ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 15-11-2021
at 00:00 hrs to 24:00 hrs
ಗೋಕರ್ಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 82/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಪ್ರಕಾಶ ತಂದೆ ಸದಾಶಿವ ಪೇಡ್ನೇಕರ್, ಸಾ|| ದುಬ್ಬನಶಶಿ, ಗೋಕರ್ಣ, ತಾ: ಕುಮಟಾ. ಈತನು ದಿನಾಂಕ: 15-11-2021 ರಂದು 15-15 ಗಂಟೆಗೆ ಕುಮಟಾ ತಾಲೂಕಿನ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ದುಬ್ಬನಶಶಿ ಗ್ರಾಮದ ‘ಕ್ಯಾಂಪ್ ಸಿ’ ರೆಸಾರ್ಟಿಗೆ ಹೋಗುವ ರಸ್ತೆಯಲ್ಲಿ ತನ್ನ ಬಳಿ ಯಾವುದೇ ಪಾಸ್ ಅಥವಾ ಪರವಾನಿಗೆ ಇಲ್ಲದೇ ಕರ್ನಾಟಕ ರಾಜ್ಯದಲ್ಲಿ ಮಾರಾಟಕ್ಕಿರುವ 1). UB EXPORT STRONG Premium Beer ಅಂತಾ ಬರೆದಿರುವ 650 ML ನ ಬಿಯರ್ 18 ಬಾಟಲಿಗಳು, 2). KINGFISHER STRONG Premium Beer ಅಂತಾ ಬರೆದಿರುವ 650 ML ನ ಬಿಯರ್ 16 ಬಾಟಲಿಗಳು, 3). OLD TAVERN Whisky ಅಂತಾ ಬರೆದಿರುವ 180 ML ನ 02 ಮದ್ಯದ ಪ್ಯಾಕೆಟ್ ಗಳು, 4). Original Choice Deluxe Whisky ಅಂತಾ ಬರೆದಿರುವ 90 ML ನ 34 ಮದ್ಯದ ಪ್ಯಾಕೆಟ್ ಗಳು, 5). Haywards Cheers Whisky ಅಂತಾ ಬರೆದಿರುವ 90 ML ನ 72 ಮದ್ಯದ ಪ್ಯಾಕೆಟ್ ಗಳು. ಒಟ್ಟೂ 8,716/- ರೂಪಾಯಿ ಮೌಲ್ಯದ ಬಿಯರ್ ಬಾಟಲಿಗಳನ್ನು ಹಾಗೂ ಮದ್ಯದ ಪ್ಯಾಕೆಟ್ ಗಳನ್ನು ಅಕ್ರಮವಾಗಿ ಸಾಗಾಟ ಮಾಡಿಕೊಂಡು ಬಂದು ಮಾರಾಟ ಮಾಡಲು ತನ್ನ ತಾಬಾದಲ್ಲಿಟ್ಟುಕೊಂಡಿದಾಗ ಪಿರ್ಯಾದಿಯವರು ದಾಳಿ ಮಾಡಿದ ಕಾಲಕ್ಕೆ ಸಿಗದೇ ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ವಸಂತ ಆರ್. ಆಚಾರ್, ಪೊಲೀಸ್ ನಿರೀಕ್ಷಕರು, ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 15-11-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಗೋಕರ್ಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 83/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತೆ ಶ್ರೀಮತಿ ನಾಗಮ್ಮ ದೀಪಕ ರೇಡಕರ್, ಸಾ|| ದುಬ್ಬನಶಶಿ, ಗೋಕರ್ಣ, ತಾ: ಕುಮಟಾ. ಇವಳು ದಿನಾಂಕ: 15-11-2021 ರಂದು 18-15 ಗಂಟೆಗೆ ಕುಮಟಾ ತಾಲೂಕಿನ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯ ದುಬ್ಬನಶಶಿ ಗ್ರಾಮದಲ್ಲಿ ತನ್ನ ಮನೆ ಪಕ್ಕದಲ್ಲಿರುವ ಕಾಂಕ್ರೀಟ್ ರಸ್ತೆಯ ಮೇಲೆ ತನ್ನ ಬಳಿ ಯಾವುದೇ ಪಾಸ್ ಅಥವಾ ಪರವಾನಿಗೆ ಇಲ್ಲದೇ ಕರ್ನಾಟಕ ರಾಜ್ಯದಲ್ಲಿ ಮಾರಾಟಕ್ಕಿರುವ 1). Haywards Cheers Whisky ಅಂತಾ ಬರೆದಿರುವ 90 ML ನ 85 ಮದ್ಯದ ಪ್ಯಾಕೆಟ್ ಗಳು, 2). Original Choice Deluxe Whisky ಅಂತಾ ಬರೆದಿರುವ 90 ML ನ 20 ಮದ್ಯದ ಪ್ಯಾಕೆಟ್ ಗಳು. ಒಟ್ಟೂ 3,686/- ರೂಪಾಯಿ ಮೌಲ್ಯದ ಮದ್ಯದ ಪ್ಯಾಕೆಟ್ ಗಳನ್ನು ಅಕ್ರಮವಾಗಿ ಸಾಗಾಟ ಮಾಡಿಕೊಂಡು ಬಂದು ಮಾರಾಟ ಮಾಡಲು ತನ್ನ ವಶದಲ್ಲಿಟ್ಟುಕೊಂಡಿದಾಗ ಪಿರ್ಯಾದಿಯವರು ದಾಳಿ ಮಾಡಿದ ಕಾಲಕ್ಕೆ ಸಿಗದೇ ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನವೀನ್ ಎಸ್. ನಾಯ್ಕ, ಪಿ.ಎಸ್.ಐ (ಎಲ್&ಓ), ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 15-11-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 200/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರೇಣುಕಾರಾಜ ತಂದೆ ಶಿವಪ್ಪಾ ದೊಡ್ಡಬರಮಣ್ಣನವರ, ಪ್ರಾಯ-23 ವರ್ಷ, ಸಾ|| ತಡಸ್ಲೂರ, ತಾ: ಸೌದತ್ತಿ, ಜಿ: ಬೆಳಗಾವಿ (ಲಾರಿ ನಂ: ಕೆ.ಎ-22/ಡಿ-2379 ನೇದರ ಚಾಲಕ). ಈತನು ದಿನಾಂಕ: 14-11-2021 ರಂದು ಸಾಯಂಕಾಲ 05-20 ಗಂಟೆಗೆ ತನ್ನ ಲಾರಿ ನಂ: ಕೆ.ಎ-22/ಡಿ-2379 ನೇದನ್ನು ಯಲ್ಲಾಪುರ ತಾಲೂಕಿನ ದೇಶಪಾಂಡೆ ನಗರದ ಎ.ಆರ್.ಗ್ಯಾರೇಜ್ ಸಮೀಪ ಕಲಘಟಗಿ ಕಡೆಯಿಂದ ಯಲ್ಲಾಪುರ ಕಡೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಎದುರಿನಿಂದ ಅಂದರೆ ಯಲ್ಲಾಪುರ ಕಡೆಯಿಂದ ಕಲಘಟಗಿ ಕಡೆಗೆ ನಿಧಾನವಾಗಿ ರಸ್ತೆಯ ಎಡಬದಿಯಿಂದ ಸಾಕ್ಷಿದಾರ ಶ್ರೀ ಮಸ್ತಾನ್ ಪರೀಟ್ ರವರು ಚಲಾಯಿಸಿಕೊಂಡು ಬರುತ್ತಿದ್ದ ಮಹೀಂದ್ರಾ ಬೊಲೆರೋ ವಾಹನ ನಂ: ಕೆ.ಎ-28/ಸಿ-2887 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಲಾರಿ ಮತ್ತು ಬೊಲೆರೊ ವಾಹನವನ್ನು ಜಖಂಗೊಳಿಸಿ, ಪಿರ್ಯಾದಿಗೆ ಸಾದಾ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಖಂಡೋಬಾ ತಂದೆ ಸಾಬು ಕರಚೆ, ಪ್ರಾಯ-23 ವರ್ಷ, ವೃತ್ತಿ-ಬೊಲೆರೋ ಚಾಲಕ/ಕ್ಲೀನರ್, ಸಾ|| ಕನ್ನಾಳ ಗ್ರಾಮ, ತಾ&ಜಿ: ವಿಜಾಪುರ ರವರು ದಿನಾಂಕ: 15-11-2021 ರಂದು 