ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 16-02-2021

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 14/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 13-02-2021 ರಂದು 14:00 ಗಂಟೆಯಿಂದ ದಿನಾಂಕ: 16-02-2021 ರಂದು 14-30 ಗಂಟೆಯ ನಡುವಿನ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಹಿರೇಗುತ್ತಿಯ ಮಕರ ಹೊಟೇಲ್ ಎದುರಿಗೆ ಇರುವ ಪಿರ್ಯಾದಿಯ ಮನೆಯ ಬಾಗಿಲನ ಬೀಗವನ್ನು ಯಾವುದೋ ವಸ್ತುವಿನಿಂದ ಮೀಟಿ ತೆಗೆದು ಮನೆಯೊಳಗೆ ಹೊಕ್ಕಿ ಸುಮಾರು 50,000/- ರೂಪಾಯಿ ಮೌಲ್ಯದ 1). 1 ಜೊತೆ ಬೆಳ್ಳಿಯ ಕಾಲ್ಗೆಜ್ಜೆ, ಅದರ ತೂಕ ಸುಮಾರು 60 ಗ್ರಾಂ, ಅ||ಕಿ|| 6,000/- ರೂಪಾಯಿ, 2). 2 ಬೆಳ್ಳಿಯ ಸೊಂಟದ ಚೈನ್, ಅದರ ತೂಕ ಸುಮಾರು 80 ಗ್ರಾಂ ಆಗಬಹುದು. ಅ||ಕಿ|| 6,000/- ರೂಪಾಯಿ, 3). 1 ಬಂಗಾರದ ಸರ (2 ತಾಳಿ ಹಾಗೂ ಲಕ್ಷ್ಮೀಯ ಲಾಕೆಟ್ ಇರುವ ಬಂಗಾರ ಚೈನ್), ಅದರ ತೂಕ 10 ಗ್ರಾಂ, ಅ||ಕಿ|| 38,000/- ರೂಪಾಯಿಯ ಆಭರಣಗಳನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ವಿಶ್ವನಾಥ ತಂದೆ ಪೀರಪ್ಪ ಬೇವಿನಕಟ್ಟಿ, ಪ್ರಾಯ-39 ವರ್ಷ, ವೃತ್ತಿ-ಶಿಕ್ಷಕರು, ಸಾ|| ಮೇಲಿನ ಹಿರೇಗುತ್ತಿ, ತಾ: ಕುಮಟಾ ರವರು ದಿನಾಂಕ: 16-02-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 35/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶ್ರೀಧರ ತಂದೆ ಸುಬ್ರಹ್ಮಣ್ಯ ಭಟ್, ಪ್ರಾಯ-25 ವರ್ಷ, ಸಾ|| ಮುದ್ಗುಣಿ, ಮಾಸೂರು ರಸ್ತೆ, ತಾ: ಕುಮಟಾ (ಹೊಸದಾದ ಯಮಹಾ ಎಫ್.ಝೆಡ್ ಮೋಟಾರ್ ಸೈಕಲ್ ಚಾಸಿಸ್ ನಂ: ME1RG661CL0077924 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 16-02-02021 ರಂದು 16-00 ಗಂಟೆಗೆ ತಾನು ಸವಾರಿ ಮಾಡಿಕೊಂಡು ಬರುತ್ತಿದ್ದ ಹೊಸದಾದ ಯಮಹಾ ಎಫ್.ಝೆಡ್ ಮೋಟಾರ್ ಸೈಕಲ್ ಚಾಸಿಸ್ ನಂ: ME1RG661CL0077924 ನೇದರ ಹಿಂಬದಿಯಲ್ಲಿ ತನ್ನ ತಂದೆ ಸುಬ್ರಹ್ಮಣ್ಯ ತಂದೆ ಲಕ್ಷ್ಮೀನಾರಾಯಣ ಭಟ್ ಇವರನ್ನು ಕೂಡ್ರಿಸಿಕೊಂಡು ಮೋಟಾರ್ ಸೈಕಲನ್ನು ಕುಮಟಾ ಕಡೆಯಿಂದ ಅಘನಾಶಿನಿ ಕಡೆಗೆ ಹೋಗಲು ಅತೀವೇಗವಾಗಿ ಚಲಾಯಿಸಿಕೊಂಡು ಹೋಗಿ, ಕುಮಟಾ ತಾಲೂಕಿನ ಹೊಲನಗದ್ದೆ ಜಿ.ಜಿ ಹೆಗಡೆ ರೈಸ್ ಮಿಲ್ ಹತ್ತಿರ ಮೋಟಾರ್ ಸೈಕಲನ್ನು ನಿಷ್ಕಾಳಜಿಯಿಂದ ರಸ್ತೆಯ ಎಡಕ್ಕೆ ಚಲಾಯಿಸಿ ರಸ್ತೆಯ ಬದಿಯಲ್ಲಿ ಇದ್ದ ಟೆಲಿಪೋನ್ ಕಂಬಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಹಿಂದೆ ಕುಳಿತ ಸುಬ್ರಹ್ಮಣ್ಯ ತಂದೆ ಲಕ್ಷ್ಮೀನಾರಾಯಣ ಭಟ್ ಇವರಿಗೆ ಹಣೆಗೆ ಹಾಗ ತಲೆಗೆ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಹಣೆಗೆ ಹಾಗೂ ತುಟಿಗೆ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ರಾಜಶೇಖರ ತಂದೆ ತಿಪ್ಪಯ್ಯ ಪಟಗಾರ, ಪ್ರಾಯ-31 ವರ್ಷ, ವೃತ್ತಿ-ಹಾರ್ಡವೇರ್ ಶಾಪಿನಲ್ಲಿ ಕೆಲಸ, ಸಾ|| ಮುದ್ಗುಣಿ, ಮಾಸೂರು ರಸ್ತೆ, ತಾ: ಕುಮಟಾ ರವರು ಠಾಣೆಯಲ್ಲಿ ದೂರು ದಾಖಲಿಸಿದನ್ನು ಠಾಣಾ ಗುನ್ನಾ ನಂ: 35/2021, ಕಲಂ: 279, 337 ಐಪಿಸಿ ನೇದರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಸದರಿ ಅಪಘಾತದಲ್ಲಿ ತಲೆಗೆ ಗಾಯಗೊಂಡ ಗಾಯಾಳು ಸುಬ್ರಹ್ಮಣ್ಯ ತಂದೆ ಲಕ್ಷ್ಮೀನಾರಾಯಣ ಭಟ್ ಇವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಸಮಯ 17-45 ಗಂಟೆಗೆ ಬೈಂದೂರು ಪಟ್ಟಣದಲ್ಲಿ ಮಾರ್ಗಮಧ್ಯೆ ಮೃತಪಟ್ಟಿದ್ದು, ಆದಕಾರಣ ಈ ಪ್ರಕರಣಕ್ಕೆ ಕಲಂ: 304(ಎ) ಐಪಿಸಿ ನೇದನ್ನು ಸೇರ್ಪಡಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 20/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಲೋಕೇಶ ತಂದೆ ನಾರಾಯಣ ಚಿತ್ರಾಪುರ, ಪ್ರಾಯ-26 ವರ್ಷ, ಸಾ|| ಚಿತ್ರಾಪುರ, ಶಿರಾಲಿ, ತಾ: ಭಟ್ಕಳ  (ಮೋಟಾರ್ ಸೈಕಲ್ ನಂ: ಕೆ.ಎ-47/ವಿ-2653 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 15-02-2021 ರಂದು 09-10 ಗಂಟೆಗೆ ತಾನು ಚಲಾಯಿಸಿಕೊಂಡು ಬಂದ ಮೋಟಾರ್ ಸೈಕಲ್ ನಂ: ಕೆ.