ಹರಿಕಂತ್ರ, ಪ್ರಾಯ-38 ವರ್ಷ, ಸಾ|| ಗುಡಕಾಗಲ, ತಾ: ಕುಮಟಾ, 4]. ಮಾರಿ ತಂದೆ ಮಾಸ್ತಿ ಹರಿಕಂತ್ರ, ಪ್ರಾಯ-62 ವರ್ಷ, ಸಾ|| ಗುಡಕಾಗಲ, ತಾ: ಕುಮಟಾ. ಈ ನಮೂದಿತ ಆರೋಪಿತರು ದಿನಾಂಕ: 14-03-2021 ರಂದು 16-00 ಗಂಟೆಗೆ ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಿಮಾನಿಯ ಘಜ್ನಿ ಹತ್ತಿರ ಗದ್ದೆ ಬಯಲಿನ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ ಹಣವನ್ನು ಕೋಳಿ ಹುಂಜಗಳ ಮೇಲೆ ಪಂಥವಾಗಿ ಕಟ್ಟಿ ಕೋಳಿ ಅಂಕ ಜುಗಾರಾಟ ನಡೆಸುತ್ತಿದ್ದಾಗ 1). ನಗದು ಹಣ 3,220/- ರೂಪಾಯಿ, 2). ಕೋಳಿ ಹುಂಜಗಳು-2, ಅ||ಕಿ|| 1,000/- ರೂಪಾಯಿ, 3). ಕೋಳಿ ಕತ್ತಿ-2, ಅ||ಕಿ|| 00.00/- ರೂಪಾಯಿಗಳೊಂದಿಗೆ 4 ಜನ ಆರೋಪಿತರು ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವಿ ಗುಡ್ಡಿ ಪಿ.ಎಸ್.ಐ (ಕಾ&ಸು-2), ಕುಮಟಾ ಪೋಲಿಸ್ ಠಾಣೆ ರವರು ದಿನಾಂಕ: 15-03-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 76/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ಕೆ. ಎನ್, ಸಾ|| ತೀರ್ಥಹಳ್ಳಿ, ಶಿವಮೊಗ್ಗ (ಕಾರ್ ನಂ: ಜಿ.ಎ-08/ಎಮ್-7682 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 15-03-2021 ರಂದು 20-00 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಹೊನ್ನಾವರದ ಕಾಸರಕೋಡ ಇಕೋ ಬೀಚ್ ಕ್ರಾಸ್ ಹತ್ತಿರ ತನ್ನ ಬಾಬ್ತು ಕಾರ್ ನಂ: ಜಿ.ಎ-08/ಎಮ್-7682 ನೇದನ್ನು ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಬಂದು, ನಿಷ್ಕಾಳಜಿತನದಿಂದ ಕಾರಿನ ವೇಗವನ್ನು ನಿಯಂತ್ರಿಸದೇ ಪಿರ್ಯಾದಿಯ ಪರಿಚಯದ ಅಣ್ಣಪ್ಪ ತಂದೆ ಗಂಗಾಧರ ತಾಂಡೇಲ್, ಪ್ರಾಯ-40 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ರಾಮನಗರ, ಟೊಂಕಾ, ತಾ: ಹೊನ್ನಾವರ ಈತನು ಹೊನ್ನಾವರ ಕಡೆಯಿಂದ ಮೋಟಾರ್ ಸೈಕಲ್ ನಂ: ಕೆ.ಎ-47/ಯು-3669 ನೇದನ್ನು ಚಲಾಯಿಸಿಕೊಂಡು ಬಂದು, ಇಕೋ ಬೀಚ್ ಕ್ರಾಸ್ ಹತ್ತಿರ ಇಂಡಿಕೇಟರ್ ಸಿಗ್ನಲ್ ಹಾಕಿ ರಸ್ತೆಯನ್ನು ಕ್ರಾಸ್ ಮಾಡುತ್ತಿದ್ದಾಗ ಮೋಟಾರ್ ಸೈಕಲಿಗೆ ಢಿಕ್ಕಿ ಮಾಡಿ ಅಪಘಾತ ಪಡಿಸಿ, ಮೋಟಾರ್ ಸೈಕಲ್ ನಂ: ಕೆ.ಎ-47/ಯು-3669 ನೇದರ ಸವಾರನಾದ ಅಣ್ಣಪ್ಪ ಗಂಗಾಧರ ತಾಂಡೇಲ್ ಈತನ ಎಡಗಾಲಿನ ಪಾದದ ಬಳಿ ರಕ್ತಗಾಯ, ತಲೆಯ ಬಲಭಾಗ, ಕಿವಿಯ ಮೇಲೆ ರಕ್ತಗಾಯ ಮತ್ತು ಮೈಮೇಲೆ ಅಲ್ಲಲ್ಲಿ ತೆರಚಿದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಹನುಮಂತ ತಂದೆ ಕೇಶವ ತಾಂಡೇಲ, ಪ್ರಾಯ-41 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ರಾಮನಗರ, ಟೊಂಕಾ, ಕಾಸರಕೋಡ, ತಾ: ಹೊನ್ನಾವರ ರವರು ದಿನಾಂಕ: 15-03-2021 ರಂದು 21-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 32/2021, ಕಲಂ: 323, 326, 504 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಲೋಹಿತ ತಂದೆ ವೆಂಕಟರಮಣ ಮೊಗೇರ, ಸಾ|| ಗೊರಟೆ, ತಾ: ಭಟ್ಕಳ. ನಮೂದಿತ ಆರೋಪಿತನು ಪಿರ್ಯಾದಿಯ ಮಾವನ ಮಗನಿದ್ದು, ಪಿರ್ಯಾದಿಗೆ ಹಾಗೂ ಆರೋಪಿತನಿಗೆ ಹಣದ ವಿಷಯದಲ್ಲಿ ಜಗಳವಾಗಿದ್ದು, ಅದೇ ದ್ವೇಷದಿಂದ ಇದ್ದ ಆರೋಪಿತನು ದಿನಾಂಕ: 12-03-2021 ರಂದು ರಾತ್ರಿ 22-30 ಗಂಟೆಯ ಸಮುಯಕ್ಕೆ ಪಿರ್ಯಾದಿಯು ತನ್ನ ಗೆಳಯರಾದ ದಿವಾಕರ ನಾಯ್ಕ ಮತ್ತು ಗಿರೀಶ ನಾಯ್ಕ ಇವರ ಸಂಗಡ ಗೊರಟೆ ಕ್ರಾಸ್ ಹತ್ತಿರ ನಾಗೇಶ ತಿಮ್ಮಯ್ಯಾ ನಾಯ್ಕ ಇವರ ಅಂಗಡಿಯ ಹತ್ತಿರ ಮಾತನಾಡುತ್ತಿರುವಾಗ ಆರೋಪಿತನು ಪಿರ್ಯಾದಿಯನ್ನು ನೋಡಿ ಕೈಯಲ್ಲಿ ಸ್ಟೀಲ್ ರಾಡ್ ಹಿಡಿದುಕೊಂಡು ಬಂದವನು ಪಿರ್ಯಾದಿಯನ್ನು