ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 17-07-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 31/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಮಂಗೇಶ ತಂದೆ ಮಹಾಬಲೇಶ್ವರ ದೇವಳಿ, ಪ್ರಾಯ-26 ವರ್ಷ, ವೃತ್ತಿ-ವ್ಯಾಪಾರ, ಸಾ|| ಮಹಾದೇವ ದೇವಸ್ಥಾನದ ಹತ್ತಿರ, ಕಡವಾಡ, ಕಾರವಾರ. ಈತನು ದಿನಾಂಕ: 17-07-2021 ರಂದು 15-30 ಗಂಟೆಯ ಸುಮಾರಿಗೆ ಕಾರವಾರ ತಾಲೂಕಿನ ಕಡವಾಡದ ಮಹಾದೇವ ದೇವಸ್ಥಾನದ ಎದುರುಗಡೆಯ ಸಾರ್ವಜನಿಕ ರಸ್ತೆಯ ಸ್ಥಳದಲ್ಲಿ ನಿಂತುಕೊಂಡು 01/- ರೂಪಾಯಿಗೆ 80/- ರೂಪಾಯಿ ಹಣ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಮಟಕಾ ಜೂಗರಾಟ ನಡೆಸುತ್ತಿರುವಾಗ ನಗದು ಹಣ 9,780/- ರೂಪಾಯಿ ಹಾಗೂ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳೊಂದಿಗೆ ಸಿಕ್ಕಿದ ಬಗ್ಗೆ ಪಿರ್ಯಾದಿ ಸ||ತ|| ಕುಮಾರಿ: ವಿಜಯಲಕ್ಷ್ಮೀ ಕಟಕದೊಂಡ, ಪಿ.ಎಸ್.ಐ (ಕ್ರೈಂ), ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 17-07-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 109/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಬಾಲಾಜಿ ತಂದೆ ಮಾಣಿಕ್ಯ ಪವಾರ, ಪ್ರಾಯ-40 ವರ್ಷ, ವೃತ್ತಿ-ಚಾಲಕ, ಸಾ|| ಲಾಥೂರ, ಮಹಾರಾಷ್ಟ್ರ (ಕಂಟೇನರ್ ಲಾರಿ ನಂ: ಎನ್.ಎಲ್-01/ಎ.ಸಿ-9794 ನೇದರ ಚಾಲಕ). ಈತನು ದಿನಾಂಕ: 15-07-2021 ರಂದು ಸಾಯಂಕಾಲ ಸುಮಾರು 17-45 ಗಂಟೆಗೆ ರಾಮನಗುಳಿ ಗ್ರಾಮದಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯಲ್ಲಿ ತನ್ನ ಕಂಟೇನರ್ ಲಾರಿ ನಂ: ಎನ್.ಎಲ್-01/ಎ.ಸಿ-9794 ನೇದನ್ನು ಅಂಕೋಲಾ ಕಡೆಯಿಂದ ಯಲ್ಲಾಪುರದ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗಿ, ಯಲ್ಲಾಪುರ ಕಡೆಯಿಂದ ಅಂಕೋಲಾದ ಕಡೆಗೆ ಬರುತ್ತಿದ್ದ ಪಿರ್ಯಾದಿಯವರ ಕಾರ್ ನಂ: ಕೆ.ಎ-22/ಪಿ-6827 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶೋಭಾ ಶಿವಾನಂದ ವಸ್ತ್ರದ್ ಇವರಿಗೆ ಗಂಭೀರ ಸ್ವರೂಪದ ಮತ್ತು ಪಿರ್ಯಾದಿ, ಕುಮಾರಿ: ಸುಕನ್ಯಾ ಶಿವಶಂಕರ ಮಠಪತಿ ಹಾಗೂ ಕಾರ್ ಚಾಲಕ ಮಂಜುನಾಥ ಹೂಗಾರ ರವರಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹಾಂತಯ್ಯ ತಂದೆ ವೀರಯ್ಯ ಪೂಜೇರಿ, ಪ್ರಾಯ-51 