ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 17-02-2021

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 15/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹಸನ್, ಸಾ|| ರಾಜಸ್ಥಾನ (ಲಾರಿ ನಂ: ಎಚ್.ಆರ್-55/ಎಸ್-7005 ನೇದರ ಚಾಲಕ). ದಿನಾಂಕ: 17-02-2021 ರಂದು 12-30 ಗಂಟೆಯ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ಗಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಗಾಯಾಳು ಹರಿಶ್ಚಂದ್ರ ತಂದೆ ದಾಮೋದರ ಗಾವಡಿ ಇತನು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-8020 ನೇದನ್ನು ಚಲಾಯಿಸಿಕೊಂಡು ಬರ್ಗಿಯ ಮಹಾಲಿಂಗೇಶ್ವರ ದೇವಸ್ಥಾನದಿಂದ ಮಾದನಗೇರಿ ಕಡೆಗೆ ಹೋಗುತ್ತಿರುವಾಗ ಆತನ ಹಿಂದಿನಿಂದ ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಹೋಗಲು ಬರುತ್ತಿದ್ದ ಲಾರಿ ನಂ: ಎಚ್.ಆರ್-55/ಎಸ್-7005 ನೇದರ ಚಾಲಕನಾದ ನಮೂದಿತ ಆರೋಪಿತನು ತನ್ನ ಲಾರಿಯಿನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಮೋಟಾರ್ ಸೈಕಲ್ ಬಲಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಿಗೆ ರಸ್ತೆಯಲ್ಲಿ ಬೀಳಿಸಿ, ಆತನ ತಲೆ ಹಾಗೂ ಮೂಗು ಮತ್ತು ಭುಜಕ್ಕೆ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಲೋಲಾಕ್ಷ ತಂಧೆ ತಿಮ್ಮಪ್ಪ ಗಾವಡಿ, ಪ್ರಾಯ-60 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಸೋಡಿಗದ್ದೆ, ಬರ್ಗಿ, ತಾ: ಕುಮಟಾ ರವರು ದಿನಾಂಕ: 17-02-2021 ರಂದು 16-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 16/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂದೀಪ ತಂದೆ ಶಿವಪ್ಪ ಹೆಬಸೂರ, ಪ್ರಾಯ-25 ವರ್ಷ, ಸಾ|| ಸತ್ತೂರ, ಧಾರವಾಡ (ಮೋಟಾರ್ ಸೈಕಲ್ ನಂ: ಕೆ.ಎ-25/ಎಚ್.ಸಿ-7431 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 09-02-2021 ರಂದು 02-30 ಗಂಟೆಯ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ತದಡಿ ರಸ್ತೆಯಲ್ಲಿ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-25/ಎಚ್.