ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 16-12-2021

at 00:00 hrs to 24:00 hrs

 

1) ಗೋಕರ್ಣ ಪೊಲೀಸ ಠಾಣೆ ಅಪರಾಧ ಸಂಖ್ಯೆ:  88/2021 ಕಲಂಃ 78 (iii) ಕರ್ನಾಟಕ ಪೊಲೀಸ್ ಕಾಯ್ದೇ ನೇದ್ದರ ವಿವರ: ದಿನಾಂಕ : 16-12-2021 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಗೋಕರ್ಣ ತಾರಮಕ್ಕಿ ಗ್ರಾಮದ ಶ್ರೀ ಗುರು ರಾಘವೇಂದ್ರ ಪೇಂಟ್ಸ್ ಅಂಗಡಿ ಪಕ್ಕದ ಗೂಡಂಗಡಿ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ಆಪಾದಿತ ಕೃಷ್ಣಾ ತಂದೆ ಜೋಗಿ ಗೌಡ ಪ್ರಾಯ-43 ವರ್ಷ ವೃತ್ತಿ-ಗೂಡಂಗಡಿ ವ್ಯಾಪಾರ ಸಾ: ತಾರಮಕ್ಕಿ,ಗೋಕರ್ಣ ತಾ: ಕುಮಟಾ. ಈತನು ತನ್ನ ಲಾಭಕ್ಕೋಸ್ಕರ ಬರ-ಹೋಗುವ ಸಾರ್ವಜನಿಕರನ್ನು ಕರೆಯುತ್ತಾ, ತಮ್ಮ ತಮ್ಮ ಅದೃಷ್ಟದ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿ, ಅದೃಷ್ಟ ಸಂಖ್ಯೆ ತಾಗಿದರೆ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಅವರ ಮನವೊಲಿಸಿ ಸಾರ್ವಜನಿಕರಿಂದ ಅಕ್ರಮವಾಗಿ ಹಣ ಪಡೆದು, ಅವರು ಹೇಳಿದ ಅಂಕೆ ಸಂಖ್ಯೆಯನ್ನು ತನ್ನ ಹತ್ತಿರ ಇರುವ ಚೀಟಿಯಲ್ಲಿ ಬರೆದುಕೊಂಡು ಓ.ಸಿ ಮಟಕಾ-ಜೂಗಾರಾಟ ಆಡಿಸುತ್ತಿದ್ದಾಗ, ನಗದು ಹಣ 2880=00 ರೂಪಾಯಿ ಮತ್ತು ಓಸಿ ಮಟಕಾ ಜೂಗಾರಾಟ ಸಲಕರಣೆಗಳೊಂದಿಗೆ ಸಿಕ್ಕ ಬಗ್ಗೆ ಶ್ರೀ  ನವೀನ ಎಸ್. ನಾಯ್ಕ ಪೊಲೀಸ್ ಉಪ-ನಿರೀಕ್ಷಕರು, (ಕಾ&ಸು) ಗೋಕರ್ಣ ಪೊಲೀಸ್ ಠಾಣೆ ರವರು ಸರ್ಕಾರದ ಪರವಾಗಿ ಪ್ರಕರಣ ದಾಖಲಿಸಿ ಕಾನೂನಿನ ಕ್ರಮ ಜರುಗಿಸಿರುತ್ತಾರೆ.

2) ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:   154/2021, ಕಲಂ: 454,457, 380 ಐ.ಪಿ.ಸಿ. ನೇದ್ದರ ವಿವ ರ: ಪಿರ್ಯಾದಿಯವರ ಕುಟುಂಬದ ಬಾಬ್ತು ಭಟ್ಕಳ ತಾಲೂಕ ಸಾಗರ ರಸ್ತೆಯ ಕಡಸಲಗದ್ದೆ ಗ್ರಾಮದಲ್ಲಿ ಶ್ರೀ ವೆಂಕಟೇಶ್ವರ ಕ್ಯಾಶುನಟ್ ಇಂಡಸ್ಟ್ರೀಯಲ್ಲಿ ಕಳೆದ ದಿನಾಂಕ 13-11-2021 ರಿಂದ ದಿನಾಂಕ 15-12-2021 ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಪ್ಯಾಕ್ಟರಿಯ ಹಿಂಬದಿಯ ಗೋಡೆಯನ್ನು ಕೊರೆದು ಕಿಟಕಿಯನ್ನು ಕಿತ್ತು  ಪ್ಯಾಕ್ಟರಿಯ ಒಳ ಹೊಕ್ಕಿ ಪ್ಯಾಕ್ಟರಿಯಲ್ಲಿದ್ದ ಸುಮಾರು 90000/- ರೂ ಮೌಲ್ಯದ 1) 10 ಕಬ್ಬಿಣದ ಹಾಟ್ ಚೆಂಬರ್ ಟ್ರಾಲಿ ಹಾಗೂ ಅದರಲ್ಲಿದ್ದ ಅಲ್ಯೂಮಿನಿಯಂ ಪ್ಲೇಟಗಳನ್ನು, ಹಾಗೂ ಇನ್ನೂ ಎರಡು ಟ್ರಾಲಿಯಲ್ಲಿನ ಅಲ್ಯೂಮಿನಿಯಂ ಪ್ಲೇಟಗಳನ್ನು ಮತ್ತು ಸುಮಾರು 500 ಕೆ.ಜಿ ತೂಕದ ಸಣ್ಣ ಸಣ್ಣ ಅಲ್ಯೂಮಿನಿಯಂ ಪಾತ್ರೆಗಳನ್ನು (ಗ್ರೇಡಿಂಗ್ ಪಾತ್ರೆಗಳನ್ನು) ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಶ್ರೀ ವೆಂಕಟರಮಣ ತಂದೆ ನಾಗಪ್ಪ ನಾಯ್ಕ  ವಯಸ್ಸು 41 ವರ್ಷ ವೃತ್ತಿ: ಕಿರಾಣಿ ಅಂಗಡಿ ವ್ಯಾಪಾರ  ಸಾ|| ಬೇಡುಮನೆ ಮುಟ್ಟಳ್ಳಿ ಭಟ್ಕಳ ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

3)ಅಂಕೋಲಾ ಪೊಲೀಸ ಠಾಣೆ ಅಪರಾಧ ಸಂಖ್ಯೆ:  186/2021  ಕಲಂ : 394 ಐ.ಪಿ.ಸಿ. ನೇದ್ದರ ವಿವರ:  ದಿವಸ ದಿ: 15/12/2021 ರಂದು ರಾತ್ರಿ 11:30 ಗಂಟೆ ಸುಮಾರಿಗೆ ಅಂಕೋಲಾ-ಯಲ್ಲಾಪುರ ರಾಷ್ಟ್ರೀಯ  ಹೆದ್ದಾರಿಯ ಠಾಕೂರ್ ಡಾಬಾದಿಂದ ಸುಮಾರು 10-12 ಕೀ.ಮೀ. ಯಲ್ಲಾಪುರ ಕಡೆಗೆ ಫಿರ್ಯಾದಿ ಪ್ರಯಾಣಿಸುತ್ತಿದ್ದ ಕಾರ್ ನಂ. ಕೆ.ಎ.22/ಪಿ.6306 ನೇದ್ದನ್ನು ಹಿಂದಿನಿಂದ  ಬೈಕ್ ಮೇಲೆ ಬಂದ ಆರೋಪಿತರು ಫಿರ್ಯಾದಿಯವರ ಕಾರಿನ ಶೋಗ್ಲಾಸ್ ಮೇಲೆ ಕಲ್ಲನ್ನು ಎಸೆದು ಜಖಂಗೊಳಿಸಿ ಕಾರನ್ನು ನಿಲ್ಲಿಸಿದ ವೇಳೆ ಕಲ್ಲಿನಿಂದ ಫಿರ್ಯಾದಿ ಮತ್ತು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಫಿರ್ಯಾದಿಯ ಪರಿಚಯಸ್ಥ ಕೇವಲ್‌ಚಂದ್ ಜೈನ್ ರವರುಗಳಿಗೆ ಹಲ್ಲೆ ಮಾಡಿ ಕಾರಿನೊಳಗೆ ನಾಲ್ಕೂವರೆ ಹಾಗೂ ಒಂದೂವರೆ ಲಕ್ಷ ರೂ. ಹಣ, ವ್ಯವಹಾರದ ಪುಸ್ತಕದ ಬ್ಯಾಗ್ ಮತ್ತು ಎಮ್.ಐ. ನೋಟ್ 7 ಪ್ರೋ ಮೋಬೈಲ್‌ನ್ನು ಸುಲಿಗೆ ಮಾಡಿಕೊಂಡು ಹೋದಬಗ್ಗೆ ವಿನೋದ ತಂದೆ ಲಾಲಚಂದ ಬನ್ಸಾಲಿ, 34 ವರ್ಷ, ಇಲೆಕ್ಟಿçಕಲ್ ಬಿಸಿನೆಸ್, ವಾಸ|| ಮನೆ ನಂ. 206, ಶ್ರವಣಗಿರಿ ಅಪಾರ್ಟಮೆಂಟ್, 2 ನೇ ಫ್ಲೋರ್, ಟೌನ್ ಹಾಲ್ ಎದುರು, ನೆಹರು ಗ್ರೌಂಡ್ ಹತ್ತಿರ, ಹುಬ್ಬಳ್ಳಿ ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿ ಪತ್ತೆ ಕಾರ್ಯ ಕೈಗೊಳ್ಳಲಾಗಿದೆ.

