ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 16-03-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 52/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಕೃಷ್ಣ ತಂದೆ ಜಂಗಾ ಗೌಡ, ಪ್ರಾಯ-42 ವರ್ಷ, ವೃತ್ತಿ-ವ್ಯಾಪಾರ, ಸಾ|| ಲುಕ್ಕೇರಿ, ತಾ: ಕುಮಟಾ. ನಮೂದಿತ ಆರೋಪಿತನು ದಿನಾಂಕ: 16-03-2021 ರಂದು 18-00 ಗಂಟೆಗೆ ಕುಮಟಾ ತಾಲೂಕಿನ ಲುಕ್ಕೇರಿ ಗ್ರಾಮದ ಬ್ರಿಡ್ಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಬಕಾರಿ ಸ್ವತ್ತುಗಳಾದ 1). ಅರ್ಧಭಾಗ ಸರಾಯಿ ಇದ್ದ  90 ML ಅಳತೆಯ HAYWARDS ಟೆಟ್ರಾ ಪ್ಯಾಕೆಟ್-01. ಅ||ಕಿ|| 00.00/- ರೂಪಾಯಿ, 2]  ಸರಾಯಿ ತುಂಬಿದ 90 ML ಅಳತೆಯ HAYWARDS ಟೆಟ್ರಾ ಪ್ಯಾಕೆಟ್ -03. ಅ||ಕಿ|| 105/- ರೂಪಾಯಿ, 3). ಪ್ಲಾಸ್ಟಿಕ್ ಗ್ಲಾಸ್-01, ಅ||ಕಿ|| 00.00/- ರೂಪಾಯಿ, 4). ಅರ್ಧ ತುಂಬಿದ ನೀರಿನ ಬಾಟಲಿ-01, ಅ||ಕಿ|| 00.00/- ರೂಪಾಯಿ ನೇದವುಗಳನ್ನು ಇಟ್ಟುಕೊಂಡು ಸರಾಯಿಯನ್ನು ಕುಡಿದು ಅಪರಾಧ ಎಸಗಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವಿ ಗುಡ್ಡಿ, ಪಿ.ಎಸ್.ಐ-2, ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 16-03-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 77/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಾದೇವ ತಂದೆ ಮಂಜು ನಾಯ್ಕ, ಪ್ರಾಯ-60 ವರ್ಷ, ವೃತ್ತಿ-ವ್ಯಾಪಾರ, ಸಾ|| ನಡುಚಿಟ್ಟಿ, ಕರ್ಕಿ, ತಾ: ಹೊನ್ನಾವರ, 2]. ಜಾಕಿ ತಂದೆ ಬಸ್ತಾವ್ ಆಲ್ಮೇಡಾ, ಪ್ರಾಯ-40 ವರ್ಷ, ವೃತ್ತಿ-ವ್ಯಾಪಾರ, ಸಾ|| ಚರ್ಚ್ ಕ್ರಾಸ್, ಮೂಡ್ಕಣಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 15-03-2021 ರಂದು 18-30 ಗಂಟೆಗೆ ಹೊನ್ನಾವರ ತಾಲೂಕಿನ ತೇಲಂಗ ರಸ್ತೆಯಲ್ಲಿರುವ ಹಣ್ಣಿನ ಅಂಗಡಿಯ ಹತ್ತಿರದ ಸಾರ್ವಜನಿಕ ರಸ್ತೆಯ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಓ.ಸಿ ಅಂಕೆ-ಸಂಖ್ಯೆಗಳ ಮೇಲೆ ಪಂಥವನ್ನಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಜುಗಾರಾಟ ಆಡುತ್ತಿದ್ದಾಗ ದಾಳಿಯ ವೇಳೆ ಆರೋಪಿತನ ತಾಬಾದಲ್ಲಿ 1). ಒಟ್ಟು ನಗದು ಹಣ 1,150/- ರೂಪಾಯಿ, 2). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ, 3). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ ನೇದವುಗಳೊಂದಿಗೆ ಆರೋಪಿ 1 ನೇಯವನು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 2 ನೇಯವನು ಆರೋಪಿ 1 ನೇಯವನು ಆಡಿಸುತ್ತಿದ್ದ ಓ.ಸಿ ಮಟಕಾ ಜುಗಾರಾಟದ ಬುಕ್ಕಿಯಾಗಿರುವ ಬಗ್ಗೆ ಪಿರ್ಯಾದಿ ಶ್ರೀ ವೆಂಕಟೇಶ ಎಲ್. ಪೂಜಾರಿ, ಎ.ಎಸ್.ಐ, ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 16-03-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 78/2021, ಕಲಂ: 78(ಎ)(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಾರುತಿ ತಂದೆ ಸುಬ್ರಾಯ ಬಂಡಾರಿ, ಪ್ರಾಯ-42 ವರ್ಷ, ವೃತ್ತಿ-ಪಾನ್ ಬೀಡಾ ಅಂಗಡಿ, ಸಾ|| ಕಮಟೇಹಿತ್ತಲು, ತಾ: ಹೊನ್ನಾವರ, 2]. ಚಂದ್ರಹಾಸ ತಂದೆ ರಾಮಚಂದ್ರ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕರ್ಕಿ ನಾಕಾ, ತಾ: ಹೊನ್ನಾವರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 15-03-2021 ರಂದು 18-45 ಗಂಟೆಗೆ ಹೊನ್ನಾವರ ತಾಲೂಕಿನ ದುರ್ಗಾಕೇರಿಯ ಶ್ರೀ ದಂಡಿನ ದುರ್ಗಾದೇವಿ ದೇವಸ್ಥಾನದ ಹತ್ತಿರದ ಸಾರ್ವಜನಿಕ ರಸ್ತೆಯ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಓ.ಸಿ ಅಂಕೆ-ಸಂಖ್ಯೆಗಳ ಮೇಲೆ ಪಂಥವನ್ನಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಜುಗಾರಾಟ ಆಡುತ್ತಿದ್ದಾಗ ದಾಳಿಯ ವೇಳೆ ಆರೋಪಿತನ ತಾಬಾದಲ್ಲಿ 1). ಒಟ್ಟು ನಗದು ಹಣ 510/- ರೂಪಾಯಿ, 2). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ, 3). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ ನೇದವುಗಳೊಂದಿಗೆ ಆರೋಪಿ 1 ನೇಯವನು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 2 ನೇಯವನು ಆರೋಪಿ 1 ನೇಯವನು ಆಡಿಸುತ್ತಿದ್ದ ಓ.ಸಿ ಮಟಕಾ ಜುಗಾರಾಟದ ಬುಕ್ಕಿಯಾಗಿರುವ ಬಗ್ಗೆ ಪಿರ್ಯಾದಿ ಶ್ರೀ ಶಿವರಾಮ ಎಸ್. ದೇಸಾಯಿ, ಎ.ಎಸ್.ಐ, ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 16-03-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 79/2021, ಕಲಂ: 78(ಎ)(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಶಿವಾನಂದ ತಂದೆ ಸತ್ಯನಾರಾಯಣ ನಾಯ್ಕ, ಪ್ರಾಯ-46 ವರ್ಷ, ವೃತ್ತಿ-ವ್ಯಾಪಾರ, ಸಾ|| ತೊಪ್ಪಲಕೇರಿ, ಕರ್ಕಿ, ತಾ: ಹೊನ್ನಾವರ, 2]. ಜಾಕಿ ತಂದೆ ಬಸ್ತಾವ್ ಆಲ್ಮೇಡಾ, ಪ್ರಾಯ-40 ವರ್ಷ, ವೃತ್ತಿ- ವ್ಯಾಪಾರ, ಸಾ|| ಚರ್ಚ್ ಕ್ರಾಸ್, ಮೂಡ್ಕಣಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 15-03-2021 ರಂದು 19-00 ಗಂಟೆಗೆ ಹೊನ್ನಾವರ ತಾಲೂಕಿನ ಕರ್ಕಿಯ ಪಾವಿನಕುರ್ವಾ ತೂಗುಸೇತುವೆ ಹೋಗುವ ರಸ್ತೆಯ ಲಕ್ಷ್ಮೀ ಜನರಲ್ ಸ್ಟೋರ್ ಅಂಗಡಿಯ ಹತ್ತಿರದ ಸಾರ್ವಜನಿಕ ರಸ್ತೆಯ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಓ.ಸಿ ಅಂಕೆ-ಸಂಖ್ಯೆಗಳ ಮೇಲೆ ಪಂಥವನ್ನಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಜುಗಾರಾಟ ಆಡುತ್ತಿದ್ದಾಗ ದಾಳಿಯ ವೇಳೆ ಆರೋಪಿತನ ತಾಬಾದಲ್ಲಿ 1). ಒಟ್ಟು ನಗದು ಹಣ 860/- ರೂಪಾಯಿ, 2). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ, 3). ಓ.ಸಿ ಅಂಕಿ ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ ನೇದವುಗಳೊಂದಿಗೆ ಆರೋಪಿ 1 ನೇಯವನು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 2 ನೇಯವನು ಆರೋಪಿ 1 ನೇಯವನು ಆಡಿಸುತ್ತಿದ್ದ ಓ.ಸಿ ಮಟಕಾ ಜುಗಾರಾಟದ ಬುಕ್ಕಿಯಾಗಿರುವ ಬಗ್ಗೆ ಪಿರ್ಯಾದಿ ಶ್ರೀ ಜ್ಞಾನೇಶ್ವರ ಡಿ. ಹರಿಕಂತ್ರ, ಎ.ಎಸ್.ಐ, ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 16-03-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 80/2021, ಕಲಂ: 78(ಎ)(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ವಿನೋದ ತಂದೆ ರಾಮಾ ಗೌಡ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೊಳಗದ್ದೆ, ಖರ್ವಾ, ತಾ: ಹೊನ್ನಾವರ, 2]. ವಿನಾಯಕ ತಂದೆ ರಾಮಾ ಗೌಡ, ಪ್ರಾಯ-34 ವರ್ಷ, ವೃತ್ತಿ-ವ್ಯಾಪಾರ, ಸಾ|| ಕೊಳಗದ್ದೆ, ಖರ್ವಾ, ತಾ: ಹೊನ್ನಾವರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 15-03-2021 ರಂದು 20-00 ಗಂಟೆಗೆ ಹೊನ್ನಾವರ ತಾಲೂಕಿನ ಖರ್ವಾ ಕೊಳಗದ್ದೆಯಲ್ಲಿ ತನ್ನ ಅಂಗಡಿಯ ಹತ್ತಿರದ ಸಾರ್ವಜನಿಕ ರಸ್ತೆಯ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಓ.ಸಿ ಅಂಕೆ-ಸಂಖ್ಯೆಗಳ ಮೇಲೆ ಪಂಥವನ್ನಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಜುಗಾರಾಟ ಆಡುತ್ತಿದ್ದಾಗ ದಾಳಿಯ ವೇಳೆ ಆರೋಪಿತನ ತಾಬಾದಲ್ಲಿ 1). ಒಟ್ಟು ನಗದು ಹಣ 810/- ರೂಪಾಯಿ, 2). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ, 3). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ ನೇದವುಗಳೊಂದಿಗೆ ಆರೋಪಿ 1 ನೇಯವನು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 2 ನೇಯವನು ಆರೋಪಿ 1 ನೇಯವನು ಆಡಿಸುತ್ತಿದ್ದ ಓ.