ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 16-05-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 53/2021, ಕಲಂ: 269, 271 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಆದಂ ಶೇಖ್ ಮಹಮ್ಮದ್ ಮೋಮಿನ್, ಪ್ರಾಯ-53 ವರ್ಷ, ವೃತ್ತಿ-ಕಿರಾಣಿ ವ್ಯಾಪಾರಿ, ಸಾ|| ಹೈ ಚರ್ಚ್ ರೋಡ್, ಕಾರವಾರ. ದೇಶಾದ್ಯಂತ ಕೋವಿಡ್-19 ಕೊರೋನಾ ವೈರಸ್ ಸಾಂಕ್ರಾಮಿಕ ಖಾಯಿಲೆ ಹರಡುತ್ತಿದ್ದು, ಕೋವಿಡ್-19 ಖಾಯಿಲೆಯ 2 ನೇ ಅಲೆ ಹೆಚ್ಚಾಗಿರುವುದರಿಂದಾಗಿ ಖಾಯಿಲೆ ನಿಯಂತ್ರಣಕ್ಕಾಗಿ ಮಾನ್ಯ ಸರಕಾರ ಹಾಗೂ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಜಿಲ್ಲಾದ್ಯಂತ ದಿನಾಂಕ: 27-04-2021 ರಿಂದ ಮುಂದಿನ ಆದೇಶದವರೆಗೆ ಕರ್ಫ್ಯೂ ಘೋಷಣೆ ಮಾಡಿ ಬೆಳಿಗ್ಗೆ 06-00 ಗಂಟೆಯಿಂದ 10-00 ಗಂಟೆಯವರೆಗೆ ಜನರಿಗೆ ಅನುಕೂಲವಾಗುವಂತೆ ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟು ನಡೆಸಲು ಅನುಮತಿಸಿದ್ದು, 10-00 ಗಂಟೆಯ ನಂತರ ಸಂಪೂರ್ಣ ಕರ್ಫ್ಯೂ ಘೋಷಣೆ ಮಾಡಿ ಅಗತ್ಯ ಕೆಲಸದ ಹೊರತು ಯಾರೂ ಸಾರ್ವಜನಿಕವಾಗಿ ಓಡಾಡದಂತೆ ಹಾಗೂ ಎಲ್ಲಾ ರೀತಿಯ ಮಳಿಗೆಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದ್ದು, ಕರ್ಫ್ಯೂ ಆದೇಶ ಇದ್ದಾಗಲೂ ಸಹ ನಮೂದಿತ ಆರೋಪಿತನು ದಿನಾಂಕ: 16-05-2021 ರಂದು 11-50 ಗಂಟೆಯ ವರೆಗೆ ಕಾರವಾರದ ಹೈ ಚರ್ಚ್ ರಸ್ತೆಯಲ್ಲಿರುವ ತನ್ನ ಬಾಬ್ತು ಸ್ಟಾರ್ ಮಾರ್ಟ್ ಅಂತ ಹೆಸರಿನ ಅಂಗಡಿಯನ್ನು ತೆರೆದು ಜನರು ಓಡಾಡುವಂತೆ ಮಾಡಿ ಸಾರ್ವಜನಿಕವಾಗಿ ಸಾಂಕ್ರಾಮಿಕ ಕೋವಿಡ್-19 ಕೊರೋನಾ ಖಾಯಿಲೆ ಇತರರಿಗೆ ಹರಡುವ ಸಂಭವ ಇದ್ದರೂ ಸಹ ತನ್ನ ನಿರ್ಲಕ್ಷ್ಯತನದಿಂದ ತನ್ನ ಲಾಭದ ಸಲುವಾಗಿ ಇತರರ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವವಿರುವಂತೆ ಮಾಸ್ಕ್ ವಗೈರೆ ಧರಿಸದೇ ಅಂಗಡಿಯನ್ನು ತೆರೆದು ರೋಗ ನಿರೋಧಕ ನಿರ್ಬಂಧ ನಿಯಮದ ಆದೇಶವನ್ನು  ಉಲ್ಲಂಘನೆ ಮಾಡಿರುವ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷ ಕುಮಾರ ಎಮ್, ಪಿ.ಎಸ್.ಐ, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 16-05-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 86/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದ್ಯಾಮಪ್ಪ ಸಂದಿಮನಿ, ಸಾ|| ಬೇಗೂರು, ತಾ: ಕಲಘಟಗಿ, ಜಿ: ಧಾರವಾಡ (ಲಾರಿ ನಂ: ಕೆ.ಎ-19/ಎ.ಎ-8050 ನೇದರ ಚಾಲಕ). ಈತನು ತನ್ನ ಬಾಬ್ತು ಲಾರಿ ನಂ: ಕೆ.ಎ-19/ಎ.ಎ-8050 ನೇದನ್ನು ದಿನಾಂಕ: 16-05-2021 ರಂದು 08-00 ಗಂಟೆಗೆ ಅಂಕೋಲಾ ತಾಲೂಕಿನ ಬೆಳಸೆ ಗ್ರಾಮದಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಡಾಂಬರ್ ರಸ್ತೆಯ ಇಳಿಜಾರಿನಲ್ಲಿ ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದವನು, ಲಾರಿಯ ಮೇಲಿನ ತನ್ನ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ಬಲಕ್ಕೆ ಬಂದವನು, ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ರಸ್ತೆಯ ತನ್ನ ಬದಿಯಿಂದ ಹೋಗುತ್ತಿದ್ದ ಕಾರ್ ನಂ: ಕೆ.ಎ-19/ಡಿ-1500 ನೇದಕ್ಕೆ ಬಲಬದಿಯ ಡೋರ್ ಹತ್ತಿರ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ 1). ಶ್ರೀಮತಿ ಮಮತಾ ಪ್ರೇಮಾನಂದ ಮಡಿವಾಳ, ಪ್ರಾಯ-38 ವರ್ಷ, 2). ಕು: ಶ್ರೇಯಾ ಪ್ರೇಮಾನಂದ ಮಡಿವಾಳ, ಪ್ರಾಯ-16 ವರ್ಷ, 3). ಶ್ರೀಮತಿ ರಾಧಿಕಾ ರಾಜೇಂದ್ರ ಅಜಗಾಂವಕರ, ಪ್ರಾಯ-35 ವರ್ಷ, 4). ಕು: ಅಂಕುಶ ರಾಜೇಂದ್ರ ಅಜಗಾಂವಕರ, ಪ್ರಾಯ-10 ವರ್ಷ, ಸಾ|| (ಎಲ್ಲರೂ) ಹಡವ, ತಾ: ಅಂಕೋಲಾ ಮತ್ತು ಕಾರ್ ಚಾಲಕ 5). ಈಶ್ವರ ತಂದೆ ಹುಲಿಯಪ್ಪ ಗೌಡ, ಪ್ರಾಯ-49 ವರ್ಷ, ಸಾ|| ಉಳುವರೆ, ತಾ: ಅಂಕೋಲಾ ಇವರಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹಾನಂದ ತಂದೆ ಗೋವಿಂದ ಮಡಿವಾಳ, ಪ್ರಾಯ-48 ವರ್ಷ, ವೃತ್ತಿ-ಲಾಂಡ್ರಿ ಕೆಲಸ, ಸಾ|| ಕ್ವಾಲಿಟಿ ಪ್ರೆಸ್ ಹಿಂದುಗಡೆ, ಕೇಣಿ, ತಾ: ಅಂಕೋಲಾ ರವರು ದಿನಾಂಕ: 16-05-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 77/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಇಬ್ರಾಹಿಂ ಸಯ್ಯದ್ ನಬಿ, ಸಾ|| ಭಟ್ಕಳ (ಕಾರ್ ನಂ ನಂ: ಕೆ.ಎ-47/ಎಮ್-7558 ನೇದರ ಚಾಲಕ). ಈತನು ದಿನಾಂಕ: 16-05-2021 ರಂದು ಬೆಳಿಗ್ಗೆ 08-30 ಗಂಟೆಗೆ ಮಂಕಿ ಅರೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮೇಲೆ ತನ್ನ ಕಾರ್ ನಂ: ಕೆ.ಎ-47/ಎಮ್-7558 ನೇದನ್ನು ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಹೋಗಲು ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದವನು, ರಸ್ತೆಯ ಬದಿಯಲ್ಲಿ ನಿಂತ ತಿಮ್ಮಪ್ಪ ತಂದೆ ನಾರಾಯಣ ನಾಯ್ಕ ಇವರಿಗೆ ಡಿಕ್ಕಿ ಹೊಡೆದು ರಸ್ತೆಯ ಮೇಲೆ ಬೀಳಿಸಿ, ಎಡಗಾಲಿಗೆ ರಕ್ತಗಾಯ ಹಾಗೂ ಮೈಕೈಗೆ ತೆರಚಿದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಗೋವಿಂದ ತಂದೆ ತಿಮ್ಮಪ್ಪ ನಾಯ್ಕ, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನೀಲಗೇರಿ, ಆಡುಕುಳ, ತಾ: ಹೊನ್ನಾವರ ರವರು ದಿನಾಂಕ: 16-05-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 28/2021, ಕಲಂ: 269, 270 