ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 16-04-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 90/2021, ಕಲಂ: 323, 341, 427, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹೇಶ ತಂದೆ ಪರಮೇಶ್ವರ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ಹೊಟೇಲ್ ಬಿಸಿನಸ್, ಸಾ|| ಹುಬ್ಬಣಗೇರಿ, ತಾ: ಕುಮಟಾ. ಈತನು ಪಿರ್ಯಾದಿಯ ಮನೆಯ ಹತ್ತಿರದಲ್ಲಿಯೇ ಹೊಟೇಲ್ ಇಟ್ಟುಕೊಂಡಿದ್ದು, ಆರೋಪಿತನ ಹೊಟೇಲಿನ ತ್ಯಾಜ್ಯದ ನೀರು ಪಿರ್ಯಾದಿಯ ಗದ್ದೆಗೆ ಬಿಡುತ್ತಿದ್ದು, ಈ ಬಗ್ಗೆ ಪಿರ್ಯಾದಿಯವರು ಈ ಹಿಂದೆ ಆರೋಪಿತನಿಗೆ ತಿಳಿಸಿ ಹೇಳಿದಕ್ಕೆ ಆರೋಪಿತನು ಪಿರ್ಯಾದಿಯೊಂದಿಗೆ ಜಗಳ ತೆಗೆದು ದ್ವೇಷದಿಂದ ಇದ್ದವನು, ದಿನಾಂಕ: 15-04-2021 ರಂದು ಬೆಳಿಗ್ಗೆ ಆರೋಪಿತನು ತಮ್ಮ ಬಚ್ಚಲು ಮನೆಯ ನೀರು ಹೋಗಲು ಪಿರ್ಯಾದಿಯವರ ಗದ್ದೆಯಲ್ಲಿ ಪೈಪ್ ಅಳವಡಿಸಿದ್ದು, ಅದನ್ನು ತೆಗೆಸುವಂತೆ ಹೇಳಿದಕ್ಕೆ ಸಿಟ್ಟಾದ ಆರೋಪಿತನು ದಿನಾಂಕ: 15-04-2021 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಪಿರ್ಯಾದಿಯು ತನ್ನ ಮನೆಯ ಹತ್ತಿರ ಇದ್ದಾಗ ಆರೋಪಿತನು ಪಿರ್ಯಾದಿಯ ಮನೆಯ ಎದುರಿಗೆ ಕಾಲು ದಾರಿಯಲ್ಲಿ ಬಂದು ಪಿರ್ಯಾದಿಯನ್ನು ಕೂಗಿ ಕರೆದು, ವಿಚಾರಿಸಲು ಬಂದ ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಅಡ್ಡಗಟ್ಟಿ ತಡೆದು ಕೈಯಿಂದ ತಲೆಯ ಮೇಲೆ ಹೊಡೆದು ಹಲ್ಲೆ ಮಾಡಿ, ಕೊಲೆ ಮಾಡುವುದಾಗಿ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಕೃಷ್ಣಪ್ಪಾ ತಂದೆ ಪಾಂಡು ನಾಯ್ಕ, ಪ್ರಾಯ-68 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹುಬ್ಬಣಗೇರಿ, ತಾ: ಕುಮಟಾ ರವರು ದಿನಾಂಕ: 16-04-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 91/2021, ಕಲಂ: 78(3) ಕರ್ನಾಟಕ ಪೊಲಿಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಉಮೇಶ ತಂದೆ ಗೋವಿಂದ ಹರ್ಮಲಕರ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಳ್ವೇಕೋಡಿ, ಮೀನು ಮಾರ್ಕೆಟ್ ಕ್ರಾಸ್, ತಾ: ಕುಮಟಾ. ಈತನು ದಿನಾಂಕ: 17-04-2021 ರಂದು 16-30 ಗಂಟೆಗೆ ಕುಮಟಾದ ಹಂದಿಗೋಣ ಕನ್ನಡ ಶಾಲೆಯ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭಕ್ಕಾಗಿ ಬರ-ಹೋಗುವ ಜನರಿಗೆ ಕೂಗಿ ಕರೆದು 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಅದನ್ನು ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ನಗದು ಹಣ 2,130/- ರೂಪಾಯಿ ಹಾಗೂ ಓ.ಸಿ ಜೂಗಾರಾಟದ ಸಲಕರಣೆಗಳೊಂದಿಗೆ ದಾಳಿಯ ವೇಳೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ (ಕಾ&ಸು-1), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 16-04-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 54/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಜಾನನ ತಂದೆ ರಘುವೀರ ನಾಯ್ಕ, ಪ್ರಾಯ-23 ವರ್ಷ, ಸಾ|| ಯಲ್ವಡಿಕವೂರ, ತಾ: ಭಟ್ಕಳ (ಆಟೋ ರಿಕ್ಷಾ ನಂ: ಕೆ.ಎ-47/ಎ-2089 ನೇದರ ಚಾಲಕ). ಈತನು ದಿನಾಂಕ: 14-04-2021 ರಂದು 11-00 ಗಂಟೆಯ ಸಮಯಕ್ಕೆ ತನ್ನ ಆಟೋ ರಿಕ್ಷಾ ನಂ: .ಎ-47/ಎ-2089 ನೇದನ್ನು ಕೋಣಾರ ಕಡೆಯಿಂದ ಸರ್ಪನಕಟ್ಟಾ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ತನ್ನ ಎದುರುಗಡೆಯಿಂದ ಅಂದರೆ ಸರ್ಪನಕಟ್ಟಾ ಕಡೆಯಿಂದ ಕೋಣಾರ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-5027 ನೇದರ ಸವಾರನಾದ ಪರಮೇಶ್ವರ ತಂದೆ ಮಾಸ್ತಪ್ಪ ನಾಯ್ಕ, ಪ್ರಾಯ-44 ವರ್ಷ, ವೃತ್ತಿ-ಚಾಲಕ, ಸಾ|| ಬೆಣಂದೂರು, ತಾ: ಭಟ್ಕಳ ಇವರಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದರ ಪರಿಣಾಮ ಪರಮೇಶ್ವರ ಈತನ ಬಲಗಾಲಿನ ಪಾದದ ಹತ್ತಿರ, ಮೊಣಗಂಟಿಗೆ, ಬಲಗೈ ಹಾಗೂ ಬಲಭುಜದ ಹತ್ತಿರ ಭಾರೀ ಗಾಯ ಮತ್ತು ಪಿರ್ಯಾದಿಗೆ ಸಾದಾ ಸ್ವರೂಪದ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಈರಪ್ಪ ತಂದೆ ತಿಮ್ಮಯ್ಯ ನಾಯ್ಕ, ಪ್ರಾಯ-41 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಯಲ್ವಡಿಕವೂರು, ತಾ: ಭಟ್ಕಳ ರವರು ದಿನಾಂಕ: 16-04-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 19/2021, ಕಲಂ: 78(3) ಕರ್ನಾಟಕ ಪೊಲಿಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಗಿರೀಶ ತಂದೆ ಮಲ್ಲಿಕಾರ್ಜುನ ಬೂದನೂರು, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ರಾಜಧಾನಿ ಫೈನಾನ್ಸ್ ಹತ್ತಿರ, ಮರಾಠಿಕೊಪ್ಪ, 10 ನೇ ಅಡ್ಡ ರಸ್ತೆ, ತಾ: ಶಿರಸಿ. ಈತನು ದಿನಾಂಕ: 16-04-2021 ರಂದು 16-15 ಗಂಟೆಯ ಸುಮಾರಿಗೆ ಶಿರಸಿ ಶಹರದ ಬನವಾಸಿ ರಸ್ತೆಯ ರಾಮನಬೈಲ್ ಕ್ರಾಸ್ ಹತ್ತಿರ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿರುವಾಗ ಓ.