ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 17-04-2021

at 00:00 hrs to 24:00 hrs

 

ಕದ್ರಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 09/2021, ಕಲಂ: 279, 337, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸೈಯದ್ ಮುನೀರ್ ಸೈಯದ್, ಪ್ರಾಯ-35 ವರ್ಷ, ಸಾ|| 144, ದೊಡ್ಡಬೆಟ್ಟಹಳ್ಳಿ, ವೀರಸಾಗರ, ಮೇನ್ ರೋಡ್, ವಿದ್ಯಾಪುರ, ಬಿ.ಬಿ.ಎಮ್.ಪಿ ಕಛೇರಿ, ಬೆಂಗಳೂರು-560097 (ಸ್ಕಾರ್ಪಿಯೋ ಜೀಪ್ ನಂ: ಕೆ.ಎ-06/ಎಮ್-4575 ಚಾಲಕ). ಈತನು ದಿನಾಂಕ: 17-04-2021 ರಂದು 07-05 ಗಂಟೆಗೆ ಕದ್ರಾ ಠಾಣಾ ವ್ಯಾಪ್ತಿಯ ರಾಜ್ಯ ಹೆದ್ದಾರಿ ಸಂಖ್ಯೆ-34 ರ ರಸ್ತೆಯ ಮೇಲೆ ಭೈರಾ ಗ್ರಾಮದ ಹತ್ತಿರ ತನ್ನ ಸ್ಕಾರ್ಪಿಯೋ ಜೀಪ್ ನಂ: ಕೆ.ಎ-06/ಎಮ್-4575 ನೇದನ್ನು ಬೆಂಗಳೂರಿನಿಂದ ಯಲ್ಲಾಪುರಕ್ಕೆ ಕೈಗಾ ಮಾರ್ಗವಾಗಿ ಕದ್ರಾಕ್ಕೆ ಬಂದು ಅಲ್ಲಿಂದ ರಾಜ್ಯ ಹೆದ್ದಾರಿ ಸಂಖ್ಯೆ-34 ರ ಮೇಲಾಗಿ ಜೀಪನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ರಸ್ತೆಯ ಎಡಭಾಗದ ಅಂಚಿಗೆ ಇಳಿಯುತ್ತಿದ್ದ ಜೀಪನ್ನು ನಿಯಂತ್ರಣ ಮಾಡಲಾಗದೆ, ಒಮ್ಮೇಲೆ ಬಲಬದಿಗೆ ತಿರುಗಿಸಿದ್ದರಿಂದ ಜೀಪು ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದಿದ್ದು, ಕಾರಿನ ಮುಂಬದಿ ಕುಳಿತಿದ್ದ ತಾಯವ್ವ ರವರಿಗೆ ಮುಂದಿನ ಗ್ಲಾಸ್ ಒಡೆದು ಅದರಿಂದ ಹೊರಗೆ ರಸ್ತೆಯ ಮೇಲೆ ಬಿದ್ದಿದ್ದರಿಂದ ತಲೆಗೆ ತೀವೃತರವಾದ ಮಾರಣಾಂತಿಕ ಗಾಯವಾಗಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅಲ್ಲದೇ ವಾಹನದಲ್ಲಿದ್ದ ಶಿವಪುತ್ರಪ್ಪನಿಗೆ ತಲೆಯ ಹಿಂದೆ ತೀವ್ರತರವಾದ ಗಾಯ, ಮಂಜುನಾಥನಿಗೆ ಹಾಗೂ ಪಿರ್ಯಾದಿಗೆ ಅಲ್ಲಲ್ಲಿ ಮೈಕೈಗೆ ಒಳನೋವು, ಮಲ್ಲಪ್ಪನಿಗೆ ಸೊಂಟದ ಹಿಂದೆ ಒಳನೋವು, ಅಮರೇಶನಿಗೆ ತಲೆಯ ಎಡಭಾಗದಲ್ಲಿ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ತಲೆಗೆ ತೀವ್ರತರವಾದ ಗಾಯನೋವು ಪಡಿಸಿಕೊಂಡು ಮೃತಪಟ್ಟಿದ್ದಲ್ಲದೇ, ವಾಹನವನ್ನು ಪೂರ್ತಿಯಾಗಿ ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಬಸವರಾಜ ತಂದೆ ಶರಣಪ್ಪ, ಪ್ರಾಯ-54 ವರ್ಷ, ವೃತ್ತಿ-ಗಾರೆ ಕೆಲಸ, ಸಾ|| 1 ನೇ ಬ್ಲಾಕ್, ವಿದ್ಯಾರಣ್ಯಪುರ, ಬೆಂಗಳೂರು ರವರು ದಿನಾಂಕ: 17-04-2021 ರಂದು 07-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 93/2021, ಕಲಂ: 323, 341, 448, 447, 427, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರವೀಣ ತಂದೆ ಕಮಲಾಕರ ನಾಯ್ಕ, ಸಾ|| ಸಂತೆಗದ್ದೆ, ನಾಗೂರ, ತಾ: ಕುಮಟಾ, 2]. ಶ್ರೀಮತಿ ಯಮುನಾ ಗಂಡ ಕಮಲಾಕರ ನಾಯ್ಕ, ಸಾ|| ಸಂತೆಗದ್ದೆ, ನಾಗೂರ, ತಾ: ಕುಮಟಾ, 3]. ಪ್ರೇಮಾ ಗಂಡ ವೆಂಕಟೇಶ ನಾಯ್ಕ, ಸಾ|| ಸಂತೆಗದ್ದೆ, ನಾಗೂರ, ತಾ: ಕುಮಟಾ, 4]. ಶ್ರೀಮತಿ ಇಂದಿರಾ ಗಂಡ ಶೇಷಗೇರಿ ನಾಯ್ಕ, ಸಾ|| ಮಿರ್ಜಾನ, ತಾ: ಕುಮಟಾ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ಮತ್ತು 2 ನೇಯವರಿಗೆ ಹಾಗೂ ಪಿರ್ಯಾದಿಯವರಿಗೂ ಈ ಹಿಂದಿನಿಂದಲೂ ಜಾಗದ ವಿಷಯದಲ್ಲಿ ತಂಟೆ ತಕರಾರು ಇದ್ದು, ದಿನಾಂಕ: 17-04-2021 ರಂದು 16-30 ಗಂಟೆಗೆ ಆರೋಪಿತರು ಪಿರ್ಯಾದಿಯವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಆರೋಪಿ 1 ನೇಯವನು ಪಿರ್ಯಾದಿಗೆ ಉದ್ದೆಶಿಸಿ ‘ಬೋಳಿ ಮಗನೆ, ಸೂಳೆ ಮಗನೆ’ ಅಂತ ಅವಾಚ್ಯ ಶಬ್ದಗಳಿಂದ ಬೈಯ್ದು, ಪಿರ್ಯಾದಿಗೆ ಅಡ್ಡಗಟ್ಟಿ ತಡೆದು, ಕೈಯಿಂದ ಪಿರ್ಯಾದಿಯವರ ಬೆನ್ನಿನ ಮೇಲೆ ಹೊಡೆದು ದೂಡಿ ಹಾಕಿದ್ದಲ್ಲದೇ, ಆರೋಪಿ 1 ನೇಯವನು ಪಿರ್ಯಾದಿಯವರ ಮನೆ ಒಳಗೆ ಅಕ್ರಮ ಪ್ರವೇಶ ಮಾಡಿ, ಕಟ್ಟಿಗೆಯ ಬಡಿಗೆಯಿಂದ ಪಿರ್ಯಾದಿಯ ಮನೆಯ ಕಿಟಕಿ ಗ್ಲಾಸ್ ಒಡೆದು ಹಾಕಿ ಲುಕ್ಸಾನ್ ಪಡೆಸಿ. ಆರೋಪಿ 2 ರಿಂದ 4 ನೇಯವರು ಸಹ ಪಿರ್ಯಾದಿಯವರ ತೋಟಕ್ಕೆ ಹಾಕಿದ ನೀರಿನ ಜಟ್ ಪೈಪ್ ಕಿತ್ತು ಹಾಕಿ, ಗ್ಲಾಸ್ ಮತ್ತು ಪೈಪ್ ಕಿತ್ತು ಹಾಕಿದ್ದರಿಂದ ಪಿರ್ಯಾದಿಯವರಿಗೆ ಸುಮಾರು 6,000/- ರೂಪಾಯಿಯಷ್ಟು ಲುಕ್ಸಾನ್ ಪಡಿಸಿ, ಆರೋಪಿತರೆಲ್ಲರೂ ಸೇರಿ ಪಿರ್ಯಾದಿ ಮತ್ತು ಪಿರ್ಯಾದಿಯ ತಾಯಿಯವರಿಗೆ ಉದ್ದೇಶಿಸಿ ‘ಇನ್ನೊಂದು ದಿನ ಸಿಕ್ಕಾಗ ಕೊಲೆ ಮಾಡಿ ನಾಪತ್ತೆ ಮಾಡುತ್ತೇವೆ’ ಅಂತಾ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಮಾರುತಿ ತಂದೆ ಅರುಣ ಮಡಿವಾಳ, ಪ್ರಾಯ-30 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಸಂತೆಗದ್ದೆ, ನಾಗೂರ. ತಾ: ಕುಮಟಾ ರವರು ದಿನಾಂಕ: 17-04-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 40/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸತ್ಯನಾರಾಯಣ ತಂದೆ ಸಂಜೀವ ಶೆಟ್ಟಿ, ಪ್ರಾಯ-50 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಜಕ್ಕನಕಟ್ಟೆ, ಹೊಸೂರು, ತಾ: ಕುಂದಾಪುರ ಜಿ: ಉಡುಪಿ (ಮಾರುತಿ ಬಲೆನೋ ಕಾರ್ ನಂ: ಎಮ್.ಎಚ್-02/ಎ.ಪಿ-5293 ನೇದರ ಚಾಲಕ). ಈತನು ದಿನಾಂಕ: 17-04-2021 ರಂದು ಬೆಳಿಗ್ಗೆ 11-50 ಗಂಟೆಗೆ ತಾನು ಚಲಾಯಿಸುತ್ತಿದ್ದ ಮಾರುತಿ ಬಲೆನೋ ಕಾರ್ ನಂ: ಎಮ್.ಎಚ್-02/ಎ.ಪಿ-5293 ನೇದನ್ನು ಮಂಕಿ ಕಡೆಯಿಂದ ಭಟ್ಕಳ ಕಡೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ಮುರ್ಡೇಶ್ವರದ ಕೆ.ಇ.ಬಿ ಗ್ರಿಡ್ ಎದುರು ವಾಹನ ನಿಯಂತ್ರಿಸಲು ಸಾಧ್ಯವಾಗದೇ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಪಿರ್ಯಾದಿಯ ಜೊತೆಯಲ್ಲಿದ್ದ ಮುರ್ಡೇಶ್ವರ ರೈಲ್ವೇ ಸ್ಟೇಶನ್ ಆವರಣದಲ್ಲಿ ರೇಲ್ವೆ ಇಲಾಖೆಗೆ ಸಂಬಂಧಿಸಿದ ಕೂಲಿ ಕೆಲಸ ಮಾಡಿಕೊಂಡಿದ್ದ ಪಾದಚಾರಿ ಸಯ್ಯದ್ ಮುಜಿಬ್ ತಂದೆ ಸೈಯ್ಯದ್ ನಜೀರ್, ಪ್ರಾಯ-43 ವರ್ಷ, ಸಾ|| #1 ಯಲಹಂಕ, ಮೇನ್ ರೋಡ್, ದೊಡ್ಡಬೆಟ್ಟಹಳ್ಳಿ, ಬಿ.ಬಿ.ಎಮ್.ಪಿ ಕಛೇರಿ ಹತ್ತಿರ, ವಿದ್ಯಾರಣ್ಯಪುರ, ಉತ್ತರ ಬೆಂಗಳೂರು ಈತನಿಗೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಆತನ ತಲೆಯ ಹಿಂಭಾಗಕ್ಕೆ, ಹಣೆಗೆ ಹಾಗೂ ಎಡಬದಿಯ ಸೊಂಟದ ಭಾಗಕ್ಕೆ ಭಾರೀ ಸ್ವರೂಪದ ರಕ್ತಗಾಯ ಪಡಿಸಿ, ಸ್ಥಳದಲ್ಲಿಯೇ ಮರಣ ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸೈಯದ್ ಇಮ್ರಾನ್ ತಂದೆ ಸೈಯದ್ ಮುನವರ್ ಪಾಷಾ, ಪ್ರಾಯ-39 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| #55, ಎ.ಎಮ್.ಎಸ್ ಲೇಔಟ್, ಚಿಕ್ಕಬೆಟ್ಟಹಳ್ಳಿ, ವಿದ್ಯಾರಣ್ಯಪುರ, ಉತ್ತರ ಬೆಂಗಳೂರು-560097 ರವರು ದಿನಾಂಕ: 17-04-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 55/2021, ಕಲಂ: 8(c), 20(b)(ii)(A) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ ಅಕ್ರಂ ತಂದೆ ಹುಸೇನ್ ಸಯ್ಯದ್, ಪ್ರಾಯ-22 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಗುಳ್ಮೆ, ತಾ: ಭಟ್ಕಳ. ಈತನು ದಿನಾಂಕ: 17-04-2021 ರಂದು ಬೆಳಿಗ್ಗೆ 11-00 ಗಂಟೆಯ ಸಮಯಕ್ಕೆ ಸಾಗರ ರಸ್ತೆಯ ಗುಳ್ಮೆ ಕ್ರಾಸ್ ಹತ್ತಿರ ಅಕ್ರಮವಾಗಿ ಒಟ್ಟೂ ಸುಮಾರು 1,000/- ರೂಪಾಯಿ ಬೆಲೆಬಾಳುವ 84.450 ಗ್ರಾಂ ತೂಕದ (ಪ್ಲಾಸ್ಟಿಕ್ ಕವರ್ ಸಮೇತ) ಒಣಗಿದ ಗಾಂಜಾವನ್ನು ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ತನ್ನ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿರುವಾಗ ನಗದು ಹಣ 200/- ರೂಪಾಯಿಗಳ ಸಮೇತ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ. ವಿ, ಪಿ.ಎಸ್.ಐ (ಕಾ&ಸು), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 17-04-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 56/2021, ಕಲಂ: 4, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಹಾಗೂ ಕಲಂ: 11(1) & (D) PREVENTION OF CRUELTY TO ANIMALS ACT-1960 ಮತ್ತು ಕಲಂ: 192 ಎಮ್.ವಿ ಎಕ್ಟ್ ಸಹಿತ ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹಬೀಬುಲ್ಲಾ ತಂದೆ ಅಹ್ಮದಸಾಬ್, ಪ್ರಾಯ-37 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ತಗ್ಗರಗೋಡ, ಹಮ್ಜಾ ಮಸೀದಿ ಹತ್ತಿರ, ತಾ: ಭಟ್ಕಳ. ಈತನು ದಿನಾಂಕ: 17-04-2021 ರಂದು ಸಾಯಂಕಾಲ 16-30 ಗಂಟೆಯ ಸಮಯಕ್ಕೆ ಆರೇಂಜ್ ಬಣ್ಣದ ಕಪ್ಪು ಬಣ್ಣದ ಬಾನೆಟ್ ಮತ್ತು ಟಾಪ್ ಇರುವ ಅ||ಕಿ|| 3,00,000/- ರೂಪಾಯಿ ಬೆಲೆಯ ಮಾರುತಿ ಬಲೆನೋ ಕಾರ್ ನಂ: ಕೆ.ಎ-03/ಎಮ್.ಎಕ್ಸ್-0656 ನೇದರಲ್ಲಿ ಸುಮಾರು 2,000/- ರೂಪಾಯಿ ಬೆಲೆಯ 1 ಕಪ್ಪು ಬಣ್ಣದ ಕಂದು ಮಿಶ್ರಿತ ಹೋರಿ ಕರುವಿಗೆ ನೀರು, ಹುಲ್ಲು ಕೊಡದೆ ಹಿಂಸಾತ್ಮಕವಾಗಿ ಕಟ್ಟಿ ವಧೆ ಮಾಡುವ ಉದ್ದೇಶದಿಂದ ವಾಹನದಲ್ಲಿ ಸಕ್ಷಮ ಪ್ರಾಧಿಕಾರದಿಂದ ಸಾಗಾಟ ಮಾಡಲು ಪರವಾನಿಗೆ ಪಡೆಯದೇ ಬೆಣಂದೂರು ಕಡೆಯಿಂದ ಭಟ್ಕಳ ಕಡೆಗೆ ಸಾಗಾಟ ಮಾಡುತ್ತಿರುವಾಗ ಬೆಣಂದೂರ ರೋಡಿನಲ್ಲಿರುವ ಕೋಳಿ ಕೂಗುವ ದೇವಸ್ಥಾನದ ಹತ್ತಿರ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ (ಕಾ&ಸು), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 17-04-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 21/2021, ಕಲಂ: 15(ಎ) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ರಾಮಾ ತಂದೆ ಗಣಪಾ ಉಪ್ಪಾರ, ಪ್ರಾಯ-46 ವರ್ಷ, ವೃತ್ತಿ-ವ್ಯಾಪಾರ, ಸಾ|| ಗಿಡಮಾವಿನಕಟ್ಟಾ, ತಾ: ಶಿರಸಿ. ಈತನು ಶಿರಸಿ ಶಹರದ ಖಾಜಿಗಲ್ಲಿಯ ಪರಿವಾರ ಹೊಟೇಲಿನ ಮಾಲೀಕನಿದ್ದು, ದಿನಾಂಕ: 17-04-2021 ರಂದು 15-30 ಗಂಟೆಗೆ ತನ್ನ ಹೊಟೇಲಿನ ಒಳಗೆ ತನ್ನ ಅನ್ಯಾಯದ ಲಾಭಕ್ಕೋಸ್ಕರ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಮದ್ಯವನ್ನು ಮಾರಾಟ ಮಾಡಿ ಮದ್ಯ ಕುಡಿಯಲು ತನ್ನ ಹೊಟೇಲಿನ ಒಳಗೆ ಅನುವು ಮಾಡಿಕೊಟ್ಟಿರುವಾಗ 316/- ರೂಪಾಯಿಯ HAYWARDS CHEERS WHISKYಅಂತಾ ಲೇಬಲ್ ಇದ್ದ 90 ML ನ 09 ಮದ್ಯದ ಪ್ಯಾಕೆಟ್ ಗಳು, HAYWARDS CHEERS WHISKY ಅಂತಾ ಲೇಬಲ್ ಇದ್ದ 90 ML ನ ಖಾಲಿ ಪ್ಯಾಕೆಟ್-01, ಅ||ಕಿ|| 00.00/- ರೂಪಾಯಿ ಹಾಗೂ ಮದ್ಯವನ್ನು ಕುಡಿಯಲು ಬಳಸಿದ ಪ್ಲಾಸ್ಟಿಕ ಗ್ಲಾಸ್-01, ಅ||ಕಿ|| 00.00/- ರೂಪಾಯಿ ಇವುಗಳೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಮದ್ಯವನ್ನು ಮಾರಾಟ ಮಾಡುತ್ತಿರುವಾಗ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಮೋಹಿನಿ ಶೆಟ್ಟಿ, ಡಬ್ಲ್ಯೂ.ಪಿ.ಎಸ್.ಐ (ಕ್ರೈಂ), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 17-04-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 38/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ಸತ್ಯನಾರಾಯಣ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾಮತ ಪಾರ್ಮ, ಹಂಚಿನಕೇರಿ, ಪೋ: ಚಿಪಗಿ, ತಾ: ಶಿರಸಿ. ಈತನು ದಿನಾಂಕ: 17-04-2021 ರಂದು 14-30 ಗಂಟೆಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕೆರೆಕೈ ಬಸ್ ನಿಲ್ದಾಣ ಎದುರುಗಡೆಯ ಸಾರ್ವಜನಿಕ ಸ್ಥಳದಲ್ಲಿ ರಸ್ತೆಯಲ್ಲಿ ಬರ-ಹೋಗುವ ಸಾರ್ವಜನಿಕರಿಗೆ ಕೂಗಿ ಕರೆದು ಓ.ಸಿ ಜೂಗಾರಾಟದ ಅಂಕೆಗಳ ಮೇಲೆ ಹಣ ಪಂಥ ಕಟ್ಟಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ, ಬಂದ ಜನರಿಂದ ಹಣ ಪಡೆದುಕೊಂಡು ಓ.ಸಿ ಚೀಟಿ ಬರೆದುಕೊಡುವಾಗ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ 1). ನಗದು ಹಣ 1,220/- ರೂಪಾಯಿ, 2). ಬಾಲ್ ಪೆನ್-1, 3). ಓ,ಸಿ ಅಂಕೆ-ಸಂಖ್ಯೆ ಬರೆದ ಚೀಟಿ-1, 4). ಚೀಟಿ ಬರೆದುಕೊಡಲು ಕಟ್ ಮಾಡಿ ಇಟ್ಟುಕೊಂಡಿದ್ದ 6 ಸಣ್ಣ-ಸಣ್ಣ ಚೀಟಿಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಂಜಾನಾಯ್ಕ ಎನ್, ಪಿ.ಎಸ್.ಐ (ಕಾ&ಸು), ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 17-04-2021 ರಂದು 16-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 41/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸುಜಯ ತಂದೆ ಶಂಕರ ಪಂಗಡಗಾರ, ಪ್ರಾಯ-30 ವರ್ಷ, ವೃತ್ತಿ-ಚಾಲಕ, ಸಾ|| ಮಂಜಳ್ಳಿ, ತಾ: ಶಿರಸಿ. ಈತನು ದಿನಾಂಕ: 17-04-2021 ರಂದು 11-10 ಗಂಟೆಗೆ ಶಿರಸಿ-ಯಲ್ಲಾಪುರ ರಸ್ತೆಯ ಮರಾಠಿಕೊಪ್ಪ ಕ್ರಾಸ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿದರೆ 01/- ರೂಪಾಯಿಗೆ 80/- ರೂಪಾಯಿ ಹಣವನ್ನು ಕೊಡುತ್ತೇನೆ ಅಂತಾ ಹೇಳಿ ಜನರಿಗೆ ಕರೆದು, ಜನರಿಂದ ಹಣವನ್ನು ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ನಡೆಸಿದಾಗ ಓ.ಸಿ ಮಟಕಾ ಜೂಗಾರಾಟದಿಂದ ಸಂಗ್ರಹವಾದ ನಗದು ಹಣ 1,100/- ರೂಪಾಯಿ ಹಾಗೂ ಓ.ಸಿ ಜೂಗರಾಟಕ್ಕೆ ಬಳಸಿದ ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ, ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ ಮತ್ತು ಖಾಲಿ ಪೇಪರ್ ತುಂಡುಗಳು-06, ಅ||ಕಿ|| 00.00/- ರೂಪಾಯಿ ನೇದವುಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಜಯಶ್ರೀ ಶಾನಭಾಗ, ಡಬ್ಲ್ಯೂ.ಪಿ.ಎಸ್.ಐ (ಕ್ರೈಂ), ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 17-04-2021 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 62/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮೋಹನ ತಂದೆ ಗಂಗಾಧರ ಪಾಟೀಲ್, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚೌಡಳ್ಳಿ, ತಾ: ಮುಂಡಗೋಡ, 2]. ಶ್ರೀಕಾಂತಗೌಡ ತಂದೆ ನೀಲಕಂಠಗೌಡ ಪಾಟೀಲ್, ಪ್ರಾಯ-40 ವರ್ಷ, ವೃತ್ತಿ-ರೈತಾಪಿ ಕೆಲಸ, ಸಾ|| ಚೌಡಳ್ಳಿ, ತಾ: ಮುಂಡಗೋಡ, 3]. ನಾಗರಾಜ ತಂದೆ ಯಲ್ಲಪ್ಪ ಹೊಸಮನಿ, ಪ್ರಾಯ-53 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚೌಡಳ್ಳಿ, ತಾ: ಮುಂಡಗೋಡ, 4]. ಬಸವರಾಜ ತಂದೆ ಸೋಮಣ್ಣ ಶಿಂಗನಳ್ಳಿ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚೌಡಳ್ಳಿ, ತಾ: ಮುಂಡಗೋಡ, 5]. ಬಸವರಾಜ ತಂದೆ ಚನ್ನಪ್ಪ ಜೊತೆಪ್ಪನವರ, ಸಾ|| ಚೌಡಳ್ಳಿ, ತಾ: ಮುಂಡಗೋಡ, 6]. ಕೃಷ್ಣ ತಂದೆ ಹನುಮಂತಪ್ಪ ವಾಲ್ಮೀಕಿ, ಸಾ|| ಚೌಡಳ್ಳಿ, ತಾ: ಮುಂಡಗೋಡ, 7]. ಅಮ್ಮಿ ಹುಸೇನಸಾಬ್ ಕಾರಟಗಿ, ಸಾ|| ಚೌಡಳ್ಳಿ, ತಾ: ಮುಂಡಗೋಡ. ಈ ನಮೂದಿತ ಆರೋಪಿತರು ದಿನಾಂಕ: 17-04-2021 ರಂದು ಸಂಜೆ 18-00 ಗಂಟೆಗೆ ಮುಂಡಗೋಡ ತಾಲೂಕಿನ ಚೌಡಳ್ಳಿ ಗ್ರಾಮದಲ್ಲಿರುವ ಕಂಪಕಟ್ಟೆ ಕೆರೆಯ ಏರಿಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಲಾಭದ ಸಲುವಾಗಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಇಸ್ಪೀಟ್ ಜುಗಾರಾಟ ಆಡುತ್ತಿರುವಾಗ ನಗದು ಹಣ 750/- ರೂಪಾಯಿ ಹಾಗೂ ಇಸ್ಪೀಟ್ ಜುಗಾರಾಟದ ಸಲಕರಣೆಗಳಾದ ನ್ಯೂಸ್ ಪೇಪರ್, 52 ಇಸ್ಪೀಟ್ ಎಲೆಗಳೊಂದಿಗೆ ಆರೋಪಿ 1 ರಿಂದ 4 ನೇಯವರು ದಾಳಿಯ ಕಾಲಕ್ಕೆ ಸೆರೆ ಸಿಕ್ಕಿದ್ದು ಹಾಗೂ ಆರೋಪಿ 5 ರಿಂದ 7 ನೇಯವರು ದಾಳಿಯ ಕಾಲಕ್ಕೆ ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಬಸವರಾಜ ಮಬನೂರ, ಪಿ.ಎಸ್.ಐ, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 17-04-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 85/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಅಪ್ಪಾರಾವ್ ಪಾಟೀಲ್, ಪ್ರಾಯ-25 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಪೂರ, ತಾ: ಅಳ್ನಾವರ, ಜಿ: ಧಾರವಾಡ. ಈತನು ದಿನಾಂಕ: 17-04-2021 ರಂದು 21-00 ಗಂಟೆಗೆ ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದ ಬಸ್ ನಿಲ್ದಾಣದ ಹತ್ತಿರ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-22/ಎಚ್.ಡಿ-2477 ನೇದನ್ನು ಹಳಿಯಾಳ ಕಡೆಯಿಂದ ಅಳ್ನಾವರ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ, ತನ್ನ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು, ತೇರಗಾಂವ ಬಸ್ ನಿಲ್ದಾಣದ ಕಡೆಯಿಂದ ತಮ್ಮ ದನದ ದಡ್ಡಿಗೆ ಹಾಲು ಹಿಂಡಲು ಹೋಗುವ ಸಲುವಾಗಿ ರಸ್ತೆಯಲ್ಲಿ ಬರ-ಹೋಗುವ ವಾಹನ ನೋಡಿಕೊಂಡು ರಸ್ತೆ ದಾಟುತ್ತಿದ್ದ ಶಂಕರಪ್ಪ ತಂದೆ ಯಚ್ಚರಪ್ಪ ಅರಕಸಾಲಿ, ಪ್ರಾಯ-28 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ತೇರಗಾಂವ, ತಾ: ಹಳಿಯಾಳ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಸಾಧಾರಣ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಯಾಸೀನ್ ತಂದೆ ಸಿಕೂರ್ ಅಹಮ್ಮದ್ ಡೋನ್ಸಾಲ್, ಪ್ರಾಯ-27 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ತೇರಗಾಂವ, ತಾ: ಹಳಿಯಾಳ ರವರು ದಿನಾಂಕ: 16-04-2021 ರಂದು 22-15 ಗಂಟೆಗೆ ಠಾಣೆಯಲ್ಲಿ ದೂರು ದಾಖಲಿಸಿದ್ದನ್ನು ಗುನ್ನಾ ನಂ: 85/2021, ಕಲಂ:  279, 337 ಐಪಿಸಿ ನೇದರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

     ಈ ಪ್ರಕರಣದಲ್ಲಿ ಗಾಯಗೊಂಡಿದ್ದ ಪಾದಚಾರಿ ಶಂಕರಪ್ಪ ತಂದೆ ಯಚ್ಚರಪ್ಪ ಅರಕಸಾಲಿ, ಇವನಿಗೆ ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಕೊಡಿಸಿ, ಹೆಚ್ಚಿನ ಉಪಚಾರಕ್ಕಾಗಿ ಧಾರವಾಡದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಅಲ್ಲಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಉಪಚಾರಕ್ಕೆ ದಾಖಲಿಸಿದ್ದು, ಹೀಗೆ ಉಪಚಾರದಲ್ಲಿದ್ದ ಗಾಯಾಳು ಶಂಕರಪ್ಪ ಇವನು ಉಪಚಾರ ಫಲಕಾರಿಯಾಗದೇ ದಿನಾಂಕ: 17-04-2021 ರಂದು ಬೆಳಗ್ಗೆ 08-30 ಗಂಟೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರಿಂದ ಸದರ ಪ್ರಕರಣಕ್ಕೆ ಕಲಂ: 304(ಎ) ಐಪಿಸಿ ನೇದನ್ನು ಅಳವಡಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದು ಇರುತ್ತದೆ.

