ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 15-05-2021

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 33/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ಹಾಗೂ ಕಲಂ: 269, 271 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವೀರೇಂದ್ರ ತಂದೆ ಜ್ಞಾನೇಶ್ವರ ಕೊಠಾರಕರ್, ಸಾ|| ಕೊಠಾರ, ಮಾಜಾಳಿ, ಕಾರವಾರ. ಈತನು ದೇಶದಾದ್ಯಂತ ಕೋವಿಡ್-19 ಮಾರಕ ರೋಗ ಇದ್ದು, ರಾಷ್ಟ್ರೀಯ ವಿಪತ್ತು ಇದ್ದಾಗಲೂ ಸಹ ದಿನಾಂಕ: 15-05-2021 ರಂದು 05-20 ಘಂಟೆಗೆ ಸಣ್ಣ ಮುಡಗೇರಿ ಅರಣ್ಯ ಪ್ರದೇಶದಲ್ಲಿ ತನ್ನ ಹಾಗೂ ನಾಗರಿಕರ ಸುರಕ್ಷತೆಯನ್ನು ಗಮನಿಸದೇ ಸರಕಾರದ ಆದೇಶವನ್ನು ಉಲ್ಲಂಘಿಸಿ, ಮನೆಯಿಂದ ಹೊರಗಡೆಗೆ ಹೋಗಿ ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೇ ಸುಮಾರು 7,200/- ರೂಪಾಯಿ ಬೆಲೆಬಾಳುವ ಗೋವಾ ರಾಜ್ಯ ತಯಾರಿಕೆಯ 48 ಬಿಯರ್ ತುಂಬಿದ ಟಿನ್ ಗಳನ್ನು ಮೂಟೆಯಲ್ಲಿ ತುಂಬಿಕೊಂಡು ತಲೆಯ ಮೇಲೆ ಹೊತ್ತುಕೊಂಡು ಸಾಗಾಟ ಮಾಡುತ್ತಿದ್ದಾಗ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಮೂಟೆಯನ್ನು ಕೆಳಗಡೆ ಬಿಸಾಕಿ ಅರಣ್ಯ ಪ್ರದೇಶದಲ್ಲಿ ತಪ್ಪಿಸಿಕೊಂಡು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಕಲ್ಪನಾ ಬಿ. ಆರ್, ಡಬ್ಲ್ಯೂ.ಪಿ.ಎಸ್.ಐ (ಕ್ರೈಂ), ಚಿತ್ತಾಕುಲಾ ಪೊಲೀಸ್ ಠಾಣೆ ರವರು ದಿನಾಂಕ: 15-05-2021 ರಂದು 06-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 41/2021, ಕಲಂ: 269, 270, 336 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹರೀಶ ತಂದೆ ಉದಯ ನಾಯ್ಕ, ಪ್ರಾಯ-26 ವರ್ಷ, ವೃತ್ತಿ-ಚಾಲಕ, ಸಾ|| ಗಂಗೆಕೊಳ್ಳ, ತಾ: ಕುಮಟಾ. ಈತನು ಕೋವಿಡ್-19 ವೈರಸ್ ಪ್ರಸರಣವನ್ನು ತಡೆಟಗಟ್ಟುವ ನಿಟ್ಟಿನಲ್ಲಿ ಮಾನ್ಯ ಕರ್ನಾಟಕ ಸರ್ಕಾರವು ಮಾಡಿರುವ ಲಾಡಕೌನ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕೋವಿಡ್-19 ಕೊರೋನಾ ಸೋಂಕು ಸಾರ್ವಜನಿಕರಿಗೆ ಹರಡುವ ಬಗ್ಗೆ ತಿಳಿದಿದ್ದರೂ ಸಹ ದಿನಾಂಕ: 15-05-2021 ರಂದು 11-30 ಗಂಟೆಯ ಸುಮಾರಿಗೆ ಗೋಕರ್ಣದ ಗಂಗಾವಳಿ ರಸ್ತೆಯ ನೇಲಗುಣಿ ಕ್ರಾಸ್ ಹತ್ತಿರ ಇರುವ ಗಂಗಾವಳಿ ಕಡೆಯಿಂದ ಗೋಕರ್ಣದ ಕಡೆಗೆ ಮುಖಕ್ಕೆ ಮಾಸ್ಕ್ ಅನ್ನು ಧರಿಸದೇ ಉದ್ದೇಶ ಪೂರ್ವಕವಾಗಿ ಮೋಟಾರ್ ಸೈಕಲ್ ನಂ: ಕೆ.