01-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಶಿರಸಿ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 111/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರಕಾಶ ತಂದೆ ಶ್ರೀಪಾದ ಹೆಗ್ಡೆ, ಪ್ರಾಯ-36 ವರ್ಷ, ವೃತ್ತಿ-ಬಿಸಿನೆಸ್, ಸಾ|| ಗೋಣ್ಸರ, ವಾಚಗದ್ದೆ, ವಾನಳ್ಳಿ, ತಾ: ಶಿರಸಿ (ವ್ಯಾಗನಾರ್ ಕಾರ್ ನಂ: ಕೆ.ಎ-31/ಡಿ-5814 ನೇದರ ಚಾಲಕ). ಈತನು ದಿನಾಂಕ: 14-11-2021 ರಂದು 23-15 ಗಂಟೆಗೆ ತನ್ನ ವ್ಯಾಗನಾರ್ ಕಾರ್ ನಂ: ಕೆ.ಎ-31/ಡಿ-5814 ನೇದನ್ನು ಶಿರಸಿ ಕಡೆಯಿಂದ ಹುಲೇಕಲ್ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋದವನು, ಶಿರಸಿ-ಹುಲೇಕಲ್ ರಸ್ತೆಯಲ್ಲಿ ಕಳವೆ ಕ್ರಾಸ್ ಹತ್ತಿರದ ತಿರುವಿನ ರಸ್ತೆಯಲ್ಲಿ ತನ್ನ ಕಾರಿನ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ಧರೆಗೆ ಡಿಕ್ಕಿ ಹೊಡೆದು ಪಲ್ಟಿ ಕೆಡವಿ ಅಪಘಾತ ಪಡಿಸಿ, ತನ್ನ ಕಾರನ್ನು ಜಖಂಗೊಳಿಸಿದ್ದಲ್ಲದೇ, ತನಗೆ ತಾನೇ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಚಂದ್ರಶೇಖರ ತಂದೆ ಶಂಕರ ಹೆಗ್ಡೆ, ಪ್ರಾಯ-50 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಗೋಣ್ಸರ, ವಾನಳ್ಳಿ, ತಾ: ಶಿರಸಿ ರವರು ದಿನಾಂಕ: 15-11-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುಂಡಗೋಡ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 150/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಜು ತಂದೆ ವರ್ಗೀಸ್ ವೆಲ್ಲೆಪೆರೆಂಬೀಲ್, ಪ್ರಾಯ-50 ವರ್ಷ, ವೃತ್ತಿ-ವೈರಲೆಸ್ ಪೊಲೀಸ್ ಅಧಿಕಾರಿ, ಸಾ|| ಅರಶಿಣಗೇರಿ, ತಾ: ಮುಂಡಗೋಡ, ಹಾಲಿ ಸಾ|| ಯಲಹಂಕ, ಬೆಂಗಳೂರು (ಕಾರ್ ನಂ: ಕೆ.ಎ-01/ಎಮ್.ಪಿ-6208 ನೇದರ ಚಾಲಕ). ಈತನು ದಿನಾಂಕ: 14-11-2021 ರಂದು ಬೆಂಗಳೂರಿನಿಂದ ಮುಂಡಗೋಡ ತಾಲೂಕಿನ ಕರವಳ್ಳಿ ಗ್ರಾಮಕ್ಕೆ ತನ್ನ ಅಕ್ಕನ ಗಂಡನ ಅಂತ್ಯಸಂಸ್ಕಾರಕ್ಕೆ ಬಂದಿದ್ದವನು, ಅಲ್ಲಿಂದ ತನ್ನ ಅಣ್ಣನಾದ ಪಿರ್ಯಾದಿಯ ಮನೆಯಿರುವ ಇಂದೂರ ಗ್ರಾಮಕ್ಕೆ ರಾತ್ರಿ ವಾಸ್ತವ್ಯಕ್ಕಾಗಿ ತನ್ನ ಕಾರ್ ನಂ: ಕೆ.ಎ-01/ಎಮ್.