ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 16-06-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 99/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಬ್ದುಲ್ ತಂದೆ ಪಹೀಮ್ ಮುಲ್ಲಾ, ಸಾ|| ಪಳ್ಳಿಕೇರಿ, ತಾ: ಅಂಕೋಲಾ (ಸ್ಕೂಟಿ ನಂ: ಕೆ.ಎ-30/ಡಬ್ಲ್ಯೂ-0503 ನೇದರ ಸವಾರ). ಈತನು ದಿನಾಂಕ: 10-06-2021 ರಂದು 11-15 ಗಂಟೆಗೆ ತನ್ನ ಸ್ಕೂಟಿ ನಂ: ಕೆ.ಎ-30/ಡಬ್ಲ್ಯೂ-0503 ನೇದನ್ನು ಅಂಕೋಲಾ ಶಹರದ ಬಂಡಿಗಟ್ಟಾದ ಕರ್ನಾಟಕ ಬ್ಯಾಂಕ್ ಹತ್ತಿರ ಹಾಯ್ದಿರುವ ಡಾಂಬರ್ ರಸ್ತೆಯಲ್ಲಿ ಗುಡಿಗಾರಗಲ್ಲಿ ಕಡೆಯಿಂದ ಕೇಣಿ ಕ್ರಾಸ್ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ಗಾಯಾಳು ಶ್ರೀಮತಿ ಶಕುಂತಲಾ ಗಂಡ ಗಣಪಯ್ಯ ರಾಯ್ಕರ, ಪ್ರಾಯ-58 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಸಣ್ಣ ಅಲಗೇರಿ, ತಾ: ಅಂಕೋಲಾ ಇವರಿಗೆ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅವರ ಎಡಗಾಲಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಶೋಕ ತಂದೆ ಗಣಪಯ್ಯ ರಾಯ್ಕರ, ಪ್ರಾಯ-41 ವರ್ಷ, ವೃತ್ತಿ-ಸೇಲ್ಸಮೆನ್, ಸಾ|| ಸಣ್ಣ ಅಲಗೇರಿ, ತಾ: ಅಂಕೋಲಾ ರವರು ದಿನಾಂಕ: 16-06-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 167/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಶ್ರೀತ ತಂದೆ ಮಂಜುನಾಥ ನಾಯ್ಕ, ಪ್ರಾಯ-25 ವರ್ಷ, ವೃತ್ತಿ-ಕಾಂಟ್ರ್ಯಾಕ್ಟರ್, ಸಾ|| ಕಮಟೆಹಿತ್ತಲ, ತಾ: ಹೊನ್ನಾವರ (ಕಾರ್ ನಂ: ಕೆ.ಎ-47/ಎಮ್-7755 ನೇದರ ಚಾಲಕ). ಈತನು ದಿನಾಂಕ: 15-06-2021 ರಂದು 17-45 ಗಂಟೆಗೆ ತಾನು ಚಲಾಯಿಸುತ್ತಿದ್ದ ಕಾರ್ ನಂ: ಕೆ.ಎ-47/ಎಮ್-7755 ನೇದನ್ನು ಹೊನ್ನಾವರದಿಂದ ಕರ್ಕಿಕೋಡಿ ಕಡೆಗೆ ಹೋಗಲು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲಾಗಿ ಚಲಾಯಿಸಿಕೊಂಡು ಹೋಗುತ್ತಿದ್ದವನು, ಎಲ್.ಐ.ಸಿ ಆಫೀಸ್ ಹತ್ತಿರ ತಲುಪಿದಾಗ ತಾನು ಚಲಾಯಿಸುತ್ತಿದ್ದ ಕಾರನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯುಯಿಂದ ಚಲಾಯಿಸಿ ಎಲ್.ಐ.