ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 17-04-2022
at 00:00 hrs to 24:00 hrs
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 151/2022, ಕಲಂ: 279, 336 ಐಪಿಸಿ ಹಾಗೂ ಕಲಂ: 184 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಟೊಯೋಟಾ ಇನೋವಾ ಕಾರ್ ನಂ: ಕೆ.ಎ-05/ಎಮ್.ಎಲ್-3807 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲ. ದಿನಾಂಕ: 17-04-2022 ರಂದು ಬೆಳಿಗ್ಗೆ ಠಾಣಾ ಸಿಬ್ಬಂದಿಯವರಾದ ಸಿ.ಎಚ್.ಸಿ-1416, ಶಿವಾನಂದ ಡಿ ಚಿತ್ತರಗಿ, ಸಿ.ಎಚ್.ಸಿ-1667, ರಾಮಚಂದ್ರ ನಾಯ್ಕ ಇವರೊಂದಿಗೆ ರಂಜಾನ್ ಹಬ್ಬದ ನಿಮಿತ್ತ ಹೊನ್ನಾವರ ಪಟ್ಟಣದ ಗೇರುಸೊಪ್ಪಾ ಸರ್ಕಲ್ ದಲ್ಲಿ ನಿಂತು ವಾಹನ ತಪಾಸಣೆ ಮಾಡುತ್ತಿದ್ದಾಗ, ದಿನಾಂಕ: 17-04-2022 ರಂದು ಬೆಳಿಗ್ಗೆ 06-15 ಗಂಟೆಯ ಸುಮಾರಿಗೆ ನಮೂದಿತ ಆರೋಪಿತನು ತನ್ನ ಟೊಯೋಟಾ ಇನೋವಾ ಕಾರ್ ನಂ: ಕೆ.ಎ-05/ಎಮ್.ಎಲ್-3807 ನೇದನ್ನು ಗೇರುಸೊಪ್ಪಾ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದವನು, ಸಮವಸ್ತ್ರದಲ್ಲಿದ್ದ ಪಿರ್ಯಾದಿ ಹಾಗೂ ಸಿಬ್ಬಂದಿಯವರು ವಾಹನ ನಿಲ್ಲಿಸುವಂತೆ ಸೂಚನೆ ನೀಡಿದರೂ ಸಹ ನಿಲ್ಲಿಸದೇ ಅತೀವೇಗವಾಗಿ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಮಂಕಿ-ಭಟ್ಕಳ ಕಡೆಗೆ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಮಹಾಂತೇಶ ಉದಯ ನಾಯಕ, ಪಿ.ಎಸ್.ಐ (ಕಾ&ಸು, ಸಂಚಾರ), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 17-04-2022 ರಂದು 07-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 152/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರವೀಂದ್ರ ತಂದೆ ಈರು ಗೌಡ, ಪ್ರಾಯ-26 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕುಳಕೋಡ, ತಾ: ಹೊನ್ನಾವರ (ಮೋಟಾರ್ ಸೈಕಲ್ ನಂ: ಕೆ.ಎ-20/ಇ.ಸಿ-6440 ನೇದರ ಚಾಲಕ). ಈತನು ದಿನಾಂಕ: 17-04-2022 ರಂದು 15-45 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ಹೊನ್ನಾವರ ಪ್ರ್ರಭಾತನಗರದ ರಜತಗಿರಿ ಕ್ರಾಸ್ ಹತ್ತಿರ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-20/ಇ.ಸಿ-6440 ನೇದನ್ನು ಹೊನ್ನಾವರ ಕಡೆಯಿಂದ ಗೇರುಸೊಪ್ಪ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ, ತನ್ನ ಮುಂದಿನಿಂದ ಹೊನ್ನಾವರ ಕಡೆಯಿಂದ ಗೇರುಸೊಪ್ಪ ಕಡೆಗೆ ಪಿರ್ಯಾದಿಯು ತನ್ನ ಸ್ಕೂಟಿ ನಂ: ಕೆ.