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 86/2021, ಕಲಂ: 323, 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪರಶುರಾಮ ತಂದೆ ಪುನ್ನಪ್ಪ ಡೊನಕರಿ, ಪ್ರಾಯ-42 ವರ್ಷ, ವೃತ್ತಿ-ಚಾಲಕ, ಸಾ|| ಕೊರ್ಲಕಟ್ಟಾ ಗ್ರಾಮ, ತಾ: ಹಳಿಯಾಳ. ಈತನು ಪಿರ್ಯಾದಿಯೊಂದಿಗೆ ಮನೆಯ ಜಮೀನಿನ ಸಲುವಾಗಿ ಸಿಟ್ಟಿನಿಂದ ಇದ್ದವನು, ದಿನಾಂಕ: 17-04-2021 ರಂದು ಬೆಳಿಗ್ಗೆ 06-30 ಗಂಟೆಯ ಸುಮಾರಿಗೆ ಪಿರ್ಯಾದಿಯವರು ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಾಗ, ಆರೋಪಿತನು ಪಿರ್ಯಾದಿಯನ್ನು ಉದ್ದೇಶಿಸಿ ‘ನಾನು ಮತ್ತು ನನ್ನ ಹೆಂಡತಿ ಪುಗಸಟ್ಟೆಯಾಗಿ ನಿನ್ನ ಹೊಟ್ಟೆ ಹೊರಿಯಬೇಕು’ ಎಂದು ಒಮ್ಮೇಲೆ ಮೈಮೇಲೆ ಏರಿ ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಕಟ್ಟಿಗೆಯ ಬಡಿಗೆಯಿಂದ ಪಿರ್ಯಾದಿಯ ಎಡಗಣ್ಣಿನ ಹತ್ತಿರ ಮತ್ತು ಬಲಗಡೆ ಮೊಣಕಾಲಿಗೆ ಅದೇ ಕಟ್ಟಿಗೆಯಿಂದ ಹೊಡೆದು ಗಾಯ ಪಡಿಸಿ, ಕೈಯಿಂದ ಜಗ್ಗಾಡಿ, ಕಪಾಳಕ್ಕೆ ಹೊಡೆದು ನೆಲಕ್ಕೆ ಬೀಳಿಸಿದ್ದಲ್ಲದೇ, ಪಿರ್ಯಾದಿಗೆ ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ತುಳಸಾ ಕೋಂ. ಪುನ್ನಪ್ಪ ಡೊನಕರಿ, ಪ್ರಾಯ-68 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕರ್ಲಕಟ್ಟಾ, ತಾ: ಹಳಿಯಾಳ ರವರು ದಿನಾಂಕ: 17-04-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 87/2021, ಕಲಂ: 323, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ನಾರಾಯಣ ಈರಪ್ಪ ಘೋಟಗೋಳಕರ, ಪ್ರಾಯ-62 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ತೇರಗಾಂವ, ತಾ: ಹಳಿಯಾಳ, 2]. ಸಂತೋಷ ತಂದೆ ನಾರಾಯಣ ಘೋಟಗೋಳಕರ, ಪ್ರಾಯ-32 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ತೇರಗಾಂವ, ತಾ: ಹಳಿಯಾಳ. ಈ ನಮೂದಿತ ಆರೋಪಿತರು ತೇರಗಾಂವ ಗ್ರಾಮದಲ್ಲಿ ಪಿರ್ಯಾದಿಯ ಮನೆಯ ಪಕ್ಕದ ಮನೆಯವರಾಗಿದ್ದು, ಆರೋಪಿತರು ತಮ್ಮ ಮನೆಯ ಮೇಲು ಮಹಡಿಯನ್ನು ಕಟ್ಟುತ್ತಿದ್ದು, ಅದರ ನೀರು ಪಿರ್ಯಾದಿಯ ಮನೆಯ ಒಳಗೆ ಹಾಯ್ದು ಹೋಗುವಂತೆ ಮಾಡಿದ್ದಕ್ಕೆ, ಆರೋಪಿತರಿಗೆ ದಿನಾಂಕ: 17-04-2021 ರಂದು ಸಂಜೆ 07-00 ಗಂಟೆಗೆ ಪಿರ್ಯಾದಿಯವರು ‘ತಮ್ಮ ಮನೆಯಲ್ಲಿ ನೀರು ಹಾಯ್ದು ಹೋಗದಂತೆ ಸರಿ ಮಾಡಿಕೊಳ್ಳಿ’ ಅಂತಾ ತಿಳಿಸಿದಕ್ಕೆ, ಆರೋಪಿ 1 ನೇಯವನು ಪಿರ್ಯಾದಿಯನ್ನು ಉದ್ದೇಶಿಸಿ ‘ಬೋಸಡಿಕೆ, ರಂಡಿಕೆ’ ಅಂತಾ ಅವಾಚ್ಯವಾಗಿ ಬೈಯ್ದು, ಮೈ ಮೇಲಿನ ಅಂಗಿಯನ್ನು ಹಿಡಿದು ನೆಲಕ್ಕೆ ಕೆಡವಿ ಕೈಯಿಂದ ಹೊಡೆಯುತ್ತಿದ್ದಾಗ ಆರೋಪಿ 2 ನೇಯವನು ಅಲ್ಲಿಯೇ ಬಿದ್ದಿದ್ದ ಇಟ್ಟಿಗೆಯ ತುಂಡಿನಿಂದ ಪಿರ್ಯಾದಿಯ ತಲೆಗೆ, ಎದೆಗೆ ಹಾಗೂ ಎಡಪಕ್ಕೆಗೆ ಹೊಡೆದು ಗಾಯನೋವು ಪಡಿಸಿದ್ದಲ್ಲದೇ, ಪಿರ್ಯಾದಿಯನ್ನು ಬಿಡಿಸಲು ಬಂದ ಪಿರ್ಯಾದಿಯ ಹೆಂಡತಿಗೆ  ಆರೋಪಿ 1 ನೇಯವನು ಕೈ ಹಿಡಿದು ಎಳೆದು ಹಾಕಿ ಸಾದಾ ಸ್ವರೂಪದ ಗಾಯನೋವು ಪಡಿಸಿ, ಅಲ್ಲಿಂದ ಹೋಗುವಾಗ ‘ಈ ದಿವಸ ಉಳಿದುಕೊಂಡಿದ್ದೀರಿ. ಇನ್ನೊಂದು ಸಲ ಸಿಕ್ಕರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಅಪ್ಪಾರಾವ್ ತಂದೆ ಈರಪ್ಪ ಘೋಟಗೋಳಕರ, ಪ್ರಾಯ-66 