4)ಅಂಕೋಲಾ ಪೊಲೀಸ ಠಾಣೆ ಅಪರಾಧ ಸಂಖ್ಯೆ:  187/2021 ಕಲಂ: 279, 304(ಎ) ಐ.ಪಿ.ಸಿ & 187 ಎಮ್.ವಿ ಎಕ್ಟ್. ನೇದ್ದರ ವಿವರ: ದಿನಾಂಕ:  16/12/2021 ರಂದು ಮದ್ಯಾಹ್ನ 13-45 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮದ ಬೆಲೆಕೇರಿ ಕ್ರಾಸನಲ್ಲಿ ಹಾಯ್ದಿರುವ ರಾ.ಹೆ-66 ಡಾಂಬರ ರಸ್ತೆಯಲ್ಲಿ ಟ್ಯಾಂಕರ್ ಲಾರಿ ನಂ.ಕೆಎ-28/ಎ-8643 ನೇದರ ಚಾಲಕನು ತನ್ನ ಟ್ಯಾಂಕರ್ ಲಾರಿಯನ್ನು ಬಾಳೆಗುಳಿ ಕಡೆಯಿಂದ ಕಾರವಾರದ ಕಡೆಗೆ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಾಲನೆ ಮಾಡಿಕೊಂಡು ಹೋದವನು ತನ್ನ ಮುಂದಿನಿಂದ  ಹೋಗುತ್ತಿದ್ದ ಮೋಟರ ಸೈಕಲ್ಲ ನಂಬರ ಕೆಎ-30/ಕ್ಯೂ-8556 ನೇದಕ್ಕೆ ಡಿಕ್ಕಿ ಹೋಡೆದು ಅಪಘಾತ ಪಡಿಸಿ ಮೋಟರ ಸೈಕಲ್ಲ ಸವಾರನಾದ ಗೋಪಾಲ ತಂದೆ ಜಟ್ಟಿ ಹರಿಕಂತ್ರ, ವಯಸ್ಸು 66 ವರ್ಷ, ನಿವೃತ್ತ ಎ.ಎಸ್.ಐ, ವಿಳಾಸ ಹಾರವಾಡ, ನಡುವಿನಕೇರಿ, ಅಂಕೋಲಾ ತಾಲೂಕ ರವರಿಗೆ ತಲೆಗೆ ಗಂಬೀರ ಸ್ವರೂಪದ ಗಾಯನೋವು ಪಡಿಸಿ ಸ್ಥಳದಲ್ಲಿಯೇ ಮರಣವನ್ನುಂಟುಪಡಿಸಿ ಆಪಾದಿತ ಚಾಲಕನು ಟ್ಯಾಂಕರ್ ಲಾರಿಯನ್ನು ಸ್ಥಳದಲ್ಲಿ ನಿಲ್ಲಿಸದೇ ಚಲಾಯಿಸಿಕೊಂಡು ಹೋದ ಬಗ್ಗೆ            ಶ್ರೀ ಮಂಜುನಾಥ ತಂದೆ ವಿಠ್ಠಲ ಗಾಂವಕರ, ವಯಸ್ಸು 39 ವರ್ಷ ವೃತ್ತಿ ಕಂಪ್ಯೂಟರ್ ಇಂಜನಿಯರ್, ವಾಸ: ಜಮಗೋಡ, ಅಂಕೋಲಾ ತಾಲೂಕ ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 5) ಬನವಾಸಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 123/2021 ಕಲಂ. 370 ಐ.ಪಿ.ಸಿ.: ಯಾರೋ ಕಳ್ಳರು ದಿನಾಂಕ: 15.12.2021 ರಂದು 19.00 ಗಂಟೆಯಿಂದ ದಿನಾಂಕ: 16.12.2021 ರಂದು ಬೆಳಿಗ್ಗೆ 07-00 ಗಂಟೆಯ ನಡುವಿನ ಅವಧಿಯಲ್ಲಿ ಫಿರ್ಯಾದಿ ಹಾಗೂ ಊರ ಜನರು ಶಿರಸಿ ಇವರು ಮುಗವಳ್ಳಿ ಹತ್ತಿರದ ವರದಾ ನದಿಯ ದಂಡೆಯ ಮೇಲೆ  ನೀರಾವರಿಗಾಗಿ ಅಳವಡಿಸಿದ ಸುಮಾರು 235 ಮೀಟರ್ ಅ||ಕಿ 11500=00 ರೂ, ಬೆಲೆಯ ಕೇಬಲ್ ನ್ನು ಕಳುವು ಮಾಡಿಕೊಂಡು ಹೋಗಿದ್ದು. ಕಳುವಾದ ತಮ್ಮ ಕೇಬಲ್ ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಶ್ರೀ ಪರಸಾ ತಂದೆ ಚಟ್ಟಾ ಹಳ್ಳಿಕೊಪ್ಪ ಪ್ರಾಯ; 35 ವರ್ಷ ರೈತಾಬಿ ಸಾ: ಮೊಗವಳ್ಳಿ, ಶಿರಸಿ ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 6)ಹೊನ್ನಾವರ ಪೊಲೀಸ್‌ಠಾಣೆ  345/2021 ಕಲಂ: 447,504,506, ಸಹಿತ 34  ಐಪಿಸಿ ನೇದ್ದರ ವಿವರ: ಆಪಾದಿತರಾದ 1)ದಯಾನಂದ ತಂದೆ ಮಂಜುನಾಥ@ಮುದ್ದು ನಾಯ್ಕ ಸಾ/ ಹಾಡಗೇರಿ ಹೊನ್ನಾವರ 2)ಅಣ್ಣಪ್ಪ ತಂದೆ ಮಂಜುನಾಥ ನಾಯ್ಕ ಸಾ/ ಹಾಡಗೇರಿ ಹೊನ್ನಾವರ  ಇವರು ಫಿರ್ಯಾದಿ ಕಳೆದವರ್ಷ ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಹಡಿನಬಾಳ ಗ್ರಾಮ ಪಂಚಾಯತದ ಮುಟ್ಟಾ-ಹುಡಗೋಡ ಕ್ಷೇತ್ರದಿಂದ ಸ್ಪರ್ಧಿಸಿದ್ದರಿಂದ ಅಂದಿನಿಂದ ಫಿರ್ಯಾದಿ ಮೇಲೆ ದ್ವೇಶದಿಂದ ಇದ್ದವರು ಫಿರ್ಯಾದಿ ಕಂಡಲ್ಲಿ ಅವಾಚ್ಯವಾಗಿ ಮಾತನಾಡುತ್ತಿದ್ದವರು  ದಿನಾಂಕಃ 15-12-2021 ರಂದು ರಾತ್ರಿ 23-00 ಗಂಟೆ ಸಮಯಕ್ಕೆ ಫಿರ್ಯಾದಿ ಮಲಗಿದ್ದಾಗ ಫಿರ್ಯಾದಿ ಮನೆ ಹತ್ತಿರ ಬಂದು ಜೋರಾಗಿ ಕೂಗುತ್ತಾ ಏ ಹರಿಯಪ್ಪ ಮನೆಯಿಂದ ಹೊರಗೆ ಬಾ ನಿನಗೆ ನೋಡಿ ಕೊಳ್ಳುತ್ತೇವೆ ಅಂತ ಅವಾಚ್ಯವಾಗಿ ಬೈದು ಮನೆಯ ಗೇಟ್ ತೆಗೆದು ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಫಿರ್ಯಾದಿ ಎದ್ದು ಯಾಕೆ ರಾತ್ರಿ ಬಂದು ಗಲಾಟೆ ಮಾಡುತ್ತಿರಿ ಅಂತ ಕೇಳಿದ್ದಕ್ಕೆ  ನೀನು ಹೊರಗೆ ಬಾ ನಿನ್ನನ್ನು ಸಾಯಿಸಿ ಹಾಕುತ್ತೇವೆ  ಅಂತ ಜೀವ ಭೇದರಿಕೆ ಹಾಕಿದ ಬಗ್ಗೆ ಶ್ರೀ ಹರಿಯಪ್ಪ ತಂದೆ ವಾಮನ ನಾಯ್ಕ ಪ್ರಾಯಃ 64 ವರ್ಷ, ಉದ್ಯೊಗಃ ರೈತಾಭಿ, ಸಾ/ ಹುಡಗೋಡ, ಮುಟ್ಟಾ, ಹೊನ್ನಾವರ ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 7)ಹೊನ್ನಾವರ ಪೊಲೀಸ ಠಾಣಾ ಅಪರಾಧ ಸಂಖ್ಯೆ: 346/2021. ಕಲಂ : 279, ಐ.ಪಿ.ಸಿ. ನೇದ್ದರ ವಿವ ರ: ಆಪಾದಿತ ಟ್ಯಾಂಕರ ನಂಬರ್ ಕೆ.ಎ-20/ಬಿ-4253 ನೇದ್ದರ ಚಾಲಕನಾದ ಕೆ. ಮೋಹನ ತಂದೆ ನಾಗಪ್ಪ ಪೂಜಾರಿ ಪ್ರಾಯ: 47 ವರ್ಷ, ಉದ್ಯೊಗ: ಚಾಲಕ, ಸಾ||ಲಕ್ಕಿ ಫರ್ನಾಂಡೀಸ್ ಕಂಪೌಂಡ್  ಎದುರಿಗೆ ಐಸಿರಿ ಕಾಂಪ್ಲೇಸ್ ಬೆಜೈ ಚರ್ಚರೋಡ ಮಂಗಳೂರ. ಈತನು ಮಂಗಳೂರಿನ ಎಚ್,ಪಿ,ಸಿ,ಎಲ್ ಕಂಪನಿಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಲೋಡ್ ಮಾಡಿಕೊಂಡು ಕ್ಲೀನರ್ ಸೂರಜ ತಂದೆ ಬಸವಾ ನಾಯಕ ಈತನೊಂದಿಗೆ ದಿನಾಂಕ: 14-12-2021 ರಂದು 16-00 ಗಂಟೆಗೆ ಮಂಗಳೂರಿನಿಂದ  ಟ್ಯಾಂಕರ ಚಲಾಯಿಸಿಕೊಂಡು ಹೊರಟವನು, ಹೊನ್ನಾವರ- ಸಾಗರ ಮಾರ್ಗವಾಗಿ ರಾ. ಹೆದ್ದಾರಿ 69 ರಲ್ಲಿ ಹೋಗುತ್ತಿರುವಾಗ ರಾತ್ರಿ 22-30 ಗಂಟೆ ಸುಮಾರಿಗೆ  ಹೊನ್ನಾವರ ತಾಲೂಕಾ ಅಳ್ಳಂಕಿ ರೈಸ್ ಮಿಲ್ ಹತ್ತಿರ ತಲುಪಿದಾಗ ಟ್ಯಾಂಕರನ್ನು ಅತೀವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು, ವೇಗವನ್ನು ನಿಯಂತ್ರಿಸದೇ, ಟ್ಯಾಂಕರನ್ನು ರಸ್ತೆಯಲ್ಲಿ ಪಲ್ಟಿಕೆಡವಿ, ಅಪಘಾತಪಡಿಸಿ, ಟ್ಯಾಂಕರನ್ನು ಜಖಂ ಪಡಿಸಿದ್ದಲ್ಲದೇ, ಟ್ಯಾಂಕರನಲ್ಲಿದ್ದ ಪೆಟ್ರೋಲ್ ಮತ್ತು ಡಿಸೇಲ್ ಸೋರಿ ಹೋಗುವಂತೆ ಮಾಡಿದ ಬಗ್ಗೆ ಶ್ರೀ ಗಣಪತಿ ತಂದೆ ಆನಂದ ನಾಯಕ ಪ್ರಾಯ 55 ವರ್ಷ, ಉದ್ಯೋಗ: ವ್ಯಾಪಾರ ಸಾ|| ಗುರುಗಣೇಶ ನಿಲಯ ಮಾರ್ಗೋಳ್ಳಿ ಬಸ್ರೂರು ತಾ:ಕುಂದಾಪುರ ಉಡುಪಿ ಜಿಲ್ಲೆ  ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿ ತನಿಕೆ ಕೈಗೊಳ್ಳಲಾಗಿದೆ.

