Feedback / Suggestions

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 17-12-2021

at 00:00 hrs to 24:00 hrs

1) ಹಳಿಯಾಳ ಪೊಲೀಸ್ ಠಾಣೆ  ಅಪರಾಧ ಸಂಖ್ಯೆ: 191/2021 ಕಲಂ :  279, 338 ಐ.ಪಿ.ಸಿ. ನೇದ್ದರ ವಿವರ: ಆಪಾದಿತನಾದ ಮೇಘರಾಜ ತಂದೆ ತಿಪ್ಪಣ್ಣ ಕಶೀಲಕರ ಪ್ರಾಯ : 30 ವರ್ಷ, ವೃತ್ತಿ : ಚಾಲಕ ಸಾ|| ಹುಣ್ಸವಾಡ ತಾ|| ಹಳಿಯಾಳ ಈತನು ದಿನಾಂಕ : 16-12-2021 ರಂದು 20-30 ಗಂಟೆಗೆ ತನ್ನ ನೋಂದಣಿ ಸಂಖ್ಯೆ ಇಲ್ಲದ ಕುಬೋಟಾ ಟ್ರಾಕ್ಟರ್  ನೇದಕ್ಕೆ ಟ್ರಾಲಿಯನ್ನು ಜೋಡಿಸಿಕೊಂಡು ಹಳಿಯಾಳ ಬದಿಯಿಂದ ಬಿ.ಕೆ ಹಳ್ಳಿ ಬದಿಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದವನು ತನ್ನ ಎದುರಿನಿಂದ ಅಂದರೆ ಬಿ.ಕೆ ಹಳ್ಳಿ ಬದಿಯಿಂದ ಹಳಿಯಾಳ ಬದಿಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂ. ಕೆಎ-04/ಇಬಿ-4820 ನೇದರ ಚಾಲಕ ಬಸವರಾಜ ಔರಾಧಿ ಈತನು ತನ್ನ ಮಗ ಅಭಿಷೇಕ ಈತನಿಗೆ ಹಿಂಬದಿಯಲ್ಲಿ ಕೂಡಿಸಿಕೊಂಡು ಬರುತ್ತಿದ್ದಾಗ ಕಾಡುಕೋಳಿ ಹತ್ತಿರ ಅಪಘಾತ ಪಡಿಸಿ, ಮೋಟಾರ್ ಸೈಕಲ್ ಚಾಲಕ ಹಾಗೂ ಹಿಂಬದಿ ಸವಾರ ಅಭೀಷೇಕ ಇಬ್ಬರಿಗೂ ಗಂಭೀರ ಸ್ವರೂಪದ ಗಾಯ ನೋವು ಪಡಿಸಿ ಸ್ಥಳದಿಂದ ಓಡಿ ಹೋಗಿದ್ದಲ್ಲದೇ, ಮೋಟಾರ್ ಸೈಕಲ್ ಜಖಂಗೊಳಿಸಿದ ಬಗ್ಗೆ ಶ್ರೀ ಗಣಪತಿ ತಂದೆ ಭೀಮರಾಯ ಜಾಂಗಳೆ ಪ್ರಾಯ : 55 ವರ್ಷ, ವೃತ್ತಿ : ರೈತಾಭಿ ಸಾ|| ಅಮ್ಮನಕೊಪ್ಪ ತಾ|| ಹಳಿಯಾಳ ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 2) ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:  78/2021, ಕಲಂ: 279, 337, 338 ಐ.ಪಿ.ಸಿ.  ನೇದ್ದರ ವಿವರ: ಆಪಾದಿತ ಪೌಲಕುಮಾರ ದೇವದಾಸ ಬೈಲಾ ಈತನು ದಿನಾಂಕ: 17/12/2021 ರಂದು ಬೆಳಿಗ್ಗೆ 08:30 ಗಂಟೆಗೆ ತಾನು ಚಾಲನೆ ಮಾಡುತ್ತಿದ್ದ ತೂಫಾನ್ ವಾಹನ ನಂಬರ್:  ಕೆಎ.31/ ಎಂ.2868 ನೇದ್ದರಲ್ಲಿ ಪ್ರಯಾಣಿಕರಾದ 1) ವಿಲಾಸ ಸಡೇಕರ, 2) ನಾರಾಯಣ ಕೃಷ್ಣ ಜೋತೆನ್ನವರ, 3) ಕಿರಣ ಪರಶುರಾಮ ಕದಂ, 4) ದೀಪಕ ಧರ್ಮಾಜಿ ಪವಾರ, 5) ಮಲ್ಲಿಕಾರ್ಜುನ ಈಶ್ವರಪ್ಪ ಎನಗಂಡಲಾ, 6) ಗಣಪತಿ ಬಾಳಪ್ಪ ದೇಸಾಯಿ, 7) ಸಂದೀಪ ಕೃಷ್ಣ ನಾಯ್ಕ, 8) ಧನಂಜಯ ರಾದಾಕೃಷ್ಣ ನಾಯ್ಕ, 9) ಅಶೋಕ ಶಿವಾಜಿ ಶೆಟ್ಟಿ, 10) ಪ್ರಕಾಶ ಧರ್ಮಾಜಿ ಪವಾರ, 