ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 17-01-2022

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 06/2022, ಕಲಂ: ಮನುಷ್ಯ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮನುಷ್ಯ ಶ್ರೀ ಕೇಶವ ತಂದೆ ಶಾಂತಾ ನಾಯ್ಕ, ಪ್ರಾಯ-60 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹೆಬ್ಬುಳ, ತಾ: ಅಂಕೋಲಾ. ಪಿರ್ಯಾದಿಯ ತಂದೆಯಾದ ಇವರು ದಿನಾಂಕ: 16-01-2022 ರಂದು ಮಧ್ಯಾಹ್ನ 03-00 ಗಂಟೆಯಿಂದ ದಿನಾಂಕ: 17-01-2022 ರಂದು ಬೆಳಿಗ್ಗೆ 10-00 ಗಂಟೆಯ ನಡುವಿನ ಅವಧಿಯಲ್ಲಿ ತರಕು (ಒಣ ಎಲೆ) ತರಲು ಅಂಕೋಲಾ ತಾಲೂಕಿನ ಹೆಬ್ಬುಳದಲ್ಲಿರುವ ತನ್ನ ಮನೆಯಿಂದ ಹತ್ತಿರದ ಕಾಡಿಗೆ ಹೋದವನು ಎಲ್ಲಿಯೋ ಹೋಗಿ ಅಥವಾ ಯಾವುದೋ ಕಾರಣಕ್ಕೆ ಗಂಗಾವಳಿ ನದಿಯ ದಡದ ಹತ್ತಿರ ಹೋದವನು ನದಿಯ ನೀರಿನಲ್ಲಿ ಬಿದ್ದು ಕಾಣೆಯಾಗಿರುತ್ತಾನೆ. ಕಾರಣ ನನ್ನ ತಂದೆಯನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪವನ ತಂದೆ ಕೇಶವ ನಾಯ್ಕ, ಪ್ರಾಯ-18 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹೆಬ್ಬುಳ, ತಾ: ಅಂಕೋಲಾ ರವರು ದಿನಾಂಕ: 17-01-2022 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 21/2022, ಕಲಂ: 323, 324, 448, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ದಯಾ ರಾಮಾ ಖಾರ್ವಿ, ಪ್ರಾಯ-32 ವರ್ಷ, ಸಾ|| ರೋಷನ್ ಮೊಹಲ್ಲಾ, ಕಾಸರಕೋಡ, ತಾ: ಹೊನ್ನಾವರ, 2]. ಧರ್ಮಾ ರಾಮಾ ಖಾರ್ವಿ, ಪ್ರಾಯ-39 ವರ್ಷ, ಸಾ|| ಜ್ಯೋತಿನಗರ, ಕಾಸರಕೋಡ, ತಾ: ಹೊನ್ನಾವರ, 3]. ಸಂಜಯ ಮಂಜುನಾಥ ಖಾರ್ವಿ, ಪ್ರಾಯ-28 ವರ್ಷ, ಸಾ|| ಜನತಾ ವಿದಾಲಯ ಶಾಲೆಯ ಹತ್ತಿರ, ಕಾಸರಕೋಡ, ತಾ: ಹೊನ್ನಾವರ, 4]. ವಿದ್ಯಾ ದಯಾ ಖಾರ್ವಿ, ಪ್ರಾಯ-26 ವರ್ಷ, ಸಾ|| ರೋಷನ್ ಮೊಹಲ್ಲಾ, ಕಾಸರಕೋಡ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 16-01-2022 ರಂದು ರಾತ್ರಿ 20-30 ಗಂಟೆಯ ಸಮಯಕ್ಕೆ ಪಿರ್ಯಾದಿಯು ರೋಷನ್ ಮೊಹಲ್ಲಾ ಕಾಸರಕೋಡ ಹೊನ್ನಾವರದಲ್ಲಿರುವ ತನ್ನ ಮನೆಯಲ್ಲಿದ್ದಾಗ ಪಿರ್ಯಾದಿಯ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ, ‘ಲಾದ್ರು ಬೋಳಿ ಮಗನೆ, ಎಲ್ಲಿದ್ದಿಯಾ?’ ಎಂದು ಅವಾಚ್ಯ ಶಬ್ದಗಳಿಂದ ಬೈಯ್ದು, ಆರೋಪಿತರೆಲ್ಲರೂ ಒಟ್ಟಾಗಿ ಪಿರ್ಯಾದಿಯ ಶರ್ಟಿಗೆ ಕೈ ಹಾಕಿ ಎಳೆದಾಡಿ, ಆರೋಪಿತರು ಪಿರ್ಯಾದಿಗೆ ಕೈಯಿಂದ ಕೆನ್ನೆಯ ಮೇಲೆ, ಬೆನ್ನಿನ ಮೇಲೆ ಹೊಡೆದು ಹಾಗೂ ಬಡಿಗೆಯಿಂದ ಕೈ ಕಾಲಿನ ಮೇಲೆ ಹೊಡೆದಾಗ ಪಿರ್ಯಾದಿಯು ಕೂಗಿಕೊಂಡಾಗ ಮನೆಯ ಪಕ್ಕದಲ್ಲಿ ಕೆಲಸಕ್ಕೆ ಬಂದಿದ್ದ ರಿಚರ್ಡ್ ರುಜಾರ್ ಹೊರ್ಟಾ ರವರು ಪಿರ್ಯಾದಿಗೆ ಹೊಡೆಯುವುದನ್ನು ತಪ್ಪಿಸಿದಾಗ ಆರೋಪಿತರೆಲ್ಲರೂ ಪಿರ್ಯಾದಿಗೆ ಅಷ್ಟಕ್ಕೆ ಬಿಟ್ಟು ‘ಬೋಳಿ ಮಗನೆ, ಈ ದಿನ ತಪ್ಪಿಸಿಕೊಂಡೆ. ಇನ್ನೊಮ್ಮೆ ಸಿಕ್ಕಾಗ ನಿನ್ನನ್ನು ಕೊಂದು ಹಾಕುತ್ತೇವೆ’ ಅಂತ ಉಗ್ರ ಧಮಕಿ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಲಾದ್ರು ತಂದೆ ಡುಮ್ಮಿಂಗ್ ಫರ್ನಾಂಡೀಸ್, ಪ್ರಾಯ-43 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ರೋಷನ್ ಮೊಹಲ್ಲಾ, ಕಾಸರಕೋಡ, ತಾ: ಹೊನ್ನಾವರ ರವರು ದಿನಾಂಕ: 17-01-2022 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 22/2022, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಗೋಯ್ದು ತಂದೆ ಶಂಕರ ಪಟಗಾರ, ಪ್ರಾಯ-51 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೆಗಡೆ, ತಾ: ಕುಮಟಾ ಮತ್ತು ಇನ್ನಿತರರು. ಈ ನಮೂದಿತ ಆರೋಪಿತರು ದಿನಾಂಕ: 17-01-2022 ರಂದು 17-00 ಗಂಟೆಗೆ ಹೊನ್ನಾವರ ತಾಲೂಕಿನ ಚಂದಾವರ ತರಗೋಡ ಗ್ರಾಮದ ಸಾರ್ವಜನಿಕ ಅರಣ್ಯ ಪ್ರದೇಶದಲ್ಲಿ ಕೋಳಿ ಹುಂಜಗಳನ್ನು ಎರಡು ಕಡೆಯಿಂದಲು ಕಾದಾಡಲು ಬಿಟ್ಟು ತಮ್ಮ ಲಾಭಕ್ಕೋಸ್ಕರ ಅವುಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿ ಕೋಳಿ ಅಂಕ ಜೂಜಾಟ ಆಡುತ್ತಿದ್ದಾಗ ದಾಳಿಯ ವೇಳೆ 1). ಒಟ್ಟು ನಗದು ಹಣ 800/- ರೂಪಾಯಿ, 2). ಕೋಳಿ ಹುಂಜ-3, ಅ||ಕಿ|| 600/- ರೂಪಾಯಿ, 3). ಹೋಂಡಾ ಶೈನ್ ಮೋಟಾರ್ ಸೈಕಲ್ ನಂ: ಕೆ.ಎ-47/ವಿ-2330-1, ಅ||ಕಿ|| 10,000/- ರೂಪಾಯಿ, 4). ಹೋಂಡಾ ಎಕ್ಟಿವಾ ಸ್ಕೂಟಿ ನಂ: ಕೆ.