ಸಿ ಮಟಕಾ ಜುಗಾರಾಟದ ಬುಕ್ಕಿಯಾಗಿರುವ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಸಾವಿತ್ರಿ ಎ. ನಾಯಕ, ಪಿ.ಎಸ್.ಐ (ಕ್ರೈಂ), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 16-03-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 43/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತರು 1]. ವಿಷ್ಣು ಪ್ರಭಾರಕರ ಗಾಯ ತೊಂಡೆ, ಪ್ರಾಯ-46 ವರ್ಷ, ಸಾ|| ಕೆಳಗಿನೂರು, ಮಂಕಿ, ತಾ: ಹೊನ್ನಾವರ, 2]. ಕೇಶವ ಗಣಪತಿ ಗೌಡ, ಪ್ರಾಯ-34 ವರ್ಷ, ಸಾ|| ಸರಕಾರಿ ಆಸ್ಪತ್ರೆ, ಮುರ್ಡೇಶ್ವರ, ತಾ: ಭಟ್ಕಳ. ಈ ನಮೂದಿತ ಆರೋಪಿತರು ದಿನಾಂಕ: 16-03-2021 ರಂದು 20-15 ಗಂಟೆಗೆ ಕೆಳಗಿನೂರು ಚರ್ಚ್ ಎದುರಿಗೆ ಇರುವ ಆರೋಪಿ 1 ನೇಯವನ ಅಂಗಡಿಯ ಅಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಸರಾಯಿ ಕುಡಿಯಲು ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಕುಳಿತು ‘John Bull Whisky’ ಅಂತಾ ನಮೂದಿದ್ದ 180 ML ಅಳತೆಯ ಪ್ಲಾಸ್ಟಿಕ್ ಬಾಟಲಿಗಳಲ್ಲಿದ್ದ ಸರಾಯಿಯನ್ನು ಕುಡಿಯುತ್ತಿದ್ದಾಗ ದಾಳಿಯ ವೇಳೆ 1). John Bull Whisky ಅಂತಾ ನಮೂದು ಇದ್ದ 180 ML ಅಳತೆಯ ಸರಾಯಿ ಇದ್ದ ಪ್ಲಾಸ್ಟಿಕ ಬಾಟಲಿ-1, ಅಂದಾಜು ಮೌಲ್ಯ  55.00/- ರೂಪಾಯಿ, 2). John Bull Whisky ಅಂತಾ ನಮೂದು ಇದ್ದ 180 ML ಅಳತೆಯ ಕುಡಿದು ಖಾಲಿ ಮಾಡಿದ ಪ್ಲಾಸ್ಟಿಕ್ ಬಾಟಲಿ-2, ಅಂದಾಜು ಮೌಲ್ಯ 00.00/- ರೂಪಾಯಿ, 3). ಪ್ಲಾಸ್ಟಿಕ ಗ್ಲಾಸಗಳು-2, ಅಂದಾಜು ಮೌಲ್ಯ 00.00/- ರೂಪಾಯಿ, 4). ಒಂದು ಲೀಟರಿನ ನೀರಿನ ಬಾಟಲಿಗಳು (ಒಂದು ಖಾಲಿ ಬಾಟಲಿ, ಇನ್ನೊಂದರಲ್ಲಿ ಅರ್ಧದಷ್ಟು ನೀರು ಇರುವ ಬಾಟಲಿ)-2, ಅಂದಾಜು ಮೌಲ್ಯ  00.00/- ರೂಪಾಯಿ. ಈ ನಮೂದಿತ ಸ್ವತ್ತುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಪರಮಾನಂದ ಬಿ. ಕೊಣ್ಣುರ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 16-03-2021 ರಂದು 22-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 25/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪಿ. ದೇವೇಂದ್ರ ಕುಮಾರ ತಂದೆ ಮಾಧವ ಪಟಗಾರ, ಪ್ರಾಯ-34 ವರ್ಷ, ಸಾ|| ಕಾಗಲ್, ತಾ: ಕುಮಟಾ (ಟಾಟಾ ಲಾರಿ ನಂ: ಕೆ.