ಪಿ-6208 ನೇದರ ಮೇಲಾಗಿ ತನ್ನ ಹೆಂಡತಿ ಶ್ರೀಮತಿ ಬ್ಲಸಿ ಕೋಂ. ರಾಜು ವೆಲ್ಲೆಪೆರೆಂಬೀಲ್, ಇವಳೊಂದಿಗೆ ಹೊರಟವನು, ರಾತ್ರಿ 11-30 ಗಂಟೆಯ ಸುಮಾರಿಗೆ ಮುಂಡಗೋಡ-ಕಲಘಟಗಿ ರಸ್ತೆಯ ಅಮ್ಮಾಜಿ ಕೆರೆಯ ಹತ್ತಿರ ತನ್ನ ಕಾರನ್ನು ಅತೀವೆಗವಾಗಿ ಹಾಗೂ ನಿಷ್ಕಾಳಜೀತನದಿಂದ ಚಾಲನೆ ಮಾಡಿಕೊಂಡು ಬಂದು ಕಾರ್ ಮೇಲಿನ ನಿಯಂತ್ರಣ ಕಳೆದುಕೊಂಡು ಅಮ್ಮಾಜಿ ಕೆರೆಯಲ್ಲಿ ಹೋಗಿ ಬಿದ್ದು, ಕಾರ್ ಸಮೇತ ಕೆರೆಯ ನೀರಿನಲ್ಲಿ ಮುಳುಗಿ ತಾನು ಮೃತಪಟ್ಟಿದ್ದಲ್ಲದೇ, ಕಾರಿನಲ್ಲಿದ್ದ ತನ್ನ ಹೆಂಡತಿಯಾದ ಶ್ರೀಮತಿ ಬ್ಲಸಿ ಕೋಂ. ರಾಜು ವೆಲ್ಲೆಪೆರೆಂಬೀಲ್, ಇವಳನ್ನು ಮೃತಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಸಾಮ್ಯುಯೆಲ್ ತಂದೆ ವರ್ಗೀಸ್ ನಾಯ್ಕ, ಪ್ರಾಯ-63 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಇಂದೂರ, ತಾ: ಮುಂಡಗೋಡ ರವರು ದಿನಾಂಕ: 15-11-2021 ರಂದು 08-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹಳಿಯಾಳ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 176/2021, ಕಲಂ: 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಬಿಷ್ಠು ತಂದೆ ದೇವಪ್ಪ ಜೋಗನ್ನವರ, ಪ್ರಾಯ-30 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಗುಂಡೊಳ್ಳಿ ಗ್ರಾಮ, ತಾ: ಹಳಿಯಾಳ. ಈತನು ಪಿರ್ಯಾದಿಯ ಮಗನಾಗಿದ್ದು, ದಿನಾಂಕ: 15-11-2021 ರಂದು 19-30 ಗಂಟೆಯ ಸುಮಾರಿಗೆ ಹಳಿಯಾಳ ತಾಲೂಕಿನ ಗುಂಡೊಳ್ಳಿ ಗ್ರಾಮದಲ್ಲಿ ಪಿರ್ಯಾದಿಯವರು ತಮ್ಮ ಮನೆಯಲ್ಲಿದ್ದಾಗ ಶಿರಡಿಯಲ್ಲಿರುವ ತಮ್ಮ ಹಿರಿಯ ಮಗಳಾದ ಸವಿತಾ ಇವಳು ಪಿರ್ಯಾದಿಯವರಿಗೆ ಪೋನ್ ಮಾಡಿ ಮಾತನಾಡಿ, ನಂತರ ಮನೆಯಲ್ಲಿದ್ದ ಪಿರ್ಯಾದಿಯ ಸೊಸೆ ‘ಸುಮಿತ್ರಾ ಇವಳೊಂದಿಗೆ ಮಾತನಾಡುತ್ತೇನೆ. ಅವಳಿಗೆ ಪೋನ್ ಕೊಡಿ’ ಅಂತಾ ಹೇಳಿದ್ದರಿಂದ ಪಿರ್ಯಾದಿಯವರು ಸುಮಿತ್ರಾಳಿಗೆ ಪೋನ್ ಕೊಡಲು ಹೋದಾಗ ಸುಮಿತ್ರಾಳು ‘ತಾನು ಮಾತನಾಡುವುದಿಲ್ಲ’ ಅಂತಾ ಹೇಳಿದ್ದರಿಂದ ಪಿರ್ಯಾದಿಯವರು ‘ತಮ್ಮ ಮಗಳು ಶಿರಡಿಯಿಂದ ಫೋನ್ ಮಾಡಿ ನಿನ್ನೊಂದಿಗೆ ಮಾತನಾಡಬೇಕು ಅಂದರೆ ಮಾತನಾಡುತ್ತಿಲ್ಲ. ನಿನಗೆ ಎಷ್ಟು ಸೊಕ್ಕು ಐತಿ?’ ಅಂತಾ ಹೇಳಿದ್ದಕ್ಕೆ ಅಲ್ಲಿಯೇ ಇದ್ದ ಸುಮಿತ್ರಾಳ ಗಂಡ ನಮೂದಿತ ಆರೋಪಿತನು ಪಿರ್ಯಾದಿಯವರಿಗೆ ಉದ್ದೇಶಿಸಿ ‘ಏ ಚೋದಿ ಮಗನೇ’ ಅಂತ ಅವಾಚ್ಯವಾಗಿ ಬೈಯ್ದು, ‘ತನ್ನ ಹೆಂಡತಿಗೆ ಯಾಕೆ ಬೈಯ್ಯುತ್ತೀ? ನೀನಷ್ಟೇ ಮಾತನಾಡಿ ಫೋನ್ ಕಟ್ ಮಾಡು’ ಅಂತಾ ಹೇಳಿದ್ದರಿಂದ ಪಿರ್ಯಾದಿಯವರು ಆರೋಪಿತನಿಗೆ ‘ನಿನ್ನ ಹೆಂಡತಿಗೆ ಬುದ್ಧಿವಾದ ಹೇಳುವುದನ್ನು ಬಿಟ್ಟು ತನಗೆ ಯಾಕೆ ಬೈಯ್ಯುತ್ತಿಯಾ?’ ಅಂತಾ ಹೇಳಿದ್ದರಿಂದ ಆರೋಪಿತನು ಸಿಟ್ಟುಗೊಂಡು ಅಲ್ಲಿಯೇ ಬಿದ್ದಿದ್ದ ಒಂದು ಕೊಡಲಿಯನ್ನು ತೆಗೆದುಕೊಂಡು ಅದನ್ನು ತಿರುವಿ ಹಿಡಿದು ಕೊಡಲಿ ಕಾವಿನಿಂದ ಪಿರ್ಯಾದಿಯ ತಲೆಯ ಎಡಬದಿಗೆ ಹೊಡೆದು ರಕ್ತದ ಗಾಯನೋವು ಪಡಿಸಿದ್ದರಿಂದ ಪಿರ್ಯಾದಿಯವರು ನೋವಿನಿಂದ ಬೊಬ್ಬೆ ಹಾಕಿದ್ದರಿಂದ ಪಿರ್ಯಾದಿಯ ಹಿರಿಯ ಮಗ ಸುಭಾಷ ಮತ್ತು ಊರಿನವರಾದ ಜ್ಞಾನೇಶ್ವರ ಹಾಗೂ ಪ್ರೇಮಾನಂದ ಇವರು ಬಂದು ಜಗಳವನ್ನು ಬಿಡಿಸಿದ್ದು ಇರುತ್ತದೆ. ಈ ಘಟನೆಯ ನಂತರ ನಮೂದಿತ ಆರೋಪಿತನು ಪಿರ್ಯಾದಿಗೆ ಉದ್ದೇಶಿಸಿ ‘ಇನ್ನು ಮುಂದೆ ತನ್ನ ಹೆಂಡತಿಯ ತಂಟೆಗೆ ಬಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ದೇವಪ್ಪ ತಂದೆ ಭೀಮರಾವ ಜೋಗನ್ನವರ, ಪ್ರಾಯ-73 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಗುಂಡೊಳ್ಳಿ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 15-11-2021 ರಂದು 21-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 15-11-2021
at 00:00 hrs to 24:00 hrs
ಮುಂಡಗೋಡ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 38/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಲಕ್ಷ್ಮಣ ತಂದೆ ಮಹಾದೇವಪ್ಪ ಭೋವಿ, ಪ್ರಾಯ-29 ವರ್ಷ, ವೃತ್ತಿ-ಫರ್ನೀಚರ್ ಕೆಲಸ, ಸಾ|| ಮಳಗಿ, ತಾ: ಮುಂಡಗೋಡ. ಪಿರ್ಯಾದಿಯ ತಮ್ಮನಾದ ಈತನು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ವೀಪರೀತ ಸರಾಯಿ ಕುಡಿಯುವುದನ್ನು ರೂಢಿಸಿಕೊಂಡಿದ್ದವನು, ಅದೇ ವಿಷಯದಲ್ಲಿ ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ: 14-11-2021 ರಂದು ಬೆಳಿಗ್ಗೆ 08-30 ಗಂಟೆಗೆ ನಮ್ಮ ಮನೆಯಲ್ಲಿ ಹೊಲಕ್ಕೆ ಹೊಡೆಯುವ ಕ್ರಿಮಿನಾಶಕ ವಿಷ ಪದಾರ್ಥ ಸೇವಿಸಿದವನಿಗೆ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದವನಿಗೆ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 15-11-2021 ರಂದು ಬೆಳಗಿನ ಜಾವ 01-15 ಗಂಟೆಗೆ ಮೃತಪಟ್ಟಿರುತ್ತಾನೆ. ಇದರ ಹೊರತು ಅವನ ಮರಣದ ಬಗ್ಗೆ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಮಾ ತಂದೆ ಮಹಾದೇವಪ್ಪ ಭೋವಿ, ಪ್ರಾಯ-29 ವರ್ಷ, ವೃತ್ತಿ-ವಕೀಲ ವೃತ್ತಿ, ಸಾ|| ಮಳಗಿ, ತಾ: ಮುಂಡಗೋಡ ರವರು ದಿನಾಂಕ: 15-11-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಬನವಾಸಿ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 19/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿಯು ಅಂದಾಜು 30-35 ವರ್ಷ ಪ್ರಾಯದ ಅಪರಿಚಿತ ಗಂಡಸ್ಸಾಗಿದ್ದು, ಮೃತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 14-11-2021 ರಂದು ಸಾಯಂಕಾಲ 04-00 ಗಂಟೆಗೆ ಪಿರ್ಯಾದಿ ಹಾಗೂ ಜಗದೀಶ ತಂದೆ ರಾಮು ಭೋವಿವಡ್ಡರ, ಇವರುಗಳು ತಮ್ಮ ಹೋರಿಗಳನ್ನು ಹುಡುಕಲು ದಾಸನಕೊಪ್ಪ-ಶಿರಸಿ ರಸ್ತೆಯ ಬುಗಡಿಕೊಪ್ಪ ಗ್ರಾಮದ ಅರಣ್ಯ ಸರ್ವೇ ನಂ: 44 ರಲ್ಲಿ ಹುಡುಕುತ್ತಿರುವಾಗ ಕವಲು ಮರದ ಕೊಂಬೆಗೆ ಬಟ್ಟೆಯಿಂದ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಇದ್ದಿದ್ದನ್ನು ಕಂಡು ಊರ ಜನರ ಸಮಕ್ಷಮ ಸ್ಥಳವನ್ನು ಗಮನಿಸಿದಾಗ ನೇಣು ಹಾಕಿಕೊಂಡ ಸ್ಥಳದ ಕೆಳಭಾಗದಲ್ಲಿ ತಲೆಬುರುಡೆ, ಕಾಲಿನ ಮೂಳೆಗಳು, ಕೈ ಮೂಳೆಗಳು, ಉಡುದಾರ ಕಟ್ಟಿದ ಮೂಳೆ, ಕಪ್ಪು ಬಣ್ಣದ ಪ್ಯಾಂಟ್, ಕೆಂಪು ಬಣ್ಣದ ಕರ್ಚಿಫ್ ಹಾಗೂ ಪಾರ್ಲೇ-ಜಿ ಬಿಸ್ಕೆಟ್ ಕವರ್ ಬಿದ್ದುಕೊಂಡಿರುತ್ತದೆ. ಇವುಗಳನ್ನು ಗಮನಿಸಿದಾಗ ನಮೂದಿತ ಮೃತನು ಕಳೆದ ಸುಮಾರು 30 ರಿಂದ 35 ದಿನಗಳ ಹಿಂದೆ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಅಥವಾ ಬೇರೇ ಯಾವುದೋ ಕಾರಣದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ದಾಸನಕೊಪ್ಪ-ಶಿರಸಿ ರಸ್ತೆಯ ಬುಗುಡಿಕೊಪ್ಪ ಗ್ರಾಮದ ಅರಣ್ಯ ಸರ್ವೇ ನಂ: 44 ರಲ್ಲಿ ಕವಲು ಮರಕ್ಕೆ ಬಟ್ಟೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ತಿಳಿದು ಬಂದಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಿಖಿಲ್ ತಂದೆ ಚೆನ್ನಪ್ಪ ನಾಯ್ಕ, ಪ್ರಾಯ-21 ವರ್ಷ, ವೃತ್ತಿ-ಚಾಲಕ, ಸಾ|| ಬುಗಡಿಕೊಪ್ಪ, ಪೋ: ಮಳಲಗಾಂವ್, ತಾ: ಶಿರಸಿ ರವರು ದಿನಾಂಕ: 15-11-2021 ರಂದು 09-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======