ಸಿ-7431 ನೇದರಲ್ಲಿ ಪಿರ್ಯಾದಿಗೆ ಸದರ ಮೋಟಾರ್ ಸೈಕಲ್ ಹಿಂಬದಿಗೆ ಕೂಡ್ರಿಸಿಕೊಂಡು ಮಾದನಗೇರಿ ಕಡೆಯಿಂದ ಗೋಕರ್ಣದ ಹತ್ತಿರವಿರುವ ತದಡಿ ರೋಡಿನಲ್ಲಿ ಗೋಕರ್ಣ ಕಡೆಗೆ ಬರುತ್ತಿದ್ದಾಗ ತದಡಿ ರಸ್ತೆಯಿಂದ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ತಿರುವಿನಲ್ಲಿ ತನ್ನ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು ಮೋಟಾರ್ ಸೈಕಲ್ ಕೆಡವಿ ಅಪಘಾತ ಪಡಿಸಿ, ಪಿರ್ಯಾದಿಯ ಎಡಗೈಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ರಾಘವೇಂದ್ರ ತಂದೆ ಅಣ್ಣಪ್ಪ ಸಂಗೀತ್, ಪ್ರಾಯ-25 ವರ್ಷ, ವೃತ್ತಿ-ವ್ಯಾಪಾರ, ಸಾ|| 2 ನೇ ಕ್ರಾಸ್, ನವನಗರ, ಹುಬ್ಬಳ್ಳಿ ರವರು ದಿನಾಂಕ: 17-02-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 17/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರವೀಣ ತಂದೆ ನಾರಾಯಣ ದೇವಾಡಿಗ, ಪ್ರಾಯ-26 ವರ್ಷ, ವೃತ್ತಿ-ಶಿಲ್ಪಿ ಕೆಲಸ, ಸಾ|| ವೆಂಕ್ಟಾಪುರ, ತಾ: ಭಟ್ಕಳ (ಹೀರೋ ಸೂಪರ್ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ: ಕೆ.ಎ-47/ವಿ-1271 ನೇದರ ಸವಾರ), 2]. ಹರೀಶ ಗಣಪತಿ ನಾಯ್ಕ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ಶಿರಾಣಿ ಬಸ್ತಿ, ಕಾಯ್ಕಿಣಿ ತಾ: ಭಟ್ಕಳ (ಬೊಲೆರೋ ವಾಹನ ನಂ: ಕೆ.ಎ-47/3360 ನೇದರ ಚಾಲಕ). ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 17-02-2021 ರಂದು ಬೆಳಿಗ್ಗೆ 08-30 ಗಂಟೆಯ ಸುಮಾರಿಗೆ ತಾನು ಚಲಾಯಿಸುತ್ತಿದ್ದ ಹೀರೋ ಸೂಪರ್ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ: ಕೆ.ಎ-47/ವಿ-1271 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ವೆಂಕ್ಟಾಪುರ ಕಡೆಯಿಂದ ಮುರ್ಡೇಶ್ವರ ಕಡೆಗೆ ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದವನು, ಗುಮ್ಮನಹಕ್ಲ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಆರೋಪಿ 2 ನೇಯವನು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ವಾಹನಗಳು ಓಡಾಡುವುದನ್ನು ತಿಳಿದು ರಸ್ತೆಯ ಪಕ್ಕ ಅಡ್ಡಾವಾಗಿ ತನ್ನ ಬೊಲೆರೋ ವಾಹನ ನಂ: ಕೆ.