ಸಿ ಆಫೀಸ್ ಹತ್ತಿರ ರಸ್ತೆಗೆ ಅಡ್ಡಲಾಗಿ ಬಂದ ಆಕಳನ್ನು ತಪ್ಪಿಸಲು ಕಾರನ್ನು ಒಮ್ಮೇಲೆ ರಸ್ತೆಯ ಎಡಕ್ಕೆ ಚಲಾಯಿಸಿ ರಸ್ತೆ ಪಕ್ಕದಲ್ಲಿ ಪಲ್ಟಿ ಕೆಡವಿ ಅಪಘಾತ ಪಡಿಸಿ, ತಾನು ಚಲಾಯಿಸುತ್ತಿದ್ದ ಕಾರ್ ನಂ: ಕೆ.ಎ-47/ಎಮ್-7755 ನೇದನ್ನು ಜಖಂ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಉದಯ ತಂದೆ ಲಿಂಗಪ್ಪ ನಾಯ್ಕ, ಪ್ರಾಯ-26 ವರ್ಷ, ವೃತ್ತಿ-ಕಾಂಟ್ರ್ಯಾಕ್ಟರ್, ಸಾ|| ಕರ್ಕಿಕೋಡಿ, ತಾ: ಹೊನ್ನಾವರ ರವರು ದಿನಾಂಕ: 16-06-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 56/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ತಿಮ್ಮಪ್ಪ ತಂದೆ ಈರಪ್ಪ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಗಾರೆ ಕೆಲಸ, ಸಾ|| ಹಾದಿಮನೆ, ಗರಡಿಗದ್ದೆ, ಮಾವಳ್ಳಿ-2, ಮುರ್ಡೇಶ್ವರ, ತಾ: ಭಟ್ಕಳ (ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-8454 ನೇದರ ಸವಾರ). ನಮೂದಿತ ಆರೋಪಿತನು ಪಿರ್ಯಾದಿಯ ತಂದೆಯಾಗಿದ್ದು, ದಿನಾಂಕ: 16-06-2021 ರಂದು 14-00 ಗಂಟೆಯ ಸುಮಾರಿಗೆ ತಾನು ಚಲಾಯಿಸುತ್ತಿದ್ದ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-8454 ನೇದರ ಮೇಲಾಗಿ ಮುರ್ಡೇಶ್ವರ ದೇವಸ್ಥಾನದ ರಸ್ತೆಯಿಂದ ಗರಡಿಗದ್ದೆಗೆ ಮನೆಗೆ ಬರುತ್ತಿರುವಾಗ ಮುರ್ಡೇಶ್ವರ ದೇವಸ್ಥಾನದ ರಸ್ತೆಯಲ್ಲಿ ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ ವೇಳೆ ಬಸ್ತಿಗೆ ಹೋಗುವ ರಸ್ತೆಯಲ್ಲಿ ಡಿ.ಡಿ.ಕಾಮತ ಕಿರಾಣಿ ಅಂಗಡಿಯ ಹತ್ತಿರ ನಾಯಿ ಅಡ್ಡವಾಗಿ ಬಂದ ಪರಿಣಾಮ ಆರೋಪಿತನಿಗೆ ಮೋಟಾರ್ ಸೈಕಲ್ ನಿಯಂತ್ರಿಸಲು ಸಾಧ್ಯವಾಗದೇ ಬಂದ ವೇಗದಲ್ಲಿ ರಸ್ತೆಯ ಪಕ್ಕದಲ್ಲಿದ್ದ ಎಲೆಕ್ಟ್ರಿಕಲ್ ಕಂಬಕ್ಕೆ ಢಿಕ್ಕಿ ಹೊಡೆದುಕೊಂಡು ತಲೆ, ಹಣೆಯ ಭಾಗಕ್ಕೆ, ಎಡಗೈ ತೋಳಿನ ಹತ್ತಿರ ಹಾಗೂ ಎಡಭಾಗದ ತೊಡೆಯ ಹತ್ತಿರ ಗಂಭೀರ ಸ್ವರೂಪದ ಗಾಯನೋವು ಪಡಿಸಿಕೊಂಡವನಿಗೆ ಉಪಚಾರದ ಕುರಿತು ಆಂಬ್ಯುಲೆನ್ಸ್ ವಾಹನದ ಮೇಲಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಂಬ್ಯುಲೆನ್ಸ್ ನಲ್ಲಿ ಪರೀಕ್ಷಿಸಿದ ವೈದ್ಯರು ಉಡುಪಿಗೆ ತರುವ ಪೂರ್ವದಲ್ಲಿ ದಾರಿಯ ಮಧ್ಯ 16-15 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ್ದು, ಮೃತದೇಹವನ್ನು