ಉದ್ದೇಶಿಸಿ ‘ಏನೋ ಬಹಳ ಮಾತನಾಡುತ್ತೀಯಾ? ಈಗ ಮಾತನಾಡು’ ಅಂತಾ ಹೇಳಿ ಅವಾಚ್ಯ ಶಬ್ದಗಳಿಂದ ‘ಬೋಳಿ ಮಗನೆ, ಸೂಳಾ ಮಗನೆ’ ಅಂತಾ ಬೈಯ್ದು, ಪಿರ್ಯಾದಿಯ ಶರ್ಟಿನ ಕಾಲರ್ ಪಟ್ಟಿ ಹಿಡಿದು ಸ್ಟೀಲ್ ರಾಡಿನಿಂದ ಪಿರ್ಯಾದಿಯ ತಲೆಗೆ ಹೊಡೆದು ಗಂಭೀರ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ತಿರುಮಲ ತಂದೆ ಬೆರ್ಮಾ ಮೊಗೇರ, ಪ್ರಾಯ-30 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಗೊರಟೆ, ತಾ: ಭಟ್ಕಳ ರವರು ದಿನಾಂಕ: 15-03-2021 ರಂದು 02-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 33/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಣ್ಣಪ್ಪ ತಂದೆ ಕೋಟಿ ಗೊಂಡ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಣ್ಮನೆ, ಜಾಲಿ, ತಾ: ಭಟ್ಕಳ (ಮೋಟಾರ್ ಸೈಕಲ ನಂ: ಕೆ.ಎ-47/ಕ್ಯೂ-4579 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 14-03-2021 ರಂದು 19-15 ಗಂಟೆಯ ಸಮಯಕ್ಕೆ ತಾನು ಚಲಾಯಿಸಿಕೊಂಡು ಬಂದ ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-4579 ನೇದನ್ನು  ಶಿರಾಲಿ ಕಡೆಯಿಂದ ಭಟ್ಕಳ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಭಟ್ಕಳ-ಹೊನ್ನಾವರ ರಸ್ತೆಯಲ್ಲಿ ಶಿರಾಲಿಯ ಅತಿಥಿ ಬೃಂದಾವನ ಹೊಟೇಲ್ ಎದುರಿಗೆ ರಸ್ತೆ ದಾಟುತ್ತಿದ್ದ ಪಾದಚಾರಿ ಗೋಯ್ದಾ @ ಗೋವಿಂದ ತಂದೆ ಮಾಸ್ತಿ ದೇವಾಡಿಗ, ಪ್ರಾಯ-65 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶಸಿಹಿತ್ಲ ಮನೆ, ನೀರಕಂಠ, ವೆಂಕ್ಟಾಪುರ, ತಾ: ಭಟ್ಕಳ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಅವರ ಎಡಗಾಲಿಗೆ ಮತ್ತು ತಲೆಗೆ ಸಾದಾ ಸ್ವರೂಪದ ರಕ್ತಗಾಯ ಪಡಿಸಿ ಹಾಗೂ ಆರೋಪಿತನು ತನಗೂ ಸಹ ಗದ್ದದ ಭಾಗಕ್ಕೆ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಉಮೇಶ ತಂದೆ ಮಾದೇವ ದೇವಾಡಿಗ, ಪ್ರಾಯ-43 ವರ್ಷ, ವೃತ್ತಿ-ಗಾರೆ ಕೆಲಸ, ಸಾ|| ಶಸಿಹಿತ್ಲ ಮನೆ, ನೀರಕಂಠ, ವೆಂಕ್ಟಾಪುರ, ತಾ: ಭಟ್ಕಳ ರವರು ದಿನಾಂಕ: 15-03-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 34/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಶಿವಾನಂದ ತಂದೆ ಶಂಕರ ಗೊಂಡ, ಪ್ರಾಯ-21 ವರ್ಷ, ವೃತ್ತಿ-ಬೀಡಾ ಅಂಗಡಿ ವ್ಯಾಪಾರ, ಸಾ|| ಜೋಳದಮುಲ್ಲೆ, ಹಡೀಲ್, ಸಬ್ಬತ್ತಿ, ತಾ: ಭಟ್ಕಳ. ನಮೂದಿತ ಆರೋಪಿತನು ದಿನಾಂಕ: 15-03-2021 ರಂದು 13-00 ಗಂಟೆಯ ಸಮಯಕ್ಕೆ ಭಟ್ಕಳದ ಮಾವಿನಕುರ್ವಾ ಬಂದರ್ ಗೇಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ 01/- ರೂಪಾಯಿಗೆ 70/- ರೂಪಾಯಿ ಕೊಡುವ ಶರತ್ತಿನ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ ಓ.ಸಿ ಜುಗಾರಾಟ ನಡೆಸುತ್ತಿದ್ದಾಗ ಓ.ಸಿ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 1,500/- ರೂಪಾಯಿಯೊಂದಿಗೆ ಆರೋಪಿತನು ಸ್ಥಳದಲ್ಲಿ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಓಂಕಾರಪ್ಪ, ಪಿ.ಎಸ್.ಐ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 15-03-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 35/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸುರೇಶ ತಂದೆ ದುರ್ಗಾ ನಾಯ್ಕ, ಪ್ರಾಯ-25 ವರ್ಷ, ವೃತ್ತಿ-ಬೀಡಾ ಅಂಗಡಿ ವ್ಯಾಪಾರ, ಸಾ|| ಕಾರಗದ್ದೆ, ಗುಡಲಕ್ ರೋಡ, ತಾ: ಭಟ್ಕಳ. ನಮೂದಿತ ಆರೋಪಿತನು ದಿನಾಂಕ: 15-03-2021 ರಂದು 16-15 ಗಂಟೆಯ ಸಮಯಕ್ಕೆ ಭಟ್ಕಳದ ಮಾವಿನಕುರ್ವಾ ಬಂದರ್ ಗೇಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ 01/- ರೂಪಾಯಿಗೆ 70/- ರೂಪಾಯಿ ಕೊಡುವ ಶರತ್ತಿನ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ ಓ.