ಎ-47/3360 ನೇದನ್ನು  ನಿಷ್ಕಾಳಜಿತನದಿಂದ ಮುರ್ಡೇಶ್ವರ ಕಡೆಗೆ ಮುಖ ಮಾಡಿ ನಿಲ್ಲಿಸಿದ್ದು, ಓಡಾಡುವ ವಾಹನಕ್ಕೆ ಅಡೆತಡೆ ಮಾಡಿದ್ದರಿಂದ ಆರೋಪಿ 1 ನೇಯವನು ತನ್ನ ವಾಹನವನ್ನು ಬಂದ ವೇಗದಲ್ಲಿಯೇ ನಿಲ್ಲಿಸಿಟ್ಟಿದ್ದ ಬೊಲೆರೋ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದು ಸಿಡಿದು ರಸ್ತೆಯ ಮೇಲೆ ಬಿದ್ದು, ತನ್ನ ಎಡಗೈ ಭುಜದ ಹತ್ತಿರ, ಎಡಗಾಲಿನ ಮೊಣಗಂಟಿನ ಹತ್ತಿರ ಮೂಳೆ ಮುರಿಯುವ ಹಾಗೆ ಭಾರೀ ಸ್ವರೂಪದ ಗಾಯನೋವು ಪಡಿಪಡಿಸಿಕೊಂಡಿದ್ದು, ಈ ಅಪಘಾತಕ್ಕೆ  ಎರಡು ವಾಹನ ಚಾಲಕರ ನಿಷ್ಕಾಳಜಿತನವೇ ಕಾರಣವಾಗಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಆನಂದ ತಂದೆ ಮಂಜುನಾಥ ದೇವಾಡಿಗ, ಪ್ರಾಯ-46 ವರ್ಷ, ವೃತ್ತಿ-ಗುತ್ತಿಗೆದಾರ, ಸಾ|| ಶಿರಾಲಿ-1, ಮೊಳಿನಮನೆ, ತಾ: ಭಟ್ಕಳ ರವರು ದಿನಾಂಕ: 17-02-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 25/2021, ಕಲಂ: 341, 332, 353, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಇಕ್ರಾಸ್ ಮುನಿರಿ ತಂದೆ ಅಬ್ದುಲ್ ಹಕ್ ಮುನಿರಿ, ಸಾ|| ಜಾಮೀಯಾಬಾದ್ ರಸ್ತೆ, ತಾ: ಭಟ್ಕಳ (ಸಿಮೆಂಟ್ ಸೆಂಟರ್) ಹಾಗೂ ಮತ್ತೊಬ್ಬ ಅಪರಿಚಿತ ವ್ಯಕ್ತಿ. ದಿನಾಂಕ: 16-02-2021 ರಂದು ಸಾಯಂಕಾಲ ಭಟ್ಕಳ ವ್ಯಾಪ್ತಿಯ ಜಾಲಿ ಗ್ರಾಮದ ಅರಣ್ಯ ಸರ್ವೇ ನಂ: 71 ರ ಮೂಸಾನಗರ ಓಯಾಸಿಸ್ ಕಟ್ಟಡದ ಎದುರು ಅತಿಕ್ರಮಣ ಜಾಗದಲ್ಲಿ ಆರೋಪಿ ಇಕ್ರಾಸ್ ಈತನು ಕಟ್ಟಡ ಕಟ್ಟಿ ಸೆಂಟ್ರಿಂಗ್ ಹಾಕುತ್ತಿರುವದನ್ನು ಪಿರ್ಯಾದಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಶ್ರೀ ವಿನಾಯಕ ಎನ್. ಈಳಗೇರ ಇವರು ಕೂಡಿ ಸೆಂಟ್ರಿಂಗ್ ಖುಲ್ಲಾ ಪಡಿಸಿ, ಸೆಂಟ್ರಿಂಗ್ ಸಾಮಾನುಗಳನ್ನು ಜಪ್ತ ಪಡಿಸಿಕೊಂಡು ಬರುವಾಗ ಸಾಯಂಕಾಲ 05-30 ಗಂಟೆಯ ಸುಮಾರಿಗೆ ಭಟ್ಕಳ ಶಹರದ ನವಾಯತ್ ಕಾಲೋನಿಯಲ್ಲಿರುವ ತಾಲೂಕಾ ಕ್ರೀಡಾಂಗಣದ ಹತ್ತಿರ ರಸ್ತೆಯ ಮೇಲೆ ಆರೋಪಿ ಇಕ್ರಾಸ್ ಮುನಿರಿ ಈತನು ತನ್ನ ಬಿಳಿ ಬಣ್ಣದ ಹೋಂಡಾ ಎಕ್ವಿವಾ-125 ದ್ವಿಚಕ್ರ ವಾಹನ ನಂ: ಕೆ.ಎ-47/ಎಸ್-1081 ನೇದರಲ್ಲಿ ಬಂದು ಪಿರ್ಯಾದಿಯವರು ಚಾಲನೆ ಮಾಡಿಕೊಂಡು ಬರುತ್ತಿದ್ದ ಇಲಾಖಾ ದ್ವಿಚಕ್ರ ವಾಹನ ನಂ: ಕೆ.