ಮುರ್ಡೇಶ್ವರದ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ತಂದಿಟ್ಟಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ತಿಮ್ಮಪ್ಪ ನಾಯ್ಕ, ಪ್ರಾಯ-18 ವರ್ಷ, ವೃತ್ತಿ-ಕಾಲೇಜ್ ವಿದ್ಯಾರ್ಥಿ, ಸಾ|| ಹಾದಿಮನೆ, ಗರಡಿಗದ್ದೆ, ಮಾವಳ್ಳಿ-2, ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 16-06-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 84/2021, ಕಲಂ: 4, 5, 7, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಹಾಗೂ ಕಲಂ: 11(1) & (D) PREVENTION OF CRUELTY TO ANIMALS ACT-1960 ಮತ್ತು ಕಲಂ: 192 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಬ್ದುಲ್ ಖಾದರ್ ಶಫಿ ಅಹ್ಮದ್ ಬೆಳಗಾಂ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ಶಿಡೆನೂರು, ತಾ: ಬ್ಯಾಡಗಿ, ಜಿ: ಹಾವೇರಿ, ಹಾಲಿ ಸಾ|| ಬದ್ರಿಯಾ ಪಳ್ಳಿ ಹತ್ತಿರ, ಬದ್ರಿಯಾ ಕಾಲೋನಿ, ತಾ: ಭಟ್ಕಳ, 2]. ಅಬ್ದುಲ್ ಬಾಯಿಸ್ ಅಬ್ದುಲ್ ಖಾಲಿದ್ ಅಕ್ಬರ್, ಪ್ರಾಯ-26 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಫಿರ್ದೋಸ್ ನಗರ, ಹೆಬಳೆ, ತಾ: ಭಟ್ಕಳ. ಈ ನಮೂದಿತ ಆರೋಪಿತರು ದಿನಾಂಕ: 16-06-2021 ರಂದು ಬೆಳಿಗ್ಗೆ 10-00 ಗಂಟೆಯ ಸಮಯಕ್ಕೆ ಬಿಳಿ ಬಣ್ಣದ ಅ||ಕಿ|| 3,00,000/- ರೂಪಾಯಿ ಬೆಲೆಯ ಬೊಲೆರೋ ಕಂಪನಿಯ ವಾಹನ ನಂ: ಕೆ.ಎ-27/ಬಿ-2489 ನೇದರಲ್ಲಿ ಸುಮಾರು 27,000/- ರೂಪಾಯಿ ಬೆಲೆಯ 3 ಜಾನುವಾರು (1 ಆಕಳು ಹಾಗೂ 2 ಕೋಣ) ಗಳಿಗೆ ನೀರು, ಹುಲ್ಲು ಕೊಡದೇ ಹಿಂಸಾತ್ಮಕವಾಗಿ ಕಟ್ಟಿ ವಧೆ ಮಾಡುವ ಉದ್ದೇಶದಿಂದ ವಾಹನದಲ್ಲಿ ಸಕ್ಷಮ ಪ್ರಾಧಿಕಾರದಿಂದ ವಾಹನದಲ್ಲಿ ಸಾಗಾಟ ಮಾಡಲು ಪರವಾನಿಗೆ ಪಡೆಯದೇ ಶಿರಾಲಿ ಕಡೆಯಿಂದ ಭಟ್ಕಳ ಕಡೆಗೆ ಸಾಗಾಟ ಮಾಡುತ್ತಿರುವಾಗ ಶಿರಾಲಿ ಚೆಕಪೋಸ್ಟಿನಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ (ಕಾ&ಸು), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 16-06-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 52/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಚೀನ ತಂದೆ ನಾಗೇಶ ಆಚಾರಿ, ಪ್ರಾಯ-32 ವರ್ಷ, ವೃತ್ತಿ-ಕಾರ್ಪೆಂಟರ್ ಕೆಲಸ, ಸಾ|| ಬೂಸನಕೇರಿ, ಮೆಣಸೆ ಗ್ರಾಮ, ಪೋ: ಸರನಗದ್ದೆ, ತಾ: ಶಿರಸಿ (ಟ್ರ್ಯಾಕ್ಸ್ ವಾಹನ ನಂ: ಕೆ.