ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 17-08-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 147/2021, ಕಲಂ: 279, 337 ಐಪಿಸಿ  ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ತಂದೆ ಮಹಾಬಲೇಶ್ವರ ಆಚಾರಿ, ಪ್ರಾಯ-21 ವರ್ಷ, ವೃತ್ತಿ-ಖಾಸಗಿ ಕಂಪನಿಯಲ್ಲಿ ಕೆಲಸ, ಸಾ|| ಗುಡ್ಡೆಕೇರಿ, ಹೆಗಡೆಕಟ್ಟಾ, ತಾ: ಶಿರಸಿ (ಯಮಹಾ ಕೆ.ಟಿ.ಎಮ್ ಮೋಟಾರ್ ಸೈಕಲ್ ನಂ: ಕೆ.ಎ-14/ಇ.ಎಚ್-8690 ನೇದರ ಸವಾರ). ಈತನು ದಿನಾಂಕ: 17-08-2021 ರಂದು 11-15 ಗಂಟೆಗೆ ತನ್ನ ಯಮಹಾ ಕೆ.ಟಿ.ಎಮ್ ಮೋಟಾರ್ ಸೈಕಲ್ ನಂ: ಕೆ.ಎ-14/ಇ.ಎಚ್-8690 ನೇದನ್ನು ಕುಮಟಾ ಕಡೆಯಿಂದ ಹೆಗಡೆ ಕಡೆಗೆ ಅತೀವೇಗವಾಗಿ ಸವಾರಿ ಮಾಡಿಕೊಂಡು ಹೋಗಿ, ಕುಮಟಾ ವಿವೇಕನಗರದ ಕೆನರಾ ಬ್ಯಾಂಕ್ ಹತ್ತಿರ ತನ್ನ ಮುಂದಿನಿಂದ ಸೈಕಲ್ ಮೇಲೆ ಬರುತ್ತಿದ್ದ ಶ್ರೀ ರಾಘವೇಂದ್ರ ತಮದೆ ರಾಮರಾಯ ಕಾಮತ್, ಪ್ರಾಯ-30 ವರ್ಷ, ಸಾ|| ಮೂರುಕಟ್ಟಾ, ತಾ: ಕುಮಟಾ ಇವರಿಗೆ ಅಜಾಗರೂಕತೆಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅವರ ಗದ್ದಕ್ಕೆ, ತಲೆಗೆ ಹಾಗೂ ಎಡಗಾಲಿನ ಪಾದಕ್ಕೆ ಗಾಯವಾಗಲು ಮತ್ತು ತನ್ನ ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತಿದ್ದ ಸಹ ಸವಾರ ಬಾಲಕ ವಿಶ್ವಾಸ ತಂದೆ ಮಹೇಶ ಬಾರ್ಕೇರ, ಪ್ರಾಯ-15 ವರ್ಷ, ಸಾ|| ವಿವೇಕನಗರ, ಹಳ್ಕಾರ ಕ್ರಾಸ್, ತಾ: ಕುಮಟಾ ಇವನಿಗೆ ತಲೆಯ ಮೇಲ್ಬದಿಗೆ, ಹಣೆಗೆ ಹಾಗೂ ಬಲಗೈಗೆ ಗಾಯವಾಗಲು ಮತ್ತು ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ತನ್ನ ತಲೆಗೆ, ಹಣೆಗೆ ಮತ್ತು ಬಲಕಣ್ಣಿಗೆ ಗಾಯ ಪಡಿಸಿಕೊಂಡಿದ್ದು ಹಾಗೂ ಸೈಕಲ್ ಮತ್ತು ಮೋಟಾರ್ ಸೈಕಲ್ ಜಖಂ ಆಗಲು ಆರೋಪಿ ಮೋಟಾರ್ ಸೈಕಲ್ ಸವಾರನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಲಕ್ಷ್ಮೀಕಾಂತ ತಂದೆ ರಾಮಚಂದ್ರ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಇಲೆಕ್ಟ್ರೀಶಿಯನ್ ಕೆಲಸ, ಸಾ|| ಚಿಟ್ಟಿಕಂಬಿ, ಹೆಗಡೆ, ತಾ: ಕುಮಟಾ ರವರು ದಿನಾಂಕ: 17-08-2021 ರಂದು 11-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 216/2021, ಕಲಂ: 279, 337 ಐಪಿಸಿ  ನೇದ್ದರ ವಿವರ...... ನಮೂದಿತ ಆರೋಪಿತ ಶ್ರೀಪತಿ ತಂದೆ ಗಣಪತಿ ಭಟ್, ಪ್ರಾಯ-54 ವರ್ಷ, ವೃತ್ತಿ-ಶಿಕ್ಷಕರು, ಸಾ|| ಕೂಜಳ್ಳಿ, ತಾ: ಕುಮಟಾ, ಹಾಲಿ ಸಾ|| ಕವಲಕ್ಕಿ, ತಾ: ಹೊನ್ನಾವರ (ಕಾರ್ ನಂ: ಕೆ.