ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 15-10-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 153/2021, ಕಲಂ: 8(c), 20(b)(ii)(A) ಎನ್.ಡಿ.ಪಿ.ಎಸ್ ಎಕ್ಟ್-2000 ನೇದ್ದರ ವಿವರ...... ನಮೂದಿತ ಆರೋಪಿತರು 1]. ಬೈರು ಪೊಕ್ಕು ಗೌಡ, ಪ್ರಾಯ-50 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬೊಳುಕುಂಟೆ, ಉಳುವರೆ, ತಾ: ಅಂಕೋಲಾ, 2]. ಗುರು ತಂದೆ ಕನ್ನೆ ಗೌಡ, ಪ್ರಾಯ-29 ವರ್ಷ, ವೃತ್ತಿ-ಚಾಲಕ, ಸಾ|| ಬೊಳುಕುಂಟೆ, ಉಳುವರೆ, ತಾ: ಅಂಕೋಲಾ, 3]. ಸುಕ್ರು ನಾಗು ಗೌಡ, ಪ್ರಾಯ-52 ವರ್ಷ, ಸಾ|| ಬೊಳುಕುಂಟೆ, ಉಳುವರೆ, ತಾ: ಅಂಕೋಲಾ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ಮತ್ತು 2 ನೇಯವರು ಸೇರಿಕೊಂಡು ದಿನಾಂಕ: 15-10-2021 ರಂದು 11-25 ಗಂಟೆಗೆ ಅಂಕೋಲಾ ತಾಲೂಕಿನ ಸಗಡಗೇರಿ ಕ್ರಾಸ್ ಉಳುವರೆ ಗ್ರಾಮದಲ್ಲಿ ಯಾವುದೇ ಪಾಸ್ ಮತ್ತು ಪರ್ಮಿಟ್ ಇಲ್ಲದೇ ತಮ್ಮ ಅಕ್ರಮ ಲಾಭಕ್ಕಾಗಿ ಅ||ಕಿ|| 4,500/- ರೂಪಾಯಿ ಮೌಲ್ಯದ 128 ಗ್ರಾಂ. ತೂಕದ ಗಾಂಜಾ ಮಾದಕ ವಸ್ತುವನ್ನು ಮಾರಾಟ ಮಾಡುವ ಉದ್ದೇಶದಿಂದ ಆರೋಪಿ 3 ನೇಯವರಿಂದ ತೆಗೆದುಕೊಂಡು ಬಂದು ತಮ್ಮ ವಶದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ವೇಳೆ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀ ಪ್ರೇಮನಗೌಡ ಪಾಟೀಲ, ಪಿ.ಎಸ್.ಐ-02, ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 15-10-2021 ರಂದು 11-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 181/2021, ಕಲಂ: 307, 504, 506 ಐಪಿಸಿ ಹಾಗೂ ಕಲಂ: 25(1)(ಬಿ) ಭಾರತೀಯ ಆಯುಧ ಕಾಯ್ದೆ-1959 ನೇದ್ದರ ವಿವರ...... ನಮೂದಿತ ಆರೋಪಿತ ಶಬ್ಬೀರ್ ತಂದೆ ಅಬ್ದಲ್ ರಹೀಮ್ ಶೇಖ್, ಪ್ರಾಯ-33 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತಟಗಾರ ಗ್ರಾಮ, ತಾ: ಯಲ್ಲಾಪುರ. ಈತನು ಪಿರ್ಯಾದಿಯವರ ಮಗನಾಗಿದ್ದು, ಯಾವುದೇ ಕೆಲಸ ಮಾಡದೇ ಅಲ್ಲಿ ಇಲ್ಲಿ ತಿರುಗಾಡುತ್ತಾ ಮನೆಗೆ ಸರಿಯಾಗಿ ಬರದೇ ಸರಾಯಿ ಕುಡಿಯುವ ಚಟ ಅಂಟಿಸಿಕೊಂಡಿದ್ದು, ಸರಾಯಿ ಕುಡಿಯುಲು ಹಣ ಕೊಡುವಂತೆ ಪಿರ್ಯಾದಿಗೆ ಹಾಗೂ ಪಿರ್ಯಾದಿಯ ಹೆಂಡತಿಗೆ (ತಾಯಿ) ಮತ್ತು ಪಿರ್ಯಾದಿಯ ಮಗಳು (ತಂಗಿ) ಇವರಿಗೆ ಬೆದರಿಸುವುದು, ‘ಹಣ ಕೊಡದಿದ್ದರೆ ನಿಮ್ಮನ್ನು ಕೊಲೆ ಮಾಡುತ್ತೇನೆ’ ಅಂತಾ ಬೆದರಿಕೆ ಹಾಕುವುದು ಮಾಡುತ್ತಾ ಬಂದವನು, ದಿನಾಂಕ: 15-10-2021 ರಂದು 00-30 ಗಂಟೆಗೆ ಯಲ್ಲಾಪುರ ತಾಲೂಕಿನ ತಟಗಾರ ಗ್ರಾಮದಲ್ಲಿ ಪಿರ್ಯಾದಿಯು ಹಾಗೂ ಸಾಕ್ಷಿದಾರ ಸರ್ಪುದ್ದೀನ್ ಮಕಬುಲ್ ಮುಲ್ಲಾ, ಸಾ|| ದರ್ಗಾ ಗಲ್ಲಿ, ತಾ: ಯಲ್ಲಾಪುರ ಇವರೊಂದಿಗೆ ತನ್ನ ಮನೆಗೆ ಹೋದಾಗ ಮನೆಯಲ್ಲಿದ್ದ ಆರೋಪಿತನು ಅವಾಚ್ಯ ಶಬ್ದಗಳಿಂದ ಬೈಯ್ದು ಅನಧೀಕೃತವಾಗಿ ಎಲ್ಲಿಂದಲೋ ತಂದು ಮನೆಯ ಹಿಂಬದಿಯಲ್ಲಿ ಇಟ್ಟಿದ್ದ ತುಂಬಿದ ನಾಡ ಬಂದೂಕಿನಿಂದ ‘ನಿಮ್ಮನ್ನು ಕೊಲೆ ಮಾಡಿಯೇ ಬಿಡುತ್ತೇನೆ’ ಅಂತಾ ಹೇಳಿದಾಗ ಪಿರ್ಯಾದಿ ಹಾಗೂ ಸಾಕ್ಷಿದಾರ ಸರ್ಪುದ್ದೀನ್ ಇವರು ಹೆದರಿ ಅಲ್ಲಿಂದ ಓಡಿ ಹೋಗುತ್ತಿರುವಾಗ ಅವರ ಕಡೆಗೆ ಬಂದೂಕಿನಿಂದ ಗುಂಡು ಹಾರಿಸಿದ್ದು, ಅದು ಗುರಿ ತಪ್ಪಿದ್ದು, ಆರೋಪಿತನು ಪಿರ್ಯಾದಿ ಹಾಗೂ ಸಾಕ್ಷಿದಾರ ಸರ್ಪುದ್ದೀನ್ ಇವರ ಕೊಲೆಗೆ ಯತ್ನಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಬ್ದಲ್ ರಹೀಮ್ ತಂದೆ ಮಹಮ್ಮದ್ ಯಾಕೂಬ್ಬ ಶೇಖ, ಪ್ರಾಯ-62 ವರ್ಷ, ವೃತ್ತಿ-ರೈತಾಬಿ ಮತ್ತು ಕೂಲಿ ಕೆಲಸ, ಸಾ|| ತಟಗಾರ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 15-10-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 132/2021, ಕಲಂ: 5, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ-2020 ಹಾಗೂ ಕಲಂ: 11(1)(ಬಿ) ಪ್ರಾಣಿ ಹಿಂಸಾ ನಿರ್ಮೂಲನಾ ಕಾಯ್ದೆ-1960 ಮತ್ತು ಕಲಂ: 379 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ 06 ಜನ ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ದಿನಾಂಕ: 15-10-2021 ರಂದು ಬೆಳಗಿನ ಜಾವ 05-00 ಗಂಟೆಯ ಸುಮಾರಿಗೆ ಸಿದ್ದಾಪುರದ ಜಾತಿಕಟ್ಟಾ ಬೂತಪ್ಪ ದೇವಾಲಯದ ಹತ್ತಿರ ಪಿರ್ಯಾದಿಯವರಿಗೆ ಸೇರಿದ 1). ಕಪ್ಪು ಬಣ್ಣದ ಆಕಳು-01, ಅ||ಕಿ|| 10,000/- ರೂಪಾಯಿ ನೇದನ್ನು ಕಳ್ಳತನ ಮಾಡಿ ವಧೆ ಮಾಡುವ ಉದ್ದೇಶದಿಂದ ಗೂಡ್ಸ್ ಪಿಕಪ್ ವಾಹನ ನಂ: ಕೆ.