ಎ-47/ವಿ-2653 ನೇದನ್ನು ಶಿರಾಲಿ ಕಡೆಯಿಂದ ಕಟಗಾರಕೊಪ್ಪ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು ಬಂಡಿಕಾಸಿ ಹತ್ತಿರ ಮೋಟಾರ್ ಸೈಕಲಿನ ವೇಗ ನಿಯಂತ್ರಿಸದೇ ಮೋಟಾರ್ ಸೈಕಲ್ ಹಿಂಬದಿ ಕುಳಿತ ಶ್ರೀಮತಿ ಕುಸುಮಾ ಕೋಂ. ಪ್ರಭಾಕರ ಚಿತ್ರಾಪುರ, ಸಾ|| ಚಿತ್ರಾಪುರ, ಶಿರಾಲಿ, ತಾ: ಭಟ್ಕಳ ಇವರಿಗೆ ಮೋಟಾರ್ ಸೈಕಲಿನಿಂದ ಕೆಡವಿ ಅಪಘಾತ ಪಡಿಸಿ ತಲೆಗೆ ಭಾರೀ ಗಾಯ ಪಡಿಸಿ, ತನಗೂ ಸಹ ಅಲ್ಪ ಸ್ವಲ್ಪ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಸತೀಶ ತಂದೆ ಪ್ರಭಾಕರ ಕಟ್ಟೆಮನೆ, ಪ್ರಾಯ-27 ವರ್ಷ, ಸಾ|| ಚಿತ್ರಾಪುರ, ಶಿರಾಲಿ, ತಾ: ಭಟ್ಕಳ ರವರು ದಿನಾಂಕ: 16-02-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 26/2021, ಕಲಂ: 279, , 337, 338, 283, 304(ಎ) ಐಪಿಸಿ ಮತ್ತು ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಯಾವುದೋ ಲಾರಿಯ ಚಾಲಕ, ಲಾರಿಯ ನಂಬರ್ ಹಾಗೂ ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ, 2]. ಧೂಳಪ್ಪ ತಂದೆ ಮಳ್ಳಿಯಪ್ಪ ಹಂಡಿ, ಪ್ರಾಯ-45 ವರ್ಷ, ವೃತ್ತಿ-ಚಾಲಕ, ಸಾ|| ಸೀಮೆಕೇರಿ, ತಾ&ಜಿ: ಬಾಗಲಕೋಟೆ (ಮಿನಿ ಲಾರಿ ನಂ: ಕೆ.ಎ-29/ಬಿ-7837 ನೇದರ ಚಾಲಕ). ಈ ನಮೂದಿತ ಆರೋಪಿತರ ಪೈಕಿ ಆರೋಪಿ 1 ನೇಯವನು ತನ್ನ ಲಾರಿಯನ್ನು ದಿನಾಂಕ: 16-02-2021 ರಂದು ಬೆಳಗಿನ ಜಾವ ಸುಮಾರು 03-00 ಗಂಟೆಗೆ ಯಲ್ಲಾಪುರ ತಾಲೂಕಿನ ಶಿರಲೆ ಫಾಲ್ಸ್ ಕ್ರಾಸ್ ಹತ್ತಿರ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯ ಮೇಲೆ ಸದರ ಸ್ಥಳದಲ್ಲಿ ರಸ್ತೆ ಘಟ್ಟ ಇದ್ದು, ತಿರುವು ಇದ್ದರೂ ಸಹ ನಿಧಾನವಾಗಿ ಹೋಗದೇ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಹೋಗಿ ಯಾವುದೇ ಮುಂಜಾಗೃತೆ ಹಾಗೂ ಯಾವುದೇ ಸಿಗ್ನಲ್ ಲೈಟ್ ಹಚ್ಚದೇ ನಿರ್ಲಕ್ಷ್ಯತನದಿಂದ ಒಮ್ಮೆಲೇ ರಸ್ತೆಯ ಮೇಲೆ ತನ್ನ ಬಾಬ್ತು ಲಾರಿಯನ್ನು ನಿಲ್ಲಿಸಿದ್ದರಿಂದಲೇ ಅದರ ಹಿಂದಿನಿಂದ ಬರುತ್ತಿದ್ದ ಆರೋಪಿ 2 ನೇಯವನು ತನ್ನ ಬಾಬ್ತು ಮಿನಿ ಲಾರಿ ನಂ: ಕೆ.ಎ-29/ಬಿ-7837 ನೇದನ್ನು ಅತೀವೇಗವಾಗಿ ಚಲಾಯಿಸಿಕೊಂಡು ಹೋಗಿ ಹಿಂದಿನಿಂದ ಡಿಕ್ಕಿ ಮಾಡಿ ಅಪಘಾತ ಪಡಿಸಿಕೊಂಡು, ತನ್ನ ತಲೆಗೆ ಮತ್ತು ಎಡಬದಿಯ ಕಾಲಿನ ತೊಡೆಯ ಹತ್ತಿರ ಭಾರೀ ಸ್ವರೂಪದ ಗಾಯಪೆಟ್ಟು ಪಡಿಸಿಕೊಂಡು, ಪಿರ್ಯಾದಿಯವರಿಗೂ ಸಹ ಸಾದಾ ಸ್ವರೂಪದ ಗಾಯ ಪೆಟ್ಟು ಪಡಿಸಿದ್ದಲ್ಲದೇ, ಮಿನಿ ಲಾರಿಯನ್ನು