 8) ಯಲ್ಲಾಪುರ  ಪೊಲೀಸ ಠಾಣೆ ಅಪರಾಧ ಸಂಖ್ಯೆ:  227/2021 ಕಲಂ: 323. 324, 341. 504, 506 ಸಹಿತ 34 ಐ.ಪಿ.ಸಿ. ನೇದ್ದರ ವಿವರ: ಆಪಾದಿತರಾದ 1) ಸಾಣಾ ತಂದೆ ಗಣೇಶ ಮರಾಠಿ, ಪ್ರಾಯ 26 ವರ್ಷ ಉದ್ಯೋಗ  ಕೂಲಿ ಕೆಲಸ ಸಾ||  ಹುಣಶೇಟ್ಟಿಕೊಪ್ಪ ಯಲ್ಲಾಪುರ ತಾಲೂಕ 2) ಪಾಂಡುರಂಗ ತಂದೆ ಲಕ್ಷ್ಮಣ  ಕಳಸೂರಕರ್, ಪ್ರಾಯ 23 ವರ್ಷ ಉದ್ಯೋಗ ಕೂಲಿ ಕೆಲಸ ಸಾ|| ಹುಣಶೇಟ್ಟಿಕೊಪ್ಪ ಯಲ್ಲಾಪುರ ತಾಲೂಕ  ಇವರು ಗ್ರಾಮ ಪಂಚಾಯಿತ ಮದ್ನೂರು (ಹುಣಶೇಟ್ಟಿಕೊಪ್ಪ) ದಲ್ಲಿ ನಡೆಯವ ಕಾಮಗಾರಿ ಕೆಲಸಗಳಿಗೆ ಸಂಬಂಧಿಸಿದಂತೆ ತಮಗೆ ಕೆಲಸ ಸಿಗುತ್ತಿಲ್ಲಾ ಅಂತಾ ಪಿರ್ಯಾದಿಯವರೊಂದಿಗೆ ದ್ವೇಷದಿಂದ ಇದ್ದವರು ದಿನಾಂಕ; 15-12-2021 ರಂದು ರಾತ್ರಿ 20-30 ಗಂಟೆಗೆ ಯಲ್ಲಾಪುರ ತಾಲೂಕಿನ ಬಸಳೆಬೈಲ್ ಕ್ರಾಸ್‌ನಲ್ಲಿ ಪಿರ್ಯಾದಿಯವರು ತಮ್ಮ ಮೋಟಾರ ಸೈಕಲ್ ಮೇಲೆ ಮನೆಗೆ ಹೋಗುತ್ತಿರುವಾಗ ಆಪಾದಿತರು  ತಮ್ಮ ಮೋಟಾರ ಸೈಕಲ್ ನಂಬರ ಕೆಎ-31/ಙ-8873 ನೇದೆ ಮೇಲೆ ಬಂದು, ಪಿರ್ಯಾದಿಯವರಿಗೆ ಎಕ್ಕೋದ್ದೇಶದಿಂದ ಅಡ್ಡಗಟ್ಟಿ ತಡೆದು, ಬೋಳಿ ಮಗನೆ. ಸೊಳೆ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಇಬ್ಬರು ಆರೋಪಿತರೂ ಕೈಯಿಂದ ಹೊಡೆದು ದೂಡಿ ಹಾಕಿ ಅದರಲ್ಲಿ ಆಪಾದಿತ1ನೇಯವನು ಕಟ್ಟಿಗೆ ದೊಣ್ಣೆಯಿಂದ ಫರ‍್ಯಾದಿಯವರಿಗೆ ಹಲ್ಲೆ ಮಾಡಿ ಈ ದಿವಸ ನಿನಗೆ ಇಷ್ಟಕ್ಕೆ ಬಿಟ್ಟಿದ್ದೇವೆ ಇನ್ನೊಂದು ಸಾರಿ ತಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಮೇತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಶ್ರೀ ಪ್ರಕಾಶ ತಂದೆ ಅರ್ಜುನ ಶಾಪೂರಕರ್, ಪ್ರಾಯ 40 ವರ್ಷ ಉದ್ಯೋಗ ರೈತಾಬಿ (ಮದ್ನೂರು ಗ್ರಾಮ ಪಂಚಾಯಿತ ಸದಸ್ಯರು) ಸಾ|| ಬಸಳೆಬೈಲ್ ಪೊಸ್ಟ: ಹುಣಶೇಟ್ಟಿಕೊಪ್ಪ ಯಲ್ಲಾಪುರ ತಾಲೂಕ ಪೋ.ನಂ 9449888833     1) ಸಾಣಾ ತಂದೆ ಗಣೇಶ ಮರಾಠಿ, ಪ್ರಾಯ 26 ವರ್ಷ ಉದ್ಯೋಗ  ಕೂಲಿ ಕೆಲಸ ಸಾ||  ಹುಣಶೇಟ್ಟಿಕೊಪ್ಪ ಯಲ್ಲಾಪುರ ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 9)ಯಲ್ಲಾಪುರ  ಪೊಲೀಸ ಠಾಣೆ ಅಪರಾಧ ಸಂಖ್ಯೆ:  228/2021  ಕಲಂ  ಹೆಂಗಸು  ಕಾಣೆ ನೇದ್ದರ ವಿವರ: ಫಿರ್ಯಾಧುದಾರರಾದ ಚಂದ್ರಶೇಖರ ಶಿವಪ್ಪ ಬನಸೋಡೆ ವಯಸ್ಸು 47 ವರ್ಷ , ಉದ್ಯೋಗ ಸಿಮೇಂಟ್ ವರ್ಕ್ಸ  ಸಾ|| ಇಂಡಸ್ಟಿçಯಲ್ ಏರಿಯಾ, ಉದ್ಯಮನಗರ, ಯಲ್ಲಾಪುರ  ಇವರ ಅಣ್ಣನ ಮಗಳಾದ ಕುಮಾರಿ ಕೃತಿಕಾ ತಂದೆ ಸುರೇಶ ಬನಸೋಡೆ   ಪ್ರಾಯ 18 ವರ್ಷ 7 ತಿಂಗಳು  ಉದ್ಯೋಗ ವಿದ್ಯಾರ್ಥಿನಿ  ಸಾ|| ಗುಲಬುರ್ಗಾ, ಚಿಂಚೊಳ್ಳಿ ಹಾಲಿ ಇಂಡಸ್ಟಿçಯಲ್ ಏರಿಯಾ, ಉದ್ಯಮನಗರ, ಯಲ್ಲಾಪುರ ಇವರು  ದಿನಾಂಕ 15-12-2021 ರಂದು 09-30 ಗಂಟೆಯಿAದ 14-13 ಗಂಟೆಯ ನಡುವಿನ ಅವಧಿಯಲ್ಲಿ  ಯಲ್ಲಾಪುರ  ಪಟ್ಟಣದ ಕಾಳಮ್ಮ ನಗರದಲ್ಲಿರುವ ಡಿಗ್ರಿ ಕಾಲೇಜಿಗೆ ಹೋದವಳು  ಈ ವರೆಗೂ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾರೆ ಅಂತಾ ನೀಡಿದ ದೂರನ್ನು ದಾಖಲಿಸಿ ಪತ್ತೆ ಕಾರ್ಯ ಕೈಗೊಳ್ಳಲಾಗಿದೆ.