ಎ-31/ಎಮ್-4967 ನೇದರ ಚಾಲಕ). ಈತನು ದಿನಾಂಕ 17-08-2021 ರಂದು 20-00 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರ ಮೇಲೆ ತನ್ನ ಕಾರ್ ನಂ: ಕೆ.ಎ-31/ಎಮ್-4967 ನೇದನ್ನು ಆರೋಳ್ಳಿ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹೊನ್ನಾವರದ ಮೂರಕಟ್ಟೆ ಹತ್ತಿರ ತನ್ನ ಎದುರಿನಿಂದ ಬಂದ ದನವನ್ನು ತಪ್ಪಿಸಲು ಕಾರನ್ನು ಒಮ್ಮೇಲೆ ರಸ್ತೆಯ ಬಲಕ್ಕೆ ಚಲಾಯಿಸಿ, ಹೊನ್ನಾವರ ಕಡೆಯಿಂದ ವಲ್ಕಿಗೆ ಹೋಗಲು ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಎಚ್-3655 ನೇದರ ಸವಾರನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಚಾಲಕ ಅನ್ಸಾರ್ ತಂದೆ ಅಬ್ದುಲ್ ರೆಹಮಾನ್ ಬೋಂಗ್ಯಾ ಈತನಿಗೆ ತಲೆಗೆ ಹಾಗೂ ಮೈಮೇಲೆ ಸಣ್ಣಪುಟ ಗಾಯವಾಗಲೂ ಹಾಗೂ ಮೋಟಾರ್ ಸೈಕಲ್ ಹಿಂಬದಿಯ ಸವಾರ ಪಾಜೀಲ್ ತಂದೆ ಇಕ್ಬಾಲ್ ಖಾಜಿ, ಈತನಿಗೆ ಬಾಯಿಗೆ, ತುಟಿಗೆ ಹಾಗೂ ಎಡಗಾಲಿಗೆ ಗಾಯ ಪಡಿಸಿದ್ದಲ್ಲದೇ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮತಿ ಅನಸುಯಾ ಕೋಂ. ಗಣಪತಿ ಭಟ್, ಇವರಿಗೆ ಎದೆಯ ಭಾಗಕ್ಕೆ ತೆರಚಿದ ಗಾಯ, ಬಲಗಾಲಿಗೆ ಗಾಯವಾಗಿದ್ದು ಹಾಗೂ ಕಾರಿನಲ್ಲಿದ್ದ ಇನ್ನೊಬ್ಬ ಸವಾರಳಾದ ಪ್ರಿಯಾಂಕ ತಂದೆ ಶ್ರೀಪತಿ ಭಟ್, ಇವರಿಗೆ ಬಲಗಾಲಿನ ಮಂಡಿಗೆ ಗಾಯನೋವು ಆಗಲೂ ಕಾರಣನಾಗಿದ್ದಲ್ಲದೇ, ಆರೋಪಿ ಕಾರ್ ಚಾಲಕನು ತನಗೂ ಸಹ ತುಟಿಗೆ ಗಾಯನೋವು ಪಡಿಸಿಕೊಂಡು, ಎರಡು ವಾಹನ ಜಖಂಗೊಳ್ಳಲು ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಮುಕ್ತಾರ್ ತಂದೆ ಉಮರ್ ಗೈಬ್, ಪ್ರಾಯ-43 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ವಲ್ಕಿ, ತಾ: ಹೊನ್ನಾವರ ರವರು ದಿನಾಂಕ: 17-08-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 94/2021, ಕಲಂ: 279, 337 ಐಪಿಸಿ  ನೇದ್ದರ ವಿವರ...... ನಮೂದಿತ ಆರೋಪಿತ ಮೊಹಮ್ಮದ್ ಫೈಜಲ್ ತಂದೆ ಖಾದೀರ್ ಮೊಹಿದ್ದೀನ್ ಮುಕ್ತೇಸರ್, ಪ್ರಾಯ-45 ವರ್ಷ, ಸಾ|| ಫೈಜಲ್ ಮಂಜಿಲ್, ರಂಗಿನಕಟ್ಟಾ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-9292 ನೇದರ ಸವಾರ). ಈತನು ದಿನಾಂಕ: 14-08-2021 ರಂದು 18-00 ಗಂಟೆ ಸುಮಾರಿಗೆ ಭಟ್ಕಳ ಶಹರದ ಎಮ್ಮಿಸ್ ಹೊಟೇಲ್ ಎದುರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-9292 ನೇದನ್ನು ಭಟ್ಕಳ ಶಹರದ ಕಡೆಯಿಂದ ಮುರ್ಡೇಶ್ವರದ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ಅದೇ ದಿಸೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-30/ಕೆ-7106 ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ನಂತರ ತನ್ನ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ಪಾದಚಾರಿ ಇಮ್ರಾತ್ ಸೈನಿ ತಂದೆ ಅಮರ್ ಸಿಂಗ್ ಸೈನಿ, ಪ್ರಾಯ-22 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾಂಚಿಪುರ, ಸಿಲೋತಿ, ಕರೌಲಿ, ರಾಜಸ್ಥಾನ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅವರ ಬಲಗಾಲಿಗೆ ಹಾಗೂ ಮೋಟಾರ್ ಸೈಕಲ್ ನಂ: ಕೆ.ಎ-30/ಕೆ-7106 ನೇದರ ಸವಾರನಾದ ಮೊಹಮ್ಮದ್ ಮಂಜೂರ್ ಖತೀಬ್ ತಂದೆ ಅಬ್ದುಲ್ ರಬ್ ಖತೀಬ್, ಪ್ರಾಯ-21 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಜಾಮೀಯಾ ಸ್ಟ್ರೀಟ್, ತಾ: ಭಟ್ಕಳ, ಈತನಿಗೆ ಮತ್ತು ಅದರ ಹಿಂಬದಿ ಸವಾರನಾದ ಮೊಹಮ್ಮದ್ ಸಯ್ಯಾಮ್ ತಂದೆ ಮೊಹಮ್ಮದ್ ಉಜೈರ್ ರುಕ್ನುದ್ದೀನ್, ಪ್ರಾಯ-20 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಚೌಕ ಬಜಾರ್, ತಾ: ಭಟ್ಕಳ ಇಬ್ಬರಿಗೂ ಮುಖಕ್ಕೆ ಪೆಟ್ಟಾಗುವಂತೆ ಮಾಡಿ ಗಾಯನೊವು ಪಡಿಸಿದ್ದಲ್ಲದೇ, ತನಗೂ ಸಹ ಸಣ್ಣಪುಟ್ಟ ತೆರಚಿದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಗನಲಾಲ್ ಸೈನಿ ತಂದೆ ಸಿಲ್ಲಿ ರಾಮ್ ಸೈನಿ, ಪ್ರಾಯ-33 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಂಡನಕಾಪುರ, ಕಾಚರೌಲಿ, ತಾ: ಹಿಂಡೌನ್, ಜಿ: ಕರೌಲಿ, ರಾಜಸ್ಥಾನ ರವರು ದಿನಾಂಕ: 17-08-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 51/2021, ಕಲಂ: 