ಸಿ ಜುಗಾರಾಟ ನಡೆಸುತ್ತಿದ್ದಾಗ ಓ.ಸಿ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 1,100/- ರೂಪಾಯಿಯೊಂದಿಗೆ ಆರೋಪಿತನು ಸ್ಥಳದಲ್ಲಿ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ ಶ್ರೀ ಎಚ್ ಓಂಕಾರಪ್ಪ ಪಿ.ಎಸ್.ಐ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 15-03-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 36/2021, ಕಲಂ: 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತೆ ನಾಗಮ್ಮಾ, ಪ್ರಾಯ-35 ರಿಂದ 40 ವರ್ಷ, ಸಾ|| ಹುಬ್ಬಳ್ಳಿ. ನಮೂದಿತೆ ಆರೋಪಿತಳು ಸುಮಾರು 35 ರಿಂದ 40 ವರ್ಷ ಪ್ರಾಯದ ನಾಗಮ್ಮಾ ಎಂಬ ಹೆಸರಿನವಳಾಗಿದ್ದು, ಆರೋಪಿತಳ ಪೂರ್ತಿ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಇವಳು ದಿನಾಂಕ: 01-03-2021 ರಂದು ಬೆಳಗ್ಗೆ 10-00 ಗಂಟೆಯ ಸುಮಾರಿಗೆ ನೀಲಿ ಬಣ್ಣದ ಸೀರೆಯನ್ನು ಉಟ್ಟುಕೊಂಡು ತಲೆಯ ಮೇಲೆ ಮುಸುಕು ಹಾಕಿ ಮುಖವನ್ನು ಕಾಣುವಂತೆ ಮಾಡಿಕೊಂಡು ಪಿರ್ಯಾದಿಯ ಮನೆಗೆ ಬಂದು ‘ಅಯ್ಯಪ್ಪ ಸ್ವಾಮಿಯ ಮಾಲೆಯನ್ನು ಹಾಕಿದ್ದೇನೆ. ಸುಳ್ಳು ಹೇಳುವುದಿಲ್ಲ. ನನಗೆ ಕುಡಿಯಲು ನೀರು ಕೊಡಿ’ ಅಂತಾ ಹೇಳಿ ಮನೆಯ ಒಳಗಡೆ ಬಂದು ಮನೆಯಲ್ಲಿ ಕುಳಿತುಕೊಂಡು ‘ನಿಮ್ಮ ಮನೆಯಲ್ಲಿ ಯಾರೋ ಜನರು ಮೋಡಿ ಮಂತ್ರ ಮಾಡಿದ್ದಾರೆ. ಇದರಿಂದ ನಿಮಗೆ ಬಹಳ ತೊಂದರೆ ಆಗುತ್ತದೆ. ನಾನು ಲಕ್ಷ್ಮೀ ಪೂಜೆಯನ್ನು ಮಾಡಿ ಮಾಟ ಮಂತ್ರವನ್ನು ತೆಗೆಯುತ್ತೇನೆ. ನಿಮ್ಮ ಮನೆಯಲ್ಲಿ ಈಗಾಗಲೇ ಒಂದು ಹೆಣ ಹೋಗಬೇಕಾಗಿತ್ತು ದೇವರ ಅನುಗ್ರಹದಿಂದ ಯಾವುದೇ ತೊಂದರೆ ಆಗಲಿಲ್ಲ. ಬರುವ ಅಮವಾಸ್ಯೆಯ ಒಳಗಡೆ 4 ಹೆಣ ಬೀಳುತ್ತದೆ. ಒಂದು ಲೀಟರ್ ದೀಪದ ಎಣ್ಣೆಯನ್ನು ತೆಗೆದುಕೊಂಡು ಬಾ’ ಅಂತಾ ಹೇಳಿದಾಗ ಪಿರ್ಯಾದಿಯು ದೀಪದ ಎಣ್ಣೆಯನ್ನು ಪ್ಲಾಸ್ಟಿಕ್ ಡಬ್ಬಿಯಲ್ಲಿ ತಂದು ಕೊಟ್ಟಾಗ ಎಣ್ಣೆಯಲ್ಲಿ ಬಿಳಿ ಪುಡಿಯನ್ನು ಹಾಕಿ ದೀಪ ಹಚ್ಚಲು ಹೇಳಿ ದೀಪ ಹಚ್ಚಿದಾಗ, ಮನೆಯಲ್ಲಿದ್ದ ಹಣ ಹಾಗೂ ಬಂಗಾರದ ಆಭರಣ ತಂದು ಕೊಡಲು ತಿಳಿಸಿದಂತೆ ಪಿರ್ಯಾದಿಯ ಅತ್ತೆ ಸುಕ್ರಿ ಇವಳ ಹಣ 14,101/- ರೂಪಾಯಿ ಹಾಗೂ ಸುಮಾರು 78 ಗ್ರಾಂ ತೂಕದ 3,12,000/- ರೂಪಾಯಿ ಮೌಲ್ಯದ ಬಂಗಾರದ ಆಭರಣ, 30 ಗ್ರಾಂ ತೂಕದ 1,800/- ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳನ್ನು ಕೊಟ್ಟಾಗ ತೆಗೆದುಕೊಂಡು ‘ಹುಬ್ಬಳ್ಳಿಗೆ ಹೋಗಿ ಲಕ್ಷ್ಮೀ ಪೂಜೆ ಮಾಡಿ 3 ದಿನ ಬಿಟ್ಟು ಬರುತ್ತೇನೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಪೂಜೆ ಹಾಳಾಗುತ್ತದೆ’ ಅಂತಾ ಹೇಳಿ ಹೋದವಳು ಈವರೆಗೂ ಬಾರದೇ ಹಣ ಹಾಗೂ ಬಂಗಾರದ ಆಭರಣಗಳನ್ನು ತೆಗೆದುಕೊಂಡು ಹೋಗಿ ಮೋಸ ಮಾಡಿದ್ದು ಇರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಜಯಲಕ್ಷ್ಮೀ ಮಂಜುನಾಥ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಕುಪ್ಪಯ್ಯನಮನೆ, ಹಿರೇಹಿತ್ಲು, ಶಾರದಹೊಳೆ, ಶಿರಾಲಿ, ತಾ: ಭಟ್ಕಳ ರವರು ದಿನಾಂಕ: 15-03-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 09/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶರಣಬಸಪ್ಪ ತಂದೆ ನಿಂಗಪ್ಪ ಅಮರಾವತಿ, ಪ್ರಾಯ-34 ವರ್ಷ, ವೃತ್ತಿ-ಚಾಲಕ (ಬ್ಯಾಡ್ಜ್ ನಂ: 1239) ಸಾ|| ಅಗೇದಾಳ, ತಾ: ಹುನಗುಂದ, ಜಿ: ಬಾಗಲಕೋಟೆ, ಹಾಲಿ ಸಾ|| ಕೆ.