11) ಅನೀಲ್ ಹನುಮಂತರಾವ ದೇಶಪಾಂಡೆ, 12) ದೀಪಕ ಅಶೋಕ ಕಾಕ್ತಿಕರ ಇವರಗಳನ್ನು ಕೂಡ್ರಿಸಿಕೊಂಡು ದಾಂಡೇಲಿಯಿಂದ ಅಂಬಿಕಾನಗರದ ಕಡೆಗೆ ಹೋಗುತ್ತಾ ವಾಹನವನ್ನು ಅತೀವೇಗ ಮತ್ತು ನಿರ್ಲಕ್ಷತನದಿಂದ  ಚಾಲನೆ ಮಾಡಿ, ದಾಂಡೇಲಿಯಿಂದ  ಸುಮಾರು 3.5 ಕೀಮೀ ಅಂತರದಲ್ಲಿ ಎದುರಿನಿಂದ ಬರುತ್ತಿದ್ದ ಬಸ್ ಅನ್ನು ದಾಟಿದ ಕೂಡಲೇ ವಾಹನವನ್ನು ಒಮ್ಮೆಲೆ ವಾಹನವನ್ನು ಬಲಕ್ಕೆ ತಿರುಗಿಸಿ, ನಿಯಂತ್ರಿಸಲಾಗದೇ ರಸ್ತೆಯಲ್ಲಿ ಪಲ್ಟಿಹೊಡೆಸಿ ಬಸ್ಸಿನ ಹಿಂದಿನಿಂದ ಅಂಬಿಕಾನರದಿಂದ ದಾಂಡೇಲಿಗೆ ಬರುತ್ತಿದ್ದ ಪಿರ್ಯಾದುದಾರರ ಬೊಲೆರೋ ವಾಹನ ನಂಬರ್: ಕೆ.ಎ.36/ ಬಿ.3737 ನೇದ್ದಕ್ಕೆ ಬಲಭಾಗಕ್ಕೆ ಡಿಕ್ಕಿಹೊಡೆದು, ಪುನಃ ಇನ್ನೊಂದು ಪಲ್ಟಿಹೊಡೆಸಿ ತನ್ನ ವಾಹನದಲ್ಲಿದ್ದ ಗಾಯಾಳುಗಳಾದ ವಿಲಾಸ ಸಡೇಕರ, ಮತ್ತು ಗಣಪತಿ ಬಾಳಪ್ಪ ದೇಸಾಯಿ ರವರಿಗೆ ತೀವ್ರ ಗಾಯನೋವು ಪಡಿಸಿ, ಉಳಿದ ಗಾಯಾಳುಗಳಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದು, ಹಾಗೂ ಪಿರ್ಯಾದುದಾರರಿಗೆ, ಗಾಯಾಳು ಜ್ಯೋತಿಬಾ ರವರಿಗೆ ಸಾದಾ ಸ್ವರೂಪದ ಮತ್ತು ಸುಮೀತ ಪಾವಣೆ ಈತನಿಗೆ ತೀವ್ರಸ್ವರೂಪದ ಗಾಯನೋವುಪಡಿಸಿದ್ದಲ್ಲದೇ ಎರಡೂ ವಾಹನಗಳನ್ನು ಜಖಂಗೊಳಿಸಿದ ಬಗ್ಗೆ ಶ್ರೀ ರವಿಕುಮಾರ ತಂದೆ ಪ್ರಕಾಶ ಗೌಂಡರ, ಪ್ರಾಯ- 27 ವರ್ಷ, ವೃತ್ತಿ- ಚಾಲಕ, ಸಾ|| ಬೈಲಪಾರ ದಾಂಡೇಲಿ ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 3) ಬನವಾಸಿ ಪೊಲೀಸ್ ಠಾಣೆ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 125/2021 ಕಲಂ: 379 ಐಪಿಸಿ.  ನೇದ್ದರ ವಿವರ: ಆಪಾದಿತರಾದ 1] ಅರ್ಜುನ ತಂದೆ ಯಲ್ಲಪ್ಪ ಮಾಸ್ತರ ಪ್ರಾಯ; 23 ವರ್ಷ ಹೊಟೇಲ್ ಕೆಲಸ ಸಾ: ಶಕುನಳ್ಳಿ, ಸೊರಬಾ 2] ಅಸ್ಲಂ ತಂದೆ ಅಬ್ದುಲ್ ಸಾಬ 3] ಶಶಿ ತಂದೆ ಸುರೇಶ ಮಾದರ ಸಾ: ಹೆಬ್ಬತ್ತಿ, ಶಿರಸಿ ಇವರು  ಇವರು ದಿನಾಂಕ; 17.12.2021 ರಂದು ಬೆಳಿಗ್ಗೆ 05.00 ಗಂಟೆಗೆ ಪರ‍್ಯಾದಿಯ ತೋಟದಲ್ಲಿ ಸುಮಾರು 2 ಕ್ವಿಂಟಾಲ್ (ಅ||ಕಿ 12.000=00ರೂ) ಹಸಿ ಅಡಿಕೆಯನ್ನು ಕಳ್ಳತನ ಮಾಡಿ, ಮೋಟಾರ ಸೈಕಲ್ ನಂ: ಕೆಎ15/ವಾಯ್ 4540 (ಅ||ಕಿ 3000=00 ರೂ,)  ನೇದರ ಮೇಲೆ ಸಾಗಾಟ ಮಾಡುತ್ತಿದ್ದಾಗ ಆರೋಪಿತರ ಪೈಕಿ ಅರ್ಜುನ ಯಲ್ಲಪ್ಪ ಮಾಸ್ತರ ಈತನಿಗೆ ಪರ‍್ಯಾದಿ ಹಾಗೂ ಅವರೊಂದಿಗೆ ಇದ್ದವರು ಹಿಡಿದಿದ್ದು, ಉಳಿದ ಇಬ್ಬರು ಆರೋಪಿತರು ಸ್ಥಳದಿಂದ ಓಡಿ ಹೋಗಿರುವ ಬಗ್ಗೆ ಶ್ರೀ ಗಣಪತಿ ತಂದೆ ಗುತ್ಯೆಪ್ಪ ತೆಲಗುಂದ ಪ್ರಾಯ; 62 ವರ್ಷ ರೈತಾಬಿ ಸಾ: ರಾಮಾಪುರ, ಶಿರಸಿ ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 4) ಬನವಾಸಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:  126/2021 ಕಲಂ: 279, 337, 338 ಐಪಿಸಿ ನೇದ್ದರ ವಿವರ: ಆಪಾದಿತ ವೆಂಕಟ್ರಮಣ ನಾಗಪ್ಪ ನಾಯ್ಕ, ಸಾ: ಅಂಕೋಲಾ ಹಾಲಿ: ಕೆ.ಎಸ್.ಆರ್.ಟಿ.ಸಿ ಡಿಪೋ ಶಿರಸಿ. ಈತನು ದಿನಾಂಕ: 16-12-2021 ರಂದು 19-40 ಗಂಟೆಗೆ, ದಾಸನಕೊಪ್ಪ ಫಾರೆಸ್ಟ ಚೆಕ್ ಪೋಸ್ಟ ಎದುರು ರಸ್ತೆಯಲ್ಲಿ  ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆ.ಎ-31/ಎಫ್-1571 ನೇದನ್ನು ಹಾವೇರಿ ಕಡೆಯಿಂದ ಶಿರಸಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಸಂತೊಳ್ಳಿ ಕಡೆಯಿಂದ ಮಳಗಿ ಕಡೆಗೆ ಪ್ರಕಾಶ ತಂದೆ ನಿಂಗಪ್ಪ ಗೌಡ, ಸಾ: ಸಂತೊಳ್ಳಿ ಇವರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನಂ. ಕೆ.ಎ-31/ಎಸ್-4242 ನೇದಕ್ಕೆ ಡಿಕ್ಕಿಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರ ಪ್ರಕಾಶ ತಂದೆ ನಿಂಗಪ್ಪ ಗೌಡ, ಸಾ: ಸಂತೊಳ್ಳಿ ಇವರಿಗೆ ಬಲಗಾಲಿಗೆ ಮತ್ತು ತಲೆಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿ, ಹಿಂಬದಿ ಸವಾರರಾದ ದೂರುದಾರರಿಗೆ ಸಣ್ಣಪುಟ್ಟ ಗಾಯಪಡಿಸಿದ ಬಗ್ಗೆ ಶ್ರೀ ವಿಶ್ವನಾಥ ತಂದೆ ಬಸವರಾಜ ಗೌಡ, ಪ್ರಾಯ: 28 ವರ್ಷ,  ಜಾತಿ: ವೀರಶೈವ ಲಿಂಗಾಯತ್, ವೃತ್ತಿ: ಕೃಷಿ ಕೆಲಸ, ಸಾ: ಗಣಪತಿ ದೇವಸ್ಥಾನದ ಹತ್ತಿರ, ಇಂಡುವಳ್ಳಿ, ಶಿಗ್ಗಾ, ಸೊರಬಾ ತಾಲೂಕ, ಶಿವಮೊಗ್ಗ ಜಿಲ್ಲೆ.ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 5) ಹಳಿಯಾಳ ಪೊಲೀಸ್ ಠಾಣೆ  ಅಪರಾಧ ಸಂಖ್ಯೆ: 192/2021 ಕಲಂ : 353, 354, 504, 506 ಐ.ಪಿ.ಸಿ ಮತ್ತು ಕಲಂ : 3(1)(s), 3(1)((r) The SC/ST POA ; Amendment Act-2015. ನೇದ್ದರ ವಿವರ: ಆಪಾದಿತ ಗಣಪತಿ ತಂದೆ ಮಾರುತಿ ಗುಂಡುಪ್ಕರ ಪ್ರಾಯಸ್ಥ ಜಾತಿ-ಹಿಂದೂ ಮರಾಠಾ ಸಾ|| ಮಂಗಳವಾಡ, ಹಳಿಯಾಳ ತಾಲೂಕ ಇತನು ಪಿರ್ಯಾಧಿಯವರು ಕರ್ತವ್ಯ ನಿರ್ವಹಿಸುವ ಹಳಿಯಾಳ ತಹಶೀಲ್ದಾರ ರವರ ಕಛೇರಿಗೆ ಆಗಾಗ ಹೋಗಿ, ಸುಮ್ಮ ಸುಮ್ಮನೇ ವಿನಾಕಾರಣ ತೊಂದರೆ ಕೊಡುತ್ತಾ, ಕಛೇರಿ ಕೆಲಸಕ್ಕೆ ಅಡೆತಡೆ ಉಂಟು ಮಾಡುತ್ತಾ ಬಂದವನು, ದಿನಾಂಕ : 15-12-2021 ರಂದು 11-30 ಗಂಟೆಗೆ ಹಳಿಯಾಳ ತಹಶೀಲ್ದಾರ ಕಛೇರಿಗೆ ಹೋಗಿ ಪಿರ್ಯಾದಿಯವರಿಗೆ ಉದ್ದೇಶಿಸಿ, ತಿಂಗಳಿಗೆ ರೇಶನ ಅಂಗಡಿಗಳಿಂದ  ಹಾಗೂ ನಿಮ್ಮ ಕಛೇರಿಯಿಂದ ತನಗೆ ಹಣ ನೀಡಬೇಕೆಂದು ಒತ್ತಾಯಿಸಿದಾಗ, ಪಿರ್ಯಾಧಿಯವರು, ಯಾಕೆ ನಿನಗೆ ದುಡ್ಡು ಕೊಡಬೇಕು ಅಂತಾ ಹೇಳಿದ್ದಕ್ಕೆ ಆಪಾದಿತ ಗಣಪತಿ ಮಾರುತಿ ಗುಂಡುಪ್ಕರ ಇವನು, ಪಿರ್ಯಾಧಿಯವರಿಗೆ ಉದ್ದೇಶಿಸಿ, ಅವಾಚ್ಯವಾಗಿ ಬೈಯ್ದು , ಪಿರ್ಯಾಧಿಯವರು ಕರ್ತವ್ಯ ನಿರ್ವಹಿಸುವ ಕಛೇರಿ ಟೇಬಲ್  ಹತ್ತಿರ ಹೋಗಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಜಾತಿ ನಿಂಧನೆ ಮಾಡಿ ಹಾಗೂ ಮಾನಕ್ಕೆ ದಕ್ಕೆಯಾಗುವಂತೆ ಮಾತನಾಡಿದ್ದಲ್ಲದೇ, ಜೀವ ಬೆದರಿಕೆ ಹಾಕಿದ ಬಗ್ಗೆ ಶ್ರೀಮತಿ ರಾಮಕ್ಕಾ ಆರ್. ಕೊರವಿ ಪ್ರಾಯ-47 ವರ್ಷ, ವೃತ್ತಿ-ಸರ್ಕಾರಿ ನೌಕರರು ಜಾತಿ-ಹಿಂದೂ ಬೇಡರ ಸಾ|| ತಹಶೀಲ್ದಾರ ಕಛೇರಿ, ಹಳಿಯಾಳ ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 6) ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ  ಅಪರಾಧ ಸಂಖ್ಯೆ:   155/2021 ಕಲಂ: 78(3) ಕರ್ನಾಟಕ ಪೊಲೀಸ್  ಕಾಯ್ದೆ ( ತಿದ್ದುಪಡಿ) ವಿಧೇಯಕ 2021ನೇದ್ದ ರ ವಿವರ: ಆಪಾದಿತನಾದ  ರಾಜು ತಂದೆ ಸೊಮಯ್ಯ ನಾಯ್ಕ, ಪ್ರಾಯ 25 ವರ್ಷ, ಉದ್ಯೋಗ ಉದ್ಯೋಗ || ವ್ಯಾಪಾರ, ಸಾ|| ಕಾರಗದ್ದೆ, ವೆಂಕಟಾಪುರ ಭಟ್ಕಳ ತಾಲೂಕ ಈತನು ದಿನಾಂಕ: 17-12-2021 ರಂದು 18-00 ಗಂಟೆಯ ಸಮಯಕ್ಕೆ ಮಾವಿನಕುರ್ವಾ ಗ್ರಾಮದ ಬಂದರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ, ತನ್ನ ಲಾಭಕ್ಕೋಸ್ಕರ 1/- ರೂಪಾಯಿಗೆ 70/- ರೂ. ಕೊಡುವ ಶರತ್ತಿನ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಅಂಕೆ ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ ಓ.ಸಿ. ಜುಗಾರಾಟ ನಡೆಸುತ್ತಿದ್ದಾಗ ಓ.ಸಿ ಚೀಟಿ,-01, ಬಾಲಪೆನ್ನು-01, ಹಾಗೂ ನಗದು ಹಣ 1300/- ರೂಪಾಯಿಯೊಂದಿಗೆ ಸಿಕ್ಕಿದ್ದರಿಂದ ಶ್ರೀ ಭರತಕುಮಾರ ವಿ (ಕಾ&ಸು) ಪಿ.ಎಸ್.ಐ, ಭಟ್ಕಳ ಗ್ರಾಮೀಣ ಪೊಲೀಸ ಠಾಣೆ ರವರು ಸರ್ಕಾರದ ಪರವಾಗಿ ಪ್ರಕರಣ ದಾಖಲಿಸಿ ಕಾನೂನಿನ ಕ್ರಮ ಜರುಗಿಸಿರುತ್ತಾರೆ.