ಸಹ ಜಖಂಗೊಳಿಸಿದ ಬಗ್ಗೆ ಹಾಗೂ ಆರೋಪಿ 1 ನೇಯವನು ಅಪಘಾತದ ನಂತರ ತನ್ನ ಲಾರಿಯನ್ನು ಸ್ಥಳದಲ್ಲಿ ನಿಲ್ಲಿಸದೇ, ಪೊಲೀಸ್ ಠಾಣೆಗೂ ವಿಷಯ ತಿಳಿಸಿದೇ ಚಲಾಯಿಸಿಕೊಂಡು ಹೋಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗುರಪ್ಪ ತಂದೆ ಬಸಪ್ಪ ಚೂರಿ, ಪ್ರಾಯ-31 ವರ್ಷ, ವೃತ್ತಿ-ಲಾರಿ ಕ್ಲೀನರ್, ಸಾ|| ಯಡೇಹಳ್ಳಿ, ತಾ&ಜಿ: ಬಾಗಲಕೋಟೆ ರವರು ದಿನಾಂಕ: 16-02-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರು ದಾಖಲಿಸಿದನ್ನು ಠಾಣಾ ಗುನ್ನಾ ನಂ: 26/2021 ಕಲಂ: 279, 337, 338, 283 ಐಪಿಸಿ ಮತ್ತು ಕಲಂ: 187 ಎಮ್.ವಿ ಎಕ್ಟ್ ನೇದರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

          ಸದರಿ ಅಪಘಾತದಲ್ಲಿ ಗಾಯಗೊಂಡ ಆರೋಪಿ 2 ನೇಯವನಿಗೆ ಅಪಘಾತದಿಂದ ತಲೆಗೆ ಮತ್ತು ಎಡಬದಿಯ ಕಾಲಿನ ತೊಡೆಯ ಹತ್ತಿರ ಭಾರೀ ಸ್ವರೊಪದ ಗಾಯ ಪೆಟ್ಟು ಪಡಿಸಿಕೊಂಡವನಿಗೆ ಯಲ್ಲಾಪುರದ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಉಪಚಾರ ಪಡೆದು, ದಿನಾಂಕ: 14-02-2021 ರಂದು ಹೆಚ್ಚಿನ ಚಿಕಿತ್ಸೆಗೆ ಅಂತಾ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದವರು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 16-02-2020 ರಂದು 08-00 ಗಂಟೆಗೆ ಮೃತಪಟ್ಟಿದ್ದ ಬಗ್ಗೆ 11-00 ಗಂಟೆಗೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಿಂದ ಇ-ಮೇಲ್ ಸಂದೇಶ ಬಂದಿದ್ದನ್ನು ಸ್ವೀಕರಿಸಿಕೊಂಡು, ಈ ಪ್ರಕರಣಕ್ಕೆ ಹೆಚ್ಚುವರಿಯಾಗಿ ಕಲಂ: 304(ಎ) ಐಪಿಸಿ ನೇದನ್ನು ಸೇರ್ಪಡೆ ಮಾಡಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 20/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ಬಸವರಾಜ ಜಮಖಂಡಿ, ಪ್ರಾಯ-46 ವರ್ಷ, ವೃತ್ತಿ-ಹೊಟೇಲ್ ವ್ಯಾಪಾರ, ಸಾ|| ಮನೆ ನಂ: 357, ಅಂಬೇವಾಡಿ, ಗಾವಠಾಣ, ದಾಂಡೇಲಿ. ನಮೂದಿತ ಆರೋಪಿತನು ದಿನಾಂಕ: 16-02-2021 ರಂದು 18-20 ಗಂಟೆಗೆ ದಾಂಡೇಲಿ ನಗರ ಠಾಣಾ ವ್ಯಾಪ್ತಿಯ ಅಂಬೆವಾಡಿ ಡಿಗ್ರಿ ಕಾಲೇಜ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭಕ್ಕಾಗಿ ಅದೃಷ್ಟದ ಅಂಕೆ ಬಂದಲ್ಲಿ 01/-ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥಕ್ಕೆ ಕಟ್ಟಿಸಿಕೊಂಡು ಓ.