ಎಸ್.ಆರ್.ಟಿ.ಸಿ ವಿಭಾಗಿಯ ಕಛೇರಿಯ ಎದುರಿಗೆ, ಶಿರಸಿ (ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-31/ಎಫ್-1583 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 15-03-2021 ರಂದು ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ಶಿರಸಿ ಶಹರದ ಎಸ್.ಬಿ.ಐ ಬ್ಯಾಂಕ್ ಕ್ರಾಸಿನಲ್ಲಿ ತನ್ನ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-31/ಎಫ್-1583 ನೇದನ್ನು ಶಿರಸಿ ಶಹರದ ಕದಂಬ ಸರ್ಕಲ್ ಕಡೆಯಿಂದ ಹೊಸ ಬಸ್ ನಿಲ್ದಾಣದ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದವನು, ಶಿರಸಿ ಶಹರದ ಗಣೇಶನಗರದ ಐ.ಬಿ ಕ್ರಾಸ್ ಕಡೆಯಿಂದ ಝೂ ಸರ್ಕಲ್ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-2791 ನೇದಕ್ಕೆ ಬಸ್ಸಿನ ಮುಂದುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಮೇಲೆ ಇದ್ದ ಸವಾರ ರವಿಚಂದ್ರ ತಂದೆ ಹನುಮಂತ ಬೋವಿವಡ್ಡರ ಈತನಿಗೆ ಎದೆಯ ಮೇಲೆ ಬಸ್ಸಿನ ಟಾಯರ್ ಹರಿದು, ಬಲಗೈ ಮತ್ತು ಎಡಗೈ ಮೂಳೆ ಮುರಿದು ತೀವ್ರ ಗಾಯನೋವಾಗಿ, ಹೊಟ್ಟೆಯ ಕರುಳು ಹೊರಗೆ ಬಂದಿದ್ದು, ಮೋಟಾರ್ ಸೈಕಲ್ ಹಿಂಬದಿಗೆ ಕುಳಿತ ಸುನೀಲ ತಂದೆ ಅನಂತ ಇಂದೂರು ಈತನಿಗೆ ತಲೆಗೆ, ಮುಖಕ್ಕೆ ಹಾಗೂ ಹೊಟ್ಟೆಗೆ ತೀವ್ರ ಗಾಯನೋವಾಗಿದ್ದಲ್ಲದೇ, ಎಡಗಾಲಿನ ಹಾಗೂ ಎಡಗೈ ಭುಜದ ಮೂಳೆ ಮುರಿದು, ಇಬ್ಬರೂ ಸ್ಥಳದಲ್ಲಿಯೇ ಮೃತಪಡುವಂತೆ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಅನೀಸ್ ತಂದೆ ಅಹಮ್ಮದ್ ಖಾನ್, ಪ್ರಾಯ-36 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಅಗಸೇಬಾಗಿಲ, ತಾ: ಶಿರಸಿ ರವರು ದಿನಾಂಕ: 15-03-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 12/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಕುಮಾರ: ಸತ್ತು ತಂದೆ ಯಮ್ಮು ಬಿಚುಕಲೆ, ಪ್ರಾಯ-25 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಅಡ್ಡಿಗೇರಾ, ಭಾಗವತಿ, ತಾ: ಹಳಿಯಾಳ. ಪಿರ್ಯಾದಿಯ ಬಾವನಾದ ಈತನು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದವನು, ಜೋಯಿಡಾ ತಾಲೂಕಿನ ಹೊಸಕೊಣಪಾ ಗ್ರಾಮದ ತನ್ನ ಮಾವನ ಮನೆಯಿಂದ ದಿನಾಂಕ: 09-03-2021 ರಂದು ಬೆಳಿಗ್ಗೆ 10-00 ಗಂಟೆಗೆ ತನ್ನ ಮನೆಯಾದ ಅಡ್ಡಿಗೇರಾ ಗ್ರಾಮಕ್ಕೆ ಹೋಗುವುದಾಗಿ ಹೇಳಿ ತನ್ನ ಅಕ್ಕಳಾದ ರಾಮಿಬಾಯಿ ಇವಳ ಹತ್ತಿರ ಹೇಳಿ ಹೋದವನು, ಈವರೆಗೂ ಮನೆಗೆ ಬಾರದೇ ತನ್ನ ಸಂಬಂಧಿಕರ ಮನೆಗೂ ಹೋಗದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾನೆಯಾದವನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಗ್ಗು ತಂದೆ ಜಾನು ಪಾಟೀಲ, ಪ್ರಾಯ-35 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಹೊಸಕೊಣಪಾ, ತಾ: ಜೋಯಿಡಾ ರವರು ದಿನಾಂಕ: 15-03-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 29/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸಂದೀಪ ತಂದೆ ರಾಮಾ ಜಾಧವ, ಪ್ರಾಯ-40 ವರ್ಷ, ವೃತ್ತಿ-ಕಾರ್ಪೆಂಟರ್ ಕೆಲಸ, ಸಾ|| ಜನತಾ ಕಾಲೋನಿ, ದಾಂಡೇಲಿ. ನಮೂದಿತ ಆರೋಪಿತನು ದಿನಾಂಕ: 15-03-2021 ರಂದು 13-15 ಗಂಟೆಗೆ ದಾಂಡೇಲಿ ನಗರ ಠಾಣಾ ವ್ಯಾಪ್ತಿಯ ಡಬ್ಲ್ಯೂ.ಸಿ.ಪಿ.ಎಮ್ ಪೆಟ್ರೋಲ್ ಪಂಪ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭಕ್ಕಾಗಿ ಅದೃಷ್ಟದ ಅಂಕೆ ಬಂದಲ್ಲಿ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥಕ್ಕೆ ಕಟ್ಟಿಸಿಕೊಂಡು ಓ.