ಎ-47/ಕ್ಯೂ-9630 ನೇದರ ಹಿಂಬದಿ ತನ್ನ ಅತ್ತೆಯಾದ ಶ್ರೀಮತಿ ಸೀತಾ ಕೋಂ. ನಾರಾಯಣ ಶೆಟ್ಟಿ, ಪ್ರಾಯ-70 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಸುರಕಟ್ಟೆ, ಮುಗ್ವಾ, ತಾ: ಹೊನ್ನಾವರ ಇವರಿಗೆ ಕೂರಿಸಿಕೊಂಡು ತನ್ನ ಸ್ಕೂಟಿಯನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಗೆ ಬಲಗೈ ಮತ್ತು ಬಲಗಾಲಿಗೆ ಗಾಯ ಪಡಿಸಿದ್ದಲ್ಲದೇ, ಸ್ಕೂಟಿಯ ಹಿಂಬದಿ ಸವಾರಳಾದ ಶ್ರೀಮತಿ ಸೀತಾ ಕೋಂ. ನಾರಾಯಣ ಶೆಟ್ಟಿ ಇವರಿಗೆ ತಲೆಗೆ ಹಾಗೂ ಕೈ ಕಾಲಿಗೆ ಗಾಯ ಪಡಿಸಿ, ಆರೋಪಿ ಮೋಟಾರ್ ಸೈಕಲ್ ಸವಾರನು ತಾನೂ ಸಹ ತನ್ನ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು, ತನ್ನ ತಲೆಗೆ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ವೆಂಕಟ್ರಮಣ ತಂದೆ ನಾರಾಯಣ ಶೆಟ್ಟಿ, ಪ್ರಾಯ-53 ವರ್ಷ, ವೃತ್ತಿ-ಐಸ್ ಪ್ಲಾಂಟ್ ನಲ್ಲಿ ಕೆಲಸ, ಸಾ|| ಬಾಳೆಗದ್ದೆ, ಭಾಸ್ಕೇರಿ, ತಾ: ಹೊನ್ನಾವರ, ಹಾಲಿ ಸಾ|| ಜೀವನಜ್ಯೋತಿ ಐ.ಟಿ.ಐ ಕಾಲೇಜ್ ಹತ್ತಿರ, ಚರ್ಚ್ ರೋಡ್, ತಾ: ಹೊನ್ನಾವರ ರವರು ದಿನಾಂಕ: 17-04-2022 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮಂಕಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 34/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ತೌಸೀಫ್ ಅಹಮ್ಮದ್ ಯೂಸೂಬಸಾಬ್, ಪ್ರಾಯ-26 ವರ್ಷ, ವೃತ್ತಿ-ಚಾಲಕ, ಸಾ|| ಮಾಗೋಡ, ತಾ: ಹೊನ್ನಾವರ (ಮಹೀಂದ್ರಾ ಬೊಲೆರೋ ವಾಹನ ನಂ: ಕೆ.ಎ-49/3113 ನೇದರ ಚಾಲಕ). ಈತನು ದಿನಾಂಕ: 17-04-2022 ರಂದು ಮಧ್ಯಾಹ್ನ 15-00 ಗಂಟೆಯ ಸುಮಾರಿಗೆ ಗುಣವಂತೆ ಗ್ರಾಮದ ಕೆರೆಮನೆಯಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ತಾನು ಚಾಲನೆ ಮಾಡುತ್ತಿದ್ದ ತರಕಾರಿ ತುಂಬಿದ ಮಹೀಂದ್ರಾ ಬೊಲೆರೋ ವಾಹನ ನಂ: ಕೆ.ಎ-49/3113 ನೇದನ್ನು ಗುಣವಂತೆ ಸರ್ಕಲ್ ಕಡೆಯಿಂದ ಇಡಗುಂಜಿ ಕ್ರಾಸ್ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದವನು, ಚಾಲನೆಯ ಮೇಲಿನ ನಿಯಂತ್ರಣ ತಪ್ಪಿ, ಒಮ್ಮೇಲೆ ರಸ್ತೆಯ ಎಡಬದಿಯ ಮಣ್ಣಿನ ಸ್ಥಳದಲ್ಲಿ ವಾಹವನ್ನು ಇಳಿಸಿ, ಮಣ್ಣಿನ ಸ್ಥಳದಲ್ಲಿ ಅಳವಡಿಸಿದ ಸಿಗ್ನಲ್ ಬೋರ್ಡ್ ಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮುಂದೆ ಬಂದು ವಾಹನವನ್ನು ಪಲ್ಟಿ ಪಡಿಸಿ, ವಾಹನದಲ್ಲಿ ತನ್ನ ಪಕ್ಕದಲ್ಲಿ ಕುಳಿತ ಅಬ್ದುಲ್ ಕರೀಮ್ ಇಸ್ಮಾಯಿಲ್ ಸಾಬ್, ಸಾ|| ಹನೀಫಾಬಾದ್, ತಾ: ಭಟ್ಕಳ ಇವರ ತಲೆಗೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮಹಮ್ಮದ್ ಸಾಕೀಬ್ ತಂದೆ ಅಬ್ದುಲ್ಲಾಸಾಬ್, ಪ್ರಾಯ-21 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಂಶಿ, ದಾಸಗೋಡ, ತಾ: ಹೊನ್ನಾವರ ರವರು ದಿನಾಂಕ: 17-04-2022 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಜೋಯಿಡಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 12/2022, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶರತ್ ತಂದೆ ಶಿವಾಜಿ ಘಾಟಗೆ, ಪ್ರಾಯ-24 ವರ್ಷ, ವೃತ್ತಿ-ಚಾಲಕ, ಸಾ|| ಶ್ರೀ ಬನಶಂಕರಿ ಬಿಲ್ಡಿಂಗ್, 2 ನೇ ಕ್ರಾಸ್, ವಿದ್ಯಾಗಿರಿ, ಧಾರವಾಡ (ಜೀಪ್ ವಾಹನ ನಂ: ಕೆ.