 10) ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 57/2021 ಕಲಂ: 341. 323. 324 ಐ.ಪಿ.ಸಿ. ನೇದ್ದರ ವಿವರ: ಆಪಾದಿತ ಸುಭಾಷ ಮನೋಹರ ನಾಯ್ಕ ವೃತ್ತಿ ಪೈರ್ ಮ್ಯಾನ್ (ಎಲ್.ಹೆಚ್.ಎಫ್.) ಸಾ|| ಬಿಣಗಾ, ಕಾರವಾರ ಇತನು ಕಾರವಾರದ ಅರ್ಗಾ ನೆವಲ್ ಬೇಸ್ ನಲ್ಲಿ ಪೈರ್ ಮ್ಯಾನ್ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದವನು. ದಿನಾಂಕ 16-12-2021 ರಂದು ರಾತ್ರಿ ಕರ್ತವ್ಯ ಇದ್ದರೂ ಕೂಡಾ ಬೆಳಿಗ್ಗೆ 10-00 ಗಂಟೆಯ ಸಮಯಕ್ಕೆ ನೆವಲ್ ಬೇಸ್ ಪೈರ್ ಆಫೀಸ ಹತ್ತಿರ ಬಂದು ಪೈರ್ ಮ್ಯಾನ್ ಕರ್ತವ್ಯದಲ್ಲಿದ್ದ ಫಿರ್ಯಾದಿಯವರಿಗೆ ಉದ್ದೇಶಿಸಿ ಪೈರ್ ಟೆಂಡರ್ ವಾಹನ ರಿಪೇರಿ ಸರಿಯಾಗಿ ಮಾಡಿಲ್ಲ ಅಂತಾ ಕೈಯಿಂದ ಫಿರ್ಯಾದಿಯವರಿಗೆ ಹೊಡೆದು ಹಲ್ಲೆ ಮಾಡಿ ಫಿರ್ಯಾದಿಯವರಿಗೆ ಅಡ್ಡಗಟ್ಟಿ ಹಿಡಿದು, ಕೈಯಿಂದ ದೂಡಿ ಅಲ್ಲೆ ಗೋಡೆಗೆ ತಲೆ ಜಜ್ಜಿ ಗಾಯ, ನೋವು ಪಡಿಸಿದ ಬಗ್ಗೆ ಶ್ರೀ ಪ್ರೇಮಾನಂದ ತಂದೆ ಕಾಶಿನಾಥ ಹುಲಸ್ವಾರ್ ಪ್ರಾಯ 42 ವರ್ಷ ವೃತ್ತಿ ಪೈರ್ ಮ್ಯಾನ್ (ಎಲ್.ಹೆಚ್.ಎಫ್.) ಸಾ|| ಸುಲ್ತಾನಪುರ, ಕಡವಾಡ ಹಾಲಿ ಪಿ-12/6, ಎನ್.ಸಿ.ಹೆಚ್.ಸಿ., ಅಮದಳ್ಳಿ, ಕಾರವಾರ ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 11) ಮಂಕಿ ಪೋಲಿಸ ಠಾಣೆ ಅಪರಾಧ ಸಂಖ್ಯೆ:  149/2021  ಕಲಂ: 324, 323, 504, 506, ಐ.ಪಿ.ಸಿ. ನೇದ್ದರ ವಿವರ: ದಿನಾಂಕ: 10-12-2021 ರಂದು ಮಧ್ಯಾಹ್ನ ಪಿರ್ಯಾದಿಯು ಮನೆ ಸಮೀಪದ ವರಾದ ಮಾದೇವಿ ನಾಯ್ಕ ಇವಳ ಮನೆಗೆ ಹೋಗಿ ಟಿ.ವಿ ನೋಡಿ, ಮನೆಗೆ ಬಂದಾಗ ಮನೆಯಲ್ಲಿದ್ದ ಬಾಸ್ಕರ ತಂದೆ ಶನಿಯಾರ ನಾಯ್ಕ ಸಾ|| ಸೂಳೆಬಿಳು, ತಾ|| ಹೊನ್ನಾವರ. (ಫಿರ್ಯಾದಿಯ ಗಂಡ) ಇತನು  ಪಿರ್ಯಾ ದಿಗೆ ಉದ್ದೇಶಿಸಿ, ಎಲ್ಲಿಗೆ ಹೋಗಿದ್ದೆ ಅಂತಾ ಹೇಳಿ ಮನೆ ಹೊರಗೆ ಹೋಗಿ ಕಟ್ಟಿಗೆ ಕೋಲನ್ನು ತಂದು ಪಿರ್ಯಾದಿಯ ಮೈಮೇಲೆ ಹೊಡೆದು ದು:ಖಾಪತ್ತಪಡಿಸಿದಲ್ಲದೆ, ದಿನಾಂಕ: 16-12-2021 ರಂದು ಬೆಳಿಗ್ಗೆ ಮಲ್ಲಿಗೆ ಗಿಡಕ್ಕೆ ಉಪ್ಪು ಮತ್ತು ಔಷದಿ ತರಲು ಪಿರ್ಯಾದಿಯು, ಮನೆ ಸಮೀಪದ ಮಾದೇವಿ ಇವಳೊಂದಿಗೆ ಬೈಲೂರಿಗೆ ಹೋಗಿ ಮದ್ಯಾಹ್ನ 2-30 ಗಂಟೆ ಸುಮಾರಿಗೆ ಮನೆಗೆ ಬಂದಾಗ ಮನೆಯಲ್ಲಿದ್ದ ಆಪಾದಿತ ಗಂಡನು, ಪಿರ್ಯಾದಿಗೆ ಊಟ ಬಡಿಸು ಅಂತಾ ಹೇಳಿದಕ್ಕೆ, ಪಿರ್ಯಾದಿಯು ಊಟ ಬಡಿಸಲು ಹೋದಾಗ ಎಂತಾ ಸಾರು ಮಾಡಿದ್ದಿ ಅಂತಾ ಪಿರ್ಯಾದಿಗೆ ಕೇಳಿದ್ದು, ಅವಳು ರಾತ್ರಿ ಮಾಡಿದ ಸಾರು ಇದೆ ಅಂತಾ ಹೇಳಿದಕ್ಕೆ, ಪಿರ್ಯಾದಿಗೆ ಉದ್ದೇಶಿಸಿ ಬೊಸಡಿ ರಂಡೆ ನೀವು ಇಬ್ಬರು ಸೇರಿ ಮಜಾ ಮಾಡಲು ಹೋಗಲು ಆಗುತ್ತದೆ ಮನೆಯಲ್ಲಿ ಸಾರು ಮಾಡಲು ಆಗುವದಿಲ್ಲ ಅಂತಾ ಹೇಳಿ, ಅವಳ ತಲೆ ಕೂದಲನ್ನು ಹಿಡಿದು ಎಳೆದು ಕೈಯಿಂದ ಕನ್ನೆ ಮೇಲೆ ಮೈಮೇಲೆ ಹೊಡೆದು, ಅವಳ ಕೈ ಹಿಡಿದು ಎಳೆದಾಡಿ ಕೆಳಗೆ ಬಿಳಿಸಿ ಕಾಲಿನಿಂದ ಮೈಮೇಲೆ ಒದ್ದು, ದು:ಖಾಪತ್ತ ಪಡಿಸಿದಲ್ಲದೆ, ಅವಳನ್ನು ಉದ್ದೇಶಿಸಿ ನಿನಗೆ ಮುಂದೊಂದು  ದಿನ ಒಂದು ಗತಿ ಕಾಣಿಸುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಶ್ರೀಮತಿ ಲಲೀತಾ ಕೋಂ ಬಾಸ್ಕರ ನಾಯ್ಕ ಪ್ರಾಯ 38 ವರ್ಷ ವೃತ್ತಿ ಕೂಲಿಕೆಲಸ ಸಾ|| ಸೂಳೆಬಿಳು ತಾ|| ಹೊನ್ನಾವರ ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 12) ಬನವಾಸಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:  124/2021 ಕಲಂ: 78[iii] ಕೆ.ಪಿ.ಆಕ್ಟ್ (ತಿದ್ದುಪಡಿ ಕಾಯ್ದೆ-2021) ನೇದ್ದರ ವಿವರ: ಆಪಾದಿತನಾದ ಶಂಕರ ತಂದೆ ನಾರಾಯಣ ಆತ್ಮಕೂರ ಪ್ರಾಯ; 34 ವರ್ಷ ವೃತ್ತಿ; ವ್ಯಾಪಾರ ಸಾ: ಕೋರ್ಲಕೊಟ್ಟಾ, ಹಲಗದ್ದೆ, ಶಿರಸಿ ತಾಲೂಕ ಈತನು 16-12-2021 ರಂದು 19-35 ಗಂಟೆಗೆ  ತನ್ನ ಅಕ್ರಮ ಲಾಭಕೋಸ್ಕರ ಕೊರ್ಲಕಟ್ಟಾದ ಸಭಾ ಭವನದ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ಓ.ಸಿ, ಮಟಕಾ ಜೂಗಾರಾಟ ನಡೆಸುತ್ತಿದ್ದಾಗ ದಾಳಿ ಮಾಡಿ ಓ.ಸಿ. ಮಟಕಾ ಜೂಗಾರಾಟದ ಸಲಕರಣೆಗಳಾದ 1] ಓ.ಸಿ. ಚೀಟಿ-01 2] ನಗದು ಹಣ 1050-00 ರೂಪಾಯಿ 3] ಬಾಲ್ ಪೆನ್ನು-01 ಇವುಗಳೊಂದಿಗೆ ಸಿಕ್ಕಿದ್ದರಿಂದ ಶ್ರೀ ಹಣಮಂತ ಎಸ್ ಬಿರಾದಾರ  ಪೊಲೀಸ್ ಉಪ ನಿರೀಕ್ಷಕರು (ಕಾ&ಸು) ಬನವಾಸಿ ಪೊಲೀಸ್ ಠಾಣೆ ರವರು ಸರ್ಕಾರದ ಪರವಾಗಿ ಪ್ರಕರಣ ದಾಖಲಿಸಿ ಕಾನೂನಿನ ಕ್ರಮ ಜರುಗಿಸಿರುತ್ತಾರೆ.

 13) ಹೊನ್ನಾವರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ : 347/2021 ಕಲಂ : 8(ಸಿ) ಮತ್ತು 20 (ಬಿ) (2) (ಎ) ಎನ.ಡಿ.ಪಿ.ಎಸ್. ಆ್ಯಕ್ಟ-1985 ನೇದ್ದರ ವಿವರ: ಆಪಾದಿತರಾದ  1] ಗುರುರಾಜ ತಂದೆ ನಾಗರಾಜ ಹರಿಜನ. ಪ್ರಾಯ: 30 ವರ್ಷ.  ಉದ್ಯೋಗ: ಕೂಲಿಕೆಲಸ. ಸಾ||ಅಸೂರಖಾನಗಲ್ಲಿ ಹೊನ್ನಾವರ. ಮತ್ತು 2]  ಪ್ರಶಾಂತ ತಂದೆ ಮುರಳಿಧರ ಅಂಬಿಗ.  ಪ್ರಾಯ 27 ವರ್ಷ,   ಸಾ|| ಲಕ್ಷ್ಮೀ ನಾರಾಯಣನಗರ. ಹೊನ್ನಾವರ ಇವರು ಆರೋಪಿತರು ದಿನಾಂಕ: 16-12-2021 ರಂದು ರಾತ್ರಿ 20-30 ಗಂಟೆ ಸುಮಾರಿಗೆ ಹೊನ್ನಾವರ ಶಹರದ ಮಹಾಲಕ್ಷ್ಮೀ ಗ್ಯಾಸ್ ಗೋಡಾನ ಪಕ್ಕದ ಬಂದರ ರಸ್ತೆಯ ಬದಿಯಲ್ಲಿ ಲೈಟ್ ಕಂಬದ ಕೆಳಗೆ ಯಾವುದೇ ಪಾಸ್ ಯಾ ಪರ್ಮಿಟ್ ಹೊಂದದೇ ಅನಧಿಕೃತವಾಗಿ 75 ಗ್ರಾಂ ತೂಕದ ಸುಮಾರು 5000/-ರೂಪಾಯಿ ಮೌಲ್ಯದ 10 ಗಾಂಜಾ ಮಾದಕ ವಸ್ತು ಇರುವ ಪ್ಯಾಕೇಟ್‌ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ತಮ್ಮ ಬಳಿ ಇಟ್ಟುಕೊಂಡಿದ್ದು, ದಾಳಿಯ ವೇಳೆ ಆರೋಪಿ 1 ನೇಯವನು ಗಾಂಜಾ ಇರುವ ಪ್ಯಾಕೇಟ್‌ಗಳು- ಒಟ್ಟೂ 10. ಒಟ್ಟೂ 75 ಗ್ರಾಂ ಇರುತ್ತದೆ. ಇದರ ಅ||ಕಿ 5000/- ರೂ ಆಗಬಹುದು. ಹಸಿರು ಬಣ್ಣದ ಕೈಚೀಲ-01. ಅ||ಕಿ|| 00-00 ರೂಪಾಯಿ ಆಗಬಹುದು. ಇವುಗಳೊಂದಿಗೆ ಸಿಕ್ಕಿದ್ದು, ಆರೋಪಿ 2 ನೇಯವನು  ಓಡಿ ಫರಾರಿ ಆದ ಬಗ್ಗೆ ಶ್ರೀ ಶಶಿಕುಮಾರ.ಸಿ.ಆರ್. ಪಿ.ಎಸ್.ಐ ಕಾ.ಸು & ಸಂಚಾರ ಹೊನ್ನಾವರ ಪೊಲೀಸ್ ಠಾಣೆ ರವರು ಸರ್ಕಾರದ ಪರವಾಗಿ ಪ್ರಕರಣ ದಾಖಲಿಸಿ ಕಾನೂನಿನ ಕ್ರಮ ಜರುಗಿಸಿರುತ್ತಾರೆ.