ಸಿ ಮಟಕಾ ಜುಗಾರಾಟದ ಸಲಕರಣೆಗಳಾದ ನಗದು ಹಣ ಒಟ್ಟೂ 1,080/- ರೂಪಾಯಿ, ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01 ಹಾಗೂ ಬಾಲ್ ಪೆನ್-01 ನೇದವುಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಿವಾನಂದ ನಾವದಗಿ, ಪಿ.ಎಸ್.ಐ (ಕಾ&ಸು), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 16-04-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 20/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ದಿವಾಕರ ತಂದೆ ಮಂಜುನಾಥ ನಾಯ್ಕ, ಪ್ರಾಯ 48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಿಸ್ ಗುಂದ್ಲಿ, ಅಜ್ಜಿಬಾಳ, ತಾ: ಶಿರಸಿ. ಈತನು ದಿನಾಂಕ: 16-04-2021 ರಂದು 20-00 ಗಂಟೆಗೆ ಶಿರಸಿಯ ಗಾಂಧಿನಗರದ ಪ್ರೋಗ್ರೆಸಿವ್ ಕಾಲೇಜಿನ ಮೈದಾನದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ಮುಕ್ತವಾಗಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟು, ತನ್ನ ತಾಬಾ HAYWARDS CHEERS WHISKYಅಂತಾ ಲೇಬಲ್ ಇದ್ದ 90 ML ಅಳತೆಯ-15 ಮದ್ಯದ ಪ್ಯಾಕೆಟ್ ಗಳು, ಅ||ಕಿ|| 526.95/- ರೂಪಾಯಿ, HAYWARDS CHEERS WHISKY ಅಂತಾ ಲೇಬಲ್ ಇದ್ದ 90 ML ಅಳತೆಯ ಖಾಲಿ ಪ್ಯಾಕೆಟ್-02, ಅ||ಕಿ|| 00.00/- ರೂಪಾಯಿ, ಮದ್ಯವನ್ನು ಕುಡಿಯಲು ಬಳಸಿದ ಗಾಜಿನ ಗ್ಲಾಸ್-02, ಅ||ಕಿ|| 00.00/- ರೂಪಾಯಿ ಹಾಗೂ ನೀರಿನ ಖಾಲಿ ಬಾಟಲಿಗಳು-2, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟಾಗ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಿವಾನಂದ ನಾವದಗಿ, ಪಿ.ಎಸ್.ಐ (ಕಾ&ಸು), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 16-04-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 37/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ಮಂಜು ಚಲವಾದಿ, ಪ್ರಾಯ-19 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ರಾಮನಗರ ಕ್ವಾರ್ಟರ್ಸ್, ಹುಲೇಕಲ್, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-31/ಆರ್-6054 ನೇದರ ಸವಾರ). ಈತನು ದಿನಾಂಕ: 15-04-2021 ರಂದು ಜಡ್ಡಿಗದ್ದೆಗೆ ತನ್ನ ಮಾವನ ಮಗಳ ಬರ್ತಡೇಗೆ ಹೋಗಿದ್ದವನು, ಬರ್ತಡೇಡೆ ಮುಗಿಸಿಕೊಂಡು ತಡ ರಾತ್ರಿಯಾಗಿ ಪುನಃ ತನ್ನ ಮನೆಗೆ ಜಡ್ಡಿಗದ್ದೆ ಕಡೆಯಿಂದ ಹುಲೇಕಲ್ ಕಡೆಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ಆರ್-6054 ನೇದನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ಬಂದವನು, ದಿನಾಂಕ: 