ಎ-30/ಎಸ್-0430 ನೇದನ್ನು ಚಲಾಯಿಸಿಕೊಂಡು ಬಂದು ಕೋವಿಡ್-19 ವೈರಾಣು ಹರಡುವಿಕೆಯಲ್ಲಿ ನಿರ್ಲಕ್ಷ್ಯತೆ ಹಾಗೂ ಸಾರ್ವಜನಿಕರ ದೇಹದ ಸುರಕ್ಷತೆಗೆ ಅಪಾಯವುಂಟು ಮಾಡುವಂತಹ ನಿರ್ಲಕ್ಷ್ಯದ ಕೃತ್ಯ ಮಾಡಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನವೀನ್ ಎಸ್. ನಾಯ್ಕ, ಪಿ.ಎಸ್.ಐ, ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 15-05-2021 ರಂದು 12-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 106/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಯಾರೋ ಕಳ್ಳರು ಅಪರಿಚಿತಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದುದಾರರು ದಿನಾಂಕ: 28-03-2021 ರಂದು ಟ್ರೇನ್ ನಂ: 02476 ರ ಎ-4 ಕೋಚ್ ರಲ್ಲಿ ಯು.ಡಿ ಯಿಂದ ಅಂಕಲೇಶ್ವರಕ್ಕೆ ಪ್ರಯಾಣಿಸಿಕೊಂಡು ಹೋಗುತ್ತಿರುವಾಗ ಕುಮಟಾ ಮತ್ತು ಮಡಗಾಂವ್ ಮಧ್ಯೆ ಮಧ್ಯರಾತ್ರಿ 01-00 ರಿಂದ 03-00 ಗಂಟೆಯ ನಡುವಿನ ಅವಧಿಯಲ್ಲಿ ಆರೋಪಿತರಾದ ಯಾರೋ ಕಳ್ಳರು ಪಿರ್ಯಾದಿಯ ಬ್ಯಾಗಿನಲ್ಲಿದ್ದ 50,000/- ರೂಪಾಯಿ ಮೌಲ್ಯದ ಒನ್ ಪ್ಲಸ್ 8 ಕಂಪನಿಯ ಮೊಬೈಲ್ ಫೋನ್ ಹಾಗೂ 4,000/- ರೂಪಾಯಿ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಪಿರ್ಯಾದಿ ಶ್ರೀ ಕಲ್ಯಾಣಿ ಬಿ. ತಜವೆ, ಸಾ|| ಶಿಲ್ಪಿಕ್ಟ್ರೇಮ್, ಮಕರಂಪುರ್, ಭರುಚ್, ಗುಜರಾತ ರಾಜ್ಯ ರವರು (ಪಿರ್ಯಾದಿಯವರು ರೈಲ್ವೇ ಪೊಲೀಸರಿಗೆ ದೂರು ನೀಡಿದ್ದು, ವ್ಯಾಪ್ತಿ ಪ್ರದೇಶದ ಆಧಾರದಲ್ಲಿ ತನಿಖೆಯ ಕುರಿತು ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ಮುಖಾಂತರ ಕುಮಟಾ ಪೊಲೀಸ್ ಠಾಣೆಗೆ ದೂರು ನೀಡಿದ್ದನ್ನು) ದಿನಾಂಕ: 15-05-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 64/2021, ಕಲಂ: 269, 270, 336 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಸ್ಕೂಟಿ ನಂ: ಕೆ.