323, 341, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕರುಣೇಶ ತಂದೆ ಈರಪ್ಪ ಅಂಗಡಿ, ಪ್ರಾಯ-33 ವರ್ಷ, ಸಾ|| ಶಿರಸಿ. ಈತನು ದಿನಾಂಕ: 17-08-2021 ರಂದು 13-15 ಗಂಟೆಯ ಸುಮಾರಿಗೆ ಶಿರಸಿ ಶಹರದ ಬಿಡ್ಕಿಯ ಹತ್ತಿರ ಇರುವ ನ್ಯಾಯ ಬೆಲೆ ಹೊಟೇಲ್ ಎದುರಿಗೆ ‘ಮೋಟಾರ್ ಸೈಕಲನ್ನು ಇಲ್ಲಿ ಯಾರು ನಿಲ್ಲಿಸಿದವರು?’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿರುವಾಗ ಪಿರ್ಯಾದಿ ಹಾಗೂ ಆತನ ಗೆಳೆಯ ಬಸವರಾಜ ಅಮುಗುಂದಿ ಇವರು ‘ಅದು ತಮ್ಮ ಮೋಟಾರ್ ಸೈಕಲ್’ ಅಂತಾ ಹೇಳಿದಾಗ ಆರೋಪಿತನು ‘ಬೋಳಿ ಮಗನೆ, ಸೂಳೆ ಮಗನೆ, ಮೋಟಾರ್ ಸೈಕಲನ್ನು ನಿಲ್ಲಿಸಲು ಇದೇ ಜಾಗ ಬೇಕಾ ನಿಮಗೆ?’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಬಿಡಿಸಲು ಬಂದ ಬಸವರಾಜ ಈತನಿಗೂ ಅವಾಚ್ಯ ಶಬ್ದಗಳಿಂದ ಬೈಯ್ದು, ಪಿರ್ಯಾದಿಗೆ ಅಡ್ಡಗಟ್ಟಿ ತಡೆದು ನಿಲ್ಲಿಸಿ, ಪಿರ್ಯಾದಿಗೆ ಹಾಗೂ ಬಸವರಾಜ ಈತನಿಗೆ ದೂಡಿ ಹಾಕಿ, ಪಿರ್ಯಾದಿಗೆ ಕೈಯಿಂದ ಕೆನ್ನೆಗೆ ಹೊಡೆದು ನೋವು ಪಡಿಸಿದ್ದಲ್ಲದೇ, ‘ಈ ದಿನ ಉಳಿದುಕೊಂಡಿದ್ದಿರಿ. ಇನ್ನೊಂದು ದಿನ ಸಿಕ್ಕರೆ ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಇಮ್ಯಾನುವಲ್ ತಂದೆ ನಾಗಪ್ಪ ಮೇತ್ರೆ, ಪ್ರಾಯ-27 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಕಾಶಂಪುರ, ತಾ: ಔರಾದ, ಜಿ: ಬೀದರ, ಹಾಲಿ ಸಾ|| ಗಾಂಧಿನಗರ, 7 ನೇ ಕ್ರಾಸ್, ತಾ: ಶಿರಸಿ ರವರು ದಿನಾಂಕ: 17-08-2021 ರಂದು 16-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 70/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಕೇಶವ ತಂದೆ ಸೀನಾ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ವಿವೇಕಾನಂದ ನಗರ, ತಾ: ಶಿರಸಿ. ಈತನು ದಿನಾಂಕ: 17-08-2021 ರಂದು 17-45 ಗಂಟೆಗೆ ಶಿರಸಿ-ಹುಬ್ಬಳ್ಳಿ ರಸ್ತೆಯಲ್ಲಿ ವಿವೇಕಾನಂದ ನಗರದ ಸ್ಟೇಡಿಯಂ ಕ್ರಾಸ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿದರೆ 01/- ರೂಪಾಯಿಗೆ 80/- ರೂಪಾಯಿ ಹಣವನ್ನು ಕೊಡುತ್ತೇನೆ ಅಂತಾ ಹೇಳಿ ಜನರಿಗೆ ಕರೆದು ಜನರಿಂದ ಹಣವನ್ನು ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ನಡೆಸಿದಾಗ ಓ.