ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 16-08-2021

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 59/2021, ಕಲಂ: 323, 324, 341, 504, 506 ಸಹಿತ 34 ಐಪಿಸಿ  ನೇದ್ದರ ವಿವರ...... ನಮೂದಿತ ಆರೋಪಿತರು 1]. ಗಣೇಶ ಹಮ್ಮು ಗೌಡ, 2]. ಸೋಮೇಶ ಹಮ್ಮು ಗೌಡ, ಸಾ|| (ಇಬ್ಬರೂ) ಗುಂಬಳ, ಗೋಕರ್ಣ, ತಾ: ಕುಮಟಾ. ಈ ನಮೂದಿತ ಆರೋಪಿತರು ಪಿರ್ಯಾದಿಯ ತಾಯಿ ಸುಬ್ಬಿ ಸೋಮು ಗೌಡ ಇವಳ ಮೇಲೆ ಹಳೆಯ ದ್ವೇಷದಿಂದ ಇದ್ದವರು, ದಿನಾಂಕ: 16-08-2021 ರಂದು ಮಧ್ಯಾಹ್ನ 03-30 ಗಂಟೆಗೆ ಪಿರ್ಯಾದಿಯ ತಾಯಿ ಕೆಲಸ ಮುಗಿಸಿ ಮನೆಗೆ ಹೋಗುವಾಗ ಗೋಕರ್ಣದ ಭೀಮನಕೊಂಡ ಕೇರಿಯ ಓಣಿಯಲ್ಲಿ ಅಡ್ಡಗಟ್ಟಿ ಅವಾಚ್ಯವಾಗಿ ಬೈಯ್ದು, ಆರೋಪಿ 1 ನೇಯವನು ಕಟ್ಟಿಗೆಯ ತುಂಡಿನಿಂದ ತಲೆಗೆ ಹೊಡೆದು, ಆರೋಪಿ 2 ನೇಯವನು ಕೈ ಬೆರಳನ್ನು ತಿರುಪಿ ಕಲ್ಲಿನ ಮೇಲೆ ದೂಡಿ ಹಾಕಿ ತಲೆಗೆ, ಬಲಗೈ ಮತ್ತು ಬಲಗಾಲಿನ ಮೊಣಗಂಟಿನ ಹತ್ತಿರ ಗಾಯ ಪಡಿಸಿ, ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಮಾದೇವ ತಂದೆ ಸೋಮು ಗೌಡ, ಪ್ರಾಯ-38 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಬಂಡಿಕೇರಿ, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 16-08-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 145/2021, ಕಲಂ: 279, 337 ಐಪಿಸಿ  ನೇದ್ದರ ವಿವರ...... ನಮೂದಿತ ಆರೋಪಿತ ಅಭಿಷೇಕರಾಜ ತಂದೆ ಈಶ್ವರನಾಥ ಎ. ಬಿ, ಪ್ರಾಯ-20 ವರ್ಷ, ವೃತ್ತಿ-ಬ್ಯಾಟರಿ ಕೆಲಸ, ಸಾ|| ಮೆಕ್ಕಾನ್ ಗಲ್ಲಿ, ಮಾಧವಪೇಟೆ, ಮಡಿಕೇರಿ (ಸ್ಕೂಟರ್ ನಂ: ಕೆ.ಎ-12/ಯು-5886 ನೇದರ ಚಾಲಕ). ಈತನು ದಿನಾಂಕ: 16-08-2021 ರಂದು 10-00 ಗಂಟೆಗೆ ಹೊನ್ನಾವರ-ಕುಮಟಾ ಕಡೆಗೆ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಡಾಂಬರ್ ರಸ್ತೆಯ ಮೇಲೆ ತಾನು ಚಲಾಯಿಸುತ್ತಿದ್ದ ಸ್ಕೂಟರ್ ನಂ: ಕೆ.