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ತೇರಗಾಂವ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 17-04-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 43/2021, ಕಲಂ: 427 ಐಪಿಸಿ ಹಾಗೂ ಕಲಂ: 3 Prevention Of Damage To Public Property Act-1984 ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಮೋಟಾರ್ ಸೈಕಲ್ ಮೇಲೆ ಬಂದ ಇಬ್ಬರೂ ದುಷ್ಕರ್ಮಿಗಳಾಗಿದ್ದು, ಹೆಸರು ಮತ್ತು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯವರು ಶಿರಸಿ ಎನ್.ಡಬ್ಲ್ಯೂ.ಕೆ.ಎಸ್.ಆರ್.ಟಿ.ಸಿ ಯಲ್ಲಿ ಚಾಲಕ ಅಂತಾ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುತ್ತಾರೆ. ಅದರಂತೆ ದಿನಾಂಕ: 17-04-2021 ರಂದು 07-10 ಗಂಟೆಗೆ ಶಿರಸಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಎನ್. ಡಬ್ಲ್ಯೂ.ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-31/ಎಫ್-1641 ನೇದರಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿರುವಾಗ ಬೆಣಗಿ ಕ್ರಾಸ್ ಬಳಿ ಹುಬ್ಬಳ್ಳಿ ಕಡೆಯಿಂದ ಶಿರಸಿ ಕಡೆಗೆ ನಮೂದಿತ ಆರೋಪಿತರಲ್ಲಿ ಒಬ್ಬನು ಮೋಟಾರ್ ಸೈಕಲ್ ಹಿಂಬದಿಯಲ್ಲಿ ಇನ್ನೊಬ್ಬನನ್ನು ಕೂಡ್ರಿಸಿಕೊಂಡು ಬಂದವನೇ ಆರೋಪಿ ಹಿಂಬದಿಯ ಸವಾರನು ಒಮ್ಮೇಲೆ ಕಲ್ಲನ್ನು ಬೀಸಿ ಬಸ್ಸಿಗೆ ಹೊಡೆದು, ಬಸ್ಸಿನ ಮುಂಬದಿಯ ಗ್ಲಾಸಿನ ಎಡಬದಿಗೆ ಹಾನಿ ಮಾಡಿ ಸುಮಾರು 22,000/- ರೂಪಾಯಿಯಷ್ಟು ಲುಕ್ಸಾನ್ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಅಬ್ದುಲ್ ಘನಿ ತಂದೆ ಅಲ್ಲಿ ಸಾಬ್, ಪ್ರಾಯ-58 ವರ್ಷ, ವೃತ್ತಿ-ಬಸ್ ಚಾಲಕ (ಬಿಲ್ಲೆ ಸಂಖ್ಯೆ: 958) ಸಾ|| ರಾಮನಬೈಲ್, ತಾ: ಶಿರಸಿ ರವರು ದಿನಾಂಕ: 17-04-2021 ರಂದು 14-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 17-04-2021

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 09/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ದತ್ತಾತ್ರೆಯ ತಂದೆ ನಾಗಪ್ಪ ಹರಿಕಂತ್ರ, ಪ್ರಾಯ-45 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕಿಮಾನಿ, ತಾ: ಕುಮಟಾ. ಈತನು ದಿನಾಂಕ: 16-04-2021 ರಂದು ರಾತ್ರಿಯಿಂದ ದಿನಾಂಕ: 17-04-2021 ರಂದು 07-30 ಗಂಟೆಯ ನಡುವಿನ ಅವಧಿಯಲ್ಲಿ ಬರ್ಗಿ, ಗುಂದದ ಘಜನಿ ಹೊಂಡದ ಹೊಳೆಯಲ್ಲಿ ಬೀಸುವ ಬಲೆ ಹಾಕಿ ಮೀನು ಹಿಡಿಯಲು ಹೋದಾಗ ನೀರಿನ ಬರ್ತದ ಸಮಯದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟಂತೆ ಕಂಡು ಬರುತ್ತದೆ. ಇದರ ಹೊರತು ಮೃತನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಆದರೂ ಕೂಡಾ ಮೃತನ ಮರಣೋತ್ತರ ಪರೀಕ್ಷೆ ನಡೆಸಿ ನಿಜವಾದ ಕಾರಣವನ್ನು ತಿಳಿಯಲು ಕಾನೂನಿನಂತೆ ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಜೀತ ತಂದೆ ದತ್ತಾತ್ರೆಯ ಹರಿಕಂತ್ರ, ಪ್ರಾಯ-21 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕಿಮಾನಿ, ತಾ: ಕುಮಟಾ ರವರು ದಿನಾಂಕ: 