ಸಿ ಮಟಕಾ ಜುಗಾರಾಟ ಆಡಿಸುತ್ತಾ ದಾಳಿಯ ಕಾಲಕ್ಕೆ ಒಂದು ಬಾಲ್ ಪೆನ್, ಓ.ಸಿ ಅಂಕೆ-ಸಂಖ್ಯೆ ಬರೆದಿರುವ ಚೀಟಿ ಹಾಗೂ ನಗದು ಹಣ 1,265/- ರೂಪಾಯಿ ಸಮೇತ ಪಿರ್ಯಾದುದಾರರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಯಲ್ಲಪ್ಪ ಎಸ್, ಪಿ.ಎಸ್.ಐ, ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 15-03-2021 ರಂದು 14-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 30/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರದೀಪ ತಂದೆ ಸಂಜೀವ ಬಾಗಡೆ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ಗಾಂಧಿನಗರ, ಆಶ್ರಯ ಕಾಲೋನಿ, ದಾಂಡೇಲಿ, 2]. ಪ್ರವೀಣ್ ತಂದೆ ಯಲ್ಲಪ್ಪ ಕಣಸಗೇರಿ, ಪ್ರಾಯ-24 ವರ್ಷ, ವೃತ್ತಿ-ಕೊರಿಯರ್ ನಲ್ಲಿ ಕೆಲಸ, ಸಾ|| ಗಾಂಧಿನಗರ, ಆಶ್ರಯ ಕಾಲೋನಿ, ದಾಂಡೇಲಿ, 3]. ಜಮೀರ್ ತಂದೆ ಸಲೀಂ ಶೇಖ್, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಸ್ ನಿಲ್ದಾಣದ ಹಿಂದುಗಡೆ, ಹಳೇ ದಾಂಡೇಲಿ, 4]. ರಂಜಾನ್ ತಂದೆ ಹಯಾಸಾಬ್ ಮಕಾಂದಾರ್, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಿರಾಶಿ ಗಲ್ಲಿ, ದಾಂಡೇಲಿ, 5]. ಶಬ್ಬೀರ್ ಬಾಷಾ, ಪ್ರಾಯ-24 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಗಾಂಧಿನಗರ, ಆಶ್ರಯ ಕಾಲೋನಿ, ದಾಂಡೇಲಿ. ಈ ನಮೂದಿತ ಆರೋಪಿತರು ದಿನಾಂಕ: 15-03-2021 ರಂದು 13-45 ಗಂಟೆಗೆ ದಾಂಡೇಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರದ ಆಶ್ರಯ ಕಾಲೋನಿಯ ಚರ್ಚ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಒಬ್ಬರಿಗೆ ಅನ್ಯಾಯದ ಲಾಭ ಹಾಗೂ ಇನ್ನೊಬ್ಬರಿಗೆ ಅನ್ಯಾಯದ ನಷ್ಟವಾಗುವಂತೆ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥಕ್ಕೆ ಕಟ್ಟಿ ಅಂದರ್-ಬಾಹರ್ ಜುಗಾರಾಟವನ್ನು ನಡೆಸುತ್ತಾ ಅಂದರ್-ಬಾಹರ್ ಜುಗಾರಾಟದ ಸಾಧನ ಸಲಕರಣೆಗಳಾದ ಇಸ್ಪೀಟ್ ಎಲೆಗಳು-52, ನಗದು ಹಣ 4,500/- ರೂಪಾಯಿಗಳ ಸಮೇತ ದಾಳಿಯ ಕಾಲಕ್ಕೆ ಆರೋಪಿತರೆಲ್ಲರೂ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಮಹಾದೇವಿ ಜಿ. ನಾಯ್ಕೋಡಿ, ಪಿ.ಎಸ್.ಐ (ಕ್ರೈಂ), ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 15-03-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 31/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸುನೀಲ್ ತಂದೆ ದಿನಕರ ಕಾಂಬಳೆ, ಪ್ರಾಯ-21 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬರ್ಚಿ ರಸ್ತೆ, ದಾಂಡೇಲಿ. ನಮೂದಿತ ಆರೋಪಿತನು ದಿನಾಂಕ: 15-03-2021 ರಂದು 18-15 ಗಂಟೆಗೆ ದಾಂಡೇಲಿ ನಗರ ಠಾಣಾ ವ್ಯಾಪ್ತಿಯ ಕುಳಗಿ ರಸ್ತೆಯ ಶೇರ್-ಎ-ಪಂಜಾಬ್ ಬಾರ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತಮ್ಮ ಲಾಭಕ್ಕಾಗಿ ಅದೃಷ್ಟದ ಅಂಕೆ ಬಂದಲ್ಲಿ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥಕ್ಕೆ ಕಟ್ಟಿಸಿಕೊಂಡು ಓ.ಸಿ ಮಟಕಾ ಜುಗಾರಾಟ ಆಡಿಸುತ್ತಾ ದಾಳಿಯ ಕಾಲಕ್ಕೆ ಒಂದು ಬಾಲ್ ಪೆನ್, ಓ.