ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 16-11-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 202/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಚೇತನ ತಂದೆ ದೇವು ಗೌಡ, ಪ್ರಾಯ-31 ವರ್ಷ, ವೃತ್ತಿ-ಪ್ರಿಡ್ಜ್ ರಿಪೇರಿ ಮತ್ತು ಮಾರ್ಕೆಟಿಂಗ್ ಕೆಲಸ, ಸಾ|| ನೆಹರು ನಗರ, ತಾ: ಕುಮಟಾ. ಪಿರ್ಯಾದಿಯವರ ತಮ್ಮನಾದ ಈತನು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಒಬ್ಬಂಟಿಯಾಗಿ ಇರುತ್ತಿದ್ದವನು, ಅಲ್ಲದೇ ಕೆಲಸ ಮುಗಿಸಿ ಮನೆಗೆ ಬಂದಾಗಲು ಸಹ ಯಾರೊಂದಿಗೂ ಮಾತನಾಡದೇ, ತುಂಬಾ ಸರಾಯಿ ಕುಡಿಯುವುದನ್ನು ಕಲಿತಿದ್ದವನು, ದಿನಾಂಕ: 14-11-2021 ರಂದು ಬೆಳಿಗ್ಗೆ 07-30 ಗಂಟೆಗೆ ‘ಬಸ್ ನಿಲ್ದಾಣಕ್ಕೆ ಹೋಗಿ ಬರುತ್ತೇನೆ’ ಅಂತಾ ಹೇಳಿ ಮನೆಯಿಂದ ಹೊರಗೆ ಹೋದವನು, ದಿನಾಂಕ: 16-11-2021 ರಂದು ಈವರೆಗೂ ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದ ತನ್ನ ತಮ್ಮನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಆನಂದಕುಮಾರ ತಂದೆ ದೇವು ಗೌಡ, ಪ್ರಾಯ-35 ವರ್ಷ, ವೃತ್ತಿ-ಮೊಬ್ಯೆಲ್ ಶಾಫ್, ಸಾ|| ನೆಹರು ನಗರ, ತಾ: ಕುಮಟಾ ರವರು ದಿನಾಂಕ: 16-11-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 136/2021, ಕಲಂ: 447, 323, 504, 506(2) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ನಾರಾಯಣ ಮಂಜು ಗೌಡ, ಪ್ರಾಯ-60 ವರ್ಷ, ವೃತ್ತಿ-ರೈತಾಬಿ ಕೆಲಸ, 2]. ಅಣ್ಣಪ್ಪ ನಾರಾಯಣ ಗೌಡ, ಪ್ರಾಯ-28 ವರ್ಷ, ವೃತ್ತಿ-ರೈತಾಬಿ ಕೆಲಸ, 3]. ಸವಿತಾ ನಾರಾಯಣ ಗೌಡ, ಪ್ರಾಯ-25 ವರ್ಷ, ವೃತ್ತಿ-ಮನೆವಾರ್ತೆ, 4]. ಮಾದೇವಿ ನಾರಾಯಣ ಗೌಡ, ಪ್ರಾಯ-50 ವರ್ಷ, ವೃತ್ತಿ-ಮನೆವಾರ್ತೆ, ಸಾ|| (ಎಲ್ಲರೂ) ಗುಣವಂತೆ, ಶಿವನಗರ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 15-11-2021 ರಂದು 17-00 ಗಂಟೆಯ ಸುಮಾರಿಗೆ ಸಂಗನಮತ ಮಾಡಿಕೊಂಡು ಬಂದು ಪಿರ್ಯಾದಿಯ ತಂದೆಯವರಿಗೆ ಸಂಬಂಧಿಸಿದ ಗುಣವಂತೆ ಗ್ರಾಮದ ಸರ್ವೇ ನಂ: 213/1 ಅ ಕ್ಷೇತ್ರ 0-6-0 