ಎ-47/ವಿ-3943 ನೇದರ ಚಾಲಕನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 15-05-2021 ರಂದು 15-15 ಗಂಟೆಯ ಸುಮಾರಿಗೆ ಭಟ್ಕಳ ಶಹರದ ಸಂಶುದ್ದೀನ್ ಸರ್ಕಲ್ ಹತ್ತಿರ ಕೊರೋನಾ ಕರ್ಫ್ಯೂ (ಲಾಕಡೌನ್) ಆದೇಶ ಇದ್ದರೂ ಸಹ ಮಾಸ್ಕ್ ಹಾಕದೇ, ಯಾವುದೇ ರಕ್ಷಣೆಯನ್ನು ಹೊಂದದೆ ಕೊರೋನಾ ಸಾಂಕ್ರಾಮಿಕ ರೋಗದ ಕರ್ಫ್ಯೂ ಜಾರಿ ಸರ್ಕಾರದ ಆದೇಶ ಉಲ್ಲಂಘನೆ ಮಾಡಿ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡಲು ಉದ್ದೇಶ ಪೂರಕವಾಗಿ ಮನೆಯಿಂದ ಹೊರಗಡೆ ಮೋಟಾರ್ ಸೈಕಲ್ ಮೇಲೆ ತಿರುಗಾಡಲು ಬಂದು ನಿರ್ಲಕ್ಷ್ಯತನ ತೋರಿ ಮೋಟಾರ್ ಸೈಕಲನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಕುಮಾರಿ: ಸುಮ ಬಿ, ಡಬ್ಲ್ಯೂ.ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 15-05-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 65/2021, ಕಲಂ: 269, 270, 336 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಮೋಟಾರ್ ಸೈಕಲ್ ನಂ: ಕೆ.ಎ-47/ಯು-2464 ನೇದರ ಚಾಲಕನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 15-05-2021 ರಂದು 17-00 ಗಂಟೆಯ ಸುಮಾರಿಗೆ ಭಟ್ಕಳ ಶಹರದ ಹಳೆ ಬಸ್ ನಿಲ್ದಾಣದ ಹತ್ತಿರ ಕೊರೋನಾ ಕರ್ಫ್ಯೂ (ಲಾಕಡೌನ್) ಇದ್ದರೂ ಸಹ ಮಾಸ್ಕ್ ಹಾಕದೇ, ಯಾವುದೇ ರಕ್ಷಣೆಯನ್ನು ಹೊಂದದೆ ಕೊರೋನಾ ಸಾಂಕ್ರಾಮಿಕ ರೋಗದ ಕರ್ಫ್ಯೂ ಜಾರಿ ಸರ್ಕಾರದ ಆದೇಶ ಉಲ್ಲಂಘನೆ ಮಾಡಿ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡಲು ಉದ್ದೇಶ ಪೂರಕವಾಗಿ ಮನೆಯಿಂದ ಹೊರಗಡೆ ಮೋಟಾರ್ ಸೈಕಲ್ ಮೇಲೆ ತಿರುಗಾಡಲು ಬಂದು ನಿರ್ಲಕ್ಷ್ಯತನ ತೋರಿ ಮೋಟಾರ್ ಸೈಕಲನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಕುಮಾರಿ: ಸುಮ ಬಿ. ಡಬ್ಲ್ಯೂ.ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 15-05-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 66/2021, ಕಲಂ: 269, 270, 336 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಮೋಟಾರ್ ಸೈಕಲ್ ನಂ: ಕೆ.