ಎ-25/ಎಮ್.ಡಿ-3205 ನೇದರ ಸವಾರ). ಈತನು ದಿನಾಂಕ: 16-04-2022 ರಂದು 20-30 ಗಂಟೆಗೆ ತನ್ನ ಬಾಬ್ತು ಜೀಪ್ ವಾಹನ ನಂ: ಕೆ.ಎ-25/ಎಮ್.ಡಿ-3205 ನೇದನ್ನು ಕಾರವಾರ ಕಡೆಯಿಂದ ಜೋಯಿಡಾ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಅಣಶಿ ಗ್ರಾಮದ ಸಾತೇರಿ ದೇವಸ್ಥಾನದ ಹತ್ತಿರ ಡಾಂಬರ್ ರಸ್ತೆಯ ಮೇಲೆ ರಸ್ತೆಯ ತಿರುವಿನಲ್ಲಿ ಪಿರ್ಯಾದಿಯು ಜೋಯಿಡಾ ಕಡೆಯಿಂದ ಕಾರವಾರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಜೀಪ್ ವಾಹನ ನಂ: ಕೆ.ಎ-01/ಎಮ್.ಎನ್-4989 ನೇದಕ್ಕೆ ಡಿಕ್ಕಿ ಪಡಿಸಿ, ಎರಡು ವಾಹನಗಳನ್ನು ಜಖಂ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ರಾಮಚಂದ್ರ ಭಟ್, ಪ್ರಾಯ-35 ವರ್ಷ, ವೃತ್ತಿ-ಆರ್.ಎನ್.ಎಸ್ ಮೋಟಾರ್ಸ್ ಮ್ಯಾನೇಜರ್, ಸಾ|| ತೆಂಗಿನಕಟ್ಟೆ, ಕರ್ಕಿ, ತಾ: ಹೊನ್ನಾವರ ರವರು ದಿನಾಂಕ: 17-04-2022 ರಂದು 01-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 55/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಗಣಪಾ ಗೌಡ, ಪ್ರಾಯ-44 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮೇಲಿನ ಸರಕುಳಿ, ತಾ: ಸಿದ್ದಾಪುರ. ಈತನು ದಿನಾಂಕ: 17-04-2022 ರಂದು 15-15 ಗಂಟೆಗೆ ಸಿದ್ದಾಪುರ ತಾಲೂಕಿನ ಮೇಲಿನ ಸರಕುಳಿಯ ತನ್ನ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ 1). Original Choice Deluxe Whisky 90 ML ಅಂತಾ ಬರೆದ ಮದ್ಯ ತುಂಬಿದ 04 ಟೆಟ್ರಾ ಪ್ಯಾಕೆಟ್ ಗಳು, 2). Original Choice Deluxe Whisky 90 ML ಅಂತಾ ಬರೆದ ಕಾಲಿ 2 ಮದ್ಯದ ಟೆಟ್ರಾ ಪ್ಯಾಕೆಟ್ ಗಳು, 3). ಪ್ಲಾಸ್ಟಿಕ್ ಗ್ಲಾಸುಗಳು-2. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜೇಶ್ವರ ವಿ. ಚಂದಾವರ, ಪಿ.ಎಸ್.ಐ (ತನಿಖೆ), ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 17-04-2022 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ರಾಮನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 22/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ನಾರಾಯಣ ತಂದೆ ದಾಮೋದರ ಪೆಡ್ನೇಕರ, ಪಾಯ-62 ವರ್ಷ, ವೃತ್ತಿ-ಚಹಾ ತಿಂಡಿ ವ್ಯಾಪಾರ, ಸಾ || ಮಾರ್ಕೆಟ್ ಲೈನ್, ಕ್ಯಾಸಲರಾಕ್, ತಾ: ಜೋಯಿಡಾ. ಈತನು ದಿನಾಂಕ: 17-04-2022 ರಂದು ಬೆಳಿಗ್ಗೆ 09-00 ಗಂಟೆಗೆ ಕ್ಯಾಸಲರಾಕ್ ಗ್ರಾಮದ ಮಾರ್ಕೆಟ್ ಲೈನಿನಲ್ಲಿರುವ ತನ್ನ ಚಹಾ ತಿಂಡಿಗಳನ್ನು ಮಾರಾಟ ಮಾಡುವ ಮನೆಯ ವರಾಂಡದಲ್ಲಿ ಯಾರೋ 04 ಜನ ಅಪರಿಚಿತ ವ್ಯಕ್ತಿಗಳಿಗೆ ಅವರಲ್ಲಿದ್ದ BAGPIPER DELUXE WHISKY ಯ ಸರಾಯಿಯನ್ನು ಕುಡಿಯಲು ಅನುವು ಮಾಡಿಕೊಟ್ಟು ತನ್ನಲ್ಲಿಯ ಪ್ಲಾಸ್ಟಿಕ್ ಗ್ಲಾಸು, ನೀರಿನ ಬಾಟಲಿ ಹಾಗೂ ತಿನಿಸುಗಳನ್ನು ಕೊಟ್ಟು ತನ್ನ ಚಹಾ ತಿಂಡಿಗಳನ್ನು ಮಾರಾಟ ಮಾಡುವ ಮನೆಯ ವರಾಂಡದಲ್ಲಿ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ 1). 180 ML ನ BAGPIPER DELUXE WHISKY ಯ ಮದ್ಯ ತುಂಬಿದ ಟೆಟ್ರಾ ಪ್ಯಾಕೆಟ್ ಗಳು-02, 2). 180 ML ನ BAGPIPER DELUXE WHISKY ಯ ಖಾಲಿ ಟೆಟ್ರಾ ಪ್ಯಾಕೆಟ್ ಗಳು-02, 3). ಪ್ಲಾಸ್ಟಿಕ್ ಗ್ಲಾಸುಗಳು-04, 4). ನೀರಿನ ಬಾಟಲಿ-01. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ವಿನೋದ ಎಸ್. ಕೆ, ಪಿ.ಎಸ್.ಐ (ಕಾ&ಸು), ರಾಮನಗರ ಪೊಲೀಸ್ ಠಾಣೆ ರವರು ದಿನಾಂಕ: 17-04-2022 ರಂದು 10-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ರಾಮನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 23/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಸುರೇಶ ತಂದೆ ರಾಜಾರಾಮ ಮಿರಾಶಿ, ಪ್ರಾಯ-32 ವರ್ಷ, ವೃತ್ತಿ-ಚಹಾ ಅಂಗಡಿ ವ್ಯಾಪಾರ, ಸಾ|| 2 ನೇ ಬಸ್ ನಿಲ್ದಾಣ, ರಾಮನಗರ, ತಾ: ಜೋಯಿಡಾ. ಈತನು ದಿನಾಂಕ: 17-04-2022 ರಂದು ಬೆಳಿಗ್ಗೆ 19-20 ಗಂಟೆಗೆ ರಾಮನಗರದ 2 ನೇ ಬಸ್ ನಿಲ್ದಾಣದ ಹತ್ತಿರ ಇರುವ ತನ್ನ ಚಹಾ ತಿಂಡಿಗಳನ್ನು ಮಾರಾಟ ಮಾಡುವ ಚಹಾ ಅಂಗಡಿಯಲ್ಲಿ ಯಾರೋ 04 ಜನ ಅಪರಿಚಿತ ವ್ಯಕ್ತಿಗಳಿಗೆ ಅವರಲ್ಲಿದ್ದ DK DOUBLE KICK FINE WHISKY ಯ ಸರಾಯಿಯನ್ನು ಕುಡಿಯಲು ಅನುವು ಮಾಡಿಕೊಟ್ಟು ತನ್ನಲ್ಲಿಯ ಪ್ಲಾಸ್ಟಿಕ್ ಗ್ಲಾಸು ಹಾಗೂ ತಿನಿಸುಗಳನ್ನು ಕೊಟ್ಟು ತನ್ನ ಚಹಾ ತಿಂಡಿಗಳನ್ನು ಮಾರಾಟ ಮಾಡುವ ಚಹಾ ಅಂಗಡಿಯಲ್ಲಿ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ 1). 180 ML ನ DK DOUBLE KICK FINE WHISKY ಯ ಮದ್ಯ ತುಂಬಿದ ಟೆಟ್ರಾ ಪ್ಯಾಕೆಟ್ ಗಳು-02, 2). 180 ML ನ DK DOUBLE KICK FINE WHISKY ಯ ಖಾಲಿ ಟೆಟ್ರಾ ಪ್ಯಾಕೆಟ್ ಗಳು-02, 3). ಪ್ಲಾಸ್ಟಿಕ್ ಗ್ಲಾಸುಗಳು-04. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಲಕ್ಷ್ಮಣ ಎಲ್. ಪೂಜಾರಿ, ಪಿ.ಎಸ್.ಐ (ತನಿಖೆ), ರಾಮನಗರ ಪೊಲೀಸ್ ಠಾಣೆ ರವರು ದಿನಾಂಕ: 17-04-2022 ರಂದು 20-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 17-04-2022
at 00:00 hrs to 24:00 hrs
ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ....
======||||||||======