 7) ಯಲ್ಲಾಪುರ ಪೊಲೀಸ ಠಾಣೆ ಅಪರಾಧ ಸಂಖ್ಯೆ  229/2021. ಕಲಂ :- 279, 337, 283 ಐ.ಪಿ.ಸಿ. ನೇದ್ದರ ವಿವರ:  ಆಪಾದಿತ ಶ್ರೀ ಸುಂದರ ಸಾ|| ಬಿದರ. ಲಾರಿ ನಂ. ಕೆ.ಎ.-09/ಸಿ-9789 ನೇದರ  ಚಾಲಕ ಇತನು ತನ್ನ ಲಾರಿ ನಂ  ಕೆ.ಎ-09/ಸಿ-9789 ನೇದರಲ್ಲಿ ಕೋಕ್ ತುಂಬಿಕೊಂಡು ರಾಷ್ಟ್ರೀಯ  ಹೆದ್ದಾರಿ– 63 ರಲ್ಲಿ  ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಚಲಾಯಿಸಿಕೊಂಡು ಬಂದು ಯಲ್ಲಾಪುರ ತಾಲೂಕ ಶಿರಲೆ ಪಾಲ್ಸ್ ಹತ್ತಿರದ ತೀಕ್ಷಣವಾದ ತಿರುವಿನಲ್ಲಿ  ಯಾವುದೇ ಮುಂಜಾಗೃತಾ ಕ್ರಮ ವಹಿಸದೇ ಸಿಗ್ನಲ್ ಲೈಟ್ ಸಹ ಹಾಕದೇ ರಸ್ತೆಯ ಮೇಲೆ ಓಡಾಡುವ ಇತರೇ ವಾಹನಗಳಿಗೆ ಅಡೆತಡೆ ಉಂಟಾಗುವಂತೆ ಯಲ್ಲಾಪುರ ಕಡೆಗೆ ಮುಖಮಾಡಿ ನಿಲ್ಲಿಸಿದಲ್ಲದೇ,  ದಿನಾಂಕ 17-12-2021 ರಂದು ಬೆಳಿಗ್ಗೆ 07-00 ಗಂಟೆಗೆ ಆಪಾದಿತ 2) ಶ್ರೀ ಸುಬಾಷ್ ಚಂದ್ರ್  ತಂದೆ ಕೇಸರದಾಸ ಸಾ|| ಮನೆ ನಂ. 101 ಸನ್ ಸಿಟಿ ಜ್ಯಾಸಿನ್ ರೋಡ್ ಲೂದಿಯಾನಾ ಪಂಜಾಬ್.ಇಚರ್ ವಾಹನ ಸಂಖ್ಯೆ ಪಿ.ಬಿ.-11/ಸಿ.ಎಫ್.-2643 ನೇದರ ಚಾಲಕ ತನ್ನ ಲಾರಿಯನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತಿವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ  ನಿಲ್ಲಿಸಿಟ್ಟ ಲಾರಿ ನಂ.ಕೆ.ಎ-09/ಸಿ-9789 ನೇದರ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿಕೊಂಡು ತನಗೆ ಸಾದಾ ಸ್ವರೂಪದ ಗಾಯ-ನೋವುಪಡಿಸಿಕೊಂಡಿದ್ದಲ್ಲದೇ ಎರಡು ವಾಹನಗಳನ್ನು ಜಕ್ಕಂಗೊಳಿಸಿದ ಬಗ್ಗೆ ಶ್ರೀ ಇಮ್ರಾನ್ ತಂದೆ ಶಬ್ಬಿರ ಅಹ್ಮದ್ ನಥನಿ  ವಯಸ್ಸು 30 ವರ್ಷ ಉದ್ಯೋಗ ಪೊಲೀಸ ಕಾನಸ್ಟೇಬಲ್ ಸಾ|| ಡಿ.ಎ.ಆರ್. ಕಾರವಾರ ಹಾಲಿ ಯಲ್ಲಾಪುರ ಪೊಲೀಸ ಠಾಣೆ ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 8) ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಅಪರಾದ ಸಂಖ್ಯೆ:  123/2021,  ಕಲಂ: 457,380 ಐಪಿಸಿ. ನೇದ್ದರ ವಿವರ: ಯಾರೋ ಕಳ್ಳರು ದಿನಾಂಕ: 16/12/2021 ರಂದು