16-04-2021 ರಂದು ಬೆಳಗಿನ ಜಾವ 02-00 ಗಂಟೆಯಿಂದ ಬೆಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ಬಾಳೆಕಾಯಿಮನೆ ಬೂಸನಕೇರಿ ಕ್ರಾಸ್ ಹತ್ತಿರ ತಿರುವಿನಲ್ಲಿ ಮೋಟಾರ್ ಸೈಕಲ್ ವೇಗವನ್ನು ನಿಯಂತ್ರಿಸಲಾಗದೇ, ಮೋಟಾರ್ ಸೈಕಲನ್ನು ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ, ರಸ್ತೆಯ ಬದಿಗೆ ಇರುವ ಧರೆಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿಕೊಂಡು, ತನ್ನ ತಲೆಗೆ ಮತ್ತು ಮುಖಕ್ಕೆ ಭಾರೀ ಸ್ವರೂಪದ ಮಾರಣಾಂತಿಕ ಗಾಯನೋವು ಪಡಿಸಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮೋಹನ ತಂದೆ ಗಣಪತಿ ಚಲವಾದಿ, ಪ್ರಾಯ-18 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಂಚರ್ಟಾ, ಹುಲೇಕಲ್, ತಾ: ಶಿರಸಿ ರವರು ದಿನಾಂಕ: 16-04-2021 ರಂದು 09-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 23/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಸ್ವಾತಿ ತಂದೆ ಮಸಣು ಹುಣಸಿಕಟ್ಟಿ, ಪ್ರಾಯ-18 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಸಾತ್ಮನಿ, ತಾ: ಹಳಿಯಾಳ. ಪಿರ್ಯಾದಿಯ ಮಗಳಾದ ಇವಳು ದಿನಾಂಕ: 15-04-2021 ರಂದು 09-00 ಗಂಟೆಯಿಂದ 18-00 ಗಂಟೆಯ ನಡುವಿನ ಅವಧಿಯಲ್ಲಿ ಹಳಿಯಾಳ ತಾಲೂಕಿನ ಸಾತ್ಮನಿ ಗ್ರಾಮದ ತನ್ನ ಮನೆಯಿಂದ ಕಾಣೆಯಾಗಿದ್ದು, ಸದ್ರಿಯವಳಿಗೆ ಪತ್ತೆಯ ಕುರಿತು ಹುಡುಕಾಡಿದ್ದರಲ್ಲಿ ಈವರೆಗೆ ಸಿಗದೇ ಇರುವುದರಿಂದ ಸದರಿ ಕಾಣೆಯಾದವಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಸಣು ತಂದೆ ತಿಪ್ಪಣ್ಣಾ ಹುಣಸಿಕಟ್ಟಿ, ಪ್ರಾಯ-50 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಸಾತ್ಮನಿ, ತಾ: ಹಳಿಯಾಳ ರವರು ದಿನಾಂಕ: 16-04-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 42/2021, ಕಲಂ: 78(3) ಕರ್ನಾಟಕ ಪೊಲಿಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸಂಜೀವ ತಂದೆ ಉಮೇಶ ನೇತ್ರೇಕರ್, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಸವೇಶ್ವರ ನಗರ, ಅಂಬೇವಾಡಿ, ದಾಂಡೇಲಿ. ಈತನು ದಿನಾಂಕ: 16-04-2021 ರಂದು 17-00 ಗಂಟೆಗೆ ದಾಂಡೇಲಿ ನಗರ ಠಾಣಾ ವ್ಯಾಪ್ತಿಯ ಚೌದರಿ ಗೇಟ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭಕ್ಕಾಗಿ ಅದೃಷ್ಟದ ಅಂಕೆ ಬಂದಲ್ಲಿ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥಕ್ಕೆ ಕಟ್ಟಿಸಿಕೊಂಡು ಓ.