ಎ-04/ಜೆ.ವಿ-3163 ನೇದರ ಚಾಲಕನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 15-05-2021 ರಂದು 18-30 ಗಂಟೆಯ ಸುಮಾರಿಗೆ ಭಟ್ಕಳ ಶಹರದ ಬಂದರ್ ರಸ್ತೆಯ ಹತ್ತಿರ ಕೊರೋನಾ ಕರ್ಫ್ಯೂ (ಲಾಕಡೌನ್) ಇದ್ದರೂ ಸಹ ಮಾಸ್ಕ್ ಹಾಕದೇ, ಯಾವುದೇ ರಕ್ಷಣೆಯನ್ನು ಹೊಂದದೆ ಕೊರೋನಾ ಸಾಂಕ್ರಾಮಿಕ ರೋಗದ ಕರ್ಫ್ಯೂ ಜಾರಿ ಸರ್ಕಾರದ ಆದೇಶ ಉಲ್ಲಂಘನೆ ಮಾಡಿ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡಲು ಉದ್ದೇಶ ಪೂರಕವಾಗಿ ಮನೆಯಿಂದ ಹೊರಗಡೆ ಮೋಟಾರ್ ಸೈಕಲ್ ಮೇಲೆ ತಿರುಗಾಡಲು ಬಂದು ನಿರ್ಲಕ್ಷ್ಯತನ ತೋರಿ ಮೋಟಾರ್ ಸೈಕಲನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಕುಮಾರಿ: ಸುಮ ಬಿ. ಡಬ್ಲ್ಯೂ.ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 15-05-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 72/2021, ಕಲಂ: 324, 447, 448, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಪುನೀತ ರಾಮಚಂದ್ರ ಮೊಗೇರ, 2]. ಮೋಹನ ರಾಮಚಂದ್ರ ಮೊಗೇರ, ಸಾ|| (ಇಬ್ಬರೂ) ಗಾಂಧಿನಗರ, ಹೆಬಳೆ, ತಾ: ಭಟ್ಕಳ. ಈ ನಮೂದಿತ ಆರೋಪಿತರು ದಿನಾಂಕ: 15-05-2021 ರಂದು ಬೆಳಿಗ್ಗೆ 08-00 ಗಂಟೆಗೆ ಪಿರ್ಯಾದಿಯ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿಯ ಮನೆಯ ಒಳಗೆ ಇದ್ದ ಪರಮೇಶ್ವರ ಜಟ್ಟಪ್ಪ ಮೊಗೇರ ಈತನ ಹತ್ತಿರ ‘ನನ್ನ ತಂದೆಯ ಅಂಗಡಿ ಹತ್ತಿರ ಸರಾಯಿ ಮಾರುತ್ತೇವೆ. ನೀನು ಯಾಕೆ ಮೊಬೈಲ್ ನಲ್ಲಿ ಮೆಸೇಜ್ ಮಾಡಿದ್ದಿ?’ ಅಂತಾ ಹೇಳಿ ಎಳೆದುಕೊಂಡು ಹೋಗುವಾಗ ಪಿರ್ಯಾದಿ ಮತ್ತು ಪಿರ್ಯಾದಿಯ ಗಂಡ ಅವರಿಗೆ ‘ಯಾಕೆ ಎಳೆದುಕೊಂಡು ಹೋಗುತ್ತೀರಿ?’ ಅಂತಾ ಕೇಳಿದಕ್ಕೆ ಪಿರ್ಯಾದಿಗೆ ‘ಬೇರ್ವಸಿ, ರಂಡೆ’ ಅಂತಾ ಬೈಯ್ದು, ಪಿರ್ಯಾದಿಯ ಗಂಡನಿಗೆ ‘ಸೂಳೆ ಮಗನೆ, ನೀನು ರಸ್ತೆಯ ಮೇಲೆ ಬಂದರೆ ಧಕ್ಕೆಯ ಹತ್ತಿರ ಸಿಕ್ಕರೆ ನಿನಗೆ ಕೊಂದು ಹಾಕುತ್ತೇವೆ’ ಅಂತಾ ಹೇಳಿ ಜೀವದ ಬೆದರಿಕೆ ಹಾಕಿ, ಪರಮೇಶ್ವರನಿಗೆ ಪಿರ್ಯಾದಿಯ ಮನೆಯ ಗೇಟ್ ಹತ್ತಿರ ನೆಲಕ್ಕೆ ಹಾಕಿ ಕೆಡವಿ, ಪಿರ್ಯಾದಿಯ ಮನೆಯ ಗೇಟಿನ ಬಿದರಿನ ಗಳ ಮುರಿದು, ಅದೇ ಗಳದಿಂದ ಪರಮೇಶ್ವರನಿಗೆ ಹಲ್ಲೆ ಮಾಡುತ್ತಿದ್ದಾಗ ಪಿರ್ಯಾದಿಯ ಗಂಡ ಹಾಗೂ ಗಜಾನನ ಕೊರಗಾ ಮೊಗೇರ, ಸಾ|| ಮೋಗರಕೇರಿ, ಶಿರಾಲಿ, ತಾ: ಭಟ್ಕಳ ಇವರು ಸೇರಿ ಹೊಡೆಯವುದನ್ನು ಬಿಡಿಸಿದ್ದು, ನಂತರ ಆರೋಪಿತರು ಅಲ್ಲಿಂದ ಹೋಗುವಾಗ ಪಿರ್ಯಾದಿಗೆ ಉದ್ದೇಶಿಸಿ ‘ನಿಮಗೆ ಜೀವ ಸಹಿತ ಬಿಡುವುದಿಲ್ಲ. ಕೊಂದು ಹಾಕುತ್ತೇವೆ’ ಅಂತಾ ಹೇಳಿ ಬಿದರಿನ ಗಳ ಅಲ್ಲೇ ಬಿಸಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಲೀಲಾ ಕೋಂ. ದಿನೇಶ ಮೊಗೇರ, ಪ್ರಾಯ-38 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಮಲ್ಲಜ್ಜನ ಮನೆ, ಹೆಬಳೆ ಪಂಚಾಯತ ಎದುರುಗಡೆ, ಹೆಬಳೆ, ತಾ: ಭಟ್ಕಳ ರವರು ದಿನಾಂಕ: 15-05-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 97/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಆನಂದ ಗಂಗಾರಾಮ ಭಾಗವಟ್ಕರ, ಪ್ರಾಯ-29 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಭಾಗವತಿ ಗ್ರಾಮ, ತಾ: ಹಳಿಯಾಳ, 2]. ರವಿ ಯಲ್ಲಪ್ಪ ಜೋಗಿನ, ಪ್ರಾಯ-33 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಭಾಗವತಿ ಗ್ರಾಮ, ತಾ: ಹಳಿಯಾಳ, 3]. ಮಲ್ಲೇಶಿ ಯಲ್ಲಪ್ಪ ಕುಂದಗೋಳ, ಪ್ರಾಯ-22 ವರ್ಷ, ವೃತ್ತಿ-ಚಾಲಕ, ಸಾ|| ಭಾಗವತಿ ಗ್ರಾಮ, ತಾ: ಹಳಿಯಾಳ, 4]. ಸಂಜು ಫಕ್ಕೀರಪ್ಪ ಹರಿಜನ, ಪ್ರಾಯ-24 ವರ್ಷ, ವೃತ್ತಿ-ಚಾಲಕ, ಸಾ|| ಭಾಗವತಿ ಗ್ರಾಮ, ತಾ: ಹಳಿಯಾಳ, 5]. ಆಸೀಫ್ ಸಲೀಮ್ ಬೆಳಗಾಂವಕರ, ಪ್ರಾಯ-20 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಭಾಗವತಿ ಗ್ರಾಮ, ತಾ: ಹಳಿಯಾಳ, 6]. ಮುಬಾರಕ್ ಸೈಯದ್ಅಲಿ ಗುಂಜಾವತಿ, ಪ್ರಾಯ-23 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಭಾಗವತಿ ಗ್ರಾಮ, ತಾ: ಹಳಿಯಾಳ, 7]. ಆಸೀಫ್ ಇಸ್ಮಾಯಿಲ್ ಶೇಖ್, ಪ್ರಾಯ-26 ವರ್ಷ, ವೃತ್ತಿ-ಚಾಲಕ, ಸಾ|| ಭಾಗವತಿ ಗ್ರಾಮ, ತಾ: ಹಳಿಯಾಳ, 8]. ಮುಬಾರಕ್ ಉಮ್ಮರಸಾಬ್ ಜಂಗಲೆ, ಪ್ರಾಯ-30 ವರ್ಷ, ವೃತ್ತಿ-ಚಾಲಕ, ಸಾ|| ಭಾಗವತಿ ಗ್ರಾಮ, ತಾ: ಹಳಿಯಾಳ, 9]. ಅಸ್ಲಾಮ್ ಸೈಯದಸಾಬ್ ಮುಜಾವರ್, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಭಾಗವತಿ ಗ್ರಾಮ, ತಾ: ಹಳಿಯಾಳ. ಈ ನಮೂದಿತ ಆರೋಪಿತರು ದೇಶಾದಂತ್ಯ ಕೋವಿಡ್-19 ಕೊರೋನಾ ವೈರಸ್ ಸಾಂಕ್ರಾಮಿಕ ಖಾಯಿಲೆ ಹರಡುವ ಸಂಭವ ಇದ್ದ ಬಗ್ಗೆ ಕರ್ನಾಟಕ ಸರಕಾರ ರಾಜ್ಯದ್ಯಾದಂತ ಲಾಕಡೌನ್ ಆದೇಶ ಹೊರಡಿಸಿದ್ದ ಬಗ್ಗೆ ಗೊತ್ತಿದ್ದರೂ ಸಹ ಸರ್ಕಾರದ ಆದೇಶದ ಉಲ್ಲಂಘನೆ ಮಾಡಿ ದಿನಾಂಕ: 15-05-2021 ರಂದು 19-35 ಗಂಟೆಯ ಸುಮಾರಿಗೆ ಹಳಿಯಾಳ ತಾಲೂಕಿನ ಭಾಗವತಿ ಗ್ರಾಮದ ಡ್ಯಾಮ್ ಗೆ ಹೋಗುವ ಗೇಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣದ ಪಂಥ ಕಟ್ಟಿ ಅಂದರ್-ಬಾಹರ್ ಇಸ್ಪೀಟ್ ಜೂಗಾರಾಟ ಆಡುತ್ತಿದ್ದಾಗ ದಾಳಿಯ ಕಾಲಕ್ಕೆ ಇಸ್ಪೀಟ್ ಜೂಗಾರಾಟದ ಸಾಮಗ್ರಿಗಳಾದ 1). ವಿವಿಧ ಮುಖಬೆಲೆಯ ನಗದು ಹಣ 2,725/- ರೂಪಾಯಿ, 2). 52 ಇಸ್ಪೀಟ್ ಎಲೆಗಳು, 3). ಪ್ಲಾಸ್ಟಿಕ್ ಹಾಳೆ-01. ಇವುಗಳೊಂದಿಗೆ ಪಿರ್ಯಾದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಿವಾನಂದ ನಾವದಗಿ, ಪಿ.ಎಸ್.ಐ, ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 15-05-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 15-05-2021

at 00:00 hrs to 24:00 hrs

 

ಭಟ್ಕಳ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 03/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಲಕ್ಷ್ಮಣ ತಂದೆ ಈರಪ್ಪ ನಾಯ್ಕ, ಪ್ರಾಯ-60 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಜಾಲಿ ಕೊಡಿ, ಜಾಲಿ, ತಾ: ಭಟ್ಕಳ. ಈತನು ದಿನಾಂಕ: 15-05-2021 ರಂದು 11-30 ಗಂಟೆಯ ಸುಮಾರಿಗೆ ಪ್ರಕೃತಿ ವಿಕೋಪವಾಗಿ ವಿಪರೀತ ಮಳೆ ಹಾಗೂ ಗಾಳಿ ಇರುವ ಕಾರಣ ತನ್ನ ದೋಣಿಯನ್ನು ಸಮುದ್ರದ ದಡದಲ್ಲಿ ಹಗ್ಗದಿಂದ ತೆಂಗಿನ ಮರಕ್ಕೆ ಕಟ್ಟುತ್ತಿರುವಾಗ ಸಮುದ್ರ ದಡದಲ್ಲಿ ಆಕಸ್ಮಿಕವಾಗಿ ಗಾಳಿ ಬಂದು ದೋಣಿಗೆ ಅಪ್ಪಳಿಸಿದಾಗ ದೋಣಿಯು ಒಮ್ಮೇಲೆ ಗಾಳಿಯಿಂದ ಮೃತನ ಎದೆಗೆ ಬಂದು ಹೊಡೆದು ಎದೆಗೆ ಬಲವಾದ ನೋವಾಗಿ ಅವರನ್ನು ಚಿಕಿತ್ಸೆಗೆ ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದು, ಸಮಯ 12-00 ಗಂಟೆಯ ಸುಮಾರಿಗೆ ವೈದ್ಯರು ಪರೀಕ್ಷಿಸಿ ಮರಣಪಟ್ಟ ಬಗ್ಗೆ ತಿಳಿಸಿದ್ದು, ಇದರ ಹೊರತು ಅವನ ಮರಣದಲ್ಲಿ ಬೇರೇ ಯಾವುದೇ ಸಂಶಯವಿರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ದುರ್ಗಪ್ಪ ನಾಯ್ಕ, ಪ್ರಾಯ-43 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಜಾಲಿ ಕೊಡಿ, ಜಾಲಿ, ತಾ: ಭಟ್ಕಳ ರವರು ದಿನಾಂಕ: 15-05-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 21/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ರಾಮ ತಂದೆ ಚೌಡ ಗೌಡ, ಪ್ರಾಯ-46 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕುರವಂತೆ, ಪೋ: ಕರ್ಕಿಸವಲು, ತಾ: ಸಿದ್ದಾಪುರ. ಈತನು ಪಿರ್ಯಾದಿಯ ತಂದೆಯಿದ್ದು, ಮೊದಲಿನಿಂದಲೂ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದವನು, ದಿನಾಂಕ: 27-02-2021 ರಂದು ಅವನ ಮೇಲೆ ಪ್ರಕರಣ ದಾಖಲಾಗಿ ದಸ್ತಗಿರಿಯಾದವನು, ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಂದ ನಂತರ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ವಿಪರೀತ ಸರಾಯಿ ಕುಡಿಯತೊಡಗಿದ್ದಲ್ಲದೇ ಮಾನಸಿಕವಾಗಿಯೂ ನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿದವನು, ದಿನಾಂಕ: 14-05-2021 ರಂದು 19-30 ಗಂಟೆಯಿಂದ 21-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯ ಹತ್ತಿರದಲ್ಲಿ ಎಲ್ಲೋ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥನಾದವನಿಗೆ ಆಸ್ಪತ್ರೆಗೆ ಕರೆದುಕೊಂಡು ಬಂದರೂ ದಾರಿ ಮಧ್ಯೆಯೇ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಚಂದನ ತಂದೆ ರಾಮ ಗೌಡ, ಪ್ರಾಯ-27 ವರ್ಷ, ವೃತ್ತಿ-ಬಟ್ಟೆ ಅಂಗಡಿಯಲ್ಲಿ ಕೆಲಸ, ಸಾ|| ಕುರವಂತೆ, ಪೋ: ಕರ್ಕಿಸವಲು, ತಾ: ಸಿದ್ದಾಪುರ ರವರು ದಿನಾಂಕ: 15-05-2021 ರಂದು 