ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 16-01-2022
at 00:00 hrs to 24:00 hrs
ಮಂಕಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 08/2022, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿನಾಯಕ ತಂದೆ ರಾಮಕೃಷ್ಣ ನಾಯ್ಕ, ಸಾ|| ಹಡಿಕಲ್, ತಾ: ಹೊನ್ನಾವರ (ಮೋಟಾರ್ ಸೈಕಲ್ ನಂ: ಕೆ.ಎ-19.ಇ.ಯು-9991 ನೇದರ ಸವಾರ). ಈತನು ದಿನಾಂಕ: 14-01-2022 ರಂದು 16-50 ಗಂಟೆಗೆ ಮುಂಡಾರ ಕಡೆಯಿಂದ ಚಿತ್ತಾರ ಕಡೆಗೆ ಹೋಗಲು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-19.ಇ.ಯು-9991 ನೇದನ್ನು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಚಿತ್ತಾರದ ಕಂಚಿಕೊಡ್ಲು ಸಮೀಪ ರಸ್ತೆಯ ಮೇಲೆ ಬಂದವನು, ರಸ್ತೆಯ ಮೇಲಿನ ಹೊಂಡವನ್ನು ತಪ್ಪಿಸಲು ಹೋಗಿ ಎದುರುಗಡೆಯಿಂದ ಅಂದರೆ ಚಿತ್ತಾರ ಕಡೆಯಿಂದ ಹಡಿಕಲ್ ಕಡೆಗೆ ಹೋಗಲು ಪಿರ್ಯಾದಿಯವರನ್ನು ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡು ಪಿರ್ಯಾದಿಯ ತಂದೆಯವರಾದ ವೆಂಕಟ್ರಮಣ ತಂದೆ ಮಾದೇವ ಶೆಟ್ಟಿ, ಇವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಹೊಸ ಇಲೆಕ್ಟ್ರಿಕಲ್ ಮೋಟಾರ್ ಸೈಕಲ್ [Magnus Ex Li 1200w, 60y-Metallic Red Wlc, Chassis No: Mcpm11200 Engin No: Ake01978] ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ಕೈಕಾಲುಗಳಿಗೆ ಗಾಯನೋವು ಪಡಿಸಿದ್ದಲ್ಲದೇ, ಪಿರ್ಯಾದಿಯ ತಂದೆಯವರಿಗೆ ಮೊಣಕಾಲ ಕೆಳಗೆ ತೀವೃ ಗಾಯನೋವು ಹಾಗೂ ಬಲಭುಜಕ್ಕೆ ಮತ್ತು ಕೈಗೆ ಗಾಯನೋವು ಪಡಿಸಿದ್ದು, ಗಾಯಗೊಂಡ ಪಿರ್ಯಾದಿಯು ಹೊನ್ನಾವರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೀವೃವಾಗಿ ಗಾಯಗೊಂಡ ತನ್ನ ತಂದೆಯವರನ್ನು ಹೆಚ್ಚಿನ ಚಿಕಿತ್ಸೆಯ ಕುರಿತು ಕುಂದಾಪುರದ ವಿವೇಕ ಆಸ್ಪತ್ರೆಗೆ ದಾಖಲಿಸಿದ ಬಗ್ಗೆ ಪಿರ್ಯಾದಿ ಕುಮಾರಿ: ಪ್ರತಿಭಾ ತಂದೆ ವೆಂಕಟ್ರಮಣ ಶೆಟ್ಟಿ, ಪ್ರಾಯ-19 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| ಹಡಿಕಲ್, ಆಡುಕಳ, ತಾ: ಹೊನ್ನಾವರ ರವರು ದಿನಾಂಕ: 16-01-2022 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಭಟ್ಕಳ ಶಹರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 05/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅರ್ಪಾದ್ ತಂದೆ ಮೊಹಮ್ಮದ್ ನಾಸೀರ್, ಪ್ರಾಯ-20 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೆಬಳೆ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಜೆ-8060 ನೇದರ ಸವಾರ). ಈತನು ದಿನಾಂಕ: 14-01-2022 ರಂದು ಬೆಳಗ್ಗೆ 09-30 ಗಂಟೆಯ ಸುಮಾರಿಗೆ ಭಟ್ಕಳ ಶಹರದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66ರ ಸಿಟಿ ಲೈಟ್ ಹೋಟೆಲ್ ಹತ್ತಿರ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-47/ಜೆ-8060 ನೇದನ್ನು ಭಟ್ಕಳದ ಸಂಶುದ್ದೀನ್ ಸರ್ಕಲ್ ಕಡೆಯಿಂದ ಶಿರಾಲಿ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ, ಅದೇ ದಿಸೆಯಲ್ಲಿ ಅಂದರೆ ಸಂಶುದ್ದೀನ್ ಸರ್ಕಲ್ ಕಡೆಯಿಂದ ಶಿರಾಲಿ ಕಡೆಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿಯ ತಾಯಿ ಶ್ರೀಮತಿ ಮಾದೇವಿ ಕೋಂ. ಜಟ್ಟಪ್ಪ ನಾಯ್ಕ, ಪ್ರಾಯ-48 ವರ್ಷ, ಸಾ|| ಗುಡಿ ಮನೆ, ಪೋ: ಹಾರ್ನಗದ್ದೆ, ಜಾಲಿ, ತಾ: ಭಟ್ಕಳ ಇವರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಇವರಿಗೆ ಹಣೆಗೆ, ಸೊಂಟಕ್ಕೆ ಹಾಗೂ ಕಾಲುಗಳಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ದುರ್ಗಾದಾಸ ತಂದೆ ಜಟ್ಟಪ್ಪ ನಾಯ್ಕ, ಪ್ರಾಯ-22 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗುಡಿ ಮನೆ, ಪೋ: ಹಾರ್ನಗದ್ದೆ, ಜಾಲಿ, ತಾ: ಭಟ್ಕಳ ರವರು ದಿನಾಂಕ: 16-01-2022 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ದಾಂಡೇಲಿ ನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 08/2022, ಕಲಂ: 8(c), 20(b)(ii)(A) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ ಫಾರೂಖ್ ತಂದೆ ಸಲೀಂ ಶೇಖ್, ಪ್ರಾಯ-37 ವರ್ಷ, ವೃತ್ತಿ-ವ್ಯಾಪಾರ, ಸಾ|| 14 ನೇ ಬ್ಲಾಕ್, ತಾ: ದಾಂಡೇಲಿ. ಈತನು ದಿನಾಂಕ: 16-01-2022 ರಂದು 10-10 ಗಂಟೆಗೆ ದಾಂಡೇಲಿ ಗಾಂಧಿನಗರದ ಗಣಪತಿ ದೇವಸ್ಥಾನದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪಾಸ್ ಯಾ ಪರವಾನಗಿ ಇಲ್ಲದೇ ಅನಧೀಕೃತವಾಗಿ ಸುಮಾರು 15,000/- ರೂಪಾಯಿ ಮೌಲ್ಯದ 747 ಗ್ರಾಂ ತೂಕದ ಒಣಗಿರುವ ಗಾಂಜಾವನ್ನು ತಮ್ಮ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಾ ದಾಳಿಯ ಕಾಲಕ್ಕೆ ಗಾಂಜಾ ಹಾಗೂ ಗಾಂಜಾ ಮಾರಾಟದಿಂದ ಸಂಗ್ರಹಿಸಿದ ನಗದು ಹಣ 600/- ರೂಪಾಯಿ, ಕೇಸರಿ ಬಣ್ಣದ ಕೈ ಚೀಲ-01, ಸಣ್ಣ ಪೇಪರ್ ತುಕಡಿಗಳು-16 ಮತ್ತು ಮೋಟಾರ್ ಸೈಕಲ್ ನಂ: ಕೆ.ಎ-65/ಜೆ-5238, ಅ||ಕಿ|| 50.000/- ರೂಪಾಯಿ. ಇವುಗಳೊಂದಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ ಪಿರ್ಯಾದಿಯವರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕಿರಣ ಬಿ. ಪಾಟೀಲ್, ಪಿ.ಎಸ್.ಐ, ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 16-01-2022 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 16-01-2022
at 00:00 hrs to 24:00 hrs
ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ....
======||||||||======