ಸಿ ಮಟಕಾ ಜುಗಾರಾಟ ಆಡಿಸುತ್ತಾ ದಾಳಿಯ ಕಾಲಕ್ಕೆ ಒಂದು ಬಾಲ್ ಪೆನ್, ಓ.ಸಿ ಅಂಕೆ-ಸಂಖ್ಯೆ ಬರೆದಿರುವ ಚೀಟಿ ಹಾಗೂ ನಗದು ಹಣ 1,120/- ರೂಪಾಯಿಯ ಸಮೇತ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರಭು ಆರ್. ಗಂಗನಹಳ್ಳಿ, ಪೊಲೀಸ್ ವೃತ್ತ ನಿರೀಕ್ಷಕರು, ದಾಂಡೇಲಿ ವೃತ್ತ, ದಾಂಡೇಲಿ ರವರು ದಿನಾಂಕ: 16-04-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 43/2021, ಕಲಂ: 78(3) ಕರ್ನಾಟಕ ಪೊಲಿಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಸುನೀಲ್ ತಂದೆ ಸುಭಾಷ ಕಂಜರಬಾಟ, ಪ್ರಾಯ 32 ವರ್ಷ, ವೃತ್ತಿ-ಡಬ್ಲ್ಯೂ.ಸಿ.ಪಿ.ಎಮ್ ನಲ್ಲಿ ಕೆಲಸ, ಸಾ|| ಕಂಜರಬಾಟ, ಗಾಂಧಿನಗರ, ದಾಂಡೇಲಿ, 2]. ಅರ್ಜುನ ತಂದೆ ಪ್ರಕಾಶ ಕಂಜರಬಾಟ, ಪ್ರಾಯ 27 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಾಂಧಿನಗರ, ದಾಂಡೇಲಿ, 3]. ಪಟೇಲ್ ತಂದೆ ಹೈಬತ್ ಕಂಜರಬಾಟ, ಪ್ರಾಯ 29 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಂಜರಬಾಟ, ಗಾಂಧಿನಗರ, ದಾಂಡೇಲಿ, 4]. ಸೋನು ತಂದೆ ಅನಿಲ್ ಕಂಜರಬಾಟ, ಪ್ರಾಯ 25 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಂಜರಬಾಟ, ಗಾಂಧಿನಗರ, ದಾಂಡೇಲಿ. ಈ ನಮೂದಿತ ಆರೋಪಿತರು ಕೂಡಿಕೊಂಡು ದಿನಾಂಕ: 16-04-2021 ರಂದು 21-00 ಗಂಟೆಗೆ ದಾಂಡೇಲಿ ನಗರದ ಗಾಂಧಿನಗರದ ಕಂಜರಬಾಟ ಕ್ರಾಸ್ ಹತ್ತಿರದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಗುಂಪು ಕಟ್ಟಿ ನಿಂತುಕೊಂಡು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ನಡೆಯುತ್ತಿರುವ ಐ.ಪಿ.ಎಲ್ ಟಿ-20 ಪಂದ್ಯಾವಳಿಯ ಸೋಲು ಗೆಲುವಿನ ಅದೃಷ್ಟದ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಅದೃಷ್ಟದ ಜೂಗಾರಾಟ ನಡೆಸುತ್ತಿದ್ದಾಗ, ದಾಳಿಯ ಕಾಲಕ್ಕೆ ನಗದು ಹಣ 5,000/- ರೂಪಾಯಿ ಹಾಗೂ ಬೆಟ್ಟಿಂಗ್ ಬಗ್ಗೆ ಬರೆದ ಹಾಳೆಗಳು-02 ಇವುಗಳ ಸಮೇತ ಆರೋಪಿತರೆಲ್ಲರೂ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಯಲ್ಲಪ್ಪ ಎಸ್, ಪಿ.ಎಸ್.ಐ, ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 16-04-2021 ರಂದು 23-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 85/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಅಪ್ಪಾರಾವ್ ಪಾಟೀಲ್, ಪ್ರಾಯ-25 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಪೂರ, ತಾ: ಅಳ್ನಾವರ, ಜಿ: ಧಾರವಾಡ. ಈತನು ದಿನಾಂಕ: 16-04-2021 ರಂದು 21-00 ಗಂಟೆಗೆ ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದ ಬಸ್ ನಿಲ್ದಾಣದ ಹತ್ತಿರ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-22/ಎಚ್.