ಎ-22/ಎನ್-860 ನೇದರ ಚಾಲಕ). ಈತನು ದಿನಾಂಕ: 16-06-2021 ರಂದು 08-30 ಗಂಟೆಯ ಸುಮಾರಿಗೆ ಟ್ರ್ಯಾಕ್ಸ್ ವಾಹನ ನಂ: ಕೆ.ಎ-22/ಎನ್-860 ನೇದನ್ನು ಶಿರಸಿ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಶಿರಸಿ-ಕುಮಟಾ ರಸ್ತೆಯ ಹೊಸೂರ ಗ್ರಾಮದ ಅಗ್ರೆ ಕ್ರಾಸ್ ಹತ್ತಿರದ ತಿರುವಿನ ರಸ್ತೆಯಲ್ಲಿ ತನ್ನ ವಾಹನದ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ರಸ್ತೆಯ ಪಕ್ಕದಲ್ಲಿರುವ ಧರೆಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ರಸ್ತೆಯ ಮೇಲೆ ವಾಹನವನ್ನು ಪಲ್ಟಿ ಕೆಡವಿ, ತಾನು ಸಹ ಗಾಯನೋವು ಪಡಿಸಿಕೊಂಡಿದ್ದಲ್ಲದೇ, ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿಗೆ ಮತ್ತು ಭಾಸ್ಕರ ತಂದೆ ನಾರಾಯಣ ಮರಾಠಿ ಇವರಿಗೆ ಸಾದಾ ಸ್ವರೂಪದ ಗಾಯನೋವು ಹಾಗೂ ರವಿ ತಂದೆ ಮಾರುತಿ ಆಚಾರಿ, ಪ್ರಾಯ-26 ವರ್ಷ, ವೃತ್ತಿ-ಕಾರ್ಪೆಂಟರ್, ಸಾ|| ಚಂದಾವರ ನಾಕಾ ಹತ್ತಿರ, ತಾ: ಹೊನ್ನಾವರ ಇವನ ತಲೆಗೆ ಗಂಭೀರ ಸ್ವರೂಪದ ಮಾರಣಾಂತಿಕ ಗಾಯ ಪಡಿಸಿ, ಸ್ಥಳದಲ್ಲಿಯೇ ಮರಣ ಉಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ವಿನಾಯಕ ತಂದೆ ನಾಗೇಶ ಆಚಾರಿ, ಪ್ರಾಯ-30 ವರ್ಷ, ವೃತ್ತಿ-ಕಾರ್ಪೆಂಟರ್ ಕೆಲಸ, ಸಾ|| ಬೂಸನಕೇರಿ, ಮೆಣಸೆ ಗ್ರಾಮ, ಪೋ: ಸರನಗದ್ದೆ, ತಾ: ಶಿರಸಿ ರವರು ದಿನಾಂಕ: 16-06-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 80/2021, ಕಲಂ: 279, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮುಸ್ತಾಕ್ ಅಹ್ಮದ್ ತಂದೆ ಅಬ್ದುಲರೂಫ್ ಮೂಡಿ, ಪ್ರಾಯ-42 ವರ್ಷ, ವೃತ್ತಿ-ಚಾಲಕ, ಸಾ|| ರಾಮನಬೈಲ್, ತಾ: ಶಿರಸಿ (ಬೊಲೆರೋ ಪಿಕಪ್ ವಾಹನ ನಂ: ಕೆ.ಎ-26/ಎ-7816 ನೇದರ ಚಾಲಕ). ಈತನು ದಿನಾಂಕ: 16-06-2021 ರಂದು ಮಧ್ಯಾಹ್ನ 03-30 ಗಂಟೆಯ ಸುಮಾರಿಗೆ ಶಿರಸಿ-ಮುಂಡಗೋಡ ರಸ್ತೆ ಹುಡೆಲಕೊಪ್ಪ ಗ್ರಾಮದ ಹತ್ತಿರ ತಾನು ಸವಾರಿ ಮಾಡುತ್ತಿದ್ದ ಬೊಲೆರೋ ಪಿಕಪ್ ವಾಹನ ನಂ: ಕೆ.ಎ-26/ಎ-7816 ನೇದನ್ನು ಶಿರಸಿ ಕಡೆಯಿಂದ ಮುಂಡಗೋಡ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಸವಾರಿ ಮಾಡಿಕೊಂಡು ಬಂದು ಮುಂಡಗೋಡ ಕಡೆಯಿಂದ ಪಾಳಾ ಕಡೆಗೆ ರಾಜೇಶ ಈತನು ತನ್ನ ಮೋಟಾರ ಸೈಕಲ್ ನಂ: ಕೆ.