ನೇದರ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ, ಜಮೀನಿನ ದಕ್ಷಿಣ ದಿಕ್ಕಿಗೆ ಇರುವ 10 ಮಾರು ಉದ್ದದ ಪಾಗಾರನ್ನು ಕೀಳುತ್ತಿರುವಾಗ ಪಿರ್ಯಾದಿಯ ತಂದೆಯವರಾದ ಮಂಜು ನಾಗಪ್ಪ ಗೌಡ ಇವರು ಆರೋಪಿತರಿಗೆ ಉದ್ದೇಶಿಸಿ ‘ಪಾಗಾರ ಕೀಳಬೇಡಿ. ತಮ್ಮ ಹಕ್ಕಿನದು’ ಅಂತಾ ಹೇಳಿದಕ್ಕೆ, ಆರೋಪಿತರೆಲ್ಲರೂ ಪಿರ್ಯಾದಿಯ ತಂದೆಯವರನ್ನು ಹಿಡಿದು ಕೈಯಿಂದ ಹೊಡೆಯುತ್ತಾ ‘ಬೋಳಿ ಮಗನೇ, ನಿನ್ನನ್ನು ಇಲ್ಲಿರುವ ಹೊಂಡದಲ್ಲಿ ಹಾಕಿ ಕೊಂದು ಹೆಣ ಮುಚ್ಚುತ್ತೇವೆ’ ಅಂತಾ ಎಳೆದುಕೊಂಡು ಹೋಗುತ್ತಿರುವಾಗ ಅವರು ಕೂಗ ತೊಡಗಿದ್ದನ್ನು ಕೇಳಿಸಿಕೊಂಡ ಜಮೀನಿನ ಸಮೀಪ ವಾಸವಾಗಿದ್ದ ಗೊಯ್ದು ತಂದೆ ಮಂಜು ಗೌಡ ಮತ್ತು ರಾಘವೇಂದ್ರ ತಂದೆ ಮಂಜು ಗೌಡ ಇವರು ಬಂದು ಆರೋಪಿತರಿಂದ ತಪ್ಪಿಸಿದಾಗ, ಆರೋಪಿತರ ಪೈಕಿ ಆರೋಪಿ 3 ಮತ್ತು 4 ನೇಯವರು ಕೈಯಲ್ಲಿದ್ದ ಕತ್ತಿಯನ್ನು ಪಿರ್ಯಾದಿ ಹಾಗೂ ಪಿರ್ಯಾದಿಯ ತಂದೆ ಮಂಜು ಗೌಡ ಇವರಿಗೆ ತೋರಿಸಿ, ಬಿಡಿಸಲು ಬಂದವರಿಗೆ ‘ನೀವು ತಪ್ಪಿಸಿದ್ದಿರಿ. ಇಲ್ಲವಾದರೆ ಇವರನ್ನು ಇದೇ ಕತ್ತಿಯಿಂದ ಕೋಳಿ ಕೊಚ್ಚಿದ ಹಾಗೆ ಕೊಚ್ಚಿ ಹಾಕುತ್ತಿದ್ದೆ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ಮಂಜು ಗೌಡ, ಪ್ರಾಯ-30 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಗುಣವಂತೆ, ವಟಾರ, ತಾ: ಹೊನ್ನಾವರ ರವರು ದಿನಾಂಕ: 16-11-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 137/2021, ಕಲಂ: ಯುವತಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಯುವತಿ  ಕುಮಾರಿ: ಸ್ವಾತಿ ತಂದೆ ಅಣ್ಣಪ್ಪ ಗೌಡ, ಪ್ರಾಯ-19 ವರ್ಷ, 8 ತಿಂಗಳು, ವೃತ್ತಿ-ವಿದ್ಯಾರ್ಥಿ ಸಾ|| ಗುಣವಂತೆ, ಮುಗುಳಿ, ತಾ: ಹೊನ್ನಾವರ. ಪಿರ್ಯಾದಿಯ ಮಗಳಾದ ಇವಳು ಹೊನ್ನಾವರದಲ್ಲಿ ಪಿ.ಯು.ಸಿ 2 ನೇ ವರ್ಷದ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡಿ ಮನೆಯಲ್ಲಿದ್ದವಳು, ದಿನಾಂಕ 15-11-2021 ರಂದು 22-00 ಗಂಟೆಗೆ ಊಟ ಮಾಡಿ ಮನೆಯಲ್ಲಿ ತನ್ನ ತಂಗಿಯೊಂದಿಗೆ ಮಲಗಿದ್ದವಳು, ದಿನಾಂಕ: 16-11-2021 ರಂದು ಬೆಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ತಾನು ಎಲ್ಲಿಗೆ ಹೋಗುತ್ತೇನೆ ಅಂತಾ ಯಾರಿಗೂ ಹೇಳದೇ ಮನೆಯಿಂದ ಎಲ್ಲಿಗೋ ಹೋದವಳು, ಸಂಬಂಧಿಕರ ಮನೆಗೂ ಹೋಗದೇ, ಈವರೆಗೂ ಮನೆಗೆ ಬಾರದೇ ಕಾಣೆಯಾಗಿದ್ದು, ಸದ್ರಿ ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಅಣ್ಣಪ್ಪ ತಂದೆ ನಾರಾಯಣ ಗೌಡ, ಪ್ರಾಯ-40 ವರ್ಷ, ವೃತ್ತಿ-ಬೊಲೆರೋ ಚಾಲಕ, ಸಾ|| ಗುಣವಂತೆ, ಮುಗುಳಿ, ತಾ: ಹೊನ್ನಾವರ ರವರು ದಿನಾಂಕ: 16-11-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 99/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹನುಮಂತ ತಂದೆ ಭೈರಾ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ಗದ್ದೆಬೈಲ್ ಮನೆ, ಜನತಾ ಕಾಲೋನಿ, ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ (ನೋಂದಣಿ ಸಂಖ್ಯೆ ಇಲ್ಲದ ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನೇದರ ಚಾಲಕ). ದಿನಾಂಕ: 12-11-2021 ರಂದು ಬೆಳಿಗ್ಗೆ ಪಿರ್ಯಾದಿಯ ಮಗನಾದ ನಾಗರಾಜ ತಂದೆ ಧರ್ಮ ನಾಯ್ಕ, ಈತನು ಐ.ಟಿ.ಐ ಕಾಲೇಜ್, ಭಟ್ಕಳಕ್ಕೆ ಹೋಗಲು ತನ್ನ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-4119 ನೇದನ್ನು ಚಲಾಯಿಸಿಕೊಂಡು ಮನೆಯಿಂದ ಬಸ್ತಿಮಕ್ಕಿ ಕಡೆಗೆ ಹೋಗುತ್ತಿದ್ದಾಗ, ಅವನ ಮುಂದೆ ಆರೋಪಿ ಚಾಲಕನು ತನ್ನ ನೋಂದಣಿ ಸಂಖ್ಯೆ ಇಲ್ಲದ ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನೇದನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಸ್ತಿಮಕ್ಕಿ ಕಡೆಗೆ ಹೋಗುತ್ತಿದ್ದವನು, ಬೆಳಿಗ್ಗೆ 08-45 ಗಂಟೆಗೆ ಮುರ್ಡೇಶ್ವರದ ನ್ಯಾಷನಲ್ ಕಾಲೋನಿಯ 10 ನೇ ಕ್ರಾಸ್ ಹತ್ತಿರ ಹಿಂದಿನಿಂದ ಬರುತ್ತಿದ್ದ ವಾಹನಗಳಿಗೆ ಯಾವುದೇ ಇಂಡಿಕೇಟರ್ ಸಿಗ್ನಲ್ ಹಾಕದೇ ಅಜಾಗರೂಕತೆಯಿಂದ ಮೋಟಾರ್ ಸೈಕಲನ್ನು ಎಡದಿಂದ ಬಲಕ್ಕೆ ತಿರುಗಿಸಿ ನಾಗರಾಜ ತಂದೆ ಧರ್ಮ ನಾಯ್ಕ ಈತನ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಅಪಘಾತದಿಂದ ಇಬ್ಬರು ಮೋಟಾರ್ ಸೈಕಲ್ ಸವಾರರು ರಸ್ತೆಯ ಮೇಲೆ ಬಿದಿದ್ದು, ಅಪಘಾತದಿಂದ ನಾಗರಾಜ ತಂದೆ ಧರ್ಮ ನಾಯ್ಕ, ಈತನಿಗೆ ತಲೆಗೆ ಹಾಗೂ ಬಲಬದಿಯ ಕೆನ್ನೆಗೆ ಗಂಭೀರವಾಗಿ ಗಾಯಗಳಾಗಿದ್ದು, ಗಾಯಾಳುವನ್ನು ಮುರ್ಡೇಶ್ವರದ ಆರ್.