 

======||||||||====== 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 16-12-2021

at 00:00 hrs to 24:00 hrs.

 

 

1) ಕಾರವಾರ ಶಹರ ಪೊಲೀಸ್ ಠಾಣೆ  ಅಸ್ವಾಭಾವಿಕ ಮರಣ ಪ್ರಕರಣ ಸಂಖ್ಯೆ: 40/2021  ಕಲಂ : 174 ಸಿ.ಆರ್.ಪಿ.ಸಿ. ನೇದ್ದರ ವಿವರ: ಮೃತೆ ಭವ್ಯಾ ಪ್ರವೀಣ ರಾಯ್ಕರ್, ಪ್ರಾಯ-29 ವರ್ಷ, ಉದ್ಯೋಗ-ಗೃಹಿಣಿ ಸಾಃ ನಂದನಗದ್ದಾ, ಗಿಂಡಿವಾಡಾ         ಇವಳು ಕರೋನಾ ರೋಗ ಬಂದಾಗಿನಿಂದ  ಪದೇ ಪದೇ ಕೈಕಾಲು ತೊಳೆಯುತ್ತಾ, ಸ್ಯಾನಿಟೈಜರ್ ಮಾಡಿಕೊಳ್ಳುತ್ತಾ, ಮನೆಯ ಬಾಗಿಲು, ಗೇಟ ಇತ್ಯಾದಿಗಳನ್ನು ತೊಳೆಯುತ್ತಾ ಮಾನಸಿಕವಾಗಿ ವರ್ತಿಸುತ್ತಿದ್ದವಳಿಗೆ, ಗಂಡ ಪ್ರವೀಣ ಈತನು ಯಾಕೆ ಪದೇ ಪದೇ ಗೇಟ, ಖುರ್ಚಿ ಇತ್ಯಾದಿಗಳನ್ನು ತೊಳೆದು ಆಯಾಸ ಮಾಡಿಕೊಳ್ಳುತ್ತೀಯಾ ಕರೋನಾ ಹಾಗೆಲ್ಲಾ ಬರುವುದಿಲ್ಲ ಅಂತಾ ಹೇಳಿದ್ದಕ್ಕೆ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಬಂಗಾರದ ಕೆಲಸಕ್ಕೆ ಮನೆಯಲ್ಲಿ ತಂದಿಟ್ಟಿದ್ದ “ಪೊಟ್ಯಾಷ್” ಎಂಬ ಸೈನೆಡ್ ಸೇವಿಸಿದವಳಿಗೆ ಚಿಕಿತ್ಸೆಯ ಕುರಿತು ಜಿಲ್ಲಾ ಆಸ್ಪತ್ರೆಗೆ  ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕಃ 16-12-2021 ರಂದು 13-15 ಘಂಟೆಗೆ ಮೃತಪಟ್ಟ ಬಗ್ಗೆ ಶ್ರೀ ಗುರುಮೂರ್ತಿ ರಾಮಕೃಷ್ಣ ವೆರ್ಣೇಕರ್, ಪ್ರಾಯ-60 ವರ್ಷ, ಉದ್ಯೋಗ-ಬಂಗಾರದ ಕೆಲಸ ಸಾಃ ಮಾವಲಿ, ಪೋಷ್ಟ, ಯಲವಳ್ಳಿ, ಸೊರಬ ತಾಲೂಕ, ಶಿವಮೊಗ್ಗಾಇವರು ನೀಡಿರುವ ಮಾಹಿತಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

======||||||||====== 

ಇತ್ತೀಚಿನ ನವೀಕರಣ​ : 04-01-2022 11:58 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080