ಎ-36/ಎ-7196 ದಲ್ಲಿ ಹಿಂಸಾತ್ಮಕವಾಗಿ ಹೇರಿಕೊಂಡು ಸಿದ್ದಾಪುರ ಕಡೆಯಿಂದ ಸೊರಬಾ ಕಡೆಗೆ ವಾಹನ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಸುಧೀರ ತಂದೆ ಸದಾಶಿವ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕೊಂಡ್ಲಿ, ತಾ: ಸಿದ್ದಾಪುರ ರವರು ದಿನಾಂಕ: 15-10-2021 ರಂದು 06-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 15-10-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 31/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಜಗದೀಶ ತಂದೆ ಮಾಸ್ತಿ ಪಟಗಾರ, ಪ್ರಾಯ-23 ವರ್ಷ, ವೃತ್ತಿ-ಇಲೆಕ್ಟ್ರಿಕಲ್ ವರ್ಕ್ಸ್, ಸಾ|| ತಲಗೋಡ, ಊರಕೇರಿ, ತಾ: ಕುಮಟಾ. ಈತನು ಇಲೆಕ್ಟ್ರಿಕಲ್ ಕೆಲಸವನ್ನು ಮಾಡಿಕೊಂಡು ಬಂದವನಿದ್ದು, ಹೊಸದಾಗಿ ನಿರ್ಮಿಸುತ್ತಿರುವ ತಮ್ಮ ಮನೆಗೆ ತಮ್ಮ ಮನೆಯ ವಿದ್ಯುತ್ ಮೀಟರಿನಿಂದ ತಾತ್ಕಲಿಕವಾಗಿ ವಾಯರ್ ಗಳ ಮೂಲಕ ವಿದ್ಯುತ್ ಸಂಪರ್ಕವನ್ನು ಮಾಡಿಕೊಂಡಿದ್ದು, ದಿನಾಂಕ: 15-10-2021 ರಂದು ಮಧ್ಯಾಹ್ನ 12-00 ಗಂಟೆಯಲ್ಲಿ ಈತನು ಸ್ನಾನಕ್ಕೆ ಹೋಗುವ ಮುನ್ನ ತನ್ನ ಮೊಬೈಲನ್ನು ಚಾರ್ಜ್ ಮಾಡಲು ಹೋದವನು ಸ್ವಿಚ್ ಬೋರ್ಡಿಗೆ ಮೊಬೈಲ್ ಚಾರ್ಜಿಗೆ ಹಾಕಿದಾಗ ಚಾರ್ಜ್ ಆಗದೇ ಇದ್ದುದನ್ನು ನೋಡಿ, ಸದರ ಸ್ವಿಚ್ ಬೋರ್ಡಿಗೆ ವಿದ್ಯುತ್ ಸಮರ್ಪಕವಾಗಿ ಬಂದಿಲ್ಲವಾಗಿರುವುದರಿಂದ, ಸ್ವಿಚ್ ಬೋರ್ಡಿಗೆ ಅಳವಡಿಸಿದ ವಾಯರ್ ರಗಳು ಜೊಯಿಂಟ್ ಮಾಡಿದ್ದು ಇದ್ದು, ಅವುಗಳು ಸರಿಯಾಗಿ ಇಲ್ಲದೇ ಇರುವುದನ್ನು ಗಮನಿಸಿ, ಅದಕ್ಕೆ ಗಮ್ ಟೇಪ್ ನ್ನು ಸುತ್ತಿ ಸರಿ ಮಾಡಲು ಹೋಗಿ ವಿದ್ಯುತ್ ವಾಯರ್ ನ ಒಳಗಡೆ ಇರುವ ವಿದ್ಯುತ್ ತಂತಿಗೆ ಆತನ ಕೈ ಆಕಸ್ಮಿಕವಾಗಿ ತಾಗಿ, ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ಮಾಸ್ತಿ ಪಟಗಾರ, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ, ವಿಳಾಸ: ತಲಗೋಡ, ಊರಕೇರಿ, ತಾ: ಕುಮಟಾ ರವರು ದಿನಾಂಕ: 15-10-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 32/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಕುಮಾರ: ಮಲ್ಲಿಕಾರ್ಜುನ ತಂದೆ ಶಂಕರಗೌಡಾ ಪಾಟೀಲ್, ಪ್ರಾಯ-27 ವರ್ಷ, ವೃತ್ತಿ-ಕಾರ್ಪೆಂಟರ್ ಕೆಲಸ, ಸಾ|| ತುಮರಿಕೊಪ್ಪಾ  ಗ್ರಾಮ, ತಾ: ಕಲಘಟಗಿ, ಜಿ: ಧಾರವಾಡ, ಹಾಲಿ ಸಾ|| ಗಾಂದಿನಗರ, ಅಳ್ನಾವರ, ತಾ: ಯಲ್ಲಾಪುರ. ಪಿರ್ಯಾದಿಯವರ ಮಗನಾದ ಈತನು ಕಳೆದ ನಾಲ್ಕು ವರ್ಷಗಳಿಂದ ಅಳ್ನಾವರದಲ್ಲಿ ಕಾರ್ಪೆಂಟರ್ ಕೆಲಸ ಮಾಡಿಕೊಂಡು ಇದ್ದವನು, ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜಿವನದಲ್ಲಿ ಜಿಗುಪ್ಸೆಗೊಂಡು ಕಳೆದ ದಿನಾಂಕ: 13-10-2021 ರಂದು ಕಲಘಟಗಿಯಿಂದ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-25/ಎಚ್.ಇ-9935 ನೇದರ ಮೇಲೆ ಯಲ್ಲಾಪುರ ತಾಲೂಕಿನ ದೇಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಶಿವಪುರ ತೂಗು ಸೇತುವೆಯ ಮೇಲೆ ಬಂದು ತನ್ನ ಮೋಟಾರ್ ಸೈಕಲನ್ನು ಶಿವಪುರ ತೂಗು ಸೇತುವೆಯ ಮೇಲೆ ನಿಲ್ಲಿಸಿ, ತನ್ನ ಮೊಬೈಲ್ ಮತ್ತು ಪರ್ಸನ್ನು ಮೋಟಾರ್ ಸೈಕಲಿನ ಟ್ಯಾಂಕ್ ಕವರಿನಲ್ಲಿ ಇಟ್ಟು ದಿನಾಂಕ: 13-10-2021 ರಂದು ಬೆಳಿಗ್ಗೆ 10-00 ಗಂಟೆಯಿಂದ ದಿನಾಂಕ: 15-10-2021 ರಂದು ಮಧ್ಯಾಹ್ನ 12-00 ಗಂಟೆಯ ನಡುವಿನ ಅವಧಿಯಲ್ಲಿ ಸೇತುವೆಯಿಂದ ಕಾಳಿ ನದಿ ಹಿನ್ನೀರಿನಲ್ಲಿ ಹಾರಿ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಶಂಕರಗೌಡಾ ತಂದೆ ಬಸನಗೌಡಾ ಪಾಟೀಲ್, ಪ್ರಾಯ-51 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತುಮರಿಕೊಪ್ಪಾ ಗ್ರಾಮ, ತಾ: ಕಲಘಟಗಿ, ಜಿ: ಧಾರವಾಡ ರವರು ದಿನಾಂಕ: 15-10-2021 ರಂದು 14-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 35/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಸೀತೆ ಕೋಂ. ಸಣ್ಯಾ ನಾಯ್ಕ, ಪ್ರಾಯ-60 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಳೂರು, ಪೋ: ಬಿಳಗಿ, ತಾ: ಸಿದ್ದಾಪುರ. ಪಿರ್ಯಾದಿಯ ತಾಯಿಯಾದ ಇವರಿಗೆ ವಯಸ್ಸಾಗಿದ್ದು, ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದರು. ತಾಯಿಗೆ ಬಿ.