ಎನ್.ಎಸ್ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಿ, ಹೆಚ್ಚಿನ ಉಪಚಾರಕ್ಕೆ ಕೆ.ಎಮ್.ಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ ಬಗ್ಗೆ ಪಿರ್ಯಾದಿ ಶ್ರೀ ಧರ್ಮ ತಂದೆ ಕುಪ್ಪ ನಾಯ್ಕ, ಪ್ರಾಯ-44 ವರ್ಷ, ವೃತ್ತಿ-ಚಾಲಕ, ಸಾ|| ಬಲೀಂದ್ರನ ಮನೆ, ಹೀರೇದೊಮ್ಮಿ, ಮಾವಳ್ಳಿ-1 ಗ್ರಾಮ, ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 16-11-2021 ರಂದು 18-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 135/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ವಾಸುದೇವ ತಂದೆ ಮಂಜಯ್ಯಾ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಸೈಕಲ್ ಅಂಗಡಿ, ಸಾ|| ಪುರವರ್ಗ, ತಾ: ಭಟ್ಕಳ. ಈತನು ದಿನಾಂಕ: 16-11-2021 ರಂದು 15-30 ಗಂಟೆಯ ಸಮಯಕ್ಕೆ ಮುಂಡಳ್ಳಿಯ ಮಾರುತಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ 01/- ರೂಪಾಯಿಗೆ 70/- ರೂಪಾಯಿ ಕೊಡುವ ಶರತ್ತಿನ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ ಓ.ಸಿ ಜುಗಾರಾಟ ನಡೆಸುತ್ತಿದ್ದಾಗ ಓ.ಸಿ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 850/- ರೂಪಾಯಿಯೊಂದಿಗೆ ಆರೋಪಿತನು ಸ್ಥಳದಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ (ಕಾ&ಸು), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 16-11-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 201/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಭಿಜೀತ ಕೆ. ತಂದೆ ಬಾಬುರಾಜನ್ ಕೆ, ಪ್ರಾಯ-26 ವರ್ಷ, ವೃತ್ತಿ-ಚಾಲಕ, ಸಾ|| ಕ್ಯಾಲಿಕಟ್, ಕೇರಳಾ (ಲಾರಿ ನಂ: ಕೆ.ಎಲ್-58/ಜೆ-9865 ನೇದರ ಚಾಲಕ). ಈತನು ದಿನಾಂಕ: 14-11-2021 ರಂದು 23-00 ಗಂಟೆಗೆ ಯಲ್ಲಾಪುರ ತಾಲೂಕಿನ ಕೊಡ್ಲಗದ್ದೆ ಊರಿನಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ಬಾಬ್ತು ತನ್ನ ಲಾರಿ ನಂ: ಕೆ.