ಎ-47/ಜಿ-0053 ನೇದಕ್ಕೆ ರಸ್ತೆಯ ಮೇಲೆ ತಡೆದು ಅಡ್ಡಗಟ್ಟಿ ತನ್ನ ಮೋಟಾರ್ ಸೈಕಲಿನಿಂದ ಪಿರ್ಯಾದಿಯವರ ವಾಹನಕ್ಕೆ ಗುದ್ದಲು ಪ್ರಯತ್ನಿಸಿ ಪಿರ್ಯಾದಿಗೆ ಮತ್ತು ಉಪವಲಯ ಅರಣ್ಯಾಧಿಕಾರಿ ಶ್ರೀ ವಿನಾಯಕ ಎನ್. ಈಳಗೇರ ಇವರಿಗೆ ಹಿಂದಿ ಭಾಷೆಯಲ್ಲಿ ‘ಕುತ್ತೆ, ಹರಾಮಖೋರ್, ನಾಲಾಯಕ್, ತುಮ್ ಫಾರೆಸ್ಟ್ ಲೋಗ್ ಚೂತ್ಯಾ ಹೈ, ಪೈಸಾ ಖಾಕೇ ಘರ್ ತೋಡನೇ ಕೋ ಆತೇ ಹೈ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಪಿರ್ಯಾದಿಗೆ ಮತ್ತು ವಿನಾಯಕ ಎನ್. ಈಳಗೇರ ಇವರಿಗೆ ಮೈಮೇಲೆ ಕೈಯಿಂದ ಹೊಡೆದು ಹಲ್ಲೆ ಮಾಡಿ ಹೋದ ನಂತರ ಅಲ್ಲಿಗೆ ಬಂದ ಆರೋಪಿ 2 ನೇಯವನು ಆರೋಪಿ 1 ನೇಯವನೊಂದಿಗೆ ಸಂಗನಮತ ಮಾಡಿಕೊಂಡು ಬಂದು ‘ತಾನು ಎಕ್ವಿವಾ-125 ದ್ವಿಚಕ್ರ ವಾಹನ ನಂ: ಕೆ.ಎ-47/ಎಸ್-1081 ನೇದರ ಮಾಲಿಕನಾಗಿರುತ್ತೇನೆ. ಈ ಮೋಟಾರ್ ಸೈಕಲನ್ನು ತೆಗೆದುಕೊಂಡು ಹೋದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ’ ಅಂತಾ ಪಿರ್ಯಾದಿ ಮತ್ತು ಅವರ ಸಿಬ್ಬಂದಿಯರಿಗೆ ಧಮಕಿ ಹಾಕಿ, ಮೋಟಾರ್ ಸೈಕಲ್ ಹಿಡಿದುಕೊಂಡಿದ್ದ ಅರಣ್ಯ ಇಲಾಖೆಯ ದಿನಗೂಲಿ ನೌಕರ ಮಹೇಶ ಬಲೀಂದ್ರ ನಾಯ್ಕ ಇವರಿಗೆ ಕೈಯಿಂದ ಮೈಮೇಲೆ ಹೊಡೆದು ದೂಡಿ ಹಾಕಿ, ಮೋಟಾರ್ ಸೈಕಲನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಿ, ಪಿರ್ಯಾದಿ ಹಾಗೂ ಅವರ ಸಿಬ್ಬಂದಿಯವರಿಗೆ ಇಬ್ಬರು ಆರೋಪಿತರು ಕರ್ತವ್ಯಕ್ಕೆ ಅಡ್ಡಿ ಆತಂಕವನ್ನುಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಪ್ರವೀಣ ಎಮ್. ನಿಡಗುಂದಿ, ಪ್ರಾಯ-25 ವರ್ಷ, ವೃತ್ತಿ-ಉಪ ವಲಯ ಅರಣ್ಯಾಧಿಕಾರಿ ಹಾಡುವಳ್ಳಿ ಕಾಮಗಾರಿ ಪ್ರಭಾರ ಭಟ್ಕಳ ಗಸ್ತು, ಸಾ|| ಮಂಗಳೂರು, ಪೋ: ಶಿವಯೋಗ ಮಂದಿರ, ತಾ: ಬಾದಾಮಿ, ಜಿ: ಬಾಗಲಕೋಟ, ಹಾಲಿ ಸಾ|| ಅರಣ್ಯ ವಸತಿ ಗೃಹ, ತಾ: ಭಟ್ಕಳ ರವರು ದಿನಾಂಕ: 17-02-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 17/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 14-02-2021 ರಂದು ಸಂಜೆ 07-00 ಗಂಟೆಯಿಂದ ದಿನಾಂಕ: 16-02-2021 ರ ಸಂಜೆ 07-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯವರ ಮನೆಯ ಅಡುಗೆ ಕೋಣೆಯ ಮೇಲ್ಛಾವಣಿಯ ಹಂಚನ್ನು ತಗೆದು ಮನೆಯೊಳಗೆ ಬಂದು ಮನೆಯ ಹಾಲಿನಲ್ಲಿರುವ ಕಪಾಟನ್ನು ಮೀಟಿ ತೆಗೆದು ಕಪಾಟಿನೊಳಗಿದ್ದ ಬಂಗಾರದ ಆಭರಣಗಳಾದ 1). ಮಾಂಗಲ್ಯ ಸರ-1, ಅಂದಾಜು ತೂಕ 15 ಗ್ರಾಂ, ಅ||ಕಿ|| 45,000/- ರೂಪಾಯಿ, 2). ಬಂಗಾರದ ಬಳೆಗಳು-02, ಅಂದಾಜು ತೂಕ 20 ಗ್ರಾಂ, ಅ||ಕಿ|| 