ಎ-47/7811 ನೇದರ ಚಾಲಕ). ದಿನಾಂಕ: 16-03-2021 ರಂದು ಬೆಳಿಗ್ಗೆ 09-15 ಗಂಟೆಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಾಯಾಳು ಶ್ರೀ ಅಶೋಕ ಹನುಮಂತ ನಾಯ್ಕ, ಪ್ರಾಯ-41 ವರ್ಷ, ವೃತ್ತಿ-ಸಿವಿಲ್ ಹೆಡ್ ಕಾನ್‍ಸ್ಟೇಬಲ್ (ಸಿ.ಎಚ್.ಸಿ-1498) ರವರು ಕರ್ತವ್ಯಕ್ಕೆ ಹೋಗಲು ಅಂತಾ ತಮ್ಮ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ: ಕೆ.ಎ-47/ಇ-9835 ನೇದರ ಮೇಲೆ ಹೊರಟಾಗ ಅವರ ಹೆಂಡತಿ ಕೂಡಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಕ್ತಿಗೆ ಕರ್ತವ್ಯಕ್ಕೆ ಹೋಗಲು ಅಂತಾ ತನ್ನ ಗಂಡನ ಮೋಟಾರ್ ಸೈಕಲ್ ಮೇಲೆ ಹಿಂದುಗಡೆಗೆ ಕುಳಿತುಕೊಂಡು ಹೋಗುತ್ತಿದ್ದಾಗ, ಗಾಯಾಳು ಮೋಟಾರ್ ಸೈಕಲನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಮಂಕಿ ಕಡೆಯಿಂದ ಭಟ್ಕಳ ಕಡೆಗೆ ತನ್ನ ಬದಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಮುರ್ಡೇಶ್ವರ ಬಸ್ತಿಮಕ್ಕಿಯ ಶ್ರೀ ಚಿತ್ರಾಪುರ ಹಂಚಿನ ಕಾರ್ಖಾನೆ ಪ್ರೈವೆಟ್ ಲಿಮಿಟೆಡ್ ಎದುರು ತಲುಪಿದಾಗ ಮುಂದುಗಡೆ ಆರೋಪಿತನು ತಾನು ಚಲಾಯಿಸುತ್ತಿದ್ದ ಟಾಟಾ ಲಾರಿ ನಂ: ಕೆ.ಎ-47/7811 ನೇದನ್ನು ಮಂಕಿ ಕಡೆಯಿಂದ ಮುರ್ಡೇಶ್ವರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದವನು, ಶ್ರೀ ಚಿತ್ರಾಪುರ ಹಂಚಿನ ಕಾರ್ಖಾನೆಗೆ ಹೋಗಲು ಹಿಂದುಗಡೆಯಿಂದ ಬರುತ್ತಿರುವ ವಾಹನಗಳಿಗೆ ಇಂಡಿಕೇಟರ್ ಲೈಟ್ ಹಾಕದೇ ಹಾಗೂ ಕೈ ಸನ್ನೆ ಮಾಡಿ ಸೂಚನೆ ನೀಡದೇ ಒಮ್ಮೇಲೆ ತನ್ನ ಲಾರಿಯನ್ನು ಎಡಕ್ಕೆ ತಿರುಗಿಸಿ ಮೋಟಾರ್ ಸೈಕಲಿಗೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಾದ ಅಶೋಕ ಹನುಮಂತ ನಾಯ್ಕ ರವರಿಗೆ ಬಲಗಾಲು ಮೊಣಗಂಟಿನ ಕೆಳಗೆ ಮೂಳೆ ಮೂರಿದು ಗಂಭೀರ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಗಣೇಶ ತಂದೆ ಮಹಾಬಲೇಶ್ವರ ನಾಯ್ಕ, ಪ್ರಾಯ-23 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಜನತಾ ಕಾಲೋನಿ, ದೊಡ್ಡಬಲಸೆ, ಬೈಲೂರು, ತಾ: ಭಟ್ಕಳ ರವರು ದಿನಾಂಕ: 16-03-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 26/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ವಸಂತ ತಂದೆ ಮಾದೇವ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಗೂಡಂಗಡಿ ವ್ಯಾಪಾರ, ಸಾ|| ಕೋಟೆಗುಡ್ಡಿಮನೆ, ಕೋಟೆಬಾಗಿಲು, ಶಿರಾಲಿ, ತಾ: ಭಟ್ಕಳ. ನಮೂದಿತ ಆರೋಪಿತನು ದಿನಾಂಕ: 16-03-2021 ರಂದು 19-30 ಗಂಟೆಗೆ ತನ್ನ ಗೂಡಂಗಡಿಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಬರ-ಹೋಗುವ ಜನರನ್ನು ಸೇರಿಸಿಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ ಅಂಕೆ-ಸಂಖ್ಯೆ ಬರೆದ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 580/- ರೂಪಾಯಿ ಯೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವೀಂದ್ರ ಬಿರಾದಾರ, ಪಿ.