ಎಲ್-58/ಜೆ-9865 ನೇದನ್ನು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತನ್ನ ಎದುರಿನಿಂದ ಅಂದರೆ ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ವೈ-4230 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಾದ ಶ್ರೀ ರಾಮಕೃಷ್ಣ ತಂದೆ ಗಣಪತಿ ಸಿದ್ದಿ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸೇವಾಕಾರ, ಹೆಗ್ಗಾರ, ತಾ: ಅಂಕೋಲಾ ಇವರಿಗೆ ತಲೆಗೆ, ಮುಖಕ್ಕೆ ಮತ್ತು ಕೈಗೆ ಭಾರೀ ಸ್ವರೂಪದ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಿಯಾಸ್ ತಂದೆ ಕುನ್ನಿ ಅಹಮೀದ್, ಪ್ರಾಯ-34 ವರ್ಷ, ವೃತ್ತಿ-ಟ್ರಕ್ ಕ್ಲೀನರ್, ಸಾ|| ವಿಟಿಲ್ ಹೌಸ್, ಉನ್ನಿಯಲ್ ಪರಬು, ಪೆರೆವಲ್ಲೂರ, ಮಲಪುರಮ್, ಕೇರಳಾ ರವರು ದಿನಾಂಕ: 16-11-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 113/2021, ಕಲಂ: 3, 25 ಭಾರತ ಆಯುಧ ಅಧಿನಿಯಮ-1959 ನೇದ್ದರ ವಿವರ...... ನಮೂದಿತ ಆರೋಪಿತರು 1]. ರವೀಂದ್ರ ಜಟ್ಟಿ ನಾಯ್ಕ, ಅಂದಾಜು ಪ್ರಾಯ-21 ವರ್ಷ, ಸಾ|| ಕೆರೆಗಣಿ, ಹೆಬ್ರೆ ಗ್ರಾಮ, ಪೋ: ರಾಗಿಹೊಸಳ್ಳಿ, ತಾ: ಶಿರಸಿ, 2]. ನಾಗಪ್ಪ ಹೊಸಬಯ್ಯ ನಾಯ್ಕ, ಅಂದಾಜು ಪ್ರಾಯ-60 ವರ್ಷ, ಸಾ|| ಕೆರೆಗಣಿ, ಹೆಬ್ರೆ ಗ್ರಾಮ, ಪೋ: ರಾಗಿಹೊಸಳ್ಳಿ, ತಾ: ಶಿರಸಿ, 3]. ಗಣೇಶ ನಾಗಪ್ಪ ನಾಯ್ಕ, ಅಂದಾಜು ಪ್ರಾಯ-40 ವರ್ಷ, ಸಾ|| ಕೆರೆಗಣಿ, ಹೆಬ್ರೆ ಗ್ರಾಮ, ಪೋ: ರಾಗಿಹೊಸಳ್ಳಿ, ತಾ: ಶಿರಸಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ಮತ್ತು 2 ನೇಯವರು ಆರೋಪಿ 3 ನೇಯವನ ಮನೆಯಲ್ಲಿದ್ದ ಅನಧೀಕೃತವಾದ ಒಂಟಿನಳಿಕೆಯ ನಾಡ ಬಂದೂಕನ್ನು ತೆಗೆದುಕೊಂಡು ದಿನಾಂಕ: 23-09-2021 ರಂದು ರಾತ್ರಿ 09-00 ಗಂಟೆಗೆ ಶಿರಸಿ ತಾಲೂಕಿನ ಜಾನ್ಮನೆ ವಲಯ ಹೆಬ್ರೆ ಗ್ರಾಮದ ಅರಣ್ಯ ಸರ್ವೇ ನಂ: 97 ರಲ್ಲಿ ಹೋಗಿ ಕಾಡು ಕುರಿಯನ್ನು ಶಿಕಾರಿ ಮಾಡಿ, ನಂತರ ಅದರ ಮಾಂಸವನ್ನು ಎಲ್ಲರೂ ಸೇರಿ ಆರೋಪಿ 3 ನೇಯವನ ಮನೆಯಲ್ಲಿ ಅಡಿಗೆ ಮಾಡಿ ತಿಂದು, ಕುರಿಯ ಅವಶೇಷಗಳನ್ನು ಕಾಡಿನಲ್ಲಿ ಎಸೆದು, ಅನಂತರ ಕೃತ್ಯಕ್ಕೆ ಉಪಯೋಗಿಸಿದ ಒಂಟಿ ನಳಿಕೆಯ ಬಂದೂಕನ್ನು ಆರೋಪಿ 3 ನೇಯವನ ಮನೆಯಲ್ಲಿಯೇ ಬಚ್ಚಿಟ್ಟಿದ್ದನ್ನು ಜಪ್ತ ಮಾಡಿಕೊಂಡ ಬಗ್ಗೆ ಪಿರ್ಯಾದಿ ಶ್ರೀಮತಿ ಪವಿತ್ರ ಯು. ಜೆ, ಪ್ರಾಯ-36 ವರ್ಷ, ವೃತ್ತಿ-ವಲಯ ಅರಣ್ಯಾಧಿಕಾರಿ, ಜಾನ್ಮನೆ ವಲಯ, ಜಾನ್ಮನೆ, ತಾ: ಶಿರಸಿ ರವರು ದಿನಾಂಕ: 16-11-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 114/2021, ಕಲಂ: 3, 25, 30 ಭಾರತ ಆಯುಧ ಅಧಿನಿಯಮ-1959 ನೇದ್ದರ ವಿವರ...... ನಮೂದಿತ ಆರೋಪಿತ ಪ್ರದೀಪ ತಂದೆ ಮೋಹನ ಗೌಡ ಪ್ರಾಯ-32 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಐತಾಳ ಮನೆ, ಮಜರೆ, ಕೆಳಗಿನಕೇರಿ ಗ್ರಾಮ, ಪೋ: ಮುಂಡಗನ ಮನೆ, ತಾ: ಶಿರಸಿ. ಈತನು ತನ್ನ ತಂದೆಯ ಹೆಸರಿನಲ್ಲಿರುವ ಲೈಸನ್ಸ್ ಗೆ ಸಂಬಂಧಿಸಿದ ಒಚಿಟಿ ನಳಿಕೆಯ ನಾಡ ಬಂದೂಕನ್ನು ತೆಗೆದುಕೊಂಡು ದಿನಾಂಕ: 26-09-2021 ರಂದು 10-30 ಗಂಟೆಗೆ ಶಿರಸಿ ತಾಲೂಕಿನ ಕೆಳಗಿನಕೇರಿ ಗ್ರಾಮದ ಮಾಲ್ಕಿ ಸರ್ವೇ ನಂ: 183 ಹಾಗೂ 179 ರಲ್ಲಿ ವನ್ಯಪ್ರಾಣಿಯಾದ 02 ಕೆಂದಳಿಲು [Indian Giant squirrel “Ratufa indica” (Shedule-II, Part-II)] ಗಳನ್ನು ಗುಂಡು ಹೊಡೆದು ಸಾಯಿಸಿ, ಸದ್ರಿ ಪ್ರಾಣಿಯ ಮಾಂಸವನ್ನು ಅದೇ ದಿನ ಸಂಜೆ ಅಡುಗೆ ಮನೆಯಲ್ಲಿ ಬೇಯಿಸುತ್ತಿದ್ದಾಗ ಸಮಯ 18-15 ಗಂಟೆಗೆ ದಾಳಿ ಮಾಡಿ ಜಪ್ತ ಮಾಡಿಕೊಂಡ ಬಗ್ಗೆ ಪಿರ್ಯಾದಿ ಶ್ರೀಮತಿ ಪವಿತ್ರ ಯು. ಜೆ, ಪ್ರಾಯ-36 ವರ್ಷ, ವೃತ್ತಿ-ವಲಯ ಅರಣ್ಯಾಧಿಕಾರಿ, ಜಾನ್ಮನೆ ವಲಯ, ಜಾನ್ಮನೆ, ತಾ: ಶಿರಸಿ ರವರು ದಿನಾಂಕ: 16-11-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 16-11-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 32/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಶ್ರೀಕಾಂತ ತಂದೆ ವೆಂಕಟ್ರಮಣ ಭಟ್ಟ, ಪ್ರಾಯ-65 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಅಳವಳ್ಳಿ, ಮೂರೂರು, ತಾ: ಕುಮಟಾ. ಪಿರ್ಯಾದುದಾರರ ತಮ್ಮನಾದ ಈತನು ಅವಿವಾಹಿತನಾಗಿದ್ದು, ವಿಪರೀತ ಸರಾಯಿ ಕುಡಿಯುವ ಚಟವನ್ನು ಕಲಿತಿದ್ದು, ಹಾಗೆಯೇ ಆರೋಗ್ಯ ಸಹ ಸರಿ ಇಲ್ಲದೇ ಅದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡೋ ಅಥವಾ ಇನ್ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ: 16-11-2021 ರಂದು ಬೆಳಿಗ್ಗೆ 06-00 ಗಂಟೆಯಿಂದ 12-00 ಗಂಟೆಯ ನಡುವಿನ ಅವಧಿಯಲ್ಲಿ ಕುಮಟಾ ತಾಲೂಕಿನ ಗುಡಾಳ ಹತ್ತಿರ ರೈಲ್ವೇ ಟ್ರ್ಯಾಕ್ ಮೇಲೆ ಯಾವುದೋ ರೈಲ್ವೇಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು ಇರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶ್ರೀಧರ ತಂದೆ ವೆಂಕಟ್ರಮಣ ಭಟ್ಟ, ಪ್ರಾಯ-80 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಅಳವಳ್ಳಿ, ಮೂರೂರು, ತಾ: ಕುಮಟಾ ರವರು ದಿನಾಂಕ: 16-11-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 34/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಮೋಹಿನಿ ಕೋಂ. ಬಾಬುರಾವ ಜೋಶಿ, ಪ್ರಾಯ-71 ವರ್ಷ, ಸಾ|| ನಾರಾಯಣಗುರು ನಗರ, ಚಿಪಗಿ, ತಾ: ಶಿರಸಿ. ಇವರು ದಿನಾಂಕ: 16-11-2021 ರಂದು 11-55 ಗಂಟೆಯ ಸುಮಾರಿಗೆ ತಾನು ವಾಸವಿದ್ದ ಅಡುಗೆ ಮನೆಯಲ್ಲಿ ತನ್ನ ಸ್ನಾನಕ್ಕಾಗಿ ನೀರು ಕಾಯಿಸಲು ಕರೆಂಟ್ ಬೋರ್ಡಿನಲ್ಲಿ ಕಾಯಿಲ್ ಸ್ವಿಚ್ ಹಾಕಿ ನೀರಿನಲ್ಲಿ ಹಾಕುವ ಭಾಗವನ್ನು ತನ್ನ ಕೈಯಲ್ಲಿ ಹಿಡಿದು ಬಟನ್ ಆನ್ ಮಾಡಿದಾಗ ಆಕಸ್ಮಿಕವಾಗಿ ತನ್ನ ಎರಡು ಕೈಗಳು ಹಾಗೂ ಎದೆಯ ಭಾಗಕ್ಕೆ ವಿದ್ಯುತ್ ತಾಗಿ ಮೃತಪಟ್ಟಿರುವುದಾಗಿ ಕಂಡು ಬರುತ್ತದೆ. ಇದರ ಹೊರತು ಅವಳ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸದಾನಂದ ತಂದೆ ಮಹಾದೇವ ಕುಮಟಾಕರ, ಪ್ರಾಯ-80 ವರ್ಷ, ವೃತ್ತಿ-ನಿವೃತ್ತ ಮೆಡಿಕಲ್ ರೆಪ್ರೆಸೆಂಟೇಟಿವ್, ಸಾ|| ನಾರಾಯಣಗುರು ನಗರ, 3 ನೇ ಕ್ರಾಸ್, ಚಿಪಗಿ, ತಾ: ಶಿರಸಿ ರವರು ದಿನಾಂಕ: 16-11-2021 ರಂದು 12-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

ಇತ್ತೀಚಿನ ನವೀಕರಣ​ : 17-11-2021 04:53 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080