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಪರ್ವೇಜ್ ಅಜೀಮುಲ್ಲಾ ಖಾಜಿ, ಪ್ರಾಯ-20 ವರ್ಷ, ವೃತ್ತಿ-ವ್ಯಾಪಾರ, ಸಾ|| ರಾಜೀವ ನಗರ, ತಾ: ಶಿರಸಿ, 2]. ಅಜೀಮುಲ್ಲಾ ಮೆಹಬೂಬ್ ಅಲಿ ಖಾಜಿ, ಪ್ರಾಯ-45 ವರ್ಷ, ವೃತ್ತಿ-ವ್ಯಾಪಾರ, ಸಾ|| ರಾಜೀವ ನಗರ, ತಾ: ಶಿರಸಿ. ಮಾನ್ಯ ಕರ್ನಾಟಕ ಸರ್ಕಾರ ಬೆಂಗಳೂರು ಮತ್ತು ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ಅಧೀಕೃತ ಆದೇಶ ಹಾಗೂ ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ಆದೇಶದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಾಂಕ್ರಾಮಿಕ ರೋಗವಾದ ಕೋವಿಡ್-19 (ಕೊರೋನಾ ವೈರಾಣು) ಖಾಯಿಲೆ ಹರಡದಂತೆ ತಡೆಗಟ್ಟುವ ಸಲುವಾಗಿ ಕೊರೋನಾ ಕರ್ಫ್ಯೂ (ಲಾಕಡೌನ್) ಜಾರಿ ಮಾಡಿದ್ದರೂ ಸಹ ನಮೂದಿತ ಆರೋಪಿತರು ದಿನಾಂಕ: 16-05-2021 ರಂದು 13-00 ಗಂಟೆಯ ಸುಮಾರಿಗೆ ಶಿರಸಿ ಶಹರದ ಖಾಜಿ ಗಲ್ಲಿಯಲ್ಲಿರುವ ಆರೋಪಿ 2 ನೇಯವನ ಮಾಲೀಕತ್ವದಲ್ಲಿರುವ ‘ಬಿಸ್ಮಿಲ್ಲಾ ಮಟನ್ ಶಾಪ್’ ಅಂಗಡಿಯನ್ನು ಆರೋಪಿ 1 ನೇಯವನು ತೆರೆದು ಮಟನ್ ವ್ಯಾಪಾರ ವಹಿವಾಟು ಮಾಡಿ ಕೊರೋನಾ ಸಾಂಕ್ರಾಮಿಕ ರೋಗದ ಕರ್ಫ್ಯೂ ಜಾರಿಯ ಸರ್ಕಾರದ ಆದೇಶದ ಉಲ್ಲಂಘನೆ ಮಾಡಿ ಕೋವಿಡ್-19 ವೈರಾಣು ಹರಡುವಿಕೆ ಉದ್ದೇಶದಿಂದ ನಿರ್ಲಕ್ಷ್ಯತೆ ಹಾಗೂ ಸಾರ್ವಜನಿಕರ ದೇಹದ ಸುರಕ್ಷತೆಗೆ ಅಪಾಯವುಂಟು ಮಾಡುವಂತಹ ನಿರ್ಲಕ್ಷ್ಯದ ಕೃತ್ಯ ಮಾಡಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಕುಮಾರ, ಪಿ.ಎಸ್.ಐ, ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 16-05-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 48/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963, ಕಲಂ: 143, 269, 270 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗೌರೀಶ ತಂದೆ ನಾರಾಯಣ ನಾಯ್ಕ, ಪ್ರಾಯ-56 ವರ್ಷ, ವೃತ್ತಿ-ವ್ಯಾಪಾರ, ಸಾ|| 1 ನೇ ಕ್ರಾಸ್, ವಿವೇಕಾನಂದ ನಗರ, ತಾ: ಶಿರಸಿ ಹಾಗೂ ಇತರರು. ಈ ನಮೂದಿತ ಆರೋಪಿತರು ದಿನಾಂಕ: 16-05-2021 ರಂದು 19-50 ಗಂಟೆಯ ಸುಮಾರಿಗೆ ಲಂಡಕನಹಳ್ಳಿ ಗ್ರಾಮದ ಜವಳಗುಂಡಿಯ ಬೊಂಬು ಪ್ಲಾಂಟೇಶನ್ ದಲ್ಲಿ ಅಕ್ರಮ ಕೂಟವನ್ನು ಮಾಡಿಕೊಂಡು ಜನರ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ರೋಗದ ಸೋಂಕನ್ನು ಹರಡಿಸುವ ಉದ್ದೇಶದಿಂದ ರೋಗ ನಿರೋಧಕ ನಿರ್ಬಂಧ ನಿಯಮವನ್ನು ಉಲ್ಲಂಘಿಸಿ ಮತ್ತು ಕೊರೋನಾ ರೋಗದ ಸೋಂಕು ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯತನದಿಂದ ಜನರ ಪ್ರಾಣ ಮತ್ತು ದೈಹಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕೃತ್ಯವನ್ನು ಮಾಡಿದ್ದರಿಂದ ಹಾಗೂ ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲಿನ ಅದೃಷ್ಟದ ಆಟವಾದ ಅಂದರ್-ಬಾಹರ್ ಇಸ್ಪೀಟ್ ಜೂಗಾರಾಟ ಆಡುತ್ತಿದ್ದಾಗ, ಅಂದರ್-ಬಾಹರ್ ಇಸ್ಪೀಟ್ ಜೂಗಾರಾಟದ ಸಲಕರಣೆಗಳಾದ 52 ಇಸ್ಪೀಟ್ ಎಲೆಗಳು, ಒಟ್ಟೂ ನಗದು ಹಣ 49,800/- ರೂಪಾಯಿ ಮತ್ತು ಮಂಡಕ್ಕೆ ಹಾಸಿದ ಚಾದರ-03, ಉರಿದ ಮೇಣದ ಬತ್ತಿಗಳು-04, ತಾಡಪತ್ರಿ-01. ಇವುಗಳು ಸ್ಥಳದಲ್ಲಿಯೇ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಈರಯ್ಯ ಡಿ. ಎನ್, ಪಿ.ಎಸ್.ಐ (ಕಾ&ಸು), ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 16-05-2021 ರಂದು 22-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 48/2021, ಕಲಂ: 269, 271 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಕಬುಲಸಾಬ್ ನನ್ನೆಸಾಬ್ ಹಟೇಲಿ, ಪ್ರಾಯ-53 ವರ್ಷ, ಸಾ|| ಟಿ.ಆರ್.ಸಿ ಕ್ರಾಸ್, ಬರ್ಚಿ ರಸ್ತೆ, ದಾಂಡೇಲಿ. ದೇಶಾದ್ಯಂತ ಕೋವಿಡ್-19 ಕೊರೋನಾ ವೈರಸ್ ಸಾಂಕ್ರಾಮಿಕ ಖಾಯಿಲೆ ಹರಡುತ್ತಿದ್ದು, ಕೋವಿಡ್-19 ಖಾಯಿಲೆಯ 2 ನೇ ಅಲೆ ಹೆಚ್ಚಾಗಿರುವುದರಿಂದಾಗಿ ಖಾಯಿಲೆ ನಿಯಂತ್ರಣಕ್ಕಾಗಿ ಮಾನ್ಯ ಸರಕಾರ ಹಾಗೂ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ದಿನಾಂಕ: 16-05-2021 ರಿಂದ 24-05-2021 ರವರೆಗೆ ಹೆಚ್ಚುವರಿ ಕ್ರಮ ಕೈಗೊಳ್ಳಲು ಆದೇಶಿಸಿ ದಾಂಡೇಲಿ ನಗರವನ್ನು ವಿಶೇಷ ಕಂಟೈನಮೆಂಟ್ ಜೋನ್ ಆಗಿ ಘೋಷಿಸಿ, ಅಂಗಡಿಗಳಲ್ಲಿ ವ್ಯಾಪಾರ ವಹಿವಾಟನ್ನು ನಿಷೇಧಿಸಿದ್ದು ಇರುತ್ತದೆ. ಆದರೆ ನಮೂದಿತ ಆರೋಪಿತನು ತಾನು ಅಂಗಡಿಯನ್ನು ತೆರೆದು ವ್ಯಾಪಾರ ಮಾಡಿದರೆ ಅಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ, ಸಾಂಕ್ರಾಮಿಕ ರೋಗ ಒಬ್ಬರಿಂದ ಒಬ್ಬರಿಗೆ ಹರಡಿ ಪ್ರಾಣಕ್ಕೆ ತೊಂದರೆ ಆಗಬಹುದು ಅಂತಾ ಗೊತ್ತಿದ್ದರೂ ಸಹ ದಿನಾಂಕ: 16-05-2021 ರಂದು 17-30 ಗಂಟೆಯಿಂದ 17-40 ಗಂಟೆಯವರೆಗೆ ತನ್ನ ಮಕಬುಲ್ ಪಾನ್ ಶಾಫ್ ಅಂಗಡಿಯನ್ನು ತೆರೆದು ವ್ಯಾಪಾರ ವಹಿವಾಟು ನಡೆಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಯಲ್ಲಪ್ಪ ಎಸ್, ಪಿ.ಎಸ್.ಐ (ಕಾ&ಸು), ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 16-05-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 16-05-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

ಇತ್ತೀಚಿನ ನವೀಕರಣ​ : 17-05-2021 06:10 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080