ಸಿ ಮಟಕಾ ಜುಗಾರಾಟ ಆಡಿಸುತ್ತಾ ದಾಳಿಯ ಕಾಲಕ್ಕೆ ಒಂದು ಬಾಲ್ ಪೆನ್, ಓ.ಸಿ ಅಂಕೆ-ಸಂಖ್ಯೆ ಬರೆದಿರುವ ಚೀಟಿ ಹಾಗೂ ನಗದು ಹಣ 900/- ರೂಪಾಯಿ ಸಮೇತ ಪಿರ್ಯಾದುದಾರರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಯಲ್ಲಪ್ಪ ಎಸ್, ಪಿ.ಎಸ್.ಐ, ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 16-02-2021 ರಂದು 19-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 16-02-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 04/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಡಮರೆ ತಂದೆ ತಿತುವಾ ಲೋಹಾರ, ಪ್ರಾಯ-55 ವರ್ಷ, ವೃತ್ತಿ-ಸೆಕ್ಯೂರಿಟಿ ಕೆಲಸ, ಸಾ|| ಗೋದಡಾ, ಲಡಗಡಾ ದೋಟೆ, ನೇಪಾಳ, ಹಾಲಿ ಸಾ|| ಲಲಿತಾ ಬಾಂದೇಕರ ಕಂಪೌಂಡ್, ಗಿಡ್ಡಾ ರೋಡ್, ಕಾರವಾರ. ಮೃತ ಈತನು ಕಳೆದ 1 ವರ್ಷಗಳಿಂದ ಕಾರವಾರಕ್ಕೆ ಬಂದು ತನ್ನ ಕುಟುಂಬದ ಜನರೊಂದಿಗೆ ವಾಸ ಮಾಡಿಕೊಂಡಿದ್ದವನು, ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದನು. ಈಗ ಕಳೆದ 10 ದಿನಗಳಿಂದ ಕಾರವಾರ ಕೋಡಿಬಾಗದಲ್ಲಿರುವ ಭದ್ರಾ ಹೊಟೇಲಿನ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿ ಅಲ್ಲಿಯೇ ಉಳಿದುಕೊಂಡಿದ್ದು, ದಿನಾಂಕ: 15-02-2021 ರಂದು ರಾತ್ರಿ 22-00 ಗಂಟೆಯ ಪೂರ್ವದಲ್ಲಿ ತಾನು ಮಲಗಿಕೊಂಡಿದ್ದ ಕೋಣೆಯಲ್ಲಿ ಮಲಗಿದಲ್ಲಿಯೇ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪಿರ್ಯಾದಿ ಶ್ರೀ ದಲಿ ತಂದೆ ಢಮರೆ ಲೋಹಾರ, ಪ್ರಾಯ-28 ವರ್ಷ, ವೃತ್ತಿ-ಅಡುಗೆ ಕೆಲಸ, ಸಾ|| ಗೋದಡಾ, ಲಡಗಡಾ ದೋಟೆ, ನೇಪಾಳ, ಹಾಲಿ ಸಾ|| ಲಲಿತಾ ಬಾಂದೇಕರ ಕಂಪೌಂಡ್, ಗಿಡ್ಡಾ ರೋಡ್, ಕಾರವಾರ ರವರು ದಿನಾಂಕ: 16-02-2021 ರಂದು 00-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 17-02-2021 12:17 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080