ಎಸ್.ಐ (ಕಾ&ಸು), ಮುರ್ಡೇಶ್ವರ ಪೊಲೀಸ್ ಠಾಣೆ ರವರು ದಿನಾಂಕ: 16-03-2021 ರಂದು 20-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಜೋಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 14/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ತಂದೆ ಮಿನಿನ್ ಗೋಮ್ಸ್, ಪ್ರಾಯ-31 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜನತಾ ಕಾಲೋನಿ, ತಾ: ಜೋಯಿಡಾ, ಹಾಲಿ ಸಾ|| ಕುಂಬಾರವಾಡಾ, ತಾ: ಜೋಯಿಡಾ. ನಮೂದಿತ ಆರೋಪಿತನು ದಿನಾಂಕ: 16-03-2021 ರಂದು 15-30 ಗಂಟೆಯ ಸುಮಾರಿಗೆ ತನ್ನ ಲಾಭಕ್ಕೋಸ್ಕರ ಜೋಯಿಡಾ ತಾಲೂಕಿನ ಶಿವಾಜಿ ಸರ್ಕಲ್ ಹತ್ತಿರದ ಬಸ್ ನಿಲ್ದಾಣದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬರಿಗೆ ಅನ್ಯಾಯದ ಲಾಭ, ಇನ್ನೊಬ್ಬರಿಗೆ ಅನ್ಯಾಯದ ನಷ್ಟವಾಗುವಂತೆ ಸಾರ್ವಜನಿಕರಿಂದ ಹಣವನ್ನು ಸ್ವೀಕರಿಸಿಕೊಂಡು ಓ.ಸಿ ಚೀಟಿ ಬರೆಯುತ್ತಿದ್ದಾಗ ನಗದು ಹಣ 1,360/- ರೂಪಾಯಿ, ಬಾಲ್ ಪೆನ್ ಹಾಗೂ ಅಂಕೆ-ಸಂಖ್ಯೆ ಬರೆದ ಓ.ಸಿ ಚೀಟಿಗಳ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಮಂಜುಳಾ ರಾವೋಜಿ, ಪಿ.ಎಸ್.ಐ, ಜೋಯಿಡಾ ಪೊಲೀಸ್ ಠಾಣೆ ರವರು ದಿನಾಂಕ: 16-03-2021 ರಂದು 16-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 58/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ರಾಜಾ ತಂದೆ ನಾಗಪ್ಪ ಮಾದರ, ಪ್ರಾಯ-47 ವರ್ಷ, ವೃತ್ತಿ-ಚಾಲಕ, ಸಾ|| ಇಂದಿರಾನಗರ, ಹಳಿಯಾಳ ಶಹರ. ನಮೂದಿತ ಆರೋಪಿತನು ದಿನಾಂಕ: 16-03-2021 ರಂದು 18-40 ಗಂಟೆಗೆ ಹಳಿಯಾಳ ಶಹರದ ಬಸವೇಶ್ವರ ಸರ್ಕಲ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ನಿಂತು, ತನ್ನ ಅಕ್ರಮ ಲಾಭಕ್ಕೋಸ್ಕರ ಬರ-ಹೋಗುವ ಜನರನ್ನು ಕರೆದು, ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿರಿ, ಅದೃಷ್ಟ ಸಂಖ್ಯೆ ತಾಗಿದರೆ, 01/- ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಆಸೆ ಆಮಿಷ ತೋರಿಸಿ ಕೂಗಿ ಕರೆದು, ಬಂದಂತಹ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳನ್ನು ಚೀಟಿಯಲ್ಲಿ ಬರೆದುಕೊಡುತ್ತಾ, ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ ದಾಳಿಯ ಕಾಲಕ್ಕೆ ಓ.