ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 15-09-2021

at 00:00 hrs to 24:00 hrs

 

ಮಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 25/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಜೇಂದ್ರ ತಂದೆ ಹರಿ ಗುನಗಿ, ಪ್ರಾಯ-42 ವರ್ಷ, ಸಾ|| ಗುನಗಿವಾಡಾ, ನೈತಿಸಾವರ, ಕಾರವಾರ (ಮೋಟಾರ್ ಸೈಕಲ್ ನಂ: ಕೆ.ಎ-30/ಆರ್-0810 ನೇದರ ಸವಾರ). ಈತನು ದಿನಾಂಕ: 14-09-2021 ರಂದು ಬೆಳಿಗ್ಗೆ 19-20 ಗಂಟೆಯ ಸುಮಾರಿಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-30/ಆರ್-0810 ನೇದರಲ್ಲಿ ಸಾಮಾನು ತರಲೆಂದು ಮನೆಯಿಂದ ನೈತಿಸಾವರಕ್ಕೆ ಹೋದವನು, ತನ್ನ ಮೋಟಾರ್ ಸೈಕಲನ್ನು ಕಾರವಾರ ದೇವಳಮಕ್ಕಿಯ ರಾಜ್ಯ ಹೆದ್ದಾರಿ ಸಂಖ್ಯೆ-06 ರ ರಸ್ತೆಯ ಮೇಲೆ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ತಪ್ಪಿ ಖಾರ್ಗಾದ ನಾರಾಯಣ ಹೈಸ್ಕೂಲ್ ಹತ್ತಿರದ ರಾಜ್ಯ ಹೆದ್ದಾರಿ ಸಂಖ್ಯೆ-06 ರ ರಸ್ತೆಯಲ್ಲಿ ದನಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿಕೊಂಡು ರಸ್ತೆಯ ಮೇಲೆ ಬಿದ್ದು ತನ್ನ ತಲೆಯ ಭಾಗಕ್ಕೆ ರಕ್ತಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಬಿಜು ತಂದೆ ಗಣಪತಿ ಪಾಗಿ, ಪ್ರಾಯ-40 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಪಾಗಿವಾಡಾ, ನೈತಿಸಾವರ, ಕಾರವಾರ ರವರು ದಿನಾಂಕ: 15-09-2021 ರಂದು 01-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 66/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ನಾಗೇಶ ಗೋವಿಂದ ಗೌಡ, ಪ್ರಾಯ-27 ವರ್ಷ, ವೃತ್ತಿ-ಚಾಲಕ, ಸಾ|| ಹೊಸ್ಕೇರಿ, ಗೋಕರ್ಣ, ತಾ: ಕುಮಟಾ, 2]. ಆನಂದು ತಂದೆ ವಾಸು ಗೌಡ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ಹೊಸ್ಕೇರಿ, ಗೋಕರ್ಣ, ತಾ: ಕುಮಟಾ, 3]. ಸತೀಶ ತಂದೆ ಮುರ್ಕುಂಡಿ ಗೌಡ, ಪ್ರಾಯ-26 ವರ್ಷ, ವೃತ್ತಿ-ಚಾಲಕ, ಸಾ|| ಹೊಸ್ಕೇರಿ, ಗೋಕರ್ಣ, ತಾ: ಕುಮಟಾ, 4]. ಲಕ್ಷ್ಮಣ ತಂದೆ ವೆಂಕಟ್ರಮಣ ಗೌಡ, ಪ್ರಾಯ-38 ವರ್ಷ, ವೃತ್ತಿ-ಚಾಲಕ, ಸಾ|| ಕಡಮೆ, ಗೋಕರ್ಣ, ತಾ: ಕುಮಟಾ. ಈ ನಮೂದಿತ ಆರೋಪಿತರು ದಿನಾಂಕ: 15-09-2021 ರಂದು ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ಬಂಕಿಕೊಡ್ಲ ಗ್ರಾಮದ ಶ್ರೀ ಕಾಶಿ ವಿಶ್ವೇಶ್ವರ ಮಠದ ಎದುರಿನ ರಸ್ತೆಯ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ್ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಇಸ್ಪೀಟ್ ಜೂಗಾರಾಟ ಆಡುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ 1). ನಗದು ಹಣ 6,590/- ರೂಪಾಯಿ, 2). 52 ಇಸ್ಪೀಟ್ ಎಲೆ (ಅ||ಕಿ|| 00.00/- ರೂಪಾಯಿ), 3). ಮಂಡಕ್ಕೆ ಹಾಸಿದ ಬಿಳಿ ನಮೂನೆಯ ಪ್ಲಾಸ್ಟಿಕ್ ಚೀಲ-01 (ಅ||ಕಿ|| 00.00/- ರೂಪಾಯಿ) ಸ್ವತ್ತಿನೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಸುಧಾ ಟಿ. ಅಘನಾಶಿನಿ, ಡಬ್ಲ್ಯೂ.ಪಿ.ಎಸ್.ಐ (ತನಿಖೆ), ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 15-09-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 146/2021, ಕಲಂ: 465, 420, 468, 471 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಾರುತಿ ತಂದೆ ಕೃಷ್ಣಾಜಿ ಸರ್ವದೆ, ಸಾ|| ಶಾರದಾ ಗಲ್ಲಿ, ಕೋರ್ಟ್ ಹತ್ತಿರ, ತಾ: ಯಲ್ಲಾಪುರ, 2]. ಮುರುಳಿ ತಂದೆ ಮಾರುತಿ ಸರ್ವದೆ, ಸಾ|| ಶಾರದಾ ಗಲ್ಲಿ, ಕೋರ್ಟ್ ಹತ್ತಿರ, ತಾ: ಯಲ್ಲಾಪುರ, 3]. ಸಂತೋಷ ತಂದೆ ಮಾರುತಿ ಸರ್ವದೆ, ಸಾ|| ಶಾರದಾ ಗಲ್ಲಿ, ಕೋರ್ಟ್ ಹತ್ತಿರ, ತಾ: ಯಲ್ಲಾಪುರ. ಈ ನಮೂದಿತ ಆರೋಪಿತರೆಲ್ಲರೂ ಸೇರಿಕೊಂಡು ಪಿರ್ಯಾದಿಯವರ ಪಿತ್ರಾರ್ಜಿತ ಆಸ್ಥಿಯಾದ ಯಲ್ಲಾಪುರ ತಾಲೂಕಿನ ಸರ್ವೇ ನಂ: 4/ಎ1 ಎ1 ಎ1 ಹಿಸ್ಸಾ ಜಿ.ಆರ್-392 ಕ್ಷೇತ್ರ 00.03.00.00 ಕ್ಷೇತ್ರವನ್ನು ನಮ್ಮ ವಂಶಾವಳಿಯಲ್ಲಿ ತನ್ನನ್ನು ಹೊರತು ಪಡಿಸಿ ಬೇರೆ ಯಾವುದೇ ಮಕ್ಕಳು ಇಲ್ಲವೆಂದು ಸುಳ್ಳು ದಾಖಲೆಯನ್ನು ಸೃಷ್ಠಿಸಿ, 2005 ನೇ ಸಾಲಿನಲ್ಲಿ ಪಹಣಿ ಪತ್ರದಲ್ಲಿ ಆರೋಪಿ 1 ನೇಯವನಯ ತನ್ನ ಹೆಸರಿನಲ್ಲಿ ತಹಶೀಲ್ದಾರ ರವರ ಕಛೇರಿ ಯಲ್ಲಾಪುರದಲ್ಲಿ ಖಾತಾ ಬದಲಾವಣೆಯನ್ನು ಮಾಡಿಕೊಂಡು ಇನ್ನುಳಿದ ಆರೋಪಿ 2 ಮತ್ತು 3 ನೇಯವರು ಆರೋಪಿ 1 ನೇಯವರೊಂದಿಗೆ ಸೇರಿಕೊಂಡು ಮೋಸ ಮಾಡಿರುತ್ತಾರೆ. ಸದ್ರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿಶ್ವನಾಥ ತಂದೆ ಕಾಶೀನಾಥ ಸರ್ವದೆ, ಪ್ರಾಯ-48 ವರ್ಷ, ವೃತ್ತಿ-ವ್ಯಾಪಾರ, ಸಾ|| ಶಾರದಾ ಗಲ್ಲಿ, ಕೋರ್ಟ್ ಹತ್ತಿರ, ತಾ: ಯಲ್ಲಾಪುರ, ಹಾಲಿ ಸಾ|| 3 ನೇ ಅಡ್ಡ ರಸ್ತೆ, 01 ನೇ ಮುಖ್ಯ ರಸ್ತೆ, ಶಿವಾನಂದ ನಗರ, ಹೆಗ್ಗನಹಳ್ಳಿ, ಬೆಂಗಳೂರು-560091 ರವರು ದಿನಾಂಕ: 15-09-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 15-09-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 25/2021, ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಸುಬ್ರಹ್ಮಣ್ಯ @ ರಾಜು ತಂದೆ ಶಂಕರ ಗೌಡ, ಪ್ರಾಯ-39 ವರ್ಷ, ವೃತ್ತಿ-ವಕೀಲ, ಸಾ|| ಮಾರಿಕಾಂಬಾ ನಗರ, ತಾ: ಶಿರಸಿ. ಈತನು ದಿನಾಂಕ: 14-09-2021 ರಂದು ಸಾಯಂಕಾಲ ಶಿರಸಿಯಿಂದ ನಜೀರ್ ಅಹಮ್ಮದ್ ನಿಸ್ಸಾರ್ ಅಹಮ್ಮದ್ ಮತ್ತು ಸಾಬೀರ್ ಖಾನ್ ರುಜಿದ್ ಖಾನ್ ಇವರೊಂದಿಗೆ ಕುಮಟಾಕ್ಕೆ ಬಂದು ಉಳಿದುಕೊಂಡು, ದಿನಾಂಕ: 15-09-2021 ರಂದು ಮಧ್ಯಾಹ್ನ ಕುಮಟಾದ ವನ್ನಳ್ಳಿಯಲ್ಲಿರುವ ಅರಬ್ಬೀ ಸಮುದ್ರದಲ್ಲಿ ಇರುವ ಬಗ್ಗೆ ಪೋಟೊ ಮತ್ತು ವಿಡಿಯೋವನ್ನು ಶೇರ್ ಮಾಡಿ, ನಂತರ ಸಮುದ್ರದಲ್ಲಿ ಇಳಿದು ನೀರಿನಲ್ಲಿ ಈಜಾಡುತ್ತಿದ್ದಾಗ ಮಧ್ಯಾಹ್ನ 13-30 ಗಂಟೆಗೆ ಅಕಸ್ಮಿಕವಾಗಿ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟ ಬಗ್ಗೆ ಮತ್ತು ಮರಣದ ಬಗ್ಗೆ ಸಂಶಯ ಇರುವ ಬಗ್ಗೆ ಪಿರ್ಯಾದಿ ಶ್ರೀಮತಿ ಸವಿತಾ ಗಂಡ ಸುಬ್ರಹ್ಮಣ್ಯ ಗೌಡ, ಪ್ರಾಯ-34 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಮಾರಿಕಾಂಬಾ ನಗರ, ತಾ: ಶಿರಸಿ ರವರು ದಿನಾಂಕ: 15-09-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 19-09-2021 10:56 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080