ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 16-04-2022
at 00:00 hrs to 24:00 hrs
ಸಂಚಾರ ಪೊಲೀಸ್ ಠಾಣೆ ಕಾರವಾರ
ಅಪರಾಧ ಸಂಖ್ಯೆಃ 16/2022, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತೆ ಪೂಜಾ ತಂದೆ ತ್ರಿಲೋಚನ ಬೆಹೆರ್, ಪ್ರಾಯ-30 ವರ್ಷ, ವೃತ್ತಿ-ಇಂಡಿಯನ್ ನೇವಿಯಲ್ಲಿ ನೌಕರಿ, ಸಾ|| 3-2-117/1/8, ರೇಲ್ ನಗರ ಕಾಲೋನಿ, ತುರ್ಕಪಲ್ಲಿ, ಬೊಲ್ಲಾರಮ್, ಅಲ್ವಾಲ್, ಹೈದ್ರಾಬಾದ್, ತೆಲಂಗಾಣ (ಕಾರ್ ನಂ: ಎ.ಆರ್-02/ಎ-5391 ನೇದರ ಚಾಲಕಿ). ದಿನಾಂಕ: 16-04-2022 ರಂದು ರಾತ್ರಿ 07-45 ಗಂಟೆಯ ಸುಮಾರಿಗೆ ಪಿರ್ಯಾದಿಯು ತನ್ನ ಕಾರ್ ನಂ: ಕೆ.ಎ-30/ಎಮ್-9397 ನೇದನ್ನು ಪಣಜಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮುಖಾಂತರ ಕಾರವಾರ ಕಡೆಯಿಂದ ಅರ್ಗಾ ಕಡೆಗೆ ತನ್ನ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಬಿಣಗಾದ ಒಕ್ಕಲಕೇರಿಯಲ್ಲಿರುವ ಅಮರಾನ್ ಬ್ಯಾಟರಿ ಅಂಗಡಿಯ ಎದುರುಗಡೆ ಪಿರ್ಯಾದಿಯವರ ಕಾರಿನ ಹಿಂದಿನಿಂದ ಬಂದಂತಹ ಕಾರ್ ನಂ: ಎ.ಆರ್-02/ಎ-5391 ನೇದರ ಆರೋಪಿ ಚಾಲಕಿಯು ತನ್ನ ಕಾರನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವಳು, ತನ್ನ ಕಾರಿನ ಮುಂದಿನಿಂದ ಹೋಗುತ್ತಿದ್ದ ಪಿರ್ಯಾದಿಯವರ ಕಾರಿನ ಹಿಂದಿನ ಭಾಗಕ್ಕೆ ತನ್ನ ಕಾರಿನ ಮುಂದಿನ ಭಾಗದಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರ ಕಾರಿನ ಹಿಂದಿನ ಭಾಗಕ್ಕೆ ಜಖಂ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಚಂದ್ರಹಾಸ ತಂದೆ ಲಕ್ಷ್ಮಣ ದುರ್ಗೇಕರ, ಪ್ರಾಯ-48 ವರ್ಷ, ವೃತ್ತಿ-ಇಂಡಿಯನ್ ನೇವಿಯಲ್ಲಿ ಸಿವಿಲಿಯನ್ ನೌಕರಿ, ಸಾ|| ಸೀಬರ್ಡ ಕಾಲೋನಿ, ಚಿತ್ತಾಕುಲಾ, ಕಾರವಾರ ರವರು ದಿನಾಂಕ: 16-04-2022 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಅಂಕೋಲಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 66/2022, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮೂರ್ತಿ ತಂದೆ ಓಮು ನಾಯ್ಕ, ಪ್ರಾಯ-22 ವರ್ಷ, ವೃತ್ತಿ-ಕಿರಾಣಿ ಅಂಗಡಿ ವ್ಯಾಪಾರ, ಸಾ|| ಮೀನು ಮಾರ್ಕೆಟ್ ಹತ್ತಿರ, ಬಂಕಿಕೊಡ್ಲ, ತಾ: ಕುಮಟಾ, 2]. ಕೃಷ್ಣ ಗೌಡ, ಸಾ|| ಮಾವಿನಕುರ್ವೆ, ತಾ: ಹೊನ್ನಾವರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 16-04-2022 ರಂದು 13-30 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಬಳಲೆ ಗ್ರಾಮದ ಹೈವೇ ಹತ್ತಿರದ ಬಸ್ ತಂಗುದಾಣದ ಎದುರು ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ರಸ್ತೆಯಲ್ಲಿ ಬರ-ಹೋಗುವ ಸಾರ್ವಜನಿಕರಿಗೆ ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳುತ್ತಾ, ಸಾರ್ವಜನಿಕರಿಂದ ಹಣ ಪಡೆದು ತನ್ನ ಹತ್ತಿರ ಇರುವ ಹಾಳೆಯಲ್ಲಿ ಅಂಕೆ-ಸಂಖ್ಯೆ ಬರೆದುಕೊಂಡು ಓ.ಸಿ ಮಟಕಾ ಜೂಗಾರಾಟ ಆಡುತ್ತಿದ್ದಾಗ ವಿವಿಧ ಮುಖಬೆಲೆಯ ನಗದು ಹಣ 1,360/- ರೂಪಾಯಿ ಮತ್ತು ಓ.ಸಿ ಮಟಕಾ ಜೂಗಾರಾಟದ ಸಲಕರಣೆಯೊಂದಿಗೆ ದಾಳಿಯ ಕಾಲಕ್ಕೆ ಸಿಕ್ಕಿದ್ದಲ್ಲದೇ, ಓ.ಸಿ ಮಟಕಾ ಜೂಗಾರಾಟದಿಂದ ಸಂಗ್ರಹವಾದ ಹಣವನ್ನು ಓ.ಸಿ ಬುಕ್ಕಿಯಾದ ಆರೋಪಿ 2 ನೇಯವನು ತೆಗೆದುಕೊಳ್ಳುತ್ತಿದ್ದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷ ಶೆಟ್ಟಿ, ಪೊಲೀಸ್ ನಿರೀಕ್ಷಕರು, ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 16-04-2022 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಅಂಕೋಲಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 67/2022, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಬೀರಾ ತಂದೆ ಮುದ್ದು ಗೌಡ, ಪ್ರಾಯ-36 ವರ್ಷ, ವೃತ್ತಿ-ಅಂಗಡಿಯಲ್ಲಿ ಕೆಲಸ, ಸಾ|| ಪೈ ವಿಹಾರ ಹತ್ತಿರ, ಬಳಲೆ, ತಾ: ಅಂಕೋಲಾ, 2]. ನಾಗರಾಜ ಕಮಲಾಕರ ನಾಯಕ, ಸಾ|| ಕನ್ನಡ ಶಾಲೆಯ ಹತ್ತಿರ, ಬಳಲೆ, ತಾ: ಅಂಕೋಲಾ. ಈತನು ದಿನಾಂಕ: 16-04-2022 ರಂದು 13-50 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಬಳಲೆ ಸಾರ್ವಜನಿಕ ಗಣೇಶೋತ್ಸವ ಕಟ್ಟಡದ ಎದುರು ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ರಸ್ತೆಯಲ್ಲಿ ಬರ-ಹೋಗುವ ಸಾರ್ವಜನಿಕರಿಗೆ ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳುತ್ತಾ, ಸಾರ್ವಜನಿಕರಿಂದ ಹಣ ಪಡೆದು ತನ್ನ ಹತ್ತಿರ ಇರುವ ಹಾಳೆಯಲ್ಲಿ ಅಂಕೆ-ಸಂಖ್ಯೆ ಬರೆದುಕೊಂಡು ಓ.ಸಿ ಮಟಕಾ ಜೂಗಾರಾಟ ಆಡುತ್ತಿದ್ದಾಗ ವಿವಿಧ ಮುಖಬೆಲೆಯ ನಗದು ಹಣ 640/- ರೂಪಾಯಿ ಮತ್ತು ಓ.ಸಿ ಜೂಗಾರಾಟದ ಸಲಕರಣೆಯೊಂದಿಗೆ ದಾಳಿಯ ಕಾಲಕ್ಕೆ ಸಿಕ್ಕಿದ್ದಲ್ಲದೇ, ಓ.ಸಿ ಮಟಕಾ ಜೂಗಾರಾಟದಿಂದ ಸಂಗ್ರಹವಾದ ಹಣವನ್ನು ಓ.ಸಿ ಬುಕ್ಕಿಯಾದ ಆರೋಪಿ 2 ನೇಯವನು ತೆಗೆದುಕೊಳ್ಳುತ್ತಿದ್ದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರವೀಣಕುಮಾರ ಆರ್, ಪಿ.ಎಸ್.