ರಾತ್ರಿ 22-30 ಗಂಟೆಯಿಂದ  ದಿನಾಂಕ; 17/12/2021 ರ ಬೆಳಿಗ್ಗೆ 05-00 ಗಂಟೆಯ ನಡುವಿನ ಅವಧಿಯಲ್ಲಿ ಶಿರಸಿ ತಾಲೂಕಿನ ಸೊಂದಾ ಶ್ರೀ ಜೈನಮಠಕ್ಕೆ ಸೇರಿದ ಶ್ರೀ ಕ್ಷೇತ್ರಪಾಲ ದೇವಸ್ಥಾನದ ಬಾಗಿಲಿನ ಚಿಳಕದ ಕೊಂಡಿಯನ್ನು ಮುರಿದು ಕಳ್ಳತನಕ್ಕೆ ಪ್ರಯತ್ನಿಸಿದ್ದು,  ಆದಿನಾಥ ಮಂದಿರದ ಪ್ರಧಾನ ಬಾಗಿಲಿನ ಕೊಂಡಿಯನ್ನು ಯಾವದೋ ಗಟ್ಟಿಯಾದ ವಸ್ತುವಿನಿಂದ ಮೀಟಿ ತೆಗೆದು ದೇವಸ್ಧಾನದೊಳಕ್ಕೆ ಪ್ರವೇಶಿಸಿ ಅಲ್ಲಿದ್ದ ಕಾಣಿಕೆ ಹುಂಡಿಯ ಬಾಗಿಲನ್ನು ಮೀಟಿ ತೆಗೆದು ಅದರಲ್ಲಿದ್ದ ಸುಮಾರು 6000/-ರೂ ನಗದು ಹಣ, ದೇವಸ್ಥಾನಕ್ಕೆ ಅಳವಡಿಸಿದ್ದ ವಿಡಿಯೋ ಕ್ಯಾಮರಾಗೆ ಸಂಬAಧಿಸಿದ ಸುಮಾರು 3000/-ರೂ ಮೌಲ್ಯದ ಒಂದು ಡಿ.ವಿ.ಆರ್, ದೇವಸ್ಥಾನದ ಒಂದು ಪಾರ್ಶ್ವದಲ್ಲಿದ್ದ  ಚಕ್ರೇಶ್ವರ ದೇವಿ ಕೊರಳಿನಲ್ಲಿದ್ದ ತಲಾ 02 ಗ್ರಾಂ ತೂಕದ 01 ಬಂಗಾರದ ತಾಳಿಸರ, ಇನ್ನೊಂದು ಪಾರ್ಶ್ವದಲ್ಲಿದ್ದ ಪದ್ಮಾವತಿ ದೇವಿ ಕೊರಳಿನಲ್ಲಿದ್ದ ತಲಾ 02 ಗ್ರಾಂ ತೂಕದ 01 ಬಂಗಾರದ ತಾಳಿಸರ, ಹಾಗೂ ಪಾರ್ಶ್ವನಾಥ ಮಂದಿರದ ಮುಂದಿನ ಬಾಗಿಲಿನ ಲಾಲದಂಡೆಯ ಕೊಂಡಿಯನ್ನು ಮುರಿದು ಅಲ್ಲಿದ್ದ ಪದ್ಮಾವತಿ ದೇವಿ ಕೊರಳಿನಲ್ಲಿದ್ದ ತಲಾ 02 ಗ್ರಾಂ ತೂಕದ 01 ಬಂಗಾರದ ತಾಳಿಸರ ಹೀಗೆ ಒಟ್ಟೂ 18,000/-ರೂ ಮೌಲ್ಯದ ಸ್ವತ್ತುಗಳನ್ನು ನಂತರ ಶ್ರೀ ವೆಂಕಟ್ರಮಣ ದೇವಸ್ಥಾನದ ಮುಂದಿನ ಸ್ಟೀಲಿನ ಬಾಗಿಲಿಗೆ ವೆಲ್ಡಿಂಗ ಮಾಡಿ ಅಳವಡಿಸಿದ್ದ ಲಾಲದಂಡೆಯ ಬೀಗ ಹಾಕುವ ಕೊಂಡಿಯನ್ನು ಮೀಟಿ ತೆಗೆದು ಅಲ್ಲಿಯ ಕಾಣಿಕೆ ಹುಂಡಿಯಲ್ಲಿದ್ದ ಸುಮಾರು 7000/-ರೂ ನಗದು ಹಣವನ್ನು ಮಾಡಿಕೊಂಡು ಹೋಗಿದ್ದು ಹೀಗೆ ಒಟ್ಟೂ 03 ದೇವಸ್ಥಾನದಲ್ಲಿ  ಸುಮಾರು 34,000/-ರೂ ಮೌಲ್ಯದ ಸ್ವತ್ತುಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಶ್ರೀ ಚಂದ್ರರಾಜ ತಂದೆ ಶೇಖರ ಜೈನ್ ಪ್ರಾಯ;44 ವರ್ಷ, ವೃತ್ತಿ ಕೃಷಿ ಹಾಗೂ ಸೊಂದಾ ಜೈನಮಠದ  ಅಧ್ಯಕ್ಷರು,    ಸಾ: ವಾದಿರಾಜಮಠ, ಪೋಸ್ಟ; ಸೊಂದಾ, ತಾ:ಶಿರಸಿ. ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 