65,000/- ರೂಪಾಯಿ, 3). ಬಂಗಾರದ ಉಂಗುರ-01, 5 ಗ್ರಾಂ, ಅ||ಕಿ|| 15,000/- ರೂಪಾಯಿ, 4). ಕಿವಿ ಓಲೆ-01 ಜೊತೆ, ಅಂದಾಜು ತೂಕ 10 ಗ್ರಾಂ, ಅ||ಕಿ|| 30.000/- ರೂಪಾಯಿ ಹಾಗೂ ನಗದು ಹಣ 3,000/- ರೂಪಾಯಿಗಳು ಮತ್ತು ಬೆಡ್ ರೂಮಿನ ಶೋಕೇಸ್ ಒಳಗಿದ್ದ ಕಾಣಿಕೆ ಡಬ್ಬವನ್ನು ಒಡೆದು ತಗೆದು ಅದರಲ್ಲಿದ್ದ ಸುಮಾರು ಚಿಲ್ಲರೆ ಹಣ 500/- ರೂಪಾಯಿಗಳನ್ನು ಹೀಗೆ ಒಟ್ಟೂ 1,58,500/- ರೂಪಾಯಿಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಮೊಹಮ್ಮದ್ ಖುರೇಶ್ ತಂದೆ ಮೊಹಮ್ಮದ್ ಮೀರಸಾಬ್ ಮಸ್ತಾನ್, ಪ್ರಾಯ-43 ವರ್ಷ, ವೃತ್ತಿ-ಅಡಿಕೆ ವ್ಯಾಪಾರ, ಸಾ|| ನೂರ ಮಸೀದಿ ರಸ್ತೆ, ಕಸ್ತೂರಬಾ ನಗರ, ತಾ: ಶಿರಸಿ ರವರು ದಿನಾಂಕ: 17-02-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 45/2021, ಕಲಂ: 448, 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಜಬೀವುಲ್ಲಾ ಮಾಬುಬ್ ಮಕ್ತೆಸಾಬ್, ಸಾ|| ಚವ್ಹಾನ್ ಪ್ಲಾಟ್, ಹಳಿಯಾಳ ಶಹರ. ನಮೂದಿತ ಆರೋಪಿತನು ದಿನಾಂಕ: 17-02-2021 ರಂದು ಸಾಯಂಕಾಲ 19-30 ಗಂಟೆಗೆ ಪಿರ್ಯಾದಿಯ ಪಾನಶಾಪಿಗೆ ಹೋಗಿ ಸಿಗರೇಟ್ ಕೇಳಿದಾಗ ಪಿರ್ಯಾದಿಯು ‘ಹಣ ಕೊಡದೇ ಇದ್ದರೆ ಸಿಗರೇಟ್ ಕೊಡುವುದಿಲ್ಲ’ ಅಂತಾ ಹೇಳಿದ್ದಕ್ಕೆ ಆರೋಪಿತನು ಪಾನಶಾಪ್ ಅಂಗಡಿಯಲ್ಲಿ ಒಳಗೆ ಹೋಗಿ ಪಿರ್ಯಾದಿಗೆ ಕೈಯಿಂದ ದೂಡಿ ಕೆಳಗೆ ಬೀಳಿಸಿ ಹೊರ ಬಂದು ನಿಂತುಕೊಂಡವನಿಗೆ, ಪಿರ್ಯಾದಿಯು ‘ಯಾಕೆ ಹಾಗೇ ಮಾಡಿದೆ?’ ಅಂತಾ ಕೇಳಿದ್ದಕ್ಕೆ ಆರೋಪಿತನು ಕೈ ಮುಷ್ಠಿ ಆಕಾರದ ಕಲ್ಲಿನಿಂದ ತಲೆಗೆ ಹೊಡೆದು ‘ಈ ದಿವಸ ಉಳಿದುಕೊಂಡಿದ್ದೀಯಾ ಮಗನೇ, ನನ್ನ ಕೈಯಲ್ಲಿ ಸಿಗು. ನಿನಗೆ ನೋಡಿಕೊಳ್ಳುತ್ತೇನೆ’ ಅಂತಾ ಅವಾಚ್ಯವಾಗಿ ಬೈಯ್ದು ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಅಬ್ದುಲ್ ಲತೀಫ್ ತಂದೆ ಅಬ್ದುಲ್ ಮುನ್ನಾ, ವೃತ್ತಿ-ಪಾನಶಾಪ್ ವ್ಯಾಪಾರ, ಸಾ|| ಸಿದ್ಧರಾಮೇಶ್ವರ ಗಲ್ಲಿ, ಹಳಿಯಾಳ ಶಹರ ರವರು ದಿನಾಂಕ: 17-02-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 17-02-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

 

 

 

ಇತ್ತೀಚಿನ ನವೀಕರಣ​ : 18-02-2021 01:14 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080