ಸಿ ಮಟಕಾ ನಗದು ಹಣ 600/- ರೂಪಾಯಿ ಮತ್ತು ಜೂಗಾರಾಟದ ಸಾಮಗ್ರಿಗಳಾದ 1). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-1, 2). ಬಾಲ್ ಪೆನ್-01, 3). ರಟ್ಟು-01 ಇವುಗಳೊಂದಿಗೆ ಆರೋಪಿತನು ಸಿಕ್ಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಯಲ್ಲಾಲಿಂಗ ಕುನ್ನೂರ, ಪಿ.ಎಸ್.ಐ (ಕಾ&ಸು), ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 16-03-2021 ರಂದು 21-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 33/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಈರಪ್ಪ ತಂದೆ ವಿರೂಪಾಕ್ಷಪ್ಪ ಚಕ್ರಸಾಲಿ, ಪ್ರಾಯ-34 ವರ್ಷ, ವೃತ್ತಿ-ಚಾಲಕ, ಸಾ|| ಕಾನಗೋಡ, ತಾ: ಸಿದ್ದಾಪುರ. ಪಿರ್ಯಾದಿಯ ತಮ್ಮನಾದ ಈತನು ತನ್ನ ಸಂಸಾರಿಕ ಜೀವನದಲ್ಲಿ ಬಿರುಕು ಆಗಿ ಹೆಂಡತಿಯೊಂದಿಗೆ ವಿಚ್ಛೇಧನ ಮಾಡಿಕೊಂಡಿದ್ದವನು, ಅವನ ಸಂಸಾರಿಕ ಜೀವನದಲ್ಲಿ ಬೇಸತ್ತು ವಿಪರೀತವಾಗಿ ಸಾರಾಯಿ ಕುಡಿತದ ಚಟಕ್ಕೆ ಅಂಟಿಕೊಂಡಿದ್ದವನು, ಇತ್ತೀಚೆಗೆ ನಿತ್ಯವು ಸಾರಾಯಿ ಕುಡಿದು ಬಂದು ವಿಚಿತ್ರವಾಗಿ ವರ್ತಿಸುತ್ತಾ ಬಾಯಿಗೆ ಬಂದಂತೆ ಹಲಬುತ್ತಿದ್ದವನು. ದಿನಾಂಕ: 12-03-2021 ರಂದು ಸಂಜೆ 05-00 ಗಂಟೆಯಿಂದ ದಿನಾಂಕ: 13-03-2021 ರಂದು ಬೆಳಿಗ್ಗೆ 09-30 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಈವರೆಗೂ ಮನೆಗೆ ವಾಪಸ್ ಬಾರದೇ ಇದ್ದುದರಿಂದ ಕಾಣೆಯಾದ ತನ್ನ ತಮ್ಮನನ್ನು ಹುಡುಕಿ ಕೊಡಬೇಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಬಸವರಾಜ ತಂದೆ ವಿರೂಪಾಕ್ಷಪ್ಪ ಚಕ್ರಸಾಲಿ, ಪ್ರಾಯ-44 ವರ್ಷ, ವೃತ್ತಿ-ಚಾಲಕ, ಸಾ|| ಕಾನಗೋಡ, ತಾ: ಸಿದ್ದಾಪುರ ರವರು ದಿನಾಂಕ: 16-03-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 24/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಸಚೀನ ಫಿರೋಜ್ ಶೇಖ್, ಸಾ|| ಅನಮೋಡ, ತಾ: ಜೋಯಿಡಾ. ನಮೂದಿತ ಆರೋಪಿತನು ತನ್ನ ಲಾಭಕ್ಕಾಗಿ ವಿವಿಧ ಮಾದರಿಯ 1). 750 ML ನ IMPERIAL BLUE Blended Grain Whisky ಯ ಬಾಟಲಿಗಳು-04, ಅ||ಕಿ|| 1,080/- ರೂಪಾಯಿ, 2). 750 ML ನ McDowells Reserve Whisky ಯ ಬಾಟಲಿ-01, ಅ||ಕಿ|| 270/- ರೂಪಾಯಿ, 3). 