9) ಹಳಿಯಾಳ ಪೊಲೀಸ್ ಠಾಣೆ  ಪ್ರಕರಣ ಸಂಖ್ಯೆ: 193/2021 ಕಲಂ : 279, 304(ಎ) ಐ.ಪಿ.ಸಿ. ನೇದ್ದರ ವಿವರ: ದಿನಾಂಕ : 17-12-2021 ರಂದು 21-15 ಗಂಟೆಗೆ ಆಪಾದಿತ  1) ದರ್ಶನ ತಂದೆ ಪ್ರದೀಪ್ ಅಂಬಿಪಿ ಪ್ರಾಯ-29 ವರ್ಷ, ವೃತ್ತಿ-ಕೃಷಿ ಸಾ|| ಹವಗಿ, ಹಳಿಯಾಳ ತಾಲೂಕ ಇವನು ತನ್ನ ಬಾಬ್ತು ಕಾರ ನಂ : ಕೆ.ಎ-65/ಎಮ್-0341 ನೇದನ್ನು ಹಳಿಯಾಳ ಶಿವಾಜಿ ಸರ್ಕಲ್ ಕಡೆಯಿಂದ ಯಲ್ಲಾಪುರ ನಾಕಾ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ, ಯಲ್ಲಾಪುರ ನಾಕಾ ಹತ್ತಿರ ಯಾವುದೇ ಸನ್ನೇ ಸೂಚನೇ ನೀಡದೇ, ಇಂಡಿಕೇಟರ್ ಸೂಚನೆ ನೀಡದೇ ಒಮ್ಮೇಲೆ ತನ್ನ ಕಾರನ್ನು ನಿಧಾನಗೊಳಿಸಿದ್ದರಿಂದ ಕಾರ ಹಿಂದಿನಿಂದ  ಮೋಟರ್ ಸೈಕಲ್ಲ ನಂ : ಕೆ.ಎ-65/ಇ-8329 ನೇದರ ಹಿಂಬದಿಯಲ್ಲಿ ಮೃತ ಸಿದ್ದಪ್ಪ ಚನ್ನಪ್ಪ ಸುಂಕದ ಇವನಿಗೆ ಕೂಡ್ರಿಸಿಕೊಂಡು ಮೋಟರ್ ಸೈಕಲ್ಲ ಚಲಾಯಿಸಿಕೊಂಡು ಬರುತ್ತಿದ್ದ ಆಪಾದಿತ 2)  ಸತೀಶ ತಂದೆ ಬಾಳಕೃಷ್ಣ ಗೌಡಾ ಪ್ರಾಯ-26 ವರ್ಷ, ವೃತ್ತಿ-ಕೃಷಿ ಕೆಲಸ ಸಾ|| ಹೊರಗಿನ ಗುತ್ತಿಗೇರಿ, ಹಳಿಯಾಳ ಇವನು ತನ್ನ ಮೋಟರ್ ಸೈಕಲ್ಲನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ, ಮೋಟರ್ ಸೈಕಲ್ಲ ವೇಗ ನಿಯಂತ್ರಿಸಲಾಗದೇ ಕಾರಿನ ಬಲಬದಿಯ ಎರಡು ಡೊರಗಳಿಗೆ ತಾಗಿಸಿ ಅಪಘಾತಪಡಿಸಿದ್ದರಿಂದ ಮೋಟಾರ್  ಸೈಕಲ್ ಹಿಂಬದಿ ಸವಾರ ಸಿದ್ದಪ್ಪ ಚನ್ನಪ್ಪ ಸುಂಕದ ಇವರು ರಸ್ತೆಯಲ್ಲಿ ಬಿದ್ದು ತಲೆಗೆ ಪೆಟ್ಟಾಗಿ ಮೃತಪಟ್ಟ ಬಗ್ಗೆ , ಶ್ರೀ ಶಿವಾನಂದ ತಂದೆ ಚಂದ್ರಶೇಖರ ಶೇಟ್ಟರ್ ಪ್ರಾಯ-56 ವರ್ಷ, ವೃತ್ತಿ-ಕಿರಾಣಿ ಅಂಗಡಿ ವ್ಯಾಪಾರ ಜಾತಿ-ಹಿಂದೂ ವೀರಶೈವ ಲಿಂಗಾಯತ ಸಾ|| ಮೇನ್ ಬಜಾರ, ಹಳಿಯಾಳ ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