ಪಿ ಇತ್ತು ಅಲ್ಲದೇ ಆಗಾಗ ತಲೆ ಸುತ್ತು ಬರುವ ಖಾಯಿಲೆಯಿಂದ ಬಳಲುತ್ತಿದ್ದರು. ದಿನಾಂಕ: 14-10-2021 ರಂದು ಬೆಳಿಗ್ಗೆ ತಾಯಿಯು ಅಕ್ಕನ ಮನೆಯಿಂದ ಚಂದ್ರಗುತ್ತಿಯ ದೇವಸ್ಥಾನಕ್ಕೆ ಹೋಗಲು ಸೋವಿನಕೊಪ್ಪ ಬಸ್ ಸ್ಟ್ಯಾಂಡ್ ನಲ್ಲಿ ಬಸ್ ಕಾಯುತ್ತಿದ್ದವರಿಗೆ ದಾರಿಯಲ್ಲಿ ಬಂದ ಮೋಟಾರ್ ಸೈಕಲ್ ನಂ: ಕೆ.ಎ-31/ಡಬ್ಲ್ಯೂ-8247 ನೇದರ ಸವಾರ ರಾಘವೇಂದ್ರ ತಂದೆ ಗಣಪತಿ ನಾಯ್ಕ, ಸಾ|| ಮಾವಿನಗದ್ದೆ, ತಾ: ಸಿದ್ದಾಪುರ ಇವರು ತಮ್ಮ ಮೋಟಾರ್ ಸೈಕಲ್ ಹಿಂಬದಿಗೆ ತಮ್ಮ ತಾಯಿಯನ್ನು ಕೂಡ್ರಿಸಿಕೊಂಡು ಚಂದ್ರಗುತ್ತಿಗೆ ಹೋಗುತ್ತಿದ್ದಾಗ ಸಮಯ 11-00 ಗಂಟೆಯ ಸುಮಾರಿಗೆ ಸಿದ್ದಾಪುರ-ಚಂದ್ರಗುತ್ತಿ ರಸ್ತೆಯ ಬಳ್ಳಟ್ಟೆ ಕ್ರಾಸ್ ಹತ್ತಿರ ತಮ್ಮ ತಾಯಿಯವರಿಗೆ ಅವರಿಗಿದ್ದ ತಲೆ ಸುತ್ತು ಬರುವ ಖಾಯಿಲೆಯು ಉಲ್ಬಣಿಸಿ ಮೋಟಾರ್ ಸೈಕಲಿನಿಂದ ಕೆಳಗೆ ಬಿದ್ದಿದ್ದರಿಂದ ಅವರ ತಲೆಗೆ ಗಂಭೀರ ಸ್ವರೂಪದ ಗಾಯನೋವು ಆಗಿದ್ದರಿಂದ ಸಿದ್ದಾಪುರದ ತಾಲೂಕಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿಕೊಂಡು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಒಯ್ದು, ಅಲ್ಲಿ ಚಿಕಿತ್ಸೆ ಕೊಡಿಸಿಕೊಂಡು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಿದ್ದಾಪುರಕ್ಕೆ ಬರುತ್ತಿದ್ದಾಗ ದಿನಾಂಕ: 15-10-2021 ರಂದು ಬೆಳಗಿನ ಜಾವ 04-30 ಗಂಟೆಯ ಸುಮಾರಿಗೆ ತಾಯಿಯು ಸಿದ್ದಾಪುರದ ಹೊಸೂರ ಕ್ರಾಸ್ ಹತ್ತಿರ ಕೊನೆಯುಸಿರು ಎಳೆದು ಮೃತಪಟ್ಟಿದ್ದು, ಇದೊಂದು ಅಕಸ್ಮಿಕವಾಗಿ ಸಂಭವಿಸಿದ ಘಟನೆ ಆಗಿದ್ದರಿಂದ ಈ ಕುರಿತು ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಮಾರುತಿ ತಂದೆ ಸಣ್ಯಾ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಳೂರು, ಪೋ: ಬಿಳಗಿ, ತಾ: ಸಿದ್ದಾಪುರ ರವರು ದಿನಾಂಕ: 15-10-2021 ರಂದು 10-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 16-10-2021 03:14 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080