ಐ (ಕಾ&ಸು), ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 16-04-2022 ರಂದು 16-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕುಮಟಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 83/2022, ಕಲಂ: 323, 324, 341, 504 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಗಣೇಶ ಶಂಕರ ಹರಿಕಂತ್ರ, ಪ್ರಾಯ-27 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಅಘನಾಶಿನಿ, ತಾ: ಕುಮಟಾ, 2]. ಸಚಿನ ಪರಮೇಶ್ವರ ಹರಿಕಂತ್ರ, ಪ್ರಾಯ-26 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಅಘನಾಶಿನಿ, ತಾ: ಕುಮಟಾ, 3]. ಗಣೇಶ ಹರಿಕಂತ್ರ, ಪ್ರಾಯ-26 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಅಘನಾಶಿನಿ, ತಾ: ಕುಮಟಾ, 4]. ಪ್ರೇಮಾನಂದ ಹರಿಕಂತ್ರ, ಪ್ರಾಯ-26 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಅಘನಾಶಿನಿ, ತಾ: ಕುಮಟಾ. ಈ ನಮೂದಿತ ಆರೋಪಿತರು ಈ ಹಿಂದೆ ಪಿರ್ಯಾದಿಯೊಂದಿಗೆ ಮೀನುಗಾರಿಕೆ ಕೆಲಸವನ್ನು ಮಾಡಿಕೊಂಡಿದ್ದವರಿದ್ದು, ಆ ಸಮಯದಲ್ಲಿ ವೈಯಕ್ತಿಕ ವಿಷಯವಾಗಿ ಪಿರ್ಯಾದಿ ಹಾಗೂ ಆರೋಪಿತರಿಗೆ ಜಗಳವಾಗಿದ್ದು, ಈ ವಿಷಯವಾಗಿ ಆರೋಪಿತರೂ ಪಿರ್ಯಾದಿಯೊಂದಿಗೆ ದ್ವೇಷದಿಂದಿದ್ದವರು, ದಿನಾಂಕ: 16-04-2022 ರಂದು ರಾತ್ರಿ 20-30 ಗಂಟೆಯಲ್ಲಿ ಪಿರ್ಯಾದಿಯು ತನ್ನ ಸ್ನೇಹಿತನಾದ ಶ್ರೀ ನಾಗರಾಜ ತಂದೆ ಬೀರಾ ಮುಕ್ರಿ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೊಲನಗದ್ದೆ, ತಾ: ಕುಮಟಾ ಈತನೊಂದಿಗೆ ಗುಡೇಅಂಗಡಿಯಲ್ಲಿರುವ ಅರಬ್ಬಿ ಸಮುದ್ರದ ದಡದಲ್ಲಿ (ಬೀಚಿನಲ್ಲಿ) ಕುಳಿತುಕೊಂಡಿದ್ದನ್ನು ನೋಡಿ ಆರೋಪಿತರು ಹಳೆಯ ದ್ವೇಷದಿಂದ ಒಮ್ಮೇಲೆ ಪಿರ್ಯಾದಿಯ ಮೈಮೇಲೆ ಏರಿ ಬಂದು ಹೊಡೆದಿದ್ದು, ಆಗ ಪಿರ್ಯಾದಿಯು ತಪ್ಪಿಸಿಕೊಂಡು ಹೋಗಲು ಪ್ರಯತ್ನಸಿದಾಗ ಆರೋಪಿತರೆಲ್ಲರೂ ಸೇರಿಕೊಂಡು ಪಿರ್ಯಾದಿಯನ್ನು ಅಡ್ಡಗಟ್ಟಿ ತಡೆದಿದ್ದಲ್ಲದೇ, ಆರೋಪಿ 1 ನೇಯವನು ಪಿರ್ಯಾದಿಗೆ ಬಿಯರ್ ಬಾಟಲಿಯಿಂದ ತಲೆಯ ಹಿಂಭಾಗಕ್ಕೆ ಹೊಡೆದು ಗಾಯಗೊಳಿಸಿದ್ದು, ಆಗ ಹೊಡೆಯುವುದನ್ನು ತಪ್ಪಿಸಲು ಬಂದ ನಾಗರಾಜ ಮುಕ್ರಿ, ಈತನಿಗೂ ಉಳಿದ ಆರೋಪಿತರೂ ಆತನನ್ನು ದೂಡಿ ನೆಲಕ್ಕೆ ಹಾಕಿ, ಕಾಲಿನಿಂದ ಒದ್ದು, ಎದೆಯ ಭಾಗಕ್ಕೆ ಉಗುರಿನಿಂದ ಗೀರಿ ಗಾಯಗೊಳಿಸಿದ್ದಲ್ಲದೇ, ಅವರಿಬ್ಬರಿಗೂ ಕೆಟ್ಟ ಕೆಟ್ಟ ಶಬ್ದಗಳಿಂದ ಬೈಯ್ದ ಬಗ್ಗೆ ಪಿರ್ಯಾದಿ ಶ್ರೀ ಮನೋಜ ತಂದೆ ದುರ್ಗು ಹರಿಕಂತ್ರ, ಪ್ರಾಯ-22 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಮಾದರಿ ರಸ್ತೆ, ಗುಡೇಅಂಗಡಿ, ತಾ: ಕುಮಟಾ ರವರು ದಿನಾಂಕ: 16-04-2022 ರಂದು 23-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುರ್ಡೇಶ್ವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 50/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಗಣಪತಿ ತಂದೆ ಮಂಜಪ್ಪ ನಾಯ್ಕ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಣ್ಣಬಲಸೆ, ಮುರ್ಡೇಶ್ವರ, ತಾ: ಭಟ್ಕಳ. ಈತನು ದಿನಾಂಕ: 16-04-2022 ರಂದು 18-15 ಗಂಟೆಗೆ ಮುರ್ಡೇಶ್ವರ ಅರಬ್ಬಿ ಸಮುದ್ರದ ದಂಡೆಯ ಹತ್ತಿರ ಯಾರೋ 4 ಜನರೊಂದಿಗೆ ಸೇರಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಸರಾಯಿ ಕುಡಿಯುತ್ತಾ ಕುಳಿತ್ತಿದ್ದು, ದಾಳಿಯ ಸಮಯ 4 ಜನರು ಓಡಿ ಹೋಗಿದ್ದು, ನಮೂದಿತ ಆರೋಪಿತನು 1). 180 ML ನ OLD TAVERN Whisky ಪ್ಯಾಕೆಟ್-1 (ಅ||ಕಿ|| 86.00/- ರೂಪಾಯಿ), 2). 90 ML ನ Haywards Whisky ಖಾಲಿ ಪ್ಯಾಕೆಟ್ ಗಳು-4 (ಅ||ಕಿ|| 00.00/- ರೂಪಾಯಿ), 3). 90 ML ನ Haywards Whisky ಪ್ಯಾಕೆಟ್ ಗಳು-8 (ಅ||ಕಿ|| 281.00/- ರೂಪಾಯಿ), 4). ಪ್ಲಾಸ್ಟಿಕ್ ಗ್ಲಾಸ್-4 (ಅ||ಕಿ|| 00.00/- ರೂಪಾಯಿ). ಹೀಗೆ ಒಟ್ಟೂ 367 ರೂಪಾಯಿಯ ಅಬಕಾರಿ ಸ್ವತ್ತುಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ದೇವರಾಜ ಸಿದ್ದಣ್ಣ ಬಿರಾದಾರ, ಪಿ.ಎಸ್.ಐ (ತನಿಖೆ), ಮುರ್ಡೇಶ್ವರ ಪೋಲಿಸ್ ಠಾಣೆ ರವರು ದಿನಾಂಕ: 16-04-2022 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಭಟ್ಕಳ ಶಹರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 48/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಜುಲ್ಕಾರನೈನ್ ತಂದೆ ಮೊಹಮ್ಮದ್ ಸಲೀಂ ಖಾಜಿಯಾ, ಪ್ರಾಯ-22 ವರ್ಷ, ಸಾ|| ಕೆ.ಎಚ್.ಬಿ ಕಾಲೋನಿ, ಸೀಫಾ ನರ್ಸಿಂಗ್ ಹೋಮ್ ಸಮೀಪ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಎಚ್-7633 ನೇದರ ಸವಾರ). ಈತನು ದಿನಾಂಕ: 09-04-2022 ರಂದು ರಾತ್ರಿ 21-15 ಗಂಟೆಯ ಸುಮಾರಿಗೆ ಭಟ್ಕಳ ಶಹರದ ಹಳೇ ಬಸ್ ನಿಲ್ದಾಣದ ಹತ್ತಿರದ ದರ್ಗಾ ಎದುರಿಗೆ ಮುಖ್ಯ ರಸ್ತೆಯ ಮೇಲೆ ತನ್ನ ಮೋಟಾರ್ ಸೈಕಲನ್ನು ಭಟ್ಕಳದ ಅರ್ಬನ್ ಬ್ಯಾಂಕ್ ಕಡೆಯಿಂದ ಹಳೇ ಬಸ್ ನಿಲ್ದಾಣದ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಹಳೇ ಬಸ್ ನಿಲ್ದಾಣದ ಕಡೆಯಿಂದ ಭಟ್ಕಳದ ಅರ್ಬನ್ ಬ್ಯಾಂಕ್ ಕಡೆಗೆ ಪಿರ್ಯಾದಿಯವರ ಸಹೋದರ ಶ್ರೀ ಜೆ. ಮೊಹಮ್ಮದ್ ಅಲ್ತಾಪ್ ತಂದೆ ಜೆ. ಮೊಹಮ್ಮದ್ ಆಶ್ಪಾಕ್, ಪ್ರಾಯ-20 ವರ್ಷ, ವೃತ್ತಿ-ವೆಲ್ಡಿಂಗ್ ಕೆಲಸ, ಸಾ|| ಬಂದರ್ ರೋಡ್, ಮಗ್ದುಂ ಕಾಲೋನಿ ಕ್ರಾಸ್, ನಿಜಾಮ್ ಕಬಾಬ್ ಶಾಫ್ ಪಕ್ಕ, ತಾ: ಭಟ್ಕಳ ಇವರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-20/ಇ.ಬಿ-9922 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಾದ ಪಿರ್ಯಾದಿಯವರ ಸಹೋದರ ಶ್ರೀ ಜೆ. ಮೊಹಮ್ಮದ್ ಅಲ್ತಾಪ್ ಇವರಿಗೆ ಮುಖಕ್ಕೆ, ಹಾಗೂ ತಲೆಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ತನಗೂ ಕೂಡಾ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಜೆ. ಮೊಹಮ್ಮದ್ ಅಖೀಲ್ ತಂದೆ ಜೆ. ಮೊಹಮ್ಮದ್ ಆಶ್ಪಾಕ್, ಪ್ರಾಯ-29 ವರ್ಷ, ವೃತ್ತಿ-ಡಿಜಿಟಲ್ ಮಾರ್ಕೆಟಿಂಗ್ ಕೆಲಸ, ಸಾ|| ಬಂದರ್ ರೋಡ್, ಮಗ್ದುಂ ಕಾಲೋನಿ ಕ್ರಾಸ್, ನಿಜಾಮ್ ಕಬಾಬ್ ಶಾಫ್ ಪಕ್ಕಮ, ತಾ: ಭಟ್ಕಳ ರವರು ದಿನಾಂಕ: 16-04-2022 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 14/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಉಮೇಶ ತಂದೆ ಬಸವರಾಜ ಶೆಪುರ, ಸಾ|| ವಿದ್ಯಾನಗರ, ಹುಬ್ಬಳ್ಳಿ (ಕಾರ್ ನಂ: ಕೆ.ಎ-63/ಎಮ್-5418 ನೇದರ ಚಾಲಕ). ಈತನು ದಿನಾಂಕ: 16-04-2022 ರಂದು 11-30 ಗಂಟೆಗೆ ದಾಂಡೇಲಿ ತಾಲೂಕಿನ ಕೇರವಾಡ ಗ್ರಾಮದ ದಾಂಡೇಲೆಪ್ಪಾ ನಗರದ ಹತ್ತಿರ ದಾಂಡೇಲಿ-ಹಳಿಯಾಳ ರಾಜ್ಯ ಹೆದ್ದಾರಿಯ ಮೇಲೆ ತನ್ನ ಕಾರ್ ನಂ: ಕೆ.ಎ-63/ಎಮ್-5418 ನೇದನ್ನು ಹಳಿಯಾಳ ಕಡೆಯಿಂದ ದಾಂಡೇಲಿ ಕಡೆಗೆ ಬರಲು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತನ್ನ ಕಾರಿನ ವೇಗವನ್ನು ನಿಯಂತ್ರಿಸಲಾಗದೇ, ಯಾವುದೇ ಅಂತರವನ್ನು ಕಾಯ್ದುಕೊಳ್ಳದೇ, ಹಳಿಯಾಳ ಕಡೆಯಿಂದ ದಾಂಡೇಲಿ ಕಡೆಗೆ ಪಿರ್ಯಾದಿ, ಪಿರ್ಯಾದಿಯ ತಾಯಿ ಹಾಗೂ ಪಿರ್ಯಾದಿಯ ಗಂಡ ಇವರು ಮೂರು ಜನರು ಕುಳಿತುಕೊಂಡು ಬುರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-65/ಇ-1213 ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅವರು ಮೋಟಾರ್ ಸೈಕಲ್ ಸಮೇತ ರಾಜ್ಯ ಹೆದ್ದಾರಿಯ ಮೇಲೆ ಬೀಳುವಂತೆ ಮಾಡಿ, ಮೋಟಾರ್ ಸೈಕಲ್ ಚಾಲಕನಾದ ಪಿರ್ಯಾದಿಯ ಗಂಡ ಶ್ರೀ ಸಾವು ತಂದೆ ದೊಂಡು ಜೋರೆ, ಈತನಿಗೆ ತಲೆಯ ಎಡಬದಿಯಲ್ಲಿ ಒಳಗಾಯ, ಎಡಬದಿಯ ಸೊಂಟಕ್ಕೆ ಒಳಗಾಯ, ಎಡಗಾಲು ಪಾದ ಮತ್ತು ಬೆರಳಿಗೆ, ಎಡ ಮೊಣಕೈ ಹತ್ತಿರ ಮತ್ತು ಮಣಿಕಟ್ಟಿನ ಹತ್ತಿರ, ಬಲ ಮೊಣಕೈಗೆ ತೆರಚಿದ ರಕ್ತದ ಗಾಯನೋವು ಪಡಿಸಿ, ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತಿದ್ದ ಸವಾರರ ಪೈಕಿ ಪಿರ್ಯಾದಿ ಶ್ರೀಮತಿ ಸಾವುಬಾಯಿ ಕೋಂ. ಸಾವು ಜೋರೆ ಇವರಿಗೆ ಹಣೆಗೆ ಊದಿಕೊಂಡ ಗಾಯ, ಎಡಗೈ ಮಣಿಕಟ್ಟಿನ ಹತ್ತಿರ, ಎಡಗಾಲಿನ ಪಾದಕ್ಕೆ ತೆರಚಿದ ರಕ್ತದ ಗಾಯನೋವು ಪಡಿಸಿ, ಪಿರ್ಯಾದಿಯ ತಾಯಿ ಶ್ರೀಮತಿ ಸಕ್ಕೂಬಾಯಿ ಕೋಂ. ಗಂಗಾರಾಮ ವರಕ ಇವರಿಗೆ ಬಲಬದಿಯ ಸೊಂಟದ ಹತ್ತಿರ ಒಳಗಾಯ, ಎಡಗೈ ಬೆರಳಿಗೆ ಮತ್ತು ಬಲ ಮೊಣಕೈ ಹತ್ತಿರ ತೆರಚಿದ ರಕ್ತದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ಸಾವುಬಾಯಿ ಕೋಂ. ಸಾವು ಜೋರೆ, ಪ್ರಾಯ-23 ವರ್ಷ, ವೃತ್ತಿ-ಗೃಹಿಣಿ, ಸಾ|| ಗೌಳಿವಾಡ, ಬಿರಂಪಾಲಿ ಗ್ರಾಮ, ತಾ: ಜೋಯಿಡಾ ರವರು ದಿನಾಂಕ: 16-04-2022 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ದಾಂಡೇಲಿ ನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 32/2022, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹಾಂತೇಶ ತಂದೆ ಬಸ್ಸು ಭಜಂತ್ರಿ, ಪ್ರಾಯ-38 ವರ್ಷ, ಸಾ|| ಕುಂದರಗಿ, ತಾ: ಬಿಳಗಿ, ಬಾಗಲಕೋಟೆ (ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-25/ಎಫ್-2977 ನೇದರ ಚಾಲಕ). ಈತನು ದಿನಾಂಕ: 11-04-2022 ರಂದು 07-30 ಗಂಟೆಯ ಸುಮಾರಿಗೆ ದಾಂಡೇಲಿ-ಹಳಿಯಾಳ ರಸ್ತೆಯ 3 ನಂಬರ್ ಗೇಟ್ ಹತ್ತಿರದ ರಾಜ್ಯ ಹೆದ್ದಾರಿ ಸಂಖ್ಯೆ-46 ರ ಮೇಲೆ ತನ್ನ ಬಾಬ್ತು ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-25/ಎಫ್-2977 ನೇದನ್ನು ದಾಂಡೇಲಿ ಕಡೆಯಿಂದ ಹಳಿಯಾಳ ಕಡೆಗೆ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಅತೀವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ರಸ್ತೆಯ ಮೇಲೆ ಇದ್ದ ಹೊಂಡವನ್ನು ನೋಡದೇ ಹೊಂಡದ ಮೇಲೆ ಅತೀವೇಗವಾಗಿ ಚಲಾಯಿಸಿದ್ದರಿಂದ ಬಸ್ಸಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಶ್ರೀಮತಿ ಸಂಗೀತಾ ಕೋಂ. ಮೋತೇಸ್ ಮೆನೆಂಜಸ್ ರವರು ಕುಳಿತಿದ್ದ ಹಿಂದಿನ ಸೀಟಿನಿಂದ ಕೆಳಗೆ ಬಸ್ಸಿನ ಮೆಟ್ಟಿಲುಗಳ ಮೇಲೆ ಬೀಳುವಂತೆ ಅಪಘಾತ ಪಡಿಸಿ, ಶ್ರೀಮತಿ ಸಂಗೀತಾ ಮೆನೆಂಜಸ್ ಇವರಿಗೆ ಬೆನ್ನಿನ ಮೂಳೆ ಮುರಿಯುವಂತೆ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಫ್ರಾನ್ಸಿಸ್ ತಂದೆ ವಿಕ್ಟರ್ ವರ್ತ, ಪ್ರಾಯ-21 