500 ML ನ KINGFISHER STRONG Premium Beer ನ 24 ಟಿನಗಳಿಂದ ಕೂಡಿದ ಬಾಕ್ಸ್-01, ಅ||ಕಿ|| 1,728/- ರೂಪಾಯಿ, 4). ಪ್ಲಾಸ್ಟಿಕ್ ಚೀಲ-01, ಅ||ಕಿ|| 00.00/- ರೂಪಾಯಿ. 3,078/- ರೂಪಾಯಿ ಮೌಲ್ಯದ ಗೋವಾದ ಸರಾಯಿಯನ್ನು ಅಕ್ರಮವಾಗಿ ಒಂದು ಪ್ಲಾಸ್ಟಿಕ್ಕ ಚೀಲದಲ್ಲಿ ಹಾಕಿಕೊಂಡು ದಿನಾಂಕ: 16-03-2021 ರಂದು 19-45 ಗಂಟೆಗೆ ಅನಮೋಡದ ಅಬಕಾರಿ ಚೆಕ್ ಪೋಸ್ಟದಿಂದ ಗೋವಾ ಕಡೆಗೆ ಹೋಗುವ ರಸ್ತೆಯಲ್ಲಿ ಸುಮಾರು ಒಂದೂವರೆ ಕಿ.ಮೀ ಅಂತರದಲ್ಲಿ ತನ್ನ ಹೆಗಲ ಮೇಲೆ ಹೊತ್ತುಕೊಂಡು ಸಾಗಾಟ ಮಾಡುತ್ತಿರುವಾಗ ದಾಳಿಗೆ ಹೋದಾಗ ಪೊಲೀಸರನ್ನು ಕಂಡು ತಪ್ಪಿಸಿಕೊಂಡು ಓಡಿ ಹೋದ ಬಗ್ಗೆ  ಪಿರ್ಯಾದಿ ಸ||ತ|| ಶ್ರೀ ಕಿರಣ ಬಿ. ಪಾಟೀಲ, ಪಿ.ಎಸ್.ಐ (ಕಾ&ಸು), ರಾಮನಗರ ಪೊಲೀಸ್ ಠಾಣೆ ರವರು ದಿನಾಂಕ: 16-03-2021 ರಂದು 22-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 16-03-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 08/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ದಿಲೀಪ ತಂದೆ ಗೋವಿಂದ ದೇವದಾಸ, ಪ್ರಾಯ-61 ವರ್ಷ, ವೃತ್ತಿ-ಫ್ಯಾಬ್ರಿಕೇಷನ್ ಕೆಲಸ, ಸಾ|| ನರಸಿಂಹ ದೇವಸ್ಥಾನದ ಹತ್ತಿರ, ಸದಾಶಿವಗಡ, ರಾಮನಾಥ ಕ್ರಾಸ್, ಮಾಜಾಳಿ, ಕಾರವಾರ. ಈತನು ದಿನಾಂಕ: 15-03-2021 ರಂದು ಕಾರವಾರದಲ್ಲಿ ಫ್ಯಾಬ್ರಿಕೇಷನ್ ಕೆಲಸಕ್ಕೆ ಬಂದವನು, ಮಧ್ಯಾಹ್ನ 13-00 ಗಂಟೆಗೆ ಕಾರವಾರದ ಶ್ವೇತಾ ಲಂಚ್ ಹೋಮಿಗೆ ಬಂದು ಊಟ ಮುಗಿಸಿ ಪುನಃ ಕೆಲಸಕ್ಕೆ ಹೋಗಲು ಕಾರಿನಲ್ಲಿ ಕುಳಿತುಕೊಂಡಾಗ ಒಮ್ಮೇಲೆ ತಲೆ ಸುತ್ತಿ ವಾಂತಿ ಮಾಡಿಕೊಂಡು ಅಸ್ವಸ್ಥರಾದವರನ್ನು ಅವನ ಜೊತೆಯಲ್ಲಿದ್ದ ಕೆಲಸಗಾರರು ಅವರನ್ನು ಕೂಡಲೇ ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಾರವಾರಕ್ಕೆ ಚಿಕಿತ್ಸೆಗೆಂದು ದಾಖಲಿಸಿದ್ದು, ಆತನನ್ನು ಪರೀಕ್ಷಿಸಿದ ವೈದ್ಯರು ದಿಲೀಪ ಈತನು ಆಸ್ಪತ್ರೆಗೆ ತರುವ ಮೊದಲೇ ಮಾರ್ಗಮಧ್ಯ ಮೃತಪಟ್ಟಿರುವುದಾಗಿ ತಿಳಿಸಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬ ಬಗ್ಗೆ ಶ್ರೀಮತಿ ನವ್ಯಾ @ ಮಾಲಿನಿ ಕೋಂ. ನಿರಂಜನ ಗಡಕರ, ಪ್ರಾಯ-31 ವರ್ಷ, ವೃತ್ತಿ-ಗೃಹಿಣಿ, ಸಾ|| ನರಸಿಂಹ ದೇವಸ್ಥಾನದ ಹತ್ತಿರ, ಸದಾಶಿವಗಡ, ರಾಮನಾಥ ಕ್ರಾಸ್, ಮಾಜಾಳಿ, ಕಾರವಾರ ರವರು ದಿನಾಂಕ: 16-03-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 17-03-2021 04:16 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080