ಸಿ ಅಂಕೆ-ಸಂಖ್ಯೆ ಬರೆದಿರುವ ಚೀಟಿ ಹಾಗೂ ನಗದು ಹಣ 1,240/- ರೂಪಾಯಿಗಳ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರಭು ಆರ್. ಗಂಗನಹಳ್ಳಿ, ಪೊಲೀಸ್ ವೃತ್ತ ನಿರೀಕ್ಷಕರು, ದಾಂಡೇಲಿ ವೃತ್ತ, ದಾಂಡೇಲಿ ರವರು ದಿನಾಂಕ: 15-03-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 39/2021, ಕಲಂ: 15(ಎ) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಕರಿಯಪ್ಪ ತಂದೆ ಸಿದ್ದಪ್ಪ ಮೂಡುರು, ಪ್ರಾಯ-75 ವರ್ಷ, ವೃತ್ತಿ-ಗೂಡಂಗಡಿ ವ್ಯಾಪಾರ, ಸಾ|| ಬಂಕಾಪುರ ರೋಡ್, ಕಂಬಾರಗಟ್ಟಿ ಪ್ಲಾಟ್, ತಾ: ಮುಂಡಗೋಡ. ನಮೂದಿತ ಆರೋಪಿತನು ದಿನಾಂಕ: 15-03-2021 ರಂದು ಬೆಳಿಗ್ಗೆ 08-50 ಗಂಟೆಗೆ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ತನ್ನ ಗೂಡಂಗಡಿಯಲ್ಲಿ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅನುಕೂಲ ಮಾಡಿ ಕೊಟ್ಟಿದ್ದರಿಂದ ಪಿರ್ಯಾದಿಯವರು ಪಂಚರೊಂದಿಗೆ ಹಾಗೂ ಸಿಬ್ಬಂದಿಯವರೊಂದಿಗೆ ಸೇರಿ ML ನ ಪೌಚ್ ಗಳು-06 ಹಾಗೂ HAYWARDS WHISKY ಅಂತಾ ಬರೆದ 90 ML ನ ಖಾಲಿ ಪೌಚ್ ಗಳು-02, ಖಾಲಿ ನೀರಿನ ಬಾಟಲಿ-01, ಪ್ಲಾಸ್ಟಿಕ್ ಗ್ಲಾಸ್ ಗಳು-03 ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರಭುಗೌಡ. ಡಿ. ಕೆ, ಪೊಲೀಸ್ ನಿರೀಕ್ಷಕರು, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 15-03-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 57/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕಮಲಸಾಬ್ ತಂದೆ ಖಾಸಿಂಸಾಬ್ ಸೀಗಳ್ಳಿ, ಪ್ರಾಯ-50 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕಾವಲವಾಡ, ತಾ: ಹಳಿಯಾಳ (ನೋಂದಣಿ ಆಗದ ಸ್ಕೂಟಿ ಚಾಲಕ). ನಮೂದಿತ ಆರೋಪಿತನು ದಿನಾಂಕ: 14-03-2021 ರಂದು 17-00 ಗಂಟೆಗೆ ನೋಂದಣಿ ಆಗದ ತನ್ನ ಹೊಸ ಸ್ಕೂಟಿ ಮೇಲಾಗಿ ಪಿರ್ಯಾದಿಯನ್ನು ಹಿಂಬದಿ ಕೂಡ್ರಿಸಿಕೊಂಡು ಕಾವಲವಾಡ ಬದಿಯಿಂದ ಕಲಘಟಗಿ ಬದಿಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕಾವಲವಾಡ ಗ್ರಾಮದ ಕೆ.ಇ.ಬಿ ಗ್ರಿಡ್ ಹತ್ತಿರ ಸ್ಕೂಟಿಯನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ ಸ್ಕಿಡ್ಡಾಗಿ ಕೆಡವಿ ಅಪಘಾತ ಪಡಿಸಿ, ಪಿರ್ಯಾದಿಗೆ ಸಾದಾ ಸ್ವರೂಪದ ಗಾಯನೋವು ಹಾಗೂ ವಾಹನವನ್ನು ಜಖಂಗೊಳಿಸಿದ್ದಲ್ಲದೇ, ತನಗೂ ಸಹ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮೆಹಬೂಬಸಾಬ್ ತಂದೆ ದುಲೇಸಾಬ್, ದೋಟೆಗಾರ, ಪ್ರಾಯ-37 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಕಾವಲವಾಡ, ತಾ: ಹಳಿಯಾಳ ರವರು ದಿನಾಂಕ: 15-03-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 31/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಶಶಿಕುಮಾರ ತಂದೆ ಮುರುಗೆಪ್ಪ ಪಲ್ಲೇದ, ಪ್ರಾಯ-50 ವರ್ಷ, ವೃತ್ತಿ-ವ್ಯಾಪಾರ, ಸಾ|| ಬಸವನ ಗಲ್ಲಿ, ಸಿದ್ದಾಪುರ ಶಹರ, 2]. ಗಣಪತಿ ತಂದೆ ಪುಂಡಲೀಕ ಕಟಾವಕರ, ಸಾ|| ಬಸವನಗಲ್ಲಿ, ತಾ: ಸಿದ್ದಾಪುರ. ಈ ನಮೂದಿಸಿದ ಆರೋಪಿತರ ಪೈಕಿ ಆರೋಪಿ 1 ನೇಯವನು ದಿನಾಂಕ: 15-03-2021 ರಂದು ಮಧ್ಯಾಹ್ನ 14-30 ಗಂಟೆಗೆ ಸಿದ್ದಾಪುರ ಶಹರದ ರಾಜಮಾರ್ಗದ ತರಕಾರಿ ಮಾರುಕಟ್ಟೆಯ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಓ.ಸಿ ಮಟಕಾ ಜುಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಜನರಿಂದ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಅವರಿಗೆ ಓ.ಸಿ ಮಟಕಾ ಜುಗಾರಾಟದ ಅಂಕೆ-ಸಂಖ್ಯೆಗಳ ಚೀಟಿಯನ್ನು ಬರೆದುಕೊಟ್ಟು ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸೇರಿ ದಾಳಿ ಮಾಡಿದಾಗ ಓ.ಸಿ ಜುಗಾರಾಟದ ಸಲಕರಣೆಗಳಾದ 1). ಬಾಲ್ ಪೆನ್-1, 2). ಓ.ಸಿ ಚೀಟಿ-1 ಮತ್ತು 3). ನಗದು ಹಣ 680/- ರೂಪಾಯಿಗಳೊಂದಿಗೆ ಸೆರೆ ಸಿಕ್ಕಿದ್ದು ಹಾಗೂ ಆರೋಪಿ 2 ನೇಯವನು ಆರೋಪಿ 1 ನೇಯವನು ಸಂಗ್ರಹಿಸುವ ಓ.