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಗಣೇಶನಗರ, ತಾ: ದಾಂಡೇಲಿ ರವರು ದಿನಾಂಕ: 16-04-2022 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ರಾಮನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 21/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶರಣಯ್ಯ ತಂದೆ ಸೋಗಯ್ಯ, ಪ್ರಾಯ-21 ವರ್ಷ, ಸಾ|| ದೋಬಿ ಗಲ್ಲಿ, ತಾ: ಸುರಾಪುರ, ಜಿ: ಯಾದಗಿರಿ (ಸ್ವಿಫ್ಟ್ ಡಿಸೈರ್ ನಂ: ಕೆ.ಎ-33/ಎ-9480 ನೇದರ ಚಾಲಕ). ದಿನಾಂಕ: 16-04-2022 ರಂದು ಸಾಯಂಕಾಲ ಪಿರ್ಯಾದಿ ಹಾಗೂ ಅವರ ಜನರು ಸೇರಿಕೊಂಡು ಗಣೇಶಗುಡಿಯಲ್ಲಿ ರಿವರ್ ರ್ಯಾಪ್ಟಿಂಗ್ ಮುಗಿಸಿಕೊಂಡು ಮರಳಿ ಗಣೇಶಗುಡಿಯಿಂದ ದಾಂಡೇಲಿ ಮಾರ್ಗವಾಗಿ ಬೆಂಗಳೂರಿಗೆ ಹೋಗಲು ಹೊರಟಿರುವಾಗ 16-00 ಗಂಟೆಯ ಸುಮಾರಿಗೆ ಗಣೇಶಗುಡಿಯಿಂದ ಸುಮಾರು 3-4 ಕಿ.ಮೀ ಅಂತರದಲ್ಲಿ ಬರುವ ಅವೇಡಾ ಎಂಬ ಗ್ರಾಮದ ಹತ್ತಿರ ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ಹೋಗುತ್ತಿರುವಾಗ ಎದುರುಗಡೆಯಿಂದ ಕಾರ್ ನಂ: ಕೆ.ಎ-33/ಎ-9480 ನೇದರ ಚಾಲಕನಾದ ನಮೂದಿತ ಆರೋಪಿತನು ತನ್ನ ಕಾರನ್ನು ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನೇ ತಿರುವಿನಲ್ಲಿ ತನ್ನ ಕಾರ್ ಮೇಲಿನ ನಿಯಂತ್ರಣ ಕಳೆದುಕೊಂಡು ತನ್ನ ಬಲಕ್ಕೆ ಬಂದು ಡಿಕ್ಕಿ ಹೊಡೆದು ಅಪಘಾತಪ ಡಿಸಿರುತ್ತಾನೆ. ಈ ಅಪಘಾತದಲ್ಲಿ ಪಿರ್ಯಾದಿಯವರ ಕಿಯಾ ಸೆಲ್ಟೋಸ್ ಕಾರ್ ನಂ: ಕೆ.ಎ-05/ಎನ್.ಎ-0996 ನೇದರ ಹಾಗೂ ಆರೋಪಿತನ ಸ್ವಿಫ್ಟ್ ಡಿಸೈರ್ ನಂ: ಕೆ.ಎ-33/ಎ-9480 ನೇದರ ಮುಂಭಾಗಗಳು ಹಾಗೂ ಬಾಗಿಲುಗಳು ಜಖಂ ಆಗಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶಿವಲಿಂಗೇಗೌಡ ಬಿ. ಎಸ್. ತಂದೆ ಸೋಮೇಗೌಡ, ಪ್ರಾಯ-48 ವರ್ಷ, ವೃತ್ತಿ-ಎಫ್.ಡಿ.ಸಿ ಕ್ಲರ್ಕ್, ಸಾ|| ನಂಬರ್ 305, ಗೌರಮ್ಮ ಲೇ-ಔಟ್, ಕಾಲ್ವಿಂಗ್ ಲಿತೋನಿಯಾ ಅಪಾರ್ಟಮೆಂಟ್, ಜೆ.ಪಿ. ನಗರ , 5 ನೇ ಹಂತ, ಬೆಂಗಳೂರು ರವರು ದಿನಾಂಕ: 16-04-2022 ರಂದು 21-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 17-04-2022
at 00:00 hrs to 24:00 hrs