ಎ-47/ಕ್ಯೂ-9741-1, ಅ||ಕಿ|| 5,000/- ರೂಪಾಯಿ, 5). ನಂಬರ್ ಪ್ಲೇಟ್ ಇಲ್ಲದ ಹಳೆಯ ಹೀರೋ ಹೋಂಡಾ ಕಂಪನಿಯ ಮೋಟಾರ್ ಸೈಕಲ್-1, ಅ||ಕಿ|| 5,000/- ರೂಪಾಯಿ ನೇದವುಗಳೊಂದಿಗೆ ಆರೋಪಿ 1 ನೇಯವನು ಸೆರೆ ಸಿಕ್ಕಿದ್ದು ಹಾಗೂ ಇನ್ನುಳಿದ ಆರೋಪಿತರು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಸಾವಿತ್ರಿ ಎ ನಾಯಕ, ಡಬ್ಲ್ಯೂ.ಪಿ.ಎಸ್.ಐ (ತನಿಖೆ-3), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 17-01-2022 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 23/2022, ಕಲಂ: 323, 341, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಲಾದ್ರು ತಂದೆ ಡುಮ್ಮಿಂಗ್ ಫರ್ನಾಂಡೀಸ್, ಪ್ರಾಯ-43 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ರೋಷನ್ ಮೊಹಲ್ಲಾ, ಕಾಸರಕೋಡ, ತಾ: ಹೊನ್ನಾವರ. ದಿನಾಂಕ: 17-01-2022 ರಂದು ಸಾಯಾಂಕಾಲ 18-00 ಗಂಟೆಗೆ ಪಿರ್ಯಾದಿಯು ಕೆಲಸ ಮುಗಿಸಿ ವಾಪಸ್ ಮನೆಗೆ ಹೋಗುತ್ತಿದ್ದಾಗ, ಕಾಸರಕೋಡ ಹಿರೆಬೈಲಿನ ಪಿರ್ಯಾದಿಯ ಮನೆಯ ಹತ್ತಿರದ ರಸ್ತೆಯಲ್ಲಿ ನಮೂದಿತ ಆರೋಪಿತನು ಪಿರ್ಯಾದಿಯನ್ನು ಅಡ್ಡಗಟ್ಟಿ ‘ಬೋಳಿ ಮಗನೆ, ನಿಲ್ಲು. ಇವತ್ತು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ’ ಅಂತಾ ಹೇಳಿ ಏಕಾಏಕಿ ಪಿರ್ಯಾದಿಯ ಮೇಲೆರಗಿ ಕೈಗಳಿಂದ ಪಿರ್ಯಾದಿಯ ಮೈಮೇಲೆ ಹೊಡೆದಿದ್ದು, ಆಗ ಪಿರ್ಯಾದಿಯು ಆರೋಪಿತನು ಹೊಡೆಯುವುದನ್ನು ತಪ್ಪಿಸಿಕೊಂಡು ತಮ್ಮ ಮನೆಯ ಗೇಟ್ ಒಳಗೆ ಹೋಗಿದ್ದು, ಗಲಾಟೆಯ ಶಬ್ದ ಕೇಳಿ ಪಿರ್ಯಾದಿಯ ಹೆಂಡತಿಯು ಮನೆಯಿಂದ ಹೊರಗಡೆ ಬಂದಾಗ, ಆರೋಪಿತನು ಒಂದು ಕತ್ತಿಯನ್ನು ಹಿಡಿದುಕೊಂಡು ಬಂದು ಪಿರ್ಯಾದಿ ಹಾಗೂ ಪಿರ್ಯಾದಿಯ ಹೆಂಡತಿಗೆ ಕತ್ತಿಯನ್ನು ತೋರಿಸಿ, ಪಿರ್ಯಾದಿ ಹಾಗೂ ಪಿರ್ಯಾದಿಯ ಹೆಂಡತಿಗೆ ಉದ್ದೇಶಿಸಿ ‘ಬೋಳಿ ಮಕ್ಕಳಾ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ‘ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಕುಟುಂಬ ಸಮೇತ ಕೊಲೆ ಮಾಡಿ ಹೊಳೆಗೆ ಹಾಕುತ್ತೇನೆ’ ಅಂತಾ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ದಯಾನಂದ ತಂದೆ ರಾಮಾ ಖಾರ್ವಿ, ಪ್ರಾಯ-38 ವರ್ಷ, ವೃತ್ತಿ-ಬಿಲ್ ಕಲೆಕ್ಟರ್, ಸಾ|| ಹಿರೇಬೈಲ್, ರೋಷನ್ ಮೋಹಲ್ಲಾ, ಕಾಸರಕೋಡ ತಾ: ಹೊನ್ನಾವರ ರವರು ದಿನಾಂಕ: 17-01-2022 