00-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 06/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮಹಾದೇವ ತಂದೆ ರಾಮಾ ಠಾಕೂರ, ಪ್ರಾಯ-66 ವರ್ಷ, ಕೂಲಿ ಕೆಲಸ, ಸಾ|| ಅಡಾಳಿ, ರಾಮನಗರ, ತಾ: ಜೋಯಿಡಾ. ಇವರು ಅಡಾಳಿಯಲ್ಲಿರುವ ಡ್ಯಾನಿಯಲ್ ಫ್ರಾನ್ಸಿಸ್ ಡಿಸೋಜಾ ರವರ ಅಡಿಕೆ, ಮಾವು, ತೆಂಗು ತೋಟದಲ್ಲಿ ಗಿಡಗಳಿಗೆ ನೀರು ಬಿಡುವ ಹಾಗೂ ತೋಟದಲ್ಲಿ ಸ್ವಚ್ಛಗೊಳಿಸುವ ಕೆಲಸ ಮಾಡಿಕೊಂಡು ಇದ್ದವರು, ದಿನಾಂಕ: 14-05-2021 ರಂದು ಎಂದಿನಂತೆ ತೋಟದ ಕೆಲಸಕ್ಕೆ ಹೋಗಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿರುವಾಗ 16-00 ಗಂಟೆಯ ಸುಮಾರಿಗೆ ಯಾವುದೋ ವಿಷಪೂರಿತ ಹಾವಿನಿಂದ ತಮ್ಮ ಬಲಗೈ ಬೆರಳುಗಳ ಭಾಗದಲ್ಲಿ ಕಚ್ಚಿಸಿಕೊಂಡವರು, ರಾಮನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಉಪಚಾರ ಪಡೆದುಕೊಂಡು, ಅಲ್ಲಿಂದ ತಮ್ಮ ಜನರ ಸಂಗಡ ಹಳಿಯಾಳದ ಗುಂಡೋಳ್ಳಿ ಗ್ರಾಮಕ್ಕೆ ಮಣಿ ಹಾಕಿಕೊಳ್ಳಲು ಹೋಗಿದ್ದು, ಅಲ್ಲಿ ಮಣಿ ಹಾಕುವವರು ಸಿಗದೇ ಇರುವಾಗ ಅಲ್ಲಿಂದ ಮರಳಿ ದಾಂಡೇಲಿಯ ಸರ್ಕಾರಿ ಆಸ್ಪತ್ರೆಗೆ ತರಲಾಗಿದ್ದು, ಆಸ್ಪತ್ರೆಗೆ ತಂದ ನಂತರ 20-00 ಗಂಟೆಯ ಸುಮಾರಿಗೆ ನೋಡಿದ ವೈದ್ಯರು ಮೃತಪಟ್ಟಿರುವ ಬಗ್ಗೆ ತಿಳಿಸಿದ್ದು, ಮೃತನು ಹಾವಿನ ವಿಷದಿಂದ ದಿನಾಂಕ: 14-05-2021 ರಂದು ಸಾಯಂಕಾಲ 19-20 ಗಂಟೆಯಿಂದ 20-00 ಗಂಟೆಯ ನಡುವಿನ ಅವಧಿಯಲ್ಲಿ ಮೃತಪಟ್ಟಿದ್ದು, ಮೃತನ ಶವವು ದಾಂಡೇಲಿಯ ಸರ್ಕಾರಿ ಆಸ್ಪತ್ರೆಯಲ್ಲಿರುತ್ತದೆ. ಇದರ ಹೊರತು ಅವರ ಸಾವಿನಲ್ಲಿ ನನಗೆ ಬೇರೇವ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮಕ್ಕಾಗಿ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ರೇಣುಕಾ ಕೋಂ. ಮಹಾದೇವ ಠಾಕೂರ, ಪ್ರಾಯ-62 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಡಾಳಿ, ರಾಮನಗರ, ತಾ: ಜೋಯಿಡಾ ರವರು ದಿನಾಂಕ: 15-05-2021 ರಂದು 08-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 17-05-2021 12:56 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080