ಸಿ ಮಟಕಾ ಜೂಗಾರಾಟದಿಂದ ಸಂಗ್ರಹವಾದ ನಗದು ಹಣ 1,350/- ರೂಪಾಯಿ ಹಾಗೂ ಓ.ಸಿ ಜೂಗರಾಟಕ್ಕೆ ಬಳಸಿದ ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ, ಖಾಲಿ ಪೇಪರ್ ತುಂಡುಗಳು-06, ಅ||ಕಿ|| 00.00/- ರೂಪಾಯಿ, ಮತ್ತು ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭೀಮಾಶಂಕರ ಎಸ್. ಸಂಗಣ್ಣ, ಪಿ.ಎಸ್.ಐ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 17-08-2021 ರಂದು 20-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 80/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಬ್ಬೀರ್ ತಂದೆ ಮೆಹಬೂಬಸಾಬ್ ದುಕಾಂದಾರ್, ಸಾ|| ದಾಂಡೇಲಿ (ಕಾರ್ ನಂ: ಜಿ.ಎ-08/ಎಫ್-6313 ನೇದರ ಚಾಲಕ). ಈತನು ದಿನಾಂಕ: 17-08-2021 ರಂದು ಬೆಳಿಗ್ಗೆ 08-10 ಗಂಟೆಗೆ ಬನವಾಸಿ ಕಡೆಯಿಂದ ಶಿರಸಿ ಕಡೆಗೆ ತಾನು ಚಲಾಯಿಸಿಕೊಂಡು ಬಂದ ಕಾರ್ ನಂ: ಜಿ.ಎ-08/ಎಫ್-6313 ನೇದನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ಹೊಸಗದ್ದೆ ಕ್ರಾಸಿನಿಂದ ಶಿರಸಿ-ಬನವಾಸಿ ರಸ್ತೆಯ ಮುಖಾಂತರ ನವಣಗೇರಿ ಕಡೆಗೆ ಟಿ.ವಿ.ಎಸ್ ಎಕ್ಸೆಲ್ ಮೋಟಾರ್ ಸೈಕಲ್ ನಂ: ಕೆ.ಎ-31/ಯು-6552 ನೇದನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಗಣಪತಿ ತಂದೆ ಶಂಕರ ಪಂಡಿತ, ಇವರ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ರಸ್ತೆ ಅಪಘಾತ ಪಡಿಸಿ, ಅವನ ತಲೆಗೆ, ಮೂಗಿಗೆ ಹಾಗೂ ಎರಡೂ ಕಾಲುಗಳಿಗೆ ಸಾದಾ ಸ್ವರೂಪದ ರಕ್ತಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಆತ್ಮಾರಾಮ ತಂದೆ ಶಂಕರ ಪಂಡಿತ, ಪ್ರಾಯ-62 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ನವಣಗೇರಿ, ಓಣಿಕೇರಿ, ತಾ: ಶಿರಸಿ ರವರು ದಿನಾಂಕ: 17-08-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 81/2021, ಕಲಂ: 323, 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಜೇಶ ತಂದೆ ಬಸ್ತ್ಯಾಂವ್ ಲುದ್ರಿಂಗ್, ಸಾ|| ಮನೆ ನಂ: 65 ವಡಗೇರಿ, ತಾ: ಶಿರಸಿ. ಈತನು