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 07/2022, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಂದೀಶ ತಂದೆ ವಿಠ್ಠಲ ಮೇಸ್ತ, ಸಾ|| ತುಳಸಿ ನಗರ, ತಾ: ಹೊನ್ನಾವರ (ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-2013 ನೇದರ ಸವಾರ). ಪಿರ್ಯಾದಿಯ ಅತ್ತಿಗೆಯಾದ ಶ್ರೀಮತಿ ಸುರೇಖಾ ಮಂಜುನಾಥ ದೇವಡಿಗ, ಪ್ರಾಯ-45 ವರ್ಷ, ವೃತ್ತಿ-ಆಶಾ ಕಾರ್ಯಕರ್ತೆ, ಸಾ|| ಕಾಯ್ಕಿಣಿ, ಕುಂಬಾರಕೇರಿ, ಮುರ್ಡೇಶ್ವರ, ತಾ: ಭಟ್ಕಳ ಇವರು ದಿನಾಂಕ: 16-01-2021 ರಂದು ಮನೆ ಬಳಕೆ ಸಾಮಾನು ತರಲು ಅಂತಾ ಬಾಕಡಕೇರಿಯಲ್ಲಿ ಹೆದ್ದಾರಿಯ ಪಕ್ಕ ಇರುವ ರಾಘವೇಂದ್ರ ಶೆಟ್ಟಿ ಇವರ ಅಂಗಡಿಗೆ ಹೋಗಲು ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿಯನನ್ನು ದಾಟಿ, ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಹಾಯ್ದಿರುವ ಹೆದ್ದಾರಿ ದಾಟುತ್ತಿದ್ದಾಗ ಸಾಯಂಕಾಲ 07-30 ಗಂಟೆಯ ಸುಮಾರಿಗೆ ನಮೂದಿತ ಆರೋಪಿತನು ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-2013 ನೇದನ್ನು ಮುರ್ಡೇಶ್ವರ ಕಡೆಯಿಂದ ಭಟ್ಕಳ ಕಡೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹೆದ್ದಾರಿ ದಾಟುತ್ತಿದ್ದ ಶ್ರೀಮತಿ ಸುರೇಖಾ ಮಂಜುನಾಥ ದೇವಡಿಗ ರವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಶ್ರೀಮತಿ ಸುರೇಖಾ ಇವಳಿಗೆ ಮೊಣಗಂಟಿನ ಕೆಳಗೆ ಎರಡೂ ಕಾಲುಗಳಿಗೆ ಗಂಭೀರವಾಗಿ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತಾನು ಕೂಡಾ ತಲೆಗೆ ಗಂಭೀರವಾಗಿ ಗಾಯ ಪಡಿಸಿಕೊಂಡು, ಕೈ ಕಾಲುಗಳಿಗೂ ತೆರಚಿದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಸತೀಶ ತಂದೆ ಈರಯ್ಯ ದೇವಡಿಗ, ಪ್ರಾಯ-52 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕ್ರಿಶ್ಚಿಯನ್ ಕೇರಿ, ಬೈಲೂರ, ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 17-01-2022 ರಂದು 12-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 11/2022, ಕಲಂ: 279, 337, 283 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಮನ್ ರಾವ್, ಪ್ರಾಯ-48 ವರ್ಷ, ವೃತ್ತಿ-ಚಾಲಕ, ಸಾ|| ಬದ್ರಾಚಲಮ್, ಬದರಾತ್ರಿ ಕೋತಗೊಂಡೆಮ್, ತೆಲಂಗಾಣ ರಾಜ್ಯ (ಲಾರಿ ನಂ: ಎ.