ಸಿ ಮಟಕಾದ ಹಣ ಹಾಗೂ ಚೀಟಿಯನ್ನು ಸ್ವೀಕರಿಸುವನಾಗಿರುವ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 15-03-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 32/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾ ಯಾರೋ ಕಳ್ಳರು ದಿನಾಂಕ: 15-03-2021 ರ ಬೆಳಿಗ್ಗೆ 09-30 ಗಂಟೆಯಿಂದ ರಾತ್ರಿ 21-45 ಗಂಟೆಯ ನಡುವಿನ ಅವಧಿಯಲ್ಲಿ ಸಿದ್ದಾಪುರ ತಾಲೂಕಿನ ಹಾಳದಕಟ್ಟಾದಲ್ಲಿರುವ ಪಿರ್ಯಾದಿಯ ಮನೆಯ ಹಿಂದಿನ ಬಾಗಿಲಿಗೆ ಹಾಕಿದ ಚಿಲಕವನ್ನು ಮುರಿದು ಒಳ ಹೊಕ್ಕಿ ಮನೆಯಲ್ಲಿನ ಕಪಾಟಿನಲ್ಲಿದ್ದ ಒಟ್ಟು ಬಂಗಾರ-119 ಗ್ರಾಂ, ಅ||ಕಿ|| 4,63,000/- ರೂಪಾಯಿ, ಒಟ್ಟು ಬೆಳ್ಳಿ-260 ಗ್ರಾಂ, ಅ||ಕಿ|| 13,500/- ರೂಪಾಯಿ, ನಗದು ಹಣ 10,000/- ರೂಪಾಯಿ. ಹೀಗೆ ಒಟ್ಟು (1). ಬಂಗಾರದ ಸರ-1, 45 ಗ್ರಾಂ ತೂಕದ್ದು ಅ||ಕಿ|| 1,80,000/- ರೂಪಾಯಿ, 2). ಬಂಗಾರದ ಜುಮಕಿ-1 ಜೊತೆ, 05 ಗ್ರಾಂ ತೂಕದ್ದು, ಅ||ಕಿ|| 17,000/- ರೂಪಾಯಿ, 3). ಬಂಗಾರದ ಜುಮಕಿ-1 ಜೊತೆ, 20 ಗ್ರಾಂ ತೂಕದ್ದು, ಅ||ಕಿ|| 70,000 ರೂಪಾಯಿ, 4). ಬಂಗಾರದ ಉಂಗುರ-2, 5 ಗ್ರಾಂ ತೂಕದ್ದು, ಅ||ಕಿ|| 20,000/- ರೂಪಾಯಿ, 5). ಬಂಗಾರದ ಚೈನ್-1, 5 ಗ್ರಾಂ ತೂಕದ್ದು, ಅ||ಕಿ|| 20,000/- ರೂಪಾಯಿ, 6). ಬಂಗಾರದ ಬ್ರೇಸಲೆಟ್-1, 9 ಗ್ರಾಂ ತೂಕದ್ದು, ಅ||ಕಿ|| 40,000/- ರೂಪಾಯಿ, 7). ಬಂಗಾರದ ಉಂಗುರ-1, 5 ಗ್ರಾಂ ತೂಕದ್ದು, ಅ||ಕಿ|| 20,000/- ರೂಪಾಯಿ, 8). ಬಂಗಾರದ ಜುಮಕಿ-1 ಜೊತೆ, 5 ಗ್ರಾಂ ತೂಕದ್ದು, ಅ||ಕಿ|| 20,000/- ರೂಪಾಯಿ, 9). ಬಂಗಾರದ ಉಂಗುರ-1, 4 ಗ್ರಾಂ ತೂಕದ್ದು, ಅ||ಕಿ|| 16,000/- ರೂಪಾಯಿ, 10). ಬಂಗಾರದ ಉಂಗುರ-1, 6 ಗ್ರಾಂ ತೂಕದ್ದು, ಅ||ಕಿ|| 20,000/- ರೂಪಾಯಿ, 11). ಮಗುವಿನ ಬಂಗಾರದ ಉಂಗುರ-4, ಒಟ್ಟು ತೂಕ 5 ಗ್ರಾಂ, ಅ||ಕಿ|| 20,000/- ರೂಪಾಯಿ, 12). ಮಗುವಿನ ಬಂಗಾರದ ಸರ-1, 5 ಗ್ರಾಂ ತೂಕದ್ದು, ಅ||ಕಿ|| 20,000/- ರೂಪಾಯಿ, 13). ಮಗುವಿನ ಬೆಳ್ಳಿಯ ಕಾಲು ಗೆಜ್ಜೆ-2, 20 ಗ್ರಾಂ ತೂಕದ್ದು, ಅ||ಕಿ|| 1,500/- ರೂಪಾಯಿ, 14). ಮಗುವಿನ ಬೆಳ್ಳಿಯ ಕಾಲಿಗೆ ಹಾಕುವ ಖಡ್ಗ-2, 20 ಗ್ರಾಂ ತೂಕದ್ದು, ಅ||ಕಿ|| 1,500/- ರೂಪಾಯಿ, 15). ಮಗುವಿನ ಬೆಳ್ಳಿಯ ಬ್ರ್ಯಾಸಲೆಟ್-8, 160 ಗ್ರಾಂ ತೂಕದ್ದು, 6,000/- ರೂಪಾಯಿ, 16). ಮಗುವಿನ ಬೆಳ್ಳಿಯ ಬ್ರ್ಯಾಸಲೆಟ್-3, 60 ಗ್ರಾಂ ತೂಕದ್ದು, 4,500/- ರೂಪಾಯಿ, 17). ನಗದು ಹಣ 10,000/- ರೂಪಾಯಿ) 4,86,500/- ರೂಪಾಯಿ ಬೆಲೆಬಾಳುವ ಸ್ವತ್ತನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಅಜಿತ ತಂದೆ ವಿಷ್ಣು ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ಮೆಕ್ಯಾನಿಕಲ್ ಇಂಜಿನೀಯರ್, ಸಾ|| ಹಾಳದಕಟ್ಟಾ, ತಾ: ಸಿದ್ದಾಪುರ ರವರು ದಿನಾಂಕ: 15-03-2021 ರಂದು 22-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 23/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಕುಪ್ಪ ದಾಸಬಾಳ, ಪ್ರಾಯ-38 ವರ್ಷ, ವೃತ್ತಿ-ಚಾಲಕ, ಸಾ|| ಅಯೋಧ್ಯಾ ನಗರ, 3 ನೇ ಕ್ರಾಸ್, ಗೌಡರ ಚಾಳ, ಹುಬ್ಬಳ್ಳಿ, ಧಾರವಾಡ (ಕಂಟೇನರ್ ಲಾರಿ ನಂ: ಎಚ್.ಆರ್-55/ಎ.ಸಿ-3327 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 13-03-2021 ರಂದು ತನ್ನ ಬಾಬ್ತು ಕಂಟೇನರ್ ಲಾರಿ ನಂ: ಎಚ್.ಆರ್-55/ಎ.