ಎ-12/ಯು-5886 ನೇದನ್ನು ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಕುಮಟಾದ ಹೊನ್ಮಾಂವ್ ಕ್ರಾಸ್ ಹತ್ತಿರ ತನ್ನ ಮುಂದಿನಿಂದ ನಡೆದುಕೊಂಡು ಹೋಗುತ್ತಿರುವ ಪಿರ್ಯಾದಿಯ ತಂದೆಯವರಾದ ಶ್ರೀ ನೆಪೋಲಿಯನ್ ಹಾಲೆಸ್ ಡಿಸೋಜ್, ಪ್ರಾಯ-85 ವರ್ಷ, ಸಾ|| ಅಳ್ವೇಕೊಡಿ, ತಾ: ಕುಮಟಾ ಇವರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ರಸ್ತೆಯಲ್ಲಿ ಬೀಳುವಂತೆ ಮಾಡಿ, ಅವರ ತಲೆಗೆ, ಬಲಗಣ್ಣಿನ ಹುಬ್ಬಿಗೆ ಹಾಗೂ ಬಲಗಾಲಿಗೆ ಗಾಯನೋವುಗಳಾಗಲು ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಶಾಂತಿ ಎನ್. ಡಿಸೋಜ ಗಂಡ ಸಲ್ವಾದರ್ ಜಿ. ಫರ್ನಾಂಡೀಸ್, ಪ್ರಾಯ-50 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಅಳ್ವೆಕೋಡಿ, ತಾ: ಕುಮಟಾ ರವರು ದಿನಾಂಕ: 16-08-2021 ರಂದು 18-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 146/2021, ಕಲಂ: ಮನುಷ್ಯ ಕಾಣೆ  ನೇದ್ದರ ವಿವರ...... ನಮೂದಿತ ಕಾಣೆಯಾದ ಮನುಷ್ಯ ಶ್ರೀ ರೇಣುಕಾ ಪ್ರಸಾದ ತಂದೆ ಮಂಜುನಾಥ ಜಿ. ಸಿ, ಪ್ರಾಯ-23 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಶಿವಕುಮಾರ ಸ್ವಾಮಿ ಬಡಾವಣೆ, ಆಂಜನೇಯ ದೇವಸ್ಥಾನದ ಹತ್ತಿರ, ದಾವಣಗೆರೆ. ಈತನು ತನ್ನ ಸ್ನೇಹಿತೆ ಹಾಗೂ ಸ್ನೇಹಿತರ ಜೊತೆ ದಿನಾಂಕ: 16-08-2021 ರಂದು ಕುಮಟಾದ ಹುಬ್ಬಣಗೇರಿ ಸಮುದ್ರದ ತೀರಕ್ಕೆ ಪ್ರವಾಸಕ್ಕೆ ಬಂದವನು, ಮಧ್ಯಾಹ್ನ 03-30 ಗಂಟೆಗೆ ಸಮುದ್ರದ ನೀರಿನಲ್ಲಿ ಸ್ನೇಹಿತರ ಜೊತೆ ಈಜಾಡುತ್ತಿರುವಾಗ ಆಕಸ್ಮಿಕವಾಗಿ ಜೋರಾಗಿ ಬಂದ ಸಮುದ್ರದ ಅಲೆಯ ಸೆಳೆತಕ್ಕೆ ಸಿಲುಕಿ ಸಮುದ್ರದ ನೀರಿನಲ್ಲಿ ಮುಳುಗಿ ಕಾಣೆಯಾದವನಿಗೆ ಹುಡುಕಿದರೂ ಸಿಗದೇ ಇರುವುದರಿಂದ ಅವನನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಯತೀಶ್ ತಂದೆ ನಟರಾಜ್, ಪ್ರಾಯ-28 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಶಿವಕುಮಾರ ಸ್ವಾಮಿ ಬಡಾವಣೆ, 2 ನೇ ಸ್ಟೇಜ್, ದಾವಣಗೆರೆ ರವರು ದಿನಾಂಕ: 16-08-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 81/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 15-08-2021 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 16-08-2021 ರಂದು ಮುಂಜಾನೆ 04-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಮನೆಯ ಹೊರಭಾಗದ ಬೇಲಿಯ ಒಳಗಿನ ಆವರಣದಲ್ಲಿ ಇಟ್ಟ ಅಜಮಾಸು ಕಿಮ್ಮತ್ತು 10,000/- ರೂಪಾಯಿ ಮೌಲ್ಯದ ಹೀರೋ ಹೋಂಡಾ ಡಿಲಕ್ಸ್ ಮೋಟಾರ್ ಸೈಕಲ್ ನಂ: ಕೆ.ಎ-31/ಎಸ್-5595 ನೇದನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಹುಸೇನ್ ತಂದೆ ಬಡೇಸಾಬ್ ದೊಡ್ಮನಿ, ಪ್ರಾಯ-43 ವರ್ಷ, ವೃತ್ತಿ-ನಗರಸಭೆ ಕಸ ಸಾಗಾಟ ವಾಹನದ ಚಾಲಕ, ಸಾ|| ತಾರಗೋಡ, ತಾ: ಶಿರಸಿ ರವರು ದಿನಾಂಕ: 16-08-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 109/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಸೋಮಣ್ಣ ವಡ್ಡರ, ಪ್ರಾಯ-33 ವರ್ಷ, ಸಾ|| ಹನುಮಾಪುರ, ತಾ: ಮುಂಡಗೋಡ (ಮೋಟಾರ್ ಸೈಕಲ್ ನಂ: ಕೆ.ಎ-31/ಎಸ್-7898 ನೇದರ ಸವಾರ). ಈತನು ದಿನಾಂಕ: 15-08-2021 ರಂದು ಬೆಳಿಗ್ಗೆ 07-15 ಗಂಟೆಗೆ ತಾನು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಎಸ್-7898 ನೇದನ್ನು ಮುಂಡಗೋಡ ಕಡೆಯಿಂದ ಶಿರಸಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಸವಾರ ಮಾಡಿಕೊಂಡು ಹೋಗುತ್ತಾ, ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ತಪ್ಪಿ ನಂದೀಪುರ ಗ್ರಾಮದ ಮಾದೇವಪ್ಪ ಆಲಳ್ಳಿ ಇವರ ತೋಟದ ಹತ್ತಿರ ರಸ್ತೆಯಲ್ಲಿ ಅಡ್ಡವಾಗಿ ಬಂದ ಹಂದಿಗಳಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ತನ್ನ ಮೋಟಾರ್ ಸೈಕಲ್ ಹಿಂದೆ ಕುಳಿತ ಆತನ ತಾಯಿ ಶ್ರೀಮತಿ ಚಂದ್ರವ್ವ ಇವಳಿಗೆ ರಸ್ತೆಯಲ್ಲಿ ಬೀಳಿಸಿ ಭಾರೀ ಗಾಯನೋವು ಪಡಿಸಿ, ಆರೋಪಿ ಸವಾರನು ಸ್ವಯಂಕೃತ ಅಪಫಾತದಿಂದ ತನಗೂ ಸಹ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಶಿವಾನಂದ ತಂದೆ ಗುರಪ್ಪ ವಡ್ಡರ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹನುಮಾಪುರ, ತಾ: ಮುಂಡಗೋಡ ರವರು ದಿನಾಂಕ: 16-08-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 79/2021, ಕಲಂ: ಮನುಷ್ಯ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮನುಷ್ಯ ಶ್ರೀ ಮಹ್ಮದ್ ಜಾಕೀರ್ ತಂದೆ ಬಾಜೀದ್, ಪ್ರಾಯ-28 ವರ್ಷ, ವೃತ್ತಿ-ಮಸೀದಿಯಲ್ಲಿ ಕೆಲಸ, ಸಾ|| ಸಿಯಾಲಿ ಖದ್ದರ್, ಡಿಲಾರಿ, ಮುರಾದಾಬಾದ್, ಉತ್ತರ ಪ್ರದೇಶ. ಈತನು ಪಿರ್ಯಾದಿಯವರೊಂದಿಗೆ ಕಳೆದ ಒಂದೂವರೆ ವರ್ಷದ ಹಿಂದೆ ಎರಡನೇ ಸಂಬಂಧವಾಗಿ ಮದುವೆಯಾಗಿದ್ದು, ಹಂಸಬಾವಿಯ ದಾಸನಕೊಪ್ಪಾದ ಮಸೀದಿಯಲ್ಲಿ ಮೌಲಾನಾ ಆಗಿ ಕೆಲಸ ಮಾಡಿಕೊಂಡು ಇದ್ದನು, ವಾರದಲ್ಲಿ 1-2 ದಿವಸ ಪಿರ್ಯಾದಿಯ ಮನೆಯಾದ ಶಿರಸಿಯ ದಾಸನಕೊಪ್ಪಾಗೆ ಬಂದು ಹೋಗುತ್ತಿದ್ದು, ದಿನಾಂಕ: 16-06-2021 ರಂದು ಬೆಳಿಗ್ಗೆ ಸುಮಾರು 06-00 ಗಂಟೆಗೆ ಹಂಸಬಾವಿಯಿಂದ ಪಿರ್ಯಾದಿಯ ಮನೆಗೆ ಬಂದವನು, 10-00 ಗಂಟೆಯ ಸುಮಾರಿಗೆ ಹಂಸಬಾವಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು. ಅಲ್ಲಿಂದ ಇಲ್ಲಿಯವರೆಗೆ ಪಿರ್ಯಾದಿಯವರ ಮೊಬೈಲಿಗೆ ಮೆಸೇಜ್ ಮಾಡುತ್ತಿದ್ದನು. ಈಗ ಕಳೆದ ದಿನಾಂಕ: 14-08-2021 ರಂದು ಬೆಳಿಗ್ಗೆ ಪಿರ್ಯಾದಿಯವರ ಮೊಬೈಲಿಗೆ ಕೊನೆಯದಾಗಿ ಮೆಸೇಜ್ ಮಾಡಿದ್ದು, ಅಲ್ಲಿಂದ ಈವರೆಗೂ ಅವನ ಫೋನ್ ಮತ್ತು ಮೆಸೇಜ್ ಬಂದಿರುವುದಿಲ್ಲ. ಕಾರಣ ತನ್ನ ಗಂಡ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸದರಿ ಕಾಣೆಯಾದ ತನ್ನ ಗಂಡನನ್ನು ಹುಡುಕಿ ಕೊಡಬೇಕೆಂದು ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಖುರೇಶಿ ತಂದೆ ಮಖಬೂಲಸಾಬ್, ಪ್ರಾಯ-28 ವರ್ಷ, ವೃತ್ತಿ-ಮನೆ ಕೆಲಸ, ಸಾ|| ದರ್ಗಾ ಹತ್ತಿರ, ದಾಸನಕೊಪ್ಪ, ತಾ: ಶಿರಸಿ ರವರು ದಿನಾಂಕ: 16-08-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 16-08-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 21/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಕುಮಾರಿ: ಮೇಘಾ ಎಮ್. ತಂದೆ ಮಂಜುನಾಥ, ಪ್ರಾಯ-24 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| ವಿದ್ಯಾನಗರ, ಆಂಜನೇಯ ದೇವಸ್ಥಾನದ ಹತ್ತಿರ, ದಾವಣಗೆರೆ. ಇವಳು ತನ್ನ ಸ್ನೇಹಿತೆ ಹಾಗೂ ಸ್ನೇಹಿತರ ಜೊತೆ ದಿನಾಂಕ: 16-08-2021 ರಂದು ಕುಮಟಾದ ಹುಬ್ಬಣಗೇರಿ ಸಮುದ್ರದ ತೀರಕ್ಕೆ ಪ್ರವಾಸಕ್ಕೆ ಬಂದವರು, ಮಧ್ಯಾಹ್ನ 03-30 ಗಂಟೆಗೆ ಸಮುದ್ರದ ನೀರಿನಲ್ಲಿ ಈಜಾಡುತ್ತಿರುವಾಗ ಜೋರಾಗಿ ಬಂದ ಸಮುದ್ರದ ಅಲೆಯ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿದ್ದವಳಿಗೆ ಅವಳ ಸ್ನೇಹಿತರು ಎತ್ತಿ ಸಮುದ್ರದ ದಂಡೆಗೆ ತಂದು ಚಿಕಿತ್ಸೆಗೆ ಕುಮಟಾದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾಗ, ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 04-30 ಗಂಟೆಗೆ ಕುಮಟಾದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಳಾಗಿರುತ್ತಾಳೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಯತೀಶ್ ತಂದೆ ನಟರಾಜ್, ಪ್ರಾಯ-28 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಶಿವಕುಮಾರ ಸ್ವಾಮಿ ಬಡಾವಣೆ, 2 ನೇ ಸ್ಟೇಜ್, ದಾವಣಗೆರೆ ರವರು ದಿನಾಂಕ: 16-08-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 26/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮಂಜುನಾಥ ತಂದೆ ಕೃಷ್ಣಾ ಸಿದ್ದಿ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹರಿಗದ್ದೆ, ತಾ: ಯಲ್ಲಾಪುರ, ಹಾಲಿ ಸಾ|| ನವಗ್ರಾಮ, ಚಿಕ್ಕುಮನೆ, ತಾ: ಯಲ್ಲಾಪುರ. ಪಿರ್ಯಾದಿಯವರ ಗಂಡನಾದ ಈತನು ಪಿರ್ಯಾದಿಯವರೊಂದಿಗೆ ಯಲ್ಲಾಪುರ ತಾಲೂಕಿನ ಚಿಕ್ಕುಮನೆ ನವಗ್ರಾಮದಲ್ಲಿರುವ ತನ್ನ ಅತ್ತೆ ಮನೆಯಲ್ಲಿದ್ದವನು, ಕಳೆದ 7-8 ವರ್ಷದ ಹಿಂದೆ ತನಗಿರುವ ಅಪೆಂಡಿಕ್ಸ್ ಕಾಯಿಲೆಗೆ ಸಂಬಂಧಿಸಿದಂತೆ ವೈದ್ಯರು ‘ಔಷಧೋಪಚಾರ ಮಾಡಿದ ಸಮಯದಲ್ಲಿ ಇನ್ನು ಮುಂದೆ ಸಾರಾಯಿ ಕುಡಿಯಬೇಡ’ ಅಂತಾ ಹೇಳಿದ್ದನ್ನು ಲಕ್ಷಿಸದೇ ವಿಪರೀತ ಸಾರಾಯಿ ಕುಡಿಯುವ ಚಟ ಅಂಟಿಸಿಕೊಂಡಿದ್ದವನು. ದಿನಾಂಕ: 15-08-2021 ರಂದು ಬೆಳಿಗ್ಗೆ ಕೂಲಿ ಕೆಲಸಕ್ಕೆ ಹೋದವನು, ಕೂಲಿ ಕೆಲಸ ಮುಗಿಸಿಕೊಂಡು ವಾಪಸ್ ಸಾರಾಯಿ ಕುಡಿದ ನಶೆಯಲ್ಲಿ ಮನೆಗೆ ಬಂದು ರಾತ್ರಿ 09-30 ಗಂಟೆಗೆ ಊಟ ಮಾಡಿ ಮಲಗಿಕೊಂಡಿದ್ದವನು. ಮನೆಯ ಅಡುಗೆ ಕೋಣೆಯ ಹಿಂದಿರುವ ಬಟ್ಟೆ ಒಣಗಿಸುವ ಕೋಣೆಯ ಪಕಾಸಿಗೆ ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟವನಿಗೆ ದಿನಾಂಕ: 16-08-2021 ರಂದು ಬೆಳಿಗ್ಗೆ 05-00 ಗಂಟೆಯ ಸುಮಾರಿಗೆ ಪಿರ್ಯಾದಿಯವರು ನೋಡಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಮಂಜುಳಾ ಕೋಂ. ಮಂಜುನಾಥ ಸಿದ್ದಿ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹರಿಗದ್ದೆ, ತಾ: ಯಲ್ಲಾಪುರ, ಹಾಲಿ ಸಾ|| ನವಗ್ರಾಮ, ಚಿಕ್ಕುಮನೆ, ತಾ: ಯಲ್ಲಾಪುರ ರವರು ದಿನಾಂಕ: 16-08-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 18-08-2021 01:43 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080