ಪಿ-24/ಟಿ.ಬಿ-9288 ನೇದರ ಚಾಲಕ). ಈತನು ದಿನಾಂಕ: 16-01-2022 ರಂದು 22-15 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಶಿರಲೆ ಫಾಲ್ಸ್ ಹತ್ತಿರ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು (ಲಾರಿ ನಂ: ಎ.ಪಿ-24/ಟಿ.ಬಿ-9288 ನೇದನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು ಲಾರಿಯ ಮೇಲಿನ ನಿಯಂತ್ರಣ ತಪ್ಪಿ ರಸ್ತೆ ಎಡಬದಿ ಮಗ್ಗಲಾಗಿ ಪಲ್ಟಿ ಕೆಡವಿ ಅಪಘಾತ ಪಡಿಸಿ, ಲಾರಿಯನ್ನು ಜಖಂಗೊಳಿಸಿದ್ದಲ್ಲದೇ, ರಸ್ತೆಯ ಮೇಲೆ ಪಲ್ಟಿ ಕೆಡವಿದ್ದರಿಂದ ಇತರೇ ವಾಹನಗಳ ಸಂಚಾರಕ್ಕೆ ಅಡೆ ತಡೆಯಾಗುವಂತೆ ಮಾಡಿದಲ್ಲದೇ, ಆರೋಪಿ ಲಾರಿ ಚಾಲಕನು ತನಗೂ ಸಹ ಮೈ ಕೈಗೆ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗಸೂರ್ಯ ತಂದೆ ಬುಚ್ಚಿರಾಮಲು ಮೀರಿಯಾಲ್, ಪ್ರಾಯ-29 ವರ್ಷ, ವೃತ್ತಿ ಲಾರಿ ಕ್ಲೀನರ್, ಸಾ|| ಎನ್.ಪಿ ರೆಡ್ಡಿಪಾಲಮಂ, ಪೋ: ಬೊರಕಮ್ಮ ಪಹಾಡ್, ತಾ: ಬೊರಕಮ್ಮ ಪಹಾಡ್, ಜಿ: ಬದರಾತ್ರಿ ಕೋತಗೊಂಡೆಮ್, ತೆಲಂಗಾಣ ರಾಜ್ಯ ರವರು ದಿನಾಂಕ: 17-01-2022 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 12/2022, ಕಲಂ: 279, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಗಣೇಶ ತಂದೆ ಮಡೂರು ಪ್ರಜಾರಿ, ಪ್ರಾಯ-40 ವರ್ಷ, ವೃತ್ತಿ-ಓಮಿನಿ ಕಾರ್ ಚಾಲಕ, ಸಾ|| ತಟ್ಟಿಗದ್ದೆ, ವಾನಳ್ಳಿ, ತಾ: ಶಿರಸಿ (ಓಮಿನಿ ಕಾರ್ ನಂ: ಕೆ.ಎ-04/ಎಮ್.ಎಫ್-7510 ನೆದರ ಚಾಲಕ), 2]. ಜಗದೀಶ ತಂದೆ ಮೋಹನ ನಾಯ್ಕ, ಪ್ರಾಯ-44 ವರ್ಷ, ವೃತ್ತಿ-ಪಂಚಾಯತಿ ವಾಲಮನ್, ಸಾ|| ಉಮ್ಮಚಗಿ, ತಾ: ಯಲ್ಲಾಪುರ (ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-8674 ನೆದರ ಸವಾರ). ಈ ನಮೂದಿತ ಆರೋಪಿತರ ಪೈಕಿ ಆರೋಪಿ 1 ನೇಯವನು ತನ್ನ ಬಾಬ್ತು ಓಮಿನಿ ಕಾರ್ ನಂ: ಕೆ.ಎ-04/ಎಮ್.