ಡಿ-2477 ನೇದನ್ನು ಹಳಿಯಾಳ ಕಡೆಯಿಂದ ಅಳ್ನಾವರ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ, ತನ್ನ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು, ತೇರಗಾಂವ ಬಸ್ ನಿಲ್ದಾಣದ ಕಡೆಯಿಂದ ತಮ್ಮ ದನದ ದಡ್ಡಿಗೆ ಹಾಲು ಹಿಂಡಲು ಹೋಗುವ ಸಲುವಾಗಿ ರಸ್ತೆಯಲ್ಲಿ ಬರ-ಹೋಗುವ ವಾಹನ ನೋಡಿಕೊಂಡು ರಸ್ತೆ ದಾಟುತ್ತಿದ್ದ ಶಂಕರಪ್ಪ ತಂದೆ ಯಚ್ಚರಪ್ಪ ಅರಕಸಾಲಿ, ಪ್ರಾಯ-28 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ತೇರಗಾಂವ, ತಾ: ಹಳಿಯಾಳ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಸಾಧಾರಣ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಯಾಸೀನ್ ತಂದೆ ಸಿಕೂರ್ ಅಹಮ್ಮದ್ ಡೋನ್ಸಾಲ್, ಪ್ರಾಯ-27 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ತೇರಗಾಂವ, ತಾ: ಹಳಿಯಾಳ ರವರು ದಿನಾಂಕ: 16-04-2021 ರಂದು 22-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 16-04-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 05/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಗಜಾನನ ತಂದೆ ಸುಬ್ರಾಯ ಆಚಾರಿ, ಪ್ರಾಯ-47 ವರ್ಷ, ವೃತ್ತಿ-ಆಚಾರಿ ಕೆಲಸ, ಸಾ|| ಮೇಸ್ತಾವಾಡಾ, ಕಡವಾಡ, ಕಾರವಾರ. ಈತನು ಬಿ.ಪಿ, ಶುಗರ್ ಖಾಯಿಲೆಯಿಂದ ಬಳಲುತ್ತಿದ್ದು, ಈಗ ಕಳೆದ 15 ದಿನಗಳಿಂದ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮಾನಸಿಕತೆಯಿಂದ ಒಬ್ಬನೇ ಯೋಚನೆ ಮಾಡುತ್ತಾ ಮನೆಯಲ್ಲಿ ಇರುತ್ತಿದ್ದವನು, ದಿನಾಂಕ: 16-04-2021 ಬೆಳಿಗ್ಗೆ 05-30 ಗಂಟೆಯ ಸಮಯಕ್ಕೆ ಮನೆಯಲ್ಲಿ ಯಾರಿಗೂ ಹೇಳದೇ ಸೈಕಲ್ ತೆಗೆದುಕೊಂಡು ಹೋದವನು, ಅದೇ ಮಾನಸಿಕತೆಯಿಂದ ಸುಲ್ತಾನಪುರ ಬ್ರಿಡ್ಜ್ ಮೇಲೆ ಸೈಕಲನ್ನು ನಿಲ್ಲಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ನೀರಿನಲ್ಲಿ ಹಾರಿ ಉಸಿರುಗಟ್ಟಿ ಮೃತಪಟ್ಟಿದ್ದು, ಮೃತನ ಮೃತದೇಹವು ಬೆಳಿಗ್ಗೆ 10-45 ಗಂಟೆಗೆ ಸಿಕ್ಕಿದ್ದು ಇರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಲಕ್ಷ್ಮೀ ಕೋಂ. ಗಜಾನನ ಆಚಾರಿ, ಪ್ರಾಯ-37 ವರ್ಷ, ವೃತ್ತಿ-ಗೃಹಿಣಿ, ಸಾ|| ಮೇಸ್ತಾವಾಡಾ, ಕಡವಾಡ, ಕಾರವಾರ ರವರು ದಿನಾಂಕ: 16-04-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 07/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ದತ್ತಾ ತಂದೆ ಮಹಾದೇವ ಮಡಿವಾಳ, ಪ್ರಾಯ-61 ವರ್ಷ, ವೃತ್ತಿ-ಮನೆ ಕೆಲಸ, ಸಾ|| ನಂ: 11/ಎ1, ಗಣೇಶ ಅಪಾರ್ಟಮೆಂಟ್, ಚಾಂದಿವಲಿ ಫಾರ್ಮ್ ರೋಡ್, ಸಂಘರ್ಷ ನಗರ, ಪೂರ್ವ ಮುಂಬೈ, ಮಹಾರಾಷ್ಟ್ರ. ಪಿರ್ಯಾದಿಯ ತಂದೆಯಾದ ಇವರು ಈ ಹಿಂದೆ ಮುಂಬಯಿಯಲ್ಲಿ ಕೋಕೋಕೋಲಾ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದವರು, ಕೊರೋನಾ ರೋಗದ ಲಾಕಡೌನ್ ಸಂದರ್ಭದಲ್ಲಿ ಕೆಲಸದಿಂದ ತೆಗೆದಿದ್ದು, ಇದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮಾನಸಿಕವಾಗಿ ನೊಂದಿದ್ದವರು. ಕಳೆದ 2 ತಿಂಗಳ ಹಿಂದೆ ತಮ್ಮ ಮೂಲ ಊರಾದ ಭಟ್ಕಳ ತಾಲೂಕಿನ ಬೈಲೂರಿಗೆ ಬಂದು ತನ್ನ ಅಕ್ಕ ಶ್ರೀಮತಿ ಸೀತಾ ಕೋಂ. ಮೋಹನ ಮಡಿವಾಳ ಇವರ ಮನೆಯಲ್ಲಿ ವಾಸವಾಗಿದ್ದವರು, ಮಾನಸಿಕವಾಗಿ ನೊಂದು ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕುಂದಾಪುರದ ಆದರ್ಶ ಆಸ್ಪತ್ರೆಗೆ ಹಾಗೂ ಮುರ್ಡೇಶ್ವರದ ಆರ್.ಎನ್.ಎಸ್ ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡು ಮನೆಯಲ್ಲಿ ಉಳಿದುಕೊಂಡಿದ್ದರು. ಹೀಗಿರುತ್ತಾ ದಿನಾಂಕ: 10-04-2021 ರಂದು ಸಾಯಂಕಾಲ 06-15 ಗಂಟೆಗೆ ಮಲಗುವ ಕೋಣೆಯಲ್ಲಿ ಕುತ್ತಿಗೆಗೆ ನೈಲಾನ್ ಹಗ್ಗದಿಂದ ಬಿಗಿದುಕೊಂಡು ಮನೆಯ ಪಕಾಸಿಗೆ ನೇಣು ಹಾಕಿಕೊಂಡವರಿಗೆ ಮನೆಯ ಜನರು ತಪ್ಪಿಸಿ ಮುರ್ಡೇಶ್ವರದ ಆರ್.ಎನ್.ಎಸ್ ಆಸ್ಪತ್ರೆಗೆ ಉಪಚಾರಕ್ಕೆ ಕರೆ ತಂದು, ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಭಟ್ಕಳದ ತಾಲೂಕಾ ಆಸ್ಪತ್ರೆಗೆ ದಾಖಲಿಸಿದ್ದು, ಸದ್ರಿಯವರು ಉಪಚಾರದಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 15-04-2021 ರಂದು ಸಾಯಂಕಾಲ 07-10 ಗಂಟೆಗೆ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಅನೀಲ ತಂದೆ ದತ್ತಾ ಮಡಿವಾಳ, ಪ್ರಾಯ-30 ವರ್ಷ, ವೃತ್ತಿ-ಕೋಟಕ್ ಬ್ಯಾಂಕ್ ಉದ್ಯೋಗಿ, ಸಾ|| ನಂ: 11/ಎ1, ಗಣೇಶ ಅಪಾರ್ಟಮೆಂಟ್, ಚಾಂದಿವಲಿ ಫಾರ್ಮ್ ರೋಡ್, ಸಂಘರ್ಷ ನಗರ, ಪೂರ್ವ ಮುಂಬೈ, ಮಹಾರಾಷ್ಟ್ರ ರವರು ದಿನಾಂಕ: 16-04-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 18-04-2021 04:22 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080