ವರ್ಷ, ವೃತ್ತಿ-ರೈಲ್ವೆ ಪ್ರಾಜೆಕ್ಟ್ ನಲ್ಲಿ ಮ್ಯಾನೇಜರ್, ಸಾ|| ಪ್ಲಾಟ್ ನಂ: 221, ರಾಮತೀರ್ಥ ನಗರ, ಬೆಳಗಾವಿ ರವರು ದಿನಾಂಕ: 17-07-2021 ರಂದು 15-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 114/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರವೀಣಕುಮಾರ, ಸಾ|| ಗುಲ್ಬರ್ಗಾ (ಕಾರ್ ನಂ: ಕೆ.ಎ-32/ಡಿ-4616 ನೇದರ ಚಾಲಕ). ಈತನು ದಿನಾಂಕ: 16-07-2021 ರಂದು 11-15 ಗಂಟೆಗೆ ಯಲ್ಲಾಪುರ ತಾಲೂಕಿನ ಮಾವಳ್ಳಿ ಊರಿನಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಕಾರ್ ನಂ: ಕೆ.ಎ-32/ಡಿ-4616 ನೇದನ್ನು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತನ್ನ ಸೈಡ್ ಬಿಟ್ಟು ರಸ್ತೆಯ ಬಲಕ್ಕೆ ಬಂದು ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಪಿರ್ಯಾದಿಯವರ ಕಾರ್ ನಂ: ಕೆ.ಎ-25/ಎಮ್.ಬಿ-6292 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಎರಡು ವಾಹನಗಳನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಉಮೇಶ ತಂದೆ ವಿಶ್ರಾಮ ನಾಯ್ಕ, ಪ್ರಾಯ-71 ವರ್ಷ, ವೃತ್ತಿ-ನಿವೃತ್ತ ನೌಕರ, ಸಾ|| ಪ್ಲಾಟ್ ನಂ: 20, ಕೊರವರ ಪ್ಲಾಟ್, ಭವಾನಿ ನಗರ, ಹುಬ್ಬಳ್ಳಿ ರವರು ದಿನಾಂಕ: 17-07-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 17-07-2021

at 00:00 hrs to 24:00 hrs

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 20/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಗಣೇಶ ತಂದೆ ಪಿಟ್ಯಾ ಕುಣಬಿ, ಪ್ರಾಯ-52 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹುಲಿದೇವರಜಡ್ಡಿ, ಇಳೇಹಳ್ಳಿ ಗ್ರಾಮ, ತಾ: ಯಲ್ಲಾಪುರ. ಪಿರ್ಯಾದಿಯವರ ಗಂಡನವರಾದ ಇವರು ತಮ್ಮ ತೋಟದ ಕೆಲಸಕ್ಕೆ ಹಿತ್ಲಳ್ಳಿ ಸೊಸೈಟಿಯಲ್ಲಿ ಸಾಲ ಮಾಡಿಕೊಂಡಿದ್ದು, ಅದನ್ನು ಮರುಪಾವತಿ ಮಾಡಲಾಗದೇ ಇದ್ದುದರಿಂದ ಹಾಗೂ ಇತರೇ ಕಾರಣದಿಂದ ಸಾರಾಯಿ ಕುಡಿದು ಅಲೆದಾಡುತ್ತಿದ್ದವರು, ದಿನಾಂಕ: 16-07-2021 ರಂದು ರಾತ್ರಿ 09-15 ಗಂಟೆಯಿಂದ ದಿನಾಂಕ: 17-07-2021 ರ ಬೆಳಿಗ್ಗೆ 07-30 ಗಂಟೆಯ ನಡುವಿನ ಅವಧಿಯಲ್ಲಿ ತಮ್ಮ ಮನೆ ಹಿಂದಿನ ದಾರಿಯ ಪಕ್ಕದಲ್ಲಿ ಕಾಡು ಜಾತಿಯ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಗುಲಾಬಿ ಕೋಂ. ಗಣೇಶ ಕುಣಬಿ, ಪ್ರಾಯ-43 ವರ್ಷ, ವೃತ್ತಿ-ಕೃಷಿ/ಕೂಲಿ ಕೆಲಸ, ಸಾ|| ಹುಲಿದೇವರಜಡ್ಡಿ, ಇಳೇಹಳ್ಳಿ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 17-07-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 13/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ರಾಧಾ ಕೋಂ. ಚಂದ್ರಶೇಖರ ಲೋಪಿಸ್, ಪ್ರಾಯ-31 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಬೆಡಸಗಾಂವ, ತಾ: ಮುಂಡಗೋಡ, ಹಾಲಿ ಸಾ|| ಮೆಣಶಿನಕಟ್ಟಾ, ತಾ: ಶಿರಸಿ. ಇವಳು ಕಳೆದ 12 ವರ್ಷಗಳ ಹಿಂದೆ ಮುಂಡಗೋಡದ ತಾಳು ಬೆಡಸಗಾಂವ ಊರಿನ ಚಂದ್ರಶೇಖರ ಲೋಪಿಸ್ ಇವನೊಂದಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿರುತ್ತಾರೆ. ಸದರಿಯವಳಿಗೆ ಕಳೆದ ಕೆಲವು ವರ್ಷಗಳಿಂದ ವಿಪರೀತ ಸುಸ್ತು ಮತ್ತು ವಿಪರೀತ ತಲೆನೋವಿನ ಖಾಯಿಲೆಯಿಂದ ಬಳಲುತ್ತಿದ್ದವಳು. ಸದರಿಯವಳಿಗೆ ಔಷಧೋಪಚಾರ ಮಾಡಿಸಿದರೂ ಸಹ ಖಾಯಿಲೆ ಗುಣವಾಗಿರಲಿಲ್ಲ. ಇದರಿಂದ ಕಳೆದ 2 ತಿಂಗಳ ಹಿಂದೆ ಅವಳು ತನ್ನ ಮಕ್ಕಳೊಂದಿಗೆ ತವರು ಮನೆಯಲ್ಲಿ ಬಂದು ಉಳಿದುಕೊಂಡಿದ್ದವಳು. ಅವಳಿಗೆ ಕಳೆದ 1 ತಿಂಗಳಿನಿಂದ ಪುನಃ ವಿಪರೀತ ಸುಸ್ತು ಮತ್ತು ವಿಪರೀತ ತಲೆನೋವು ಬರುತ್ತಿದ್ದು, ಏನೂ ಕೆಲಸ ಮಾಡಲಾಗದೇ ಇರುತ್ತಿದ್ದಳು. ಇದರಿಂದ ಮನಸ್ಸಿಗೆ ಬೇಸರ ಮಾಡಿಕೊಂಡು ಮಾನಸಿಕವಾಗಿ ನೊಂದಿದ್ದವಳು, ದಿನಾಂಕ: 15-07-2021 ರಂದು ಮಧ್ಯಾಹ್ನ 01-30 ಗಂಟೆಯ ಸುಮಾರಿಗೆ ತವರು ಮನೆಯಲ್ಲಿಯೇ ಕಳೆನಾಶಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದವಳನ್ನು ಉಪಚಾರದ ಕುರಿತು ಶಿರಸಿಯ ಸರಕಾರಿ ಆಸ್ಪತ್ರೆ ಮತ್ತು ಶಿರಸಿಯ ಟಿ.ಎಸ್.ಎಸ್ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲಿಸಿದ್ದು, ಉಪಚಾರ ಫಲಿಸದೇ ದಿನಾಂಕ: 17-07-2021 ರಂದು ಬೆಳಗಿನ ಜಾವ 02-30 ಗಂಟೆಗೆ ಮೃತಪಟ್ಟಿರುತ್ತಾಳೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ಧರ್ಮಾ ನಾಯ್ಕ, ಪ್ರಾಯ-28 ವರ್ಷ, ವೃತ್ತಿ-ವ್ಯಾಪಾರ, ಸಾ|| ಮ ನಂ: 104, ಮೆಣಶಿನಕಟ್ಟಾ, ಪೋ: ಕೋರ್ಲಕಟ್ಟಾ, ತಾ: ಶಿರಸಿ ರವರು ದಿನಾಂಕ: 17-07-2021 ರಂದು 09-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 18-07-2021 01:22 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080