17-04-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 08/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನು ಸುಮಾರು 35 ರಿಂದ 40 ವರ್ಷ ಪ್ರಾಯದ ಅಪರಿಚಿತ ಗಂಡಸ್ಸಾಗಿದ್ದು, ಹೆಸರಿ ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 15-04-2021 ರಿಂದ 17-04-2021 ರಂದು 13-30 ಗಂಟೆಯ ನಡುವಿನ ಅವಧಿಯಲ್ಲಿ ಅರಬ್ಬಿ ಸಮುದ್ರದಲ್ಲಿ ಈಜಾಡಲು ಅಥವಾ ಮೀನುಗಾರಿಕೆಗೆ ಅಥವಾ ಇನ್ಯಾವುದೋ ಉದ್ದೇಶದಿಂದ ಹೋದವನು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟು ಕಾಯ್ಕಿಣಿ ಕೆಳಗಿನಮನೆಯ ಆರ್.ಎನ್.ಎಸ್ ಗಾಲ್ಫ್ ರೆಸಾರ್ಟ್ ಸಮೀಪದ ಅರಬ್ಬಿ ಸಮುದ್ರದ ದಡದಲ್ಲಿ ಮೃತದೇಹವು ಉತ್ತರಕ್ಕೆ ತಲೆ, ದಕ್ಷಿಣಕ್ಕೆ ಕಾಲಾಗಿ ಅಂಗಾತವಾಗಿ ಸ್ಥಿತಿಯಲ್ಲಿ ದೊರೆತ್ತಿರುತ್ತದೆ. ಮೃತನು ಹಸಿರು ಬಣ್ಣದ ಅರ್ಧ ತೋಳಿನ ಶರ್ಟ್ ಮತ್ತು ಕಪ್ಪು ಬಣ್ಣದ ಹಾಫ್ ಪ್ಯಾಂಟ್ ಧರಿಸಿರುತ್ತಾನೆ. ಮೃತನ ಎದೆಯ ಬಲಭಾಗದಲ್ಲಿ ಅಮ್ಮ, ಎಡಭಾಗದಲ್ಲಿ ಅಪ್ಪ ಹಾಗೂ ಎಡಗೈ ತೋಳಿನ ಮೇಲೆ ಚೇಳಿನ ಹಚ್ಚೆ ಇರುತ್ತದೆ. ಮೃತನ ಎರಡು ಕಣ್ಣುಗಳ ಚರ್ಮ, ತುಟಿ, ಎರಡು ಕಿವಿಗಳ ಚರ್ಮ ನೀರಿನಲ್ಲಿದ್ದ ಯಾವುದೋ ಜಲಚರಗಳು ತಿಂದು ಮೂಗು, ಕಣ್ಣು, ಕಿವಿಯಿಂದ ರಕ್ತ ನಮೂನೆಯ ದ್ರವ ಬಂದಿರುತ್ತದೆ. ಮೃತನ ಸೊಂಟದಲ್ಲಿ ಹಿಂದುಗಡೆಯ ಹಳದಿ ಬಣ್ಣದ ಹಿಡಿಕೆಯುಳ್ಳ ಕತ್ತಿ ಇದ್ದು, ಮೃತನ ವಾರಸುದಾರರ ಪತ್ತೆ ಹಚ್ಚಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪುಂಡಲೀಕ ತಂದೆ ವೆಂಕಟ್ರಮಣ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಸಿ.ಎಸ್.ಪಿ ಹೋಮ್ ಗಾರ್ಡ್, ಸಾ|| ಕೆಳಗಿನಮನೆ, ಪೋ: ಕಾಯ್ಕಿಣಿ, ತಾ: ಭಟ್ಕಳ ರವರು ದಿನಾಂಕ: 17-04-2021 ರಂದು 15-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 11/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಬಾಬು ತಂದೆ ರಾಮಾ ಮರಾಠಿ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದೇವನಳ್ಳಿ, ಕಾನಮನೆ, ಪೋ: ದೇವನಳ್ಳಿ, ತಾ: ಶಿರಸಿ. ಪಿರ್ಯಾದಿಯ ಗಂಡನಾದ ಈತನು ದಿನಾಂಕ: 17-04-2021 ರಂದು ಬೆಳಿಗ್ಗೆ 08-00 ಗಂಟೆಗೆ ಮತ್ತಿಘಟ್ಟಾದ ಜನಾರ್ಧನ ಹೆಗಡೆ ರವರ ಬೆಟ್ಟದ ಸೊಪ್ಪು ಕಡಿಯಲು ಹೋದವನು, ಸಮಯ 10-45 ಗಂಟೆಯ ಸುಮಾರಿಗೆ ಬೈನೆ ಮರದ ಮೇಲೆ ಹತ್ತಿ ಸೊಪ್ಪು ಕಡಿಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದವನಿಗೆ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದವರಿಗೆ ನೋಡಿ ಪರೀಕ್ಷಿಸಿದ ವೈದ್ಯಾಧಿಕಾರಿಗಳು ಮೃತಪಟ್ಟ ಬಗ್ಗೆ ತಿಳಿಸಿರುತ್ತಾರೆ. ಇದರ ವಿನಃ ಅವನ ಮರಣದಲ್ಲಿ ಬೇರೇ ಯಾವುದೇ ಸಂಶಯವಿರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಲಲಿತಾ ಕೋಂ. ಬಾಬು ಮರಾಠಿ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದೇವನಳ್ಳಿ, ಕಾನಮನೆ, ಪೋ: ದೇವನಳ್ಳಿ, ತಾ: ಶಿರಸಿ ರವರು ದಿನಾಂಕ: 17-04-2021 ರಂದು 17-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 19-04-2021 06:44 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080