ಹೊನ್ನಾವರ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 18/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ವೀಣಾ ಸಂತೋಷ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಹೊಸಗದ್ದೆ, ಮೂಡ್ಕಣಿ, ತಾ: ಹೊನ್ನಾವರ. ಪಿರ್ಯಾದಿಯ ಮಗಳಾದ ಇವಳು ಕಳೆದ ಒಂದು ವರ್ಷದಿಂದ ಮಾನಸಿಕ ಖಾಯಿಲೆಯಿಂದ ಬಳಲತ್ತಿದ್ದವಳಿಗೆ ಶಿವಮೊಗ್ಗದ ಮಾನಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು, ದಿನಾಂಕ: 16-4-2022 ರಂದು ಬೆಳಿಗ್ಗೆ 09-15 ಗಂಟೆಗೆ ನನ್ನ ಮಗಳು ಮೂಡ್ಕಣಿ ಹೊಸಗದ್ದೆಯಯಲ್ಲಿರುವ ತನ್ನ ಮನೆಯ ಹತ್ತಿರದ ಶರಾವತಿ ನದಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರ ಹೊರತು ಅವಳ ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ತನಿಖೆ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ದಾಮೋದರ ತಂದೆ ಹೊನ್ನಪ್ಪ ನಾಯ್ಕ, ಪ್ರಾಯ-64 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹುಡಗೋಡ, ಮುಟ್ಟಾ, ತಾ: ಹೊನ್ನಾವರ ರವರು ದಿನಾಂಕ: 16-04-2022 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮಂಕಿ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 07/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ದೇವಿದಾಸ ತಂದೆ ವೆಂಕಟ್ರಮಣ ಮೊಗೇರ, ಪ್ರಾಯ-58 ವರ್ಷ, ವೃತ್ತಿ-ಕೃಷಿ/ಕೂಲಿ ಕೆಲಸ, ಸಾ|| ಕೊಪ್ಪದಮಕ್ಕಿ, ಪೋ: ಬೈಲೂರ, ತಾ: ಹೊನ್ನಾವರ. ಈತನು ತನಗೆ ಹಾಗೂ ತನ್ನ ಮನೆಯವರಿಗೆ ತನ್ನ ಸ್ಥಳದಲ್ಲಿನ ದೇವರ ತೊಂದರೆ ಆಗ್ತಿದೆ, ಕೃಷಿ ಬ್ಯಾಂಕಿನಲ್ಲಿ ತೆಗೆದ ಸಾಲ ಸಹ ತನ್ನ ಹತ್ತಿರ ತುಂಬಲು ಆಗುತ್ತಿಲ್ಲ ಅಂತಾ ಪಿರ್ಯಾದಿ ಹಾಗೂ ಅವರ ಸಂಬಂಧಿಕರಲ್ಲಿ ಹೇಳಿಕೊಂಡು ಬಂದವನು, ದಿನಾಂಕ: 16-04-2022 ರಂದು ಬೆಳಗಿನ ಜಾವ 05-30 ಗಂಟೆಗೆ ತಾನು ವೆಂಕ್ಟಾಪುರದ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ಹೆಂಡತಿಯ ಹತ್ತಿರ ಹೇಳಿ ಹೋದವನು, ಬೆಳಿಗ್ಗೆ 09-00 ಗಂಟೆಯ ನಡುವಿನ ಅವಧಿಯಲ್ಲಿ ಯಾವುದೋ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ಕೊಪ್ಪದಮಕ್ಕಿ ಹಿಂದು ಸ್ಮಶಾನದ ಹತ್ತಿರ ಅಕೇಶಿಯಾ ಪ್ಲಾಂಟೇಷನ್ ಒಳಗೆ ಗುಡ್ಡದ ಮೇಲೆ ಹೋಗಿ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾನೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಣ್ಣಪ್ಪ ತಂದೆ ವೆಂಕಟ್ರಮಣ ಮೊಗೇರ, ಪ್ರಾಯ-63 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕೊಪ್ಪದಮಕ್ಕಿ, ಪೋ: ಬೈಲೂರ, ತಾ: ಹೊನ್ನಾವರ ರವರು ದಿನಾಂಕ: 16-04-2022 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======