ಪಿರ್ಯಾದಿಯ ಗಂಡನಿದ್ದು, ಪಿರ್ಯಾದಿಯು ದಿನಾಂಕ: 16-08-2021 ರಂದು 13-00 ಗಂಟೆಗೆ ತನ್ನ ಮನೆಯಲ್ಲಿರುತ್ತಾ ತನ್ನ ಗಂಡನಿಗೆ ‘ಎಲ್ಲಿಯಾದರೂ ಕೆಲಸಕ್ಕೆ ಹೋಗಿರಿ, ಹಣವಿಲ್ಲದೇ ಜೀವನ ನಡೆಸುವುದು ಕಷ್ಟವಾಗಿದೆ’ ಅಂತ ಹೇಳಿದ್ದಕ್ಕೆ ಅವನು ಒಮ್ಮೇಲೆ ಸಿಟ್ಟಿಗೆದ್ದು, ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಕಟ್ಟಿಗೆಯ ಬಡಿಗೆಯಿಂದ ಹಣೆಯ ಬಲಬದಿಗೆ ಹೊಡೆದು, ಕಾಲುಗಳಿಂದ ಹೊಟ್ಟೆಗೆ ಒದ್ದು, ಜಡೆಯನ್ನು ಜಗ್ಗಿ, ಕೈಗಳಿಂದ ಮೈಮೇಲೆ ಅಲ್ಲಲ್ಲಿ ಹೊಡೆದಿದ್ದಲ್ಲದೇ, ‘ಈ ವಿಷಯವನ್ನು ಎಲ್ಲಿಯಾದರೂ ಹೇಳಿದರೆ ನಿನ್ನನ್ನು ಕೊಂದು ಹಾಕುತ್ತೇನೆ’ ಅಂತ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ಸುಜಾತಾ ಕೋಂ. ರಾಜೇಶ ಲುದ್ರಿಂಗ್, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮನೆ ನಂ: 65 ವಡಗೇರಿ, ತಾ: ಶಿರಸಿ ರವರು ದಿನಾಂಕ: 17-08-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 17-08-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 45/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಈಶ್ವರ ತಂದೆ ಪೊಕ್ಕಾ ಗೌಡ, ಪ್ರಾಯ-47 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ಬೊಳುಕುಂಟೆ, ಉಳುವೆರೆ, ತಾ: ಅಂಕೋಲಾ. ಪಿರ್ಯಾದಿಯ ಗಂಡನಾದ ಈತನು ದಿನಾಂಕ: 17-08-2021 ರಂದು ಸಾಯಂಕಾಲ 16-00 ಗಂಟೆಗೆ ಮಾದನಗೇರಿಗೆ ಮಾರುಕಟ್ಟೆಗೆ ಹೋದವನು, ರಾತ್ರಿ 19-00 ಗಂಟೆಗೆ ಮಾದನಗೇರಿಯ ಮಾಣೇಶ್ವರ ತುಳುಸು ಗೌಡ, ಸಾ|| ಕನ್ನಡ ಶಾಲೆಯ ಹತ್ತಿರ, ಮಾದನಗೇರಿ, ತಾ: ಅಂಕೋಲಾ ಇವರ ಗೂಡಂಗಡಿಯ ಹತ್ತಿರ ಮೊಟ್ಟೆಯನ್ನು ತಿನ್ನುತ್ತಿರಬೇಕಾದರೆ ಅಲ್ಲಿಯೇ ಕುಸಿದು ಬಿದ್ದವನಿಗೆ 108 ಆಂಬ್ಯುಲೆನ್ಸ್ ನವರು ಬಂದು ಪರೀಕ್ಷಿಸಿದವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಮುಂದಿನ ಕಾನೂನು ಕ್ರಮವನ್ನು ಕೈಗೊಂಡು ಮೃತದೇಹವನ್ನು ಬಿಟ್ಟುಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಸಾವಿತ್ರಿ ಗಂಡ ಈಶ್ವರ ಗೌಡ, ಪ್ರಾಯ-37 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಬೊಳುಕುಂಟೆ, ಉಳುವೆರೆ, ತಾ: ಅಂಕೋಲಾ ರವರು ದಿನಾಂಕ: 17-08-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 22/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಗೋಪಾಲ ತಂದೆ ಮಾದೇವ ಗೌಡ, ಪ್ರಾಯ-32 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕಂದವಳ್ಳಿ, ಕಲ್ಲಬ್ಬೆ, ತಾ: ಕುಮಟಾ. ಈತನು ದಿನಾಂಕ: 12-08-2021 ರಂದು ಮೀನುಗಾರಿಕೆ ಕೆಲಸಕ್ಕೆ ಹೋದವನು, ದಿನಾಂಕ: 14-08-2021 ರಂದು 19-30 ಗಂಟೆಯಲ್ಲಿ ಹೊನ್ನಾವರ ಹಳದೀಪುರದ ಬಸವನರಾಜ ದುರ್ಗದ ಹತ್ತಿರ ಅರಬ್ಬಿ ಸಮುದ್ರದಲ್ಲಿ ಬೋಟಿನಲ್ಲಿ ಮೀನು ಹಿಡಿಯುತ್ತಿರುವಾಗ ಒಮ್ಮೇಲೆ ಜೋರಾಗಿ ಬಂದ ಸಮುದ್ರದ ದೊಡ್ಡ ಅಲೆಗೆ ಬೋಟ್ ಅಲುಗಾಡಿದಾಗ ಆಕಸ್ಮಾತ್ ಆಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ಮುಳುಗಿ ಕಾಣೆಯಾದವನು, ಸಮುದ್ರದ ನೀರಿನಲ್ಲಿ ಮುಳುಗಿ ಮೃತನಾಗಿ ಮೃತದೇಹವು ಸಮುದ್ರದ ನೀರಿನಲ್ಲಿ ತೇಲಿಕೊಂಡು ಬಂದು ದಿನಾಂಕ: 17-08-2021 ರಂದು 13-00 ಗಂಟೆಗೆ ಕುಮಟಾದ ವನ್ನಳ್ಳಿ ಅರಬ್ಬಿ ಸಮುದ್ರದ ದಡದಲ್ಲಿ ಆತನ ಮೃತದೇಹವು ಕೊಳೆತ ಸ್ಥಿತಿಯಲ್ಲಿ ದೊರೆತ್ತಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ಚಂದ್ರಶೇಖರ ತಂದೆ ರಾಮ ಗೌಡ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಾರೋಡಿ ವಾಲ್ಗಳ್ಳಿ, ತಾ: ಕುಮಟಾ ರವರು ದಿನಾಂಕ: 17-08-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 28/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಗಂಗಾಧರ ತಂದೆ ಯಲ್ಲಪ್ಪ ಜಾಧವ, ಪ್ರಾಯ-38 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಾವಲಕೊಪ್ಪ ಗ್ರಾಮ, ತಾ: ಮುಂಡಗೋಡ. ಸುದ್ದಿದಾರನ ತಮ್ಮನಾದ ಈತನು ಸರಾಯಿ ಕುಡಿದುಕೊಂಡು ಯಾವುದೋ ವಿಷಯದಲ್ಲಿ ತನ್ನ ಹೆಂಡತಿ ರೇಖಾಳೊಂದಿಗೆ ಜಗಳ ಮಾಡಿ, ಅವಳಿಗೆ ಕತ್ತಿಯಿಂದ ಹೊಡೆದು ಭಾರೀ ಗಾಯನೋವು ಪಡಿಸಿ, ಅದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ, ದಿನಾಂಕ: 17-08-2021 ರಂದು ಮಧ್ಯಾಹ್ನ 12-00 ಗಂಟೆಯಿಂದ 04-30 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಹೊಲದಲ್ಲಿ  