  

======||||||||====== 

ದೈನಂದಿನ ಅಸ್ವಾಭಾವಿಕ ಮರಣ ಪ್ರಕರಣ ವರದಿ

ದಿನಾಂಕ:- 17-12-2021

at 00:00 hrs to 24:00 hrs.

 

1) ಚಿತ್ತಾಕುಲಾ ಪೊಲೀಸ್ ಠಾಣೆ  ಅಸ್ವಾಭಾವಿಕ ಮರಣ ಪ್ರಕರಣ ಸಂಖ್ಯೆ: 15/2021  ಕಲಂ : 174 ಸಿ.ಆರ್.ಪಿ.ಸಿ. ನೇದ್ದರ ವಿವರ: ದಿನಾಂಕಃ16-12-2021 ರಂದು  22-33 ಗಂಟೆಯಿಂದ  ದಿನಾಂಕಃ 16-12-2021 ರ 22-36 ಗಂಟೆಯ ನಡುವಿನ ಅವಧಿಯಲ್ಲಿ / ಕಣಸಗಿರಿ ಕಾಳಿ ನದಿಯ ಸೇತುವೆಯ ಹತ್ತೀರ  ರೇಲ್ವೆ ಟ್ರ್ಯಾಕ್  ಮೇಲೆ ಕೀಮಿ ಕಲ್ಲು 495/4 -495/5 ನೇದರ ಮದ್ಯೆ ಗೂಡ್ಸ ತೊಕುರು ಸ್ಪೆಸಿಯಲ್ ಸಿಲೆಂಡರ ರೈಲ್ವೆ ಬರುತ್ತಿರುವಾಗ ಸುಮಾರು 28-32 ವರ್ಷ ವಯಸ್ಸಿನ ಅಪರಿಚಿತ ಗಂಡಸು ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ಚಲಿಸುತ್ತಿರುವ ಟ್ರೇನ್  ಎದುರುಗಡೆ ಟ್ರ್ಯಾಕ್ ಗೆ ಹಾರಿ ಟ್ರೇನ್ ಗೆ ಸಿಲುಕಿ ತಲೆಯ ಭಾಗಕ್ಕೆ ಗಾಯವಾಗಿ ಸ್ಥಳದಲ್ಲಿಯೇ ಮರಣ ಪಟ್ಟ ಬಗ್ಗೆ ಮಹೇಶ್ವರ ತಂದೆ ವಿಠ್ಠಲ ನಾಯ್ಕ ಪ್ರಾಯ-58 ವರ್ಷ, ಉದ್ಯೋಗ-ಸ್ಟೇಷನ ಮಾಸ್ಟರ್ ಸಾಃ ಅಸ್ನೋಟಿ ರೈಲ್ವೆ ನಿಲ್ದಾಣ ಖಾಯಂ ವಿಳಾಸ-ಸಾಯಿ ಮಂದಿರ ಹತ್ತೀರ ಗಿಂಡಿವಾಡ ನಂದನಗದ್ದಾ,ಕಾರವಾರ ಇವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 

======||||||||====== 

Last Updated: 04-01-2022 11:56 AM Updated By: SP KARWAR


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Uttara Kannada District Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080