ಸಿ-3327 ನೇದರಲ್ಲ್ಲಿ ‘ನೆಸ್ಟ್ಲೇ ಮ್ಯಾಗಿ’ ಬಾಕ್ಸ್ ಗಳನ್ನು ತುಂಬಿಕೊಂಡು ಅನಮೋಡ-ರಾಮನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿರುವಾಗ ಲಾರಿ ಹಿಂಬದಿಯ ಎಡಭಾಗದ ಟೈಯರ್ ಗಳು ಬ್ಲಾಸ್ಟ್ ಆಗಿ ಬೆಂಕಿ ತಗುಲಿ, ಹಿಂಬದಿಯ ಎಡಭಾಗದ ನಾಲ್ಕು ಹಾಗೂ ಬಲಭಾಗದ ಎರಡು ಟೈಯರ್ ಗಳು ಸುಟ್ಟಿದ್ದು, ಬೆಂಕಿಯನ್ನು ನಂದಿಸಿದರೂ ಸಹ ಬೆಂಕಿ ಕಂಟೇನರ್ ಲಾರಿ ಒಳಗೆ ತಾಗಿ ಕಂಟೇನರ್ ನಲ್ಲಿದ್ದ ‘ನೆಸ್ಟ್ಲೇ ಮ್ಯಾಗಿ’ ಬಾಕ್ಸ್ ಗಳು ಸುಟ್ಟು ನಷ್ಟವಾಗಿದ್ದು, ಈ ಘಟನೆಯು ಲಾರಿ ಚಾಲಕನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಲಾರಿಯನ್ನು ಚಲಾಯಿಸಿದ್ದರಿಂದ ಟೈಯರ್ ಗಳು ಬ್ಲಾಸ್ಟ್ ಆದ ಬಗ್ಗೆ ಪಿರ್ಯಾದಿ ಶ್ರೀ ಮಂಜನಾಥಗೌಡ ತಂದೆ ಸೋಮನಗೌಡ ರಾಯನಗೌಡರ, ಪ್ರಾಯ-30 ವರ್ಷ, ವೃತ್ತಿ-ಮ್ಯಾನೇಜರ್ ರಿವೀಗೋ ಸರ್ವೀಸಸ್ ಪ್ರೈವೆಟ್ ಲಿಮಿಟೆಡ್ ಹುಬ್ಬಳ್ಳಿ ಬ್ರ್ಯಾಂಚ್, ಸಾ|| ನೇಕಾರ ನಗರ, ಹುಬ್ಬಳ್ಳಿ, ಧಾರವಾಡ ರವರು ದಿನಾಂಕ: 15-03-2021 ರಂದು 19-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 15-03-2021

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 03/2021, ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ರವೀಂದ್ರ ತಂದೆ ಜೈವಂತ ಗಾಂವಕರ, ಪ್ರಾಯ-42 ವರ್ಷ, ಸಾ|| ಹೌಸ್ ನಂ: 1398, ತಾನ್ಸೆಂ, ಲೊಲೆಂ, ಕಾಣಕೋಣ, ಗೋವಾ. ಈತನು ದಿನಾಂಕ: 14-03-2021 ರಂದು ಗೋವಾದಿಂದ ತನ್ನ ಸಂಗಡಿಗರಾದ ದೀಲಿಪ ಸಜ್ಜನ, ನಿಲೇಶ, ಶೈಲೇಶ ಮುಂತಾದವರೊಂದಿಗೆ ಮೀನು ಹಿಡಿಯಲು ಬಂದಿದ್ದು, ಅವರನ್ನು ಪಿರ್ಯಾದಿಯು ಕಾಂಗೆ ಗುಡ್ಡದ ಬಳಿ ತನ್ನ ದೋಣಿಯಲ್ಲಿ ಬಿಟ್ಟು ಬಂದಿದ್ದು, ಸಾಯಂಕಾಲ ಮರಳಿ ಬರುವಾಗ 6 ಜನರಲ್ಲಿ ರವೀಂದ್ರ ಜೈವಂತ ಗಾಂವಕರ ಎನ್ನುವವರು ಮೀನು ಹಿಡಿಯುತ್ತಿರುವಾಗ ಸಮುದ್ರದ ಅಂಚಿನಲ್ಲಿ ನಡೆದಾಡುತ್ತಿರುವಾಗಲೋ ಅಥವಾ ಆಕಸ್ಮಾತ್ ಆಗಿ ಕಾಲು ಜಾರಿಯೋ ಸಮುದ್ರದ ನೀರಿನಲ್ಲಿ ಮುಳುಗಿ ಕಾಣೆಯಾದವನು, ದಿನಾಂಕ: 15-03-2021 ರಂದು 12-45 ಘಂಟೆಗೆ ಮೃತಪಟ್ಟಿರುವ ಸ್ಥಿತಿಯಲ್ಲಿ ಸಿಕ್ಕಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ರೋಹನ ತಂದೆ ಮೋಹನ ಕೊಬ್ರೇಕರ್, ಪ್ರಾಯ-29 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ದಂಡೇಬಾಗ, ಮಾಜಾಳಿ, ಕಾರವಾರ ರವರು ದಿನಾಂಕ: 15-03-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 07/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಅಂಬಿಕಾ @ ರೀನಾ ಗಂಡ ಬಸ್ತ್ಯಾಂವ್ ಫರ್ನಾಂಡೀಸ್, ಪ್ರಾಯ-36 ವರ್ಷ. ವೃತ್ತಿ-ಮನೆ ಕೆಲಸ, ಸಾ|| ಅತ್ತಿಮನೆ, ದಿವಗಿ, ತಾ: ಕುಮಟಾ. ಪಿರ್ಯಾದಿಯ ಮಗಳಾದ ಇವಳು ದಿನಾಂಕ: 09-03-2021 ರಂದು ಬೆಳಿಗ್ಗೆ 09-30 ಗಂಟೆಗೆ ತಮ್ಮ ಮನೆಯ ಸ್ನಾನ ಮಾಡುವ ನೀರಿನ ಹಂಡೆ ಒಲೆಗೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚುತ್ತಿರುವಾಗ ಆಕಸ್ಮಾತ್ ಆಗಿ ತಾನು ಧರಿಸಿದ ಬಟ್ಟೆಗೆ ಬೆಂಕಿ ತಗುಲಿ, ಮೈ ಕೈ ಸುಟ್ಟುಕೊಂಡಿದ್ದವಳಿಗೆ ಚಿಕಿತ್ಸೆಯ ಕುರಿತು ಕುಮಟಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಕುರಿತು ಪಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರಲ್ಲಿ ದಾಖಲಿಸಿ ಚಿಕಿತ್ಸೆಯಲ್ಲಿ ಇದ್ದವಳು, ದಿನಾಂಕ: 15-03-2021 ರಂದು ಬೆಳಿಗ್ಗೆ 10-00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ಉದಯ ತಂದೆ ಅಮಾಶ್ಯೆ ಆಗೇರ್, ಪ್ರಾಯ-65 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಪುರ್ಲಕ್ಕಿಬೇಣ, ತಾ: ಅಂಕೋಲಾ ರವರು ದಿನಾಂಕ: 15-03-2021 ರಂದು 16-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 16-03-2021 06:55 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080