ಕ್ರಿಮಿನಾಶಕ ಔಷಧಿ ಸೇವಿಸಿ ಅಸ್ವಸ್ಥನಾದವನಿಗೆ ಸರಕಾರಿ ಆಸ್ಪತ್ರೆ ಮುಂಡಗೋಡಕ್ಕೆ ದಾಖಲಿಸಿದ್ದು, ಆಸ್ಪತ್ರೆಗೆ ದಾಖಲಿಸಿದವನಿಗೆ ಚಿಕಿತ್ಸೆ ಫಲಿಸದೇ ದಿನಾಂಕ: 17-08-2021 ರಂದು 05-00 ಗಂಟೆಗೆ ಮೃತಪಟ್ಟಿರುತ್ತಾನೆ. ಸುದ್ದಿದಾರನ ತಮ್ಮನ ಮೃತದೇಹವು ಮುಂಡಗೋಡದ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪುಂಡಲಿಕ ತಂದೆ ಯಲ್ಲಪ್ಪ ಜಾದವ, ಪ್ರಾಯ-45 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಾವಲಕೊಪ್ಪ ಗ್ರಾಮ, ತಾ: ಮುಂಡಗೋಡ ರವರು ದಿನಾಂಕ: 17-08-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 29/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ವೆಂಕಟ್ರಮಣ ತಂದೆ ಗಣಪತಿ ಭಟ್ಟ, ಪ್ರಾಯ-85 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬಿದ್ರಕಾನ, ದೇವಸ್ಥಾನಕೇರಿ, ತಾ: ಸಿದ್ದಾಪುರ. ಪಿರ್ಯಾದಿಯ ತಂದೆಯಾದ ಇವರು ಕಳೆದ 20 ವರ್ಷಗಳಿಂದ ಶುಗರ್ ಹಾಗೂ ಬಿ.ಪಿ ಖಾಯಿಲೆಯಿಂದ ಬಳಲುತ್ತಿದ್ದವರಿದ್ದು, ಅಂದಿನಿಂತ ನಿತ್ಯವೂ ಮಾತ್ರೆ ಸೇವಿಸುತ್ತಾ ಬಂದವರಿದ್ದು, ಇತ್ತೀಚೆಗೆ ವಯಸ್ಸಾಗಿದ್ದರಿಂದ ಸ್ವಲ್ಪ ಮಾನಸಿಕ ಸ್ಥಿಮಿತತೆ ಕಳೆದುಕೊಂಡು ತಾನೂ ನಿತ್ಯವೂ ಮಾತ್ರೆ ಸೇವಿಸಬೇಕು ಎನ್ನುವ ಬಗ್ಗೆ ಮನಸ್ಸಿಗೆ ಹಚ್ಚಿಕೊಂಡು ಬೇಸರ ವ್ಯಕ್ತಪಡಿಸುತ್ತಿದ್ದವರು, ದಿನಾಂಕ: 16-08-2021 ರಂದು 22-30 ಗಂಟೆಯಿಂದ ದಿನಾಂಕ: 17-08-2021 ರಂದು ಬೆಳಿಗ್ಗೆ 07-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯ ಮುಂದಿರುವ ತೋಟದ ಬಾವಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮಕ್ಕಾಗಿ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ವಿಶ್ವನಾಥ ತಂದೆ ವೆಂಕಟ್ರಮಣ ಭಟ್ಟ, ಪ್ರಾಯ-60 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬಿದ್ರಕಾನ, ದೇವಸ್ಥಾನಕೇರಿ, ತಾ: ಸಿದ್ದಾಪುರ ರವರು ದಿನಾಂಕ: 17-08-2021 ರಂದು 09-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 18-08-2021 04:37 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080