ಎ-31/ಇ.ಬಿ-7617 ನೇದರಲ್ಲಿ ಶ್ರೀಕಾಂತ ಈತನನ್ನು ಕೂಡ್ರಿಸಿಕೊಂಡು ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ, ಸದರಿ ಮೋಟಾರ ಸೈಕಲ್ ನಂ: ಕೆ.ಎ-31/ಇ.ಬಿ-7617 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ರಾಜೇಶ ಈತನಿಗೆ ಮಾರಣಾಂತಿಕ ಗಾಯನೋವು ಪಡಿಸಿ ಸ್ಧಳದಲ್ಲಿಯೇ ಮರಣ ಪಡಿಸಿದ್ದಲ್ಲದೇ, ಮೋಟಾರ್ ಸೈಕಲ್ ಹಿಂದೆ ಕುಳಿತ ಶ್ರೀಕಾಂತ ಈತನಿಗೆ ಭಾರೀ ಸ್ವರೂಪದ ಗಾಯನೋವು ಪಡಿಸಿ ಅಪಫಾತ ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಬಂಗಾರೆಪ್ಪ ತಂದೆ ತಿಪ್ಪಣ್ಣ ವಡ್ಡರ, ಪ್ರಾಯ-37 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಅಟ್ಟಣಗಿ, ತಾ: ಮುಂಡಗೋಡ ರವರು ದಿನಾಂಕ: 16-06-2021 ರಂದು 04-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 59/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 13-06-2021 ರಂದು 20-00 ಗಂಟೆಯಿಂದ ದಿನಾಂಕ: 14-06-2021 ರಂದು ಬೆಳಿಗ್ಗೆ 08-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯು ತಮ್ಮ ಮನೆಯ ಮುಂದೆ ನಿಲ್ಲಿಸಿಟ್ಟ ತನ್ನ ಅ||ಕಿ|| 20,000/- ರೂಪಾಯಿ ಮೌಲ್ಯದ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಎ-4123 ನೇದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನವಾದ ಮೋಟಾರ ಸೈಕಲ್ ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಅಬ್ದುಲ್ ರಹೀಮ್ ತಂದೆ ಹಸನಸಾಬ್ ಶೇಖ್, ಪ್ರಾಯ-63 ವರ್ಷ, ವೃತ್ತಿ-ವ್ಯಾಪಾರ, ಸಾ|| ದಾಸನಕೊಪ್ಪ ರಸ್ತೆ, ಬನವಾಸಿ, ತಾ: ಶಿರಸಿ ರವರು ದಿನಾಂಕ: 16-06-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 16-06-2021

at 00:00 hrs to 24:00 hrs