ಎಫ್-7510 ನೇದನ್ನು  ಶಿರಸಿ ಕಡೆಯಿಂದ ಯಲ್ಲಾಪುರ ಕಡೆಗೆ ಹಾಗೂ ಆರೋಪಿ 2 ನೇಯವನು ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-8674 ನೇದರ ಮೇಲೆ ಗಾಯಾಳು ಶ್ರೀಮತಿ ರೇಣುಕಾ ಕೋಂ. ನಾಗ್ಯಾ ಸಿದ್ದಿ, ಇವರಿಗೆ ಹಿಂಬದಿಗೆ ಕೂರಿಸಿಕೊಂಡು ಮಂಚಿಕೇರಿ ಕಡೆಯಿಂದ ಶಿರಸಿ ಕಡೆಗೆ ದಿನಾಂಕ: 17-01-2022 ರಂದು ಬೆಳಗ್ಗೆ 11-30 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಬಿದ್ರಳ್ಳಿ ಕ್ರಾಸ್ ಹತ್ತಿರ ಹಾಯ್ದು ಹೋದ ಯಲ್ಲಾಪುರ-ಶಿರಸಿ ರಸ್ತೆಯ ಮೇಲೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವರು, ಮುಖಾಮುಖಿ ಡಿಕ್ಕಿ ಮಾಡಿ ಅಪಘಾತ ಪಡಿಸಿಕೊಂಡು ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-8674 ನೇದರ ಸವಾರನಾದ ಆರೋಪಿ 2 ನೇಯವನಿಗೆ ಬಲ ಪಾದಕ್ಕೆ ಹಾಗೂ ಎಡಗೈಗೆ ಭಾರೀ ಸ್ವರೂಪದ ಗಾಯವಾಗಿ ಹಾಗೂ ಎದೆಗೆ ಮತ್ತು ಹೊಟ್ಟೆಗೆ ಭಾರೀ ಸ್ವರೂಪದ ಒಳ ಪೆಟ್ಟು ಆಗಿದ್ದಲ್ಲದೇ, ತನ್ನ ಮೋಟಾರ್ ಸೈಕಲ್ ಹಿಂದಿಗೆ ಕೂರಿಸಿಕೊಂಡಿದ್ದ ಗಾಯಾಳು ಶ್ರೀಮತಿ ರೇಣುಕಾ ಕೋಂ. ನಾಗ್ಯಾ ಸಿದ್ದಿ ಇವರಿಗೆ ಬಲಗಾಲಿಗೆ ಭಾರೀ ಸ್ವರೂಪದ ಗಾಯ ಪೆಟ್ಟು ಆಗಿ ಕಾಲಿನ ಎಲುಬು ಮುರಿದಿದ್ದು, ಸದರಿ ಇಬ್ಬರಿಗೂ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸೆಗೆ ದಾಖಲಿಸಿದ್ದು, ಇಬ್ಬರೂ ಗಾಯಾಳುಗಳಿಗೆ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕರೆದುಕೊಂಡು ಹೋಗಲು ಸೂಚಿಸಿದ್ದರಿಂದ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಯಿಂದ ಶಿರಸಿಯ ಶಿವಂ ಆಸ್ಪತ್ರೆಗೆ ದಾಖಲಿಸಿದ್ದು, ಸದರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಸದರಿ ಗಾಯಾಳು ಆರೋಪಿ 2 ನೇಯವನಿಗೆ ಇನ್ನೂ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಎಸ್.ಡಿ.ಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದರಿಂದ ಶಿರಸಿಯಿಂದ ಯಲ್ಲಾಪುರ ಮಾರ್ಗವಾಗಿ ಎಸ್.ಡಿ.ಎಮ್ ಆಸ್ಪತ್ರೆ, ಧಾರವಾಡಕ್ಕೆ ಆಂಬ್ಯುಲೆನ್ಸ್ ಮೇಲೆ ಆರೋಪಿ 2 ನೇಯವನಿಗೆ ಈತನಿಗೆ ಕರೆದುಕೊಂಡು ಹೋಗುತ್ತಿದ್ದಾಗ ದಾರಿಯ ಮಧ್ಯದಲ್ಲಿ ಮಂಚಿಕೇರಿಯ ಸಮೀಪ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 20-15 ಗಂಟೆಗೆ ಮೃತಪಟ್ಟಿರುತ್ತಾನೆ ಹಾಗೂ ಗಾಯಾಳು ಶ್ರೀಮತಿ ರೇಣುಕಾ ಸಿದ್ದಿ ಇವಳಿಗೆ ಶಿರಸಿ ಟಿ.ಎಸ್.ಎಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ ಬಗ್ಗೆ ಪಿರ್ಯಾದಿ ಶ್ರೀ ವಿನಾಯಕ ತಂದೆ ನಾರಾಯಣ ನಾಯ್ಕ, ಪ್ರಾಯ-46 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮಂಚಿಕೇರಿ, ತಾ: ಯಲ್ಲಾಪುರ ರವರು ದಿನಾಂಕ: 17-01-2022 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 07/2022, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಲ್ತಾಪ್ ತಂದೆ ಸಬ್ಜಾನ್ ಜಿಗಳೂರ, ಪ್ರ್ರಾಯ-19 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೊಪ್ಪ, ಇಚಿದೂರ, ತಾ: ಮುಂಡಗೋಡ (ಹೋಂಡಾ ಎಕ್ಟಿವಾ ಮೋಟಾರ್ ಸೈಕಲ್ ನಂ: ಕೆ.ಎ-27/ಇ.ಎಚ್-2097 ನೇದರ ಸವಾರ). ಈತನು ದಿನಾಂಕ: 14-01-2022 ರಂದು ಮಧ್ಯಾಹ್ನ 12-45 ಗಂಟೆಯ ಸುಮಾರಿಗೆ ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದ ಕ್ರಾಸ್ ಹತ್ತಿರ ಡಾಂಬರ್ ರಸ್ತೆಯ ಇಳಿಜಾರಿನಲ್ಲಿ ತನ್ನ ಹೋಂಡಾ ಎಕ್ಟಿವಾ ಮೋಟಾರ್ ಸೈಕಲ್ ನಂ: ಕೆ.ಎ-27/ಇ.ಎಚ್-2097 ನೇದನ್ನು ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಸವಾರಿ ಮಾಡುತ್ತಿದ್ದಾಗ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ತಪ್ಪಿ ಬಿದ್ದು, ತನ್ನ ಸ್ವಯಂಕೃತ ಅಪಘಾತದಿಂದ ತನ್ನ ತಲೆಗೆ ಹಾಗೂ ಕಿವಿಯ ಹತ್ತಿರ ಭಾರೀ ಸ್ವರೂಪದ ಗಾಯನೋವು ಪಡಿಸಿಕೊಂಡವನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದವನಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಇಸ್ಮಾಯಿಲ್ ತಂದೆ ಹಜರೆಸಾಬ್ ಶೆಕಲ್ಲಿ, ಪ್ರಾಯ-45 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಅರಶಿಣಗೇರಿ, ತಾ: ಮುಂಡಗೋಡ ರವರು ದಿನಾಂಕ: 17-01-2022 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 17-01-2022

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 03/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಸುನಿತಾ ಕೋಂ. ನಾಗೇಶ ನಾಯ್ಕ, ಪ್ರಾಯ-53 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಖಾತ್ನೆ, ಹಳಗಾ, ಕಾರವಾರ. ಪಿರ್ಯಾದಿಯ ತಾಯಿಯಾದ ಇವರು ಪಿರ್ಯಾದಿಯ ಅನಾರೋಗ್ಯದ ಕಾರಣ ಪಿರ್ಯಾದಿಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಗಾಗಿ ತನ್ನ ಊರಿನಲ್ಲಿ ಹಾಗೂ ಬ್ಯಾಂಕಿನಲ್ಲಿ ಸಾಲ ಮಾಡಿಕೊಂಡಿದ್ದು, ಅದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೋ ಅಥವಾ ಬಿಂದಿಗೆಯಿಂದ ಬಾವಿ ಕಟ್ಟೆಯ ಮೇಲೆ ಕುಳಿತು ನೀರು ಸೇದುವಾಗ/ತೆಗೆಯುವಾಗ ಆಯ ತಪ್ಪಿ ಬಿದ್ದೋ ದಿನಾಂಕ: 16-01-2022 ರಂದು ರಾತ್ರಿ 23-00 ಗಂಟೆಯಿಂದ ದಿನಾಂಕ: 17-01-2022 ರಂದು ಬೆಳಿಗ್ಗೆ 08-00 ಗಂಟೆಯ ಒಳಗೆ ಮೃತಳಾಗಿದ್ದು, ಇದರ ಹೊರತು ಮೃತಳ ಮರಣದಲ್ಲಿ ಬೇರೆ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಭಿಷೇಕ ತಂದೆ ನಾಗೇಶ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಖಾತ್ನೆ, ಹಳಗಾ, ಕಾರವಾರ ರವರು ದಿನಾಂಕ: 17-01-2022 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 04/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಕೇಶವ ತಂದೆ ಶಾಂತಾ ನಾಯ್ಕ, ಪ್ರಾಯ-60 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹೆಬ್ಬುಳ, ತಾ: ಅಂಕೋಲಾ. ಇವರು ದಿನಾಂಕ: 16-01-2022 ರಂದು 15-00 ಗಂಟೆಯಿಂದ ದಿನಾಂಕ: 17-01-2022 ರಂದು 15-45 ಗಂಟೆಯ ನಡುವಿನ ಅವಧಿಯಲ್ಲಿ ತಮ್ಮ ಗದ್ದೆ ಜಮೀನಿಗೆ ಗೊಬ್ಬರ ಮಾಡಲು ತರಕು (ಒಣ ಎಲೆ) ತರಲು ಅಂಕೋಲಾ ತಾಲೂಕಿನ ಹೆಬ್ಬುಳದಲ್ಲಿರುವ ತಮ್ಮ ಮನೆಯ ಹತ್ತಿರದ ಕಾಡಿಗೆ ಹೋದವರು ಯಾವುದೋ ಕಾರಣಕ್ಕೆ ಗಂಗಾವಳಿ ನದಿಯ ದಡದ ಹತ್ತಿರ ಹೋದವರು ಆಕಸ್ಮಿಕವಾಗಿ ಕಾಲು ಜಾರಿ ಅಥವಾ ನೀರಿಗೆ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಅವರ ಮೃತದೇಹವು ಅಂಕೋಲಾ ತಾಲೂಕಿನ ಮಾಸ್ತ್ತಿಕಟ್ಟಾದ ಎಕ್ಕೆಗುಳಿಯಲ್ಲಿ ಪತ್ತೆಯಾಗಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪವನ ತಂದೆ ಕೇಶವ ನಾಯ್ಕ, ಪ್ರಾಯ-18 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹೆಬ್ಬುಳ, ತಾ: ಅಂಕೋಲಾ ರವರು ದಿನಾಂಕ: 17-01-2022 ರಂದು 16-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 18-02-2022 05:02 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080