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 18/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಲವ ತಂದೆ ರಾಮ ಗೌಡ, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಭರತ್ನಳ್ಳಿ ಗದ್ದೆ, ಸರಗುಪ್ಪ ಗ್ರಾಮ, ತಾ: ಶಿರಸಿ. ಪಿರ್ಯಾದಿಯ ಮಗನಾದ ಈತನು ದಿನಾಂಕ: 15-06-2021 ರಂದು ಸಂಜೆ 03-00 ಗಂಟೆಯಿಂದ 07-00 ಗಂಟೆಯ ನಡುವಿನ ಅವಧಿಯಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ತೋಟದಲ್ಲಿ ಅಳವಡಿಸಿದ ಐಬ್ಯಾಕ್ಸ್ ತಂತಿ ತುಂಡಾಗಿದ್ದನ್ನು ನೋಡಿ ಬೆಳಿಗ್ಗೆಯಿಂದ ಕರೆಂಟ್ ಇಲ್ಲದ್ದನ್ನು ಕಂಡು ಸರಿ ಮಾಡಲು ಹೋಗಿ ಒಮ್ಮೇಲೆ ಕರೆಂಟ್ ಹರಿದ ತಂತಿ ತಗುಲಿ ಮೃತಪಟ್ಟ ಬಗ್ಗೆ ಕಂಡು ಬರುತ್ತದೆ. ಇದರ ಹೊರತು ನನ್ನ ಮಗನ ಸಾವಿನಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಸೀತೆ ರಾಮಾ ಗೌಡ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಿರೆಬೈಲ್, ಪೋ: ಹುಣಸೆಕೊಪ್ಪ, ತಾ: ಶಿರಸಿ ರವರು ದಿನಾಂಕ: 16-06-2021 ರಂದು 00-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 09/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಸಂತೋಷ ತಂದೆ ಗಜಾನನ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಾರ್ಕೆಟ್ ಲೇನ್, ಕ್ಯಾಸಲರಾಕ್, ತಾ: ಜೋಯಿಡಾ. ಈತನು ವಿಪರೀತ ಸರಾಯಿ ಕುಡಿತದ ಚಟ ಹೊಂದಿದ್ದವನಾಗಿದ್ದು. ಕ್ಯಾಸಲರಾಕ್ ದಲ್ಲಿ ಅವರಿವರ ಮನೆಯ ಕೆಲಸ ಮಾಡಿಕೊಂಡು ಬಂದ ಹಣದಿಂದ ಸರಾಯಿ ಕುಡಿಯುತ್ತಾ ಇದ್ದವನು, ಲಾಕಡೌನ್ ಸಮಯದಲ್ಲಿ ವಿಪರೀತ ಸರಾಯಿ ಕುಡಿದು, ಊಟ ಸಿಗದೇ ದಿನಾಂಕ: 09-06-2021 ರಿಂದ ದಿನಾಂಕ: 16-06-2021 ರಂದು 17-30 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ವಾಸದ ಮನೆಯಲ್ಲಿ ಮಲಗಿಕೊಂಡವನು, ಮಲಗಿದ್ದಲ್ಲಿಯೇ ಹಸಿವಿನಿಂದ ಬಳಲಿ ಮೃತ ಪಟ್ಟಿದ್ದು, ಸದರಿ ಮೃತ ವ್ಯಕ್ತಿಯ ಸಾವಿನ ಬಗ್ಗೆ ಬೇರೇ ಯಾವುದೇ ಸಂಶಯ ಇಲ್ಲದಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮಕ್ಕಾಗಿ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ಮೋಹನ ರೇಡ್ಕರ, ಪ್ರಾಯ-46 ವರ್ಷ, ವೃತ್ತಿ-ಕ್ಯಾಸಲರಾಕ್ ಗ್ರಾಮ ಪಂಚಾಯತ ಉಪಾಧ್ಯಕ್ಷರು, ಸಾ|| ಮಾರ್ಕೆಟ್ ಲೇನ್, ಕ್ಯಾಸಲರಾಕ್, ತಾ: ಜೋಯಿಡಾ ರವರು ದಿನಾಂಕ: 16-06-2021 ರಂದು 08-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 17-06-2021 06:27 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080